Tag: ದೇವೇಂದ್ರ ಫಡ್ನವಿಸ್

  • ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

    ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಏಕನಾಥ್ ಶಿಂಧೆ ಡಿಸಿಎಂ ಆಗ್ತಾರೆ: ಮೂಲಗಳು

    ಮುಂಬೈ: ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಂದಿನ ಸಿಎಂ ಆಗಲಿದ್ದಾರೆ. ಮೈತ್ರಿಕೂಟ ಸರ್ಕಾರ ಉರುಳಲು ಕಾರಣರಾದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ವಿಶ್ವಾಸಮತಯಾಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಕೆಲವೇ ಗಂಟೆಗಳಲ್ಲಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಸಿಎಂ ಎನ್ನುವ ಮಾತು ಕೇಳಿಬರುತ್ತಿದೆ.

    ಠಾಕ್ರೆ ರಾಜೀನಾಮೆ ಬೆನ್ನಲ್ಲೇ ರಾಜ್ಯಪಾಲರ ಭೇಟಿಗೆ ದೇವೇಂದ್ರ ಫಡ್ನವಿಸ್ ಸಮಯ ಕೇಳಿದ್ದಾರೆ. ಇಂದು ಸಂಜೆ 4:30 ಕ್ಕೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ಫಡ್ನವಿಸ್ ಅವರು ಏಕನಾಥ್ ಶಿಂಧೆ ಜೊತೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ:‌ ಜಿಎಸ್‌ಟಿ ಪರಿಹಾರದ ಅವಧಿ ವಿಸ್ತರಣೆ: ಆಗಸ್ಟ್ ತಿಂಗಳಲ್ಲಿ ಅಂತಿಮ ನಿರ್ಣಯ – ಬೊಮ್ಮಾಯಿ

    ರೆಬೆಲ್ ಶಾಸಕರ ಸಹಿ ಪತ್ರದೊಂದಿಗೆ ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ : ಬಿಜೆಪಿ ವ್ಯಂಗ್ಯ

    Live Tv

  • ಸರ್ಕಾರ ರಚನೆ ಅನುಮತಿ ಕೇಳಲಿದ್ದಾರೆ ಫಡ್ನವಿಸ್‌ – ಶಿಂಧೆ ಟೀಂ ಸೇರಿದ ಮತ್ತೊಬ್ಬ ಶಾಸಕ

    ಸರ್ಕಾರ ರಚನೆ ಅನುಮತಿ ಕೇಳಲಿದ್ದಾರೆ ಫಡ್ನವಿಸ್‌ – ಶಿಂಧೆ ಟೀಂ ಸೇರಿದ ಮತ್ತೊಬ್ಬ ಶಾಸಕ

    ಮುಂಬೈ: ಮಹಾ ವಿಕಾಸ ಅಘಾಡಿ ಸರ್ಕಾರಿ ಪತನಗೊಳ್ಳುವುದು ಅಧಿಕೃತವಾಗುತ್ತಿದ್ದಂತೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅನುಮತಿ ಕೇಳುವ ಸಾಧ್ಯತೆಯಿದೆ.

    ಇಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ತಮ್ಮ ಸರ್ಕಾರಕ್ಕೆ ಬೆಂಬಲ ನೀಡುವ ಶಾಸಕರ ಪಟ್ಟಿಯನ್ನು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಬುಧವಾರ ಬಿಜೆಪಿ ನಾಯಕ, ಕೇಂದ್ರ ಸಚಿವ ರಾವ್‌ಸಹೇಬ್‌ ಪಾಟೀಲ್‌ ಶಿವಸೇನೆ ಆಂತರಿಕ ಬಿಕ್ಕಟ್ಟಿನಿಂದ ಆಜಕೀಯ ಅಸ್ಥಿರತೆ ಸೃಷ್ಟಿಯಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಮುಂದಾಗುವುದಿಲ್ಲ. ಅಷ್ಟೇ ಅಲ್ಲದೇ ಪಕ್ಷ ಶಿವಸೇನೆ ಶಾಸಕರ ಜೊತೆ ಸಂಪರ್ಕದಲ್ಲಿ ಇಲ್ಲ ಎಂದು ತಿಳಿಸಿದ್ದರು.

    ಶಿವಸೇನೆ ಶಾಸಕರು ಒಬ್ಬೊಬ್ಬರಾಗಿ ಏಕನಾಥ್ ಶಿಂಧೆ ಟೀಂನ್ನು ಸೇರಿಕೊಳ್ಳುತ್ತಿದ್ದು ಈಗ ಶಾಸಕ ಮಂಗೇಶ್ ಶಿಂಧೆ ತೆರಳಿದ್ದಾರೆ. ಇದನ್ನೂ ಓದಿ: ಶಿವಸೇನೆಯ ಉಳಿವಿಗಾಗಿ ಮೈತ್ರಿಯಿಂದ ಹೊರಬರುವುದು ಅನಿವಾರ್ಯ: ಏಕನಾಥ್ ಶಿಂಧೆ

    ಇತ್ತ ಸಿಎಂ ಉದ್ಧವ್ ಠಾಕ್ರೆ ಸಿಎಂ ಅಧಿಕೃತ ನಿವಾಸ ವರ್ಷಾವನ್ನು ತೊರೆದಿದ್ದಾರೆ. ಲಗೇಜ್ ಸಮೇತ ಕುಟುಂಬದ ಮನೆ ಮಾತೋಶ್ರೀಗೆ ಶಿಫ್ಟ್ ಆಗಿದ್ದು, ಉದ್ಧವ್ ಠಾಕ್ರೆ ನಡೆ ತೀವ್ರ ಕುತೂಹಲ ಕೆರಳಿಸಿದೆ. ಇದೇ ವೇಳೆ ಬೆಂಬಲಿಗರು ಅಡ್ಡಗಟ್ಟಿ ರಾಜೀನಾಮೆ ನೀಡದಂತೆ ಕೂಗಿದ್ದಾರೆ.


    ಅಘಾಡಿ ಸರ್ಕಾರ ಉಳಿಸಲು ಶರದ್ ಪವಾರ್ ಅಖಾಡಕ್ಕಿಳಿದಿದ್ದಾರೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನೇ ಮುಖ್ಯಮಂತ್ರಿ ಮಾಡಿ ಅಂತ ಉದ್ಧವ್ ಠಾಕ್ರೆಗೆ ಸಲಹೆ ನೀಡಿದ್ದಾರೆ. ಆದರೆ ಏಕನಾಥ್ ಶಿಂಧೆ ಯಾವುದಕ್ಕೂ ಒಪ್ಪುತ್ತಿಲ್ಲ. ಮೈತ್ರಿಕೂಟವೇ ಬೇಡ ಎನ್ನುತ್ತಿದ್ದಾರೆ.

    ಮಹಾಮೈತ್ರಿಯಲ್ಲಿನ ಭಿನ್ನಾಭಿಪ್ರಾಯ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಅತೃಪ್ತ ಶಾಸಕರನ್ನು ಸಂರ್ಪಕಿಸಿದೆ. 2/3 ಭಾಗದಷ್ಟು ಶಾಸಕರು ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಿದೆ. ಹೀಗಾಗಿ ಇವತ್ತು ಮಹಾರಾಷ್ಟ್ರದಲ್ಲಿ ನಡೆಯುವ ಬೆಳವಣಿಗೆ ನಿರ್ಣಾಯಕವಾಗಿದ್ದು ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

    Live Tv

  • ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ

    ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ

    ಮುಂಬೈ: ರಾಜ್ಯಸಭಾ ಮತ್ತು ಪರಿಷತತ್‌ ಚುನಾವಣೆಯಲ್ಲಿ ಮಹಾ ವಿಕಾಸ್‌ ಅಘಾಡಿ ಸರ್ಕಾರಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಈಗ ಈ ಸರ್ಕಾರವೇ ಪತನವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಶಿವಸೇನೆಯ ಪ್ರಭಾವಿ ನಾಯಕ, ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿರುವ ಏಕ್‌ನಾಥ್‌ ಶಿಂಧೆ ಜೊತೆ ಓರ್ವ ಪಕ್ಷೇತರ ಸೇರಿದಂತೆ 22 ಶಾಸಕರು ಗುಜರಾತಿನ ಸೂರತ್‌ ಹೋಟೆಲಿಗೆ ಶಿಫ್ಟ್‌ ಆಗಿದ್ದರಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಪರಿಷತ್‌ ಚುನಾವಣೆಯಲ್ಲಿ ಬೆಂಬಲ ಇಲ್ಲದೇ ಇದ್ದರೂ ಬಿಜೆಪಿ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು. ಈ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈಗ ಬಿಜೆಪಿ ನಾಯಕರು ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

    ಮೂಲಗಳ ಪ್ರಕಾರ ಬಿಜೆಪಿ ಏಕ್‌ನಾಥ್‌ ಶಿಂಧೆ ಅವರಿಗೆ ಉಪ ಮುಖ್ಯಮಂತ್ರಿಯ ಆಫರ್‌ ನೀಡಿದೆ ಎನ್ನಲಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಶಿಂಧೆ ಅವರು ಅಸಮಾಧಾನಗೊಂಡಿದ್ದರು. ಪಕ್ಷ ತನ್ನನ್ನು ಕಡೆಗಣಿಸುತ್ತಿರುವ ವಿಚಾರ ತಿಳಿದು ಈಗ ಬಿಜೆಪಿಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ

    ಇಲ್ಲಿಯವರೆಗೆ ಏಕ್‌ನಾಥ್‌ ಶಿಂಧೆ ತನ್ನ ಮುಂದಿನ ನಡೆ ಏನು ಎಂದು ತಿಳಿಸಿಲ್ಲ. ಇತ್ತೀಚಿನ ಮಾಹಿತಿ ಪ್ರಕಾರ ಇನ್ನೂ 9 ಶಾಸಕರು ಸೂರತ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗುತ್ತಿದೆ.

    Live Tv

  • ED ನಿಯಂತ್ರಣವನ್ನ ನಮಗೆ ಕೊಟ್ರೆ ಫಡ್ನವಿಸ್ ಕೂಡ ನಮ್ಮ ಸೇನೆಗೆ ಮತ ಹಾಕ್ತಾರೆ: ಸಂಜಯ್

    ED ನಿಯಂತ್ರಣವನ್ನ ನಮಗೆ ಕೊಟ್ರೆ ಫಡ್ನವಿಸ್ ಕೂಡ ನಮ್ಮ ಸೇನೆಗೆ ಮತ ಹಾಕ್ತಾರೆ: ಸಂಜಯ್

    ಮುಂಬೈ: ಜಾರಿ ನಿರ್ದೇಶನಾಲಯದ(ಇಡಿ) ನಿಯಂತ್ರಣವನ್ನು ನಮ್ಮ ಪಕ್ಷಕ್ಕೆ ನೀಡಿದ್ರೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೂಡ ನಮಗೆ ಮತ ಹಾಕ್ತಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಭಾನುವಾರ ಕಿಡಿಕಾರಿದರು.

    ಶುಕ್ರವಾರ ಮಹಾರಾಷ್ಟ್ರದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ಸಂಜಯ್ ಪವಾರ್ ಸೋತರು. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ರಾಜ್ಯದಲ್ಲಿ ಆಡಳಿತಾರೂಢ ಸೇನೆ ಮತ್ತು ಬಿಜೆಪಿ ನಡುವಿನ ಪ್ರತಿಷ್ಠೆಯ ಹೋರಾಟವಾಗಿದೆ ಎಂದು ಮಾತನ್ನು ಪ್ರಾರಂಭ ಮಾಡಿದರು. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ

    Power has gotten to their heads: Devendra Fadnavis to Maha Vikas Aghadi - India News

    ಇಡಿ ನಿಯಂತ್ರಣವನ್ನು ನಮಗೆ 2 ದಿನ ಕೊಟ್ರೆ ಫಡ್ನವಿಸ್ ನಮಗೆ ವೋಟ್ ಮಾಡುತ್ತಿದ್ರು. ಕೆಲವು ಕುದುರೆಗಳು ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದವು. ನಮ್ಮ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಭರವಸೆ ಕೊಟ್ಟಿದ್ರೂ ಬೇರೆ ಪಕ್ಷಕ್ಕೆ ಮತ ಹಾಕಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ನಾವು ನಮ್ಮ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಿದ್ದೇವೆ. ನಾವು ಏನು ಹೇಳುತ್ತಿದ್ದೇವೆ ಎಂಬುದು ಅವರಿಗೂ, ಬಿಜೆಪಿಗೂ ತಿಳಿದಿದೆ. ಈ ಬೆಳವಣಿಗೆಯನ್ನು ನಾವು ಗಮನಿಸಿದ್ದೇವೆ. ಸಂಜಯ್ ಪವಾರ್ ಅವರ ಸೋಲಿನ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ 

    ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಫಡ್ನವಿಸ್ ಅವರು ಬಿಜೆಪಿಯ ಆರನೇ ಸ್ಥಾನದ ಗೆಲುವಿಗೆ ಕಾರಣರಾಗಿದ್ದಾರೆ. ಶಿವಸೇನೆಯ ಸಂಜಯ್ ಪವಾರ್ ಅವರನ್ನು ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಧನಂಜಯ್ ಮಹಾದಿಕ್ ಗೆದ್ದಿದ್ರು.

  • ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ

    ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ

    ಮುಂಬೈ: ಉದ್ಧವ್ ಠಾಕ್ರೆ ಅವರು ದೇವೇಂದ್ರ ಫಡ್ನವಿಸ್ ಅವರಿಂದ ಆಡಳಿತ ನಡೆಸುವುದನ್ನು ಕಲಿಯಬೇಕು ಎಂದು ಅಮರಾವತಿ ಸಂಸದೆ ನವನೀತ್ ರಾಣಾ ಹೇಳಿದ್ದಾರೆ.

    ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ದಿನದ ಬಳಿಕ, ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಅಧಿಕಾರ ಪಡೆಯುವುದಕ್ಕೆ ಅವರ ತಂದೆ ಬಾಲ್ ಠಾಕ್ರೆ ಕಾರಣ. ಉದ್ಧವ್ ಠಾಕ್ರೆ ಅವರು ದೇವೇಂದ್ರ ಫಡ್ನವಿಸ್ ಅವರಿಂದ ಆಡಳಿತವನ್ನು ನಡೆಸುವುದನ್ನು ಕಲಿಯಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ : ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ

    ಉದ್ಧವ್ ಠಾಕ್ರೆ ಅವರ ಮನೆಯ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಕಳೆದ ತಿಂಗಳು ಪತಿ ಮತ್ತು ಶಾಸಕ ರವಿ ರಾಣಾ ಅವರೊಂದಿಗೆ ನವನೀತ್ ರಾಣಾ ಅವರನ್ನು ಬಂಧಿಸಲಾಗಿತ್ತು. ಈ ವೇಳೆ ಜೈಲಿನಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯ ವಿಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

    ನಾನು ಇಂದು ದೆಹಲಿಗೆ ಹೋಗುತ್ತೇನೆ. ಲಾಕ್-ಅಪ್‍ನಿಂದ ಜೈಲಿನವರೆಗೆ ನನಗೆ ಏನು ಮಾಡಿದರು, ನನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಗೆ ನಿರ್ಲಕ್ಷ್ಯ ವಹಿಸಿದರು. ಮಹಾರಾಷ್ಟ್ರದಲ್ಲಿ ಜೈಲು ಶಿಕ್ಷೆಗೆ ಒಳಗಾದ ಮೊದಲ ಮಹಿಳಾ ಪ್ರತಿನಿಧಿ ನಾನಾಗಿದ್ದು, ನನಗೆ ಮತ್ತು ನನ್ನ ಪತಿಗೆ ಹೇಗೆ ಅನ್ಯಾಯವಾಯಿತು ಎಂಬ ಎಲ್ಲಾ ವಿವರಗಳನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಮದ್ಯ ಕುಡಿಸಿ ರೇಪ್ – ರಾಜಸ್ಥಾನ ಸಚಿವರ ಪುತ್ರನ ವಿರುದ್ಧ FIR

    ಇದೇ ವೇಳೆ, ಅಧಿಕಾರಕ್ಕಾಗಿ ಬಿಜೆಪಿಯವರ ಬೆನ್ನಿಗೆ ಚೂರಿ ಹಾಕುವ ಶಿವಸೇನೆ ಮುಖ್ಯಸ್ಥರು ಇತರರಿಗೆ ಉಪದೇಶ ನೀಡಬಾರದು ಎಂದರು. ನಂತರ ಮುಂಬರುವ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಶಿವಸೇನೆಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಉದ್ಧವ್ ಠಾಕ್ರೆ ಅವರಿಗೆ ಸವಾಲೊಡ್ಡಿದರು.

  • ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರಿದ್ದಾಗ ಶಿವಸೇನೆ ಹುಟ್ಟಿರಲಿಲ್ಲ: ದೇವೇಂದ್ರ ಫಡ್ನವಿಸ್

    ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರಿದ್ದಾಗ ಶಿವಸೇನೆ ಹುಟ್ಟಿರಲಿಲ್ಲ: ದೇವೇಂದ್ರ ಫಡ್ನವಿಸ್

    ಮುಂಬೈ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರಿದ್ದಾಗ ಶಿವಸೇನೆ ಹುಟ್ಟಿರಲಿಲ್ಲ. 1984ರ ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿ ಬಿಜೆಪಿ ಟಿಕೆಟ್‍ನಲ್ಲಿ ಸ್ಪರ್ಧಿಸಿದ್ದರು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ನಗರ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಸೇನೆ ನಾಲ್ಕನೇ ಸ್ಥಾನ ಗಳಿಸಿದೆ. ಈ ಹತಾಶೆಯನ್ನು ಬಿಜೆಪಿ ವಿರುದ್ಧ ಕಿಡಿಕಾರುವ ಮೂಲಕ ಉದ್ಧವ್ ಠಾಕ್ರೆ ಹೊರಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ರಾಮ ಜನ್ಮಭೂಮಿ ಅಭಿಯಾನ ನಡೆದಾಗ ನೀವು ಎಲ್ಲಿದ್ದೀರಿ? ಆ ಸಂದರ್ಭದಲ್ಲಿ ನಮ್ಮ ಮೇಲೆ ಗುಂಡುಗಳು ಮತ್ತು ಲಾಠಿ ಪ್ರಹಾರ ನಡೆದಿತ್ತು. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

    ಬಿಜೆಪಿ ವಿರುದ್ಧ ಕಿಡಿಕಾರಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಶಿವಸೇನೆಯು ಕಳೆದ 25 ವರ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ವ್ಯರ್ಥವಾಯಿತು. ಬಿಜೆಪಿ ಹಿಂದುತ್ವವನ್ನು ಕೇವಲ ರಾಜಕೀಯ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ

    2019ರ ಮಹಾರಾಷ್ಟ್ರ ಚುನಾವಣೆಯ ನಂತರ ಅಧಿಕಾರ ಹಂಚಿಕೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಂತರದಲ್ಲಿ ಎನ್‍ಸಿಪಿ ಮತ್ತು ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆ ಸರ್ಕಾರವನ್ನು ರಚಿಸಿತ್ತು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

  • ನವಾಬ್‌ ಮಲೀಕ್‌ಗೆ ಭೂಗತ ಲೋಕದೊಂದಿಗೆ ನಂಟಿದೆ: ದೇವೇಂದ್ರ ಫಡ್ನವಿಸ್‌

    ನವಾಬ್‌ ಮಲೀಕ್‌ಗೆ ಭೂಗತ ಲೋಕದೊಂದಿಗೆ ನಂಟಿದೆ: ದೇವೇಂದ್ರ ಫಡ್ನವಿಸ್‌

    ಮುಂಬೈ: ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ನವಾಬ್‌ ಮಲಿಕ್‌ಗೆ ಭೂಗತ ಲೋಕದೊಂದಿಗೆ ನಂಟಿತ್ತು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಂಭೀರ ಆರೋಪ ಮಾಡಿದ್ದಾರೆ.

    ಜೈಲಿನಲ್ಲಿರುವ ಡ್ರಗ್‌ ಪೆಡ್ಲರ್‌ನಿಂದ ಹಣ ಪಡೆದು ವಿಡಿಯೊ ಮಾಡಿಸಿದ್ದರು ಎಂದು ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪವನ್ನು ಫಡ್ನವಿಸ್ ತಳ್ಳಿ ಹಾಕಿದ್ದಾರೆ. ಅಲ್ಲದೇ ಎನ್‌ಸಿಪಿ ನಾಯಕನ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಭೂಗತ ಲೋಕದೊಂದಿಗೆ ಸಚಿವ ಮಲಿಕ್‌ ನಂಟು ಹೊಂದಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?

    ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವವರು ನನ್ನ ಬಗ್ಗೆ ಮಾತನಾಡುವುದಿಲ್ಲ. ಪಾತಕ ಲೋಕದೊಂದಿಗೆ ನವಾಬ್‌ ಮಲಿಕ್‌ ನಂಟು ಹೊಂದಿರುವ ಬಗ್ಗೆ ಶೀಘ್ರವೇ ಸಾಕ್ಷ್ಯಾಧಾರ ಒದಗಿಸುತ್ತೇನೆ ಎಂದು ಫಡ್ನವಿಸ್‌‌ ಹೇಳಿದ್ದಾರೆ. ಇದೇ ವೇಳೆ ನವಾಬ್‌ ಮಲಿಕ್‌ರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಪ್ರಶ್ನಿಸಿದ್ದಾರೆ.

    ARYAN

    ಜಯದೀಪ್‌ ರಾಣಾ ಅವರು ಈಗಾಗಲೇ ವಿಡಿಯೊ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅದು ನಾಲ್ಕು ವರ್ಷ ಹಳೆಯದಾಗಿದ್ದು, ಈಗ ಪ್ರಸಾರವಾಗುತ್ತಿದೆ ಎಂದು ಫಡ್ನಿವಿಸ್‌ ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಯ ಮೇಲೆ ಹಸು ದಾಳಿ

    ಮಲಿಕ್‌ ಅವರು ತಮ್ಮ ಅಳಿನ ವಿರುದ್ಧದ ಚಾರ್ಜ್‌ ಶೀಟ್‌ ತೆಗೆಸಿಹಾಕಲು ಎನ್‌ಸಿಬಿ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಅವರು ದೀಪಾವಳಿಯ ಮೊದಲು ಸಣ್ಣ ಪಟಾಕಿ ಹಚ್ಚಿದ್ದಾರೆ. ದೀಪಾವಳಿ ನಂತರ ನಾನು ದೊಡ್ಡ ಪಟಾಕಿಯನ್ನೇ ಹಚ್ಚುತ್ತೇನೆ ಎಂದು ಎಚ್ಚರಿಸಿದ್ದಾರೆ.

    ರಾಜ್ಯದಲ್ಲಿ ಡ್ರಗ್ಸ್‌ ದಂಧೆ ವಿಸ್ತರಿಸಲು ಬಿಜೆಪಿ ಸಹಕರಿಸಿದೆ ಎಂದು ನವಾಬ್‌ ಮಲೀಕ್‌ ಈಚೆಗೆ ಆರೋಪಿಸಿದ್ದರು. ಖ್ಯಾತ ನಟ ಶಾರೂಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮತ್ತು ಇತರರ ವಿರುದ್ಧ ಇರುವ ಡ್ರಗ್‌ ಆರೋಪಗಳ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಅವರ ಧರ್ಮದ ಬಗ್ಗೆಯೂ ಪ್ರಶ್ನಿಸಿದ್ದರು.

  • ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲು ಖರೀದಿಸಿ: ಕೆಎಂಎಫ್‍ಗೆ ಫಡ್ನವಿಸ್ ಮನವಿ

    ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲು ಖರೀದಿಸಿ: ಕೆಎಂಎಫ್‍ಗೆ ಫಡ್ನವಿಸ್ ಮನವಿ

    ಬೆಂಗಳೂರು: ಕರ್ನಾಟಕದ ಮಾದರಿಯಂತೆ ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ, ರೈತರ ಆರ್ಥಿಕಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಕೆಎಂಎಫ್‍ಗೆ ಮನವಿ ಮಾಡಿಕೊಂಡಿದ್ದಾರೆ.

    ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆರಂಭಗೊಂಡ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ನಾಗ್ಪುರದಲ್ಲಿ ಚಾಲನೆ ನೀಡಿ ಮಾತನಾಡಿದ ಫಡ್ನವಿಸ್ ಅವರು, ಕರ್ನಾಟಕದಲ್ಲಿ ಕೆಎಂಎಫ್ ಸಂಸ್ಥೆಯು ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಲಾಗುತ್ತಿದೆ. ನಮ್ಮಲ್ಲಿಯೂ ಸಹ ಇದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು ಕೆಲಸ ಮಾಡಿದರೆ ರೈತ ಸಮೂಹಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.

    ವಿದರ್ಭ ಭಾಗದಿಂದ ಕೆಎಂಎಫ್‍ನ ನಂದಿನಿ ಉತ್ಪನ್ನಗಳ ಮಾರಾಟವನ್ನು ಆರಂಭಿಸಿರುವುದು ಖುಷಿಯಾಗಿದೆ. ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಿರುವುದನ್ನು ನಾನು ಕೇಳಿದ್ದೇನೆ. ಗ್ರಾಹಕರ ನೆಚ್ಚಿನ ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಮನೆ ಮಾತಾಗಿರುವುದನ್ನು ಗಮನಿಸಿದ್ದೇನೆ. ಸಹಕಾರಿ ತತ್ವವನ್ನು ಪರಿಪಾಲನೆ ಮಾಡಿಕೊಂಡು ಬರುತ್ತಿರುವ ಕೆಎಂಎಫ್ ನಂದಿನಿ ಉತ್ಪನ್ನಗಳು ಮಹಾರಾಷ್ಟ್ರದ ಪ್ರತಿ ಮನೆ ಮನೆಗೆ ತಲುಪಲಿ ಎಂದು ಫಡ್ನವಿಸ್ ಆಶಿಸಿದರು. ಇದನ್ನೂ ಓದಿ: ಬೊಮ್ಮಾಯಿಗೆ ಸಹಕಾರ ಇರುತ್ತೆ – ಕೇಂದ್ರ ಸಮಸ್ಯೆ ಮಾಡದೇ ಇದ್ದರೆ ರಾಜ್ಯಸಭೆಯಲ್ಲೂ ಬೆಂಬಲ: ಎಚ್‍ಡಿಡಿ

    ಸಹಕಾರಿ ಕ್ಷೇತ್ರವು ವ್ಯವಹಾರಿಕವಾಗಿ ಅಭಿವೃದ್ದಿ ಹೊಂದಲು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೇಂದ್ರದಲ್ಲಿ ಸಹಕಾರಿ ಸಚಿವಾಲಯವನ್ನು ಆರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೆಎಂಎಫ್ ನಂತಹ ಸಂಸ್ಥೆಗಳು ಕರ್ತವ್ಯ ನಿರ್ವಹಿಸಿ ಸಹಕಾರಿ ರಂಗದ ಬೆಳವಣಿಗೆಗೆ ಶ್ರಮಿಸಲಿ. ನಂದಿನಿ ಹಾಲು ಮತ್ತು ಇತರೇ ಉತ್ಪನ್ನಗಳ ಮಾರುಕಟ್ಟೆ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು. ದೇಶದ ಪ್ರತಿಷ್ಠಿತ ಅಮೂಲ್ ನಂತರ ಕೆಎಂಎಫ್ ಎರಡನೇ ಸ್ಥಾನ ಗಿಟ್ಟಿಸಿರುವುದು ಸಹಕಾರಿ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ನಾಗ್ಪುರ್ ಪ್ರಾಂತ್ಯದಿಂದ ಪ್ರಾರಂಭಗೊಂಡಿರುವ ಕೆಎಂಎಫ್ ಉನ್ನತಿ ಮತ್ತು ಪ್ರಗತಿಗೆ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.

    ಕರ್ನಾಟಕ ಹಾಲು ಮಹಾಮಂಡಳಿಯನ್ನು ರಾಜ್ಯವಲ್ಲದೇ ನೆರೆಯ ರಾಜ್ಯಗಳಲ್ಲೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸಲು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕೆಎಂಎಫ್ ಬೆಳವಣಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಬಾಲಚಂದ್ರ ಅವರ ಕಾರ್ಯವನ್ನು ಮನಸಾರೆ ಕೊಂಡಾಡಿದ ಫಡ್ನಾವಿಸ್, ಅಧ್ಯಕ್ಷರ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಮುಕ್ತ ಕಂಠದಿಂದ ಫಡ್ನಸವಿಸ್ ಅಭಿನಂದಿಸಿದರು.

    ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಕೆಎಂಎಫ್ ರಾಷ್ಟ್ರದ ಎರಡನೇ ಅತೀ ದೊಡ್ಡ ಸಹಕಾರಿ ಹಾಲು ಮಹಾಮಂಡಳಿಯಾಗಿದ್ದು, ಪ್ರತಿನಿತ್ಯ ರಾಜ್ಯದ ಹೈನುಗಾರ ರೈತರಿಂದ 90 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಿ ನಿತ್ಯ ಅಂದಾಜು ರೂ. 24 ಕೋಟಿ ಹಣ ರೈತರಿಗೆ ಪಾವತಿಸಲಾಗುತ್ತಿದೆ. ರಾಜ್ಯದ ರೈತರಿಂದ ಶೇಖರಿಸುವ ಹಾಲನ್ನು ಸಂಸ್ಕರಿಸಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಕ್ರಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಕಾಲಕ್ಕೆ ಒದಗಿಸುತ್ತಿದೆ ಎಂದರು.

    ಕೆಎಂಎಫ್ ನಿತ್ಯ 50 ಲಕ್ಷ ಲೀಟರ್ ಹಾಲು ಸ್ಯಾಚೆ, ಯುಹೆಚ್‍ಟಿ, ಪ್ಲೆಕ್ಸಿ ಪೊಟ್ಟಣಗಳ ರೂಪದಲ್ಲಿ ಮಾರಾಟ ಮಾಡುವುದರ ಜೊತೆಗೆ ರಾಷ್ಟ್ರದ ಇತರೇ ಪ್ರಮುಖ ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೂ ಸಹ ಗುಣಮಟ್ಟದ ಹಾಲು ದೊರಕುವಂತೆ ಮಾಡಲಾಗುತ್ತಿದೆ. ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ವಿಜಯವಾಡ, ಸೊಲ್ಲಾಪೂರ ಮತ್ತು ಗೋವಾ ಪ್ರದೇಶಗಳಲ್ಲಿ ಪ್ರತಿ ದಿನ 3 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಅಲ್ಲಿನ ಗ್ರಾಹಕರಿಂದ ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರಾಂಡ್ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

    ನೆರೆಯ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಕೆಎಂಎಫ್‍ನಿಂದ ನಂದಿನಿ ಬ್ರಾಂಡ್‍ನ ಉತ್ಪನ್ನಗಳನ್ನು ಆರಂಭಿಸಿದ್ದೇವೆ. ಇದಕ್ಕೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಆಗಮಿಸಿ ಚಾಲನೆ ನೀಡಿರುವುದು ನಮಗೆ ಆನೆ ಬಲ ಬಂದಂತಾಗಿದೆ. ನಮ್ಮ ಕರ್ನಾಟಕದಲ್ಲಿ ಪ್ರಾರಂಭಿಸಿರುವ ಕ್ಷೀರಭಾಗ್ಯ ಯೋಜನೆಯನ್ನು ಮಹಾರಾಷ್ಟ್ರದ ನಾಗ್ಪುರ್ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪೌಷ್ಠಿಕತೆ ದೃಷ್ಟಿಯಿಂದ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸುವಂತೆ ದೇವೇಂದ್ರ ಫಡ್ನವಿಸ್ ಅವರಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.

  • ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಒಂದು ವರ್ಷ ಅನರ್ಹ

    ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಒಂದು ವರ್ಷ ಅನರ್ಹ

    ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಅನುಚಿತ ವರ್ತನೆ ತೋರಿದ 12 ಬಿಜೆಪಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ಭಾಸ್ಕರ್ ಜಾದವ್ ಒಂದು ವರ್ಷ ಅನರ್ಹಗೊಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಿತ್ತು. ಈ ವೇಳೆ ವಿಧಾನಸಭೆಯಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಸಂದರ್ಭ ಮಧ್ಯಪ್ರವೇಶಿಸಿದ್ದಕ್ಕೆ ಬಿಜೆಪಿಯ ಶಾಸಕರು ತನ್ನನ್ನು ನಿಂದಿಸಿದ್ದಾರೆ ಕಾರಣ ನೀಡಿದ 12 ಮಂದಿಂ ಶಾಸಕರನ್ನು 1 ವರ್ಷ ಅನರ್ಹಗೊಳಿಸಿದ್ದಾರೆ.

    ಸ್ಪೀಕರ್ ಅವರ ನಿರ್ಧಾರದ ಬಳಿಕ ಈ ಆರೋಪವನ್ನು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅಲ್ಲಗಳೆದಿದ್ದಾರೆ. ಇದು ಸುಳ್ಳು ಆರೋಪ, ಕಟ್ಟು ಕಥೆಯಾಗಿದೆ. ನಮ್ಮ ಪಕ್ಷದ ಶಾಸಕರು ಸರ್ಕಾರದ ಆಡಳಿತದಲ್ಲಿ ಸಮಸ್ಯೆಯ ಬಗ್ಗೆ ಹೇಳುತ್ತಿದ್ದಾಗ ಸ್ಪೀಕರ್ ನಮಗೆ ಸಮಯವಕಾಶ ನೀಡದೆ ಈ ರೀತಿ ಆರೋಪ ಹೊರಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಐಟಿ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಇನ್ನೂ ಕೇಸ್ ದಾಖಲಿಸುತ್ತಿರುವುದು ಆಘಾತಕಾರಿ – ಸುಪ್ರೀಂಕೋರ್ಟ್

    ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಭಾಸ್ಕರ್ ಜಾದವ್, ಬಿಜೆಪಿಯ ಕೆಲ ಶಾಸಕರು ನನ್ನ ಕ್ಯಾಬಿನ್‍ಗೆ ಬಂದು ದೇವೇಂದ್ರ ಫಡ್ನವೀಸ್ ಮತ್ತು ಚಂದ್ರಕಾಂತ್ ಪಾಟೀಲ್ ಅವರ ಮುಂದೆ ನನ್ನನ್ನು ನಿಂದಿಸಿದ್ದಾರೆ ಎಂದು ದೂರಿದ್ದಾರೆ.

    ಶಾಸಕರಾದ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗದ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ, ಕೀರ್ತಿಕುಮಾರ್ ಬಾಂಗ್ಡಿಯಾ ಅನರ್ಹಗೊಂಡಿದ್ದಾರೆ.

  • 5 ತಿಂಗಳ ಕೂಸಿನ ಪ್ರಾಣ ಉಳಿಸಲು 6 ಕೋಟಿ ತೆರಿಗೆ ಮನ್ನಾ ಮಾಡಿದ ಮೋದಿ ಸರ್ಕಾರ

    5 ತಿಂಗಳ ಕೂಸಿನ ಪ್ರಾಣ ಉಳಿಸಲು 6 ಕೋಟಿ ತೆರಿಗೆ ಮನ್ನಾ ಮಾಡಿದ ಮೋದಿ ಸರ್ಕಾರ

    ನವದೆಹಲಿ: ಐದು ತಿಂಗಳ ಕೂಸಿನ ಜೀವ ಉಳಿಸಲು ಕೇಂದ್ರ ಸರ್ಕಾರ ಬರೋಬ್ಬರಿ 6 ಕೋಟಿ ರೂ.ಗಳ ಆಮದು ಸುಂಕ ಹಾಗೂ ಜಿಎಸ್‍ಟಿಯನ್ನು ಮನ್ನಾ ಮಾಡಿದೆ. ಈ ಮೂಲಕ ಮಾನವೀಯತೆ ಮೆರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ವಿಚಾರವನ್ನು ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 5 ತಿಂಗಳು ಕೂಸು ಟೀರಾ ಕಾಮತ್ ವಿಶ್ವದಲ್ಲಿ ಅಪರೂಪದಲ್ಲಿ ಅಪರೂಪವಾಗಿರುವ ಬೆನ್ನುಮೂಳೆಯ ಸ್ನಾಯು ಸಮಸ್ಯೆ(ಎಸ್‍ಎಂಎ) ಟೈಪ್-1 ಯಿಂದ ಬಳಲುತ್ತಿದ್ದಳು. ನರ ಕೋಶಗಳು ಸಂಪೂರ್ಣ ಸ್ಥಗಿತವಾಗಿ ಸ್ನಾಯುವಿನ ಮೇಲೆ ಶೂನ್ಯ ನಿಯಂತ್ರಣಕ್ಕೆ ಕಾರಣವಾಗಿತ್ತು. ಈಕೆ ಉಪನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಟೀರಾ ಕಾಮತ್ ಪೋಷಕರಾದ ಪ್ರಿಯಾಂಕಾ ಹಾಗೂ ಮಿಹಿರ್ ಅವರು ಅಕ್ಟೋಬರ್ 2020ರಲ್ಲಿ ಹಾಗೂ ಬಳಿಕ ಜನವರಿ 2021ರಂದು ಆಕೆಯ ವೈದ್ಯಕೀಯ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದರು. ಔಷಧಿ ಮೇಲಿನ ಆಮದು ಸುಂಕ ಹಾಗೂ ಜಿಎಸ್‍ಟಿಯನ್ನು ಮನ್ನಾ ಮಾಡುವಂತೆ ಮನವಿ ಮಾಡಿದ್ದರು.

     

    View this post on Instagram

     

    A post shared by TEERA M KAMAT (@teera_fights_sma)

    ಸ್ಪೈನಲ್ ಮಸಲ್ ಅಟ್ರೋಫಿಯ ಜೆನೆಟಿಕ್ ರೂಟ್(ಎಸ್‍ಎಂಎ)ಗೆ ಸಂಬಂಧಿಸಿದ ಜೊಲ್ಗೆನ್ಸ್ ಮಾ ಎಂಬ ಔಷಧಿಯನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಆರಂಭಿಸಲಾಗಿತ್ತು. ಶೇ.23ರಷ್ಟು ಆಮದು ಸುಂಕ ಹಾಗೂ ಶೇ.12ರಷ್ಟು ಜಿಎಸ್‍ಟಿ ಅಂದರೆ 6 ಕೋಟಿ ರೂ. ತೆರಿಗೆ ಹಾಗೂ 16 ಕೋಟಿ ರೂ. ಚಿಕಿತ್ಸಾ ವೆಚ್ಚವನ್ನು ಟೀರಾಳ ಪೋಷಕರು ಭರಿಸಬೇಕಿತ್ತು. ದಾನಿಗಳ ಸಹಾಯದಿಂದ 75 ದಿನಗಳಲ್ಲಿ 12 ಕೋಟಿ ರೂ. ಸಂಗ್ರಹಿಸಲು ಯಶಸ್ವಿಯಾಗಿದ್ದರು.

    ಇದಾದ ಬಳಿಕ ಆಮದು ಸುಂಕ ಹಾಗೂ ಜಿಎಸ್‍ಟಿಯನ್ನು ಮನ್ನಾ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಪೋಷಕರು ದಾನಿಗಳ ಸಹಾಯ ಹಾಗೂ ಸಾಲದ ರೂಪದಲ್ಲಿ ಹಣ ಪಡೆದರೂ ಆಮದು ಸುಂಕ ಹಾಗೂ ಜಿಎಸ್‍ಟಿ ಕಟ್ಟಲು ಅವರ ಬಳಿ ಹಣ ಇರಲಿಲ್ಲ. ಅಮೆರಿಕದಿಂದ ಭಾರತಕ್ಕೆ ಔಷಧಿ ತರಿಸಲು ಎಲ್ಲ ನಿಯಮ ಹಾಗೂ ಪತ್ರ ವ್ಯವಹಾರಗಳನ್ನು ಮುಗಿಸಿದ್ದರು. ಒಂದು ತಿಂಗಳಿಗೂ ಹೆಚ್ಚು ಕಾಲ ಪೋಷಕರು ಈ ಪತ್ರ ವ್ಯವಹಾರವನ್ನು ಪೂರ್ಣಗೊಳಿಸಿದ್ದರು.

    ಬಳಿಕ ಫೆಬ್ರವರಿ 1ರಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಆಮದು ಸುಂಕ ಹಾಗೂ ಜಿಎಸ್‍ಟಿ ರದ್ದು ಪಡಿಸುವಂತೆ ಕೇಳಿಕೊಂಡಿದ್ದರು. ಬಳಿಕ ಕೇಂದ್ರ ಸರ್ಕಾರ ಆಮದು ಸುಂಕ ಹಾಗೂ ತೆರಿಗೆಯನ್ನು ಮನ್ನಾ ಮಾಡಿ ಆದಷ್ಟು ಬೇಗ ಔಷಧಿ ಅಮೆರಿಕದಿಂದ ಭಾರತಕ್ಕೆ ಬರುವಂತೆ ಮಾಡಿತ್ತು. ಎಲ್ಲ ಕೆಲಸ ಆದ ಬಳಿಕ ಇದೀಗ ಫಡ್ನವಿಸ್ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಪತ್ರ ಬರೆದಿದ್ದಾರೆ.