Tag: ದೊರೆ

  • ಪುನೀತ್ ರಾಜ್ ಕುಮಾರ್ ಅವರಿಗಾಗಿ ದೊರೆ ಟೈಟಲ್ ರಿಜಿಸ್ಟರ್ ಮಾಡಿಸಿದ್ದರಂತೆ ನಿರ್ಮಾಪಕ ಉಮಾಪತಿ

    ಪುನೀತ್ ರಾಜ್ ಕುಮಾರ್ ಅವರಿಗಾಗಿ ದೊರೆ ಟೈಟಲ್ ರಿಜಿಸ್ಟರ್ ಮಾಡಿಸಿದ್ದರಂತೆ ನಿರ್ಮಾಪಕ ಉಮಾಪತಿ

    ಶಿವರಾಜ್ ಕುಮಾರ್ ನಟನೆಯ ದೊರೆ ಸಿನಿಮಾ, ಶಿವಣ್ಣನ ವೃತ್ತಿ ಬದುಕಿಗೆ ಒಂದೊಳ್ಳೆ ಘನತೆ ತಂದುಕೊಟ್ಟಿತ್ತು. ಹೋರಾಟಗಾರರಿಗೆ ಸ್ಫೂರ್ತಿಯನ್ನು ತುಂಬಬಲ್ಲ ಸಿನಿಮಾ ಇದಾಗಿತ್ತು. ದೊರೆ ಹೆಸರಿನಲ್ಲೇ ಗತ್ತು ಇರುವ ಕಾರಣಕ್ಕಾಗಿ ಈ ಸಿನಿಮಾದ ಟೈಟಲ್ ಅನ್ನು ಮರು ರಿಜಿಸ್ಟರ್ ಮಾಡಿಸಿದ್ದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ. ಈ ಹೆಸರಿನಲ್ಲಿ ಅವರು ಪುನೀತ್ ರಾಜ್ ಕುಮಾರ್ ಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡಬೇಕು ಎಂದುಕೊಂಡಿದ್ದರಂತೆ. ಆದರೆ, ಈ ಕನಸು ಅವರಿಗೆ ಈಡೇರಲಿಲ್ಲ.

    ಪುನೀತ್ ರಾಜ್ ಕುಮಾರ್ ನಮ್ಮೆಲ್ಲರ ಪಾಲಿಗೆ ದೊರೆ ಇದ್ದಹಾಗೆ ಇದ್ದವರು. ಹಾಗಾಗಿ ಒಂದೊಳ್ಳೆ ಕಥೆ ಮಾಡಿಸಿ, ದೊರೆ ಹೆಸರಿನಲ್ಲೇ ಸಿನಿಮಾ ಮಾಡಬೇಕು ಎನ್ನುವ ಆಸೆ ನನಗಿತ್ತು. ಆದರೆ, ಅದು ಈಡೇರಲಿಲ್ಲ. ಪುನೀತ್ ನಂತರ ಈ ಟೈಟಲ್ ನಲ್ಲಿ ಯಾರಿಗೆ ಸಿನಿಮಾ ಮಾಡಬೇಕು ಎಂದು ಯೋಚಿಸಿದಾಗ, ತಕ್ಷಣವೇ ನೆನಪಾದವರು ಮತ್ತದೇ ಶಿವರಾಜ್ ಕುಮಾರ್ ಅವರು. ಅವರದ್ದೇ ಸಿನಿಮಾದ ಟೈಟಲ್ ಅದು. ಅವರು ಒಪ್ಪಿದರೆ, ಅವರಿಗಾಗಿ ಸಿನಿಮಾ ಮಾಡುವೆ ಎಂದಿದ್ದಾರೆ ಉಮಾಪತಿ. ಇದನ್ನೂ ಓದಿ : ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ದೊರೆ ಟೈಟಲ್ ಬಗ್ಗೆ ಎರಡು ವಾರದಿಂದ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ತೆಲುಗಿನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಅವರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದ್ದಾರೆ. ಈ ಸಿನಿಮಾಗೆ ದೊರೆ ಹೆಸರನ್ನು ಇಡಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಅದು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿರುವ ಕಾರಣಕ್ಕಾಗಿ ದೊರೆ ಟೈಟಲ್ ಗೊಂದಲ ಮೂಡಬಹುದಾ? ಅಥವಾ ಕನ್ನಡದಲ್ಲಿ ಅದಕ್ಕೆ ಬೇರೆ ಹೆಸರು ಇಡಬಹುದಾ ಎಂಬ ಕುತೂಹಲ ಕೂಡ ಮೂಡಿದೆ.

    Live Tv

  • 2ನೇ ಮದ್ವೆಯಾದ ಸ್ಯಾಂಡಲ್ ವುಡ್ ನಟಿ ಹೇಮಾ!

    2ನೇ ಮದ್ವೆಯಾದ ಸ್ಯಾಂಡಲ್ ವುಡ್ ನಟಿ ಹೇಮಾ!

    ಬೆಂಗಳೂರು: ಸ್ಯಾಂಡಲ್ ವುಡ್ ನ `ಅಮೆರಿಕ ಅಮೆರಿಕ’, `ದೊರೆ’ `ರವಿಮಾಮ’ ಚಿತ್ರಗಳಲ್ಲಿ ನಟಿಸಿ ಮನೆಮಾತಾದ ನಟಿ ಹೇಮಾ ಇದೀಗ ಎರಡನೇ ಮದುವೆಯಾಗಿದ್ದಾರೆ.

    ಹೌದು. `ರಂಗೋಲಿ’ ಸಿನಿಮಾದಲ್ಲಿ ನಟಿಸಿರೋ ಪ್ರಶಾಂತ್ ಗೋಪಾಲಶಾಸ್ತ್ರಿ ಎಂಬವರನ್ನು ನಟಿ ವರಿಸಿದ್ದಾರೆ. ಈ ಕುರಿತು ಸ್ವತಃ ಹೇಮಾ ಅವರೇ ತಮ್ಮ ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಪ್ರಶಾಂತ್ ಭರತನಾಟ್ಯ ಕಲಾವಿದರೂ ಆಗಿರೋ ಪ್ರಶಾಂತ್ ಜತೆಯಲ್ಲಿ ನಟಿ ಹೇಮಾ ಅವರು ಹಲವಾರು ಭರತಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಈ ಹಿಂದೆ ನಟಿ ಹೇಮಾ ಅವರು ಸ್ವಮೇಂದ್ರ ಪಂಚಮುಖಿ ಎಂಬವರನ್ನು ವರಿಸಿದ್ದರು. ಅಲ್ಲದೇ ಮದುವೆಯಾದ ನಂತ್ರ ವಿದೇಶದಲ್ಲಿ ನೆಲೆಸಿದ್ದು, ಬಳಿಕ ಬೆಂಗಳೂರಿಗೆ ವಾಪಾಸ್ಸಾಗಿದ್ದರು. ಇತ್ತೀಚಿನ ದಿನಗಳಲ್ಲಿ ಹೇಮಾ ಅವರು ಬೆಂಗಳೂರಿನಲ್ಲೇ ನಾಟ್ಯ ಶಾಲೆ ನಡೆಸುತ್ತಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ಹೇಮಾ ನಟ ಪ್ರಶಾಂತ್ ಗೋಪಾಲ ಸ್ವಾಮಿಯವರನ್ನು ಮದುವೆಯಾಗಿದ್ದಾರೆ.

    ಹೇಮಾ ಅವರು `ರವಿಮಾಮ’ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ.