Tag: ದೇವಸ್ಥಾನ

  • ದೇವಸ್ಥಾನದ ಎದುರು ಭಿಕ್ಷೆ ಬೇಡೋ ವಿಷ್ಯಕ್ಕೆ ಜಗಳ – ವೃದ್ಧ ಭಿಕ್ಷುಕನಿಗೆ ಚಾಕುವಿನಿಂದ ಇರಿತ

    ದೇವಸ್ಥಾನದ ಎದುರು ಭಿಕ್ಷೆ ಬೇಡೋ ವಿಷ್ಯಕ್ಕೆ ಜಗಳ – ವೃದ್ಧ ಭಿಕ್ಷುಕನಿಗೆ ಚಾಕುವಿನಿಂದ ಇರಿತ

    ಮೈಸೂರು: ಭಿಕ್ಷೆ ಬೇಡೋ ಜಾಗಕ್ಕಾಗಿ ಇಬ್ಬರು ಭಿಕ್ಷುಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ.

    ಸಾಯಿಬಾಬಾ ದೇಗುಲದ ಮುಂಭಾಗ ಭಿಕ್ಷುಕ ಮತ್ತೊಬ್ಬ ಭಿಕ್ಷುಕನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ವೃದ್ಧನ ಬಟ್ಟೆಯೆಲ್ಲ ರಕ್ತಮಯವಾಗಿದ್ದು ಸ್ಥಳೀಯರು ಆಂಬುಲೆನ್ಸ್‍ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಚಾಕು ಹಾಕಿದ ಭಿಕ್ಷುಕನನ್ನು ಕೆ.ಆರ್. ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿ ಸಾವು!

    ಚಿಕ್ಕಮಗಳೂರು: ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ನಡೆದಿದೆ.

    ನವ್ಯಶ್ರೀ (28) ಸಾವನ್ನಪ್ಪಿದ್ದ ಶಿಕ್ಷಕಿ. ಮೂಲತಃ ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಯಾಗಿದ್ದಾರೆ. ಮದುವೆಯಾಗಿ 5 ವರ್ಷವಾಗಿರೋ ನವ್ಯಶ್ರೀಗೆ 10 ತಿಂಗಳ ಮಗು ಕೂಡ ಇದೆ. ಎಂದಿನಂತೆ ನವ್ಯ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ಬಂದಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದಾರೆ. ನಂತರ ಅದೇನಾಯ್ತೋ ಏನೋ ಗೊತ್ತಿಲ್ಲ. ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ನಗರದಲ್ಲಿರೋ ಸಂಜೀವಿನಿ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರೋ ನವ್ಯಶ್ರೀಗೆ ದೇವರು ಎಂದರೆ ಅಪಾರ ಪ್ರೀತಿ-ಗೌರವ. ಶನಿವಾರ ಬೆಳಗ್ಗೆ ಶನಿ ದೇವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಶಾಲೆಗೆ ಬಂದಿದ್ದರು. ಒಂದು ಪಿರಿಯಡ್ ಫ್ರೀ ಇದ್ದ ಕಾರಣ ಶಾಲೆಯ ಪಕ್ಕದಲ್ಲಿರೋ ಸಾಲುಮರದಮ್ಮ ದೇವಸ್ಥಾನಕ್ಕೆ ಸಹಶಿಕ್ಷಕಿಯರ ಜೊತೆ ಹೋಗಿ ಬಂದಿದ್ದಾರೆ. ದೇವಸ್ಥಾನದಿಂದ ಬಂದು ಪೂಜೆ ಮಾಡಿಸಿದ್ದ ತೆಂಗಿನಕಾಯಿ ಚೂರನ್ನ ಎಲ್ಲರಿಗೂ ಹಂಚಿ ತಾನು ಸೇವಿಸಿದ್ದಾರೆ. ಇದನ್ನೂ ಓದಿ: ಇದು ನಿಜಕ್ಕೂ ಆತಂಕ..ಅಚ್ಚರಿ ನ್ಯೂಸ್- ಸೇಬು ತಿಂದ 11 ವರ್ಷದ ಬಾಲಕ ಸಾವು

    ತೆಂಗಿನಕಾಯಿಯ ಚೂರು ತಿನ್ನುತ್ತಿದ್ದಂತೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಶಿಕ್ಷಕರು ಅವರಿಗೆ ನೀರು ಕುಡಿಸಿ, ಎದೆ ಹೊತ್ತುತ್ತಿದಂತೆ ನವ್ಯಶ್ರೀಗೆ ಅನ್ನನಾಳದಲ್ಲಿ ಸಿಲುಕಿದ್ದ ತೆಂಗಿನಕಾಯಿ ಚೂರು ಬಾಯಿಂದ ಹೊರಬಂದಿದೆ. ಆದರೆ ಉಸಿರಿನ ತೊಂದರೆಯಿಂದ ತೀವ್ರವಾಗಿ ಬಳಲುತ್ತಿದ್ದ ನವ್ಯಶ್ರೀಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನವ್ಯಶ್ರೀ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಒಟ್ಟಿನಲ್ಲಿ ತೆಂಗಿನಕಾಯಿ ಚೂರಿನಿಂದ ನವ್ಯಶ್ರೀ ಪ್ರಾಣ ಕಳೆದುಕೊಂಡಿರುವುದು ಮಾತ್ರ ದುರಂತ. ಇದೀಗ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಪುಟ್ಟ ಮಗುವನ್ನ ಬಿಟ್ಟು ಅಗಲಿದ ತಾಯಿಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಹಾಸನ: ಮಠಗಳನ್ನು ಸರ್ಕಾರದ ಸುರ್ಪದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಧರ್ಮ ಬೇರೆ. ರಾಜಕಾರಣ ಬೇರೆ. ಎರಡನ್ನು ಒಟ್ಟಿಗೆ ನೋಡಬಾರದು ಎಂದಿದ್ದಾರೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಹಾಗೇನಾದ್ರು ಆದ್ರೆ ಅದಕ್ಕೆ ಸ್ಪಷ್ಟವಾಗಿ ವಿರೋಧಿಸುವುದು ನನ್ನ ಅಭಿಪ್ರಾಯ ಅಂತ ಹೇಳಿದ್ದಾರೆ.

    ಧರ್ಮಕ್ಕೆ ರಾಜಕಾರಣದ ಸೊಂಕು ತಗಲಬಾರದು. ಇದು ತಪ್ಪು. ಎಲ್ಲವನ್ನೂ ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ. ಇದು ಒಪ್ಪತಕ್ಕುದ್ದಲ್ಲ. ಇದಕ್ಕೆ ವಿರೋಧಿಸುವ ಮತ್ತು ಪ್ರತಿಭಟನೆ ಮಾಡುವ ಕುರಿತು ಬೇರೆ ರೀತಿ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.


    ರಾಜ್ಯದ ಮಠ, ದೇವಸ್ಥಾನ, ಧಾರ್ಮಿಕ ಸಂಸ್ಥೆಗಳೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದು, ಸರ್ಕಾರಕ್ಕೆ ಇನ್ನು 3 ತಿಂಗಳ ಅವಧಿ ಇರುವಾಗಲೇ ಆಪರೇಷನ್‍ಗೆ ಕೈ ಹಾಕಿಬಿಟ್ರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಠಗಳು, ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದು, ಇವುಗಳನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ತರಲು ಕರಡು ರಚನೆಗೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ ಎನ್ನಲಾಗಿದೆ.

    ಜ.29ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, 15 ದಿನದೊಳಗಾಗಿ ಸಾರ್ವಜನಿಕ ಅಭಿಪ್ರಾಯ, ಸಲಹೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆಗೆ ಒಳಪಡಿಸಬೇಕೆ? ಬೇಡವೇ.? ಒಳಪಡಿಸಬೇಕಿದ್ರೆ ಎಷ್ಟರಮಟ್ಟಿಗೆ ಒಳಪಡಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಅಭಿಪ್ರಾಯ ಕೇಳಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

  • ಪ್ರಸಾದ ವಿನಿಯೋಗಕ್ಕೆ ಲೈಸೆನ್ಸ್, ದೇವರ ಪ್ರಸಾದ ಲ್ಯಾಬ್ ಪರೀಕ್ಷೆಗೆ ಒಳಪಡ್ಬೇಕು- ಆಹಾರ ಸುರಕ್ಷತೆ ಇಲಾಖೆ ನೋಟಿಸ್

    ಪ್ರಸಾದ ವಿನಿಯೋಗಕ್ಕೆ ಲೈಸೆನ್ಸ್, ದೇವರ ಪ್ರಸಾದ ಲ್ಯಾಬ್ ಪರೀಕ್ಷೆಗೆ ಒಳಪಡ್ಬೇಕು- ಆಹಾರ ಸುರಕ್ಷತೆ ಇಲಾಖೆ ನೋಟಿಸ್

    ಬೆಂಗಳೂರು: ಇನ್ಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲಾ ಪ್ರಸಾದ ಅಂತ ಹಂಚೋ ಹಾಗಿಲ್ಲ. ಯಾಕಂದ್ರೆ ಆಹಾರ ಸುರಕ್ಷತಾ ಇಲಾಖೆ ಹೊಸದೊಂದು ನಿಯಮ ಜಾರಿ ಮಾಡಿದೆ.

    ಮುಜುರಾಯಿ ಇಲಾಖೆ ದೇಗುಲ ಸೇರಿದಂತೆ ರಾಜ್ಯದ ಎಲ್ಲಾ ದೇಗುಲಗಳಿಗೆ, ಚರ್ಚ್ ಹಾಗೂ ಮಸೀದಿಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಪ್ರಸಾದ ವಿನಿಯೋಗಕ್ಕೆ ಲೈಸನ್ಸ್ ಪಡೆಯುವಂತೆ ಸೂಚಿಸಿದೆ.

    ಭಕ್ತರಿಗೆ ಪ್ರಸಾದ ರೂಪದಲ್ಲಿ ಯಾವುದೇ ಆಹಾರ ಪದಾರ್ಥ ನೀಡಿದ್ರೂ ಅದನ್ನು ಆಹಾರ ಸುರಕ್ಷತೆ ಇಲಾಖೆಯ ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿದೆ. ದೇಗುಲದಲ್ಲಿ ವಿತರಣೆ ಮಾಡುವ ಪ್ರಸಾದದಲ್ಲಿ ಗುಣಮಟ್ಟ ಕಾಪಾಡುವುದಿಲ್ಲ ಅಂತಾ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರೋದಾಗಿ ಅಧಿಕಾರಿಗಳು ಹೇಳಿದ್ದಾರೆ.

    ಮೂರು ಬಾರಿ ನೋಟಿಸ್ ನೀಡಿದ ನಂತರವೂ ಲೈಸೆನ್ಸ್ ಪಡೆಯದೇ, ಪ್ರಸಾದ ಪರೀಕ್ಷೆಗೆ ಒಳಪಡಿಸದೇ ವಿತರಣೆ ಮಾಡಿದ್ರೆ ದಂಡ ವಿಧಿಸಲು ಆಹಾರ ಇಲಾಖೆ ನಿರ್ಧರಿಸಿದೆ.

  • ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

    ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

    ಮಂಡ್ಯ: ಪುರಾತತ್ವ ಇಲಾಖೆಗೆ ಸೇರಿದ ಶ್ರೀರಾಮನ ದೇಗುಲದಲ್ಲಿ ವ್ಯಕ್ತಿಯೊಬ್ಬ ಹುಂಡಿ ಒಡೆದು ಹಣ ದೋಚಿದ್ದು ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸುಮಾರು 650 ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿದೆ. ಈ ದೇವಾಲಯದ ಒಳಗೆ ಜನವರಿ 24 ರಂದು ಮಧ್ಯರಾತ್ರಿ ವೇಳೆಗೆ ಆಗಮಿಸುವ ಆಗಂತುಕ ವ್ಯಕ್ತಿಯೊಬ್ಬ ದೇವರ ಗಂಟೆಯಿಂದಲೇ ಹುಂಡಿ ಬೀಗ ಹೊಡೆದು ಹಣ ದೋಚಿ ಪರಾರಿಯಾಗಿದ್ದಾನೆ.

    ಚಡ್ಡಿ ಹಾಕಿಕೊಂಡು, ಚಳಿಯಾಗದಂತೆ ಮೈತುಂಬ ರಗ್ಗೊಂದನ್ನು ಸುತ್ತಿಕೊಂಡು ಬಂದಿರುವ ವ್ಯಕ್ತಿ, ದೇವರ ಮೇಲಿನ ಭಯ ಭಕ್ತಿ ಇಲ್ಲದೇ ಹುಂಡಿ ಹೊಡೆದು ಹಣ ದೋಚಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರೋ ದೇವಾಲಯದ ಬಗ್ಗೆ ತಿಳಿದಿರುವ ಸುತ್ತಮುತ್ತಲ ಗ್ರಾಮದ ವ್ಯಕ್ತಿಯೇ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ದೇವಾಲಯದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿದ್ದು, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇಗುಲದ ಸಿಬ್ಬಂದಿಗೆ ಡ್ರೆಸ್ ಕೋಡ್ ಕಡ್ಡಾಯ: ಮುಜರಾಯಿ ಇಲಾಖೆ

    ದೇಗುಲದ ಸಿಬ್ಬಂದಿಗೆ ಡ್ರೆಸ್ ಕೋಡ್ ಕಡ್ಡಾಯ: ಮುಜರಾಯಿ ಇಲಾಖೆ

    ಬೆಂಗಳೂರು: ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಡ್ರೆಸ್ ಕೋಡ್ ಪಾಲನೆ ಮಾಡಬೇಕೆಂದು ಮುಜರಾಯಿ ಇಲಾಖೆ ದೇಗುಲಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.

    ಮಹಿಳಾ ಸಿಬ್ಬಂದಿಗೆ ಸಲ್ವಾರ್ ಕಮೀಜ್, ಕುರ್ತಾಗಳನ್ನು ನಿಷೇಧಿಸಲಾಗಿದೆ. ಪುರಷರಿಗೆ ಜೀನ್ಸ್ ಪ್ಯಾಂಟ್‍ಗಳನ್ನು ಧರಿಸದಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಹಿಳಾ ಸಿಬ್ಬಂದಿ ನೀಲಿ ಸೀರೆ , ಬಿಳಿ ಬ್ಲೌಸ್ ಮತ್ತು ಪುರುಷ ಸಿಬ್ಬಂದಿಗೆ ನೀಲಿ ಶರ್ಟ್, ಸೆಕ್ಯೂರಿಟಿ ಗಳಿಗೆ ಖಾಕಿ ಪ್ಯಾಂಟ್ ಖಾಕಿ ಶರ್ಟ್ ಧರಿಸಲು ಆದೇಶಿಸಲಾಗಿದೆ. ಈ ಡ್ರೆಸ್ ಕೋಡ್ ಕಡ್ಡಾಯವಿದ್ದರೂ ಇದೂವರೆಗೂ ಪಾಲನೆ ಆಗುತ್ತಿರಲಿಲ್ಲ. ಹಾಗಾಗಿ ಮುಜರಾಯಿ ಇಲಾಖೆ ಮರು ಸುತ್ತೋಲೆಯನ್ನು ಹೊರಡಿಸಿದೆ.

    ಮುಜರಾಯಿ ಇಲಾಖೆಯ ಈ ಆದೇಶ ಎ ಮತ್ತು ಬಿ ಗ್ರೇಡ್ ದೇವಾಲಯಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹಿಂದೆ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಮಾಡಬೇಕೆಂದು ಚಿಂತಿಸಲಾಗಿತ್ತು. ಆರಂಭದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ವಿಧಿಸುವುದರಿಂದ ಬೇರೆ ರಾಜ್ಯ ಮತ್ತು ವಿದೇಶಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಇಳಿಮುಖವಾಗಲಿದೆ ಎಂಬ ಉದ್ದೇಶದಿಂದ ಯೋಚನೆಯನ್ನು ಆರಂಭದಲ್ಲಿಯೇ ಕೈಬಿಡಲಾಯಿತು.

  • ಕುಟುಂಬದೊಂದಿಗೆ ದೇವಾಲಯಕ್ಕೆ ಬಂದಿದ್ದ ಪೇದೆ ನೀರಿನಲ್ಲಿ ಮುಳುಗಿ ಸಾವು

    ಕುಟುಂಬದೊಂದಿಗೆ ದೇವಾಲಯಕ್ಕೆ ಬಂದಿದ್ದ ಪೇದೆ ನೀರಿನಲ್ಲಿ ಮುಳುಗಿ ಸಾವು

    ಮಂಡ್ಯ: ಕುಟುಂಬದವರೊಂದಿಗೆ ದೇವಾಲಯಕ್ಕೆ ಬಂದಿದ್ದ ಪೊಲೀಸ್ ಪೇದೆಯೊಬ್ಬರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಂದೇಗಾಲ ಸಮೀಪ ಮತ್ತಿತಾಳೇಶ್ವರ ದೇವಾಲಯದ ಬಳಿ ನಡೆದಿದೆ.

    ಬೇಗೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ 39 ವರ್ಷದ ಚಂದ್ರಶೇಖರ್ ಮೃತ ದುರ್ದೈವಿ. ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಕುಟುಂಬದವರೊಂದಿಗೆ ಮತ್ತಿತಾಳೇಶ್ವರ ದೇವಾಲಯಕ್ಕೆ ಪೂಜೆಗೆಂದು ಆಗಮಿಸಿದ್ರು. ಪೂಜೆಗೂ ಮುನ್ನ ದೇವಾಲಯದ ಸಮೀಪವೇ ಇರುವ ಕೊಳದಲ್ಲಿ ಚಂದ್ರಶೇಖರ್ ಸ್ನಾನ ಮಾಡಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ.

    ಚಂದ್ರಶೇಖರ್ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳೆ ಜೊತೆ ಚೆಲ್ಲಾಟವಾಡ್ತಾ ಸಿಕ್ಕಿಬಿದ್ದ ಗುಡ್ಡಪ್ಪ- ಅರೆಬೆತ್ತಲೆ ಮಾಡಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಮಹಿಳೆ ಜೊತೆ ಚೆಲ್ಲಾಟವಾಡ್ತಾ ಸಿಕ್ಕಿಬಿದ್ದ ಗುಡ್ಡಪ್ಪ- ಅರೆಬೆತ್ತಲೆ ಮಾಡಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಮೈಸೂರು: ಮಹಿಳೆಯ ಜೊತೆ ಚೆಲ್ಲಾಟವಾಡುತ್ತಾ ಗುಡ್ಡಪ್ಪ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ಆತನನ್ನು ಅರೆಬೆತ್ತಲೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ನಡೆದಿದೆ.

    ಮಹದೇವಸ್ವಾಮಿ ಗುಡ್ಡಪ್ಪ ಸಿಕ್ಕಿಬಿದ್ದ ವ್ಯಕ್ತಿ. ಮಹದೇವಸ್ವಾಮಿ ತನ್ನ ಮೈಮೇಲೆ ಸಿದ್ದಪ್ಪಾಜಿ ದೇವರು ಬರುತ್ತಾರೆಂದು ಎಲ್ಲರನ್ನು ನಂಬಿಸಿದ್ದ. 15 ವರ್ಷಗಳಿಂದ 16 ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಿಕೊಂಡಿರೋ ಮಹದೇವಸ್ವಾಮಿ, ಐಷಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದ.

    ಗುಡ್ಡಪ್ಪ ಇಮ್ಮಾವು ಗ್ರಾಮದ ಮಹಿಳೆ ಜೊತೆಗಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಒಂದು ವರ್ಷದಿಂದ ತನ್ನ ಪತಿಯಿಂದ ದೂರವಾಗಿದ್ದಾರೆ. ಅವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ನಂಜನಗೂಡು ಗ್ರಾಮಾಂತರ ಪೊಲೀಸರು ಗುಡ್ಡಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

    ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

    ಬೆಂಗಳೂರು: ಇಂದು ವೈಕುಂಠ ಏಕಾದಶಿ. ಈ ದಿನ ವೆಂಕಟೇಶ್ವರ ದರ್ಶನ ಮಾಡಿದರೆ ಮುಕ್ತಿ ಸಿಗುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಆಂಧ್ರ ಪ್ರದೇಶದ ತಿರುಪತಿ ಸೇರಿದಂತೆ ರಾಜ್ಯದ ವಿವಿಧ ವೆಂಕಟೇಶ್ವರನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೀತಿದೆ.

    ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತ ಬೆಂಗಳೂರಿನ ಇಸ್ಕಾನ್‍ನಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡಿಯುತ್ತಿದ್ದು, ಭಕ್ತ ಸಾಗರ ಸೇರುತ್ತಿದೆ.

    ಬಳ್ಳಾರಿಯ ವೆಂಕಟೇಶ್ವರ ದೇವಾಲಯದಲ್ಲಿ ಭರ್ಜರಿ ಲಡ್ಡು ಮಾಡಲಾಗಿದೆ. ಭಕ್ತರಿಗೆ ಒಂದು ಲಕ್ಷ ಲಡ್ಡು ವಿತರಣೆ ಮಾಡಲಿದ್ದು, ಇದಕ್ಕಾಗಿ 550 ಕೆಜಿ ಕಡ್ಲೆಹಿಟ್ಟು, 900 ಕೆಜಿ ಸಕ್ಕರೆ, 30 ಕೆಜಿ ಗೊಡಂಬಿ ದಾಕ್ಷಿ, ಏಲಕ್ಕಿ ಬಳಸಿ ಲಕ್ಷ ಲಡ್ಡು ತಯಾರಿಸಲಾಗಿದೆ. ಕಳೆದ ಒಂದು ವಾರದಿಂದ 300 ಮಹಿಳೆಯರು ಲಡ್ಡು ಪ್ರಸಾದ ತಯಾರಿಕೆ ಮಾಡಿದ್ದು, ಇಂದು ದೇವರ ದರ್ಶನ ಪಡೆಯೋ ಭಕ್ತರಿಗೆ ಲಡ್ಡು ವಿತರಿಸಲಿದ್ದಾರೆ. ದಾವಣಗೆರೆ, ನೆಲಮಂಗಲದಲ್ಲೂ ಭಕ್ತರು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

    ವೈಕುಂಠ ಏಕಾದಶಿ ವಿಶೇಷವಾಗಿ ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಬೆಳಿಗ್ಗೆ ನಾಲ್ಕು ಗಂಟೆಗಳಿಂದ ಸಾಲು ಸಾಲಾಗಿ ನಿಂತಿದ್ದು, ದೇವರ ದರ್ಶನ ಪಡೆದರು.

    ವೆಂಕಟೇಶ್ವರನಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಭಕ್ತರಿಗಾಗಿ ದೇವಾಲಯಗಳಲ್ಲಿ ಸ್ವರ್ಗದ ಬಾಗಿಲು ತೆರೆದಿದ್ದು, ಬಾಗಿಲನ್ನು ಪ್ರವೇಶಿಸಿ ಭಕ್ತರು ಪುನೀತರಾದರು. ಅಲ್ಲದೇ ಉಪವಾಸವಿದ್ದು ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲು ದರ್ಶನ ಪಡೆದರೆ ಸ್ವರ್ಗ ಪ್ರಾಪ್ತವಾಗುತ್ತೆ ಎನ್ನುವುದು ಭಕ್ತರ ನಂಬಿಕೆ.

  • ದಲಿತರಿಗೂ ದೇವರ ಪೂಜೆಗೆ ಅವಕಾಶ – ಚುನಾವಣೆ ಹೊತ್ತಲ್ಲೇ ಸಿಎಂ ಹೊಸ ದಾಳ

    ದಲಿತರಿಗೂ ದೇವರ ಪೂಜೆಗೆ ಅವಕಾಶ – ಚುನಾವಣೆ ಹೊತ್ತಲ್ಲೇ ಸಿಎಂ ಹೊಸ ದಾಳ

    ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ ಮತ್ತೊಂದು ದಲಿತ ದಾಳ ಉರುಳಿಸಿದ್ದಾರೆ.

    ಮುಜರಾಯಿ ಇಲಾಖೆಯ ಆಧೀನದಲ್ಲಿ ಬರುವ ಸರ್ಕಾರಿ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕಕ್ಕೆ ಮುಂದಾಗಿದ್ದಾರೆ. ರಾಜ್ಯದ ಪ್ರಖ್ಯಾತ ದೇಗುಲಗಳಾದ ಕುಕ್ಕೆ, ಕೊಲ್ಲೂರು, ಕಟೀಲು ಸೇರಿದಂತೆ ಐದು ದೇವಸ್ಥಾನಗಳಲ್ಲಿ ಆಗಮ ಶಾಲೆ ತೆರೆಯಲಾಗುತ್ತಿದೆ.

    ಅಲ್ಲಿ ದಲಿತರು ಸೇರಿದಂತೆ ಸರ್ವರಿಗೂ ವೇದ, ಮಂತ್ರಗಳ ಪಾಠ ಮಾಡಲಾಗುತ್ತದೆ. ಹೀಗೆ ತರಬೇತಿ ಪಡೆದ ಅರ್ಚಕರನ್ನು ಮುಜರಾಯಿ ದೇಗುಲಗಳಲ್ಲಿ ಪೂಜೆ ನೇಮಿಸಲಾಗುತ್ತದೆ. ಆಗಮ ಶಾಲೆ ತೆರೆಯೋ ಬಗ್ಗೆ ಈಗಾಗಲೇ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶಿಸಿದೆ.

    ಇದನ್ನೂ ಓದಿ: ಮೌಢ್ಯ ನಿಷೇಧ ಕಾಯ್ದೆಗೆ ಕ್ಯಾಬಿನೆಟ್ ಒಪ್ಪಿಗೆ: ಯಾವುದಕ್ಕೆ ನಿಷೇಧ?

    ಇತ್ತೀಚೆಗಷ್ಟೇ ಮೌಢ್ಯ ನಿಷೇಧ ಜಾರಿಗೆ ತಂದಿರುವ ಸಿದ್ದರಾಮಯ್ಯ ಸರ್ಕಾರ ಈಗ ದಲಿತ ಅರ್ಚಕರ ನೇಮಕ ಮತ್ತೊಂದು ಕ್ರಾಂತಿಕಾರಿ ನಿರ್ಧಾರವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

    ಇದನ್ನೂ ಓದಿ: ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ: ತೊಗಾಡಿಯಾ