Tag: ದೇಶಭಕ್ತಿ

  • ‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ನಿನ್ನೆಯಷ್ಟೇ ಪಠಾಣ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾದ ಹಲವು ಅಂಶಗಳನ್ನು ಈ ಟ್ರೈಲರ್ ನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಉಗ್ರವಾದಿಗಳು ಮತ್ತು ಭಾರತದ ರಕ್ಷಣೆ ಹೊತ್ತ ‘ರಾ’ ಏಜೆಂಟ್ ನಡುವಿನ ಕಥಾಹಂದರ ಇದಾಗಿದ್ದು, ದೇಶದ ಅಪ್ಪಟ ಪ್ರೇಮಿಯೊಬ್ಬ ಭಯೋತ್ಪಾದಕರನ್ನು ಹೇಗೆ ಹಿಮ್ಮೆಟ್ಟಿಸುತ್ತಾನೆ ಎನ್ನುವ ಸಾರವನ್ನು ಈ ಸಿನಿಮಾ ಹೊಂದಿದೆ. ಹೀಗಾಗಿಯೇ ಇದೊಂದು ಅಪ್ಪಟ ದೇಶಭಕ್ತಿ ಸಾರುವ ಸಿನಿಮಾ ಎಂದಿದ್ದಾರೆ ಶಾರುಖ್ ಖಾನ್.

    ಅನೇಕ ಅಚ್ಚರಿ ಸಂಗತಿಗಳೊಂದಿಗೆ ಈ ಟ್ರೈಲರ್ ಗಮನ ಸೆಳೆಯುತ್ತಿದ್ದು, ಕೆಲವು ಪಾತ್ರಗಳ ಹಿನ್ನೆಲೆಯನ್ನೂ ಟ್ರೈಲರ್ ನಲ್ಲಿ ರಿವಿಲ್ ಮಾಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.  ಈ ಸಿನಿಮಾದಲ್ಲಿ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಾಹಂ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಕಾಣಸಿಕೊಂಡಿದ್ದರೆ, ಶಾರುಖ್ ರಾ ಏಜೆಂಟ್ ಪಾತ್ರವನ್ನು ಮಾಡಿದ್ದಾರೆ.

    ಔಟ್ ಫುಟ್ ಎಕ್ಸ್ ಎನ್ನುವ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಜಾನ್ ಅಬ್ರಾಹಂ, ಈ ಸಂಘಟನೆಯ ಮೂಲಕ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಾರೆ. ಈ ದಾಳಿಯನ್ನು ಭಾರತ ರಾ ಏಜೆಂಟ್ ಆಗಿರುವ ಶಾರುಖ್ ಖಾನ್ ಹೇಗೆ ತಡೆಯುತ್ತಾರೆ ಎನ್ನುವುದೇ ಪಠಾಣ್ ಸಿನಿಮಾದ ಕಥಾ ಹಂದರ. ಟ್ರೈಲರ್ ನಲ್ಲಿ ಶಾರುಖ್ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ಸಾಹಸಮಯ ದೃಶ್ಯಗಳಲ್ಲಿ ಅವರು ವಯಸ್ಸಿಗೂ ಮೀರಿದ ಆ್ಯಕ್ಷನ್ ಮಾಡಿದ್ದಾರೆ. ಇಡೀ ಟ್ರೈಲರ್ ಆ್ಯಕ್ಷನ್ ದೃಶ್ಯಗಳಿಂದಲೇ ತುಂಬಿದೆ.

    ನಾನಾ ಕಾರಣಗಳಿಂದಾಗಿ ವಿವಾದಕ್ಕೆ ಕಾರಣವಾಗಿರುವ ಈ ಸಿನಿಮಾ, ದೇಶಪ್ರೇಮವನ್ನು ಸಾರಲಿದೆ ಎಂದು ಈ ಹಿಂದೆಯೇ ಶಾರುಖ್ ಹೇಳಿದ್ದರು. ಸಿನಿಮಾ ನೋಡಿದ ನಂತರ ಮಾತನಾಡಿ ಎಂದೂ ಅವರು ವಿರೋಧಿಗಳಿಗೆ ಪ್ರತಿಕ್ರಿಯಿಸಿದ್ದರು. ಕಥಾ ಹಂದರ ಮತ್ತು ಶಾರುಖ್ ಮಾಡಿರುವ ಪಾತ್ರವನ್ನು ಗಮನಿಸಿದರೆ, ಉಗ್ರರಿಂದ ಭಾರತವನ್ನು ತಪ್ಪಿಸುವಂತಹ ಕಥಾಹಂದರ ಇರು ಹೊಂದಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.

    ಪಠಾಣ್ ಸಿನಿಮಾದ ಹಾಡಿನಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಅಭಿಯಾನ ಶುರುವಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಚಿತ್ರವನ್ನು ನಿಷೇಧಿಸಬೇಕು ಎಂದು ಹೋರಾಟಗಳು ನಡೆದಿವೆ. ಈ ಸಂದರ್ಭದಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದ ಕಥೆಯಿಂದಾಗಿ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಠಾಣ್ ದೇಶಭಕ್ತಿ ಸಿನಿಮಾ ಎಂದು ಟ್ವೀಟ್ ಮಾಡಿದ ನಟ ಶಾರುಖ್ ಖಾನ್

    ಪಠಾಣ್ ದೇಶಭಕ್ತಿ ಸಿನಿಮಾ ಎಂದು ಟ್ವೀಟ್ ಮಾಡಿದ ನಟ ಶಾರುಖ್ ಖಾನ್

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ

    ಈ ಕುರಿತು ನಟ ಪ್ರಕಾಶ್ ಬೆಳವಾಡಿ ಮಾಧ್ಯಮವೊಂದರ ಜೊತೆ ಮಾತನಾಡಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಸಿನಿಮಾ ರಂಗದಲ್ಲಿ ಬಿಗುವಿನ ವಾತಾವರಣವಿದೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಚರ್ಚೆ ಆಗುತ್ತಿರುವ ವಿಷಯ ಎಷ್ಟು ಸಭ್ಯ ಎಂದು ಯೋಚಿಸಬೇಕಿದೆ. ಮಾತಾಡೋಕೆ ತುಂಬಾ ವಿಷಯ ಇದೆ. ಆದರೆ, ಪರಿಸ್ಥಿತಿ ಕೆಟ್ಟದಾಗಿದೆ. ಚರ್ಚೆ, ವಿವಾದ ಏನೇ ಇರಲಿ, ನಾನು ಆ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ವಿವಾದದ ಕುರಿತು ಮಾತನಾಡಿರುವ ಶಾರುಖ್ ಖಾನ್. ನಾವು ಸಿನಿಮಾವನ್ನು ಸಿನಿಮಾದಂತೆ ನೋಡಬೇಕು. ನಾನಂತೂ ಸಿನಿಮಾವಾಗಿಯೇ ಅಲ್ಲಿ ಕೆಲಸ ಮಾಡಿದ್ದೇನೆ. ಈ ವಿವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ನನ್ನ ಮನಸ್ಸಲ್ಲಂತೂ ಯಾವುದೇ ಕೆಟ್ಟ ಆಲೋಚನೆಗಳು ಇಲ್ಲ. ಈ ವಿವಾದದಿಂದ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಹಾಗಾಗಿ ಜನರು ಚಿತ್ರವನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಘದ ಟೋಪಿ ಧರಿಸಿ ಮೊದಲ ಬಾರಿಗೆ ಎಸ್‍ಎಂಕೆಯಿಂದ ಹಿಂದುತ್ವದ ಭಾಷಣ

    ಸಂಘದ ಟೋಪಿ ಧರಿಸಿ ಮೊದಲ ಬಾರಿಗೆ ಎಸ್‍ಎಂಕೆಯಿಂದ ಹಿಂದುತ್ವದ ಭಾಷಣ

    ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರು ಹಿಂದುತ್ವದ ಕುರಿತು ಉಪನ್ಯಾಸ ನೀಡಿದ್ದಾರೆ.

    ಇಂದು ವಿಜಯದಶಮಿ ಹಿನ್ನೆಲೆ ಬೆಂಗಳೂರಿನ ಕೇಶವ ಕೃಪಾದಲ್ಲಿ ಆರ್‍ಎಸ್‍ಎಸ್ ಕಡೆಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್‍ಎಂ ಕೃಷ್ಣ ಆರ್‍ಎಸ್‍ಎಸ್ ಟೋಪಿ ಧರಿಸಿ ಮೊದಲ ಬಾರಿಗೆ ಬಹಿರಂಗವಾಗಿ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಉಪನ್ಯಾಸ ಮಾಡಿದ್ದಾರೆ.

     

    ದೇಶದ ಚರಿತ್ರೆ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈತಿಕ ನೀತಿಗಳೆ ನಮ್ಮ ದೇಶಕ್ಕೆ ಅಡಿಪಾಯ. ಸಹಸ್ರಾರು ವರ್ಷಗಳಿಂದ ಹಿಂದೂ ಧರ್ಮ ವಸುದೈವ ಕುಟುಂಬ ಎಂಬುದನ್ನು ಪ್ರತಿಪಾದಿಸಿದೆ. ವಿಶ್ವ ಕುಟುಂಬದ ಸಿದ್ಧಾಂತವನ್ನು ನಮ್ಮ ದೇಶದ ಮುಂದೆ ಇಟ್ಟವರು ಆರ್‍ಎಸ್‍ಎಸ್ ಸಂಸ್ಥಾಪಕರು. ಸಂಘದ ಅಗತ್ಯತೆ ಹಿಂದಿನಿಗಿಂತಲೂ ಈಗ ಹೆಚ್ಚಿದೆ. ನನ್ನ ಬಹಳಷ್ಟು ವರ್ಷಗಳ ರಾಜಕೀಯ ಅನುಭವದ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗತ್ಯತೆಯನ್ನು ಕಂಡುಕೊಂಡಿದ್ದೇನೆ ಎಂದರು.

    ದೇಶಭಕ್ತಿಯುಳ್ಳ ಸಂಘಕ್ಕೆ ನನ್ನ ಗೌರವವನ್ನು ಅರ್ಪಣೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿಯೊಬ್ಬರು ದೇಶಕ್ಕೋಸ್ಕರ ಎರಡು ವರ್ಷಗಳ ಕಾಲ ತಮ್ಮ ಜೀವನ ಮೀಸಲಾಗಿಡಬೇಕು. ನಮ್ಮ ದೇಶದಲ್ಲಿಯೂ ಕೂಡ ಎರಡು ವರ್ಷಗಳ ಕಾಲ ನಮ್ಮನ್ನು ನಾವು ಅರ್ಪಿಸಿಕೊಳ್ಳುವಂತಾಗಬೇಕು. ನಮ್ಮನ್ನು ನಾವು ದೇಶಕ್ಕೆ ಅರ್ಪಣೆ ಮಾಡಿಕೊಳ್ಳುವುದರಿಂದ ನಮ್ಮ ರಾಷ್ಟ್ರಾಭಿಮಾನ ಅಭಿವ್ಯಕ್ತವಾಗುತ್ತದೆ ಎಂದು ಹೇಳಿದರು.

    ನಾವು ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬುದು ನಮ್ಮ ಹಿಂದೂ ಧರ್ಮದಲ್ಲಿಯೇ ಇದೆ. ದೇಶವನ್ನೇ ದೇವರು ಎಂದು ನಂಬಿರುವ ನಾವು ದೇಶಕ್ಕಾಗಿಯೇ ಎಷ್ಟು ಕಾಲ ವಿನಿಯೋಗಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ನಮ್ಮಷ್ಟಕ್ಕೆ ನಾವೇ ಹಾಕಿಕೊಳ್ಳಬೇಕಾಗಿದೆ. ನಮ್ಮ ದೇಶದ ಶೈಕ್ಷಣಿಕ ಪದ್ಧತಿ ಬದಲಾಗಬೇಕಿದೆ. ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮ ಎಂಬ ಲಸಿಕೆಯನ್ನು ನಾವು ಸಣ್ಣವಯಸ್ಸಿನಲ್ಲಿಯೇ ಮಕ್ಕಳಿಗೆ ಕೊಡಬೇಕಾಗಿದೆ. ಸಂಘದ ಸಂಸ್ಥಾಪಕರೊಂದಿಗೆ ಲೋಕಸಭೆಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ನಮ್ಮ ಮಂಡ್ಯದ ಜನರು ಕಲ್ಪಿಸಿ ಕೊಟ್ಟಿದ್ದರು ಎಂದು ತಿಳಿಸಿದರು.

  • ಸೈನಿಕರ ಹೆಸರಲ್ಲಿ ಮತ ಕೇಳ್ತಾರೆ, ಮೋದಿ ಏನು ಗನ್ ಹಿಡ್ಕೊಂಡು ಹೋಗಿದ್ರಾ : ಸಿದ್ದರಾಮಯ್ಯ

    ಸೈನಿಕರ ಹೆಸರಲ್ಲಿ ಮತ ಕೇಳ್ತಾರೆ, ಮೋದಿ ಏನು ಗನ್ ಹಿಡ್ಕೊಂಡು ಹೋಗಿದ್ರಾ : ಸಿದ್ದರಾಮಯ್ಯ

    – ಬಿಜೆಪಿ ಪ್ರಾಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್
    – ದೇಶಭಕ್ತಿ ಹೆಸರಲ್ಲಿ ಗಾಂಧಿಯನ್ನ ಕೊಂದಿದ್ದೇ ಬಿಜೆಪಿ ಸಾಧನೆ

    ಮೈಸೂರು: ಬಿಜೆಪಿ ಪ್ರಾಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಇದ್ದಂತೆ. ದೇಶಭಕ್ತಿ ಹೆಸರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಕೊಂದಿದ್ದೇ ಬಿಜೆಪಿ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಭಕ್ತಿ ಹೆಸರಲ್ಲಿ ಗಾಂಧಿಯನ್ನ ಕೊಂದಿದ್ದೇ ಬಿಜೆಪಿ ಸಾಧನೆ. ಬಿಜೆಪಿ ಅವರು ದೇಶ ಭಕ್ತಿ ಹೆಸರಲ್ಲಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ತಿಪ್ಪರಲಾಗಾ ಹಾಕಿದರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.

    ನೀವು ಚಲಾಯಿಸುವ ಮತ ಸೇನೆಗೆ ನೀಡಿದಂತೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಅವರು, ಕಳೆದ 16 ಸಾರ್ವತ್ರಿಕ ಚುನಾವಣೆಯಲ್ಲಿ ಸೈನ್ಯ ಇರಲಿಲ್ಲವೆ? ಜೈ ಜವಾನ್ ಜೈ ಕಿಸಾನ್ ಎಂದು ಹೇಳಿದವರು ಯಾರು? ದೇಶ ಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ. ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಬಿಜೆಪಿ ಸರ್ಕಾರ ಇದೀಗ ಭಾವನಾತ್ಮಕ ವಿಚಾರಗಳನ್ನು ಮುಂದಿಡುತ್ತಿದೆ. ಪುಲ್ವಾಮಾ ದಾಳಿ ಪ್ರಕರಣವನ್ನು ಮುಂದಿಡುತ್ತಿದೆ. ಹಾಗಾದ್ರೆ ಪ್ರಧಾನಿ ಮೋದಿಯೇನು ಗನ್ ಹಿಡಿದುಕೊಂಡು ಹೋಗಿದ್ದರಾ ಎಂದು ಸಿದ್ದರಾಮಯ್ಯ ಬಿಜೆಪಿಗೆ ಪ್ರಶ್ನಿಸಿದರು.

    ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿರಲಿಲ್ಲ. ಆದ್ರೆ ನಾನು ಸ್ವಾತಂತ್ರ್ಯ ಬರುವ ಮೊದಲು ಹುಟ್ಟಿದ್ದೇನೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ದೇಶದ ಸೈನ್ಯವನ್ನು ನರೇಂದ್ರ ಮೋದಿ ಸೈನ್ಯ ಎಂದು ಭಟ್ಟಂಗಿತನ ಪ್ರದರ್ಶಿಸಿದ್ದಾರೆ. ಇಂತಹವರಿಂದ ದೇಶ ರಕ್ಷಣೆ ಸಾಧ್ಯವೇ ಎಂದು ಪ್ರಶ್ನಿಸಿ ಟಾಂಗ್ ಕೊಟ್ಟರು.

  • ದೇಶಭಕ್ತಿಯ ಜೋಶ್ ಆಕಾಶವನ್ನು ಬಿಟ್ಟಿಲ್ಲ: ಮೆಹಬೂಬಾ ಮುಫ್ತಿ ಕಿಡಿ

    ದೇಶಭಕ್ತಿಯ ಜೋಶ್ ಆಕಾಶವನ್ನು ಬಿಟ್ಟಿಲ್ಲ: ಮೆಹಬೂಬಾ ಮುಫ್ತಿ ಕಿಡಿ

    ನವದೆಹಲಿ: ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳಿಗೆ ‘ಜೈ ಹಿಂದ್’ ಎಂದು ಹೇಳುವುದು ಕಡ್ಡಾಯಗೊಳಿಸಿದ್ದ ಅಧಿಕಾರಿಗಳ ಕ್ರಮವನ್ನು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಾಬೂಬಾ ಮುಫ್ತಿ ಟೀಕೆ ಮಾಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೊಹಬೂಬಾ ಮುಫ್ತಿ, ಚುನಾವಣೆಯ ಸಂದರ್ಭದಲ್ಲಿ, ದೇಶಭಕ್ತಿಯ ಜೋಶ್ ಅಕಾಶವನ್ನು ಬಿಟ್ಟಿಲ್ಲ ಎಂದಿದ್ದಾರೆ. ಅಲ್ಲದೇ ಇದು ಸ್ವಲ್ಪ ಅಚ್ಚರಿಯನ್ನು ತಂದಿದೆ ಎಂದಿದ್ದಾರೆ.

    ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಿದ ಬಳಿಕ ‘ಜೈ ಹಿಂದ್’ ಹೇಳುವುದು ಕಡ್ಡಾಯಗೊಳಿಸಿ ಆದೇಶ ನೀಡಿದ ಒಂದು ದಿನದ ಬಳಿಕ ಮುಫ್ತಿ ಅವರು ಈ ಹೇಳಿಕೆ ನೀಡಿದ್ದಾರೆ. ನಿನ್ನೆಯಷ್ಟೇ ಏರ್ ಇಂಡಿಯಾ ಸಂಸ್ಥೆ ತನ್ನ ವಿಮಾನ ಸೇವಾ ಸಿಬ್ಬಂದಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಿದ ಬಳಿಕ ‘ಜೈ ಹಿಂದ್’ ಎಂದು ಹೇಳುವುದು ಕಡ್ಡಾಯ ಎಂದು ಆದೇಶ ಮಾಡಿತ್ತು.

    ಏರ್ ಇಂಡಿಯಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದರು. ಕೇವಲ ವಿಮಾನ ಸೇವಾ ಸಿಬ್ಬಂದಿ ಮಾತ್ರವೇ ಅಲ್ಲದೆ ಕಾಕ್ ಪಿಟ್ ನಿಂದ ಹೊರಡುವ ಸೂಚನೆಗಳ ನಂತರವೂ ‘ಜೈ ಹಿಂದ್’ ಎಂದು ಹೇಳುವಂತೆ ಸೂಚಿಸಲಾಗಿದೆ. ಅಲ್ಲದೇ ತತ್‍ಕ್ಷಣದಿಂದಲೇ ಈ ಆದೇಶ ಪಾಲಿಸುವಂತೆ ತಿಳಿಸಲಾಗಿದೆ.

    ಈ ಹಿಂದೆ 2016ರಲ್ಲೂ ಕೂಡ ಏರ್ ಇಂಡಿಯಾದ ಚೇರ್‍ಮನ್ ಆಗಿದ್ದ ಅಶ್ವಿನಿ ಲೋಹಾನಿ ಅವರು ಇಂತಹದ್ದೇ ಆದೇಶ ನೀಡಿದ್ದರು. ಆದರೆ ಆ ಆದೇಶವನು ಕಾರಣಾಂತರಗಳಿಂದ ಪಾಲಿಸಲಾಗಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

    ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

    ಬೆಂಗಳೂರು: ಕೆಲವರು ಮಕ್ಕಳಾಗಲಿಲ್ಲ ಎಂದು ತಮ್ಮ ಜೀವನವನ್ನೇ ಶಪಿಸುತ್ತಾರೆ. ಆದರೆ ಇಲ್ಲೊಬ್ಬರು ಸಮಾಜ ಸೇವೆಯಲ್ಲೇ ತಮ್ಮ ಮಕ್ಕಳನ್ನು ಕಾಣುತ್ತಿದ್ದಾರೆ.

    ನೆಲಮಂಗಲ ಪಟ್ಟಣ ನಿವಾಸಿ ಮುನೀರ್ ಪಾಷಾ ಮಕ್ಕಳಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಸಮಾಜ ಸೇವೆಯ ಮೂಲಕ ಮಕ್ಕಳನ್ನು ಕಾಣುತ್ತಿದ್ದಾರೆ.

    ಅಪ್ಪಟ ದೇಶಾಭಿಮಾನಿ, ಪ್ರಾಣಿಪಕ್ಷಿ ಪ್ರಿಯರಾಗಿರುವ ಇವರು ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಗುಡ್‍ಬೈ ಹೇಳಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಯಾರೊಬ್ಬರಿಂದ ಒಂದು ರೂ. ಹಣ ಪಡೆಯದೆ ಸ್ವಂತ ಹಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆ, ತಾಲೂಕು ಇಲಾಖೆ, ಆಸ್ಪತ್ರೆ, ತುರ್ತು ಸೇವೆಗಳ ಮಾಹಿತಿ, ಬ್ಯಾಂಕ್, ಅಂಚೆ ಕಛೇರಿ, ಗ್ಯಾಸ್ ಏಜೆನ್ಸಿ, ಮಾಧ್ಯಮ ಪ್ರತಿನಿಧಿಗಳ ಮಾಹಿತಿ, ಬ್ಲಡ್ ಬ್ಯಾಂಕ್‍ಗಳ ಮಾಹಿತಿ, ತುರ್ತು ಸಂದರ್ಭದ ಸಹಾಯದ ಮಾಹಿತಿಗಳು ಸೇರಿದಂತೆ ಪ್ರತಿನಿತ್ಯ ಜನ ಸಾಮಾನ್ಯರಿಗೆ ಅವಶ್ಯವಿರುವ ಎಲ್ಲಾ ಮಾಹಿತಿ ಮೊಬೈಲ್ ನಂಬರ್ ಗಳನ್ನು ಒಳಗೊಂಡ ಮಾಹಿತಿಯನ್ನು ಪ್ರತಿ ಮನೆ ಹಾಗೂ ಸಾರ್ವಜನಿಕರಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ನಂಬರ್ ಗಳನ್ನೊಳಗೊಂಡ ಮಾಹಿತಿಯನ್ನು ಗೋಡೆಗಳಿಗೆ ಅಂಟಿಸಿ ನಾಗರಿಕರಿಗೆ ನೆರವಾಗಿದ್ದಾರೆ.

    ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಎಲ್ಲಾ ಶಾಲೆಯ ಮಕ್ಕಳಿಗೆ ದೇಶದ ಭಾವುಟ ಹಾಗೂ ಸಿಹಿಯನ್ನು ಹಂಚುವ ಮೂಲಕ ತಮ್ಮ ಜೀವನವನ್ನು ಕಳೆಯುತಿದ್ದಾರೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಯನ್ನ ಪ್ರತಿಯೊಬ್ಬರಲ್ಲೂ ಸಾರಿ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ವೃದ್ಧಾಪ್ಯದ ಕಾಲವನ್ನು ಕಳೆಯುತ್ತಿದ್ದಾರೆ.

    ಪ್ರಾಣಿಪಕ್ಷಿ ಪ್ರಿಯರಾಗಿರುವ ಮುನೀರ್ ಪಾಷಾ, ಬೀದಿಯಲ್ಲಿ ಸಿಗುವ ನಾಯಿ, ಹಸು, ಕಾಗೆ ಮುಂತಾದವುಗಳಿಗೆ ಆಹಾರ ನೀಡಿ ತಮ್ಮ ಸುಖಃ ಜೀವನವನ್ನು ಸಮಾಜದೊಂದಿಗೆ ಕಳೆಯುತ್ತಿದ್ದಾರೆ. ಶಾಲಾ ಪುಟಾಣಿಗಳಲ್ಲಿ ಮುನೀರ್ ಅಂಕಲ್ ಎಂದೇ ಚಿರಪರಿಚಿತರಾಗಿರುವ ಇವರು ಶಾಲಾ ಆವರಣಕ್ಕೆ ಆಗಮಿಸುತ್ತಲೇ ವಿದ್ಯಾರ್ಥಿಗಳು ಸುತ್ತುವರಿದು ಪ್ರೀತಿ ಅಭಿಮಾನವನ್ನು ತೋರಿಸುತ್ತಾರೆ.

    ಜಾತ್ಯಾತೀತತೆ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದಲ್ಲಿ ಮುನೀರ್ ಪಾಷಾ ರಿಯಲ್ ಜಾತ್ಯಾತೀತ ಹೀರೋವಾಗಿ ಇಂದು ಹೊರಹೊಮ್ಮಿ ಉತ್ತಮ ಸಮಾಜಜೀವಿಯಾಗಿ ತಮ್ಮ ಇಳಿವಯಸ್ಸಿನ ಜೀವನವನ್ನು ಕಳೆಯುತ್ತಿದ್ದಾರೆ.

    https://www.youtube.com/watch?v=jFSqATg29rY