Tag: ದೇವಿ ಶ್ರೀ ಪ್ರಸಾದ್

  • ‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಲಿದ್ಯಾ?: ಸುಳಿವು ಕೊಟ್ಟ ಮ್ಯೂಸಿಕ್ ಡೈರೆಕ್ಟರ್

    ‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಲಿದ್ಯಾ?: ಸುಳಿವು ಕೊಟ್ಟ ಮ್ಯೂಸಿಕ್ ಡೈರೆಕ್ಟರ್

    ಬೆಂಗಳೂರಿನಲ್ಲಿ ನಡೆಯುತ್ತಿರುವ ಫಿಲ್ಮ್ ಫೆಸ್ಟಿವಲ್‌ಗೆ ‘ಪುಷ್ಪ’ ಡೈರೆಕ್ಟರ್ ದೇವಿಶ್ರೀ ಪ್ರಸಾದ್ (Devi Sri Prasad) ಆಗಮಿಸಿ ಕನ್ನಡ ಚಿತ್ರರಂಗದ ಬಗ್ಗೆ ಕೊಂಡಾಡಿದ್ದಾರೆ. ಈ ವೇಳೆ, ‘ಪುಷ್ಪ’ ಸಿನಿಮಾ ಪಾರ್ಟ್ 10ರವರೆಗೆ ಬರಬಹುದು ಎಂದು ಸಂಗೀತ ನಿರ್ದೇಶಕ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ.

    ಎಲ್ಲಾ ಕನ್ನಡಿಗರಿಗೂ ನಾನು ಥ್ಯಾಂಕ್ಸ್ ಹೇಳ್ತೀನಿ. ಯಾಕಂದ್ರೆ ತೆಲುಗು ಸಿನಿಮಾಗಳಿಗೆ ಕನ್ನಡದವರು ತುಂಬಾ ಸಪೋರ್ಟ್ ಮಾಡಿದ್ದೀರಾ. ನನ್ನ ಸಿನಿಮಾಗಳ ಹಾಡುಗಳಿಗೆ ನೀವು ತುಂಬಾ ಬೆಂಬಲಿಸಿದ್ರಿ. ಫಿಲ್ಮ್ ಫೆಸ್ಟಿವಲ್‌ಗೆ ಬಂದಿರೋದಕ್ಕೆ ನನಗೆ ತುಂಬಾ ಖುಷಿ ಆಗ್ತಿದೆ. ಕನ್ನಡ ಇಂಡಷ್ಟ್ರೀಯಲ್ಲಿ ಒಂದಷ್ಟು ಟೆಕ್ನಿಷಿಯನ್ಸ್ ನನಗೆ ತುಂಬಾ ಪರಿಚಯವಿದ್ದಾರೆ. ಈಗ ಕನ್ನಡ ಇಂಡಸ್ಟ್ರೀ ಪ್ಯಾನ್ ಇಂಡಿಯಾ ಲೆವೆಲ್‌ಗೆ ಬಂದಿದೆ. ಕಾಂತಾರ, ಕೆಜಿಎಫ್ ಸಿನಿಮಾ ಮೂಲಕ ಹೆಸರು ಮಾಡಿವೆ. ಈಗ ತೆಲಗು, ಕನ್ನಡ, ಮಲಯಾಳಂ ಅನ್ನೋದೆಲ್ಲ ಇಲ್ಲ. ಭಾರತೀಯ ಸಿನಿಮಾ ಅನ್ನೋ ಥರಾ ಆಗಿದೆ.

    ಇನ್ನೂ ಇದೇ ತಿಂಗಳು ಬೆಂಗಳೂರಿನಲ್ಲಿ ನನ್ನ ಲೈವ್ ಕಾನ್ಸರ್ಟ್ ಮಾಡ್ತಿದ್ದೀನಿ. ನಾವು ಬೆಂಗಳೂರಿಗೆ ಬರುತ್ತೇವೆ. ನೀವು ಚೆನ್ನೈ, ಹೈದ್ರಾಬಾದ್‌ಗೆ ಬನ್ನಿ. ನೀವು ಸಿನಿಮಾಗಳನ್ನ ಸೆಲೆಬ್ರೇಟ್ ಮಾಡಿ ನಾವೂ ಸೆಲೆಬ್ರೇಟ್ ಮಾಡ್ತೀವಿ ಎಂದರು.

    ಇನ್ನೂ ‘ಪುಷ್ಪ’ ಸಿನಿಮಾ ಬಾಂಡ್ ಸಿರೀಸ್ ಥರ ಬರುತ್ತಾ? ಎಂದು ಎದುರಾದ ಪ್ರಶ್ನೆ ದೇವಿಶ್ರೀ ಮಾತನಾಡಿ, ‘ಪುಷ್ಪ’ ಚಿತ್ರ ಬಾಂಡ್ ಸಿರೀಸ್ ಸಿನಿಮಾ ಥರ ‘ಪುಷ್ಪ ಪಾರ್ಟ್ 10ರ’ವರೆಗೂ ಬರಬಹುದು. ಸದ್ಯಕ್ಕೆ ಸ್ವಲ್ಪ ರೆಸ್ಟ್‌ನಲ್ಲಿದ್ದೀವಿ. ಡೈರೆಕ್ಟರ್ ಸುಕುಮಾರ್ ಸರ್ ಮತ್ತು ಅಲ್ಲು ಅರ್ಜುನ್ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದೆ ಕನ್ನಡ ಸಿನಿಮಾಗೂ ಮ್ಯೂಸಿಕ್ ಮಾಡ್ತೀನಿ ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಈ ಹಿಂದೆ ಗಣೇಶ್ ನಟನೆಯ ‘ಸಂಗಮ’ ಸಿನಿಮಾಗೆ ಮ್ಯೂಸಿಕ್ ಮಾಡಿದ್ದೇ ಎಂದು ಸ್ಮರಿಸಿದರು.

  • ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

    ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

    ಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇತ್ತೀಚೆಗಷ್ಟೇ ಹಲವು ಭಾಷೆಗಳಲ್ಲಿ ‘ಓ ಪರಿ’ ಎನ್ನುವ ಹಾಡೊಂದನ್ನು ಹೊರ ತಂದಿದ್ದರು. ಈ ಹಾಡಿನ ಸಾಹಿತ್ಯದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ಧಾರ್ಮಿಕ ಪಠಣಗಳಿರುವ ಹಾಡಿನಲ್ಲಿ ನೃತ್ಯ ಮಾಡುವವರು ಅರೆಬರೆ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಕರಾಟೆ ಕಲ್ಯಾಣಿ ಅನ್ನುವವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ಹಿಂದೂ ಭಾವನೆಗಳಿಗೆ ಧಕ್ಕೆ ವಿಚಾರವಾಗಿ ದೇವಿ ಶ್ರೀ ಪ್ರಸಾದ್ ಮೇಲೆ ದೂರು ಸಲ್ಲಿಕೆ ಆಗುತ್ತಿದ್ದಂತೆಯೇ ಹೈದರಾಬಾದ್ ನಗರ ಪೊಲೀಸರು ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆಯನ್ನೂ ಶುರು ಮಾಡಿದ್ದಾರೆ. ತುಂಡುಡುಗೆ ತೊಟ್ಟು ಡಾನ್ಸ್ ಮಾಡಿದ ಹಾಡಿನಲ್ಲಿ ‘ಹರೇ ಕೃಷ್ಣ ಹರೇ ರಾಮ’  ಎಂದು ಜಪಿಸಲಾಗುತ್ತಿದೆ. ಪವಿತ್ರ ಶ್ಲೋಕಗಳನ್ನು ಹೇಳಲು ಸಾಧ್ಯವಾಗದೇ ಇದ್ದಾಗ ಈ ಪವಿತ್ರ ಸಾಲುಗಳನ್ನು ಹೇಳಲಾಗುತ್ತದೆ. ಇಂತಹ ಸಾಲುಗಳನ್ನು ಹೇಳುವಾಗ ನೃತ್ಯ ಮಾಡುವವರು ಅಶ್ಲೀಲವಾಗಿ ಕಂಡಿದ್ದಾರೆ ಎನ್ನುವುದು ದೂರು ನೀಡಿದವರ ಆರೋಪ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಕರಾಟೆ ಕಲ್ಯಾಣಿ ಮತ್ತು ಲಲಿತ್ ಕುಮಾರ್ ಜಂಟಿಯಾಗಿ ಹೈದರಾಬಾದ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಪೊಲೀಸರು ದೇವಿಶ್ರೀ ಪ್ರಸಾದ್ ಮೇಲೆ ಐಪಿಸಿ ಸೆಕ್ಷನ್ 153 (ಎ) ಮತ್ತು 295 (ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಆಂಧ್ರ ಪ್ರದೇಶದ ಬಿಜೆಪಿ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಂಗೀತ ನಿರ್ದೇಶಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಊ ಅಂಟಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

    ‘ಊ ಅಂಟಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

    ಚೆನ್ನೈ: ‘ಪುಷ್ಪಾ’ ಸಿನಿಮಾದ ‘ಊ ಅಂಟಾವಾ’ ಸಾಂಗ್ ವಿವಾದದ ಕುರಿತು ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಮೌನ ಮುರಿಸಿದ್ದಾರೆ.

    ‘ಊ ಅಂಟಾವಾ’ ಸಾಂಗ್ ಅನ್ನು ಐಟಂ ಸಾಂಗ್ ಎಂದು ಹೇಳಿದಕ್ಕೆ ರಾಜಕೀಯ ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ದೇವಿ ಶ್ರೀ ಪ್ರಸಾದ್, ಸಂಗೀತಗಾರನಿಂದ ಮತ್ತು ಸಂಯೋಜನೆಯ ಕಡೆಯಿಂದ, ನಿರ್ದೇಶಕರು ಏನು ಬಯಸುತ್ತಾರೆ, ಸಿನಿಮಾದ ವಿಷಯವು ಏನನ್ನು ಬಯಸುತ್ತೆ ಅದನ್ನು ನಾವು ಮೊದಲು ತಿಳಿದುಕೊಳ್ಳುತ್ತೇವೆ. ನಂತರ ಅವರಿಗೆ ಬೇಕಾಗಿರುವ ರೀತಿ ನಾವು ಪೂರೈಸಬೇಕು. ಪ್ರೇಕ್ಷಕರು ಒಂದು ಸಾಂಗ್ ಅನ್ನು ಯಾವುದೇ ರೀತಿ ನೋಡಿದರೂ ಅದು ಸರಿಯೇ. ಲವ್ ಸಾಂಗ್ ಆಗಿದ್ದರೆ ಲವ್ ಸಾಂಗ್, ಐಟಂ ಸಾಂಗ್ ಆಗಿದ್ದರೆ ಐಟಂ ಸಾಂಗ್ ಆಗುತ್ತೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ

    ನನಗೆ, ಅದು ಭಕ್ತಿ, ಪ್ರೀತಿ ಅಥವಾ ಐಟಂ ಹಾಡು ಆಗಿರಲಿ. ಸಂಯೋಜನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಇದನ್ನು ಈ (ರಾಜಕೀಯ) ವ್ಯಕ್ತಿಗಳು ಬೇರೆ ಸನ್ನಿವೇಶದಲ್ಲಿ ತೆಗೆದುಕೊಂಡಿದ್ದಾರೆ ಅದು ಅನಗತ್ಯವಾಗಿತ್ತು ಎಂದು ತಿಳಿಸಿದರು

    ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ ಈ ಹಾಡಿಗೆ ಸಮಂತಾ ರುತ್ ಪ್ರಭು ಸಖತ್ ಆಗಿ ಸ್ಟೆಪ್ ಹಾಕಿದ್ದು, ಅಲ್ಲು ಅರ್ಜುನ್ ಜೊತೆ ಮಿಂಚಿದ್ದಾರೆ. ಈ ಸಾಂಗ್ ಈಗ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಈ ಸಾಂಗ್ ಅನ್ನೆ ಗುನುಗುತ್ತ ಇರುತ್ತಾರೆ. ಇನ್‍ಸ್ಟಾ, ಸೋಶಿಯಲ್ ಮೀಡಿಯಾದಲ್ಲಿ ಈ ಸಾಂಗ್ ಫುಲ್ ಕ್ರೇಜ್ ಮೂಡಿಸಿದೆ.

    ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ’ ಸಿನಿಮಾದ ಹಾಡುಗಳು ಜನರನ್ನು ರಂಜಿಸುತ್ತಿದೆ. ಪ್ರಸ್ತುತ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿಯೂ ಈ ಸಿನಿಮಾದ ಹಾಡಿಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿವಾದಕ್ಕೂ ಸಹ ಕಾರಣವಾಗಿದೆ. ರಶ್ಮಿಕಾ ಅವರ ‘ಸಾಮಿ ಸಾಮಿ’ ಸಾಂಗ್ ರೊಮ್ಯಾಂಟಿಕ್ ಆಗಿದ್ದರೆ, ‘ಊ ಅಂಟಾವಾ’ ಸಾಂಗ್ ಐಟಂ ಸಾಂಗ್ ಆಗಿದ್ದು, ಎಲ್ಲ ಕಡೆ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

    ಪ್ರಸ್ತುತ ದೇವಿ ಶ್ರೀ ಪ್ರಸಾದ್ ‘ಪುಷ್ಪಾ 2’ ಸಿನಿಮಾದ ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾರೆ. ರಣವೀರ್ ಸಿಂಗ್ ನಟನೆಯ ‘ಸರ್ಕಸ್’ ಅನ್ನು ಪೈಪ್‍ಲೈನ್‍ನಲ್ಲಿ ಪಡೆದುಕೊಂಡಿದ್ದಾರೆ.