Tag: ದೇವಸ್ಥಾನ

  • ಅಕ್ರಮವಾಗಿ ನಿರ್ಮಾಣವಾಗಿದ್ದ ದರ್ಗಾ, ದೇಗುಲಗಳನ್ನು ಕೆಡವಿದ ಪೊಲೀಸರು!

    ಅಕ್ರಮವಾಗಿ ನಿರ್ಮಾಣವಾಗಿದ್ದ ದರ್ಗಾ, ದೇಗುಲಗಳನ್ನು ಕೆಡವಿದ ಪೊಲೀಸರು!

    ಗಾಂಧೀನಗರ: ಗುಜರಾತ್‌ನ ಜುನಾಗಢ್‌ನಲ್ಲಿ (Junagadh, Gujrat) ಅಕ್ರಮವಾಗಿ ನಿರ್ಮಿಸಲಾದ ದರ್ಗಾ ಮತ್ತು ಎರಡು ದೇವಾಲಯಗಳನ್ನು (Dargah, Temples) ಪೊಲೀಸರು ನೆಲಸಮಗೊಳಿಸಿದ್ದಾರೆ.

    ಅಕ್ರಮ ಕಟ್ಟಡಗಳ ನೆಲಸಮ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಲು ತಡರಾತ್ರಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಡವುವ ವೇಳೆ ಸುಮಾರು 1000 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ ಗೆ ನಿಯೋಜನೆ ಮಾಡಲಾಗಿತ್ತು.

    ಕಳೆದ ವರ್ಷ ದರ್ಗಾವನ್ನು ಕೆಡವಲು ನೋಟಿಸ್ ನೀಡಲಾಗಿತ್ತು. ಅದರಂತೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದರು. ಈ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಳಿಕ ಇದು ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ತೀರ್ಪಿನ ನಂತರ ಶನಿವಾರ ರಾತ್ರಿ ದರ್ಗಾವನ್ನು ಅಕ್ರಮ ಎಂದು ಘೋಷಿಸಿ ಕೆಡವಲಾಯಿತು. ಧ್ವಂಸ ಕಾರ್ಯಾಚರಣೆಯು ಮಧ್ಯರಾತ್ರಿ ಸುಮಾರು 2 ಗಂಟೆಗೆ ಆರಂಭವಾಗಿ, ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಮುಗಿದಿದೆ. ಕಾರ್ಯಾಚರಣೆಯ ಸ್ಥಳದಿಂದ 300-400 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.

    ಕಳೆದ ವರ್ಷ ನಡೆದಿದ್ದೇನು..?: ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ಮಧ್ಯೆ ನಿರ್ಮಿಸಿರುವ ದರ್ಗಾವನ್ನು ತೆರವುಗೊಳಿಸಲು ಈ ಹಿಂದೆಯೂ ಪ್ರಯತ್ನ ನಡೆಸಲಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ಅಕ್ರಮ ದರ್ಗಾ ಕುರಿತು ಭಾರೀ ಗಲಾಟೆ ನಡೆದಿತ್ತು. ಪೊಲೀಸ್ ತಂಡವು ಕ್ರಮ ಕೈಗೊಳ್ಳಲು ಸ್ಥಳಕ್ಕೆ ತಲುಪಿತ್ತು. ಈ ವೇಳೆ ಸ್ಥಳೀಯ ಜನರು ಪ್ರತಿಭಟನೆಗೆ ಮುಂದಾದರು. ವಾಹನಗಳಿಗೆ ಬೆಂಕಿ ಹಚ್ಚಿದರು. ಇದನ್ನೂ ಓದಿ: ಮಸೀದಿ, ಮದರಸಾಗಳಲ್ಲಿ ಎನ್‍ಐಎ ದಾಳಿ ನಡೆಸಿದ್ರೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಪತ್ತೆಯಾಗಬಹುದು: ಶರಣ್ ಪಂಪ್‍ವೆಲ್

    ಸಂಜೆಯಾಗುತ್ತಿದ್ದಂತೆಯೇ ಸುಮಾರು 200 ರಿಂದ 300 ಸ್ಥಳೀಯ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರು ಅಲ್ಲಿಂದ ತೆರಳಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದರು. ಕಲ್ಲು ತೂರಾಟವನ್ನು ಕೂಡ ಮಾಡಿದ ಘಟನೆ ಕೂಡ ನಡೆದಿತ್ತು. ಈ ಘಟನೆಯಲ್ಲಿ ಉಪ ಎಸ್ಪಿ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದರು.

    ಈ ದರ್ಗಾವನ್ನು ಸರಿ ಸುಮಾರು 2 ದಶಕಗಳ ಹಿಂದೆ ನಿರ್ಮಿಸಲಾಗಿತ್ತು. ಇದೀಗ ದರ್ಗಾದ ಜೊತೆಗೆ ಜುನಾಗಢ್‌ನ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾದ ಎರಡು ಅಕ್ರಮ ದೇವಾಲಯಗಳನ್ನು ಸಹ ಕೆಡವಲಾಗಿದೆ.

  • ದೇವಾಲಯದ ಹಣ ಸರ್ಕಾರದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತಿದೆ: ಬಿಜೆಪಿ ವಿರುದ್ಧ ಅರ್ಚಕರ ಸಂಘ ಕಿಡಿ

    ದೇವಾಲಯದ ಹಣ ಸರ್ಕಾರದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತಿದೆ: ಬಿಜೆಪಿ ವಿರುದ್ಧ ಅರ್ಚಕರ ಸಂಘ ಕಿಡಿ

    ಬೆಂಗಳೂರು: ದೇವಾಲಯಗಳ (Temple) ಹಣ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದ್ದು ಚುನಾವಣಾ (Election) ಹತ್ತಿರ ಬರುತ್ತಿದಂತೆ ಬಿಜೆಪಿಯವರು (BJP) ಭಾವನೆಗಳ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಚಕರ ಸಂಘ ಕಿಡಿಕಾರಿದೆ.

    ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ಬಿಜೆಪಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆಗಮಿಕರು ಹಾಗೂ ಅರ್ಚಕರ ಸಂಘ ಸುದ್ದಿಗೋಷ್ಠಿ ನಡೆಸಿತು. ಅರ್ಚಕರ ಸಂಘದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಮಾತನಾಡಿ, ರಾಜ್ಯದ ಎ ದರ್ಜೆಯ ದೇವಾಲಯಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ (Congress) ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಎ ದರ್ಜೆಯ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಈ ಅಭಿವೃದ್ಧಿ ಸಹಿಸಲಾಗದೇ ಬಿಜೆಪಿ ಈ ರೀತಿಯ ಕೆಲಸ ಮಾಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಅರ್ಧ ಶತಕ ಸಿಡಿಸಿ ತಂದೆಗೆ ಸೆಲ್ಯೂಟ್ ಮಾಡಿದ ಧ್ರುವ್ ಜುರೆಲ್

    ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಹಿಂದೂ (Hindu) ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಎ ದರ್ಜೆಯ ದೇವಸ್ಥಾನಗಳಲ್ಲಿ ಆಗುತ್ತಿದೆ. ನಿತ್ಯವೂ ಕೋಟ್ಯಂತರ ರೂ. ಹಣ ಸಂಗ್ರಹಣೆ ಆಗುತ್ತಿದ್ದು ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಇದೇ ಕಾರಣ ಇಟ್ಟುಕೊಂಡು ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದೆ. ದೇವಸ್ಥಾನಗಳನ್ನ ರಾಜಕೀಯಕ್ಕೆ ಎಳೆಯುವುದನ್ನ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಧಾನ ಕಾರ್ಯದರ್ಶಿ ಕೆಎಸ್‌ಎಸ್‌ ದೀಕ್ಷಿತ್‌ ಮಾತನಾಡಿ, ನಾವು ಪ್ರತಿ ಬಿಜೆಪಿಯವರ ಮನೆಗೆ ಹೋಗಿ ಪತ್ರಗಳನ್ನ ಕೊಟ್ಟು ಕಾಲಿಗೆ ಬಿದ್ದು ವಿರೋಧ ಮಾಡಬೇಡಿ ಎಂದು ಕೇಳಿಕೊಳ್ಳುತ್ತೇವೆ. ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ. ನೇರವಾಗಿ ಭೇಟಿ ಮಾಡಿಯೇ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

    ಸಂಘ ಹೇಳಿದ್ದೇನು?
    ರಾಜ್ಯದಲ್ಲಿ 50 ವರ್ಷದಿಂದ ಹೋರಾಟ ನಡೆಸುತ್ತಿದ್ದು 42 ಸಾವಿರ ದೇವಾಲಯಗಳು ಬೀದಿ ಪಾಲಾಗಿದ್ದವು. ಅದಕ್ಕೆ ಪರಿಹಾರವಾಗಿ ತಸ್ತಿಕ್ ನೀಡಲಾಗುತ್ತಿದೆ. ನಾವೂ ಆ ಹಣದಲ್ಲಿ ದೇವಾಲಯದ ಪೂಜೆಗಳನ್ನು ಮಾಡಬೇಕು. ರಾಮಲಿಂಗಾ ರೆಡ್ಡಿ ನಮ್ಮ ಹಲವು ಬೇಡಿಕೆ ಈಡೇರಿಸಿದ್ದಾರೆ.

    ಈ ಹಿಂದಿನ ಸರ್ಕಾರ ನಮಗೆ ತಸ್ತಿಕ್‌ ಕೊಟ್ಟಿರಲಿಲ್ಲ. ಆದರೆ ಹೊಸ ಸರ್ಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ. ದೇವಾಲಯದ ಹಣ ಯಾರ ಹುಂಡಿಗೂ ಸೇರುತ್ತಿಲ್ಲ. ದೇವಾಲಯದ ಒಂದು ರೂಪಾಯಿ ಕೂಡ ಬೇರೆ ಧರ್ಮಕ್ಕೆ, ಚರ್ಚ್ ಮಸೀದಿಗೆ ಹೋಗುತ್ತಿಲ್ಲ. ನೂರಾರು ಕೋಟಿ ಚರ್ಚ್‌, ಮಸೀದಿಗೆ ಹೋಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನೂ ಓದಿ: ನೀಲಗಿರಿ ತೋಪಿನಲ್ಲಿ ಬಿ.ಟೆಕ್ ವಿದ್ಯಾರ್ಥಿಯ ಬರ್ಬರ ಹತ್ಯೆ – ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆ

  • ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ

    ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಹೆಚ್ಚು ಭಕ್ತಾದಿಗಳು ಬರುವ ರಾಜ್ಯದ ದೇವಾಲಯಗಳ (Temple) ಅಭಿವೃದ್ಧಿಗಾಗಿ ದೇವಾಲಯಗಳಿಗೆ ಪ್ರಾಧಿಕಾರ ರಚನೆ ಮಾಡುವುದಾಗಿ ಮುಜರಾಯಿ ಸಚಿವರ ರಾಮಲಿಂಗಾ ರೆಡ್ಡಿ (Ramalinga Reddy) ಘೋಷಣೆ ಮಾಡಿದರು.

    ವಿಧಾನ ಪರಿಷತ್ (Vidhan Parishad) ಕಲಾಪದಲ್ಲಿ ಕಾಂಗ್ರೆಸ್‌ನ ರವಿ ಬದಲಿಗೆ ಯುಬಿ ವೆಂಕಟೇಶ್ ಘಾಟಿ ಸುಬ್ರಹ್ಮಣ್ಯ ದೇವಾಲಯದ (Ghati Subramanya Temple) ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತದೆ. ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಾಧಿಕಾರ ನಿರ್ಮಾಣ ಮಾಡುತ್ತೇವೆ. ಪಾರ್ಕಿಂಗ್ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಪಾರ್ಕಿಂಗ್ ಅಗತ್ಯ ಸ್ಥಳ ಗುರುತಿಸಲಾಗಿದೆ. ದೇವಾಲಯಕ್ಕೆ 10 ಕೋಟಿ ರೂ. ವಾರ್ಷಿಕ ಆದಾಯ ಬರುತ್ತದೆ. ಹಣದ ಕೊರತೆ ಇಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇವೆ ಜೊತೆಗೆ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಾಧಿಕಾರ ಮಾಡುತ್ತೇವೆ ಎಂದರು.  ಇದನ್ನೂ ಓದಿ: ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ

    ಇದೇ ವೇಳೆ ಮಾತನಾಡಿದ ಸಚಿವರು, ಹೆಚ್ಚು ಭಕ್ತರು ಬರುವ ಎಲ್ಲಾ ದೇವಾಲಯಗಳಿಗೆ ವಿಶೇಷ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ವಿಚಾರ ಮುಂದಿನ ಕ್ಯಾಬಿನೆಟ್ ಮುಂದೆ ಬರಲಿದೆ. ಕ್ಯಾಬಿನೆಟ್ ನಲ್ಲಿ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಒಪ್ಪಿಗೆ ಕೊಡುತ್ತೇವೆ. ಪ್ರಾಧಿಕಾರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ಇರಲಿದ್ದು, ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರಗಳು ಅನುಕೂಲ ಆಗಲಿವೆ ಎಂದರು. ಇದನ್ನೂ ಓದಿ: 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

     

  • ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್

    ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್

    – ಮೂರು ದಿನಗಳ ಕಾಲ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ

    ಬೆಂಗಳೂರು: ಬಿಜೆಪಿ (BJP) ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳು ಟೆಂಪಲ್ ರನ್ ಪ್ರಾರಂಭಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD Deve Gowda) ಕುಟುಂಬ ಇಂದಿನಿಂದ ಮೂರು ದಿನಗಳ ಕಾಲ ದೇವಾಲಯಗಳಲ್ಲಿ (Temple) ವಿಶೇಷ ಪೂಜೆ ಸಲ್ಲಿಸಲಿದೆ.

    ದೆಹಲಿಯಲ್ಲಿ (New Delhi) ಬಿಜೆಪಿ ಹೈಕಮಾಂಡ್ ಜೊತೆ ಅಂತಿಮ ಮಾತುಕತೆಗೂ ಮುನ್ನ ದೇವೇಗೌಡರ ಕುಟುಂಬ ದೇವರ ಮೊರೆ ಹೋಗುತ್ತಿದೆ. ಇಂದಿನಿಂದ ದೇವಾಲಯಗಳಿಗೆ ಯಾತ್ರೆ ಆರಂಭ ಮಾಡಿದ್ದು, ಜನವರಿ 27ರವರೆಗೆ ಕುಟುಂಬಸ್ಥರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧರ್ಮಸ್ಥಳ (Dharmasthala), ಕುಕ್ಕೆ ಸುಬ್ರಹ್ಮಣ್ಯ (Kukke Subrahmanya) ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡು ದಿನ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ವಿಶೇಷ ಪೂಜೆ ಬಳಿಕ ದೇವೇಗೌಡರು ಹಾಗೂ ಕುಟುಂಬಸ್ಥರು ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ರಿಯಾಯಿತಿ ದರದಲ್ಲಿ ಅಯೋಧ್ಯೆಗೆ ಟೂರ್ ಪ್ಲ್ಯಾನ್- ಬಿಜೆಪಿಗೆ ಕಾಂಗ್ರೆಸ್ ಟಕ್ಕರ್

    ದೇವೇಗೌಡರ ಟೆಂಪಲ್ ರನ್ ಡಿಟೇಲ್ಸ್:
    ಜನವರಿ 25
    – ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಕೆ, ಧರ್ಮಸ್ಥಳದಲ್ಲಿ ವಾಸ್ತವ್ಯ.
    ಜನವರಿ 26– ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಕುಕ್ಕೆಯಲ್ಲಿ ವಾಸ್ತವ್ಯ.
    ಜನವರಿ 27– ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಕೆ, ಬೆಂಗಳೂರಿಗೆ ವಾಪಸ್.

  • ದೇಗುಲ ಪ್ರವೇಶಿಸಲು ಅನುಮತಿ ನಿರಾಕರಣೆ – ನಾನೇನು ಅಪರಾಧ ಮಾಡಿದ್ದೇನೆ: ರಾಗಾ ಪ್ರಶ್ನೆ

    ದೇಗುಲ ಪ್ರವೇಶಿಸಲು ಅನುಮತಿ ನಿರಾಕರಣೆ – ನಾನೇನು ಅಪರಾಧ ಮಾಡಿದ್ದೇನೆ: ರಾಗಾ ಪ್ರಶ್ನೆ

    ದಿಸ್ಪುರ್:‌ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay yatra) ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ರಾಜ್ಯದಲ್ಲಿ ದೇಗುಲವೊಂದರ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ರಾಹುಲ್‌ ಗಾಂಧಿ (Rahul Gandhi) ನಾನೇನು ಅಂತಹ ಅಪರಾಧ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.

    ಅಸ್ಸಾಂ ರಾಜ್ಯದ ನಾಗೋನ್‌ನಲ್ಲಿರುವ ಬಟದ್ರವ ಸತ್ರಾ ದೇಗುಲಕ್ಕೆ (Batadrava Satra Temple) ರಾಹುಲ್ ಗಾಂಧಿ ತೆರಳಿದ್ದರು. ಆದರೆ, ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ, ನನಗೆ ನಿರ್ಬಂಧ ವಿಧಿಸಿರೋದು ಏಕೆ? ಎಂದು ಪ್ರಶ್ನಿಸಿದರು. ನಾವು ದೇಗುಲಕ್ಕೆ ಭೇಟಿ ನೀಡಲು ಬಯಸಿದ್ದೇವೆ. ಆದರೆ, ನಮಗೆ ಅವಕಾಶ ನೀಡುತ್ತಿಲ್ಲ. ನಾವು ಮಾಡಿದ ಅಪರಾಧವಾದ್ರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

    ನಾವು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಸಮಸ್ಯೆ ಸೃಷ್ಟಿಸಲು ಬಂದಿಲ್ಲ. ನಾವು ಕೇವಲ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಬಂದಿದ್ದೆವು ಎಂದು ರಾಹುಲ್ ಗಾಂಧಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ಧಾರೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ 

    ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಇರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯ ಮಾರ್ಗ ಬದಲಾವಣೆ ಮಾಡಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮನವಿ ಮಾಡಿದ್ದರು. ಆದರೆ, ತಮ್ಮ ಯಾತ್ರೆಯ ಮಾರ್ಗ ಬದಲಾವಣೆ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.

    ಅಸ್ಸಾಂ ಸರ್ಕಾರದ ಮನವಿಯನ್ನು ಪರಿಗಣಿಸದೇ ತಮ್ಮ ನಿಗದಿತ ಮಾರ್ಗದಲ್ಲೇ ಯಾತ್ರೆ ಮುಂದುವರಿಸಿದ್ದರು, ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಈ ನಿಲುವನ್ನ ಖಂಡಿಸಿ ನಾಗೋನ್‌ನಲ್ಲಿ ಪ್ರತಿಭಟನೆ ನಡೆಸಿದರು. ದೇಗುಲಕ್ಕೆ ಯಾರು ಭೇಟಿ ನೀಡಬೇಕು? ಯಾರು ಭೇಟಿ ನೀಡಬಾರದು ಎಂದು ಪ್ರಧಾನಿ ಮೋದಿ ಅವರು ನಿರ್ಧರಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಬೆಳ್ಳಿಯ ರಾಮಮಂದಿರ ಪ್ರತಿರೂಪ ಗಿಫ್ಟ್‌!

  • ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    – ಈಗಲೂ ದೇವಸ್ಥಾನಕ್ಕೆ ಬರ್ತಾರೆ, ಶ್ರೀರಾಮನ ಪೂಜೆ ಮಾಡ್ತಾರೆ

    ಮೈಸೂರು: ಹಿಂದೂ-ಮುಸ್ಲಿಂ (Hindu-Muslims) ನಡುವೆ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವ ಘಟನೆಗಳ ನಡುವೆಯೂ ಹಿಂದೂ-ಮುಸ್ಲಿಮರ ಮಧ್ಯೆ ಏಕತೆ ಸಂದೇಶ ಸಾರುವ ಪ್ರಸಂಗಗಳು ಅಚ್ಚರಿ ಮೂಡಿಸುತ್ತಿವೆ. ಇದಕ್ಕೆ ಮೈಸೂರಿನ ದೇವರಾಜ ಮೊಹಲ್ಲಾದ (Mysuru Devaraja Mohalla) ಮುಸ್ಲಿಂ ಬಾಂಧವರು ಸಾಕ್ಷಿಯಾಗಿದ್ದಾರೆ.

    ಹೌದು. ಇಲ್ಲಿನ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣಗೊಂಡಿರುವ `ಶ್ರೀಲೋಕಾಭಿರಾಮ’ ರಾಮಮಂದಿರ (Lokabhirama Ram Mandir) ನಿರ್ಮಾಣಕ್ಕೆ ಮುಸ್ಲಿಮರೇ ಹೆಚ್ಚಿನ ದೇಣಿಗೆ ಕೊಟ್ಟಂತಹ ಉದಾಹರಣೆ ಇದೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ

    1991ರ ಸಮಯದಲ್ಲಿ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರಕ್ಕೆ ಅತಿ ಹೆಚ್ಚಿನ ದೇಣಿಗೆಯನ್ನು ಇಲ್ಲಿನ ಮುಸ್ಲಿಂ ಉದ್ಯಮಿಗಳು ನೀಡಿದ್ದಾರೆ. 1,500 ರೂ. ನಿಂದ 8,000 ರೂ. ವರೆಗೂ ದೇಣಿಗೆ ನೀಡಿದ್ದಾರೆ. ಅಂತಹವರ ಸ್ಮರಣಾರ್ಥವಾಗಿ ಅವರ ಹೆಸರು, ಫೋಟೋಗಳನ್ನ ಇಂದಿಗೂ ಮಂದಿರದ ಒಳಗೆ ಹಾಕಲಾಗಿದೆ. ಅಲ್ಲದೆ ಈ ಶ್ರೀರಾಮ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಬಂದು ಈಗಲೂ ಶ್ರೀರಾಮನಿಗೆ ಪೂಜೆ ಸಲ್ಲಿಸುತ್ತಾರೆ.

    ಈ ಕುರಿತು `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿರುವ ಉದ್ಯಮಿಯೊಬ್ಬರ ಪುತ್ರ, ನಮ್ಮ ತಂದೆ ಮೀರ್ ಬಷೀರ್ ಅಹ್ಮದ್ ಖುರೇಷಿ ಹಣ್ಣಿನ ವ್ಯಾಪಾರಾದ ಜೊತೆಗೆ, ಸಮಾಜ ಸೇವೆ ಮಾಡುತ್ತಿದ್ದರು. 1991ರ ಅವಧಿಯಲ್ಲೇ ಇಲ್ಲಿನ ಮಂದಿರ ನಿರ್ಮಾಣಕ್ಕೆ 8 ಸಾವಿರ ರೂ. ನೀಡಿದ್ದಾರೆ. ನಾವು ಹುಟ್ಟಿ ಬೆಳೆದಿದ್ದು ಇಲ್ಲೇ, ನಮ್ಮ ತಂದೆ ಚಿಕ್ಕಂದಿನಿಂದಲೂ ನನ್ನನ್ನು ಇಲ್ಲಿನ ರಾಮಮಂದಿರಕ್ಕೆ ಕರೆದುಕೊಂಡು ಬರುತ್ತಿದ್ದರು. ಈಗಲೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ

    ಮುಂದುವರಿದು, 1992ರ ಬಾಬರಿ ಮಸೀದಿ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ಗಲಾಟೆ ಎಲ್ಲೆಡೆ ವ್ಯಾಪಿಸಿತ್ತು. ಆದ್ರೆ ನಮ್ಮ ಮೊಹಲ್ಲಾದಲ್ಲಿ ಅದರ ಕಹಿ ಅನುಭವ ನಮಗೆ ತಾಕಲಿಲ್ಲ. ನಾವೆಲ್ಲರೂ ಅಂದಿನಿಂದ ಈವರೆಗೆ ಅಣ್ಣ-ತಮ್ಮಂದಿರಂತೆ ಇದ್ದೇವೆ. ಈಗಲೂ ದೇವಸ್ಥಾನಕ್ಕೆ ಬರುತ್ತೇವೆ. ದೇವಸ್ಥಾನದ ಕೆಲಸ ಏನೇ ಇದ್ದರೂ ಒಟ್ಟಾಗಿ ಸೇರಿ ಮಾಡುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  • ಇನ್ಮುಂದೆ ದೇಗುಲಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ- ನಿಯಮ ಮೀರಿದ್ರೆ ಸಿಗಲ್ಲ ಮಂಗಳಾರತಿ, ಪ್ರಸಾದ!

    ಇನ್ಮುಂದೆ ದೇಗುಲಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ- ನಿಯಮ ಮೀರಿದ್ರೆ ಸಿಗಲ್ಲ ಮಂಗಳಾರತಿ, ಪ್ರಸಾದ!

    ಬೆಂಗಳೂರು: ರಾಜ್ಯದ ಖಾಸಗಿ ಆಡಳಿತದ ದೇವಾಲಯಗಳಲ್ಲಿ ಇನ್ಮುಂದೆ ಡ್ರೆಸ್ ಕೋಡ್ (Dress Code in Temple) ಕಡ್ಡಾಯ ಮಾಡಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ 800 ದೇವಾಲಯಗಳ ಪೈಕಿ 500ಕ್ಕೂ ಹೆಚ್ಚು ದೇವಾಲಯಗಳಲ್ಲಿ ಮುಂದಿನ ಒಂದು ತಿಂಗಳು, ದೇಗುಲದ ಆಡಳಿತ ಮಂಡಳಿಯೇ ಈ ಬಗ್ಗೆ ಜಾಗೃತಿ ಮೂಡಿಸಲಿದೆ. ಆದರೆ ಮತ್ತೆ ಹಿಂದಿನ ರೀತಿಯೇ ಸಾರ್ವಜನಿಕರು ನಡೆದುಕೊಂಡರೆ, ಅಂತವರಿಗೆ ದೇವಾಲಯದ ಕೆಲ ಆಚರಣೆಗಳನ್ನ ನೀಡದಿರಲು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಭಾ ಚಿಂತನೆ ನಡೆಸುತ್ತಿದೆ.

    ಹೌದು, ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನ ಧರಿಸಿ ಬರುವುದನ್ನ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ನಿಯಮ ಮೀರಿದ್ರೆ ಮಂಗಳಾರತಿ ಮತ್ತು ಪ್ರಸಾದ ನೀಡದಿರಲು ಪ್ಲ್ಯಾನ್ ಮಾಡಲಾಗ್ತಿದೆ. ಎಲ್ಲಾ ದೇವಾಲಯಗಳಲ್ಲೂ ಬೋರ್ಡ್‍ಗಳನ್ನ ಹಾಕಿ ಜಾಗೃತಿ ಮೂಡಿಸೋದಲ್ಲದೆ ಮೌಖಿಕವಾಗಿ ತಿಳಿ ಹೇಳುವ ಕೆಲಸಕ್ಕೆ ಮುಂದಾಗ್ತಿದೆ. ಈ ಹಿಂದೆ ವೈಕುಂಠ ಏಕಾದಶಿ ವೇಳೆ ಇದೇ ರೀತಿಯ ನಿಯಮಗಳನ್ನ ಕೆಲ ದೇವಾಲಯಗಳಲ್ಲಿ ಜಾರಿಗೆ ತರಲಾಗಿತ್ತು. ಈಗ ಎಲ್ಲಾ ದೇವಾಲಯದಲ್ಲೂ ಅಭಿಯಾನ ಆರಂಭಿಸಲಾಗಿದೆ. ಇದನ್ನೂ ಓದಿ: ಜೈಲಿಂದ ಹೊರ ಬಂದ ತಕ್ಷಣ ಕ್ಷಮೆ ಕೇಳಿದ ಕರವೇ ನಾರಾಯಣಗೌಡ

    ಹೊರ ದೇಶ ಅಥವಾ ಹೊರ ಭಾಗಗಳಿಂದ ಬರುವ ಭಕ್ತರನ್ನು ಗಮನದಲ್ಲಿಟ್ಟುಕೊಂಡು ದೇವಾಲಯದ ವತಿಯಿಂದಲೇ ಬಟ್ಟೆಗಳನ್ನು ನೀಡಲಿದ್ದಾರೆ. ಬಾಡಿಗೆ ಬಟ್ಟೆಗಳನ್ನ ಪಡೆದು ದೇವರ ದರ್ಶನ ಪಡೆದು ನಂತರ ಆ ಬಟ್ಟೆಗಳನ್ನ ದೇವಾಲಯದ ಕೌಂಟರ್‍ನಲ್ಲೇ ವಾಪಸ್ ನೀಡಬೇಕು. ಒಬ್ಬರು ಧರಿಸಿದ ಬಟ್ಟೆಯನ್ನ ಮತ್ತೊಬ್ಬರು ಧರಿಸುವ ಮುನ್ನ, ಶುದ್ದವಾಗಿ ಒಗೆಯಲು ಕೂಡ ದೇವಾಸ್ಥಾನದ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ.

    ಒಟ್ಟಾರೆ ಸದ್ಯ ಖಾಸಗಿ ಆಡಳಿತ ಮಂಡಳಿಯ ರಾಜ್ಯದ 800ಕ್ಕೂ ಹೆಚ್ಚು ದೇವಾಲಯಗಳಲ್ಲಿ ಸದ್ಯ ಇದೇ ರೂಲ್ಸ್ ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಒಂದು ತಿಂಗಳ ಅಭಿಯಾನದ ಬಳಿಕ ಈರೂಲ್ಸ್‍ಗಳನ್ನ ಜಾರಿಗೆ ತರುವ ಸಾಧ್ಯತೆ ಇದೆ.

  • ಶ್ರೀರಾಮನ ಪ್ರಾಣಪ್ರತಿಷ್ಠೆ ಸಮಯಕ್ಕೆ ರಾಜ್ಯದ ದೇವಾಲಯಗಳಲ್ಲೂ ವಿಶೇಷ ಪೂಜೆ, ಮಹಾಮಂಗಳಾರತಿ

    ಶ್ರೀರಾಮನ ಪ್ರಾಣಪ್ರತಿಷ್ಠೆ ಸಮಯಕ್ಕೆ ರಾಜ್ಯದ ದೇವಾಲಯಗಳಲ್ಲೂ ವಿಶೇಷ ಪೂಜೆ, ಮಹಾಮಂಗಳಾರತಿ

    – ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸಚಿವ ರಾಮಲಿಂಗರೆಡ್ಡಿ ಸೂಚನೆ

    ಬೆಂಗಳೂರು: ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Ayodhya Ram Mandir) ಉದ್ಘಾಟನೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ರಾಜ್ಯದ ನೂರಾರು ದೇವಾಲಯಗಳಲ್ಲಿಯೂ (Temples) ವಿಶೇಷ ಪೂಜೆ ಪುನಸ್ಕಾರಗಳು ನೆರವೇರಲಿವೆ.

    ಶನಿವಾರ ಬೆಂಗಳೂರಿನಲ್ಲಿ (Bengaluru) ಮುಜರಾಯಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy), ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅದೇ ಸಮಯಕ್ಕೆ ಸರಿಯಾಗಿ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನೇರವೇರಿಸುವ ಮೂಲಕ ವಿಶೇಷ ಗೌರವ ಸಲ್ಲಿಸುವಂತೆ ಸೂಚಿಸಿದ್ದಾರೆ. ಸೋಮವಾರ (ಜ.8) ಈ ಸಂಬಂಧ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ. ಇದನ್ನೂ ಓದಿ: ವೈದಿಕ ಪಂಡಿತರಿಗಾಗಿ ಕ್ರಿಕೆಟ್‌ ಟೂರ್ನಿ – ವಿಜೇತರಿಗೆ ಅಯೋಧ್ಯೆ ಟ್ರಿಪ್‌

    ಅಂದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ದೇವಸ್ಥಾನಗಳಲ್ಲಿ ಮಹಾಮಂಗಳರತಿ ನೆರವೇರಲಿದೆ. ಅಲ್ಲದೇ ದೇಶಕ್ಕೆ ಮತ್ತು ರಾಜ್ಯಕ್ಕೆ ಶ್ರೀ ರಾಮನ ರಕ್ಷಣೆ ಇರಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಉತ್ತರ ಪ್ರದೇಶದ ಎಲ್ಲಾ ಜೈಲುಗಳಲ್ಲೂ ರಾಮಮಂದಿರ ಉದ್ಘಾಟನೆ ನೇರಪ್ರಸಾರ

  • ಹೊಸ ವರ್ಷ, ಹೊಸ ದಿನ- ದೇವರ ಮೊರೆ ಹೋದ ರಾಜ್ಯದ ಜನ

    ಹೊಸ ವರ್ಷ, ಹೊಸ ದಿನ- ದೇವರ ಮೊರೆ ಹೋದ ರಾಜ್ಯದ ಜನ

    ಬೆಂಗಳೂರು: ಹೊಸ ವರ್ಷದಂದು ರಾಜ್ಯದ ಜನತೆ ದೇವರ ಮೊರೆ ಹೋಗಿದ್ದಾರೆ. ವರ್ಷದ ಮೊದಲ ದಿನದಂದು ಎಲ್ಲಾ ದೇಗುಗಳಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ.

    ಬೆಂಗಳೂರಿನ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಬೆಂಗಳೂರಿನ ಶಕ್ತಿ ದೇವತೆ ಅಣ್ಣಮ್ಮ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತಿದೆ. ಈ ವರ್ಷ ಒಳ್ಳೆಯದಾಗಲಿ ಅಂತಾ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇದನ್ನೂ ಓದಿ: ಇಸ್ರೋ 2024ರ ಮೊದಲ ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ

    ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇಗುಲದಲ್ಲೂ ಜನಸಾಗರ ಇದೆ. ಮಧ್ಯಾಹ್ನ 1 ಗಂಟೆಗೆ ಕ್ಲೋಸ್ ಆಗುತ್ತಿದ್ದ ದೇಗುಲ ಇಂದು 2:30ರವರೆಗೆ ಇರಲಿದೆ. ಭಕ್ತರ ಸಂಖ್ಯೆ ಹೆಚ್ಚಳವಾಗಿದ್ರಿಂದ ದೇಗುಲದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ ನೆರೆದಿದ್ದು, ಬೆಳ್ಳಂಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಜನ ನಿಂತಿದ್ದಾರೆ.

    ಚಾಮರಾಜನಗರದ ಮಹದೇಶ್ವರನ ಸನ್ನಿಧಿಗೆ ಕೂಡ ಭಕ್ತ ಸಾಗರ ಹರಿದು ಬಂದಿದೆ. ಮಾದಪ್ಪನ ಸನ್ನಿಧಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಚಿನ್ನದ ತೇರು, ಬೆಳ್ಳಿ ರಥ, ಬಸವ ವಾಹನ, ಹುಲಿವಾಹನ ಸೇವೆಗಳು ನಡೆಯುತ್ತಿವೆ. ಕೋಲಾರದ ಕೋಟಿಲಿಂಗ ಕ್ಷೇತ್ರದಲ್ಲಿಯೂ ಭಕ್ತಗಣ ಸೇರಿದೆ. ಕೆಜಿಎಫ್ ತಾಲೂಕಿನ ಕಮ್ಮಸಂದ್ರದಲ್ಲಿರುವ ಕೋಟಿಲಿಂಗ ದೇಗುಲದಲ್ಲಿ ಸಾವಿರಾರು ಜನ ಶಿವನ ದರ್ಶನ ಪಡೆಯುತ್ತಿದ್ದಾರೆ.

    ಮಂಡ್ಯ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭಕ್ತರ ದಂಡು ನೆರೆದಿದೆ. ಮೇಲುಕೋಟೆ ಚೆಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣ ನಿಮಿಷಾಂಭ, ರಂಗನಾಥ ದೇವಸ್ಥಾನ ಹೀಗೆ ಪ್ರಮುಖ ದೇವಸ್ಥಾನಗಳಿಗೆ ಸಾಕಷ್ಟಯ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

  • ಮಂತ್ರಾಲಯದಲ್ಲಿ 2.95 ಕೋಟಿ ರೂ. ಕಾಣಿಕೆ ಸಂಗ್ರಹ

    ಮಂತ್ರಾಲಯದಲ್ಲಿ 2.95 ಕೋಟಿ ರೂ. ಕಾಣಿಕೆ ಸಂಗ್ರಹ

    ರಾಯಚೂರು: ಕಲಿಯುಗ ಕಾಮಧೇನು ಕಲ್ಪವೃಕ್ಷ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt Mantralaya) ಕಳೆದ 26 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳ (December) 26 ದಿನಗಳ ಕಾಣಿಕೆ ಹುಂಡಿ ಎಣಿಕೆಕಾರ್ಯ ಮುಕ್ತಾಯಗೊಂಡಿದ್ದು ಒಟ್ಟು 2,95,74,004 ರೂ. ಕಾಣಿಕೆ ಸಂಗ್ರಹವಾಗಿದೆ. ಇದನ್ನೂ ಓದಿ: ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್‌ ನಿಲ್ಲಿಸಿ – ಯುಜಿಸಿ

    ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 2, 89, 63,504 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 6,10,500 ರೂ. ನಾಣ್ಯಗಳ ಸಂಗ್ರಹವಾಗಿದೆ. 71 ಗ್ರಾಂ ಚಿನ್ನ ಹಾಗೂ 439 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

    ಕಾಣಿಕೆ ಹುಂಡಿ‌ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು , ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.