Tag: ದೋರನಹಳ್ಳಿ

  • ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

    ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

    ಯಾದಗಿರಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿಯ ಕೊಲೆಗೈದು (Murder) ಪತಿ ಪೊಲೀಸರಿಗೆ ಶರಣಾದ ಘಟನೆ ಶಹಾಪುರ (Shahapur) ತಾಲೂಕಿನ ದೋರನಹಳ್ಳಿ (Doranahalli) ಗ್ರಾಮದಲ್ಲಿ ನಡೆದಿದೆ.

    ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿದ್ದರು. ಆರೋಪಿ ನಿಂಗಪ್ಪ ಮದುವೆ ನೆಪವಾಗಿ ಮನೆಗೆ ಬಂದಿದ್ದಾನೆ. ಅಲ್ಲದೆ ಮದುವೆ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ರಾತ್ರಿ ಮಲಗಿದ್ದಾಗ ಪತ್ನಿ ಲಕ್ಷ್ಮಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಶಹಾಪುರ ಪೊಲೀಸ್ ಠಾಣೆಗೆ ತೆರಳಿ ತಾನೇ ಮಾಡಿದ ಕೃತ್ಯ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣ – ಪಿಎಫ್‍ಐ ಸದಸ್ಯ ಅರೆಸ್ಟ್

    ದಂಪತಿಗೆ 13 ವರ್ಷದ ಮತ್ತು 11 ವರ್ಷದ ಹೆಣ್ಣು ಮಕ್ಕಳಿದ್ದರು. ಲಕ್ಷ್ಮಿ ಇಬ್ಬರಿಗೂ ಮದುವೆ ಮಾಡಲು ಮುಂದಾಗಿದ್ದಳು. ದಿನಾಂಕವು ಸಹ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಕೋಪಗೊಂಡಿದ್ದ ಪತಿ ನಿಂಗಪ್ಪ ಆಕೆಯನ್ನು ಕೊಲೆಗೈದಿದ್ದಾನೆ.

    ಈ ಬಗ್ಗೆ ಮೃತ ಲಕ್ಷ್ಮಿ ಸಹೋದರ ಶಹಾಪುರ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಶಹಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

  • ದೋರನಹಳ್ಳಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರವೇ ಕಾರಣ: ಕೈ ಶಾಸಕ

    ದೋರನಹಳ್ಳಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರವೇ ಕಾರಣ: ಕೈ ಶಾಸಕ

    ಯಾದಗಿರಿ: ದೋರನಹಳ್ಳಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರವೇ ಕಾರಣ ಅಂತ ಶಹಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಗಂಭೀರ ಆರೋಪ ಮಾಡಿದ್ದಾರೆ.

    ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸಮಯದಲ್ಲಿ ಸರ್ಕಾರ ರೈತರಲ್ಲಿ ಮೂಡಿಸಿದ ದಂದ್ವ ನೀತಿ ಮತ್ತು ನಿರ್ಲಕ್ಷ್ಯ ರಾಜ್ಯದ ರೈತರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ. ಇದರಲ್ಲಿ ದೋರನಹಳ್ಳಿಯ ರೈತರ ಕುಟುಂಬವೂ ಕೂಡ ಒಂದು. ಒಂದು ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಬಂದಾಗ ಮನುಷ್ಯ, ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇಂತಹ ಪರಿಸ್ಥಿತಿ ಆ ಕುಟುಂಬ ಎದುರಿಸಿದ ಪರಿಣಾಮ ಆತ್ಮಹತ್ಯೆಗೆ ಶರಣಾಗಿದೆ. ಇದಕ್ಕೆ ಸರ್ಕಾರದ ದಂದ್ವ ನೀತಿ ಕಾರಣ ಎಂದಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಗ್ರಾಮದ ರೈತ ಭೀಮರಾಯ ಶಿವಪ್ಪ ಸುರುಪುರ ದಂಪತಿ ನಾಲ್ಕು ಮಕ್ಕಳ ಸಮೇತವಾಗಿ ಜೂನ್ 28ರಂದು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.