Tag: ದೈವವಾಣಿ

  • ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ – ಮೈಲಾರಲಿಂಗೇಶ್ವರ ವರ್ಷದ ದೈವವಾಣಿ

    ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ವರ್ಷದ ಭವಿಷ್ಯವಾಣಿ ಮೈಲಾರಲಿಂಗೇಶ್ವರನ (Mylaralingeshwar) ಕಾರ್ಣಿಕೋತ್ಸವ ನಡೆಯಿತು. 15 ಅಡಿ ಬಿಲ್ಲನ್ನೇರಿದ ರಾಮಪ್ಪ ಗೊರವಯ್ಯ ಸದ್ದಲೇ ಎನ್ನುತ್ತಲೆ ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ ಎಂದು ಈ ವರ್ಷದ ಕಾರ್ಣಿಕ (prediction) ನುಡಿದಿದ್ದಾರೆ.

    ಸುಮಾರು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಯುವ ಕಾರ್ಣಿಕವನ್ನು ಕೇಳಲು ಲಕ್ಷಾಂತರ ಜನ ಭಕ್ತರು ಜಮಾಯಿಸುತ್ತಾರೆ. ಭಾರತ ಹುಣ್ಣಿಮೆಯ ಸಮಯದಲ್ಲಿ ನಡೆಯುವ ಜಾತ್ರೆಯ ವೇಳೆ ರಾಮಪ್ಪ ಗೊರವಯ್ಯ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ ಡೆಂಕನಮರಡಿಯಲ್ಲಿ ಸದ್ದಲೇ ಅನ್ನುತ್ತ ಕಾರ್ಣಿಕ ನುಡಿಯುತ್ತಾರೆ.

    ಗೊರವಯ್ಯ ನುಡಿಯುವ ಕಾರ್ಣಿಕವನ್ನು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡುತ್ತಾರೆ. ಈ ವರ್ಷ ಗೊರವಯ್ಯ ನುಡಿದ ಕಾರ್ಣಿಕವಾಣಿ ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎನ್ನುವುದನ್ನು ದೇಶದ ಅನ್ನದಾತರು ಹಾಗೂ ರಾಜಕಾರಣದ ದೈವನುಡಿಯನ್ನು ವಿಶ್ಲೇಷಣೆ ಮಾಡಿದರು. ರೈತರಿಗೆ ರಾಜ್ಯದಲ್ಲಿ ಮಳೆ ಬೆಳೆ ಜಾಸ್ತಿ ಆಗಿ, ಸಮೃದ್ಧಿಯಾಗಲಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ. ಈ ಸೂಚನೆ ಮೈಲಾರಲಿಂಗೇಶ್ವರನ ವಾಣಿಯಿಂದ ಸಿಕ್ಕಿದೆ.

    ರಾಜಕೀಯವಾಗಿ 2023ರಲ್ಲಿ ನ್ಯಾಯಯುತವಾಗಿರುವ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಾಮಾಣಿಕವಾಗಿ ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಿಷ್ಠೆಯಿಂದ ಇರುವ ನಾಯಕರಿಗೆ ರಾಜ್ಯದ ಪಟ್ಟ ಸಿಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊರೊನಾ ಮೂರನೇ ಅಲೆ ಬರದಂತೆ ದೈವ ಕೃಪೆ- ಮಾಲತೇಶ ಸ್ವಾಮಿಯ ದೈವವಾಣಿ

    ಕೊರೊನಾ ಮೂರನೇ ಅಲೆ ಬರದಂತೆ ದೈವ ಕೃಪೆ- ಮಾಲತೇಶ ಸ್ವಾಮಿಯ ದೈವವಾಣಿ

    ಹಾವೇರಿ: ವಿಜಯದಶಮಿಯ ಪ್ರಯುಕ್ತ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶಸ್ವಾಮೀಯ ಕಾರ್ಣೀಕೋತ್ಸವ ನಡೆಯಿತು. ದೇವರಗುಡ್ಡದ ಗ್ರಾಮದ ಹೊರವಲಯದಲ್ಲಿರುವ ಕರಿಯಾಲ ದಲ್ಲಿ 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪ “ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್.” ಅನ್ನೋ ದೈವವಾಣಿ ಗೊರವಯ್ಯ ಸ್ವಾಮಿ  ನುಡಿದಿದ್ದಾರೆ.

    ರೈತರ ಬೆಳೆಗಳು ಉತ್ತಮ ಫಸಲು ಬಂದು, ರೈತರ ಬದುಕು ಸಮೃದ್ಧ ಆಗುತ್ತದೆ. ಭೂಮಿಗೆ ಉತ್ತಮ ಬೆಲೆ ಸಿಗುತ್ತದೆ. ರೈತರು ಉತ್ತಮ ಫಸಲು ಪಡೆಯುತ್ತಾರೆ. ರೋಗ ರುಜಿನಗಳು ಬರದಂತೆ, ಕೊರೊನಾ ಮೂರನೇ ಅಲೆ ಬರದಂತೆ ಜನರ ಮೇಲೆ ದೈವ ಕೃಪೆ ಇರುತ್ತದೆ ಎಂದು ಕಾರ್ಣಿಕ ದೈವ ವಾಣಿಯನ್ನು ಮಾಲತೇಶ ದೇವರ ಪ್ರಧಾನ ಅರ್ಚಕ ಸಂತೋಷ ಭಟ್ಟ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಮಳೆಯ ಆರ್ಭಟ- ಸೂರಿಲ್ಲದೇ ಬೀದಿಗೆ ಬಿದ್ದ ಕುಟುಂಬಗಳು

    ರಾಜಕೀಯವಾಗಿ ಸಹ ವಿಶ್ಲೇಷಣೆ ಮಾಡಲಾಗಿದೆ. ಪಕ್ಷೇತರರ ಸಹಕಾರದಿಂದ ಮುಂದಿನ ರಾಜಕೀಯ ಭವಿಷ್ಯ ಇರುತ್ತದೆ. ದೇವರಿಗೆ ಪ್ರೀತಿಯಾದಂತಹ ಆಡಳಿತವನ್ನು ಮುಂದಿನ ಸರ್ಕಾರಗಳು ಕೊಡುತ್ತವೆ ಎಂದು ರಾಜಕೀಯವಾಗಿ ಸಂತೋಷ ಭಟ್ ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಬರಲಿದೆ ಅಂಬಾರಿ ಉತ್ಸವ ಮೂರ್ತಿ

  • ಧರ್ಮದರ್ಶಿಯಿಂದ ಮೈಲಾರಲಿಂಗೇಶ್ವರ ದೈವವಾಣಿ ದುರುಪಯೋಗ- ಕಾರ್ಣಿಕ ನುಡಿಯುವ ಗೊರವಯ್ಯ ಕಿಡಿ

    ಧರ್ಮದರ್ಶಿಯಿಂದ ಮೈಲಾರಲಿಂಗೇಶ್ವರ ದೈವವಾಣಿ ದುರುಪಯೋಗ- ಕಾರ್ಣಿಕ ನುಡಿಯುವ ಗೊರವಯ್ಯ ಕಿಡಿ

    ಹಾವೇರಿ: ಐತಿಹಾಸಿಕ ಸುಕ್ಷೇತ್ರವಾದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕದ ವಾಣಿಯನ್ನು ಧರ್ಮಧರ್ಶಿ ವೆಂಕಪ್ಪಯ್ಯ ಒಡೆಯರ್ ಮರು ವಿಶ್ಲೇಷಣೆ ಮಾಡಿ, ದೇವರ ಕಾರ್ಣಿಕ ನುಡಿಗೆ ಅಪಮಾನ ಮಾಡಿದ್ದಾರೆ ಎಂದು ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪ ಹಾಗೂ ದೇವಸ್ಥಾನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಭರತ ಹುಣ್ಣುಮೆ ಆಗಿ ಮೂರು ದಿನಕ್ಕೆ ಗೊರವಯ್ಯ ಸ್ವಾಮಿ ಜಪತಪ ಮಾಡಿ 11 ದಿವಸ ಉಪವಾಸವಿದ್ದು ದೇವರ ವಾಣಿಯನ್ನ ನುಡಿಯುತ್ತಾರೆ. ಈ ವರ್ಷ ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪಾರಾಕ್ ಎಂದು ವಾಣಿಯನ್ನ ಹೇಳಿದ್ದಾರೆ. ಇದನ್ನು ಧರ್ಮಮರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಆ ದಿನ ಮಾತ್ರ ವಿಶ್ಲೇಷಣೆ ಮಾಡಬೇಕು. ಅದರೆ ತಮ್ಮ ಲಾಭಕ್ಕಾಗಿ, ರಾಜಕೀಯ ವ್ಯಕ್ತಿಗಳು ಬಂದಾಗ ಕಾರ್ಣಿಕವನ್ನು ಹೇಳಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದಾಗ ಮುಖ್ಯಮಂತ್ರಿ ಆಗುತ್ತೀರಿ ಅಂದಿದ್ದರು. ಈಗ ಎರಡು ದಿನದ ಹಿಂದೆ 2023ಕ್ಕೆ ಗಡ್ಡಧಾರಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ 6-7 ತಿಂಗಳು ಮಾತ್ರ ಅಧಿಕಾರ ಮಾಡಲಿದ್ದಾರೆ ಎಂದಿದ್ದಾರೆ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಹಾಗೂ ಬೈರತಿ ಬಸವರಾಜ ಸಹ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನಿಮಗೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದು ಹೇಳಿದ್ದಾರೆ. ದೇವರ ವಾಣಿಯನ್ನ ತಮಗೆ ಬೇಕಾದ ರೀತಿಯಲ್ಲಿ ತಿರುಚಿ ಹೇಳುತ್ತಿದ್ದಾರೆ. ಮೈಲಾರಲಿಂಗೇಶ್ವರ ಭಕ್ತರು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮಾತು ಕೇಳಬಾರದು ಎಂದು ಭಕ್ತರು ಹೇಳಿದ್ದಾರೆ.

    ಮೈಲಾರಲಿಂಗೇಶ್ವರ ಹೆಸರಿನಲ್ಲಿ ಧರ್ಮಧರ್ಶಿ ವೆಂಕಪ್ಪಯ್ಯ ಒಡೆಯರ್ ದೈವವಾಣಿಗೆ ಅಪಮಾನ ಮಾಡುತ್ತಿದ್ದಾರೆ. ಹೀಗೆ ಮುಂದುವರಿಸಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

  • ಸಿಎಂ ಬೊಮ್ಮಾಯಿ 6-7 ತಿಂಗಳು ಅಧಿಕಾರ, 2022ರಲ್ಲಿ ಗಡ್ಡಧಾರಿ ಹೊಸ ಮುಖ್ಯಮಂತ್ರಿ: ಮೈಲಾರ ದೈವವಾಣಿ

    ಸಿಎಂ ಬೊಮ್ಮಾಯಿ 6-7 ತಿಂಗಳು ಅಧಿಕಾರ, 2022ರಲ್ಲಿ ಗಡ್ಡಧಾರಿ ಹೊಸ ಮುಖ್ಯಮಂತ್ರಿ: ಮೈಲಾರ ದೈವವಾಣಿ

    – 2022ರ ಮಾರ್ಚ್ ನಲ್ಲಿ ಸಿಎಂ ಬದಲಾವಣೆ

    ವಿಜಯನಗರ: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಇನ್ನೂ ಒಂದು ವಾರ ಆಗಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 6-7 ತಿಂಗಳು ಮಾತ್ರ ಅಧಿಕಾರ ನಡೆಸಲಿದ್ದಾರೆ. 2022ರ ಮಾರ್ಚ್ ನಲ್ಲಿ ಗಡ್ಡಧಾರಿ ವ್ಯಕ್ತಿ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.

    ಮೈಲಾರದಲ್ಲಿ ಭರತ ಹುಣ್ಣುಮೆಯಂದು ನಡೆದ ಕಾರ್ಣಿಕದ ದೈವವಾಣಿಯನ್ನು ಮತ್ತೆ ವಿಶ್ಲೇಷಣೆ ಮಾಡಿರುವ ಅವರು, ‘ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್’ ಎಂಬುದು ದೈವವಾಣಿ ಆಗಿತ್ತು. ಮೈಲಾರ ಭವಿಷ್ಯವಾಣಿಯಂತೆ ಈಗಿರುವ ಸರ್ಕಾರದಲ್ಲಿ ಮೂವರು ಜನ ಸಿಎಂ ಆಗಿ ಮುಕ್ತಾಯ ಆಗುತ್ತೆ. ಕೆಲವೇ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದಿದ್ದಾರೆ.

    ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಾವಧಿ ಪೂರ್ಣಗೊಳಿಸಲ್ಲ. ಕಳೆದ ಒಂದು ವಾರದ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. 6-7 ತಿಂಗಳು ಮಾತ್ರ ರಾಜ್ಯಭಾರ ಮಾಡುತ್ತಾರೆ. 2022ರ ಮಾರ್ಚ್ ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗುತ್ತಾರೆ ಎಂದು ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.

    ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಸುಳ್ಳಾಗಿಲ್ಲ ಎಂಬ ಪ್ರತೀತಿ ಇದೆ. ಹೀಗಾಗಿ ಸಿಎಂ ಬದಲಾವಣೆ ಕುರಿತ ಈ ಮಾತು ಭಾರೀ ಸಂಚಲನ ಮೂಡಿಸಿದೆ. ಗಡ್ಡಧಾರಿ ವ್ಯಕ್ತಿ ಯಾರು? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.

    ಈ ಹಿಂದೆ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಯಡಿಯೂರಪ್ಪನವರ ನಂತರ ನೀವೇ ಮುಖ್ಯಮಂತ್ರಿ ಆಗುತ್ತೀರಿ ಎಂದು ಹೇಳಿದ್ದೆ. ಅವರು ಒಂದು ಕ್ಷಣ ವಿಚಾರ ಮಾಡಿದರು. ದೇವರ ಆರ್ಶಿವಾದ ಇದ್ದರೇ ಆಗುತ್ತೇನೆ ಅಂದಿದ್ದರು. ಅದರಂತೆ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎಂದಿದ್ದಾರೆ.

    ಕೆಲವೇ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಲಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಿ. ಅರ್ಹರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮೈಲಾರವಾಣಿಯಲ್ಲಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.