Tag: ದೇವಸ್ಥಾನ

  • ದೇವಸ್ಥಾನಗಳ ಕಾಮಗಾರಿಗಳಿಗೆ ಬ್ರೇಕ್‌ – ವಿರೋಧ ವ್ಯಕ್ತವಾಗುತ್ತಿದ್ದಂತೆ ಸುತ್ತೋಲೆ ವಾಪಸ್‌

    ದೇವಸ್ಥಾನಗಳ ಕಾಮಗಾರಿಗಳಿಗೆ ಬ್ರೇಕ್‌ – ವಿರೋಧ ವ್ಯಕ್ತವಾಗುತ್ತಿದ್ದಂತೆ ಸುತ್ತೋಲೆ ವಾಪಸ್‌

    ಬೆಂಗಳೂರು: ದೇವಸ್ಥಾನಗಳ (Temple) ಅಭಿವೃದ್ಧಿಗೆ ಬಿಡುಗಡೆ ಮಾಡಿದ ಅನುದಾನಕ್ಕೆ ಬ್ರೇಕ್‌ ಹಾಕಿದ್ದ ರಾಜ್ಯ ಸರ್ಕಾರ (Karnataka Government) ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಮುಜರಾಯಿ ಇಲಾಖೆ ಆಯುಕ್ತ ಬಸವರಾಜೇಂದ್ರ, ಸಚಿವರ ಗಮನಕ್ಕೆ ಬಾರದೇ ಈ ಆದೇಶ ಪ್ರಕಟಿಸಲಾಗಿತ್ತು. ಈಗ ಆದೇಶವನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.

    ಜಿಲ್ಲೆಯಾದ್ಯಾಂತ ಮುಜರಾಯಿ ವ್ಯಾಪ್ತಿಯ ಕಾಮಗಾರಿಗಳು ನಡೆಯುತ್ತಿತ್ತು. ಈ ಕಾಮಗಾರಿ ಮಾಡಲು 50% ಅನುದಾನವನ್ನು ಬಿಡುಗಡೆ ಮಾಡಿ ತಡೆ ಹಿಡಿಯಲಾಗಿತ್ತು. ನಮ್ಮ ವ್ಯಾಪ್ತಿಯಲ್ಲಿ ನಾವು ಆದೇಶ ಹೊರಡಿಸಿದ್ದೆವು. ಈಗ ಮತ್ತೊಂದು ಆದೇಶವನ್ನು ಪ್ರಕಟಿಸಿದ್ದೇವೆ ಎಂದು ತಿಳಿಸಿದರು.  ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ದೇಗುಲಗಳಿಗೆ ರಿಲೀಸ್ ಮಾಡಿದ್ದ ಅನುದಾನಕ್ಕೆ ಬ್ರೇಕ್

    ಆಗಸ್ಟ್ 14 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದ ಮುಜರಾಯಿ ಇಲಾಖೆ (Muzrai Department) ದೇವಾಲಯದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಮಂಜೂರಾದ ಹಣದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಡೆಸದಂತೆ ಉಲ್ಲೇಖಿಸಿತ್ತು.

    ಈ ಹಿಂದಿನ ಸುತ್ತೋಲೆಯಲ್ಲಿ  ಏನಿತ್ತು?
    1. ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಜೀರ್ಣೋದ್ಧಾರಕ್ಕಾಗಿ ಸಾಮಾನ್ಯ ಯೋಜನೆಯಡಿ ಅನುದಾನ ಮಂಜೂರಾಗಿದ್ದು ಕಾಮಗಾರಿಗಳನ್ನ ಪ್ರಾರಂಭಿಸಿದೆ ಇರುವ ಸಂಸ್ಥೆಗಳಿಗೆ ಮುಂದಿನ ನಿರ್ದೇಶನದ ವರೆಗೂ ಹಣ ಬಿಡುಗಡೆ ಮಾಡಬಾರದು.

    2.2022-23ನೇ ಸಾಲಿನಲ್ಲಿ ಸಾಮಾನ್ಯ ಯೋಜನೆ ಅಡಿ ಮಂಜೂರಾಗಿರುವ ಅನುದಾನದ ಪೈಕಿ ಈಗಾಗಲೇ 50% ರಷ್ಟು ಹಣ ಬಿಡುಗಡೆಯಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ಹಣ ಬಿಡುಗಡೆ ಮಾಡದಿದ್ದಲ್ಲಿ ಸದರಿ ಕಾಮಗಾರಿಗೆ ಹಣವನ್ನ ಬಿಡುಗಡೆ ಮಾಡಬಾರದು ಹಾಗೂ ಪ್ರಾರಂಭಿಸಿದೇ ಇದ್ದಲ್ಲಿ ಕಾಮಗಾರಿಯನ್ನು ಪ್ರಾರಂಭಿಸತಕ್ಕದ್ದಲ್ಲ.

    3. ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಮುಂದಿನ ನಿರ್ದೇಶನವರೆಗೂ ತಡೆಹಿಡಿಯುವುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಅವಧಿಯಲ್ಲಿ ದೇಗುಲಗಳಿಗೆ ರಿಲೀಸ್ ಮಾಡಿದ್ದ ಅನುದಾನಕ್ಕೆ ಬ್ರೇಕ್

    ಬಿಜೆಪಿ ಅವಧಿಯಲ್ಲಿ ದೇಗುಲಗಳಿಗೆ ರಿಲೀಸ್ ಮಾಡಿದ್ದ ಅನುದಾನಕ್ಕೆ ಬ್ರೇಕ್

    ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ದೇವಸ್ಥಾನಗಳ (Temple) ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಅನುದಾನಕ್ಕೆ ಕಾಂಗ್ರೆಸ್‌ ಸರ್ಕಾರ (Congress Government) ಬ್ರೇಕ್ ಹಾಕಿದೆ. 2022-23ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದಂತೆ ಮುಜರಾಯಿ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

    ಆಗಸ್ಟ್ 14 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿರುವ ಮುಜರಾಯಿ ಇಲಾಖೆ (Muzrai Department) ದೇವಾಲಯದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಮಂಜೂರಾದ ಹಣದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಡೆಸದಂತೆ ಉಲ್ಲೇಖಿಸಿದೆ.  ಇದನ್ನೂ ಓದಿ: ಡ್ಯಾಂನಲ್ಲಿ ತುಂಬಿ ಹಿಡಿದುಟ್ಟುಕೊಳ್ಳಲು ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ವಿ: ಹೆಚ್‍ಡಿಕೆ

    ಸರ್ಕಾರದ ಆದೇಶ ಏನಿದೆ?
    1. ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಜೀರ್ಣೋದ್ಧಾರಕ್ಕಾಗಿ ಸಾಮಾನ್ಯ ಯೋಜನೆಯಡಿ ಅನುದಾನ ಮಂಜೂರಾಗಿದ್ದು ಕಾಮಗಾರಿಗಳನ್ನ ಪ್ರಾರಂಭಿಸಿದೆ ಇರುವ ಸಂಸ್ಥೆಗಳಿಗೆ ಮುಂದಿನ ನಿರ್ದೇಶನದ ವರೆಗೂ ಹಣ ಬಿಡುಗಡೆ ಮಾಡಬಾರದು.

    2.2022-23ನೇ ಸಾಲಿನಲ್ಲಿ ಸಾಮಾನ್ಯ ಯೋಜನೆ ಅಡಿ ಮಂಜೂರಾಗಿರುವ ಅನುದಾನದ ಪೈಕಿ ಈಗಾಗಲೇ 50% ರಷ್ಟು ಹಣ ಬಿಡುಗಡೆಯಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ಹಣ ಬಿಡುಗಡೆ ಮಾಡದಿದ್ದಲ್ಲಿ ಸದರಿ ಕಾಮಗಾರಿಗೆ ಹಣವನ್ನ ಬಿಡುಗಡೆ ಮಾಡಬಾರದು ಹಾಗೂ ಪ್ರಾರಂಭಿಸಿದೇ ಇದ್ದಲ್ಲಿ ಕಾಮಗಾರಿಯನ್ನು ಪ್ರಾರಂಭಿಸತಕ್ಕದ್ದಲ್ಲ.

    3. ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಮುಂದಿನ ನಿರ್ದೇಶನವರೆಗೂ ತಡೆಹಿಡಿಯುವುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಿಟಿಗೆ ಸೇರಿಸಿಕೊಳ್ಳದಿದ್ದಕ್ಕೆ ಐತಿಹಾಸಿಕ ದೇವಸ್ಥಾನಲ್ಲಿ ನಡೆಯಿತು ಕಳ್ಳತನ

    ಕಮಿಟಿಗೆ ಸೇರಿಸಿಕೊಳ್ಳದಿದ್ದಕ್ಕೆ ಐತಿಹಾಸಿಕ ದೇವಸ್ಥಾನಲ್ಲಿ ನಡೆಯಿತು ಕಳ್ಳತನ

    ಶಿವಮೊಗ್ಗ: ಜಿಲ್ಲೆಯ ಸೊರಬ (Soraba) ತಾಲೂಕಿನ ಐತಿಹಾಸಿಕ ಚಂದ್ರಗುತ್ತಿ ರೇಣುಕಾಂಬಾ ದೇವಾಲಯದಲ್ಲಿ ಆಗಸ್ಟ್ 2 ರಂದು ನಡೆದಿದ್ದ ಕಳ್ಳತನ (Theft) ಪ್ರಕರಣವನ್ನು ಭೇದಿಸುವಲ್ಲಿ ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಂದ್ರಗುತ್ತಿಯ ಪ್ರವೀಣ್ (33), ದೇವರಾಜು (50) ಭೀಮಪ್ಪ (35) ಎಂದು ಗುರುತಿಸಲಾಗಿದೆ. ಈ ಪ್ರಕರಣ ರಾಜಕೀಯ ದ್ವೇಷದಿಂದ ನಡೆದಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ಆರೋಪಿ ದೇವರಾಜು ದೇವಸ್ಥಾನ (Temple) ಕಮಿಟಿಗೆ ಸೇರಲು ಬಯಸಿದ್ದ. ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಕಮಿಟಿ ಈತನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷನೇ ಕಳ್ಳತನ ಪ್ರಕರಣಕ್ಕೆ ಕಾರಣ ಎಂದು ಬಿಂಬಿಸುವ ಸಲುವಾಗಿ ಈ ಕೃತ್ಯ ಎಸಗಿದ್ದ. ಇದನ್ನೂ ಓದಿ: ಧಾರವಾಡದಲ್ಲಿ ವಿಚಿತ್ರ ಘಟನೆ – ಮೃತಪಟ್ಟಿದೆ ಎಂದ ವೈದ್ಯರು, ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು!

    ದ್ವೇಷದಿಂದ ಕಮಿಟಿ ಅಧ್ಯಕ್ಷರ ಹೆಸರಿಗೆ ಕಳಂಕ ತಂದು ಅವರನ್ನು ದೇವಸ್ಥಾನ ಕಮಿಟಿಯಿಂದ ತೆಗೆಸುವ ಸಲುವಾಗಿ ದೇವಸ್ಥಾನದಲ್ಲಿ ಕಳ್ಳತನ ಆಗಿರುವಂತೆ ಬಿಂಬಿಸಿ, ದೇವಸ್ಥಾನದ ಪಾವಿತ್ರ‍್ಯತೆ ಹಾಗೂ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಲು ಕಳ್ಳತನಕ್ಕೆ ಪ್ರಯತ್ನ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಆರೋಪಿತರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್ – ಇಂದಿನಿಂದ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ 24ರ ವಿವಾಹಿತೆ 54ರ ಪೂಜಾರಿ ಜೊತೆಯೇ ಜೂಟ್!

    ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ 24ರ ವಿವಾಹಿತೆ 54ರ ಪೂಜಾರಿ ಜೊತೆಯೇ ಜೂಟ್!

    ಚಿಕ್ಕಬಳ್ಳಾಪುರ: 54 ವರ್ಷದ ತಾತನ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.

    ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ ಮಹಿಳೆ (Women) ಕೊನೆಗೆ ಪೂಜಾರಿ ಜೊತೆಯೇ ಎಸ್ಕೇಪ್ ಆಗಿದ್ದಾಳೆ. ವಿವಾಹಿತ ಮಹಿಳೆ ಲಲಿತಾ ಗಂಗಮ್ಮ ದೇವಾಲಯದ ಪೂಜಾರಿ ಮುನಿರಾಜು ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳು. ಇದನ್ನೂ ಓದಿ: ಅನೈತಿಕ ಸಂಬಂಧ; ಹೆತ್ತ ಮಗನನ್ನು ಕೊಲೆ ಮಾಡಿದ ತಾಯಿಗೆ ಜೀವಾವಧಿ ಶಿಕ್ಷೆ

    ಬನ್ನಿಕುಪ್ಪೆ ಗ್ರಾಮದ ಬಳಿ ಅಮಾನಿಗೋಪಾಲಕೃಷ್ಣ ಕೆರೆ ದಡದಲ್ಲಿ ಬಟ್ಟೆ, ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು ಒಂದು ತಿಂಗಳ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದರಿಂದ ಲಲಿತಾ-ಮುನಿರಾಜು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರಾ? ಪೊಲೀಸರ ದಿಕ್ಕು ತಪ್ಪಿಸಲು ನಾಟಕ ಆಡಿದ್ರಾ? ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಕೆರೆಯಲ್ಲಿ ಮೃತದೇಹಗಳಿಗಾಗಿ ಶೋಧಕಾರ್ಯ ನಡೆದಿದೆ.

    ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ (Chikkaballapur Police Station) ಲಲಿತಾ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಆತ್ಮಹತ್ಯೆ ಕಥೆ ನಾಟಕ ಮಾಡಿದ್ದ ಕಿಲಾಡಿ ಜೋಡಿ ಅರೆಸ್ಟ್ ಆಗಿದೆ. ಇದನ್ನೂ ಓದಿ: ಅಂದು ಬ್ರಿಟಿಷರು ಭಾರತದ ಸಂಪತ್ತನ್ನ ಹೊತ್ತೊಯ್ದರು, ಇಂದು ಬಂಡವಾಳಿಗರ ಬಳಿ ಶೇಖರಣೆಗೊಳ್ತಿದೆ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ಜೊತೆಗೂಡಿ ಗೋಕರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಿಗ್ವಿಜಯ್‌ ಸಿಂಗ್‌

    ಪತ್ನಿ ಜೊತೆಗೂಡಿ ಗೋಕರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಿಗ್ವಿಜಯ್‌ ಸಿಂಗ್‌

    ಕಾರವಾರ: ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ (Digvijaya Singh) ಪತ್ನಿಯೊಂದಿಗೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ (Gokarna Mahabaleshwar Temple) ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಪತ್ನಿ ಅಮೃತ ರೈ (Amrita Rai) ಜೊತೆ ಆಗಮಿಸಿದ ದಿಗ್ವಿಜಯ್‌ ಸಿಂಗ್‌ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಇದನ್ನೂ ಓದಿ: ಗೂಂಡಾ ಕಾಯ್ದೆ ಅಡಿ ಪುನೀತ್‌ ಕೆರೆಹಳ್ಳಿ ಅರೆಸ್ಟ್‌ – 1 ವರ್ಷ ಸಿಗಲ್ಲ ಜಾಮೀನು

    ಮಣಿಪುರದಲ್ಲಿ (Manipura) ಮೂರು ತಿಂಗಳಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ಬಗ್ಗೆ ಪ್ರಧಾನಿ ಮಾತನಾಡದೇ ಸುಮ್ಮನಿದ್ದಾರೆ. ಮಣಿಪುರಕ್ಕೆ ನೀವು ಹೋಗಿಲ್ಲ ಯಾಕೆ ಎಂದು ನಾವು ಪ್ರಶ್ನೆ ಕೇಳಿದ್ದೇವೆ ಎಂದು ತಿಳಿಸಿದರು.

    ನಮ್ಮ ಪ್ರಶ್ನೆಗೆ ಮೋದಿ ಉತ್ತರ ನೀಡಿಲ್ಲ. ಮೋದಿಯವರು ಮಣಿಪುರಕ್ಕೆ ಸೈನ್ಯ ಕಳುಹಿಸಿ ಶಾಂತಿ ಕಾಪಾಡಲಿ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಭೀಮನ ಅಮವಾಸ್ಯೆ; ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ – ಮಹಿಳೆಯರಿಂದ ಪ್ರಾರ್ಥನೆ

    ಶಿವಮೊಗ್ಗ: ಇಂದು ಭೀಮನ ಅಮವಾಸ್ಯೆ (Bheemana Amavasy) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೊಜೆ ಸಲ್ಲಿಸುತ್ತಿದ್ದಾರೆ. ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಭೀಮನ ಅಮವಾಸ್ಯೆ ವ್ರತ ಆಚರಿಸುತ್ತಿದ್ದಾರೆ.

    ಅದರಂತೆಯೇ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ (Sigandur Chowdeshwari Temple) ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಅಮವಾಸ್ಯೆ ಹಿನ್ನೆಲೆ ಭಕ್ತರು ಸಹಸ್ರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

    ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದು ಕರೆಯಲಾಗುವ ಭೀಮನ ಅಮವಾಸ್ಯೆ ವ್ರತವು ದಕ್ಷಿಣ ಭಾರತದಲ್ಲಿ ಅತ್ಯಂತ ಮಂಗಳಕರವಾದ ವ್ರತವಾಗಿದೆ. ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳಲ್ಲಿ, ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯ ರಾತ್ರಿಯಲ್ಲಿ ಮಹಿಳೆಯರು ಈ ಉಪವಾಸವನ್ನು ಆಚರಿಸುತ್ತಾರೆ. ಇದನ್ನೂ ಓದಿ: ನಾರಾಯಣಮೂರ್ತಿ ದಂಪತಿಯಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ

    ಆಷಾಢ ಮಾಸವು ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ಆರಂಭದ ಸಮಯವಾಗಿದೆ. ಈ ವರ್ಷ ಭೀಮನ ಅಮಾವಾಸ್ಯೆಯನ್ನ 2023ರ ಜುಲೈ 17 ರಂದು ಸೋಮವಾರ ಆಚರಿಸಲಾಗುವುದು. ಈ ವ್ರತವನ್ನು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದ್ದು, ದಂಪತಿಗಳು ಈ ದಿನ ಶಿವ – ಪಾರ್ವತಿ ಪೂಜೆಯನ್ನು ಮಾಡುತ್ತಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಅಂಡರ್‌ವೇರ್ ಸಹಿತ ಕೊಲೆ ಮಾಡಲು ಬಳಸಿದ್ದ ಬಟ್ಟೆಗಳನ್ನು ಸುಟ್ಟಿದ್ದ ಹಂತಕರು

    ಭೀಮನ ಅಮಾವಾಸ್ಯೆ ಮಹತ್ವ ಗೊತ್ತಾ?
    ವಿವಾಹಿತ ಅಥವಾ ಅವಿವಾಹಿತ ಹೆಂಗಸರು ಅಥವಾ ಹುಡುಗಿಯರು ಪತಿ, ತಂದೆ, ಸಹೋದರ, ಮಗ ಮತ್ತು ಮನೆಯಲ್ಲಿನ ಇತರ ಪುರುಷರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ಮದುವೆಯಾದ ನಂತರ ಕನಿಷ್ಠ 9 ವರ್ಷಗಳ ಕಾಲ ಈ ವ್ರತವನ್ನು ಮಾಡುತ್ತಾರೆ. ಇನ್ನೂ ಅವಿವಾಹಿತ ಹುಡುಗಿಯರು ಸದ್ಗುಣಶೀಲ ಪತಿಯನ್ನ ಪಡೆಯುವುದಕ್ಕಾಗಿ, ಸಹೋದರರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ನವದೆಹಲಿ: ದೇವಸ್ಥಾನದ (Temple) ಹೊರಗಿನ ರಸ್ತೆಯಲ್ಲಿ ಎಮ್ಮೆಯೊಂದರ (Buffalo) ತಲೆ ಕತ್ತರಿಸಿ ಇರಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಈಶಾನ್ಯ ದೆಹಲಿಯ (Delhi) ವೆಲ್‌ಕಮ್ (Welcome) ಪ್ರದೇಶದಲ್ಲಿ ನಡೆದಿದೆ.

    ಬಂಧಿತ ಆರೋಪಿಗಳನ್ನು ದೆಹಲಿಯ ಬಾಬ್‌ಪುರ ನಿವಾಸಿಗಳಾದ ಅಜೀಂ (27) ಮತ್ತು ಇನ್ನೋರ್ವ 16 ವರ್ಷದ ಬಾಲಕ ಎಂದು ಗುರುತಿಸಲಾಗಿದೆ. ವೆಲ್‌ಕಮ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಬದಿಯಲ್ಲಿ ಎಮ್ಮೆಯೊಂದರ ತಲೆ ಕತ್ತರಿಸಿ ಇಡಲಾಗಿದೆ ಎಂಬ ಮಾಹಿತಿಯ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರದೇಶದಲ್ಲಿ ಶಾಂತಿ ಕಾಪಾಡಲು ಪೊಲೀಸರಿಗೆ ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಯಾವುದೇ ರೀತಿಯ ವದಂತಿಗಳನ್ನು ಹರಡಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Maharashtra Bus Accident – ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ

    ಶುಕ್ರವಾರ 5:30ರ ಸುಮಾರಿಗೆ ಪಶ್ಚಿಮ ಗೋರಖ್‌ಪಾರ್ಕ್‌ನ ನಾಲಾ ರಸ್ತೆಯಲ್ಲಿರುವ ದೇವಸ್ಥಾನದ ಹೊರಭಾಗದ ರಸ್ತೆಯಲ್ಲಿ ಕತ್ತರಿಸಿದ ಎಮ್ಮೆಯ ತಲೆಯೊಂದು ಪತ್ತೆಯಾಗಿದೆ ಎಂದು ವೆಲ್‌ಕಮ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಜಾಯ್ ಟಿರ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ಸ್ಕೂಟರ್‌ನಲ್ಲಿ ಬಂದ ಇಬ್ಬರು ಕತ್ತರಿಸಿದ ಎಮ್ಮೆಯ ತಲೆಯನ್ನು ದೇವಸ್ಥಾನದ ಹೊರಭಾಗದ ರಸ್ತೆಯಲ್ಲಿ ಎಸೆದಿದ್ದು, ಕತ್ತರಿಸಿದ ತಲೆಯನ್ನು ತಕ್ಷಣ ವಶಕ್ಕೆ ಪಡೆದು ಸ್ಥಳದಿಂದ ತೆಗೆಯಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

    ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕೃತ್ಯಗಳು), 429 (ಪ್ರಾಣಿಗಳನ್ನು ಕೊಲ್ಲುವುದು), 34 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

    ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

    ಮಿಳು ಚಿತ್ರದ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮಿಳು ನಾಡಿನ (Tamil Nadu)  ಸುಪ್ರಸಿದ್ಧ ಅಣ್ಣಾಮಲೈಯಾರ್ (Annamalaiyar) ದೇವಸ್ಥಾನಕ್ಕೆ ಭೇಟಿ ನೀಡಿದರು. ಸದ್ಯ ರಜನಿ ಲಾಲ್ ಸಲಾಮ್  (Lal Salaam)ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ನಡುವೆ ಕೊಂಚ ಸಮಯ ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಯಾವುದೇ ಭಾಗದಲ್ಲಿ ಚಿತ್ರೀಕರಣ ಆಗುತ್ತಿರಲಿ, ಆ ಭಾಗದಲ್ಲಿರುವ ಸುಪ್ರಸಿದ್ಧ ದೇವಸ್ಥಾನಗಳಿಗೆ (Temple) ಭೇಟಿ ನೀಡಿ ಪೂಜೆ ಸಲ್ಲಿಸುವುದು ರಜನಿ ವಾಡಿಕೆ. ಅದರಂತೆ ಲಾಲ್ ಸಲಾಮ್ ಚಿತ್ರೀಕರಣ ಸಮಯದಲ್ಲೇ ಪೂಜೆ ಸಲ್ಲಿಸಿ ಸ್ವಲ್ಪ ಹೊತ್ತು ದೇವಸ್ಥಾನದಲ್ಲೇ ಕಳೆದಿದ್ದಾರೆ. ರಜನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ಅವರ ಅಭಿಮಾನಿಗಳು ಜಾತ್ರೆ ರೀತಿಯಲ್ಲಿ ಸೇರಿದ್ದರು. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ತೀರಾ ಸರಳ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ರಜನಿ, ಟೀ ಶರ್ಟ್ ಮತ್ತು ಬಿಳಿ ಪಂಚಿಯಲ್ಲಿ ಇದ್ದರು. ರಜನಿಯನ್ನು ಸರಳವಾಗಿ ನೋಡಿದ ಅಭಿಮಾನಿಗಳು ಘೋಷಣೆ ಕೂಗಿ ಶುಭ ಹಾರೈಸಿದರು. ಅಲ್ಲದೇ ಸೆಲ್ಫಿಗಾಗಿ ಮುಗಿ ಬಿದ್ದರು. ಅವರನ್ನು ದೇವಸ್ಥಾನದಿಂದ ಕಾರ್ ಹತ್ತಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

    ಸದ್ಯ ರಜನಿ (Rajinikanth) ಜೈಲರ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲಾಲ್ ಸಲಾಮ್ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಸದ್ಯ ಲಾಲ್ ಸಲಾಮ್ ಸಿನಿಮಾದ ಶೂಟಿಂಗ್ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವರು ಅಡುಗೆ ಮಾಡುತ್ತಾ, ಫ್ರಿಡ್ಜ್ ಬಳಸುತ್ತಾ? ದೇವಸ್ಥಾನದ ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಅಜ್ಜಿ ಗರಂ

    ದೇವರು ಅಡುಗೆ ಮಾಡುತ್ತಾ, ಫ್ರಿಡ್ಜ್ ಬಳಸುತ್ತಾ? ದೇವಸ್ಥಾನದ ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಅಜ್ಜಿ ಗರಂ

    ಧಾರವಾಡ: ದೇವಸ್ಥಾನದ ವಿದ್ಯುತ್ ಬಿಲ್ (Electricity Bill) ಈ ಬಾರಿ ಹೆಚ್ಚಿಗೆ ಬಂದಿರುವುದಕ್ಕೆ ಅಜ್ಜಿಯೊಬ್ಬರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. “ದೇವರು ಅಡುಗೆ ಮಾಡುತ್ತಾ? ಫ್ರಿಡ್ಜ್ ಬಳಸುತ್ತಾ ಎಂದು ಆಕ್ರೋಶ ಹೊರಹಾಕಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಶಕ್ತಿ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ (Temple) ವಿದ್ಯುತ್ ಬಿಲ್ ಹಿಂದೆದಿಗಿಂತ ಈ ತಿಂಗಳು ಜಾಸ್ತಿ ಬಂದಿದೆ. ಇದರಿಂದಾಗಿ ದೇವಸ್ಥಾನದಲ್ಲಿ ಅರ್ಚಕಿಯಾಗಿರುವ ಅನಸೂಯಾ ಮಠಪತಿ ಸಿಡಿಮಿಡಿಗೊಂಡಿದ್ದಾರೆ. ಪ್ರತಿ ತಿಂಗಳು 400 ರೂಪಾಯಿ ಬರುತ್ತಿತ್ತು. ಈ ತಿಂಗಳು 940 ರೂ. ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

    ಸರ್ಕಾರ ದೇವಸ್ಥಾನದ ವಿದ್ಯುತ್ ಬಿಲ್ ಪಾವತಿ ಮಾಡದಂತೆ ಆದೇಶ ಮಾಡಲಿ. ಈ ತಿಂಗಳು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿವಾದ : ಕಾಂಗ್ರೆಸ್ ವಿರುದ್ಧ ಫೀಲ್ಡಿಗಿಳಿದ ವಿಪಕ್ಷಗಳು