Tag: ದೇವಿ ಶೆಟ್ಟಿ

  • ಶಾಲೆಗಳ ಆರಂಭ ಸೋಮವಾರದ ನಂತರ ನಿರ್ಧಾರ: ಸುರೇಶ್ ಕುಮಾರ್

    ಶಾಲೆಗಳ ಆರಂಭ ಸೋಮವಾರದ ನಂತರ ನಿರ್ಧಾರ: ಸುರೇಶ್ ಕುಮಾರ್

    ಬೆಂಗಳೂರು: ಶಾಲೆಗಳು ಪುನರಾರಂಭಕ್ಕೆ ಇನ್ನೂ ಆಲೋಚನೆ ಮಾಡಿಲ್ಲ, ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು ಸೋಮವಾರ ಆಯುಕ್ತರು ವರದಿ ನೀಡಿದ ಬಳಿಕ ಶಾಲೆಗಳ ಆರಂಭಿಸುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್, ಕೆಆರ್ ಪುರದ ಐಟಿಐ ವಿದ್ಯಾಮಂದಿರ, ಸರ್ಕಾರಿ ಪಬ್ಲಿಕ್ ಶಾಲೆ, ಎಸ್‍ಜೆಇಎಸ್, ಬಿವಿಎನ್ ಹೆಚ್.ಎಸ್ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ, ರಾಜ್ಯಾದ್ಯಂತ 99.6% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

    ರಾಜ್ಯಾದ್ಯಂತ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾತನಾಡಿ, ಐಸಿಎಂಆರ್ ನಿಂದಲೂ ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ವರದಿ ಬಂದಿದೆ. ಇದರೊಂದಿಗೆ ದೇವಿ ಶೆಟ್ಟಿ ಅವರು ಕೊಟ್ಟಿರುವ ವರದಿಯನ್ನು ಅಧ್ಯಯನ ಮಾಡಿ ತದನಂತರ ಶಾಲೆಗಳನ್ನು ಅರಂಭಿಸುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ ಸಿಎಂ ಸ್ಥಾನದಿಂದ ಕೆಳಗಿಳಿದರೆ ದೇವೇಗೌಡರ ಜೊತೆ ಸೇರಿ ಪ್ರಾದೇಶಿಕ ಪಕ್ಷ ಕಟ್ಟಲಿ: ಜೆಡಿಎಸ್ ಶಾಸಕ

  • 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ, ಕಾಲೇಜು ತೆರೆಯಿರಿ – ತಜ್ಞರ ವರದಿಯಲ್ಲಿ ಏನಿದೆ?

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ, ಕಾಲೇಜು ತೆರೆಯಿರಿ – ತಜ್ಞರ ವರದಿಯಲ್ಲಿ ಏನಿದೆ?

    ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಕಾಲೇಜುಗಳನ್ನು ಪ್ರಾರಂಭಿಸುವಂತೆ ಡಾ. ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.

    3ನೇ ಅಲೆ ತಡೆಗಟ್ಟುವ ಕುರಿತು ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಜೊತೆ ಇಂದು ಸಿಎಂ ಸಭೆ ನಡೆಸಿ ಚರ್ಚಿಸಿದರು. ಸಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಕೆಲವು ಶಿಫಾರಸುಗಳನ್ನು ಮಾಡಿದೆ.

    ಶಿಫಾರಸಿನಲ್ಲಿ ಏನಿದೆ?
    ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮಕ್ಕಳ ಹೆಚ್.ಡಿ.ಯು ಘಟಕ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, ಮಕ್ಕಳ ಆಸ್ಪತ್ರೆ ಸ್ಥಾಪನೆ ಕುರಿತು ಸಲಹೆ ನೀಡಿದೆ.

    3ನೇ ಅಲೆ ತಡೆಗಟ್ಟಲು ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹಾಗೂ ಪರಿಣತರ ನೆರವು ಪಡೆಯುವ ಕುರಿತು ಸಹ ಸಮಿತಿ ಸಲಹೆ ನೀಡಿದೆ. ವಿವಿಧ ವೈದ್ಯಕೀಯ ಸಂಘಟನೆಗಳ ಸಹಯೋಗದೊಂದಿಗೆ ವೈದ್ಯರು, ದಾದಿಯರ ಕೊರತೆ ನಿವಾರಣೆ, ರಾಜ್ಯದಲ್ಲಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವುದು, ಕಾರ್ಪೊರೇಟ್ ಸಂಸ್ಥೆಗಳ ಸಹಕಾರದಿಂದ ಸಂಪನ್ಮೂಲಗಳ ನೆರವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ಬಗ್ಗೆ ಸಲಹೆ ನೀಡಿದೆ. ಇದನ್ನೂ ಓದಿ: ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು. ಕೋವಿಡ್ ಗೆ ತುತ್ತಾದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಲು ಪ್ರತಿ ಆಸ್ಪತ್ರೆಯಲ್ಲಿ ಮನೋವೈದ್ಯರ ಸೇವೆ ಒದಗಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

    ಆಮ್ಲಜನಕ ಕೊರತೆ ನಿವಾರಣೆ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದೆ. ಕೋವಿಡ್ ನಂತರ ತಲೆದೋರುವ ಆರೋಗ್ಯ ಸಮಸ್ಯೆಗಳ ಕುರಿತು ಎಚ್ಚರ ವಹಿಸುವ ಕುರಿತು ಹಾಗೂ ಕೋವಿಡ್ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ.

    ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಅತ್ಯಂತ ಸೂಕ್ತ ಪರಿಹಾರವಾಗಿದ್ದು, ಲಸಿಕೆ ಅಭಿಯಾನ ಇನ್ನಷ್ಟು ತೀವ್ರಗೊಳಿಸಲು ಸಲಹೆ ನೀಡಿದೆ.

    ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಲಸಿಕೆ ನೀಡಲು ಆದ್ಯತೆ ನೀಡುವಂತೆ ಸಲಹೆ ಮಾಡಲಾಗಿದೆ. ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಬೇಕು. 18 ವಯಸ್ಸಿನ ಮೇಲಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಕಾಲೇಜುಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದೆ.

  • ಬೆಂಗಳೂರಲ್ಲೇ 5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಬಹುದು – ಐಸಿಎಂಆರ್ ವರದಿ

    ಬೆಂಗಳೂರಲ್ಲೇ 5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಬಹುದು – ಐಸಿಎಂಆರ್ ವರದಿ

    ನವದೆಹಲಿ: ಬೆಂಗಳೂರಿನ 5 ಲಕ್ಷ ಮಂದಿಗೆ ಕೊರೊನಾ ಬರಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮಾಹಿತಿ ನೀಡಿದೆ.

    ಹೌದು, ಐಸಿಎಂಆರ್ ತನ್ನ ಅಧ್ಯಯನ ವರದಿಯಲ್ಲಿ ಬೆಂಗಳೂರಿನಲ್ಲಿ ಕನಿಷ್ಟ 5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಬಹುದು ಎಂದು ಅಂದಾಜಿಸಿದೆ. ಫೆ.27 ರಂದು ಈ ವರದಿ ಪ್ರಕಟವಾಗಿದೆ. ಕೊರೊನಾ ದೇಶಕ್ಕೆ ಕಾಲಿಟ್ಟ 200 ದಿನದಲ್ಲಿ ಬೆಂಗಳೂರು, ಮುಂಬೈ, ಕೊಲ್ಕತ್ತಾದಲ್ಲಿ ತಲಾ 5 ಲಕ್ಷ ಮಂದಿಗೆ ಬಂದರೆ ದೆಹಲಿಯಲ್ಲಿ 15 ಲಕ್ಷ ಮಂದಿಗೆ ಸೋಂಕು ತಗುಲಬಹುದು ಎಂದು ಹೇಳಿದೆ. ಒಬ್ಬರಿಗೆ ಸೋಂಕು ಬಂದರೆ ಇಬ್ಬರಿಗೆ ಅಪಾಯ ಸಾಧ್ಯತೆ. ತೀರಾ ಪರಿಸ್ಥಿತಿ ಹದಗೆಟ್ಟರೆ ಒಬ್ಬರಿಂದ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿದೆ.

    ವಿಮಾನ ನಿಲ್ದಾಣಗಳ ಮೂಲಕ ವೈರಸ್ ಭಾರತ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಧ್ಯಯನಕ್ಕೆ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರನ್ನು ಲೆಕ್ಕಾಚಾರ ಹಾಕಿ ವರದಿ ತಯಾರಿಸಲಾಗಿದೆ. ಗೃಹಬಂಧನದಲ್ಲಿರುವಾಗಲೇ ಅರ್ಧದಷ್ಟು ಜನರಿಗೆ ಕೊರೊನಾ ರೋಗದ ಲಕ್ಷಣಗಳು ಕಾಣಿಸಬಹುದು ಎಂದು ಹೇಳಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ್, ನಾವು ಈ ಅಧ್ಯಯನವನ್ನು ಪೂರ್ಣವಾಗಿ ಗಣಿತದ ಆಧಾರದಲ್ಲಿ ಒಂದು ತಿಂಗಳ ಹಿಂದೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಈಗ ವಿಮಾನ ನಿಲ್ದಾಣಗಳಲ್ಲಿ 15 ಲಕ್ಷ ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿದೆ. ಆದರೆ ಶೇ.46 ರಷ್ಟು ಕೊರೊನಾ ಪೀಡಿತ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧ್ಯಯನ ಹೇಳಿದೆ. ಅಷ್ಟೇ ಅಲ್ಲದೇ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ಮಾಡುವ ಫಾಸ್ಟ್- ಟೆಸ್ಟ್ ಕಿಟ್ ಗಳು ಲಭ್ಯವಿಲ್ಲ. ಹೀಗಾಗಿ ಕೊರೊನಾ ಪ್ರಕರಣಗಳು ವೇಗವಾಗಿ ಪತ್ತೆಯಾಗುವುದಿಲ್ಲ ಎಂದು ಉಲ್ಲೇಖಿಸಿದೆ.

    ಭಾರತ ಆರಂಭದಲ್ಲೇ ಚೀನಾ, ಹಾಂಕಾಂಗ್ ಗೆ ವಿಮಾನ ಸೇವೆಯನ್ನು ನಿಷೇಧಿಸಿತ್ತು. ಬಳಿಕ ಯುರೋಪಿಯನ್ ರಾಷ್ಟ್ರಗಳಿಗೆ ನಿಷೇಧಿಸಿತ್ತು. ಆದರೆ ವಿದೇಶಿ ಪ್ರಯಾಣಿಕರು ಬರುತ್ತಿರುವ ಅಂಶಗಳನ್ನು ಪರಿಗಣಿಸಿ ಈ ಅಧ್ಯಯನವನ್ನು ತಯಾರಿಸಲಾಗಿದ್ದ ಕಾರಣ ಮುಂದೆ ದತ್ತಾಂಶಗಳು ಬದಲಾಗಬಹುದು.

    ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಿತ್ತು. ಆದರೆ ಈ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಿಂದ ಪಾರಾಗಲು ವಿಮಾನ ಲ್ಯಾಂಡಿಂಗ್ ಆಗುವ ಮೊದಲ ಒಂದು ಗಂಟೆ ಪ್ರಯಾಣಿಕರು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸುತ್ತಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ. ಇದರ ಜೊತೆ ಗೃಹ ಬಂಧನದಲ್ಲಿರಬೇಕಾದ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡಿ ನಂತರ ಪಾಸಿಟಿವ್ ಬಂದಿದೆ. ಹೀಗಾಗಿ ಕೊರೊನಾ ಪೀಡಿತರ ಸಂಖ್ಯೆ ಭಾರತದಲ್ಲಿ ಮುಂದೆ ಇಟಲಿ, ಸ್ಪೇನ್, ಅಮೆರಿಕಂತೆ ಏರಿಕೆ ಆಗುತ್ತಾ ಅಥವಾ ಕಡಿಮೆ ಆಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ರಾಜ್ಯ ಸರ್ಕಾರದ ಲೆಕ್ಕಾಚಾರವೇನು?: ಈ ವಿಚಾರದ ಬಗ್ಗೆ ಇಂದು ಪರಿಷತ್ತಿನಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, ಜನರು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ರಾಜ್ಯದಲ್ಲಿ 1 ಲಕ್ಷ ಕೊರೊನಾ ಪ್ರಕರಣಗಳು ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

    ಕರ್ನಾಟಕ ಕೊರೊನಾ ಬಗೆ ಖ್ಯಾತ ವೈದ್ಯ ದೇವಿ ಶೆಟ್ಟಿಯವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ 80 ಸಾವಿರ ಮಂದಿಗೆ ಕೊರೊನಾ ಬರಬಹುದು. ಈ ಪೈಕಿ 15 ಜನರಿಗೆ ಮಾತ್ರ ತುರ್ತು ಚಿಕಿತ್ಸೆ ಅಗತ್ಯವಾಗಬಹುದು ಎಂದು ತಿಳಿಸಿದ್ದಾರೆ.

  • ಒಂದು ಆಶೀರ್ವಾದ ಕರ್ನಾಟಕ ಬಂದ್ – ಮೊದಲು ‘ನೋ’ ಎಂದ ಸಿಎಂ ‘ಓಕೆ’ ಎಂದಿದ್ದು ಯಾಕೆ?

    ಒಂದು ಆಶೀರ್ವಾದ ಕರ್ನಾಟಕ ಬಂದ್ – ಮೊದಲು ‘ನೋ’ ಎಂದ ಸಿಎಂ ‘ಓಕೆ’ ಎಂದಿದ್ದು ಯಾಕೆ?

    – ಸರ್ಕಾರದ ಮಹತ್ವದ ಆದೇಶದ ಹಿಂದಿದೆ ಆ ಮೂರು ಕಾರಣ
    – ಕೊರೊನಾ ಕರ್ನಾಟಕ ರೆಡ್ ಅಲರ್ಟ್

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಒಂದು ವಾರದ ಮಟ್ಟಿಗೆ ಕರ್ನಾಟಕ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಒಂದು ವಾರ ಬಂದ್ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣ ಒಂದು ಆಶೀರ್ವಾದವಂತೆ.

    ಕೊರೊನಾ ವೈರಸಿಗೆ ದೇಶದಲ್ಲಿ ಮೊದಲು ಎಂಬಂತೆ ಕಲಬುರಗಿ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಸಿಎಂ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಡಾ. ದೇವಿಶೆಟ್ಟಿ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

    ಸಭೆಯಲ್ಲಿ ಕಲಬರುಗಿ ಪ್ರಕರಣದ ಬಗ್ಗೆ ಚರ್ಚೆ ನಡೆದಾಗ ಆರೋಗ್ಯ ಇಲಾಖೆ ಅಧಿಕಾರಿಗಳು, ಉಮ್ರಾದಿಂದ ಬಂದ ಬಳಿಕ ಕೊರೊನಾ ಸೋಂಕಿತ ವ್ಯಕ್ತಿಯ ಕಾಲನ್ನು ಮುಟ್ಟಿ ಹಲವು ಜನ ಆಶೀರ್ವಾದ ಪಡೆದಿದ್ದಾರೆ. ಮೆಕ್ಕಾ ಮದೀನಾಕ್ಕೆ ಹೋಗಿ ಬಂದ ಕಾರಣ ಸಂಪ್ರದಾಯದಂತೆ ಕಾಲು ಮುಟ್ಟಿ ನಮಸ್ಕರಿಸಿದ್ದರು. ಹೀಗಾಗಿ ಆಶೀರ್ವಾದ ಪಡೆದ ವ್ಯಕ್ತಿಗಳಿಗೂ ಸೋಂಕು ಬಂದಿರುವ ಸಾಧ್ಯತೆಯಿದೆ. ಇದರ ಜೊತೆ ಅವರು ಸಂಪರ್ಕಕ್ಕೆ ಬಂದವರಿಗೂ ಇದು ಬರಬಹುದು ಎನ್ನುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಂದ ಪಡೆದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಂತೆ ಸರ್ಕಾರಕ್ಕೆ ತೀವ್ರತೆಯ ಅರಿವಾಗಿದೆ.

    ಇನ್ನು ಕೇರಳದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಅಲ್ಲಿಯ ಜನ ಕರ್ನಾಟಕಕ್ಕೆ ಬರುವುದರಿಂದ ಸಮಸ್ಯೆ ಜಾಸ್ತಿಯಾಗಬಹುದು ಎಂದು ಸಭೆಯಲ್ಲಿದ್ದ ವೈದ್ಯರು ತಿಳಿಸಿದ್ದಾರೆ. ಇದರ ಜೊತೆ ಕೇಂದ್ರ ಸರ್ಕಾರ ಕಲಬುರಗಿ ಪ್ರಕರಣವನ್ನು ಆರೋಗ್ಯ ಇಲಾಖೆ ನಿರ್ಲಕ್ಷ್ಯಸಿದ್ದಕ್ಕೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ವ್ಯಕ್ತಿಯಿಂದ ಅರ್ಶೀವಾದ ಪಡೆದವರ ಎಲ್ಲರ ವಿವರ ಕಲೆಹಾಕಿ ಗೃಹಬಂಧನದಲ್ಲಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಓದಿ: ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ

    ಈ ನಡುವೆ ರಾಜ್ಯದ ಬೆಂಗಳೂರಿನಲ್ಲೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇವಿಶೆಟ್ಟಿ ಸೇರಿದಂತೆ ಹಲವು ವೈದ್ಯರು, ಒಂದು ವಾರಗಳ ಕಾಲ ಸಾರ್ವಜನಿಕವಾಗಿ ಜನ ಹೆಚ್ಚು ಸೇರದಂತೆ ಮಾಡಬೇಕು. ಹೀಗಾಗಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ.

    ಬಂದ್ ಸಲಹೆ ಕೇಳಿ ಸಿಎಂ ಯಾವುದೇ ಕಾರಣ ಬಂದ್ ಮಾಡಲು ಆದೇಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಕಲಬುರಗಿ ವ್ಯಕ್ತಿಯಿಂದ ಆಶೀರ್ವಾದ ಪಡೆದ ವ್ಯಕ್ತಿಗಳಿಂದ ಮತ್ತಷ್ಟು ಜನರಿಗೆ ಸೋಂಕು ಹರಡಿದರೆ ನಿಯಂತ್ರಣ ಮಾಡಲು ಯಾರಿಂದಲೂ ಸಾಧ್ಯವೇ ಇಲ್ಲ. ಇದು ಬಹಳ ಕಷ್ಟವಾಗುತ್ತದೆ ಎಂದು ಹೇಳಿದಾಗ ಸಿಎಂ ಶಾಕ್ ಆಗಿದ್ದಾರೆ. ವಿಶ್ವದ ವಿವಿಧ ದೇಶಗಳಿಗೆ ಕೊರೊನಾ ಬಂದಿದ್ದು ಹೇಗೆ? ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ತಿಳಿಸಿದಾಗ ಸಿಎಂ ಒಂದು ವಾರ ಕಾಲ ಬಂದ್ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದರು ಎನ್ನುವ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ದೇವಿ ಶೆಟ್ಟಿ ಮನೆಯಲ್ಲಿ ಕಳ್ಳತನ – ಇಬ್ಬರು ಕಳ್ಳಿಯರು ಅರೆಸ್ಟ್

    ದೇವಿ ಶೆಟ್ಟಿ ಮನೆಯಲ್ಲಿ ಕಳ್ಳತನ – ಇಬ್ಬರು ಕಳ್ಳಿಯರು ಅರೆಸ್ಟ್

    ಬೆಂಗಳೂರು: ಖ್ಯಾತ ವೈದ್ಯ ಹಾಗೂ ನಾರಾಯಣ ಹೃದಯಾಲಯ ಸಂಸ್ಥಾಪಕ ಡಾ.ದೇವಿ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಗೆಲಸದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ.

    ಮನೆಗೆಲಸ ಮಾಡುತ್ತಿದ್ದ ದಿವ್ಯಾ ಹಾಗೂ ಅನುಪಮಾ ದೇವಿ ಬಂಧಿತ ಆರೋಪಿಗಳು. ದೇವಿ ಶೆಟ್ಟಿಯವರ ಮಗ ಅನೀಶ್ ಶೆಟ್ಟಿಯವರಿಗೆ ಸೇರಿದ ಕೋರಮಂಗಲದಲ್ಲಿರುವ ಮನೆಯಿಂದ ಚಿನ್ನಾಭರಣ ಹಾಗೂ ವಜ್ರದ ಅಭರಣಗಳನ್ನು ಕಳ್ಳತನ ಮಾಡಿದ್ದಾರೆ.

    ಅನುಪಮಾ ಹಾಗೂ ದಿವ್ಯ ದೇವಿ ಶೆಟ್ಟಿಯವರ ಮನೆಯಲ್ಲಿ ಕೆಲಸಕ್ಕೆ ಇದ್ದರು. ಆದರೆ ಇತ್ತಿಚಿಗೆ ಇಬ್ಬರೂ ಒಮ್ಮೆಲೇ ಮನೆಗೆಲಸ ಬಿಟ್ಟಿದ್ದರು. ಕೆಲದ ಬಿಡುವ ಸಮಯದಲ್ಲೇ ಅನೀಶ್ ಶೆಟ್ಟಿಯವರ ರೂಂನಲ್ಲಿದ್ದ ಕಬೋರ್ಡ್ ನಲ್ಲಿನ ಚಿನ್ನಾಭರಣ ಹಾಗೂ ವಜ್ರದ ಆಭರಣಗಳು ಕಳ್ಳತನವಾಗಿತ್ತು.

    ಈ ಸಂಬಂಧ ಅಕ್ಟೋಬರ್ 31ರಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

    ಅಕ್ಟೋಬರ್ 26ರಂದು ಬೆಳಗ್ಗೆ 9 ಗಂಟೆಗೆ ನಮ್ಮ ಬಾಸ್(ದೇವಿ ಶೆಟ್ಟಿ) ಮಗ ಅನೀಶ್ ಶೆಟ್ಟಿ ಅವರ ರೂಂ ಕಬೋರ್ಡ್‍ನಲ್ಲಿ ಇದ್ದ ಗೋಲ್ಟ್ ಪೆಂಡೆಂಟ್, ಕೊಲಂಬಿಯಾದ ಸ್ಮಾಲ್ ಎಮೆರಾಲ್ಡ್ ಸ್ಟೋನ್, ಆ್ಯಂಕ್ಲೆಟ್ ವೆಡ್ಡಿಂಗ್, ಬ್ರಾಸ್‍ಲೆಟ್ ವಿತ್ ರೂಬಿ ಆ್ಯಂಡ್ ಎಮೆರಾಲ್ಡ್, ಕ್ಲಾ ಪೆಂಡೆಂಟ್ ವಿತ್ ಚೈನ್, ಗಂಜಂ ಬ್ರಾಸ್‍ಲೆಟ್, ಮದುವೆಯ ಬಂಗಾರದ ಉಂಗುರ, ನಿಶ್ಚಿತಾರ್ಥದ ಬಂಗಾರದ ಉಂಗುರ, ಬಂಗಾರದ ಕಿವಿಯೋಲೆ, ನೆಕ್ಲೆಸ್ ಮತ್ತು ಕಿವಿಯೋಲೆ ಸೆಟ್, ಬಂಗಾರದ ಕಿಯೋಲೆಗಳು, ಪೆಂಡೆಂಟ್ ಹೊಂದಿದ್ದ ಚೈನ್ ಹಾಗೂ ವಜ್ರದ ನ್ರಾಸ್‍ಲೆಟ್ ಸೇರಿದಂತೆ ಚಿನ್ನದ ಮತ್ತು ವಜ್ರದ ಆಭರಣಗಳು ಕಾಣೆಯಾಗಿದೆ. ಮನೆಗೆಲಸಕ್ಕೆ ಇದ್ದ ದಿವ್ಯಾ ಮತ್ತು ಅನುಪಮಾ ಕಳ್ಳತನ ಮಾಡಿರಬಹುದೆಂದು ಅನುಮಾನವಿದ್ದು, ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಬೇಕೆಂದು ದೂರು ನೀಡಲಾಗಿತ್ತು.