Tag: ದೇವೇಗೌಡರ ಕುಟುಂಬ

  • ತುಮಕೂರಿನವರು ಪಾಕಿಸ್ತಾನದವರಾ, ಪಾಪಿಗಳಾ – ಸಿಎಂ ವಿರುದ್ಧ ಬಸವರಾಜು ಕಿಡಿ

    ತುಮಕೂರಿನವರು ಪಾಕಿಸ್ತಾನದವರಾ, ಪಾಪಿಗಳಾ – ಸಿಎಂ ವಿರುದ್ಧ ಬಸವರಾಜು ಕಿಡಿ

    – ದೇವೇಗೌಡರಿಗೂ ಸದ್ಬುದ್ದಿ ಬರಲಿ, ಮಕ್ಕಳಿಗೂ ಬುದ್ಧಿ ಹೇಳಲಿ
    – ನಿಂಬೆ ಹಣ್ಣು, ಶಾಸ್ತ್ರ ಕೇಳಿ ಕೆಲಸ ಮಾಡೋರು ನಮಗೆ ಟೆಕ್ನಿಕ್ ಗೊತ್ತಿಲ್ಲಾ ಅಂತಾರೆ

    ತುಮಕೂರು: ಜಿಲ್ಲೆಯ ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಿಸಿ ಮಾಗಡಿಗೆ ನೀರು ಕೊಂಡೊಯ್ಯುವ ಯೋಜನೆ ವಿರೋಧಿಸಿ ಸಂಸದ ಜಿ.ಎಸ್.ಬಸವರಾಜು ದೇವೇಗೌಡರ ಕುಟುಂಬದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಿಸುವ ಯೋಜನೆಯನ್ನು ವಿರೋಧಿಸಿದ್ದಾರೆ. ಸಿಎಂಗೆ ಹೇಮಾವತಿ ವಿಚಾರದಲ್ಲಿ ಎಚ್ಚರಿಕೆ ಕೊಡುತ್ತೇನೆ. ನಾವು ಕೊಡುವ ಅಲಾರಾಂ ಅವರಿಗೆ ಎಚ್ಚರಿಕೆ ಆಗಬೇಕು. ಲಿಂಕಿಂಗ್ ಕೆನಾಲ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಎಂಜಿನಿಯರ್ ಹೇಳುವ ಮಾತನ್ನು ಕೇಳಿ. ಯಾವುದೋ ರಾಜಕಾರಣಿ ಹೇಳ್ತಾನೆ ಎಂದು ಹೇಳಿ ನೀರು ಕೊಂಡೊಯ್ಯುವ ಉಡಾಫೆ ಮಾಡಬೇಡಿ ಎಂದು ಗುಡುಗಿದರು.

    ಎಂದೂ ಕೂಡಾ ತುಮಕೂರಿಗೆ ಹೇಮಾವತಿ ನೀರು ಸಂಪೂರ್ಣವಾಗಿ ಬಿಟ್ಟಿಲ್ಲ. ಸಮುದ್ರಕ್ಕೆ ನೀರು ಬಿಡುತ್ತಾರೆ ತುಮಕೂರಿಗೆ ಬಿಡುವುದಿಲ್ಲ. ತುಮಕೂರಿನವರು ಪಾಕಿಸ್ತಾನದವರಾ? ಪಾಪಿಗಳಾ ಎಂದು ಮೈತ್ರಿ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಲಿಂಕಿಂಗ್ ಕೆನಾಲ್ ನಿರ್ಮಿಸುವ ಯೋಜನೆಯನ್ನು ನಾವು ವಿರೋಧಿಸುತ್ತೇವೆ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇವೇಗೌಡರ ಕುಟುಂಬ ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುತ್ತಾ ಬಂದಿದೆ. ಮಾನ್ಯ ದೇವೇಗೌಡರು ವಯೋವೃದ್ಧರು ಅವರಿಗೆ ಸದ್ಬುದ್ಧಿ ಬರಲಿ. ಮಕ್ಕಳಿಗೂ ಬುದ್ಧಿ ಹೇಳಲಿ. ಅದರಲ್ಲೂ ಸಚಿವ ರೇವಣ್ಣ ಅವರಿಗೆ ಮೊದಲು ಬುದ್ಧಿ ಹೇಳಲಿ. ಗೋರೂರು ಡ್ಯಾಂ ಬೀಗದ ಕೈ ಕೊಡಲಿ ನಾನು ನೀರುಗಂಟಿ ಕೆಲಸ ಮಾಡಿಸುತ್ತೇನೆ. ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಶಾಸ್ತ್ರ ಕೇಳಿ ಕೆಲಸ ಮಾಡೋ ಜನ ಅವರು. ನಮಗೆ ಟೆಕ್ನಿಕ್ ಗೊತ್ತಿಲ್ಲಾ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

  • ಬಸವರಾಜು ಕ್ಷೇತ್ರಕ್ಕೆ ಹೇಮಾವತಿ ನೀರು ತಂದು ತೋರಿಸಲಿ- ಸಚಿವ ಶ್ರೀನಿವಾಸ್ ಸವಾಲ್

    ಬಸವರಾಜು ಕ್ಷೇತ್ರಕ್ಕೆ ಹೇಮಾವತಿ ನೀರು ತಂದು ತೋರಿಸಲಿ- ಸಚಿವ ಶ್ರೀನಿವಾಸ್ ಸವಾಲ್

    ತುಮಕೂರು: ಮಾಜಿ ಪ್ರಧಾನಿ ದೇವೇಗೌಡರನ್ನು ಹೀನಾಯವಾಗಿ ತುಮಕೂರು ಕ್ಷೇತ್ರದಲ್ಲಿ ಸೋಲಿಸಿದ ಬಿಜೆಪಿ ನಾಯಕ ಬಸವರಾಜು ಅವರು ಹೇಮಾವತಿ ನೀರನ್ನು ಜಿಲ್ಲೆಗೆ ಬಿಟ್ಟು ತೋರಿಸಲಿ ಎಂದು ಸಚಿವ ಶ್ರೀನಿವಾಸ್ ಸವಾಲ್ ಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್ ಅವರು, ಬಸವರಾಜು ಗೆದ್ದರೂ ಅಂತ ಹೇಮಾವತಿ ಸರಾಗವಾಗಿ ಹರಿಯತ್ತಾ? ಎಲ್ಲಾದರೂ ಹರಿಯೋಕೆ ಸಾಧ್ಯ ಇದೆಯಾ? ದೇವೇಗೌಡರು ಗೆದ್ದಿದ್ದರೆ ಅವರಿಗೆ ಕಮಿಟ್‍ಮೆಂಟ್ ಆದರೂ ಇತ್ತು. ಹಾಗಾಗಿ ನೀರು ಬೀಡೋರು. ಈಗ ಬಸವರಾಜು ಹೇಮಾವತಿ ನೀರು ಹರಿಸಲಿ, ಎಲ್ಲಿಂದ ತರುತ್ತಾರೋ ತರಲಿ. ಜನ ಹೇಮಾವತಿ ನೀರು ತರುತ್ತಾರೆ ಎಂದು ಬಸವರಾಜು ಅವರಿಗೆ ವೋಟ್ ಹಾಕಿದ್ದಾರೆ. ಈಗ ಅವರು ಜಿಲ್ಲೆಗೆ ನೀರು ತಂದು ತೋರಿಸಲಿ ಎಂದು ವಾಗ್ದಾಳಿ ನಡೆಸಿದರು.

    ಈ ಬಾರಿಯ ಚುನಾವಣೆಯಲ್ಲಿ ಹೇಮಾವತಿ ನೀರಿನ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಿಜೆಪಿ ಬಳಸಿತ್ತು. ಆದರೆ ಈಗ ಮತ್ತೆ ಅದೇ ಹೇಮಾವತಿ ವಿಚಾರವನ್ನು ಜೆಡಿಎಸ್ ಬಳಸಿಕೊಂದು ಬಿಜೆಪಿ ನಾಯಕರು ಮೇಲೆ ಕಿಡಿಕಾರುತ್ತಿದ್ದಾರೆ. ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು ಫೇಸ್‍ಬುಕ್‍ನಲ್ಲಿ ಹೇಮಾವತಿ ನೀರನ್ನು ಹಾಸನದಿಂದ ತುಮಕೂರಿಗೆ ಬಿಡಬೇಡಿ. ಅಲ್ಲಿನ ಜನ ಬಸವರಾಜು ಅವರನ್ನ ಗೆಲ್ಲಿಸಿದ್ದಾರಲ್ಲ. ತಾಖತ್ ಇದ್ದರೇ ಒಂದು ಹನಿ ನೀರು ಹಾಸನದಿಂದ ತುಮಕೂರಿಗೆ ಬಿಡಿಸಲಿ ನೋಡೋಣ ಎಂದು ಪೋಸ್ಟ್ ಗಳನ್ನು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ದೇವೇಗೌಡರ ಕುಟುಂಬ ತುಮಕೂರು ಜಿಲ್ಲೆಯ ಮೇಲೆ ಸೋಲಿನ ಸೇಡು ತೀರಿಸಿಕೊಳ್ಳಲಿದೆಯಾ? ಹೇಮಾವತಿ ನೀರಿಗೆ ಮತ್ತೆ ಬ್ರೇಕ್ ಹಾಕಿ ಸೇಡು ತೀರಿಸಿಕೊಳ್ಳುತ್ತಿದ್ದಾರಾ ದೊಡ್ಡಗೌಡರು? ಎಂಬ ಪ್ರಶ್ನೆ ಈಗ ಹುಟ್ಟುಕೊಂಡಿದೆ. ತುಮಕೂರಿನಲ್ಲಿ ದೇವೇಗೌಡರು ಬಿಜೆಪಿ ವಿರುದ್ಧ ಸೋಲನ್ನು ಕಂಡ ಬಳಿಕ ಜೆಡಿಎಸ್ ನಾಯಕರ ಹೇಳಿಕೆಗಳು ಈ ಪ್ರಶ್ನೆಯನ್ನು ಹುಟ್ಟುಹಾಕಿದೆ.

    ಹೇಮಾವತಿ ನೀರಿನ ವಿಚಾರದಲ್ಲಿ ಜೆಡಿಎಸ್ ನಾಯಕರು ಮತ್ತೆ ಟ್ರಬಲ್ ಸೃಷ್ಟಿಯಾಗುವ ಸುಳಿವು ನೀಡುತ್ತಿದ್ದು, ಮತ್ತೆ ತುಮಕೂರು ಜಿಲ್ಲೆಗೆ ಗೌಡರ ಕುಟುಂಬದಿಂದ ಕಂಟಕ ಕಾದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.