Tag: ದೊಡ್ಡರಸಿನಕೆರೆ

  • ದೊಡ್ಡರಸಿನಕೆರೆಯಲ್ಲಿ ಅಂಬರೀಶ್ 4ನೇ ವರ್ಷದ ಸ್ಮರಣೆ – ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ

    ದೊಡ್ಡರಸಿನಕೆರೆಯಲ್ಲಿ ಅಂಬರೀಶ್ 4ನೇ ವರ್ಷದ ಸ್ಮರಣೆ – ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ

    ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ (Ambareesh) ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅಂಬರೀಶ್ ಹುಟ್ಟೂರಾದ ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ತಾಲೂಕಿನ ದೊಡ್ಡರಸಿನಕೆರೆ (Doddarasikere) ಗ್ರಾಮಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

    ಪ್ರತಿ ವರ್ಷ ಈ ದಿನದಂದು ದೊಡ್ಡರಸಿನಕೆರೆ ಗ್ರಾಮಕ್ಕೆ ಬಂದು ಅಂಬರೀಶ್ ಸಮಾಧಿಗೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಪೂಜೆ ಸಲ್ಲಿಸುತ್ತಾರೆ. ಅದರಂತೆ ಇಂದು ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಇಂದು ಸಹ ಪೂಜೆ ಸಲ್ಲಿಸಿದರು. ಈ ವೇಳೆ ಸುಮಲತಾಗೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ (Rockline Venkatesh), ನಟ ದೊಡ್ಡಣ್ಣ (Doddanna) ಅವರು ಸಹ ಸಾಥ್ ನೀಡಿದರು. ಇದೇ ವೇಳೆ ದೊಡ್ಡರಸಿನಕೆರೆ ಗ್ರಾಮಸ್ಥರು ಗೀರೈಸ್ ಹಾಗೂ ಚಿಕನ್ ಗ್ರೇವಿಯನ್ನು ಜನರಿಗೆ ವಿತರಣೆ ಮಾಡಿದರು. ಇದನ್ನೂ ಓದಿ: ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಇದೇ ವೇಳೆ ಮಾತನಾಡಿದ ಸುಮಲತಾ ಅವರು, ಅಜಾತಶತ್ರು ಎನ್ನುವ ಪದಕ್ಕೆ ಸರಿಯಾದ ಅರ್ಥ ಅಂಬರೀಶ್. ಅಂಬರೀಶ್ ಅವರನ್ನು ಮಿಸ್ ಮಾಡಿಕೊಳ್ಳದವರು ಯಾರು ಸಹ ಇಲ್ಲ. ಅವರು ನಮ್ಮನ್ನಗಲಿ 4 ವರ್ಷ ಕಳೆದಿದೆ, ಆದರೂ ಅಭಿಮಾನಿಗಳಿಗೆ ಅಂಬಿ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಂಬಿ ನೆನಪಲ್ಲಿ ಅಭಿಮಾನಿಗಳು ಹಲವಾರು ಜನಪರ ಕೆಲಸ ಮಾಡುತ್ತಿದ್ದಾರೆ. ಅಂಬರೀಶ್ ಎಲ್ಲರನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದರು. ಹಾಗಾಗಿ ಅವರನ್ನು ಮಿಸ್ ಮಾಡಿಕೊಳ್ಳದವರೇ ಇಲ್ಲ ಎಂದರು. ಇದನ್ನೂ ಓದಿ: ಉಪೇಂದ್ರ ಆರೋಗ್ಯದಲ್ಲಿ ಏರುಪೇರು: ಹರ್ಷ ಆಸ್ಪತ್ರೆಗೆ ದಾಖಲು, ಡಿಸ್ಚಾರ್ಜ್

    Live Tv
    [brid partner=56869869 player=32851 video=960834 autoplay=true]

  • ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ

    ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ

    ಮಂಡ್ಯ: ಗ್ರಾಮವೊಂದರ 2 ಗುಂಪುಗಳ ಪ್ರತಿಷ್ಠೆಯಿಂದ ದೇವಾಲಯದ ಪ್ರವೇಶ ಸಿಗದೆ ದೇವರ ಬಸವ ದೇವಸ್ಥಾನದ ಗೇಟ್ ಮುಂದೆ ಕಾದು ಕುಳಿತಿರುವ ಘಟನೆ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದೆ.

    ದೊಡ್ಡರಸಿನಕೆರೆ ಗ್ರಾಮದಲ್ಲಿ ಸಣ್ಣಿರಕ್ಕಿರಾಯನ ದೇವಾಲಯವಿದ್ದು, ಕುರುಬ ಸಮುದಾಯದವರು ಹಿಂದಿನಿಂದಲು ದೇವಸ್ಥಾನವನ್ನು ನಡೆಸಿಕೊಂಡು ಬರುತ್ತಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ದೇವಸ್ಥಾನ ಊರಿನ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಎಂಬುವವರು ದೇವಸ್ಥಾನ ಜೀರ್ಣೋದ್ದಾರ ಮಾಡಿಸೋಣ ಎಂದು ಎಂಟ್ರಿ ಕೊಟ್ಟರು. ಅವರು ದೇವಾಲಯದಲ್ಲಿ ಭಕ್ತಾಧಿಗಳಿಂದ ಸಂಗ್ರಹವಾಗಿದ್ದ ಕಾಣಿಕೆ ಹಣದ ಜೊತೆ ವೈಯಕ್ತಿಕ ಹಣದಿಂದಲೂ ದೇವಾಲಯ ಜೀರ್ಣೋದ್ದಾರ ಮಾಡಿದ್ದಾರೆ. ಇದನ್ನೂ ಓದಿ:  ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು

    ಬಳಿಕ ದೇವಸ್ಥಾನ ಟ್ರಸ್ಟ್ ರಚಿಸಿಕೊಂಡು ಅವರೇ ಅಧ್ಯಕ್ಷಕರು ಸಹ ಆಗಿದ್ದಾರೆ. ಬಳಿಕ ಅರ್ಚಕರ ವಿಷಯದಲ್ಲಿ ಊರಿನ ಗ್ರಾಮಸ್ಥರೊಂದಿಗೆ ಜಗಳ ಆರಂಭವಾಗಿದ್ದು, ಬೇರೆ ಸಮುದಾಯದ ಅರ್ಚಕರನ್ನು ನೇಮಿಸಲು ಮುಂದಾಗಿದ್ದಾರೆ.

    ಗ್ರಾಮಸ್ಥರು ಮಾತ್ರ ಕುರುಬ ಸಮುದಾಯದವರೆ ತಲೆತಲಾಂತರದಿಂದ ಪೂಜೆ ಪುನಸ್ಕಾರ ಮಾಡಿಕೊಂಡು ಬರ್ತಿದ್ದಾರೆ. ಅವರೇ ಮುಂದುವರೆಯಲಿ ಎಂದು ಹೇಳ್ತಿದ್ದಾರೆ. ಆದರೆ ಗ್ರಾಮಸ್ಥರ ಮಾತಿಗೆ ಒಪ್ಪದ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಮಂತ್ರ ಪಠನೆ ಬರಲ್ಲ ಎಂದು ಸಬೂಬು ಹೇಳಿಕೊಂಡು ದೇವಾಲಯಕ್ಕೆ ಒಂದು ವಾರದಿಂದ ಬೀಗ ಜಡಿದು ದೇವರಿಗೇ ದಿಗ್ಬಂಧನ ಹಾಕಿ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ:  ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಇತ್ತ ಪ್ರತಿ ಸೋಮವಾರ ಸಣ್ಣಕ್ಕಿರಾಯನ ದರ್ಶನಕ್ಕೆ ಬರುತ್ತಿದ್ದ ದೇವರ ಬಸವ ನಿನ್ನೆ ಬೆಳಗ್ಗೆಯಿಂದಲು ಕಾದು ಕುಳಿತಿದ್ದಾನೆ. ದೇವಾಲಯಕ್ಕೆ ಬೀಗ ಹಾಕಿರುವುದರಿಂದ ಗೇಟ್ ಮುಂದೆಯೆ ಜಗ್ಗದೆ ಠಿಕಾಣಿ ಹೂಡಿದ್ದು, ಗ್ರಾಮಸ್ಥರ ಮನವೊಲಿಕೆಗೂ ಜಗ್ಗದೆ ಕುಳಿತಿದ್ದಾನೆ.

    ಒಟ್ಟಿನಲ್ಲಿ ತಮ್ಮ ತಮ್ಮ ಪ್ರತಿಷ್ಠೆಗಾಗಿ ದೇವರಿಗೆ ದಿಗ್ಬಂಧನ ವಿಧಿಸಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.