Tag: ದೊಡ್ಡಾಲದ ಮರ

  • ಕೇಶರಾಶಿಗಾಗಿ ದೊಡ್ಡಾಲದ ಮರದ ಚಿಗುರು, ಬೇರಿಗೇ ಕನ್ನ!

    ಕೇಶರಾಶಿಗಾಗಿ ದೊಡ್ಡಾಲದ ಮರದ ಚಿಗುರು, ಬೇರಿಗೇ ಕನ್ನ!

    ಬೆಂಗಳೂರು: ಕೂದಲು ಚೆನ್ನಾಗಿ ಬರಲಿ ಅಂತಾ ದೊಡ್ಡಲಾದಮರದ ಬೇರುಗಳಿಗೆ ಕನ್ನ ಹಾಕುತ್ತಿರೋ ವಿಚಾರವೊಂದು ಬೆಳಕಿಗೆ ಬಂದಿದೆ. ವಿಶೇಷ ಏನಪ್ಪ ಅಂದ್ರೆ ಕೂದಲು ಚೆನ್ನಾಗಿ ಬರೋದು ಇರಲಿ ಇರೋ ಬರೋ ಕೂದ್ಲೆಲ್ಲ ಉದುರಿ ಬೊಕ್ಕತನ ಸಮಸ್ಯೆ ಎದುರಾಗುತ್ತಿದೆಯಂತೆ. ಇದಕ್ಕೆ ಕಾರಣ ಮುನೇಶ್ವರನ ಮಹಿಮೆಯಂತೆ.

    ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ದೊಡ್ಡಲಾದಮರದ ಮುನೇಶ್ವರನ ಸನ್ನಿಧಾನದಲ್ಲಿ ವಿಚಿತ್ರ ವಿಸ್ಮಯ ನಡೆಯುತ್ತಿದೆಯಂತೆ. ಆಲದ ಮರದ ಎಳೆಯ ಬೇರುಗಳನ್ನು ಕೊಬ್ಬರಿ ಎಣ್ಣೆ ಜೊತೆ ಮಿಕ್ಸ್ ಮಾಡಿ ತಲೆಗೂದಲಿಗೆ ಹಂಚಿಕೊಂಡ್ರೇ, ಕೂದಲು ಉದ್ದ ಬೆಳೆಯುತ್ತೆ ಅಂತಾ ಬಹುತೇಕ ಜನ ಇದಕ್ಕಾಗಿಯೇ ಇಲ್ಲಿಗೆ ಬಂದು ಎಳೆಬೇರಿಗೆ ಕನ್ನ ಹಾಕ್ತಾರಂತೆ.

    ಹೀಗೆ ತಲೆಕೂದಲಿಗೆ ಹಚ್ಚಿಕೊಂಡವರಿಗೆ ಬಹುತೇಕರಿಗೆ ಐದಾರು ದಿನದಲ್ಲಿ ಇರೋ ಬರೋ ಕೂದಲು ಉದುರೋಗುವ ಸಮಸ್ಯೆ ಎದುರಾಗುತ್ತಿದೆಯಂತೆ. ಇದಕ್ಕೆ ಕಾರಣ ಇಲ್ಲಿನ ಮುನೇಶ್ವರ ಅನ್ನೋದು ಸ್ಥಳೀಯರ ಹಾಗೂ ಅರ್ಚಕರ ನಂಬಿಕೆ. ಹೀಗಾಗಿಯೇ ಇಲ್ಲಿ ಆಲದ ಮರದ ಬೇರು ಕದ್ದವರು ಬಹುತೇಕರು ದೇವರಿಗೆ ವಾಪಾಸು ಬಂದು ತಪ್ಪುಕಾಣಿಕೆ ಹಾಕಿದ್ದಾರಂತೆ. ಇದನ್ನೂ ಓದಿ: ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ಈ ಆಲದ ಮರದ ಕೆಲ ಭಾಗ ಕೆಳಗೆ ಬಿದ್ರೂ ಜನ ಅದನ್ನು ಒಲೆ ಉರಿಸೋಕೆ ಕೂಡ ಈ ಹಿಂದಿನಿಂದಲೂ ಬಳಕೆ ಮಾಡುತ್ತಿಲ್ಲವಂತೆ. ಅಷ್ಟೊಂದು ನಂಬಿಕೆ ಜನರ ಪಾಲಿಗೆ ಇದೆ. ಆದರೆ ಬರೋ ಜನ್ರಿಗೆ ಮುನೇಶ್ವರ ಪವಾಡ ಗೊತ್ತಾಗಲ್ಲ ಅನ್ನುವ ಕಾರಣಕ್ಕೆ ಈಗ ಬೇರನ್ನು ಕಾಪಾಡೋಕೆ ಅಂತಾನೆ ಗಾರ್ಡ್‍ಗಳನ್ನು ಕೂಡ ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ. ಅಸಲಿಗೆ ಈ ಎಳೆಯ ಬೇರನ್ನು ಚಿವುಟೋದ್ರಿಂದ ದೊಡ್ಡಲಾದಮರ ವಿಸ್ತಾರವಾಗಿ ಬೆಳೆಯೋದಕ್ಕೂ ಕೂಡ ಕಷ್ಟವಾಗುತ್ತೆ. ಮುನೇಶ್ವರನ ಕೋಪದ ಭಯಕ್ಕಾದ್ರೂ ಬೇರು ಕಿತ್ತುಹಾಕುವುದು ಜನ ಕಡಿಮೆ ಮಾಡುವಂತಾಗಲಿ.

  • ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!

    ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!

    ಬೆಂಗಳೂರು: ಪ್ರವಾಸಿಗರು ಹೆಚ್ಚು ಇಷ್ಟಪಡುವ ಜಾಗದಲ್ಲಿ ದೊಡ್ಡಾಲದ ಮರವೂ ಒಂದು. ಆದರೆ  ಬುಧವಾರ ಬೆಳಗ್ಗೆ ಈ ಪಾರಂಪರಿಕ ವೃಕ್ಷ ಧರೆಗುರುಳಿದೆ.

    ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ‘ದೊಡ್ಡಾಲದ ಮರ’ ಇಡೀ ದೇಶದ ಗಮನ ಸೆಳೆದಿದೆ. ಈ ದೊಡ್ಡಾಲದ ಮರಕ್ಕೆ 400 ವರ್ಷಗಳ ಇತಿಹಾಸವಿದ್ದು, ಈಗ ಎರಡು ಬೃಹದಾಕಾರದ ಆಲದ ಮರಗಳು ಧರೆಗೆ ಉರುಳಿದೆ. ಇದು ಮೂರು ಎಕ್ರೆ ವಿಸ್ತಾರಕ್ಕೆ ಚಾಚಿಕೊಂಡಿದ್ದು, ಭಾನುವಾರ ಸುರಿದ ಗಾಳಿ ಮಳೆಗೆ ಮರ ಧರೆಗೆ ಉರುಳಿದೆ ಎಂದು ತೋಟಗಾರಿಕ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ:  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಎಂಪಿ ಶಿಕ್ಷಣ ಸಚಿವರ ಸೊಸೆ 

    ಆದ್ರೇ ಸ್ಥಳೀಯರು, ತೋಟಗಾರಿಕೆ ಇಲಾಖೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡಾಲದ ಮರ ಧರೆಗುರುಳಿದೆ. ಇಲ್ಲಿ ಹುಲ್ಲಿನ ಹಾಸು ಹಾಕೋದಕ್ಕೆ ಮರದ ಬುಡದಲ್ಲಿರುವ ಮಣ್ಣನ್ನು ಸಿಬ್ಬಂದಿ ತೆಗೆದುಹಾಕಿದ್ದಾರೆ. ಇದ್ರಿಂದ ಈ ಅನಾಹುತ ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ.

    ಅಲ್ಲದೇ ಇನ್ನಷ್ಟು ಮರಗಳು ಬಾಗಿದ ಸ್ಥಿತಿಯಲ್ಲಿದೆ. ಈ ಬಗ್ಗೆ ಸಿಬ್ಬಂದಿ, ಇಲಾಖೆಗೆ ಪತ್ರ ಬರೆದಿದ್ದಾರೆ.