Tag: ದೋಷ

  • ಬಿಡಿಎ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ – ಸೈಟ್ ಬಿಡ್ಡಿಂಗ್ ಅವಧಿ ವಿಸ್ತರಣೆ

    ಬಿಡಿಎ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ – ಸೈಟ್ ಬಿಡ್ಡಿಂಗ್ ಅವಧಿ ವಿಸ್ತರಣೆ

    ಬೆಂಗಳೂರು: ಬಿಡಿಎ ಕಾರ್ನರ್ ಸೈಟ್ ಇ ಹರಾಜು ವೇಳೆನಲ್ಲಿ ಪ್ರೊಕ್ಯೂರ್ಮೆಂಟ್ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಿಡ್ಡಿಂಗ್ ಅವಧಿಯನ್ನು ವಿಸ್ತರಣೆ ಮಾಡಿದೆ.

    ಇಂದು ಸಂಜೆ 6 ಗಂಟೆಗೆ ಬಿಡ್ಡಿಂಗ್ ಅಂತ್ಯವಾಗಬೇಕಿತ್ತು. ಆದರೆ ಸಂಜೆ 5:30ರ ವೇಳೆಗೆ ಇ ಪ್ರೊಕ್ಯೂರ್ಮೆಂಟ್ ವೆಬ್‍ಸೈಟಿನಲ್ಲಿ ದೋಷ ಕಾಣಿಸಿಕೊಂಡಿದೆ. ಇದಾದ ತಕ್ಷಣ ಬಿಡಿಐ ಆಯುಕ್ತ ಹೆಚ್. ಆರ್. ಮಹಾದೇವ್ ಅಧಿಕಾರಿಗಳ ಸಭೆ ಕರೆದಿದ್ದು, ಬಿಡ್ಡಿಂಗ್ ಅವಧಿಯನ್ನು ನಾಳೆ ಸಂಜೆ 6ರವರೆಗೆ ವಿಸ್ತರಣೆ ಮಾಡಿದ್ದಾರೆ.

    ಈಗಾಗಲೇ ಬಿಡ್ಡಿಂಗ್ ನಡೆದಿದ್ದು, 200 ಸೈಟಿಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಬಿಡ್ಡಿಂಗ್ ಬಂದಿವೆ. ಹೀಗಾಗಿ ವೈಬ್‍ಸೈಟಿನಲ್ಲಿ ಒಮ್ಮೆಲೇ ಎಲ್ಲರೂ ಬಿಡ್ ಮಾಡಿದ್ದರಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಕಾರಣದಿಂದ ಬಿಡ್ಡಿಂಗ್ ಅವಧಿಯನ್ನು ನಾಳೆ ಸಂಜೆ 6ರವರೆಗೆ ವಿಸ್ತರಣೆ ಮಾಡಿರುವ ಆಯುಕ್ತ ಮಹದೇವ್ ಕೊನೆ ತನಕ ಕಾಯದೆ ಬಿಡ್ಡಿಂಗ್ ಮಾಡಲು ಮನವಿ ಮಾಡಿದ್ದಾರೆ.

  • ಮತಯಂತ್ರಗಳಲ್ಲಿ ದೋಷ ಮತದಾನ ಸ್ಥಗಿತ- ರೊಚ್ಚಿಗೆದ್ದ ಮತದಾರರು

    ಮತಯಂತ್ರಗಳಲ್ಲಿ ದೋಷ ಮತದಾನ ಸ್ಥಗಿತ- ರೊಚ್ಚಿಗೆದ್ದ ಮತದಾರರು

    ವಿಜಯಪುರ/ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಮತಯಂತ್ರಗಳಲ್ಲಿ ದೋಷ ಕಂಡು ಬಂದು ವಿಜಯಪುರದ ತಾರಾಪೂರ ಗ್ರಾಮ ಹಾಗೂ ಬೆಳಗಾವಿಯ ಮೀರಾಪೂರಹಟ್ಟಿ ಗ್ರಾಮದಲ್ಲಿ ಮತದಾನ ಸ್ಥಗಿತಗೊಂಡಿದೆ.

    ತಾರಾಪೂರ ಗ್ರಾಮದ ಮತಗಟ್ಟೆ ಸಂಖ್ಯೆ 16ರಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದೆ. ಈ ಹಿನ್ನೆಲೆ ಅದನ್ನು ಸರಿಪಡಿಸಲು ಒಂದು ಗಂಟೆ ಸಮಯ ಕೊಡಲು ಅಧಿಕಾರಿಗಳ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಇದರಿಂದ ರೊಚ್ಚಿಗೆದ್ದ ಮತದಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಚುನಾವಣಾಧಿಕಾರಿಗಳು ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

    ಮೀರಾಪೂರಹಟ್ಟಿ ಗ್ರಾಮದ 169 ನೇ ಬೂತ್‍ನಲ್ಲಿ ಇವಿಎಂನಲ್ಲಿ ದೋಷ ಉಂಟಾಗಿದ್ದು, ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತವಾಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

  • ಗ್ರಹಣ ಎಫೆಕ್ಟ್ – ಗರಿಕೆ ತಿಂದು ದೋಷ ನಿವಾರಣೆ ಮಾಡ್ಕೊಂಡ ಶ್ವಾನ!

    ಗ್ರಹಣ ಎಫೆಕ್ಟ್ – ಗರಿಕೆ ತಿಂದು ದೋಷ ನಿವಾರಣೆ ಮಾಡ್ಕೊಂಡ ಶ್ವಾನ!

    ಗದಗ: ದೇಶಾದ್ಯಂತ ಗ್ರಹಣದ ಸುದ್ದಿಯೇ ಇರುವಾಗ ಜಿಲ್ಲೆಯ ಮದಗಾನೂರ ಗ್ರಾಮದ ನಾಯಿಯೊಂದು ಗ್ರಹಣ ಆಚರಣೆ ಮಾಡಿ ಕುತೂಹಲ ಮೂಡಿಸಿದೆ. ಸದ್ಯ ನಾಯಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮನೆಯ ಅಂಗಳದಲ್ಲಿ ನಾಯಿಯ ಮಾಲೀಕರು ಸೇರಿದಂತೆ ಗ್ರಾಮದ ಕೆಲವರು ಗ್ರಹಣದ ಬಗ್ಗೆ ಮಾತನಾಡುತ್ತಾ ಕೂತಿದ್ದರು. ನೆರೆದವರು ಗ್ರಹಣದಿಂದಾಗುವ ಲಾಭ, ನಷ್ಟ, ಪರಿಹಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ಗ್ರಹಣ ಕಾಲದಲ್ಲಿ ಮನೆಯೊಳಗಿನ ನೀರಿಗೆ ಗರಿಕೆ ಹಾಕಿದರೆ ಅದರಿಂದ ಯಾವುದೇ ರೀತಿಯ ದೋಷ ಬರುವುದಿಲ್ಲ ಎಂಬ ಮಾತಿನ ಮೇಲೆ ಚರ್ಚೆ ಏರ್ಪಟ್ಟಿತ್ತು. ಆಗ ಓರ್ವ ತಮ್ಮ ಮನೆಗೆ ಗರಿಕೆ ತಗೆದುಕೊಂಡು ಹೋಗುತ್ತಿದ್ದನು.

    ವ್ಯಕ್ತಿ ಗರಿಕೆ ತೆಗೆದುಕೊಂಡು ಹೋಗುವಾಗ ಕೈ ಜಾರಿ ಗರಿಕೆ ಎಸಳುಗಳು ಕೆಳಗೆ ಬಿದ್ದಿವೆ. ಕೂಡಲೇ ನಾಯಿಯೊಂದು ಓಡಿ ಬಂದು ಗರಿಕೆಯ ಎಳೆಯನ್ನು ತಿನ್ನುವ ಮೂಲಕ ಅಲ್ಲಿದ್ದವರ ಗಮನ ಸೆಳೆದಿದೆ. ಕೂಡಲೇ ಅಲ್ಲಿನ ಯುವಕರು ಗರಿಕೆ ತಿಂದ ಆ ನಾಯಿಯ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ವೈರಲ್ ಮಾಡಿದ್ದಾರೆ.

    ಮನುಷ್ಯರೆಲ್ಲರೂ ತಮ್ಮ ಮನೆಯೊಳಗಿನ ನೀರಿನ ಪಾತ್ರೆ ಸೇರಿದಂತೆ ಇತರೆ ವಸ್ತುಗಳಲ್ಲಿ ಗರಿಕೆ ಹಾಕಿದರೆ ದೋಷ ಹೋಗುತ್ತದೆ ಅನ್ನೋ ನಂಬಿಕೆಯಲ್ಲಿದ್ದರು. ಆದರೆ ಈ ನಾಯಿ ತನ್ನ ಹೊಟ್ಟೆಯೊಳಗೆನೇ ಗರಿಕೆ ಹಾಕಿಕೊಂಡಿದ್ದು, ನಾಯಿ ಮನುಷ್ಯ ಜೀವನಕ್ಕೆ ಹತ್ತಿರವಿದೆಯಾ ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದಾರೆ.