Tag: ದೇವೆಗೌಡರು

  • ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

    ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗ್ಬೇಕಿತ್ತು: ಹೆಚ್‍ಡಿಕೆ

    ತುಮಕೂರು: ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆರ್ಶಿವಾದದಿಂದ ನಾನು ಉಳಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಗುಬ್ಬಿ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತಿನ ಈ ಕಾರ್ಯಕ್ರಮ ಬಯಸಿ ಬಂದ ಕಾರ್ಯಕ್ರಮ ಅಲ್ಲ. 2018 ಚುನಾವಣೆ ನಂತರ ಯಾವುದೇ ಬಹುಮತ ಬರಲಿಲ್ಲ. ಜೆಡಿಎಸ್‍ಗೆ ಬಂದಿದ್ದು 37 ಸ್ಥಾನಗಳು. ಕಾಂಗ್ರೆಸ್ ನಾಯಕರೇ ಬಂದು ಸರ್ಕಾರ ಮಾಡಲು ದುಂಬಾಲು ಬಿದ್ದರು. ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ದೇವೇಗೌಡರು ಹೇಳಿದರು. ಆದರೆ ದೆಹಲಿಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಎಂದರು. ಲಕ್ಷಾಂತರ ಕಾರ್ಯಕರ್ತರು ಕಟ್ಟಿರುವ ಪಕ್ಷ ಇದು. ಆದರೆ ಬಿಜೆಪಿಯ ಬಿ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸಿಗರು ಆರೋಪಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    HDD

    ಮುಸ್ಲಿಂ ಭಾಂದವರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 130 ಸ್ಥಾನ ಇದ್ದ ಕಾಂಗ್ರೆಸ್ ನಮ್ಮನ್ನು ಮುಗಿಸಲು ಬಂದು 78 ಸ್ಥಾನಕ್ಕೆ ಬಂದಿದೆ. ಮುಸ್ಲಿಂ ಭಾಂದವರೇನಾದರೂ ನಮ್ಮ ಜೊತೆ ಇದ್ದಿದ್ದರೇ 70 ಸ್ಥಾನ ಗೆಲ್ಲುತ್ತಿದ್ವಿ. ಈ ಜಿಲ್ಲೆಯಲ್ಲಿ ಏನೋ ಆಗೋಗಿದೆ, ಜೆಡಿಎಸ್ ಮುಗಿದೋಯ್ತು. ಅವರೇ ಆಚೆ ಕಳಿಸ್ತಿದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. 23 ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ ಅಂತ ಚರ್ಚೆ ಮಾಡಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    1999ರಲ್ಲಿ ಗುಬ್ಬಿಯಲ್ಲಿ ವೀರಣ್ಣಗೌಡರು ಶಾಸಕರಾಗಿದ್ದರು. 10 ಜನರಲ್ಲಿ 6 ಜನರು ಜನತಾಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದರು. 2004ರ ಚುನಾವಣೆ ಚನ್ನಿಗಪ್ಪ ಶಿವನಂಜಪ್ಪ ಅವರ ಮನೆಗೆ ದೇವೇಗೌಡರನ್ನು ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಂದೇ ಶಿವನಂಜಪ್ಪ ಅವರಿಗೆ ಟಿಕೆಟ್ ಕೊಡುತ್ತೇನೆ ಅಂತ ಮಾತು ಕೊಟ್ಟಿದ್ದರು. ಬಳಿಕ ಶ್ರೀನಿವಾಸ್ ಅವರು ಬಂದು ಗುಬ್ಬಿಗೆ ಟಿಕೆಟ್ ಕೇಳಿದ್ದರು. ಶಿವನಂಜಪ್ಪ ಅವರಿಗೆ ಮಾತು ಕೊಟ್ಟಿದ್ದರಿಂದ ಪಕ್ಷೇತರ ನಿಲ್ಲಿ ಎಂದು ನಾನೇ ಹೇಳಿದ್ದೆ. ಆ ಚುನಾವಣೆಯಲ್ಲಿ ನಿಮ್ಮೆಲರ ಆಶೀರ್ವಾದದಿಂದ ಗೆದ್ದರು. ಬಹಳ ಅನ್ಯೋನ್ಯವಾಗಿದ್ದರು, ನನ್ನ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಗುಬ್ಬಿ ತಾಲೂಕಿನ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಅವರೇನು ಕಾಯಬೇಕಿರಲಿಲ್ಲ. ಗುಬ್ಬಿ ತಾಲೂಕಿನ ಎಲ್ಲಾ ಅಭಿವೃದ್ದಿ ಕೆಲಸ ಮಾಡಿಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

    ಬಳಿಕ 2008ರಲ್ಲಿ ನಿಂತು ಗೆದ್ದರು. ನಾನು ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಯಲ್ಲಿ ಸ್ಪರ್ಧಿಸಿದೆ. ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗಿ, ಚಿಕ್ಕಬಳ್ಳಾಪುರದಲ್ಲಿ ಸೋತೆ. ಅದೇನೋ ಸೂಟ್ ಕೇಸ್, ನಾನೇ ಬೆಳೆಸ್ದೆ ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ, 2013 – 14 ರಿಂದಲೇ ನನ್ನ ವಿರುದ್ಧ ಕೆಲವರು ಮಾತನಾಡುವುದಕ್ಕೆ ಶುರುಮಾಡಿದ್ರು. ನಾನು ಇವತ್ತು ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ. ನನ್ನಿಂದ ಯಾವುದೇ ಅಪಚಾರವಾಗಿಲ್ಲ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ನಾವು ರಾಜಕೀಯ ಮಾಡಿಲ್ಲ. ನಿಮ್ಮಂತ ಜನರನ್ನು ವಿಶ್ವಾಸದಲ್ಲಿಟ್ಟುಕೊಂಡು ಚುನಾವಣೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಇದೇ ವೇಳೆ ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆಶೀರ್ವಾದದಿಂದ ನಾನು ಉಳಿದೆ. ದೇವೇಗೌಡರು ಈ ವಯಸ್ಸಿನಲ್ಲೂ ಓಡಾಡುತ್ತಾರೆ ಎಂದು ಹೇಳುತ್ತಾ ಭಾಷಣ ಮಾಡುತ್ತಾ ಭಾವುಕರಾದರು.

  • ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ಗದಗ: 1925 ರಲ್ಲಿಯೇ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿತ್ತು. ಆಗ ದೇವೆಗೌಡರು ಹುಟ್ಟಿರಲಿಲ್ಲ. ಹೀಗಾಗಿ ದೇವೆಗೌಡರ ಮೂಲಕ ಆರ್‌ಎಸ್‌ಎಸ್‍ಗೆ ಪ್ರಭಾವ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಹೆಚ್.ಡಿ ದೇವೆಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಗದಗನ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ ಅವರು, ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ. ಬಿಜೆಪಿ ಈ ರೀತಿ ಬಿಂಬಿಸುತ್ತಿದೆ ಅನ್ನೋ ದೇವೇಗೌಡರ ಹೇಳಿಕೆಗೆ, ದೇವೇಗೌಡರ ಮೂಲಕ ಆರ್‌ಎಸ್‍ಎಸ್‍ಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆ ಇಲ್ಲ. ದೇವೆಗೌಡರು ಹುಟ್ಟುವ ಮುಂಚೆಯೇ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿದೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಅಂತ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್‌ ಕ್ರಿಕೆಟ್‌ ಕತೆ ಮುಗಿದಂತೆ: ರಮೀಝ್‌ ರಾಜಾ

    eshwarappa

    ರಾಜ್ಯದ ಜನ ಜೆಡಿಎಸ್ ಅನ್ನು ಮರೆಯುತ್ತಿದ್ದಾರೆ. ಮುಸ್ಲಿಂಮರನ್ನು ಸಂತೃಪ್ತಿ ಪಡಿಸಿದಂಗೂ ಆಯ್ತು, ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಜೆಡಿಎಸ್‍ನ್ನು ಟೀಕಿಸುತ್ತಿದೆ ಅಂತಾ ತಮ್ಮ ಎಂದಿನ ದಾಟಿಯಲ್ಲೇ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

    ಸೂರ್ಯನಿಗೆ ಬೈದರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಕೆಲವರಿರ್ತಾರೆ. ಹಾಗೆಯೇ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಎಲ್ಲಿ? ಆರ್‌ಎಸ್‌ಎಸ್ ಎಲ್ಲಿ? ಕಾಶ್ಮೀರ ಪಂಡಿತರ ಸಾವಿಗೆ ಆರ್‍ಎಸ್‍ಎಸ್ ಕಾರಣ ಅಂತಾರೆ. ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳೀತಾರೆ ಎಂದು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿಗೆ ಭಗವಂತ ಬುದ್ಧಿ ಕೊಡಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಜೆಡಿಎಸ್ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡೋದು ಯಾಕೆ: ಕಾರಣ ತಿಳಿಸಿದ ಮಧು ಬಂಗಾರಪ್ಪ

    ಜೆಡಿಎಸ್ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡೋದು ಯಾಕೆ: ಕಾರಣ ತಿಳಿಸಿದ ಮಧು ಬಂಗಾರಪ್ಪ

    ಶಿವಮೊಗ್ಗ: ಅಲ್ಪ ಸಂಖ್ಯಾತ, ಹಿಂದುಳಿದ ವರ್ಗಗಳ ಮತ ಜೆಡಿಎಸ್‍ಗೆ ಹೋಗುತ್ತದೆ ಎನ್ನುವ ಭಯದಿಂದ ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.

    ಜೆಡಿಎಸ್‍ಗೆ ಯಾವುದೇ ಪಕ್ಷದೊಂದಿಗೆ ಕೈ ಜೋಡಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪರ ಉತ್ತಮ ವಾತಾವರಣವಿದ್ದು ಅಧಿಕಾರಕ್ಕೆ ಬರುವುದು ಶತಸಿದ್ಧ. ಪ್ರಾದೇಶಿಕ ಪಕ್ಷಕ್ಕೆ ಈ ಬಾರಿ ಖಂಡಿತ ಅವಕಾಶ ಇದೆ ಎಂದು ಹೇಳಿದರು.

    ಬಿಜೆಪಿಯೊಂದಿಗೆ ಮೈತ್ರಿ ಕುರಿತಂತೆ, ಕಾಂಗ್ರೆಸ್ ನವರ ಆರೋಪಕ್ಕೆ ದೇವೆಗೌಡರೇ ಸ್ಪಷ್ಟಪಡಿಸಿದ್ದಾರೆ. ಮೈತ್ರಿಗೆ ಮುಂದಾದರೆ ಕುಮಾರಸ್ವಾಮಿ ಅವರನ್ನು ಕುಟುಂಬದಿಂದಲೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ದೇವೇಗೌಡರಂತಹ ಹಿರಿಯರು ನೋವಿನಿಂದ ಈ ಮಾತು ಹೇಳಿದ್ದಾರೆ ಎಂದು ತಿಳಿಸಿದರು.