Tag: ದೇವೇಂದ್ರಪ್ಪ

  • ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು

    ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು

    ಮೈಸೂರು: ಬಳ್ಳಾರಿ (Bellary) ಸಂಸದ ದೇವೇಂದ್ರಪ್ಪ (MP Devendrappa) ಮಗ ರಂಗನಾಥ್ (Ranganath) ಮಹಿಳೆಯ ವಿರುದ್ಧ ಬ್ಲ್ಯಾಕ್‌ಮೇಲ್ (Blackmail)ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.

    ಮೈಸೂರಿನ (Mysuru) ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಜೊತೆಗಿದ್ದ ಫೋಟೋ ಹಾಗೂ ಮಾತನಾಡಿರುವ ಆಡಿಯೋ ಇಟ್ಟುಕೊಂಡು ಮಹಿಳೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ರಂಗನಾಥ್ ಪತ್ನಿಗೆ ಫೋಟೋ ಮತ್ತು ಆಡಿಯೋ ಕಳುಹಿಸುವ ಬೆದರಿಕೆ ಹಾಕಿದ್ದು, 15 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ ಹೆಸರಲ್ಲಿ ವಂಚನೆ

    ಮಹಿಳೆ ಹಾಗೂ ಶ್ರೀನಿವಾಸ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಹಣಕ್ಕೆ ಬೇಡಿಕೆಯಿಟ್ಟ ಆಡಿಯೋ ನೀಡಿ ದೂರು ಸಲ್ಲಿಸಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೋಮಣ್ಣ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡ್ತೀನಿ: ಪರಮೇಶ್ವರ್‌

    ಏನಿದು ಪ್ರಕರಣ?
    ರಂಗನಾಥ್ ಮೈಸೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಮಹಿಳೆಗೆ ಸ್ನೇಹಿತರ ಮೂಲಕ ರಂಗನಾಥ್ ಪರಿಚಯವಾಗಿದ್ದರು. ನಂತರ ಯುವತಿ ಜೊತೆ ರಂಗನಾಥ್ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು ಎಂದು ಯುವತಿ ಆರೋಪಿಸಿದ್ದಾರೆ. 42 ವರ್ಷದ ರಂಗನಾಥ್‌ಗೆ 24 ವರ್ಷದ ಮಹಿಳೆ ಜೊತೆ ಪ್ರೇಮ ಉಂಟಾಗಿದೆ. ಪಾರ್ಟಿ ಒಂದರಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡ ರಂಗನಾಥ್ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಇದನ್ನೂ ಓದಿ: 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಬಳಿಕ ಮಹಿಳೆ ಮದುವೆಯಾಗುವಂತೆ ರಂಗನಾಥ್ ಅವರನ್ನು ಕೇಳಿದ್ದಾರೆ. ಈ ವೇಳೆ ರಂಗನಾಥ್ ಮಹಿಳೆಯನ್ನು ಕಡೆಗಣಿಸಲು ಪ್ರಾರಂಭಿಸಿದ್ದು, ಮದುವೆ ಆಗಲ್ಲ ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದಿದ್ದಾರೆ. ನಂತರ ಮಹಿಳೆ ಈ ವಿಚಾರವನ್ನು ಎಂಪಿ ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಆದರೆ ದೇವೇಂದ್ರಪ್ಪ ಮಹಿಳೆಯ ವಿರುದ್ಧ ಗರಂ ಆಗಿದ್ದಾರೆ. ಬೇರೆ ದಾರಿ ಕಾಣದೆ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ರಂಗನಾಥ್ ವಿರುದ್ಧ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

  • ಎಸಿಬಿ ಬಲೆಗೆ ಬಿದ್ದ ದೇವೇಂದ್ರ ಅಮಾನತು

    ಎಸಿಬಿ ಬಲೆಗೆ ಬಿದ್ದ ದೇವೇಂದ್ರ ಅಮಾನತು

    ಬೆಂಗಳೂರು: ಬೊಮ್ಮನಹಳ್ಳಿ ಎಡಿಟಿಪಿ ದೇವೇಂದ್ರಪ್ಪ ಎಸಿಬಿ ದಾಳಿ ವಿಚಾರವಾಗಿ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಅಮಾನತು ಆದೇಶ ಹೊರಡಿಸಿದರು.

    ಈ ಸಂಬಂಧ ಮಾತನಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಎಸಿಬಿ ತನಿಖಾ ವರದಿ ಬಂದ ಮೇಲೆ ತೀರ್ಮಾನ ಆಗಲಿದೆ. ಪಾಲಿಕೆ ಎಲ್ಲ ತೀರ್ಮಾನ ಕೈಗೊಳ್ಳಲು ಸಜ್ಜಾಗಿದೆ. ನಕಲಿ ಒಸಿ ನಕಲಿ ಸೀಲ್ ಹಾಕಲು ಮನೆಯಲ್ಲಿ ಇಟ್ಟಿದ್ದು, ಅನುಮತಿ ಇಲ್ಲದೇ ಕಟ್ಟಡ ಕಟ್ಟಿದ್ದವರಿಗೆ ಅನುಮತಿ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮ ಕಟ್ಟಡ ಮಾಲೀಕರಿಗೂ ಒಸಿ ಪಡೆಯಲು ಇಂತಹ ವ್ಯಕ್ತಿಗಳ ಬಳಸುತ್ತಿದ್ದ ಮಾಹಿತಿ ಇದೆ. ಈ ಮಾಲೀಕದ ವಿರುದ್ಧವು ಕ್ರಿಮಿನಲ್ ಕೇಸ್ ಹಾಕಲು ತೀರ್ಮಾನವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 20 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ

    ಸದ್ಯ ಕಟ್ಟಡ ಒಸಿ ಇಲ್ಲದೇ ಜಲಮಂಡಳಿ, ಬೆಸ್ಕಾಂ ಸೇವೆ ಸಿಗಲ್ಲ. ಹೀಗಾಗಿ ನಕಲಿ ಸೀಲ್, ದಾಖಲೆ ಸೃಷ್ಟಿಸಿ ಒಸಿ ನೀಡುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಹೀಗಾಗಿ ಸರ್ಕಾರಿ ಕೆಲಸದಿಂದಲೇ ಈ ಅಧಿಕಾರಿ ವಜಾದ ಬಗ್ಗೆ ಆಲೋಚನೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು. ಇದನ್ನೂ ಓದಿ: ರಾಜ್ಯದ 7 ಭ್ರಷ್ಟರ ಮೇಲೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸಿ ಅಧಿಕಾರಿಗಳು ಸುಸ್ತು

    ಕಟ್ಟಡವೊಂದಕ್ಕೆ ಓಸಿ ನೀಡಲು ದೇವೇಂದ್ರಪ್ಪ ಬರೋಬ್ಬರಿ 40 ಲಕ್ಷ ಹಣ ಕೇಳಿದ್ದರಂತೆ. ಅದರ ಅಡ್ವಾನ್ಸ್ ಹಣವಾಗಿ 20 ಲಕ್ಷ ಹಣ ತೆಗೆದುಕೊಳ್ಳೊವಾಗ ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಂತರ ವಿಚಾರಣೆಗೆ ಒಳಪಡಿಸಿದಾಗ ಬಿಬಿಎಂಪಿ ಕಚೇರಿಯಲ್ಲೇ ಒಂದಷ್ಟು ನಗದು, ಕಾರಿನಲ್ಲಿ ಏಳುವರೇ ಲಕ್ಷ ಹಣ ಎಲ್ಲವೂ ಸಿಕ್ಕಿತ್ತು. ನಂತರ ಮನೆಯಲ್ಲಿ ಹುಡುಕಾಡಿದಾಗ ಎಸಿಬಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು ಯಾಕೆಂದರೆ ಮನೆಯಲ್ಲಿ ಮಿನಿ ಬಾರ್ ಒಂದು ತೆರೆದುಕೊಂಡಿತ್ತು. ಇಲ್ಲಿ ವಿದೇಶಿ ಸೇರಿದಂತೆ 120 ಲೀಟರ್ ವಿವಿಧ ಬ್ರ್ಯಾಂಡ್ ನ ಎಣ್ಣೆ ಬಾಟಲ್‍ಗಳು ಪತ್ತೆಯಾಗಿವೆ. ಜೊತೆಗೆ ಬಿಬಿಎಂಪಿ ಕಚೇರಿಯಲ್ಲಿ ಇರಬೇಕಾದ ಬರೋಬ್ಬರಿ 480 ಫೈಲ್‍ಗಳು, ಹಿರಿಯ ಅಧಿಕಾರಿಗಳ ಹೆಸರಿನ ನಕಲಿ ಸೀಲು, ಸೈನ್‍ಗಳು, ವಿವಿಧ ಬ್ಯಾಂಕ್‍ಗಳ ಬೇನಾಮಿ ಅಕೌಂಟ್‍ಗಳು, ಆಸ್ತಿ ಪತ್ರಗಳು ದೊರೆತಿದೆ.

  • ಮೊಮ್ಮಕ್ಕಳ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

    ಮೊಮ್ಮಕ್ಕಳ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

    ಬಳ್ಳಾರಿ: ಕ್ಷೇತ್ರದ ಲೋಕಸಭಾ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಳೆ (ಮಂಗಳವಾರ) ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಇಂದು ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರು ಸಾಂಕೇತಿಕವಾಗಿ ನಾಮಪತ್ರವೊಂದನ್ನು ಸಲ್ಲಿಕೆ ಮಾಡಿದ್ದಾರೆ.

    ನಾಳೆ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯ ನಾಯಕರು ಹಾಗೂ ಸಾಕಷ್ಟು ಮುಖಂಡರು ಭಾಗಿಯಾಗುವ ಸಾಧ್ಯತೆ ಇರುವುದರಿಂದ ನಾಮಪತ್ರ ಸಲ್ಲಿಕೆ ವೇಳೆ ದಾಖಲೆಗಳ ಪರಿಶೀಲನೆಗೆ ತೊಂದರೆಯಾಗಬಹುದು ಎಂದು ದೇವೇಂದ್ರಪ್ಪ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿಶೇಷ ಏನೆಂದರೆ ದೇವೇಂದ್ರಪ್ಪ ಅವರು ಶಾಸಕ ಸೋಮಶೇಖರರೆಡ್ಡಿ, ಮಾಜಿ ಎಂಎಲ್‍ಸಿ ಸೇರಿದಂತೆ ಮೊಮ್ಮಕ್ಕಳ ಜೊತೆ ಆಗಮಿಸಿ ಹಲವು ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ದೇವೇಂದ್ರಪ್ಪ ಅವರು ನಾಳೆ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ.

    ಬಳ್ಳಾರಿ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ ಕೇಳಿ ಬಂದಿತ್ತು. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ದೇವೇಂದ್ರಪ್ಪಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡಿ ವಾಗ್ದಾಳಿ ನಡೆಸಿದ್ದರು.

    ದೇವೇಂದ್ರಪ್ಪನವರಿಗೆ ಓದಲು ಬರುವುದಿಲ್ಲ. ಬರೆಯಲು ಬರುವುದಿಲ್ಲ. ಇನ್ನು ಸಂಸತ್‍ನಲ್ಲಿ ಅವರು ಏನು ಮಾತಾಡ್ತಾರೋ ಎಂದು ಸಚಿವ ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು. ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ದೇವೇಂದ್ರಪ್ಪ, ನಾನು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂದು ತಿಳಿದವನು. ರಾಜಕೀಯದಲ್ಲಿ ನಾನೇನೂ ದಡ್ಡನಲ್ಲ, ನಂಗೂ ಅನುಭವ ಇದೆ. ಅವರಿಂದ ನಾನೇನೂ ಕಲಿಯಬೇಕಾಗಿಲ್ಲ. ಮುಂದೆ ಜಿಲ್ಲೆಯಲ್ಲಿ ಹೊಸ ಅಧ್ಯಾಯವನ್ನೇ ಬರೆಯುವೆ ಎಂದು ಮಾತಿನ ಛಾಟಿ ಬೀಸಿದ್ದರು.