Tag: ದೇವಾಸ್ಥಾನ

  • ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ ಚರಂಡಿ ನೀರು- ಭಕ್ತರ ಪರದಾಟ

    ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ ಚರಂಡಿ ನೀರು- ಭಕ್ತರ ಪರದಾಟ

    ಧಾರವಾಡ: ಯಾರದೋ ತಪ್ಪಿಗೆ ಇಲ್ಲಿ ಯಾರೋ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ. ಹೌದು, ಧಾರವಾಡದ ಶೆಟ್ಟರ ಕಾಲೋನಿಯಲ್ಲಿ ಆಂಜನೇಯ ದೇವಸ್ಥಾನಕ್ಕೆ ಚರಂಡಿ ನೀರು ನುಗ್ಗಿ ಭಕ್ತರು ತೊಂದರೆ ಅನುಭವಿಸುವಂತಾಗಿದೆ.

    ದೇವಸ್ಥಾನಕ್ಕೆ ಚರಂಡಿ ನೀರು ಹರಿದು ಬಂದಿರುವುದರಿಂದ ಆ ಬಡಾವಣೆಯ ಜನರು ಹಾಗೂ ದೇವಸ್ಥಾನದವರು ಬೇಸತ್ತು ಹೋಗಿದ್ದಾರೆ. ಬಿಆರ್ ಟಿಎಸ್ ರಸ್ತೆ ಕಾಮಗಾರಿ ಯೋಜನೆಯಿಂದಾಗಿ ಚರಂಡಿ ನೀರು ಹರಿಬರುತ್ತಿದೆ ಅಂತ ಭಕ್ತರು ಆರೋಪಿಸಿದ್ದಾರೆ.

    ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಮಳೆಯಾದಾಗೊಮ್ಮೆ ಚರಂಡಿ ನೀರು ದೇವಸ್ಥಾನದಲ್ಲೇ ನುಗ್ಗಿದೆ. ಈ ವಿಚಾರವನ್ನು ರಸ್ತೆ ಕಾಮಗಾರಿ ಮಾಡುವವರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ.

    ಮಹಾನಗರ ಪಾಲಿಕೆಗಂತೂ ಏನ್ ಹೇಳೋದು. ಅವರು ಯಾವತ್ತೂ ಇತ್ತ ಬರುವುದೇ ಇಲ್ಲ. ಪಾಲಿಕೆಗೆ ಹೇಳಿದರೆ ರಸ್ತೆ ಕಾಮಗಾರಿಯವರ ಹೆಗಲಿಗೆ ಹಾಕುತ್ತಾರೆ. ಅಲ್ಲದೇ ದೇವಸ್ಥಾನದ ಭಕ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

  • ಯದುವಂಶಕ್ಕೆ ಉತ್ತರಾಧಿಕಾರಿ ಬಂದ ಖುಷಿಯಲ್ಲಿ ರಾಜವಂಶಸ್ಥರಿಂದ ದೇವಾಲಯಗಳಿಗೆ ಭೇಟಿ

    ಯದುವಂಶಕ್ಕೆ ಉತ್ತರಾಧಿಕಾರಿ ಬಂದ ಖುಷಿಯಲ್ಲಿ ರಾಜವಂಶಸ್ಥರಿಂದ ದೇವಾಲಯಗಳಿಗೆ ಭೇಟಿ

    ಮೈಸೂರು: ಯದುವಂಶಕ್ಕೆ ಉತ್ತರಾಧಿಕಾರಿ ಬಂದ ಖುಷಿಯಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಅರಮನೆಯ ಕೋಟೆಗೆ ಹೊಂದಿಕೊಂಡಿರುವ ಕೋಟೆ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಕೋಟೆ ಮಾರಮ್ಮನಿಗೆ ಹಾಲೆರೆಯುವ ಮೂಲಕ ಯದುವೀರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ದೇವರ ಆಶೀರ್ವಾದದಿಂದ ಯದುವಂಶಕ್ಕೆ ಉತ್ತರಾಧಿಕಾರಿ ಸಿಕ್ಕಿದ್ದಾನೆ. ಈ ಸಂಭ್ರಮದ ಜೊತೆಗೆ ರಾಜ್ಯದ ಜನತೆಗೆ ದೇವಿ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಲು ಕೋಟೆ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದೇನೆ ಎಂದು ಯುದುವೀರ್ ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಯದುವೀರ್ ಎಲ್ಲ ದೇವಾಲಯಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲೇ ಯುವರಾಜನ ನಾಮಕರಣ- ಯದುವೀರ್ ಒಡೆಯರ್