Tag: ದೈವ ನರ್ತಕ

  • ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ!

    ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ!

    ಮಂಗಳೂರು: ಇದು ಕಾಂತಾರ ಸಿನಿಮಾವನ್ನು ನೆನಪಿಸುವಂತಹ ಒಂದು ಘಟನೆ ಆಗಿದೆ. ಕಾಂತಾರದ ದೃಶ್ಯದಂತೆ ಇಲ್ಲಿಯೂ ತಂದೆಯ ಮರಣದ ನಂತರ ಮಗ ದೈವ ಕಟ್ಟುವ ಜವಾಬ್ದಾರಿ ತೆಗೆದುಕೊಳ್ಳುವುದಾಗಿದೆ. ಹಾಗಿದ್ರೆ ಏನಿದು ಘಟನೆ? ಎಲ್ಲಿ ನಡೆದಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಕಾಂತು ಅಜಿಲ ಮೃತಪಟ್ಟ ದೈವ ನರ್ತಕ. ಈ ಘಟನೆಯ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು.

    ಇದೇ ವಿಚಾರದಲ್ಲಿ ಊರವರು ಪ್ರಶ್ನಾಚಿಂತನೆ ಇಟ್ಟಾಗ ಸಾವನ್ನಪ್ಪಿದ ಮಗನೇ ದೈವ ನರ್ತಕನಾಗಬೇಕು ಅಂತ ಕಂಡು ಬಂದಿತ್ತು. ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವದ ಮುಂದೆ ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ ಬೂಳ್ಯ ನೀಡಲಾಯಿತು. ಇದನ್ನೂ ಓದಿ: ಎಂಜಿ ರೋಡ್- ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ- ಪ್ರಯಾಣಿಕರ ಪರದಾಟ

    ಕಾಂತು ಅಜಿಲನ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಅವರು ದೀಕ್ಷೆ ಬೂಲ್ಯ ಪಡೆದು, ಸಂಬಂಧಪಟ್ಟ ನಾಲ್ಕು ಗ್ರಾಮಕ್ಕೆ ದೈವಗಳ ಸೇವೆಯ ಜವಾಬ್ದಾರಿ ಹೊತ್ತರು. ಈ ಅಪೂರ್ವ ಕ್ಷಣವನ್ನು ಊರ ಹಾಗೂ ಪರವೂರಿನ ದೈವಭಕ್ತರು ಕಣ್ತುಂಬಿಕೊಂಡರು.

  • ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ದೈವ ನರ್ತಕರು (Daiva Narthaka)ತಮ್ಮ ಶೂಟಿಂಗ್ ಸೆಟ್ ಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಸಿದ್ದಾರೆ ಎಂದು ಮೊನ್ನೆಯಷ್ಟೇ ‘ಕೊರಗಜ್ಜ’ (Koragajja) ಸಿನಿಮಾ ಟೀಮ್ ಪ್ರೆಸ್ ಮೀಟ್ ಮಾಡಿ ಆರೋಪ ಮಾಡಿತ್ತು. ‘ಕೊರಗಜ್ಜ’ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದು ದೈವ ನರ್ತಕರು ಬೆದರಿಸಿದ್ದಾರೆ. ಶೂಟಿಂಗ್ ಸೆಟ್ ಹಾಳು ಮಾಡಿದ್ದಾರೆ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೆದರಿಕೆ ಹಾಕಿದ್ದಾರೆ ಎಂದು ನಿರ್ದೇಶಕರು ಆರೋಪ ಮಾಡಿದ್ದರು.

    ಕಳಸದಲ್ಲಿ (Kalasa) ಕೊರಗಜ್ಜ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳು ಆಯುಧ ಹಿಡಿದುಕೊಂಡು ಬಂದು ಚಿತ್ರತಂಡದವರನ್ನು ಬೆದರಿಸಿದ್ದರು ಎನ್ನುವ ಆರೋಪವಿತ್ತು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ದೈವ ನರ್ತಕರನ್ನು ಕಳಸದ ಪೊಲೀಸ್ ಸ್ಟೇಷನ್ ಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗಿದೆಯಂತೆ. ಮುಂದಿನ ಪ್ರಕ್ರಿಯೆಗಾಗಿ ನಿನ್ನೆ ರಾತ್ರಿ ಕೇಸು ದಾಖಲಿಸುವ ಕುರಿತು ತಮಗೆ ಪೊಲೀಸ್ ಅಧಿಕಾರಿಗಳು ಕರೆ ಮಾಡಿದ್ದರು ಎಂದು ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

    ಚಿತ್ರದ ನಿರ್ದೇಶಕರಾದ ಸುಧೀರ್ ಅತ್ತಾವರ್ (Sudhir Attavar) ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ 9.30ಕ್ಕೆ ಕರೆ ಮುಂದಿನ ಕ್ರಮಕ್ಕಾಗಿ ದೂರು ನೀಡುವಂತೆ ತಿಳಿಸಿದ್ದಾರಂತೆ. ದೈವ ನರ್ತಕರೆನ್ನುವವರನ್ನು ಬಂಧಿಸದೆ ಅವರಿಗೆ ಬುದ್ದಿಹೇಳಿ ಬಿಟ್ಟುಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರಂತೆ. ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ ‘ಕತ್ತಲೆ’ ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆಹಚ್ಚಲು ನಿರ್ದೇಶಕರು ಮನವಿ ಮಾಡಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೈವನರ್ತನದ ವೇಳೆಯೇ ನರ್ತಕ ಕುಸಿದು ಬಿದ್ದು ಸಾವು

    ದೈವನರ್ತನದ ವೇಳೆಯೇ ನರ್ತಕ ಕುಸಿದು ಬಿದ್ದು ಸಾವು

    ಮಂಗಳೂರು: ದೈವನರ್ತನದ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ (Kadaba Taluku) ಎಡಮಂಗಲದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಕಾಂತು (60) ಎಂದು ಗುರುತಿಸಲಾಗಿದೆ. ಈ ಘಟನೆ ಎಡಮಂಗಲ ಸಮೀಪದ ಇಡ್ಯಡ್ಕ (Idyadka) ಎಂಬಲ್ಲಿ ನಡೆದಿದೆ. ಶಿರಾಡಿ ದೈವದ ನರ್ತನಕ್ಕೆ ಮೊದಲು ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು.  ಬಳಿಕ ಶಿರಾಡಿ ದೈವ (Shiradi Daiva) ದ ಕೋಲ ನಡೆಯುತ್ತಿದ್ದ ಸಮಯದಲ್ಲಿ ಕಾಂತು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಸದ್ಯ ದೇವರ ಸೇವೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ರೀತಿ ಸಾವು ಬಂದಿರುವುದು ನೆರೆದವರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಹೋಗಿ ಓದಿಕೋ ಎಂದು ಗದರಿದ ತಂದೆ – 9ರ ಬಾಲಕಿ ನೇಣಿಗೆ ಶರಣು

  • ಇವತ್ತಿಂದ ಈಕೆ ನನ್ನ ಅರ್ಧಾಂಗಿ – ಇದು ಸತ್ಯ..ಸತ್ಯ ಮಹಿಳೆಗೆ ಮದುವೆ ಅಭಯಕೊಟ್ಟ ದೈವನರ್ತಕ

    ಇವತ್ತಿಂದ ಈಕೆ ನನ್ನ ಅರ್ಧಾಂಗಿ – ಇದು ಸತ್ಯ..ಸತ್ಯ ಮಹಿಳೆಗೆ ಮದುವೆ ಅಭಯಕೊಟ್ಟ ದೈವನರ್ತಕ

    ಕಾರವಾರ: ಅಂಕೋಲಕ್ಕೆ ತನ್ನ ವೈಯಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬಳಿ ಬಂದಿದ್ದ ಬೆಳಗಾವಿ (Belagavi) ಮೂಲದ ಮಹಿಳೆಗೆ (Women) ಮದುವೆಯಾಗುವುದಾಗಿ ದೈವ ನರ್ತಕ (Daiva Narthaka) ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Uttara Kannada Ankola) ಅಂಬಾರಕೊಡ್ಲೆನಲ್ಲಿ ನಡೆದಿದೆ.

    ಏನಿದು ಘಟನೆ?
    ಬೆಳಗಾವಿಯ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡು ಅಂಕೋಲದಲ್ಲಿರುವ ಕಾಲಭೈರವ ದೇವರ ಸನ್ನಿದಾನಕ್ಕೆ ಬಂದಿದ್ದಾರೆ. ಬಂದು ತಮ್ಮ ಸಮಸ್ಯೆಯನ್ನು ದೈವದ ನರ್ತಕನ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಅವನ ಅರ್ಧಾಂಗಿ ಅವನಿಗೆ ಕೈಕೊಟ್ಟು 10 ವರ್ಷವಾಯಿತು. ಆದ್ರೂ ಒಬ್ಬಂಟಿಯಾಗಿ ಈ ಸ್ಥಳದಲ್ಲಿ ಸಾಧನೆ ಮಾಡುತ್ತಿದ್ದಾನೆ. ಆದ್ರೆ ನಾನು ಮಹಾ ಕಾಳಿಯಾಗಿ, ದುರ್ಗಿಯಾಗಿ ಒಂದು ನಿರ್ಧಾರ ಮಾಡುತ್ತಿದ್ದೇನೆ. ಇದು ಸಂಪೂರ್ಣವಾಗಿ ಬಹಿರಂಗ ಪಡಿಸುತ್ತಿದ್ದೇನೆ. ಇವತ್ತಿನಿಂದ ಈ ಬಾಲಕಿ ಈ ಬಾಲಕನ ಅರ್ಧಾಂಗಿಯಾಗಿ ಸಂಪೂರ್ಣ ಅರ್ಧನಾರೇಶ್ವರಿಯಾಗಿ ಈ ಬಾಲಕನ ಹೃದಯದಲ್ಲಿ ಮನೆ ಮಾಡಿರುತ್ತಾಳೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾಲಕಿಯೇ ಈ ಬಾಲಕನ ಮುಂದಿನ ಮಡದಿ. ಕೊನೆಯ ಉಸಿರು ಇರುವವರೆಗೆ ಶೀಲವಂತವಳಾಗಿ ಯಾವುದೇ ಹೀನವಾಗದ ರೀತಿಯಲ್ಲಿ ಮರ್ಯಾದೆ ಮುಖಾಂತರವಾಗಿ ಈ ಬಾಲಕನ ಒಟ್ಟಿಗೆ ಬೆಳೆಯುತ್ತಾಳೆ. ಇಂದು ಇಲ್ಲವೇ ನಾಳೆ ಧರ್ಮಸ್ಥಳ, ಮಂತ್ರಾಲಯ, ಈ ಮೂರು ಸ್ಥಳದಲ್ಲಿ ಒಂದು ಸ್ಥಳದಲ್ಲಿ ಈ ಬಾಲಕಿಗೆ ತಾಳಿ ಬೀಳುತ್ತದೆ ಎಂದು ನುಡಿದಿದ್ದಾನೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಬಲಿ : ತಾಯಿಯ ಆರೋಪ

    ಈ ದೈವನರ್ತಕನ ಅಭಯದ ಮಾತಿನ ವೀಡಿಯೋ ತುಣುಕು ಇದೀಗ ಎಲ್ಲೇಡೆ ವೈರಲ್ ಆಗುತ್ತಿದೆ. ಈ ನಡುವೆ ದೈವ ನರ್ತಕ ಪಾತ್ರಿಗೆ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ. ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಈತನಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಈತ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪ್ರಾಂಶುಪಾಲನ ವಿರುದ್ಧ ರೇಪ್ ಕೇಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k