Tag: ದೇವಸ್ಥಾನ

  • ಜ್ಞಾನವಾಪಿ ಮಸೀದಿ ಕೇಸ್‌- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ

    ಜ್ಞಾನವಾಪಿ ಮಸೀದಿ ಕೇಸ್‌- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ

    ಲಕ್ನೋ: ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ (Gyanvapi Mosque Suit) ಹಿಂದೂ ಮಂದಿರ ಸ್ಥಾಪನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಬಾರದು ಎಂದು ಕೋರಿ ಮುಸ್ಲಿಮರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್‌ ಹೈಕೋರ್ಟ್‌ (Allahabad High Court) ವಜಾಗೊಳಿಸಿದೆ.

    ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ ಐದು ಅರ್ಜಿಗಳನ್ನು ವಜಾಗೊಳಿಸಿದ ಕೋರ್ಟ್‌ ಜ್ಞಾನವಾಪಿ ವಿವಾದದಲ್ಲಿನ ಅರ್ಜಿಯನ್ನು ಪೂಜಾ ಸ್ಥಳಗಳ ಕಾಯ್ದೆಯ (Places of Worship Act) ನಿಬಂಧನೆಗಳಿಂದ ತಡೆಯುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಬರಬೇಡಿ – ಅಡ್ವಾಣಿ, ಜೋಶಿಯಲ್ಲಿ ಮನವಿ – ಬರಲಿರುವ VIP ಗಣ್ಯರು ಯಾರು?

    ಈ ಪ್ರಕರಣವು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ದೇಶದ ಎರಡು ಪ್ರಮುಖ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲದೇ ಆರು ತಿಂಗಳೊಳಗೆ ವಿಷಯವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

    ಪೂಜಾ ಸ್ಥಳಗಳ ಕಾಯ್ದೆ “ಧಾರ್ಮಿಕ ಸ್ವರೂಪ” ವನ್ನು ವ್ಯಾಖ್ಯಾನಿಸುವುದಿಲ್ಲ. “ಮತಾಂತರ” ಮತ್ತು “ಆರಾಧನಾ ಸ್ಥಳ”ಗಳನ್ನು ಮಾತ್ರ ಕಾಯಿದೆಯಡಿಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಿವಾದಿತ ಸ್ಥಳದ ಧಾರ್ಮಿಕ ಸ್ವರೂಪ ಏನು ಎಂಬುದಕ್ಕೆ ಕಕ್ಷಿದಾರರು ನೀಡಿದ ಪುರಾವೆಯ ನಂತರವೇ ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳಬಹುದು. ಅಗತ್ಯವಿದ್ದಲ್ಲಿ ಎಎಸ್‌ಐ ಮತ್ತೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

    ಮಸೀದಿ ಪರ ವಕೀಲರ ವಾದ ಏನಿತ್ತು?
    1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಮತ್ತು ಅದರ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇಲ್ಲ ಎಂದು ಅಂಜುಮಾನ್‌ ಮಸೀದಿಯ ಪರ ವಕೀಲರು ವಾದಿಸಿದ್ದರು.

    ಹಿಂದೆ ವಾರಣಾಸಿ ಕೋರ್ಟ್‌ ಹೇಳಿದ್ದು ಏನು?
    ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್‌ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು 2022ರ ಸೆಪ್ಟೆಂಬರ್‌ನಲ್ಲಿ ವಾರಣಾಸಿ ಜಿಲ್ಲಾ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.

    1991ರ ಕಾಯ್ದೆ ಪ್ರಶ್ನಿಸಿ ಸುಪ್ರೀಂನಲ್ಲಿದೆ ಅರ್ಜಿ
    ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ. ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ.

     

  • ಕಾರ್ತಿಕ ದೀಪೋತ್ಸವಂದು ದೀಪ ಬೆಳಗುವುದು ಯಾಕೆ? ಮಹತ್ವ ಏನು?

    ಕಾರ್ತಿಕ ದೀಪೋತ್ಸವಂದು ದೀಪ ಬೆಳಗುವುದು ಯಾಕೆ? ಮಹತ್ವ ಏನು?

    ದೇವಸ್ಥಾನಗಳಲ್ಲಿ (Temple) ದೀಪ ಬೆಳಗುವ ಕಾರ್ತಿಕ ಮಾಸ ನವೆಂಬರ್‌ 14 ರಿಂದ ಆರಂಭವಾಗಿದೆ. ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ (Karthika Masa) ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ (Karthika Deepotsava) ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

    ಕಾರ್ತಿಕ ನಕ್ಷತ್ರ ನವೆಂಬರ್‌/ಡಿಸೆಂಬರ್‌ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರಕ್ಕೆ ಬರುತ್ತದೆ. ಈ ಕಾರಣಕ್ಕೆ ಹಿಂದೂ ಪಂಚಾಂಗದ ಎಂಟನೇ ತಿಂಗಳಿಗೆ ಕಾರ್ತಿಕ ಮಾಸ ಎಂದು ಕರೆಯಲಾಗುತ್ತದೆ. ಪರಿಣಾಮವಾಗಿ ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಾನೆ. ಅದು ನೋಡುಗರಿಗೂ ಸುಂದರ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ಪ್ರತಿ ಮಾಸಕ್ಕೆ ಒಬೊಬ್ಬ ದೇವರು ಇರುವಂತೆ ಕಾರ್ತಿಕ ಮಾಸದ ಅಧಿಪತಿ ಶಿವ. ಈ ಮಾಸದಲ್ಲಿ ಶಿವನಿಗೆ (Shiva) ದೀಪೋತ್ಸವ ನಡೆಯುವಂತೆ ವಿಷ್ಣುವಿಗೆ ತುಳಸಿ ಜೊತೆ ಕಲ್ಯಾಣವೂ ನಡೆಯುತ್ತದೆ. ಈ ಕಾರಣಕ್ಕೆ ಶಿವ ಸೇರಿದಂತೆ ವಿವಿಧ ದೇವರ ಪೂಜೆ ಮಾಡುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.  ಇದನ್ನೂ ಓದಿ: ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?

    ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ೦ದು ಮಹಾವಿಷ್ಣುವು ಶಯನವನ್ನು ಪ್ರಾರ೦ಭಿಸುತ್ತಾನೆ. ನ೦ತರ ಕಾರ್ತಿಕ ಮಾಸದ ಏಕಾದಶಿಯ೦ದು ನಿದ್ದೆಯಿ೦ದ ಏಳುತ್ತಾನೆ. ಈ ದಿನವನ್ನು ʼಪ್ರಬೋಧಿನಿ ಏಕಾದಶಿʼ ಎಂದು ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ವಿಷ್ಣುವು ನಿದ್ರೆಯಿಂದ ಎಚ್ಚರಗೊಂಡು ಇಡೀ ಸೃಷ್ಟಿಯ ಮೇಲೆ ಸಂತೋಷ ಮತ್ತು ಅನುಗ್ರಹವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ. ಇದರೊಂದಿಗೆ ಲಕ್ಷ್ಮಿ ಕೂಡ ಈ ತಿಂಗಳು ಭೂಮಿಗೆ ಭೇಟಿ ನೀಡುತ್ತಾಳೆ. ಈ ಮಾಸದಲ್ಲಿ ಕೈಗೊಳ್ಳುವ ವ್ರತ, ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಶ್ರೇಷ್ಠತೆಯಿಂದ ಕೂಡಿದ್ದು ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ನಿಯಮ ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿದಿನ ತುಳಸಿ ಗಿಡದ ಬಳಿ ದೀಪವನ್ನು ಹಚ್ಚಿದರೆ ಶುಭ. ಕಾರ್ತಿಕ ಮಾಸದಲ್ಲಿ ಜ್ಯೋತಿ ಬೆಳಗುವ ಮೂಲಕ ಮನಸ್ಸಿನಲ್ಲಿರುವ ಅಂಧಕಾರವನ್ನು ದೂರ ಮಾಡಿಕೊಳ್ಳಬಹುದು. ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

    ದೇವತೆಗಳನ್ನು ಗೆದ್ದು ಪೀಡಿಸುತ್ತಿದ್ದ ತ್ರಿಪುರಾಸುರನನ್ನು ಶಿವನು ಸ೦ಹರಿಸಿ ತ್ರಿಪುರಾರಿ ಎಂದು ಕರೆಸಿಕೊಂಡ ದಿನ. ಶಿವನು ಒಂದು ಬಾಣದಿಂದ ತ್ರಿಪುರಾಸುರನನ್ನು ಸಂಹಾರ ಮಾಡಿದಾಗ ದೇವತೆಗಳು ದೀಪೋತ್ಸವ ಮಾಡಿದ್ದರು ಎಂದು ಪುರಾಣ ಕಥೆ ಹೇಳುತ್ತದೆ. ಕಾರ್ತಿಕ ಮಾಸದಲ್ಲಿ ಭೂಮಿಯ ನೀರಿಗೆ ವಿಶೇಷ ಅಯಸ್ಕಾ೦ತೀಯ ಶಕ್ತಿಯು ಬರುತ್ತದೆ. ಪ್ರಾತಃಕಾಲದಲ್ಲಿ ನದಿ, ಸಮುದ್ರ, ತೀರ್ಥ ಸ್ನಾನ ಮಾಡುವುದರಿ೦ದ ಹಲವಾರು ಕಾಯಿಲೆಗಳು ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.

     

  • ತಲೈವಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ ದೇವ್ರು – 250Kg ತೂಕದ ರಜನಿಕಾಂತ್‌ ವಿಗ್ರಹ ಸ್ಥಾಪನೆ

    ತಲೈವಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ ದೇವ್ರು – 250Kg ತೂಕದ ರಜನಿಕಾಂತ್‌ ವಿಗ್ರಹ ಸ್ಥಾಪನೆ

    ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ‘ಜೈಲರ್’ (Jailer) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡುತ್ತಿದ್ದು, ಬ್ಯುಸಿಯಲ್ಲಿದ್ದಾರೆ. ಈ ನಡುವೆ ತಲೈವಾಗೆ ಅಭಿಮಾನಿಯೊಬ್ಬರು ಯಾರೂ ಊಹಿಸದ ವಿಶೇಷ ಉಡುಗೊರೆ ನೀಡಿದ್ದಾರೆ.

    ಕಾರ್ತಿಕ್‌ ಎಂಬ ಅಭಿಮಾನಿಯೊಬ್ಬರು (Rajinikanth Fans) ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ತಲೈವಾಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ದೇವಸ್ಥಾನಲ್ಲಿ 250 ಕೆ.ಜಿ ತೂಕದ ರಜನಿಕಾಂತ್‌ ಅವರ ವಿಗ್ರಹ ನಿರ್ಮಿಸಲಾಗಿದೆ. ಕಾರ್ತಿಕ್ ಪುತ್ರಿ ಅನುಶಿಯಾ ಕೂಡ ರಜನಿಕಾಂತ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಹುಟ್ಟುಹಬ್ಬ: ನಟನ ಮನೆಮುಂದೆ ಪೊಲೀಸ್ ಸರ್ಪಗಾವಲು

    ಅಲ್ಲದೇ ಕಾರ್ತಿಕ್‌, ನಾನು ರಜನಿಕಾಂತ್‌ ಬಿಟ್ಟು ಬೇರೆ ಯಾವುದೇ ನಟರ ಸಿನಿಮಾ ನೋಡುವುದಿಲ್ಲ. ನಮಗೆ ಅವರೇ ದೇವರು. ಗೌರವದ ಸಂಕೇತಕ್ಕಾಗಿ ದೇವಾಲಯ ಕಟ್ಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಿಮಿಕ್ರಿ ಮಾಡಿದ ತುಕಾಲಿ ಸಂತು

    ಸದ್ಯ ಜೈಲರ್‌ ಸಿನಿಮಾ ಸಕ್ಸಸ್‌ ಬಳಿಕ ಸಾಲು ಸಾಲು ಸಿನಿಮಾಗಳನ್ನು ಮುಂದಿಟ್ಟುಕೊಂಡಿರುವ ರಜನಿಕಾಂತ್‌ ʻತಲೈವರ್‌ 170ʼ (Thalaivar 170) ಚಿತ್ರದಲ್ಲಿ ರಜನಿಕಾಂತ್‌ಗೆ ಬಿಗ್ ಬಿ ಜೊತೆಯಾಗುತ್ತಿದ್ದಾರೆ. 33 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗ್ತಿರೋದು ವಿಶೇಷ. ಈ ಬಗ್ಗೆ ಸ್ಪೆಷಲ್ ಪೋಸ್ಟ್‌ವೊಂದನ್ನ ತಲೈವಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ- ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ

    ಟಿ.ಜಿ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ‘ತಲೈವರ್ 170’ ಚಿತ್ರದಲ್ಲಿ 33 ವರ್ಷಗಳ ನಂತರ ನಾನು ನನ್ನ ಗುರು ಶ್ರೀ ಅಮಿತಾಭ್ ಬಚ್ಚನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ ಎಂಬುದಾಗಿ ರಜನಿಕಾಂತ್‌ ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖುಷ್ಬೂಗೆ ಪಾದ ತೊಳೆದು ನಾರಿ ಪೂಜೆ: ಫೋಟೋಗಳು ವೈರಲ್

    ಖುಷ್ಬೂಗೆ ಪಾದ ತೊಳೆದು ನಾರಿ ಪೂಜೆ: ಫೋಟೋಗಳು ವೈರಲ್

    ಖ್ಯಾತ ನಟಿ ಖುಷ್ಭೂ ಸುಂದರ್ (Khushboo) ಅವರನ್ನು ಕೇರಳದ (Kerala) ತ್ರಿಶೂರ್ ನ ವಿಷ್ಣುಮಾಯಾ (Vishnumaya) ದೇವಸ್ಥಾನಕ್ಕೆ ಆಹ್ವಾನಿಸಿ ಪಾದಪೂಜೆ ನೆರವೇರಿಸಿದ್ದಾರೆ ಪೂಜಾರಿಗಳು. ಕೇರಳ ವಿಷ್ಣುಮಾಯಾ ದೇವಸ್ಥಾನದಲ್ಲಿ (Temple) ಪ್ರತಿ ವರ್ಷವೂ ಸುಹಾಸಿನಿ ಪೂಜಾ ಹೆಸರಿನಲ್ಲಿ ನಾರಿ ಪೂಜೆಯನ್ನು ಮಾಡಲಾಗುತ್ತಿದೆ. ಪ್ರತಿ ವರ್ಷವೂ ಒಬ್ಬೊಬ್ಬ ಮಹಿಳೆಯನ್ನು ಆಹ್ವಾನಿಸಿ ಈ ರೀತಿ ಪೂಜೆ ನೆರವೇರಿಸಲಾಗುತ್ತದೆ.

    ಈ ಬಾರಿ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ಖುಷ್ಣೂ ಸುಂದರ್ ಅವರನ್ನು ದೇವಸ್ಥಾನಕ್ಕೆ ಕರೆಯಿಸಿಕೊಂಡು ನಾರಿ ಪೂಜೆಯನ್ನು ಮಾಡಲಾಗಿದೆ. ಪಾದಪೂಜೆ ಸೇರಿದಂತೆ ವಿವಿಧ ಪೂಜಾ ವಿಧಾನಗಳ ಮೂಲಕ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಲಾಗುತ್ತದೆ.

    ಪೂಜೆಯಲ್ಲಿ ಮಹಿಳೆಯರಿಗೆ ರೇಷ್ಮೆ ವಸ್ತ್ರಗಳನ್ನು ನೀಡುವುದರ ಜೊತೆ ಪಾದ ಪೂಜೆ ಮಾಡಿ, ಕೊರಳಿಗೆ ಹಾರ ಹಾಕಲಾಗುತ್ತದೆ. ಹೀಗೆ ಮಾಡಿದರೆ ಸ್ವರ್ಗದಿಂದಲೇ ದೇವತೆಯು ಧರೆಗೆ ಬಂದು, ಪಾದ ಪೂಜೆ ಮಾಡಿಸಿಕೊಳ್ಳುತ್ತಾಳೆ ಎನ್ನುವುದು ಅಲ್ಲಿನ ನಂಬಿಕೆ. ಇದನ್ನೂ ಓದಿ:‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್

    ಈ ವಿಷಯವನ್ನು ಸ್ವತಃ ಖುಷ್ಭೂ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ, ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ ಎಂದೆಲ್ಲ ಅವರು ಬರೆದುಕೊಂಡಿದ್ದಾರೆ.

     

    ಖುಷ್ಬು ಮೂಲತಃ ಮುಸ್ಲಿಂ ಸಮುದಾಯಲ್ಲಿ ಹುಟ್ಟಿದವರು. ಇವರು ಮೂಲ ಹೆಸರು ನಖತ್ ಖಾನ್. ಸಿನಿಮಾ ರಂಗಕ್ಕೆ ಬಂದ ನಂತರ ಮತ್ತು ಮದುವೆಯ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇದೀಗ ಖುಷ್ಭೂ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಖುಷ್ಭೂಗಾಗಿ ದೇವಸ್ಥಾನವೊಂದನ್ನು ಕಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆಯಿಂದ ಭೀಮಾ ನದಿ ಪಾತ್ರದ ದೇವಸ್ಥಾನಗಳಿಗೆ ಜಲದಿಗ್ಬಂಧನ

    ಭಾರೀ ಮಳೆಯಿಂದ ಭೀಮಾ ನದಿ ಪಾತ್ರದ ದೇವಸ್ಥಾನಗಳಿಗೆ ಜಲದಿಗ್ಬಂಧನ

    ಯಾದಗಿರಿ: ಜಿಲ್ಲೆಯಾದ್ಯಂತ ಭಾನುವಾರ ತಡ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದೆ.

    ಯಾದಗಿರಿ (Yadagiri) ನಗರದ ಹೊರವಲಯದಲ್ಲಿರುವ ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್ ನಿಂದ ಭೀಮಾ ನದಿಗೆ 6 ಗೇಟ್ ಗಳನ್ನ ಓಪನ್ ಮಾಡಿ, ಬರೋಬ್ಬರಿ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹೀಗಾಗಿ ನದಿ ಪಾತ್ರದ ವೀರಾಂಜನೇಯ ಹಾಗೂ ಕಂಗಳೇಶ್ವರ ದೇವಸ್ಥಾನಗಳಿಗೆ ಜಲದಿಗ್ಬಂಧನವಾಗಿದೆ. ಹೀಗಾಗಿ ಭಕ್ತರಿಗೆ ದೇವರ ದರ್ಶನ ಸಿಕ್ಕಿಲ್ಲ.

    ಮತ್ತೊಂದೆಡೆ ಸುರಿದ ಭಾರೀ ಮಳೆಯಿಂದಾಗಿ ನಗರದ ಲುಂಬಿನಿ ಗಾರ್ಡನ್ ಗೆ ನೀರು ನುಗ್ಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಮನೆತನದವ್ರು ಎಂದು ದೇವಾಲಯದ ನಿಯಮ ಉಲ್ಲಂಘಿಸಿದ ಮಹಿಳೆ – ಹೊರದಬ್ಬಿದ ಪೊಲೀಸ್‌ ಸಿಬ್ಬಂದಿ

    ರಾಜಮನೆತನದವ್ರು ಎಂದು ದೇವಾಲಯದ ನಿಯಮ ಉಲ್ಲಂಘಿಸಿದ ಮಹಿಳೆ – ಹೊರದಬ್ಬಿದ ಪೊಲೀಸ್‌ ಸಿಬ್ಬಂದಿ

    ಭೋಪಾಲ್: ದೇವಸ್ಥಾನದ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮಧ್ಯಪ್ರದೇಶ (Madhya Pradesh) ಪನ್ನಾದ ರಾಜಮನೆತನದ ಮಹಿಳೆ ಜಿತೇಶ್ವರಿ ದೇವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರತಿ ವರ್ಷ ಪದ್ಧತಿಯಂತೆ ಪನ್ನಾ ಜಿಲ್ಲೆಯನ್ನು ಒಳಗೊಂಡಿರುವ ಬುಂದೇಲ್‌ಖಂಡ್ ಪ್ರದೇಶದ ಜನಪ್ರಿಯ ಧಾರ್ಮಿಕ ಕ್ಷೇತ್ರವಾದ ಶ್ರೀ ಜುಗಲ್ ಕಿಶೋರ್ ದೇವಸ್ಥಾನದಲ್ಲಿ ಈ ವರ್ಷವೂ ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಿಸಲಾಯಿತು. ಇದನ್ನೂ ಓದಿ: G20 ಒಕ್ಕೂಟಕ್ಕೆ ಆಫ್ರಿಕನ್ ಯೂನಿಯನ್ ಸೇರ್ಪಡೆ

    ದೇವಸ್ಥಾನಕ್ಕೆ ಆಗಮಿಸಿದ್ದ ಜಿತೇಶ್ವರಿ ದೇವಿ ಅವರು ಸ್ವತಃ ‘ಆರತಿ’ ಮಾಡಬೇಕೆಂದು ಒತ್ತಾಯಿಸುವ ಮೂಲಕ ದೇವಾಲಯದ ಧಾರ್ಮಿಕ ಕ್ರಿಯೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದಾಗ ಎಡವಿ ಬಿದ್ದಿದ್ದಾರೆ.

    ರಾಜಮನೆತನದ ಸದಸ್ಯೆಯನ್ನು ದೇವಾಲಯದ ಆವರಣದಿಂದ ಹೊರಹೋಗುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆಸಿರುವುದೂ ದೃಶ್ಯದಲ್ಲಿ ಸೆರೆಯಾಗಿದೆ. ಜಿತೇಶ್ವರಿ ದೇವಿ ಕುಡಿದ ಅಮಲಿನಲ್ಲಿ ದೇವಸ್ಥಾನದ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಯತ್ನಿಸಿದ್ದರು ಎಂದು ದೇವಸ್ಥಾನದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ವಾಗ್ವಾದದ ವೇಳೆ ಜಿತೇಶ್ವರಿ ದೇವಿಯನ್ನು ಪೊಲೀಸ್‌ ಸಿಬ್ಬಂದಿ ದೇವಸ್ಥಾನದಿಂದ ಹೊರಗೆ ಎಳೆದಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    ಘಟನೆ ಕುರಿತು ಪನ್ನಾ ಪೊಲೀಸ್ ಅಧೀಕ್ಷಕ ಸಾಯಿ ಕೃಷ್ಣ ಎಸ್ ತೋಟಾ ಪ್ರತಿಕ್ರಿಯಿಸಿ, ಸಂಪ್ರದಾಯದಂತೆ ರಾಜಮನೆತನದ ಪುರುಷರು ಮಾತ್ರ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ದೇವಾಲಯದಲ್ಲಿ ಪೊರಕೆಯಿಂದ ಶುಚಿಗೊಳಿಸುವ ಆಚರಣೆಯಾದ “ಚಾನ್ವಾರ್” ಅನ್ನು ಅರ್ಪಿಸುತ್ತಾರೆ. ಜಿತೇಶ್ವರಿ ದೇವಿಯ ಮಗನಿಗೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಕಾರಣ, ಅವರೇ ಸ್ವತಃ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲು ಮುಂದಾಗಿದ್ದರು ಎಂದಿದ್ದಾರೆ.

    ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕರೆದುಕೊಂಡು ಹೋಗುವಾಗ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಜಿತೇಶ್ವರಿ ದೇವಿ ಅವರು ಗಂಭೀರ ಆರೋಪ ಮಾಡಿದ್ದು, ರಕ್ಷಣಾ ಕಲ್ಯಾಣ ನಿಧಿಯಿಂದ ಪನ್ನಾದಲ್ಲಿ 65,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಆಪಾದಿತ ಹಗರಣದ ಬಗ್ಗೆ ದನಿಯೆತ್ತಿದ್ದಕ್ಕಾಗಿ ತನ್ನನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ

    ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ

    ಕೊಪ್ಪಳ: ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿಯೊಬ್ಬರು ವೀಕಲಚೇತನರಾಗಿದ್ದು, ಪಂಕ್ಚರ್ ಹಾಕಿ ಜೀವನ ಮಾಡುತ್ತಿದ್ದಾರೆ. ಆದರೆ ಇದೀಗ ಅವರು ಮಾಡುವ ಕಾರ್ಯಕ್ಕೆ ಇಡೀ ಆ ಗ್ರಾಮದಲ್ಲಿ ಭಾವೈಕ್ಯ ಮೂಡಿದೆ. ಹಿದೂ ದೇವಾಲಯ ಕಟ್ಟಿಸಿರೋ ಅವರು ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯದ ಸಂದೇಶ ಸಾರಿದ್ದಾರೆ.

    ಹೌದು. ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಭಾವೈಕ್ಯ ಸಂದೇಶ ಸಾರುತ್ತಿರೋ ಅಬ್ಬುಸಾಹೇಬ ಹಿಂದೂ ದೇವಾಲಯ (Hindu Temple) – ದರ್ಗಾ (Darga) ಕಟ್ಟಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಮೂಲತ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಇವರು ಹುಟ್ಟಿನಿಂದ ವೀಕಲ ಚೇತನರಾಗಿದ್ದಾರೆ. ಹುಟ್ಟಿನಿಂದಲೇ ಹಿಂದೂ-ಮಸ್ಲಿಂ-ಕ್ರೈಸ್ತರೆಲ್ಲರೂ ಒಂದೇ ಎನ್ನುವ ಅಂಶವನ್ನು ಮೈಗೂಡಿಸಿಕೊಂಡು ಬೆಳೆದ ಇವರು, ಜೀವನ ಸಾಗಿಸುವ ಸಲುವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಾರೆ. ಅದೊಂದು ದಿನ ಇವರ ಕನಸಿನಲ್ಲಿ ಅಂಬಾದೇವಿ ಬರ್ತಾಳಂತೆ. ಇದರಿಂದ ಮತ್ತಷ್ಟು ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಅಬ್ಬುಸಾಹೇಬ ಅವರು ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

    ಕಳೆದ ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯತಾ ಆಶ್ರಯ ನಿರ್ಮಾಣವಾಗಿದೆ. ಕಳೆದ ಐದು ತಿಂಗಳ ಹಿಂದೆ ಆಶ್ರಮದ ಭಕ್ತರೆಲ್ಲರೂ 15 ದಿನಗಳಲ್ಲಿಯೇ ಭವ್ಯವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಪೂಜೆ ಮಾಡುತ್ತಿರುವ ಅಬ್ಬುಸಾಹೇಬ ಅವರು ದೇಶದಲ್ಲಿ ಮತ್ತಷ್ಟು ಭಾವೈಕ್ಯತೆ ಹೆಚ್ಚಾಗಬೇಕು ಎಂದು ಹೇಳುತ್ತಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಒಟ್ಟಿನಲ್ಲಿ ಜಾತಿ-ಧರ್ಮ ಅಂತಾ ಜಗಳವಾಡುವ ಜನರ ಮಧ್ಯೆ ಅಬ್ಬುಸಾಹೇಬ ಅವರ ಭಾವೈಕ್ಯತಾ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ. ಇವರ ಕಾರ್ಯ ಇನ್ನಷ್ಟೂ ಜನರಿಗೆ ಮಾದರಿಯಾಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆ ಬಳಿಕ ಒಂದೇ ತಿಂಗಳಲ್ಲಿ ದೇಗುಲಗಳ ಆದಾಯ ಹೆಚ್ಚಳ

    ಶಕ್ತಿ ಯೋಜನೆ ಬಳಿಕ ಒಂದೇ ತಿಂಗಳಲ್ಲಿ ದೇಗುಲಗಳ ಆದಾಯ ಹೆಚ್ಚಳ

    – ಪ್ರವಾಸಿ ತಾಣಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಳ

    ರಾಜ್ಯದಲ್ಲಿ ಮಳೆ (Rain)  ಕಡಿಮೆಯಾಗಿದ್ದು, ಈ ಹಿನ್ನೆಲೆ ಹಲವು ಸ್ಥಳಗಳಿಗೆ ಹಾಕಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಪ್ರಮುಖ ಪ್ರವಾಸಿ ಸ್ಥಳಗಳು (Tourist Place) ಹಾಗೂ ದೇಗುಲಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

    ಹೌದು. ಕಡಲತೀರದಲ್ಲಿ ನಿರ್ಬಂಧ ಹಾಕಲಾಗಿತ್ತು. ಇತ್ತ ಜುಲೈನಲ್ಲಿ ಪ್ರವಾಸಕ್ಕೆ ಬರಬೇಡಿ ಅಂತ ಚಿಕ್ಕಮಗಳೂರು ಡಿಸಿ ಮನವಿ ಮಾಡಿಕೊಂಡಿದ್ದರು. ಶಿವಮೊಗ್ಗದ ಕೊಡಚಾದ್ರಿ ಬೆಟ್ಟ ಕೂಡ ಪ್ರವಾಸಿಗರಿಗೆ ಮುಕ್ತವಾಗಿದೆ. ಇನ್ನು ಪ್ರಧಾನಿ (Narendra Modi) ಭೇಟಿ ಬಳಿಕ ಬಂಡೀಪುರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇಷ್ಟು ಮಾತ್ರವಲ್ಲದೆ ಶಕ್ತಿ ಯೋಜನೆಯಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಆಷಾಢ ಮುಗಿದು ಶ್ರಾವಣ ಆರಂಭವಾಗಿದ್ದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಶಕ್ತಿ ಯೋಜನೆಯಿಂದಾಗಿ ಯಾವ ದೇಗುಲಕ್ಕೆ ಎಷ್ಟು ಆದಾಯ ಬಂದಿದೆ ಎಂಬುದನ್ನು ಡೀಟೈಲ್ ಆಗಿ ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

    ದೇಗುಲಗಳ ಆದಾಯ ಹೆಚ್ಚಾಗಿರುವ ವಿವರ: ಒಂದೇ ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11 ರವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ- ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ವರ್ಷ ಜೂನ್ 11 ರಿಂದ ಜುಲೈ 15 ರವರೆಗೆ 24.47 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ ಭಾರೀ ಹೆಚ್ಚಳ ಕಂಡಿದೆ. ಇದನ್ನೂ ಓದಿ:

    ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಆದಾಯದ ಆಧಾರದಲ್ಲಿ ಅಧಿಕೃತವಾಗಿ ಹೊಂದಿರುವ ಅಂಕಿ-ಅಂಶಗಳ ಪ್ರಕಾರ 2023-23ರಲ್ಲಿ ಅತ್ಯಂತ ಶ್ರೀಮಂತವಾದ ದೇವಸ್ಥಾನವೆಂದರೆ ಅದು ಕುಕ್ಕೆ ಸುಬ್ರಮಣ್ಯ (Kukke Subramanya). ಟಾಪ್ 1 ಸ್ಥಾನವನ್ನು ಕಾಯ್ದುಕೊಂಡಿರುವ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅತ್ಯಂತ ಹೆಚ್ಚು ವರಮಾನವುಳ್ಳ ದೇವಸ್ಥಾನವಾಗಿದೆ. ಅದರ ಆದಾಯ ಬರೋಬ್ಬರಿ 123 ಕೋಟಿ 64 ಲಕ್ಷ ಆಗಿದೆ.

    ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಂತರದ ಸ್ಥಾನದಲ್ಲಿರೋದು ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ (Kolluru Sri Mookambika Temple) . ಈ ದೇವಸ್ಥಾನಕ್ಕೆ ಹರಿದುಬಂದ ಆದಾಯ 59 ಕೋಟಿ 47 ಲಕ್ಷವಾಗಿದ್ದರೆ, ಖರ್ಚಾಗಿರುವುದು 33 ಕೋಟಿ 32 ಲಕ್ಷ. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹರಿದುಬಂದ ಆದಾಯದ 50% ರಷ್ಟು ಇಲ್ಲಿ ಸಂಗ್ರಹವಾಗಿದೆ. ಇನ್ನು ಟಾಪ್ 3ರ ಸ್ಥಾನದಲ್ಲಿರುವುದು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ (Chamundeshwari Temple) ಮತ್ತು ಅರಮನೆ ಮುಜರಾಯಿ ದೇವಾಲಯಗಳು. ಇಲ್ಲಿ ಭಕ್ತಾದಿಗಳಿಂದ 52 ಕೋಟಿ 40 ಲಕ್ಷ ಸಂಗ್ರಹವಾಗಿದೆ.

    ಟಾಪ್ 4ರ ಸ್ಥಾನದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇವಾಲಯವಿದೆ. ಇಲ್ಲಿ ಸಂಗ್ರಹವಾಗಿದ್ದು 36 ಕೋಟಿ 48 ಲಕ್ಷವಾದ್ರೆ ಬರೋಬ್ಬರಿ 35 ಕೋಟಿ 68 ಲಕ್ಷದಷ್ಟು ಖರ್ಚಾಗಿದೆ. ಉಳಿದಿರೋದು ಕೇವಲ ಅರ್ಧ ಕೋಟಿ ಮಾತ್ರ. ಟಾಪ್ 5ರ ಸ್ಥಾನದಲ್ಲಿ ಮಂಗಳೂರು ತಾಲೂಕು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ (Kateel Durgaparameshwari) ದೇವಸ್ಥಾನವಿದೆ. 32 ಕೋಟಿ 10 ಲಕ್ಷ ಆದಾಯದ ರೂಪದಲ್ಲಿ ಸಂಗ್ರಹವಾಗಿದ್ದು, 25 ಕೋಟಿ 97 ಲಕ್ಷದಷ್ಟು ಖರ್ಚಾಗಿದೆ.

    ಟಾಪ್ 6 ರ ಸ್ಥಾನದಲ್ಲಿ ಮೈಸೂರಿನ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯವಿದೆ. ಈ ದೇಗುಲಕ್ಕೆ 26 ಕೋಟಿ 71 ಲಕ್ಷ ಆದಾಯದ ರೂಪದಲ್ಲಿ ಹರಿದುಬಂದಿದ್ದು, 18 ಕೋಟಿ 74 ಲಕ್ಷದಷ್ಟು ಖರ್ಚಾಗಿದೆ. ಹಾಗೆಯೇ ಟಾಪ್ 7 ರ ಸ್ಥಾನದಲ್ಲಿ ಬೆಳಗಾಂನ ಎಲ್ಲಮ್ಮನ ಗುಡ್ಡ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನವಿದೆ. 22 ಕೋಟಿ 52 ಲಕ್ಷದಷ್ಟು ಆದಾಯ ಹರಿದುಬಂದಿದ್ರೆ ಖರ್ಚಾಗಿರುವುದು 11ಕೋಟಿ 51 ಲಕ್ಷವಂತೆ.

    ಟಾಪ್ 8ರ ಸ್ಥಾನದಲ್ಲಿ ಉಡುಪಿ ಜಿಲ್ಲೆ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದ್ದು, ವಾರ್ಷಿಕ 14 ಕೋಟಿ 55 ಲಕ್ಷ ಗಳಿಕೆಯಾಗಿದೆ. ಈ ಪೈಕಿ 13 ಕೋಟಿ 2 ಲಕ್ಷದಷ್ಟು ಖರ್ಚಾಗಿದೆ. ಟಾಪ್ 9 ರ ಸ್ಥಾನದಲ್ಲಿ ದೊಡ್ಡಬಳ್ಳಾಪುರ ಜಿಲ್ಲೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವಿದೆ. ದೇವಸ್ಥಾನಕ್ಕೆ ಹರಿದುಬಂದಿದ್ದು 12 ಕೋಟಿ 25 ಲಕ್ಷವಾದ್ರೆ 7 ಕೋಟಿ 2 ಲಕ್ಷ ಖರ್ಚಾಗಿದೆ. ಟಾಪ್ 10ರ ಸ್ಥಾನದಲ್ಲಿ ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನವಿದೆ. ದೇವಸ್ಥಾನದಲ್ಲಿ ಸಂಗ್ರಹವಾಗಿದ್ದು 10 ಕೋಟಿ 58 ಲಕ್ಷವಾದ್ರೆ, 19 ಕೋಟಿ 41 ಲಕ್ಷದಷ್ಟು ಖರ್ಚಾಗಿದೆ.

    ಆದಾಯಕ್ಕಿಂತ ಖರ್ಚಾಗಿರುವುದೇ ಹೆಚ್ಚು. ಇದು ಆಶ್ಚರ್ಯ-ಅನುಮಾನಕ್ಕೆ ಕಾರಣವಾಗಿದ್ರೂ ಆಶ್ಚರ್ಯವಿಲ್ಲ. ಅಂದಹಾಗೆ ಈ 10 ದೇವಸ್ಥಾನಗಳಿಂದಲೇ 390 ಕೋಟಿ 75 ಲಕ್ಷದಷ್ಟು ಆದಾಯ ಹರಿದುಬಂದಿರುವುದು ವಿಶೇಷ. 2023-24 ರಲ್ಲಿ ಆದಾಯದ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಗಳಿವೆ. ಇಷ್ಟೊಂದು ಆದಾಯದಲ್ಲಿ 281 ಕೋಟಿ 27 ಲಕ್ಷ ಖರ್ಚಾಗಿದೆ ಎಂದು ಮುಜರಾಯಿ ಇಲಾಖೆ ವಿವರಣೆ ಕೊಟ್ಟಿದೆ. ಇದೆಲ್ಲವೂ ಅಲ್ಲಿನ ದೇವಸ್ಥಾನಗಳು ಆಂತರಿಕವಾಗಿ ಮಾಡಿಕೊಂಡ ಲೆಕ್ಕಪರಿಶೋಧನೆಯಿಂದ ಹೊರಬಂದ ಮಾಹಿತಿಗಳಾಗಿವೆ. ಒಟ್ಟಿನಲ್ಲಿ ಮಳೆ, ಶ್ರಾವಣ, ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಪರಿಣಾಮ ರಾಜ್ಯದ್ಯಾಂತ ಇರುವ ಪ್ರವಾಸಿತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆ ಪರಿಣಾಮ – ರಾಜ್ಯದ ದೇವಾಲಯಗಳಿಗೆ ಡಬಲ್ ಆದಾಯ

    ಶಕ್ತಿ ಯೋಜನೆ ಪರಿಣಾಮ – ರಾಜ್ಯದ ದೇವಾಲಯಗಳಿಗೆ ಡಬಲ್ ಆದಾಯ

    ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ಬಂದಿರುವುದು ಶಕ್ತಿ ಯೋಜನೆ. ಈ ಯೋಜನೆಗೆ ಅಭೂತಪೂರ್ವ ಮಹಿಳಾ ಬೆಂಬಲ ದೊರೆತಿದ್ದು ಉಚಿತ ಪ್ರಯಾಣದ ಕಾರಣದಿಂದ ದೇವಾಲಯಗಳ (Temple) ಆದಾಯವೂ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಸಹ ರಶ್ ಆಗುತ್ತಿವೆ. ಶಕ್ತಿ ಯೋಜನೆಯಿಂದ (Shakti Scheme) ದೇವಾಲಯಗಳಿಗೆ ಹರಿದು ಬರುತ್ತಿರುವ ಆದಾಯ ದ್ವಿಗುಣಗೊಂಡಿದೆ.

    ರಾಜ್ಯ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದು ಮೂರು ತಿಂಗಳಾಗಿದೆ. ಸಾರಿಗೆ ನಿಗಮಗಳ ಬಸ್‌ನಲ್ಲಿ ಉಚಿತ ಪ್ರಯಾಣದ ಲಾಭವನ್ನ ಮಹಿಳೆಯರು ಬಹಳ ಸಂತೋಷದಿಂದ ಅನುಭವಿಸುತ್ತಿದ್ದಾರೆ. ಉಚಿತ ಪ್ರಯಾಣದಿಂದಾಗಿ ಸಾರಿಗೆ ನಿಗಮಕ್ಕೆ ಮಾತ್ರವಲ್ಲ ಪ್ರವಾಸಿ ತಾಣಗಳಿಗೂ ಲಾಭ ಶುರುವಾಗಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ರೇಷನ್ ವ್ಯತ್ಯಯ – ಸ್ವಂತ ಹಣ ಬಳಸಿ ಶಿಕ್ಷಕರಿಂದ ರೇಷನ್ ಖರೀದಿ

    ಶಕ್ತಿ ಯೋಜನೆಯಿಂದ ಭಗವಂತನ ಖಜಾನೆಗೆ ಕೋಟಿ ಕೋಟಿ ಕಾಸು ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಯಾಗಿ ಇದೇ ಮೊದಲ ಬಾರಿಗೆ ಹುಂಡಿ ಹಣ ಲೆಕ್ಕ ಹಾಕಲಾಗಿದೆ. ಅಲ್ಲದೆ ಜೂನ್ 11 ರಿಂದ ಜುಲೈ 15ರ ವರೆಗಿನ ತಮ್ಮ ವ್ಯಾಪ್ತಿಯ ದೇವಾಲಯಗಳ ಹುಂಡಿ ಹಣ ತುಲನೆ ಮಾಡಿದೆ ಮುಜರಾಯಿ ಇಲಾಖೆ. ಈ ವೇಳೆ 2022ರ ಇದೇ ಅವಧಿಗಿಂತ ಈ ಬಾರಿಯ ಅವಧಿಯಲ್ಲಿ ಹೆಚ್ಚು ಗಳಿಕೆಯಾಗಿರುವ ಮಾಹಿತಿ ಗೊತ್ತಾಗಿದೆ. 2022ರ ಜೂನ್ 11 – ಜುಲೈ 15ರ ಅವಧಿಯಲ್ಲಿ 29.68 (29,68,97,550) ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿಯ ಜೂನ್ 11 – ಜುಲೈ 15ರ ಅವಧಿಯಲ್ಲಿ 39.43 (39,43,60,764) ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹತ್ತು ಕೋಟಿ ಹೆಚ್ಚಿನ ಆದಾಯ ಸಂಗ್ರಹ ದೇವಾಲಯಗಳಲ್ಲಾಗಿದೆ.

    ಜೊತೆಗೆ ಈ ಅವಧಿಯಲ್ಲಿ ಜನರ ಭೇಟಿ ಕೂಡ ಹೆಚ್ಚಳವಾಗಿದ್ದು, ಕಳೆದ ಬಾರಿಗಿಂತ 30% ಜನರ ಸಂಖ್ಯೆ ಏರಿಕೆ ಕಂಡಿದೆ. 2022 ಜೂನ್ 11 ರಿಂದ ಜುಲೈ 15ರ ವರೆಗೆ ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ 81.26 ಲಕ್ಷ ಭಕ್ತರು ಭೇಟಿ ಮಾಡಿದ್ದರೆ, 2023 ಜೂನ್ 11 ರಿಂದ ಜುಲೈ 15ರ ವರೆಗೆ 1.42 ಕೋಟಿ ಮಂದಿ ರಾಜ್ಯದ ಮುಜರಾಯಿ ವ್ಯಾಪ್ತಿಗೆ ಸೇರಿದ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆದಿದ್ದಾರೆ. ಈ ಮೂಲಕ ಕೋಟ್ಯಂತರ ಆದಾಯ ಹರಿದು ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್

    ಯಾವ ದೇವಾಲಯಕ್ಕೆ ಎಷ್ಟು ಆದಾಯ?
    ಶ್ರೀ ಭಗಂಡೇಶ್ವರ & ತಲಕಾವೇರಿ ದೇವಾಲಯ, ಭಾಗಮಂಡಲ, ಕೊಡಗು:
    2022, ಜೂನ್ 11 ರಿಂದ ಜುಲೈ 15 – 6,13,94,492 ರೂ. ಆದಾಯ – 37,94,022 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 7,79,24,065 ರೂ. – 51,40,857 ಭಕ್ತರು.

    ಚಾಮುಂಡೇಶ್ವರಿ ದೇವಾಲಯ, ಮೈಸೂರು:
    2022, ಜೂನ್ 11 ರಿಂದ ಜುಲೈ 15 – 48,01,914 ರೂ. – 4,93,530 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 3,63,05,672 ರೂ. – 5,97,370 ಭಕ್ತರು.

    ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ:
    2022, ಜೂನ್ 11 ರಿಂದ ಜುಲೈ 15 – 11,13,92,705 ರೂ. – 6,95,800 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 11,66,40,265 ರೂ. – 9,68,450 ಭಕ್ತರು.

    ಕಟ್ಟ ಬಸವೇಶ್ವರ ದೇವಸ್ಥಾನ, ಎತ್ತಿನಬೂದಿಹಾಳ, ಬಳ್ಳಾರಿ ಜಿಲ್ಲೆ:
    2022, ಜೂನ್ 11 ರಿಂದ ಜುಲೈ 15 – 1,02,75,761 ರೂ. – 4,58,330 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 1,41,00,163 ರೂ. – 4,90,830 ಭಕ್ತರು.

    ಘಾಟಿ ಸುಬ್ರಮಣ್ಯ ದೇವಾಲಯ, ದೊಡ್ಡಬಳ್ಳಾಪುರ:
    2022, ಜೂನ್ 11 ರಿಂದ ಜುಲೈ 15 – 1,18,18,433 ರೂ. – 66,000 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 93,48,186 ರೂ. – 81,000 ಭಕ್ತರು.

    ಬಪ್ಪನಾಡು ದೇವಸ್ಥಾನ, ಮುಲ್ಕಿ, ದಕ್ಷಿಣ ಕನ್ನಡ:
    2022, ಜೂನ್ 11 ರಿಂದ ಜುಲೈ 15 – 1,62,07,103 ರೂ. – 25,000 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 1,86,06,514 ರೂ. – 30,000 ಭಕ್ತರು.

    ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು, ಮೈಸೂರು:
    2022, ಜೂನ್ 11 ರಿಂದ ಜುಲೈ 15 – 1,05,82,075 ರೂ. – 15,650 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 1,12,70,814 ರೂ. – 20,110 ಭಕ್ತರು.

    ಶ್ರೀಬನಶಂಕರಿ ದೇವಾಲಯ ಬೆಂಗಳೂರು:
    2022, ಜೂನ್ 11 ರಿಂದ ಜುಲೈ 15 – 65,28,526 ರೂ. – 75,000 ಭಕ್ತರು.
    2023, ಜೂನ್ 11 ರಿಂದ ಜುಲೈ 15 – 83,64,052 ರೂ. – 1,00,000 ಭಕ್ತರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 14ರ ಬಾಲಕನಿಗೆ ಶ್ರೀಕಾಡದೇವರ ಮಠದ ಉತ್ತರಾಧಿಕಾರಿ ಪಟ್ಟ

    14ರ ಬಾಲಕನಿಗೆ ಶ್ರೀಕಾಡದೇವರ ಮಠದ ಉತ್ತರಾಧಿಕಾರಿ ಪಟ್ಟ

    -ವೀರಭದ್ರೇಶ್ವರ-ಕಾಡಸಿದ್ದೇಶ್ವರ ಮಠದ ನೂತನ ಉತ್ತರಾಧಿಕಾರಿ ರೇಣುಕಾ ದೇವರ ಪುರಪ್ರವೇಶ ಕಾರ್ಯಕ್ರಮ ಸಂಪನ್ನ

    ಚಿಕ್ಕೋಡಿ: ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ-ಕಾಡಸಿದ್ದೇಶ್ವರ ಮಠದ (Veerabhadreshwara Kadasiddeshwar Mutt) ನೂತನ ಉತ್ತರಾಧಿಕಾರಿಗಳಾದ ರೇಣುಕ ದೇವರ‌ ಪುರಪ್ರವೇಶ ಕಾರ್ಯಕ್ರಮ ಸಕಲವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ನೆರವೇರಿತು. 14ರ ಬಾಲಕನಿಗೆ ಶ್ರೀಕಾಡದೇವರ ಮಠದ ಉತ್ತರಾಧಿಕಾರಿ ಪಟ್ಟ ನೀಡಿ ಗ್ರಾಮದ ತುಂಬಾ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

    ಈ ಪುರಪ್ರವೇಶ ಮೆರವಣಿಗೆಯಲ್ಲಿ ಕುದುರೆ, ಸಕಲವಾದ್ಯ ಮೇಳಗಳು, ಪುರವಂತರು, ಸುಮಂಗಲಿಯರ ಕುಂಭದೊಂದಿಗೆ ಅದ್ಧೂರಿಯಾಗಿ ಜರುಗಿತು. ಗ್ರಾಮದ ಬೀದಿ ಬೀದಿಯಲ್ಲೂ ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಮೂಡಿಸಿ ಪುರಪ್ರವೇಶ ಮೆರವಣಿಗೆಯನ್ನ ಜನರು ಸ್ವಾಗತಿಸಿದರು.

    ಸರ್ಕಾರಿ ಆಸ್ಪತ್ರೆಯ ಮೂಲಕ ಹಳೇ ಯಡೂರ, ಬಸವಣ್ಣನ ದೇವಸ್ಥಾನ, ಚೆನ್ನಮ್ಮ ವೃತ್ತ ಮಾರ್ಗವಾಗಿ ಮೆರವಣಿಗೆ ಸಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ನಂತರ ನೂತನ ಉತ್ತರಾಧಿಕಾರಿಗಳಾದ ರೇಣುಕಾ ದೇವರು ವೀರಭದ್ರೇಶ್ವರ ಹಾಗೂ ಭದ್ರಕಾಳೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಅಧಿಕಾರ, ಹಣದ ಆಸೆಗೆ ಓಡೋಗಿದ್ದ ಹೆಬ್ಬಾರ್ ಈಗ್ಯಾಕೆ ಕಾಂಗ್ರೆಸ್‍ಗೆ ಬರ್ತಾರೆ ಹೇಳಲಿ: ಕೈ ಶಾಸಕ

    ಬಳಿಕ‌‌ ಪುರಪ್ರವೇಶ ಮೆರವಣಿಗೆಯು ಕಾಡಸಿದೇಶ್ವರ ಮಠಕ್ಕೆ (Kadasiddeshwar Mutt) ಬಂದ ನಂತರ ಸುಮಲಿಂಗಯರು ಆರತಿ ಬೇಳಗಿ ಸ್ವಾಗತಿಸಿಕೊಂಡರು. ಬಳಿಕ ನೂತನ ಉತ್ತರಾಧಿಕಾರಿಗಳಾದ ರೇಣುಕಾ ದೇವರು ಕಾಡಸಿದ್ದೇಶ್ವರ ದೇವರಿಗೆ ನಮಸ್ಕರಿಸಿ. ನಂತರ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಆಶಿವಾರ್ದ ಪಡೆದುಕೊಂಡರು. ಈ ಸಂಧರ್ಭದಲ್ಲಿ ಸೂಗೂರೇಶ್ವರ ದೇವರು, ಅನ್ನದಾನ ಶಾಸ್ತ್ರಿಗಳು ಸೇರಿದಂತೆ ಯಡೂರ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಶಿಕ್ಷಕರ ವರ್ಗಾವಣೆಯಿಂದ ಖಾಲಿಯಾದ ಸ್ಥಾನಗಳು- ರಾಯಚೂರಿನಲ್ಲಿ 160 ಶಾಲೆಗೆ ಒಬ್ಬರೂ ಶಿಕ್ಷಕರಿಲ್ಲ

     Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]