Tag: ದೇವಸ್ಥಾನ

  • ಜಾತ್ರೆಗಿಲ್ಲ ಕೊರೊನಾ ಭಯ – ಮಲೆತಿರಿಕೆ ಬೆಟ್ಟದಲ್ಲಿ ಸಾವಿರಾರು ಜನರು ಸೇರಿ ಜಾತ್ರೆ ಆಚರಣೆ

    ಜಾತ್ರೆಗಿಲ್ಲ ಕೊರೊನಾ ಭಯ – ಮಲೆತಿರಿಕೆ ಬೆಟ್ಟದಲ್ಲಿ ಸಾವಿರಾರು ಜನರು ಸೇರಿ ಜಾತ್ರೆ ಆಚರಣೆ

    ಮಡಿಕೇರಿ: ಗಾಳಿ ವೇಗದಲ್ಲಿ ವಿಶ್ವದೆಲ್ಲಡೆ ಹಬ್ಬುತ್ತಿರುವ ಕೊರೊನಾ ತಡೆಯುವುದಕ್ಕೆ ರಾಜ್ಯ ಸರ್ಕಾರ ವಾರಗಳ ಕಾಲ ಜಾತ್ರೆ, ಉತ್ಸವ ಮುಂತಾದವುಗಳಿಗೆ ಬ್ರೇಕ್ ಹಾಕಿದೆ. ಆದರೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮಲೆತಿರಿಕೆ ಬೆಟ್ಟದಲ್ಲಿ ಸಾವಿರಾರು ಜನರು ಒಂದೆಡೆ ಸೇರಿ ಜಾತ್ರೆ ಆಚರಿಸುತ್ತಿದ್ದಾರೆ.

    ಬೆಟ್ಟದ ಮೇಲಿರುವ ಶಿವನ ದೇವಾಲಯದಲ್ಲಿ ನಡೆಯುವ ಈ ಜಾತ್ರೆಗೆ ಸುತ್ತಮುತ್ತ 12 ಹಳ್ಳಿಗಳಿಂದ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಒಂದೆಡೆ ಸರ್ಕಾರ ಕೊರೊನಾ ವೈರಸ್ ಅನ್ನು ನಿಯಂತ್ರಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಇಲ್ಲಿ ಮಾತ್ರ ಸರ್ಕಾರದ ಈ ನಿಯಮವನ್ನು ಗಾಳಿಗೆ ತೂರಿ ಜಾತ್ರೆ ನಡೆಸಲಾಗುತ್ತಿದೆ.

    ಪ್ರತಿ ವರ್ಷ ಮಾರ್ಚ್ 14ರಂದು ಈ ಜಾತ್ರೆ ನಡೆಯುತ್ತಾ ಬಂದಿದ್ದು, ಅದೇ ರೀತಿ ಬಾರಿಯೂ ಜಾತ್ರೆ ನಡೆಯುತ್ತಿದೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜನರು ಮಾತ್ರ ನಾವು 14 ದಿನಗಳಿಂದ ಅತ್ಯಂತ ಶುದ್ಧದಿಂದ ಇದ್ದು 14ನೇ ದಿನದಂದು ಜಾತ್ರೆ ಆಚರಿಸುತ್ತೇವೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿಗೆ ಯಾರೂ ಹೊರರಾಜ್ಯ ಅಥವಾ ಹೊರ ದೇಶದವರು ಬರುವುದಿಲ್ಲ. ಆದರಿಂದ ನಮಗೆ ಕೊರೊನಾ ಹರಡುತ್ತದೆ ಎಂಬ ಆತಂಕವಿಲ್ಲ ಎನ್ನುತ್ತಿದ್ದಾರೆ.

  • ಪತಿಯೊಂದಿಗೆ ಜಗಳ ಮಾಡ್ಕೊಂಡು ದೇವಾಲಯಕ್ಕೆ ಹೋದ್ಳು – ಟೆಂಪೋದಲ್ಲಿ ಗ್ಯಾಂಗ್‍ರೇಪ್

    ಪತಿಯೊಂದಿಗೆ ಜಗಳ ಮಾಡ್ಕೊಂಡು ದೇವಾಲಯಕ್ಕೆ ಹೋದ್ಳು – ಟೆಂಪೋದಲ್ಲಿ ಗ್ಯಾಂಗ್‍ರೇಪ್

    – ಮನೆಗೆ ವಾಪಸ್ ಬರೋ ನಿರ್ಧಾರ ಮಾಡಿದ್ದೇ ತಪ್ಪಾಯ್ತು

    ಮುಂಬೈ: ಡ್ರಾಪ್ ಕೊಡುವ ನೆಪದಲ್ಲಿ ಚಲಿಸುತ್ತಿದ್ದ ಟೆಂಪೋದಲ್ಲಿ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಮಂಗಳವಾರ ಈ ಘಟನೆ ನಡೆದಿದೆ. 29 ವರ್ಷದ ಸಂತ್ರಸ್ತೆ ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದಿದ್ದಳು. ನಂತರ ಮನೆಯ ಹತ್ತಿರದ ದೇವಸ್ಥಾನವೊಂದಕ್ಕೆ ಹೋಗಿದ್ದಳು. ಅಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ಸುಮಾರು ರಾತ್ರಿ 10ಗಂಟೆಗೆ ಮನೆಗೆ ವಾಪಸ್ ಹೋಗಲು ನಿರ್ಧಾರ ಮಾಡಿದ್ದಾಳೆ.

    ಕೊನೆಗೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಬಳಿ ಲಿಫ್ಟ್ ಕೇಳಿದ್ದಾಳೆ. ಆದರೆ ಯಾವ ವಾಹನವೂ ಡ್ರಾಪ್ ಕೊಡಲಿಲ್ಲ. ನಂತರ ಸಂತ್ರಸ್ತೆ ಹತ್ತಿರದಲ್ಲಿದ್ದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಿ ಬಸ್‍ಗಾಗಿ ಕಾಯುತ್ತಿದ್ದಳು. ಮಧ್ಯರಾತ್ರಿ ವೇಳೆ ಬಸ್ ನಿಲ್ದಾಣದ ಬಳಿ ಒಂದು ಟೆಂಪೋ ಬಂದಿದ್ದು, ಅದರಲ್ಲಿದ್ದ ಚಾಲಕ ಮತ್ತು ಕ್ಲೀನರ್ ಸಂತ್ರಸ್ತೆಯನ್ನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ್ದಾರೆ.

    ನಾವು ಅದೇ ಮಾರ್ಗವಾಗಿ ಹೋಗುತ್ತಿದ್ದೇವೆ ಎಂದು ಸಂತ್ರಸ್ತೆಯನ್ನು ವಾಹನದಲ್ಲಿ ಕೂರಿಸಿಕೊಂಡಿದ್ದಾರೆ. ಸಂತ್ರಸ್ತೆ ಮಹಿಳೆ ವಾಹನದಲ್ಲಿ ಕುಳಿತ ನಂತರ ಆರೋಪಿಗಳು ಬೇರೆ ಮಾರ್ಗದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಚಾಲಕ ಮತ್ತು ಕ್ಲೀನರ್ ನಿಂದ ಸಂತ್ರಸ್ತೆ ಹೇಗೋ ತಪ್ಪಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಗೆ ಆರೋಪಿಗಳು ಕರೆದುಕೊಂಡು ಹೋಗಿದ್ದ ಸ್ಥಳ ನಿಖರವಾಗಿ ತಿಳಿದಿಲ್ಲ. ಆದರೆ ಅವರಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಪಿಂಪ್ರಿ-ಚಿಂಚ್‍ವಾಡ್ ಪ್ರದೇಶಕ್ಕೆ ತಲುಪಿದ್ದಳು. ಅಲ್ಲಿ ಕಟ್ಟಡವೊಂದರ ಭದ್ರತಾ ಸಿಬ್ಬಂದಿಯ ಸಹಾಯ ಕೇಳಿದ್ದಾಳೆ. ಆಗ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಸದ್ಯಕ್ಕೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳಿಗೂ ಶೋಧ ಕಾರ್ಯಾ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

  • ನಿಜವಾದ ಗಡೇ ದುರ್ಗಾದೇವಿಯ ಡಿಕೆಶಿ ಭವಿಷ್ಯ- ದೇವಸ್ಥಾನದಲ್ಲಿ ವಿಶೇಷ ಪೂಜೆ

    ನಿಜವಾದ ಗಡೇ ದುರ್ಗಾದೇವಿಯ ಡಿಕೆಶಿ ಭವಿಷ್ಯ- ದೇವಸ್ಥಾನದಲ್ಲಿ ವಿಶೇಷ ಪೂಜೆ

    ಯಾದಗಿರಿ: ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಗಡೇ ದುರ್ಗಾದೇವಿ ಮಂದಿರದಲ್ಲಿ ಅರ್ಚಕ ಮಹಾದೇವಪ್ಪ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತ ಡಿಕೆ ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ದುರ್ಗಾದೇವಿಗೆ ಡಿಕೆಶಿ ಪರಮಭಕ್ತರಾಗಿದ್ದು, ಕಳೆದ ಜನವರಿ 29ರಂದು ಈ ದೇವಸ್ಥಾನ ಡಿಕೆ ಆಗಮಿಸಿ, ಪತ್ರ ಪೊಜೆ ಸಲ್ಲಿಸಿದ್ದರು. ಈ ವೇಳೆ ಅರ್ಚಕ ಮಹಾದೇವಪ್ಪ ಪೂಜಾರಿ, ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

    ಈ ದೇವಿಯ ಮಾತು ನಿಜವಾಗಿದ್ದು, ದೇವಿಯ ಕೃಪೆಯಿಂದ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ಒಳ್ಳೆಯದಾಗಬೇಕು ಮತ್ತು ಮುಂದಿನ ದಿನಗಳಲ್ಲಿ ಅವರು ಸಿಎಂ ಆಗಬೇಕೆಂದು ದುರ್ಗಾದೇವಿ ಪೊಜಾರಿ ಮಹಾದೇವಪ್ಪ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಮಾಜಿ ವಿಧಾನಪರಿಷತ್ ಸದಸ್ಯ ಚನ್ನಾರೆಡ್ಡಿ ಪಾಟೀಲ್ ತುನ್ನೂರು ನೇತೃತ್ವದಲ್ಲಿ ಡಿಕೆಶಿ ಅಭಿಮಾನಿಗಳು, ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

  • ದಡಿಘಟ್ಟದ ಲಕ್ಷ್ಮಿದೇವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ದೇಗುಲದಲ್ಲಿ ಪೂಜೆ ಸಲ್ಲಿಸಿದ ವಾಹನಕ್ಕೆ ಅಪಘಾತವೇ ಆಗಲ್ವಂತೆ

    ದಡಿಘಟ್ಟದ ಲಕ್ಷ್ಮಿದೇವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ದೇಗುಲದಲ್ಲಿ ಪೂಜೆ ಸಲ್ಲಿಸಿದ ವಾಹನಕ್ಕೆ ಅಪಘಾತವೇ ಆಗಲ್ವಂತೆ

    ಹಾಸನ: ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಭೀಕರ ಅಪಘಾತಗಳು ಭಯ ಹುಟ್ಟಿಸುತ್ತಿವೆ. ಆದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಡಿಘಟ್ಟ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನಕ್ಕೆ ತೆರಳಿ ವಾಹನಕ್ಕೆ ಪೂಜೆ ಸಲ್ಲಿಸಿದರೆ ಅಪಘಾತವೇ ಆಗುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಇಲ್ಲಿ ಜಾತ್ರೆಯ ಸಮಯದಲ್ಲಿ ವಾಹನಗಳ ಪೂಜೆಗೆ ವಿಶೇಷ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ.

    ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಒಂದು ವಾರಗಳ ಕಾಲ ಲಕ್ಷ್ಮಿದೇವಿ ದೇವರ ಜಾತ್ರೆ ಅದ್ದೂರಿಯಾಗಿ ನಡೆಯುತ್ತೆ. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆ ನಡೆಯುವ ಒಂದು ದಿನ ಸುಮಾರು 25 ಸಾವಿರದಷ್ಟು ಜನರಿಗೆ ಅನ್ನದಾನ ಕೂಡ ಏರ್ಪಡಿಸಲಾಗಿರುತ್ತದೆ. ಇದಿಷ್ಟೆ ಆಗಿದ್ದರೆ ಈ ಜಾತ್ರೆ ಅಷ್ಟೊಂದು ವಿಶೇಷ ಅನ್ನಿಸುತ್ತಿರಲಿಲ್ಲ. ಜಾತ್ರೆಯ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ತಮ್ಮ ವಾಹನದೊಂದಿಗೆ ಬಂದು ಪೂಜೆ ಸಲ್ಲಿಸಿದರೆ ಆ ವಾಹನ ಅಪಘಾತವೇ ಆಗೋದಿಲ್ಲ ಎಂಬ ನಂಬಿಕೆಯಿದೆ. ಒಂದು ವೇಳೆ ಅಪಘಾತ ಆದರೂ ಸಾವು, ನೋವು ಸಂಭವಿಸದಂತೆ ಈ ದೇವಿ ಕಾಯುತ್ತಾಳೆ ಎಂದು ಭಕ್ತರು ನಂಬಿದ್ದಾರೆ.

    ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಗೆ ವಾಹನ ಮಾಲೀಕರು ತಮ್ಮ ವಾಹನಗಳೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸೋದು ಸಾಮಾನ್ಯ. ಜಾತ್ರೆಯ ಸಮಯದಲ್ಲಿ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದವರು ಬಿಡುವಿನ ಸಮಯದಲ್ಲಿ ತಮ್ಮ ವಾಹನದೊಂದಿಗೆ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಮಾಡಿಸುತ್ತಾರೆ. ಈ ದೇವಾಲಯದ ಸುತ್ತ ತಮ್ಮ ವಾಹನ ಪ್ರದಕ್ಷಿಣೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ತಮ್ಮ ವಾಹನ ಅಪಘಾತವೇ ಆಗಿಲ್ಲ ಎಂದು ಹಲವು ಭಕ್ತರು ಹೇಳಿಕೊಂಡಿದ್ದಾರೆ.

    ಒಂದೊಂದು ದೇವಾಲಯದಲ್ಲಿ ಒಂದೊಂದು ನಂಬಿಕೆಯಿರುತ್ತೆ. ಅದೇ ರೀತಿ ಈ ದೇವಾಲಯದಲ್ಲಿ ತಾವು ಬೇಡಿದ ಎಲ್ಲ ಬೇಡಿಕೆ ಈಡೇರುತ್ತೆ ಎಂಬ ನಂಬಿಕೆ ಇದೆ. ಅದರಲ್ಲೂ ತಾವು ಈ ದೇವಸ್ಥಾನಕ್ಕೆ ವಾಹನ ತಂದು ಪೂಜೆ ಸಲ್ಲಿಸಿದರೆ ಆ ವಾಹನ ಅಪಘಾತವೇ ಆಗೋದಿಲ್ಲ ಎಂಬ ನಂಬಿಕೆ ಮಾತ್ರ ವಾಹನ ಮಾಲೀಕರನ್ನ ದೇವಸ್ಥಾನದತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

  • ಶಬರಿಮಲೆಗೂ ತಟ್ಟಿದ ಕೊರೊನಾ ಬಿಸಿ- ದೇವಸ್ಥಾನಕ್ಕೆ ಬರದಂತೆ ಆಡಳಿತ ಮಂಡಳಿ ಸೂಚನೆ

    ಶಬರಿಮಲೆಗೂ ತಟ್ಟಿದ ಕೊರೊನಾ ಬಿಸಿ- ದೇವಸ್ಥಾನಕ್ಕೆ ಬರದಂತೆ ಆಡಳಿತ ಮಂಡಳಿ ಸೂಚನೆ

    ತಿರುವನಂತಪುರಂ: ಕೊರೊನಾ ವೈರಸ್ ಕೇರಳದಲ್ಲಿ ಸ್ವಲ್ಪ ವೇಗವಾಗಿಯೇ ಹರಡುತ್ತಿದ್ದು, ನಿನ್ನೆಯಷ್ಟೇ 12ಜನರಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಇಂದು 19 ಜನರಲ್ಲಿ ಪತ್ತೆಯಾಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬರಬೇಡಿ ಎಂದು ಶಬರಿಮಲೆ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.

    ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಬರುವುದನ್ನು ಕೆಲವು ದಿನಗಳ ಕಾಲ ನಿಲ್ಲಿಸಿ, ಸಾರ್ವಜನಿಕ ಸಭೆಗಳನ್ನ ಒಳಗೊಂಡ ಹಬ್ಬಗಳಲ್ಲಿ ಭಾಗಿಯಾಗಬಾರದು ಎಂದು ದೇವಸ್ವಂ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ವಾಸು ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ಶುಕ್ರವಾರದಿಂದ ತಿಂಗಳ ಪೂಜೆ ಆರಂಭವಾಗಲಿದೆ. ಇಂದಿನಿಂದ ಮಾರ್ಚ್ 31ರವರೆಗೆ ಕೇರಳದಲ್ಲಿ ಸಿನಿಮಾ ಥಿಯೇಟರ್‍ಗಳು ಬಂದ್ ಆಗಲಿವೆ. ಕೊಚ್ಚಿಯಲ್ಲಿ ನಡೆದ ವಿವಿಧ ಮಲಯಾಳಂ ಸಿನಿಮಾ ಸಂಸ್ಥೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದಿನಿಂದ ಕೇರಳದಲ್ಲಿ ಸಿನಿಮಾ ಪ್ರದರ್ಶನಗಳು ನಡೆಯುವುದಿಲ್ಲ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೇರಳದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.

    ಮಹಾಮಾರಿ ಕೊರೊನಾ ದೇಶಾದ್ಯಂತ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ 61ಕ್ಕೆ ಹೆಚ್ಚಿದೆ. ಬೆಂಗಳೂರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ಎಮೆರ್ಜೆನ್ಸಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನೊಂದು ವಾರ ರಾಜ್ಯದಲ್ಲೂ ಸಿನಿಮಾ ಪ್ರದರ್ಶನ ಬಂದ್ ಸಾಧ್ಯತೆ ಇದೆ. ಮಾರ್ಚ್ 16ರವರೆಗೆ ಥಿಯೇಟರ್ ಬಂದ್ ಮಾಡುವ ನಿರೀಕ್ಷೆ ಇದೆ. ಕೇರಳದಲ್ಲಿ ಇಂದಿನಿಂದಲೇ ಥಿಯೇಟರ್‍ಗಳನ್ನು ಬಂದ್ ಮಾಡಲಾಗಿದೆ. ಕೊರೊನಾ ಭಯಕ್ಕೆ ಜನ ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ಬಸ್, ಟ್ಯಾಕ್ಸಿಗಳು ಖಾಲಿ ಖಾಲಿ ಎನ್ನುವಂತಾಗಿದೆ.

  • ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ಹರಕೆ ಕಾರಣವಂತೆ- ಮುಡಿಕೊಟ್ಟ ಬಿಜೆಪಿ ಯುವ ನಾಯಕ

    ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ಹರಕೆ ಕಾರಣವಂತೆ- ಮುಡಿಕೊಟ್ಟ ಬಿಜೆಪಿ ಯುವ ನಾಯಕ

    ಮಂಡ್ಯ: ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಅಚ್ಚರಿ ಮೂಡಿಸಿತ್ತು. ಈ ಅಚ್ಚರಿಯ ಫಲಿತಾಂಶಕ್ಕೆ ದೇವರಿಗೆ ಹೊತ್ತುಕೊಂಡಿದ್ದ ಒಂದು ಹರಕೆಯೆ ಪ್ರಮುಖ ಕಾರಣನಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಮಂಡ್ಯ ಜಿಲ್ಲೆ ಜೆಡಿಎಸ್‍ನ ಭದ್ರ ಕೋಟೆ ಎನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಗುರುತಿಸಿಕೊಂಡಿತ್ತು. ಆದರೆ ಕಳೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿತ್ತು. ಈ ಕ್ಷೇತ್ರದ ಬಿಜೆಪಿಗೆ ಗೆಲುವಿಗೆ ಸಿಎಂ ಪುತ್ರ ವಿಜಯೇಂದ್ರ, ಸಚಿವ ಅಶ್ವತ್ಥನಾರಾಯಣ, ಹಾಸನ ಶಾಸಕ ಪ್ರೀತಮ್‍ಗೌಡ ಅವರ ಪಾತ್ರ ಮುಖ್ಯವಾಗಿತ್ತು ಎಂದು ಹಲವರು ಹೇಳುತ್ತಾರೆ. ಆದರೆ ಇದೀಗ ಗೆಲುವಿನ ಹಿಂದೆ ಮತ್ತೊಬ್ಬರ ಶ್ರಮವಿದೆ ಎಂದು ಸ್ವತಃ ವಿಜಯೇಂದ್ರ ಅವರೇ ಹೇಳಿಕೊಂಡಿದ್ದಾರೆ.

    ಈ ಕ್ಷೇತ್ರದಲ್ಲಿ ಚುನಾವಣೆ ಮಾಡಬೇಕು ಬನ್ನಿ ಅಣ್ಣ. ಇಲ್ಲಿ ನಾವು ಒಂದು ಬಾರಿ ನಮ್ಮ ಶ್ರಮ ಹಾಕೋಣ ಅಂತ ಕೊಪ್ಪಳ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರಣು ನನಗೆ ಹೇಳಿದ್ದರು. ಉಪಚುನಾವಣೆಯಲ್ಲಿ ಕೆಲಸ ಮಾಡಲು ಶಕ್ತಿ ತುಂಬಿದ್ದೆ ಶರಣು ಹಾಗಾಗಿ ನಾವು ಉತ್ಸಾಹದಿಂದ ಚುನಾವಣೆ ಎದುರಿಸಿ ಗೆಲವು ಪಡೆದುಕೊಂಡೆವು ಎಂದು ವಿಜಯೇಂದ್ರ ತಿಳಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರ ತವರು ಊರು ಕೆಆರ್.ಪೇಟೆ ಕ್ಷೇತ್ರದಲ್ಲಿ ನಾವು ಗೆಲ್ಲ ಬೇಕು ಎಂದು ಅಂದುಕೊಂಡಿದ್ದೆವು. ಆಗ ನಾನು ವಿಜಯೇಂದ್ರ ಅವರಿಗೆ ಹೇಳಿದಾಗ ಅಲ್ಲಿ ತುಂಬಾ ಕಷ್ಟ ಅಂತ ಹೇಳಿದ್ದರು. ನಮ್ಮಲ್ಲೂ ಆತಂಕ ಇತ್ತು. ಒಂದು ವೇಳೆ ವ್ಯತ್ಯಾಸ ಆದರೆ ವಿಜಯೇಂದ್ರ ಅವರ ರಾಜಕೀಯ ಸ್ವಲ್ಪ ಕುಗ್ಗತ್ತದೆ ಎಂಬ ಮಾತುಗಗಳು ಕೇಳಿ ಬಂದಿದ್ದವು. ಕೆಆರ್.ಪೇಟೆ ಚುನಾವಣೆಯ ಉಸ್ತುವಾರಿ ಎಂದು ವಿಜಯೇಂದ್ರ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಆಗ ನಾನು ಕೆಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಸಾಸಲು ಗ್ರಾಮದಲ್ಲಿದ್ದೆ. ಇಲ್ಲಿನ ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಗೆದ್ದರೆ ಮುಡಿಕೊಟ್ಟು ವಿಜಯೇಂದ್ರ ಅಣ್ಣನ ಜೊತೆ ಪೂಜೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತಕೊಂಡಿದ್ದೆ. ಅಂತೆಯೇ ನಾವು ಈಗ ವಿಜಯ ಪಡೆದು ವಿಜಯೇಂದ್ರ ಅಣ್ಣನ ಜೊತೆ ಬಂದು ಹರಕೆ ತೀರಿಸಿದ್ದೇವೆ ಎಂದು ಕೊಪ್ಪಳ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರಣು ಅವರು ಹೇಳಿದ್ದಾರೆ.

    ಶರಣು ಅವರು ಹರಕೆ ಹೊತ್ತ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ದೇವಸ್ಥಾನದಲ್ಲೇ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ಚುನಾವಣೆಗೂ ಮುನ್ನ ಪೂಜೆ ಸಲ್ಲಿಸಿದ್ದರು. ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಜಯಭೇರಿ ಬಾರಿಸಿದ್ದರು.

    ಒಟ್ಟಾರೆ ಕೆಆರ್.ಪೇಟೆಯ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಲು ಕೇವಲ ಪ್ರಥಮ ದರ್ಜೆಯ ಮಾಸ್ ಲೀಡರ್ ಗಳು ಕಾರ್ಯತಂತ್ರದ ಜೊತೆಗೆ ಬೇರೆ ಜಿಲ್ಲೆಯ ಮುಖಂಡರು ಕಾರಣವಾಗಿದ್ದಾರೆ ಎಂದು ಈಗ ತಿಳಿದುಬಂದಿದೆ. ಇದರ ಜೊತೆಗೆ ಆ ಮುಖಂಡ ಹೊತ್ತ ಹರಕೆಯೂ ಗೆಲವು ತಂದುಕೊಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

  • ಚಾಮರಾಜನಗರ ದೇಗುಲಗಳಲ್ಲಿ ಕನ್ನಡ ಕಡ್ಡಾಯ- ಮಾತೃ ಭಾಷೆಯಲ್ಲೇ ಅರ್ಚನೆಗೆ ಆದೇಶ

    ಚಾಮರಾಜನಗರ ದೇಗುಲಗಳಲ್ಲಿ ಕನ್ನಡ ಕಡ್ಡಾಯ- ಮಾತೃ ಭಾಷೆಯಲ್ಲೇ ಅರ್ಚನೆಗೆ ಆದೇಶ

    ಚಾಮರಾಜನಗರ: ಗಡಿನಾಡು ಚಾಮರಾಜನರದ ದೇವಸ್ಥಾನಗಳಲ್ಲಿ ಇನ್ಮುಂದೆ ಕನ್ನಡ ಡಿಂಡಿಮ ಮೊಳಗಲಿದೆ. ಯಾರಿಗೂ ಅರ್ಥವಾಗದ ಸಂಸ್ಕೃತದ ಮಂತ್ರಘೋಷಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನೇನಿದ್ದರೂ ಕನ್ನಡದಲ್ಲೇ ದೇವರಿಗೆ ಭಕ್ತಿಭಾವ ಸಮರ್ಪಿಸಿ ಎಂಬ ಹೊಸ ಆದೇಶವನ್ನು ಜಿಲ್ಲಾಡಳಿತ ನೀಡಿದೆ.

    ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮಂತ್ರಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾ ಕೈಂಕರ್ಯಗಳನ್ನು ಸಂಸ್ಕೃತದಲ್ಲೇ ನೆರವೇರಿಸಲಾಗುತ್ತೆ. ಆದರೆ ದೇವಸ್ಥಾನಕ್ಕೆ ಹೋಗುವ ಶೇ.99 ರಷ್ಟು ಮಂದಿಗೆ ಸಂಸ್ಕೃತ ಬರೋದಿಲ್ಲ, ಅದು ನಮ್ಮ ವ್ಯವಹಾರಿಕ ಭಾಷೆಯೂ ಅಲ್ಲ. ಹಾಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳಾಗಲಿ ಅರ್ಥವೇ ಆಗುವುದಿಲ್ಲ.

    ಪೂಜಾರಿಗಳು ಮಾಡುವ ಅರ್ಚನೆ, ಮಂತ್ರ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ಹೊಸ ಆದೇಶವನ್ನು ಹೊರಡಿಸಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಇನ್ಮುಂದೆ ಕನ್ನಡದಲ್ಲೇ ಮಂತ್ರೊಚ್ಛಾರಣೆ ಮಾಡಬೇಕು. ಸಂಪ್ರದಾಯ ಹಾಗೂ ಧಾರ್ಮಿಕ ಪದ್ಧತಿಗಳಿಗೆ ಧಕ್ಕೆ ಬಾರದಂತೆ ಕನ್ನಡದಲ್ಲಿಯೇ ಮಂತ್ರ ಪಠಿಸಬೇಕು ಎಂದು ಡಿಸಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ.

    ಕನ್ನಡದಲ್ಲಿ ಮಂತ್ರಪಠಣಕ್ಕಾಗಿ ಕನ್ನಡ ಪಂಡಿತರ ಅರ್ಚಕರಿಗೆ ವಿಶೇಷ ಟ್ರೈನಿಂಗ್ ಕೊಡಿಸಲು ಸಹ ಜಿಲ್ಲಾಡಳಿತ ತೀರ್ಮಾನಿಸಿದೆ. ಇದನ್ನು ಅರ್ಚಕರು ಸಹ ಸ್ವಾಗತಿಸಿದ್ದಾರೆ. ಮಂತ್ರ, ಶ್ಲೋಕ ಹಾಗೂ ಪೂಜಾ ವಿಧಿವಿಧಾನಗಳನ್ನು ಕನ್ನಡದಲ್ಲೇ ಮುದ್ರಿಸಿ ಪುಸ್ತಕ ರೂಪದಲ್ಲಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

    ಚಾಮರಾಜನಗರ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ 281 ದೇವಸ್ಥಾನಗಳಿದ್ದು, ಅಲ್ಲೆಲ್ಲಾ ಕನ್ನಡದ ಕಂಪು ಪಸರಿಸಲಿದೆ. ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಭಕ್ತರ ಪ್ರಶಂಸೆಗೂ ಪಾತ್ರವಾಗಿದೆ.

  • 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
    – ಜಾತ್ರೆಗೆ ಜಾಗ ಸಾಕಾಗಲ್ಲವೆಂದು ತೋಟ ನಾಶ

    ತುಮಕೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ತಹಶೀಲ್ದಾರ್ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಮಮತಾ ಅವರ ಮೇಲೆ ಆರೋಪ ಕೇಳಿ ಬಂದಿದೆ. ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶಿಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ.

    ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದಾರೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ. ಮುನಿ ಕೆಂಪಯ್ಯ ಕುಟುಂಬದ ಆಕ್ರಂದನದ ವಿಡಿಯೋ ವೈರಲ್ ಆಗಿದೆ.

  • ಬೆಂಗಳೂರಿನ ದೇಗುಲದಲ್ಲಿ ಮೋದಿ ಪತ್ನಿ ಜಶೋದಾ ಬೆನ್

    ಬೆಂಗಳೂರಿನ ದೇಗುಲದಲ್ಲಿ ಮೋದಿ ಪತ್ನಿ ಜಶೋದಾ ಬೆನ್

    ಬೆಂಗಳೂರು: ಸದ್ಯ ಕರ್ನಾಟಕದ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರ ಪತ್ನಿ ಜಶೋದಾ ಬೆನ್ ಇಂದು ಬೆಂಗಳೂರಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಜಶೋದಾ ಬೆನ್ ಅವರು, ಇಂದು ಬೆಳಗ್ಗೆ ರಾಜನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ದೇವರ ದರ್ಶನ ಪಡೆದುಕೊಂಡರು.

    ಬುಧವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠಕ್ಕೆ ತೆರಳುತ್ತಿದ್ದ ಜಶೋದಾ ಬೆನ್ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದ್ದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.

    ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದರು. ಆದರೆ ಅಶ್ವಥ ಮರದ ಕಟ್ಟೆ ಸಿಗದೇ ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದ್ದರು. ನಂತರ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದ ಜಶೋದಾ ಬೆನ್, ಸಂಜೆ ಆರು ಗಂಟೆ ವೇಳೆಗೆ ಶೃಂಗೇರಿ ಶಾರದಾಂಬೆ ಸನ್ನಿದಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತುಂಗಾ ನದಿ ಹಾಗೂ ಸುತ್ತಮುತ್ತಲಿನ ಪರಿಸರ ಕಂಡು ಪುಳಕಿತರಾಗಿದ್ದರು.

    ಬಳಿಕ ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಶಾರದಾಂಬೆ ಸನ್ನಿಧಿಯಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಎರಡು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿಂದ ಶ್ರೀಮಠಕ್ಕೆ ತೆರಳಿದ ಜಶೋದಾ ಬೆನ್, ಶೃಂಗೇರಿ ಮಠದ ಜಗದ್ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬೆಂಗಳೂರುಗೆ ವಾಪಸ್ ಆಗಿದ್ದರು.

  • ಎಫ್‍ಬಿಯಲ್ಲಿ ಪರಿಚಯ, ಪ್ರೀತಿ -ಪಾರ್ಶ್ವವಾಯು ಪ್ರೇಮಿಯ ಜೊತೆ ಮದ್ವೆ

    ಎಫ್‍ಬಿಯಲ್ಲಿ ಪರಿಚಯ, ಪ್ರೀತಿ -ಪಾರ್ಶ್ವವಾಯು ಪ್ರೇಮಿಯ ಜೊತೆ ಮದ್ವೆ

    – ಯುವಕನಿಗಾಗಿ ಮನೆ, ಪೋಷಕರನ್ನು ಬಿಟ್ಟು ಹೋದ ಯುವತಿ
    – ಯುವತಿಯ ಪ್ರೀತಿಗೆ ನೆಟ್ಟಿಗರು ಫಿದಾ

    ತಿರುವನಂತಪುರಂ: ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಇದೀಗ ಕೇರಳದ ಯುವತಿಯೊಬ್ಬಳು ತನ್ನ ಪೋಷಕರನ್ನು ಬಿಟ್ಟು ಪಾರ್ಶ್ವವಾಯುವಿಗೆ ಒಳಗಾಗಿರುವ ಯುವಕನನ್ನು ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ.

    ಶಾಹ್ನಾ ಪಾರ್ಶ್ವವಾಯುವಿಗೆ ಒಳಗಾದ ಪ್ರಣವ್‍ನನ್ನು ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಶಾಹ್ನಾ ತನ್ನ ಪೋಷಕರ ವಿರುದ್ಧವಾಗಿ ಪ್ರಣವ್‍ನನ್ನು ಮದುವೆಯಾಗಿದ್ದಾಳೆ. ಇವರಿಬ್ಬರೂ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದು, ಮಂಗಳವಾರ ವಿವಾಹವಾಗಿದ್ದಾರೆ. ಇದೀಗ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಪ್ರೀತಿ ಮೂಡಿದ್ದು ಹೇಗೆ:
    ಇರಿಂಜಲಕುಡ ಮೂಲದ ಪ್ರಣವ್ ಆರು ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ರಸ್ತೆ ಅಪಘಾತವಾಗಿತ್ತು. ಆಗ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದನು. ಅಂದಿನಿಂದ ಪ್ರಣವ್ ವೀಲ್‌ಚೇರ್ ಮೇಲಿಯೇ ಇದ್ದಾರೆ. ಅಲ್ಲದೇ ಮೂಲಭೂತ ಅಗತ್ಯಗಳಿಗೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿದ್ದಾನೆ. ಪ್ರಣವ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದನು. ಆಗಾಗ ವೀಲ್‍ಚೇರ್ ಮೂಲಕವೇ ಸ್ಥಳೀಯ ದೇವಾಲಯದ ಉತ್ಸವಗಳಿಗೆ ಹೋಗುತ್ತಿದ್ದನು. ಅಲ್ಲಿನ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಿದ್ದನು.

    ನೆಟ್ಟಿಗರು ಕೂಡ ಪ್ರಣವ್‍ಗೆ ಒಳ್ಳೆಯ ರೀತಿಯ ಕಮೆಂಟ್ ಮಾಡುತ್ತಿದ್ದರು. ಈ ವಿಡಿಯೋವನ್ನು ಶಾಹ್ನಾ ನೋಡಿದ್ದಾಳೆ. ನಂತರ ಪ್ರಣವ್‍ನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾಳೆ. ಕೊನೆಗೆ ಮೂರು ತಿಂಗಳ ಹಿಂದೆ ಫೇಸ್‍ಬುಕ್‍ನಿಂದ ಪ್ರಣವ್‍ನ ಫೋನ್ ನಂಬರ್ ತೆಗೆದುಕೊಂಡಿದ್ದಾಳೆ. ಬಳಿಕ ಇಬ್ಬರು ಚಾಟಿಂಗ್ ಮಾಡುತ್ತಿದ್ದರು. ಪರಸ್ಪರ ಮಾತನಾಡಿದ್ದಾರೆ.

    ಕೆಲವು ದಿನಗಳ ನಂತರ ತನ್ನ ಪ್ರೀತಿಯನ್ನು ಪ್ರಣವ್‍ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಆಗ ಪ್ರಣವ್ ತನ್ನ ಆರೋಗ್ಯದ ಸ್ಥಿತಿಯ ಬಗ್ಗೆ ಹೇಳಿದ್ದಾನೆ. ಆದರೂ ಶಾಹ್ನಾ ಆತನನ್ನೇ ಮದುವೆಯಾಗಲು ಬಯಸಿದ್ದಳು. ಪ್ರಣವ್, ಅವರ ಸಂಬಂಧಿಕರು ಮತ್ತು ಸ್ನೇಹಿತರು ಅವಳ ನಿರ್ಧಾರವನ್ನು ಬದಲಾಯಿಸುವಂತೆ ಮನವೊಲಿಸಿದರು. ಶಾಹ್ನಾ ಕುಟುಂಬವೂ ಈ ಸಂಬಂಧವನ್ನು ವಿರೋಧಿಸಿತ್ತು. ಆದರೆ ಶಾಹ್ನಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

    ಕೊನೆಗೆ ಪ್ರಣವ್‍ನನ್ನು ಖುದ್ದಾಗಿ ಭೇಟಿಯಾಗಲು ಶಾಹ್ನಾ ಮನೆಬಿಟ್ಟು ಹೋಗಿದ್ದಾಳೆ. ಇದರಿಂದ ಪ್ರಣವ್ ಕುಟುಂಬದವರು ಬೇಸರಗೊಂಡು ಮತ್ತೊಮ್ಮೆ ಆಕೆಯ ಮನವೊಲಿಸಲು ಪ್ರಯತ್ನಿಸಿದರು. ಕೊನೆಗೂ ಪ್ರಣವ್‍ನನ್ನು ಭೇಟಿಯಾದಳು. ಆದರೆ ಶಾಹ್ನಾ, ಪ್ರಣವ್‍ನನ್ನು ನೇರವಾಗಿ ನೋಡಿ ಆತನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆತನನ್ನೇ ಮದುವೆಯಾಗುವುದಾಗಿ ಹಠ ಮಾಡಿದ್ದಾಳೆ. ಭೇಟಿಯಾದ ಮರುದಿನವೇ ಶಾಹ್ನಾ ಮತ್ತು ಪ್ರಣವ್ ಕೊಡುಂಗಲ್ಲೂರಿನ ದೇವಸ್ಥಾನವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪ್ರಣವ್ ಪೋಷಕರು, ಸ್ನೇಹಿತರು ಮತ್ತು ಸಂಬಂಧಿಕರ ನವದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ನವ ದಂಪತಿಗೆ ಶುಭಾಕೋರಿದ್ದಾರೆ.