Tag: ದೇಶದ್ರೋಹಿಗಳು

  • ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ – ಸಿಟಿ ರವಿ ಪ್ರಶ್ನೆ

    ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ – ಸಿಟಿ ರವಿ ಪ್ರಶ್ನೆ

    ಉಡುಪಿ: ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

    ಕಾರ್ಕಳ ತಾಲೂಕಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ? ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡ್ತೀರಾ? ಈ ಮಾನಸಿಕತೆ ಬಹಳ ಡೇಂಜರ್ ಎಂದು ಅವರು ಗುಡುಗಿದರು.

    ಅಮೂಲ್ಯಳ ಹಿಂದೆ ಒಂದು ತಂಡವೇ ಇದೆ. ಸ್ವತಃ ಅಮೂಲ್ಯಳೇ ಈ ವಿಷಯ ಬಹಿರಂಗಪಡಿಸಿದ್ದಾಳೆ. ಬೆಂಗಳೂರು ಸಿಎಎ ಹೋರಾಟ ಪ್ರಕರಣವನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಬೇರೆ ಎಲ್ಲದಕ್ಕೂ ಶಿಕ್ಷೆ ಹಾಗೂ ಕ್ಷಮೆ ಇದೆ. ದೇಶದ್ರೋಹದ ಚಟುವಟಿಕೆಗೆ ಪಾಕ್ ಜಿಂದಾಬಾದ್ ಅಂದೋರಿಗೆ ಕ್ಷಮೆ ಇಲ್ಲ. ಘೋಷಣೆ ಕೂಗಿದವರು ಕ್ಷಮಿಸಿ ಎಂದು ಯಾರು ಕೇಳಬಾರದು. ಇಂತಹ ಮಾನಸಿಕತೆಯೇ ಬಹಳ ಅಪಾಯಕಾರಿ ಎಂದು ಹೇಳಿದರು.

    ಇದೇ ವೇಳೆ ದೇಶದೊಳಗೆ ಇಂತಹವರು ಓಡಾಡುತ್ತಿದ್ದರೆ, ನಮ್ಮ ದೇಶದ ಸೈನಿಕರು ಗಡಿಯಲ್ಲಿ ಯಾಕೆ ಗುಂಡಿಗೆ ಬಲಿಯಾಗಬೇಕು. ಹಿಮಾಲಯದ ಮೈನಸ್ 20 ಡಿಗ್ರಿಯಲ್ಲಿ ಯಾಕೆ ದೇಶ ಕಾಯಬೇಕು. ವಿರೋಧ ರಾಷ್ಟ್ರದ ಶತ್ರುಗಳ ಗುಂಡಿಗೆ ಯಾಕೆ ಬಲಿಯಾಗಬೇಕು ಎಂದು ಪ್ರಶ್ನೆ ಮಾಡಿದರು.

  • ದೇಶದ್ರೋಹಿಗಳನ್ನ ಮಟ್ಟಹಾಕಲು ಯತ್ನಾಳ್‍ಗೆ ಗೃಹ ಖಾತೆ ಕೊಡಿ- ಅಭಿಯಾನ

    ದೇಶದ್ರೋಹಿಗಳನ್ನ ಮಟ್ಟಹಾಕಲು ಯತ್ನಾಳ್‍ಗೆ ಗೃಹ ಖಾತೆ ಕೊಡಿ- ಅಭಿಯಾನ

    ವಿಜಯಪುರ: ರಾಜ್ಯದಲ್ಲಿ ಪಾಕ್ ಪರ ಘೋಷಣೆ, ದೇಶದ್ರೋಹಿ ಚಟುವಟಿಕೆ ಹೆಚ್ಚಿದ ಹಿನ್ನೆಲೆ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಗೃಹ ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ.

    ಟಿಕ್‍ಟಾಕ್, ಫೇಸ್ ಬುಕ್‍ನಂತಹ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಶುರುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಯತ್ನಾಳರನ್ನು ಗೃಹ ಸಚಿವರನ್ನಾಗಿ ಮಾಡುವಂತೆ ಪೋಸ್ಟ್ ಗಳು ಹರಿದಾಡುತ್ತಿವೆ. ವಾಟ್ಸಪ್ ಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ದೇಶದ್ರೋಹಿಗಳನ್ನು ಹುಟ್ಟಡಗಿಸಲು ಯತ್ನಾಳ್ ಅವರೇ ಸರಿ ಅವರಿಗೆ ಗೃಹ ಖಾತೆ ನೀಡಿ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಲಾಗಿದೆ.

    ದೇಶದ್ರೋಹಿಗಳನ್ನ ಮಟ್ಟಹಾಕಲು ಯತ್ನಾಳ್‍ಗೆ ಗೃಹ ಖಾತೆ ನೀಡಲು ಪೋಸ್ಟ್ ಗಳಲ್ಲಿ ಒತ್ತಾಯ ಮಾಡಲಾಗಿದ್ದು, ಕರ್ನಾಟಕದ ಗೃಹ ಸಚಿವರನ್ನಾಗಿ ಯತ್ನಾಳರನ್ನು ನೇಮಿಸಲು ಆಗ್ರಹಿಸಲಾಗಿದೆ. ದೇಶದ್ರೋಹಿಗಳ ಮಣಿಸಲು ಯತ್ನಾಳರೇ ಸೂಕ್ತ ಅವರನ್ನು ಗೃಹ ಮಂತ್ರಿ ಮಾಡಿ ಅಮೇಲೆ ನೋಡಿ ರಾಜ್ಯದಲ್ಲಿ ದೇಶದ್ರೋಹಿಗಳು ಕಾಣುವುದಿಲ್ಲ ಎಂದು ಅಭಿಯಾನದಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.

  • ಜೆಎನ್‍ಯುನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ – ಕಲ್ಲಡ್ಕ ಪ್ರಭಾಕರ್ ಭಟ್

    ಜೆಎನ್‍ಯುನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ – ಕಲ್ಲಡ್ಕ ಪ್ರಭಾಕರ್ ಭಟ್

    ತುಮಕೂರು: ಜೆಎನ್‍ಯು ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ. ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ದೇಶ ದ್ರೋಹಿಗಳನ್ನು ಅಲ್ಲಿ ಹುಟ್ಟುಹಾಕುತ್ತಿದ್ದಾರೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಎನ್‍ಯುನಲ್ಲಿ ದೇಶ ದ್ರೋಹಿ ಚಟುವಟಿಕೆ ನಡೆಯುತ್ತಿದೆ ಎಂದು ಆ ವಿಶ್ವವಿದ್ಯಾನಿಲಯವನ್ನು ಬಂದ್ ಮಾಡೋದು ಬೇಡ. ಅಲ್ಲಿಯ ವಿದ್ಯಾರ್ಥಿಗಳಲ್ಲಿ ಪ್ರೀತಿ-ವಿಶ್ವಾಸದಿಂದ ರಾಷ್ಟ್ರೀಯವಾದವನ್ನು ತುಂಬಬೇಕು. ಆ ಮೂಲಕ ಸತ್ಯ ದರ್ಶನ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.

    ಅಲ್ಲದೇ ಎನ್.ಆರ್.ಸಿ ಮತ್ತು ಪೌರತ್ವ ಕಾಯ್ದೆ ದೇಶಾದ್ಯಂತ ಜಾರಿ ಆಗಲೇಬೇಕು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತುಂಬಾ ಬಲವಾಗಿದ್ದಾರೆ. ಇದನ್ನು ಮಾಡೇ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆ ಹಾಗೂ ಎನ್.ಆರ್.ಸಿಯನ್ನು ಯಾವುದೇ ರಾಜ್ಯ ತಿರಸ್ಕರಿಸುವಂತಿಲ್ಲ. ಆ ಅಧಿಕಾರ ರಾಜ್ಯಕ್ಕಿಲ್ಲ ಎಂದರು.

  • ಯೋಧರ ಬಲಿದಾನಕ್ಕೆ ಅವಮಾನ- ಒರಾಯನ್ ಮಾಲ್‍ನಲ್ಲಿ ಪಾಕ್ ಪರ ಘೋಷಣೆ

    ಯೋಧರ ಬಲಿದಾನಕ್ಕೆ ಅವಮಾನ- ಒರಾಯನ್ ಮಾಲ್‍ನಲ್ಲಿ ಪಾಕ್ ಪರ ಘೋಷಣೆ

    – ಸಾರ್ವಜನಿಕರಿಂದ ಒಬ್ಬನ ಬಂಧನ ಮೂವರು ಪರಾರಿ

    ಬೆಂಗಳೂರು: ಉಗ್ರನ ಆತ್ಮಾಹುತಿ ದಾಳಿಗೆ 40 ಮಂದಿ ಯೋಧರು ಹುತಾತ್ಮರಾಗಿದ್ದು, ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದಿದೆ. ಆದ್ರೂ ಕೆಲ ಪುಂಡರು ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ಪ್ರತಿಷ್ಠಿತ ಒರಾಯನ್ ಮಾಲ್‍ನಲ್ಲಿ ಪಾಕಿಸ್ತಾನದ ಪರ ದೇಶದ್ರೋಹಿಗಳು ಘೋಷಣೆ ಕೂಗಿದ್ದಾರೆ.

    ದೇಶದ್ರೋಹದ ಘೋಷಣೆ ಕೇಳಿದ ಕೂಡಲೇ ಕೆರಳಿದ ಸಾರ್ವಜನಿಕರು ಓರ್ವನನ್ನು ಹಿಡಿದು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ನಡೆಸಿದ್ದಾರೆ. ಘೋಷಣೆ ಕೂಗಿ ಕೂಡಲೇ ಸಾರ್ವಜನಿಕರು ಜಮಾಯಿಸಿದ್ದನ್ನು ಕಂಡ ಮೂವರು ದೇಶದ್ರೋಹಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ ಪೊಲೀಸರ ವಶಕ್ಕೆ- ಮನೆಗೆ ಬೆಂಕಿ

    ಮಾಲ್‍ನ ವಾಶ್ ರೂಂನಲ್ಲಿ ದಾಸರಹಳ್ಳಿ ಮೂಲದ ಇಬ್ಬರು ವ್ಯಕ್ತಿಗಳು ಪಾಕ್ ಪರ ಘೋಷಣೆ ಕೂಗಿದ್ದರು ಎಂದು ಶಂಕಿಸಲಾಗಿತ್ತು. ಆದ್ರೆ ಅವರನ್ನು ವಶಕ್ಕೆ ಪಡೆದಾಗ ನಾವು ಘೋಷಣೆ ಕೂಗಿಲ್ಲ ಎಂದಿದ್ದರು. ಹೀಗಾಗಿ ಸುಬ್ರಹ್ಮಣ್ಯ ನಗರ ಪೊಲೀಸರು ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ.  ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಘೋಷಣೆ – ಬೆಂಗ್ಳೂರಲ್ಲಿ ಕಾಶ್ಮೀರಿ ಯುವಕ ಅರೆಸ್ಟ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ರಾಯಚೂರು: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಬಳಿಕ ಬುದ್ಧಿಜೀವಿಗಳು ಹೇಳಿಕೆ ನೀಡುವಾಗ ಅವರ ನಾಲಗೆ ಮೇಲೆ ಹಿಡಿತವಿರಿಲಿ. ಇಲ್ಲದಿದ್ದರೆ ನಾಲಗೆ ಕತ್ತರಿಸಬೇಕಾಗುತ್ತದೆ ಎಂದು ಸುರಪುರ ಶಾಸಕ ರಾಜುಗೌಡ ಎಚ್ಚರಿಕೆ ನೀಡಿದ್ದಾರೆ.

    ರಾಯಚೂರಿನಲ್ಲಿ ನಡೆದ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ಘೋರ ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾಗಿರುವುದು ಬೇಸರದ ಸಂಗತಿ. ಇದರಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಯೋಧರ ಹತ್ಯೆಯನ್ನು ಸಂಭ್ರಮಿಸುವ ಪ್ರಜೆಗಳು, ನಟರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಾರೇ ಆಗಲಿ ಅವರು ದೇಶದ್ರೋಹಿಗಳು ಎಂದು ಕಿಡಿಕಾರಿದ್ದಾರೆ.

    ಸಿಆರ್‌ಪಿಎಫ್‌ನ 40 ಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ. ಈ ಕೃತ್ಯವೆಸಗಿದ ಪಾಕ್ ಉಗ್ರರನ್ನು ಬುಡ ಸಮೇತ ಕಿತ್ತು ಎಸೆಯಬೇಕು ಎಂದು ನಾನು ಮೋದಿ ಅವರಿಗೆ ಮನವಿ ಮಾಡುತ್ತೇನೆ. ಆಗ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಈ ವಿಚಾರವಾಗಿ ಎಲ್ಲಾ ಪಕ್ಷಗಳು ಒಂದಾಗಬೇಕಾಗಿದೆ. ಇಲ್ಲಿ ರಾಜಕೀಯ ಮಾಡುವುದು ಬೇಡ. ಗಡಿ ಯೋಧರು ಯಾವ ಜಾತಿ, ಪಕ್ಷ ಭೇದವಿಲ್ಲದೆ ನಾವೆಲ್ಲ ಭಾರತೀಯರೆಂದು ದೇಶವನ್ನು ಕಾಯುತ್ತಾರೆ. ಹಾಗೆಯೇ ನಾವೆಲ್ಲ ಒಂದಾಗಿ ಉಗ್ರರ ವಿರುದ್ಧ ನಿಲ್ಲಬೇಕು. ಯೋಧರ ಹತ್ಯೆಯನ್ನು ಸಂಭ್ರಮಿಸೋ ಜನರು ದೇಶದ್ರೋಹಿಗಳು. ಬುದ್ಧಿಜೀವಿಗಳು ಈ ರೀತಿಯ ಹೇಳಿಕೆ ನೀಡಿದರೆ ನಾಲಗೆ ಕತ್ತರಿಸಬೇಕಾಗುತ್ತದೆ. ಯಾರೇ ದೇಶದ್ರೋಹ ಹೇಳಿಕೆ ನೀಡಿದರೂ ಅವರ ಪ್ರತಿರೋಧಕ್ಕೆ ಯುವಕರ ಪಡೆ ಸಿದ್ಧವಾಗಿದೆ ಎಂದು ಶಾಸಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv