Tag: ದೊರೈ ಮುರುಗನ್

  • ರಜನಿಯಿಂದಾಗಿ ಹೊಸಬರಿಗೆ ಅವಕಾಶ ಸಿಗ್ತಿಲ್ಲ: ದೊರೈ ಸಿಡಿಸಿದ ಬಾಂಬ್

    ರಜನಿಯಿಂದಾಗಿ ಹೊಸಬರಿಗೆ ಅವಕಾಶ ಸಿಗ್ತಿಲ್ಲ: ದೊರೈ ಸಿಡಿಸಿದ ಬಾಂಬ್

    ರಾಜಕಾರಣಿಗಳನ್ನು ಆಗಾಗ್ಗೆ ಟೀಕಿಸಿ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಈ ಬಾರಿ ಡಿಎಂಕೆ ಮುಖಂಡ ದೊರೆಐ ಮುರುಗನ್ (Dorai Murugan) ಅವರ ಬಗ್ಗೆ ಮಾತನಾಡಿ, ವಿವಾದವನ್ನು (Controversy) ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ದೊರೆ ಜೊತೆಗಿನ ಸ್ನೇಹದ ಬಗ್ಗೆಯೂ ಮಾತಾಡಿ ತಿಪ್ಪೆ ಸಾರಿಸುವಂಥ ಕೆಲಸ ಮಾಡಿದ್ದಾರೆ.

    ಪುಸ್ತಕ ಬಿಡುಗಡೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್, ಅದೇ ವೇದಿಕೆಯ ಮೇಲಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಹೊಗಳಿದ್ದರು. ತಂದೆ ಕರುಣಾನಿಧಿ ನಿಧನದ ನಂತರ ಪಕ್ಷವನ್ನು ಅದ್ಭುತವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ತಮಿಳುನಾಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೆಲವರನ್ನು ನಿಭಾಯಿಸೋದರಲ್ಲಿ ಹೈರಾಣಾಗಿದ್ದಾರೆ ಎಂದು  ಮಾತನಾಡುತ್ತಾ ದೊರೈ ಮುರುಗನ್‍ ಅವರನ್ನ ಎಳೆತಂದಿದ್ದಾರೆ ರಜನಿ.

    ಕರುಣಾನಿಧಿ ಅವರ ಕಣ್ಣಲ್ಲೇ ಬೆರಳಾಡಿಸಿದೋರು ದೊರೈ ಮುರುಗನ್. ಇಂಥವರು ಡಿಎಂಕೆ ಪಕ್ಷದಲ್ಲಿದ್ದಾರೆ. ಹಿರಿಯರಾಗಿದ್ದಾರೆ. ಅವರನ್ನು ನಿಭಾಯಿಸೋದು ಕಷ್ಟ. ಹಿರಿಯರ ಕಾರಣದಿಂದಾಗಿ ಹೊಸಬರು ರಾಜಕಾರಣಕ್ಕೆ ಬರೋಕೆ ಆಗುತ್ತಿಲ್ಲ ಎಂದು ದೊರೈಯನ್ನು ಟೀಕಿಸಿದ್ದಾರೆ. ರಜನಿಯ ಈ ಮಾತಿಗೆ ದೊರೈ ಮುರುಗನ್ ಕೂಡ ಎದುರೇಟು ಕೊಟ್ಟಿದ್ದಾರೆ.

    ರಜನಿಕಾಂತ್ ಗೆ ಹಲ್ಲು ಉದುರಿವೆ. ತಲೆ ಬೆಳ್ಳಗಾಗಿದೆ. ವಯಸ್ಸೂ ಆಗಿದೆ. ಆದರೂ, ಇನ್ನೂ ನಟಿಸ್ತಾ ಇದ್ದಾರೆ. ಇವರು ನಟಿಸೋದನ್ನ ನಿಲ್ಲಿಸಿದರೆ ಹೊಸಬರಿಗೆ ಅವಕಾಶ ಸಿಗಲಿದೆ. ಇವರಿಂದಾಗಿ ಹೊಸ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ. ದೊರೈ ಮಾತಿಗೆ ರಜನಿ ಪ್ರತ್ಯುತ್ತರ ನೀಡಿ ದೊರೈ ನನ್ನ ಬಹುಕಾಲದ ಸ್ನೇಹಿತರು. ಅವರು ಏನೇ ಅಂದರೂ, ನನಗೆ ಬೇಸರವಾಗಲ್ಲ ಅಂದಿದ್ದಾರೆ.

  • ಕರ್ನಾಟಕದ ಬಳಿಕ ತಮಿಳುನಾಡಿನಲ್ಲಿ ಐಟಿ ದಾಳಿ

    ಕರ್ನಾಟಕದ ಬಳಿಕ ತಮಿಳುನಾಡಿನಲ್ಲಿ ಐಟಿ ದಾಳಿ

    -ಡಿಎಂಕೆ ಖಜಾಂಜಿ ಮೇಲೆ ಐಟಿ ಕಣ್ಣು

    ಚೆನ್ನೈ: ಲೋಕಸಭಾ ಹೊತ್ತಿನಲ್ಲಿಯೇ ಕರ್ನಾಟಕದ ಬಳಿಕ ತಮಿಳುನಾಡಿನಲ್ಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ಕಟ್ಟಾಡಿಯಲ್ಲಿರುವ ಡಿಎಂಕೆ ಖಜಾಂಚಿ ದೊರೈ ಮುರುಗನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಜೊತೆಗೆ ಸೇರಿ ಚುನಾವಣಾ ಅಧಿಕಾರಿಗಳು ಬೆಳಗ್ಗೆ ದಾಳಿ ನಡೆಸಿದ್ದಾರೆ.

    ದೊರೈ ಮುರುಗನ್ ನಿವಾಸದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಚುನಾವಣಾ ಆಯೋಗಕ್ಕೆ ಸಿಕ್ಕಿತ್ತು. ಹೀಗಾಗಿ ಐಟಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ರಾತ್ರಿ ದೊರೈ ಮುರುಗನ್ ಅವರ ಮನೆಗೆ ಆಗಮಿಸಿದ್ದರು. ಈ ವೇಳೆ ದೊರೈ ಮುರುಗನ್, ಪುತ್ರ (ವೆಲ್ಲೋರ್) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನೆಯಲ್ಲಿದ್ದರು ಎಂದು ವರದಿಯಾಗಿದೆ.

    ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ ಎರಡು ಗಂಟೆಗೆ ಬಳಿಕ ಬಂದ ಡಿಎಂಕೆ ಪಕ್ಷದ ಕಾನೂನು ತಂಡವು, ಸರ್ಚ್ ವಾರಂಟ್ ನೀಡುವಂತೆ ಕೇಳಿದ್ದರು. ಜೊತೆಗೆ ತನಿಖೆಯನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದರು. ಇದರಿಂದಾಗಿ ನಿನ್ನೆ ರಾತ್ರಿ ಕಾರ್ಯಾಚರಣೆ ಕೈಬಿಟ್ಟಿದ್ದ ತಂಡವು ಇಂದು ಬೆಳಂಬೆಳಗ್ಗೆ ಮತ್ತೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ.

    ಐಟಿ ಅಧಿಕಾರಿಗಳ ಐದು ತಂಡಗಳು ದೊರೈ ನಿವಾಸ ಸೇರಿದಂತೆ ಕಿಂಗ್ಸ್ ಟನ್ ಎಂಜಿನಿಯರಿಂಗ್ ಕಾಲೇಜ್, ಬಿಎಡ್ ಕಾಲೇಜ್ ಮತ್ತು ಫಾರ್ಮಹೌಸ್ ಮೇಲೂ ದಾಳಿ ನಡೆಸಿವೆ. ಇದಕ್ಕೆ ಡಿಎಂಕೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಭದ್ರತೆಯ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

    ಐಟಿ ದಾಳಿಯು ರಾಜಕೀಯ ಪ್ರೇರಿತವಾಗಿದೆ. ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಆರಕ್ಕೊನಮ್ ಲೋಕಸಭಾ ವ್ಯಾಪ್ತಿಯಲ್ಲಿ ಶೋಧ ಕಾರ್ಯಕ್ಕೆ ವಾರಂಟ್ ತಂದು ವೆಲ್ಲೋರ್ ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಎಂಕೆ ಕಾನೂನು ವಿಭಾಗದ ಜಂಟಿ ಕಾರ್ಯದರ್ಶಿ ಪರಂದಾಮನ್ ದೂರಿದ್ದಾರೆ.