Tag: ದೇವಸ್ಥಾನ

  • ಕಡೂರಿನಲ್ಲಿ ಸಿಡಿಲು ಬಡಿದು ಓರ್ವ ಸಾವು – ನಾಲ್ವರಿಗೆ ಗಾಯ

    ಕಡೂರಿನಲ್ಲಿ ಸಿಡಿಲು ಬಡಿದು ಓರ್ವ ಸಾವು – ನಾಲ್ವರಿಗೆ ಗಾಯ

    ಚಿಕ್ಕಮಗಳೂರು: ಸಿಡಿಲು ಬಡಿದು (Lightning Strike) ಓರ್ವ ಯುವಕ ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಜಿಲ್ಲೆಯ ಕಡೂರು (Kaduru) ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ.

    ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಗಂಜಿಗೆರೆ ಗ್ರಾಮದ ಮುಕೇಶ್‌(28) ಮೃತಪಟ್ಟ ಯುವಕ. ಸಂಬಂಧಿಕರ ಮಗುವಿನ ಮಂಡೆ ಹರಕೆ ತೀರಿಸಲು ಯಗಟಿಪುರ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಕರ ಜೊತೆಗೆ ಬಂದಿದ್ದ ಮುಕೇಶ್ ದೇವಸ್ಥಾನದವರು ನೀಡಿದ ರೂಮಿನಲ್ಲಿ ಉಳಿದುಕೊಂಡಿದ್ದರು. ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ದೋಖಾ – ಲವ್ ಜಿಹಾದ್‌ಗೆ ಯತ್ನಿಸಿದ ಮುಸ್ಲಿಂ ಯುವಕನಿಂದ ಯುವತಿ ಬಚಾವ್

    ದೇವರ ದರ್ಶನ ಪಡೆದ ನಂತರ ಊರಿಗೆ ವಾಪಸ್ಸಾಗಲು ಮುಂದಾದಾಗ ಜೋರಾಗಿ ಮಳೆ ಬಂದಿದೆ. ರೂಮಿನ ಹೊರಗೆ ಕಾಯುತ್ತ ನಿಂತಿದ್ದ ಸಮಯದಲ್ಲಿ ಸಿಡಿಲು ಬಡಿದಿದೆ.

    ತೀವ್ರ ಅಸ್ವಸ್ಥಗೊಂಡ ಮುಕೇಶ್‌ ಅವರನ್ನು ಮೊದಲು ಯಗಟಿ ಆಸ್ಪತ್ರೆಗೆ ನಂತರ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಎರಡೂವರೆ ವರ್ಷದ ಹಿಂದೆ ಕಾವ್ಯ ಅವರನ್ನು ಮುಕೇಶ್‌ ಮದುವೆಯಾಗಿದ್ದರು.

     

    ಮುಕೇಶ್ ಜೊತೆಯಲ್ಲಿದ್ದ ಶೃತಿ ಎಂಬುವರ ಕಾಲಿಗೂ ಸಿಡಿಲು ಬಡಿದಿದೆ. ಸಂಕೇತ್ ಎಂಬುವವರ ಹೊಟ್ಟೆ ಭಾಗಕ್ಕೆ, ಸುದೀಪ್ ಎಂಬುವರ ದೇಹದ ಕೆಳಭಾಗ ಮತ್ತು ನಾಗಾರ್ಜುನ ಎಂಬುವವರ ದೇಹದ ಎಡಭಾಗಕ್ಕೆ ಸಿಡಿಲು ಬಡಿದು ಗಾಯಗಳಾಗಿವೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸುದೀಪ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿನ ಹೊಡೆತಕ್ಕೆ ದೇವಸ್ಥಾನದ ವಸತಿ ಗೃಹಗಳ ವಿದ್ಯುತ್ ವಯರ್‌ಗಳು ಸುಟ್ಟು ಹೋಗಿವೆ. ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

    ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

    ವಿಲ್ಲುಪುರಂ: ವೈಕಾಸಿ ಹಬ್ಬದ ವೇಳೆ ದಲಿತರನ್ನ (Dalits) ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದೆ ತಾರತಮ್ಯ ಎಸಲಾಗಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆ ತಮಿಳುನಾಡಿನ (Tamil Nadu) ವಿಲ್ಲುಪುರಂ (Villupuram) ಜಿಲ್ಲೆಯ ವೀರನಂಪಟ್ಟಿಯ ಕಾಳಿಯಮ್ಮನ ದೇವಸ್ಥಾನವನ್ನು (Kaliamman Temple) ತಾತ್ಕಾಲಿಕವಾಗಿ ಮುಚ್ಚಲಾಗಿದೆ.

    ಕಾಳಿಯಮ್ಮನ್ ದೇವಾಲಯವು ಈ ಭಾಗದಲ್ಲಿ ಪ್ರಸಿದ್ದಿಯಾಗಿದ್ದು, ಇಲ್ಲಿ ಕಾಳಿ ದೇವಿಯ ಮರದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು ಪ್ರತಿ ವರ್ಷ ತಮಿಳುನಾಡು ಮತ್ತು ಪುದುಚೇರಿಯ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ವೈಕಾಸಿ ಹಬ್ಬದ ಪ್ರಯುಕ್ತ ಸುತ್ತಲಿನ ಎಂಟು ಗ್ರಾಮಗಳ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಹುಲ್ ಮೊಹಬ್ಬತ್ ಹಿಂದೂ ಜೀವನ ಶೈಲಿಯನ್ನು ಖಂಡಿಸುತ್ತದೆಯೇ? : ಸ್ಮೃತಿ ಇರಾನಿ

    ಈ ಭಾಗದಲ್ಲಿ 80 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಈ ಪೈಕಿ ಕೆಲವು ಕುಟುಂಬಗಳು ದೇವಸ್ಥಾನದಲ್ಲಿ ನಮಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಮತ್ತು ವೈಕಾಶಿ ಉತ್ಸವದಲ್ಲಿ ಭಾಗವಹಿಸಲು ಸಹ ಅನುಮತಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿವೆ. ತಾರತಮ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

    ಪ್ರತಿಭಟನೆ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಕಡವೂರು ತಹಶಿಲ್ದಾರ್ ಮುನಿರಾಜ್ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿದರು. ಸೌಹಾರ್ದಯುತ ಮಾತುಕತೆಗೆ ಒಪ್ಪದ ಹಿನ್ನಲೆ ಪರಿಹಾರ ಸಿಗುವವರೆಗೆ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಘೋಷಿಸಲಾಗಿದೆ. ದೇವಸ್ಥಾನ ಯಾವಾಗ ತೆರೆಯಬಹುದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    ಕಳೆದ ಎಪ್ರಿಲ್‌ನಿಂದ ಪ್ರಬಲ ಜಾತಿ ಮತ್ತು ದಲಿತರ ನಡುವೆ ಜಗಳ‌ ಹೆಚ್ಚುತ್ತಿದ್ದು, ತಮ್ಮ‌ ಮೇಲೆ ಶೋಷಣೆಯಾಗುತ್ತಿದೆ ಎಂದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಆರೋಪಿಸುತ್ತಿವೆ.

  • ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?

    ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?

    ಹಿಂದೂ ದೇವಾಲಯಕ್ಕೆ (Temple) ಭೇಟಿ ನೀಡಿದರು ಎನ್ನುವ ಕಾರಣಕ್ಕಾಗಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿಖಾನ್ ಅವರನ್ನು ಕೆಲ ಸಂಪ್ರದಾಯವಾದಿಗಳು ತರಾಟೆಗೆ ತಗೆದುಕೊಂಡಿದ್ದರು. ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದು ಟೀಕಿಸಿದ್ದರು. ಪದೇ ಪದೇ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿಸಿದ್ದರು. ಇಂಥವರಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಸಾರಾ.

    ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿಚಾರವಾಗಿ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಸರಿಯಾಗಿಯೇ ಮಾತಿನ ಪೆಟ್ಟು ಕೊಟ್ಟಿರುವ ಸಾರಾ, ನೀವು ಎಷ್ಟೇ ಟ್ರೋಲ್ ಮಾಡಿದರೂ ನಾನು ಪದೇ ಪದೇ ದೇವಸ್ಥಾನಕ್ಕೆ ಹೋಗುತ್ತಲೇ ಇರುತ್ತೇನೆ ಎಂದಿದ್ದಾರೆ. ಇಂತಹ ಟ್ರೋಲ್ ಗಳಿಗೆ ಕೇರ್ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ನಾನು ಎಲ್ಲಿಗೆ ಹೋಗಬೇಕು ಅಥವಾ ಹೋಗಬಾರದು ಎಂದು ನಿರ್ಧರಿಸೋಕೆ ನೀವ್ಯಾರು ಎಂದು ಸಾರಾ ಮರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್

    ಸಾರಾ ಅಲಿ ಖಾನ್ (Sara Ali Khan) ಮೊನ್ನೆ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Ujjain Mahakaleshwar) ಭೇಟಿ ನೀಡಿದ್ದರು. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ತಮ್ಮ ಚಿತ್ರಕ್ಕೆ ಗೆಲುವು ತಂದುಕೊಡುವಂತೆ ಅವರು ಪ್ರಾರ್ಥಿಸಿದ್ದರು. ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಹೀಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಕೇದಾರನಾಥಕ್ಕೆ ಹೋಗಿದ್ದರು.

     

    ಸಾರಾ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರೋದ್ದಕ್ಕೆ ಕೆಲವರು ತಕರಾರು ತೆಗೆದು, ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದರು. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇಂಥವರಿಗೆ ತಿರುಗೇಟು ನೀಡಿ ತಮ್ಮ ಪಾಡಿಗೆ ತಾವು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ.

  • ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ದೇವಸ್ಥಾನಕ್ಕೆ ಮಹಿಳೆಯರು ಯಾವ ರೀತಿ ಬರಬೇಕು ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಪಾಠ ಮಾಡಿದ್ದಾರೆ. ದೇವಸ್ಥಾನಕ್ಕೆ ಹುಡುಗಿಯೊಬ್ಬಳು ತುಂಡುಡುಗೆ ಧರಿಸಿಕೊಂಡು ಬಂದಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ದೇವಸ್ಥಾನಕ್ಕೆ (Temple) ಬರುವಾಗ ಸಭ್ಯ ರೀತಿಯ ಬಟ್ಟೆಗಳನ್ನು (Costume) ಧರಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.

    ತುಂಡುಡುಗೆ ಧರಿಸಿಕೊಂಡು ದೇವಸ್ಥಾನಕ್ಕೆ ಬರುವವರನ್ನು ಮೂರ್ಖರು ಎಂದು ಜರಿದಿರುವ ಕಂಗನಾ, ಧಾರ್ಮಿಕ ಸ್ಥಳಕ್ಕೆ ಬರುವವರ ವೇಷಭೂಷಣದ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದರ ಜೊತೆಗೆ ವ್ಯಾಟಿಕನ್ ಗೆ ಹೋಗಿದ್ದಾಗ ತಮಗಾದ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ.ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ‘ನಾನು ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ವ್ಯಾಟಿಕನ್ ಸಿಟಿಗೆ ಹೋಗಿದ್ದೆ. ನನಗೆ ಆವರಣದ ಒಳಗೂ ಬಿಡಲಿಲ್ಲ. ನಂತರ ಹೋಟೆಲ್ ವೊಂದಕ್ಕೆ ಹೋಗಿ ಬಟ್ಟೆ ಬದಲಿಸಿಕೊಂಡು ಹೋಗಬೇಕಾಯಿತು’ ಎಂದಿದ್ದಾರೆ ಕಂಗನಾ. ರಾತ್ರಿ ಧರಿಸುವಂತ ಬಟ್ಟೆಗಳನ್ನು ಸೋಮಾರಿಗಳು ಎಲ್ಲಲ್ಲೂ ಬಳಸುತ್ತಾರೆ ಎಂದು ಟೀಕಿಸಿದ್ದಾರೆ.

    ದೇವಸ್ಥಾನದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿಕೊಂಡು ಬರಬೇಕು ಎನ್ನುವ ಅರಿವು ಕೂಡ ಜನರಿಗೆ ಇರಬೇಕು. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೆನಪಿಸಿಕೊಂಡು ಅದಕ್ಕೆ ಒಪ್ಪಬಹುದಾದ ಬಟ್ಟೆಗಳನ್ನು ಧರಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.

  • ದೇಗುಲದ ಗರ್ಭಗುಡಿಯವರೆಗೂ ಹರಿದ ರಕ್ತ- ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರಲ್ಲಿ ಆತಂಕ

    ದೇಗುಲದ ಗರ್ಭಗುಡಿಯವರೆಗೂ ಹರಿದ ರಕ್ತ- ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರಲ್ಲಿ ಆತಂಕ

    ಚಿಕ್ಕಬಳ್ಳಾಪುರ: ಕಿಡಿಗೇಡಿಗಳು ದೇವಾಲಯದೊಳಗೆ ರಕ್ತ ಸುರಿದಿರುವ ಪ್ರಕರಣವೊಂದು ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

    ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿರುವ ಬ್ಯಾಟರಾಯಸ್ವಾಮಿ (Byatarayaswamy Temple) ದೇವಾಲಯದೊಳಗೆ ರಕ್ತ ಸುರಿಯುವ ಮೂಲಕ ವಿಕೃತಿ ಮೆರೆಯಲಾಗಿದೆ. ದೇವರ ಗರ್ಭಗುಡಿಯವರೆಗೂ ರಕ್ತ ಹರದಿದ್ದು, ದೇವಾಲಯವೆಲ್ಲವೂ ರಕ್ತ ಸಿಕ್ತವಾಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಕಿಡಿಗೇಡಿಗಳ ಕೃತ್ಯಕ್ಕೆ ಮಳಮಾಚನಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ಬಸ್‌ಗೆ ಟಿಟಿ ಡಿಕ್ಕಿ – ಇಬ್ಬರು ಸಾವು, ನಾಲ್ವರಿಗೆ ಗಾಯ

     

  • ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

    ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

    ಭುವನೇಶ್ವರ: ಕಳ್ಳನೊಬ್ಬ ದೇಗುಲದಿಂದ ಆಭರಣ (Ornaments) ಗಳನ್ನು ಕದ್ದು ಬರೋಬ್ಬರಿ 9 ವರ್ಷಗಳ ಬಳಿಕ ಅದನ್ನು ವಾಪಸ್ ಮಾಡಿದ ಪ್ರಸಂಗವೊಂದು ಭುವನೇಶ್ವರದ ಹೊರವಲಯದಲ್ಲಿರುವ ಗೋಪಿನಾಥಪುರದಲ್ಲಿ ನಡೆದಿದೆ.

    ಹೌದು. ಕಳ್ಳನೊಬ್ಬ ದೇವಸ್ಥಾನದಿಂದ ಕೆಲವು ಆಭರಣಗಳನ್ನು ಕದಿದ್ದನು. ಇದಾದ 9 ವರ್ಷಗಳ ನಂತರ ಇದೀಗ ಆತ ಕದ್ದ ಮಾಲನ್ನು ಹಿಂದಿರುಗಿಸಿದ್ದಾನೆ. ಈ ಘಟನೆಯ ನಂತರ ಇದೀಗ ದೇಗುಲದ ಸ್ಥಳೀಯ ನಿವಾಸಿಗಳಲ್ಲಿ ದೇವರ ಮೇಲಿದ್ದ ಭಕ್ತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಕಳ್ಳನು ದೇವಾಲಯದ ಅರ್ಚಕನಿಗೆ 200 ರೂಪಾಯಿಯ ದಕ್ಷಿಣೆ (ದೇಣಿಗೆ) ಮತ್ತು ಮಾಡಿದ ತಪ್ಪಿಗೆ ದಂಡವಾಗಿ 100 ರೂಪಾಯಿಯನ್ನು ಸಹ ಬಿಟ್ಟು ಹೋಗಿದ್ದಾನೆ.

    ವರದಿಗಳ ಪ್ರಕಾರ, 2014 ರಲ್ಲಿ ಗೋಪಿನಾಥಪುರ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಯಜ್ಞದ ವೇಳೆ ಅರ್ಚಕರು ಸಮೀಪದ ದೇವಸ್ಥಾನಕ್ಕೆ ಹೋಗಿದ್ದಾಗ  ಕಳ್ಳರು ರಾಧಾ-ಕೃಷ್ಣರ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದರು ಎಂದು ಸ್ಥಳೀಯ ನಿವಾಸಿ ಶಶಿಭೂಷಣ ಮೊಹಾಂತಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದು ಹತ್ಯೆ

    ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಇತ್ತ ಎಲ್ಲಾ ಕಡೆ ಹುಡುಕಿದರೂ ಗ್ರಾಮಸ್ಥರಿಗೆ ಕಳ್ಳನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೆ ಕಳ್ಳತನವಾದ ಆಭರಣಗಳು ಕೂಡ ಪತ್ತೆಯಾಗಲಿಲ್ಲ. ಹೀಗಾಗಿ ಕಳವಾದ ಸೊತ್ತನ್ನು ಮರಳಿ ಪಡೆದೇ ಪಡೆಯುತ್ತೇವೆ ಎಂದು ಗ್ರಾಮದ ಜನ ನಂಬಿದ್ದರು. ಇದೀಗ ದೇಗುಲದ ಆಭರಣಗಳನ್ನು ವಾಪಸ್ ಪಡೆದಿರುವುದು ಪವಾಡ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

     

  • ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?: ಹೊಸ್ತಿಲ ಹೊರಗೆ ನಿಂತು ರಾಹುಲ್ ಪ್ರಶ್ನೆ

    ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?: ಹೊಸ್ತಿಲ ಹೊರಗೆ ನಿಂತು ರಾಹುಲ್ ಪ್ರಶ್ನೆ

    ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಉಡುಪಿ (Udupi) ಭೇಟಿಯ ವೇಳೆ ಅಚ್ಚರಿಯ ಘಟನೆ ಒಂದು ನಡೆಯಿತು. ವೇದಿಕೆಯಲ್ಲಿ ನಾನು ಮೀನು (Fish) ಮುಟ್ಟಿದ್ದೇನೆ, ದೇಗುಲದ ಒಳಗೆ ಬರಬಹುದೇ? ಎಂದು ಸುಮಾರು ಹೊತ್ತು ಹೊಸ್ತಿಲ ಹೊರಗೆ ರಾಹುಲ್ ಗಾಂಧಿ ನಿಂತು ಪ್ರಶ್ನೆ ಮಾಡಿದ್ದಾರೆ.

    ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ (Temple) ಸಭಾಂಗಣದಲ್ಲಿ ಸಂವಾದದ ವೇಳೆ ರಾಹುಲ್ ಗಾಂಧಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ (Congress) ದೊಡ್ಡ ಗಾತ್ರದ ಅಂಜಲ್ ಮೀನೊಂದನ್ನು ಗಿಫ್ಟ್‌ ಆಗಿ ಕೊಟ್ಟಿತ್ತು. ಈ ಮೀನನ್ನು ಎತ್ತಿ ಖುಷಿ ಪಟ್ಟ ರಾಹುಲ್ ಮೀನುಗಾರ ಮಹಿಳೆಯ ಜೊತೆ ಆತ್ಮೀಯವಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದರು.

    ಇದಾದ ಬಳಿಕ ನೇರ ಮಹಾಲಕ್ಷ್ಮಿ ದೇಗುಲಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ. ಈ ವೇಳೆ ಮೀನನ್ನು ಕೈಯಲ್ಲಿ ಹಿಡಿದಿದ್ದ ರಾಹುಲ್ ನಾನಿನ್ನು ಕೈ ತೊಳೆದಿಲ್ಲ ಎಂದು ನೀರಿಗಾಗಿ ಹುಡುಕಾಡಿದರು. ದೇವಸ್ಥಾನದ ಒಳಗೆ ಬರಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಸುತ್ತಮುತ್ತ ಇದ್ದ ಕಾಂಗ್ರೆಸ್ ನಾಯಕರು ಮೊಗವೀರ ಮುಖಂಡರು ಯಾವುದೇ ಅಭ್ಯಂತರ ಇಲ್ಲ ತಾವು ಒಳಗೆ ಬನ್ನಿ ಎಂದಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ

    ಆದರೂ ರಾಹುಲ್ ಗಾಂಧಿ ಕೆಲಕಾಲ ಹೊಸ್ತಿಲ ಹೊರಗೆ ನಿಂತು ಆಲೋಚನೆ ಮಾಡಿದ್ದಾರೆ. ನೀರು, ನೀರು ಎಂದು ಕೈಕೈ ಉಜ್ಜಿಕೊಂಡಿದ್ದಾರೆ. ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭಗುಡಿಯ ಪಕ್ಕ ತೆರಳದೇ, ಪ್ರಾಂಗಣದಲ್ಲೇ ನಿಂತು ವಿಶೇಷ ಪೂಜೆ ಸಲ್ಲಿಕೆ ಮಾಡಿದ ಅವರು, ಪ್ರಸಾದ ಸ್ವೀಕಾರ ಮಾಡಿದ್ದಾರೆ. ಅಲ್ಲೂ ಪ್ರಸಾದ ಸ್ವೀಕರಿಸಬಹುದೇ ಎಂದು ತಡವರಿಸಿದ್ದಾರೆ.

    ಪ್ರಧಾನ ಅರ್ಚಕರು ರಾಹುಲ್ ಗಾಂಧಿ ಅವರಿಗೆ ಆಯುಷ್ಯ ಆರೋಗ್ಯ ಭಾಗ್ಯ ಕರುಣಿಸಲಿ. ಸತ್ಯ, ನ್ಯಾಯ, ನೀತಿ, ಧರ್ಮದ ಮೂಲಕ ದೇಶ ರಕ್ಷಣೆ ಮಾಡುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿ ಇದೆ. ಭಾರತ ಜೋಡೋ ಎಂಬ ದೊಡ್ಡ ಕಾರ್ಯಕ್ರಮವನ್ನು ತಾವು ಮಾಡಿದ್ದೀರಿ ಎಂದು ದೇವರ ಮುಂದೆ ಪ್ರಾರ್ಥಿಸಿ, ಪ್ರಸಾದವನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಪ್ರಸಾದ ಸ್ವೀಕಾರ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ

  • ದೇವಸ್ಥಾನದ ಮರದ ಕೆಳಗೆ ಮಹಿಳೆ ನಗ್ನ ಫೋಟೋಶೂಟ್ – ಇಂಡೋನೇಷ್ಯಾದಿಂದ ಗಡಿಪಾರು

    ದೇವಸ್ಥಾನದ ಮರದ ಕೆಳಗೆ ಮಹಿಳೆ ನಗ್ನ ಫೋಟೋಶೂಟ್ – ಇಂಡೋನೇಷ್ಯಾದಿಂದ ಗಡಿಪಾರು

    ಜಕಾರ್ತ: ಪ್ರವಾಸಕ್ಕೆ ಬಂದಿದ್ದ ರಷ್ಯಾದ (Russia) ಇನ್ಸ್ಟಾಗ್ರಾಮ್ (Instagram) ತಾರೆಯೊಬ್ಬಳು, ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಗಡಿಪಾರಾಗಿದ್ದಾಳೆ. ಮಹಿಳೆ ನಗ್ನ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿ, ತೀವ್ರ ಪ್ರತಿಭಟನೆಯ ನಂತರ ಇಂಡೋನೇಷ್ಯಾ ಸರ್ಕಾರ ಮಹಿಳೆಯನ್ನು ಗಡಿಪಾರು ಮಾಡಿದೆ.

    ರಷ್ಯಾದ 40ರ ಹರೆಯದ ಮಹಿಳೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದರು. ಬಾಲಿಯ (Bali) ಸುಂದರ ತಾಣಗಳಲ್ಲಿ ಕೆಲ ದಿನಗಳ ಕಾಲ ಕಳೆದ ಕೋಶ್ಯಾಕ್, ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ಆಗಮಿಸಿದ್ದಳು. ಈ ವೇಳೆ ಭಾರೀ ಗಾತ್ರದ ಮರ ಈಕೆಯ ಕಣ್ಣಿಗೆ ಬಿದ್ದಿದೆ. ಇದೇ ಮರದ ಬಳಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಹಲವು ಫೋಟೋಗಳನ್ನು ತೆಗೆಸಿರುವ ಕೋಶ್ಯಾಕ್ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

    ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ, ಬಾಲಿಯ ಹಿಂದೂ ಸಮುದಾಯದ ಜನ ಮಹಿಳೆ ವಿರುದ್ಧ ತಿರುಗಿಬಿದ್ದಿದ್ದಾರೆ. ಬಾಲಿ ಉದ್ಯಮಿ ನಿಲುಡಿಜೆಲಾಂಟಿಕ್ ತಮ್ಮ ಖಾತೆಯಲ್ಲಿ ಮಹಿಳೆಯ ನಗ್ನ ಫೋಟೋವನ್ನ ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿಯನ್ನು ಅಗೌರವಿಸುವ ಎಲ್ಲಾ ವಿದೇಶಿಗರೇ ಗಮನಿಸಿ, ?ಬಾಲಿ ನಮ್ಮ ನೆಲ, ನಿಮ್ಮದಲ್ಲ. ದೇವಸ್ಥಾನದ ಪವಿತ್ರ ಮರದ ಬುಡದಲ್ಲಿ ನಗ್ನ ಚಿತ್ರ ಪ್ರದರ್ಶಿಸಿ ನೀವು ಆರಾಮಾಗಿ ಇಲ್ಲಿ ಕಳೆಯಬಹುದು ಎಂದು ಭಾವಿಸಿದ್ದೀರಾ? ನಮ್ಮ ಸಂಸ್ಕೃತಿ, ಪದ್ಧತಿ, ದೇಶವನ್ನು ಗೌರವಿಸಲು ಸಾಧ್ಯವಿಲ್ಲ ಎಂದಾದರೆ ಹೊರನಡೆಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಿಳೆಯ ಫೋಟೋಶೂಟ್ ಖಂಡಿಸಿ ಬಾಲಿಯ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಕಾರ್ಯಪ್ರವೃತ್ತರಾದ ಇಂಡೋನೇಷ್ಯಾ ಅಧಿಕಾರಿಗಳು, ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮತ್ತೆ ಇಂಡೋನೇಷ್ಯಾ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ತಬನನ್ ದೇವಸ್ಥಾನದ ಆವರಣದಲ್ಲಿರುವ ಈ ಪವಿತ್ರ ಮರ ಸುಮಾರು 700 ವರ್ಷಗಳಷ್ಟು ಹಳೆಯ ಮರವಾಗಿದೆ. ಕಳೆದ ವರ್ಷ ರಷ್ಯಾದ ಯೋಗಪಟು ಇದೇ ಮರದ ಬುಡದಲ್ಲಿ ಫೋಟೋ ತೆಗೆದು ವಿವಾದ ಸೃಷ್ಟಿಸಿದ್ದರು.

  • ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಲಕ್ಷ ಹಣ ಸೀಜ್

    ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಲಕ್ಷ ಹಣ ಸೀಜ್

    ಚಿಕ್ಕಮಗಳೂರು: ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾ ಪರಮೇಶ್ವರಿ (Kateelu Durga Parameshwari) ದೇಗುಲದ ಹುಂಡಿಗೆ ಎಂದು ತೆಗೆದುಕೊಂಡು ಹೋಗುತ್ತಿದ್ದ ಸುಮಾರು 2 ಲಕ್ಷದ 50 ಸಾವಿರ ಹಣವನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ ನಡೆದಿದೆ.

    ಚುನಾವಣಾ ನೀತಿ ಸಂಹಿತೆ (Code Of Conduct) ಹಿನ್ನೆಲೆ ಜಿಲ್ಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಯ ಗಡಿ ಹಂಚಿಕೊಂಡಿರುವ ವಿವಿಧ ಮಾರ್ಗದಲ್ಲಿ ಒಟ್ಟು 18 ಚೆಕ್‍ಪೋಸ್ಟ್‍ಗಳನ್ನ ನಿರ್ಮಿಸಲಾಗಿದೆ. ಅದರಲ್ಲಿ ಜಿಲ್ಲೆಯ ಮೂಡಿಗೆರೆಯಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ (Charmadi Ghat) ಸಮೀಪದ ಕೊಟ್ಟಿಗೆಹಾರದ ಬಳಿಯೂ ಚೆಕ್‍ಪೊಸ್ಟ್ ನಿರ್ಮಿಸಲಾಗಿದೆ.

    ಉಡುಪಿ-ಮಂಗಳೂರು (Udupi- Mangaluru) ಹೋಗುವವರು ಹೆಚ್ಚಾಗಿ ಈ ಮಾರ್ಗವನ್ನ ಬಳಸುತ್ತಾರೆ. ಆದರೆ ಇದೇ ಮಾರ್ಗದಲ್ಲಿ ತುಮಕೂರು ಜಿಲ್ಲೆ ಪಾವಗಡ ಮೂಲದ ವೈದ್ಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಹುಂಡಿಗೆಂದು ತೆಗೆದುಕೊಂಡು ಹೋಗುತ್ತಿದ್ದ ಹಣವನ್ನ ವಾಹನವನ್ನ ತಪಾಸಣೆ ವೇಳೆ ಸಿಕ್ಕಿದ ಎರಡೂವರೆ ಲಕ್ಷ ಹಣವನ್ನ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ, ದಶಪಥ ಹೆದ್ದಾರಿ ದೊಡ್ಡ ಶಕ್ತಿ – ಪ್ರತಾಪ್ ಸಿಂಹ

    ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಓರ್ವ ವ್ಯಕ್ತಿ ಏಕಕಾಲಕ್ಕೆ 50 ಸಾವಿರ ಹಣವನ್ನ ಮಾತ್ರ ತೆಗೆದುಕೊಂಡು ಹೋಗಬಹುದು. ವಾಹನ ಅಂತ ಬಂದಾಗಲೂ ಒಂದು ವಾಹನಕ್ಕೆ 50 ಸಾವಿರ ಅಷ್ಟೆ ಅವಕಾಶವಿರೋದು. ಕಾರಿನಲ್ಲಿ ಐದು ಜನ ಇದ್ದೇವೆಂದು ಎಲ್ಲರೂ 50 ಸಾವಿರ ಇಡುವಂತಿಲ್ಲ. ಹಾಗಾಗಿ ಕಾರಿನಲ್ಲಿ ಎರಡೂವರೆ ಲಕ್ಷ ಹಣ ಸಿಕ್ಕಿದ ಹಿನ್ನೆಲೆ ಸೂಕ್ತ ದಾಖಲೆ ಇಲ್ಲದ ಕಾರಣ ಹಣವನ್ನ ಪೊಲೀಸರು ಸೀಜ್ ಮಾಡಿದ್ದಾರೆ.

    ಗುರುವಾರ ಕೂಡ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗುತ್ತಿದ್ದ ರಾಮನಗರ ಮೂಲದ ಭಕ್ತಾದಿಗಳ ಬಳಿಯೂ ಒಂದು ಲಕ್ಷ ಹಣವಿತ್ತು. ಅದನ್ನು ಕೂಡ ಪೊಲೀಸರು ಇದೇ ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ಸೂಕ್ತ ದಾಖಲೆ ಇಲ್ಲದ ಕಾರಣ ಸೀಜ್ ಮಾಡಿದ್ದರು.

  • EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು

    EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು

    ಬೆಂಗಳೂರು: ಭಕ್ತರು ಕೊಟ್ಟ ಹುಂಡಿ ದುಡ್ಡು ಮೇಲೆ ಬೊಮ್ಮಾಯಿ ಸರ್ಕಾರದ ಕಣ್ಣು ಬಿದ್ದಂತಿದೆ. ಬಿಜೆಪಿ ಶಾಸಕರೊಬ್ಬರು ಮುಕ್ಕಣ್ಣನಿಗೆ ಮೂರು ನಾಮ ಹಾಕಲು ಹೊರಟಿರುವುದು ಬಯಲಾಗಿದೆ. ಚುನಾವಣೆ (Karnataka Election 2023) ಯ ಹೊಸ್ತಿಲಲ್ಲಿ ಜಾತಿರಾಜಕಾರಣದ ಓಲೈಕೆಗಾಗಿ ದೇವರ ದುಡ್ಡಲ್ಲಿ ಸಮುದಾಯ ನಿರ್ಮಾಣಕ್ಕೆ ಸ್ಕೆಚ್ ಅಷ್ಟೇ ಅಲ್ಲ ಶಾದಿ ಮಹಲ್‍ಗೂ ಪ್ರಸ್ತಾಪ ಮಾಡಲಾಗಿದೆ. ಸಿಎಂ ಕೂಡ ಕಣ್ಣು ಮುಚ್ಚಿ ಗ್ರೀನ್ ಸಿಗ್ನಲ್ ನೀಡಿರುವುದು ಬೆಳಕಿಗೆ ಬಂದಿದೆ.

    ಹೌದು. ದೇವರ ಹುಂಡಿ ದುಡ್ಡು, ಅದು ಭಕ್ತರ ನಂಬಿಕೆ ಹರಕೆ. ತಮ್ಮ ನೆಚ್ಚಿನ ದೇವರಿಗಾಗಿ, ದೇವಸ್ಥಾನದ ಉದ್ಧಾರಕ್ಕಾಗಿ ಭಕ್ತರ ಕೊಡುಗೆ. ಆದರೆ ಈ ರಾಜಕೀಯ ನಾಯಕರ ಕಣ್ಣು ಎಲೆಕ್ಷನ್ ಟೈಂನಲ್ಲಿ ಹುಂಡಿಯ ಮೇಲೆಯೂ ಬಿದ್ದಿದೆ. ಈ ಬಗ್ಗೆ ಪಬ್ಲಿಕ್ ಟಿವಿ ದಾಖಲೆ ಸಮೇತ ಸುದ್ದಿ ಬಿಚ್ಚಿಟ್ಟಿದೆ. ಇದನ್ನೂ ಓದಿ: ಬೆಂಗ್ಳೂರು ಮಹಿಳೆಯರಿಗೆ ಗುಡ್‍ನ್ಯೂಸ್- ಇಂದು ದಿನಪೂರ್ತಿ ಬಿಎಂಟಿಸಿನಲ್ಲಿ ಸುತ್ತಾಡ್ಬೋದು

    ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ (BJP MLA Harshavardhan) ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ (Srikanteshwara Temple, Nanjangud) ದ ನಿಧಿಯಲ್ಲಿ ಸಾಕಷ್ಟು ಅನುದಾನವಿದೆ. ಹೀಗಾಗಿ ಈ ದುಡ್ಡು ಬಳಸಿ ಶಾದಿ ಮಹಲ್ ಸೇರಿದಂತೆ ಸಮುದಾಯ ಭವನ ನಿರ್ಮಾಣಕ್ಕಾಗಿ ಸಿಎಂ ಮೊರೆ ಹೋಗಿದ್ದಾರೆ. ಮುಜರಾಯಿ ಇಲಾಖೆ (Muzrai Department) ಕಾಯ್ದೆ ಪ್ರಕಾರ ದೇಗುಲದ ಹುಂಡಿ ದುಡ್ಡನ್ನು ಆ ದೇಗುಲದ ಅಭಿವೃದ್ಧಿಗೆ ಬಳಕೆ ಮಾಡಬೇಕು. ಪಕ್ಕದ ದೇವಸ್ಥಾನಕ್ಕೆ ಕೂಡ ಬಳಕೆ ಮಾಡಬೇಕಾದ್ರೂ ನೂರೆಂಟು ಕಾನೂನು ಇದೆ. ಆದರೆ ಇದು ನೋಡಿ ವಿಪರ್ಯಾಸ. ಕೋಟಿ ಕೋಟಿ ದುಡ್ಡು ಅನುದಾನ ಬಂದ್ರೂ ದೇವಸ್ಥಾನದ ಹುಂಡಿ ದುಡ್ಡಿನ ಮೇಲೆ ಕಣ್ಣು ಹಾಕಿದ್ದಾರೆ. ಹಾಗಿದ್ರೆ ಶಾಸಕ ದೇವರ ದುಡ್ಡಲ್ಲಿ ನಂಜನಗೂಡಿನಲ್ಲಿ ಏನೆನೆಲ್ಲ ಕಾಮಗಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂಬುದನ್ನು ನೋಡೋಣ.

    * ಬಾಬು ಜಗಜೀವನ್ ರಾಮ್ ಸಮುದಾಯ ಭವನ -1 ಕೋಟಿ
    * ಮಡಿವಾಳ ಸಮುದಾಯ ಭವನ – 50 ಲಕ್ಷ
    * ಈಡಿಗ ಸಮುದಾಯ ಭವನ – 70 ಲಕ್ಷ
    * ಸವಿತಾ ಸಮಾಜದವರ ಸಮುದಾಯ ಭವನ – 80 ಲಕ್ಷ
    * ಉಪ್ಪಾರ ಸಮುದಾಯ- 2 ಕೋಟಿ
    * ಪೌರಕಾರ್ಮಿಕರ ಸಮುದಾಯ ಭವನ -1 ಕೋಟಿ
    * ಷಾದಿ ಮಹಲ್ ನಿರ್ಮಾಣ -1 ಕೋಟಿ 50 ಲಕ್ಷ
    * ವಾಲ್ಮೀಕಿ ಭವನ – 50 ಲಕ್ಷ
    * ವಿಶ್ವಕರ್ಮ ಸಮುದಾಯ ಭವನ -30 ಲಕ್ಷ
    * ಕುಂಬಾರ ಸಮುದಾಯ ಭವನ – 30 ಲಕ್ಷ
    * ಒಕ್ಕಲಿಗ, ಗೆಜ್ಜೆಗಾರ ಸಮುದಾಯ , ಗಾಣಿಗರ ಭವನ – ತಲಾ ಮೂವತ್ತು ಲಕ್ಷ

    ದೇವರ ಹುಂಡಿ ದುಡ್ಡಲ್ಲಿ ಕಾಮಗಾರಿಗೆ ಪ್ರಸ್ತಾಪ ಸಲ್ಲಿಸಿದ್ದಾರೆ. ವಿಚಿತ್ರ ಅಂದ್ರೆ ನೇರವಾಗಿ ಸಿಎಂ ಬೊಮ್ಮಾಯಿ (Basavaraj Bommai) ಬಳಿಯೇ ಈ ಫೈಲ್ ಹೋಗಿದ್ದು ಸಿಎಂ, ಶಾದಿ ಮಹಲ್ ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗೂ ಶ್ರೀಕಂಠೇಶ್ವನ ದುಡ್ಡು ಬಳಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಜರಾಯಿ ಕಾನೂನು ಉಲ್ಲಂಘಿಸಿ ಈ ತರಾತುರಿಯಲ್ಲಿ ಸಿಎಂ ಅನುಮತಿ ನೀಡಿದ್ದು ಎಲ್ಲರ ಹುಬ್ಬೇರಿಸಿದೆ. ಭಕ್ತರ ದುಡ್ಡನ್ನು ಹೀಗೆ ಖುಲ್ಲಾಂ ಖುಲ್ಲಾ ದುರ್ಬಳಕೆ ಮಾಡಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ.