Tag: ದೇವಸ್ಥಾನ

  • ಮೈಸೂರಲ್ಲಿ ದೇಗುಲಗಳೇ ಟಾರ್ಗೆಟ್ಟಾ..?- ಸಿಎಂ ಭೇಟಿಯಾಗಿ ಪ್ರತ್ಯೇಕ ಬೋರ್ಡ್‍ಗೆ ಒತ್ತಾಯ

    ಮೈಸೂರಲ್ಲಿ ದೇಗುಲಗಳೇ ಟಾರ್ಗೆಟ್ಟಾ..?- ಸಿಎಂ ಭೇಟಿಯಾಗಿ ಪ್ರತ್ಯೇಕ ಬೋರ್ಡ್‍ಗೆ ಒತ್ತಾಯ

    ಮೈಸೂರು: ಅರಮನೆ ನಗರಿಯಲ್ಲೊ ದೇಗುಲ ಪಾಲಿಟಿಕ್ಸ್ ಜೋರಾಗಿದೆ. 92 ದೇಗುಲ ತೆರವಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ತಾ ಇದ್ದಂತೆ ಪ್ರತಾಪ್ ಸಿಂಹ ದೇಗುಲ ಉಳಿಸಿ ಅಭಿಯಾನಕ್ಕೆ ಇಳಿದಿದ್ದಾರೆ. ಮಾತ್ರವಲ್ಲ ಸಿಎಂ ಬೊಮ್ಮಾಯಿಯವರನ್ನ ಭೇಟಿ ಮಾಡಿ ಮನವಿ ಕೂಡ ಮಾಡಿದ್ದಾರೆ.

    ಹೌದು. ಮೈಸೂರಿನಲ್ಲಿ ಇದೀಗ ಟೆಂಪಲ್ ಪಾಲಿಟಿಕ್ಸ್ ಜೋರಾಗಿದೆ. ಕಳೆದ ವಾರ ನಂಜನಗೂಡು ಸಮೀಪದ ಮಹಾದೇವಮ್ಮ ದೇಗುಲವನ್ನು ಜಿಲ್ಲಾಡಳಿತ ನೆಲಸಮ ಮಾಡಿರುವ ಘಟನೆಯಿಂದ ಕೆರಳಿರುವ ಪ್ರತಾಪ್ ಸಿಂಹ, ಜಿಲ್ಲಾಡಳಿತ ಮತ್ತು ಮುಜುರಾಯಿ ಇಲಾಖೆ ವಿರುದ್ಧ ಸಮರ ಸಾರಿದ್ದಾರೆ. ಹಿಂದೂಗಳ ದೇಗುಲಗಳೇ ಟಾರ್ಗೆಟ್ ಅಂತಾ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲಾಡಳಿತ, ಮುಜರಾಯಿ ಇಲಾಖೆ ವಿರುದ್ಧ ಸಮರ ಸಾರಿರುವ ಪ್ರತಾಪ್ ಸಿಂಹ, ದೇವಸ್ಥಾನ ಉಳಿಸಿ ಅಂತಾ ಅಭಿಯಾನ ಕೈಗೊಂಡಿದ್ದಾರೆ. ಈ ಸಂಬಂಧ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಫೋನಾಯಿಸಿರುವ ಸಂಸದರು, ಕೋರ್ಟ್ ಆದೇಶದಲ್ಲಿ ಎಲ್ಲಿಯೂ ದೇವಸ್ಥಾನ ತೆರವಿಗೆ ಸೂಚಿಸಿಲ್ಲ. ಕೂಡಲೇ ನಂಜನಗೂಡು ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತಕ್ಕೂ ಅಗತ್ಯ ಸೂಚನೆಗಳನ್ನು ನೀಡಬೇಕು. 2009ರ ದೇವಸ್ಥಾನ ತೆರವಿಗೆ ಪರ್ಯಾಯ ಕ್ರಮ ಕೈಗೊಳ್ಳಿ. ದೇವಸ್ಥಾನ ತೆರವು ಬದಲು ಸ್ಥಳಾಂತರ ಮಾಡಿ ಅಂತಾ ಹೇಳಿದ್ದಾರೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ದೇಶ-ಧರ್ಮದ ವಿಚಾರದಲ್ಲಿ ನಾನು ಸದಾ ಧ್ವನಿ ಎತ್ತುತ್ತೇನೆ: ಪ್ರತಾಪ್ ಸಿಂಹ

    ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದು ಕೇವಲ ಮೈಸೂರಿಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ವಕ್ಫ್ ಬೋರ್ಡ್ ಮಾದರಿಯಲ್ಲಿ ರಾಜ್ಯದ ಎಲ್ಲಾ ಹಿಂದೂ ದೇಗುಲಗಳ ಸಂರಕ್ಷಣೆಗೆ ಒಂದು ಪ್ರತ್ಯೇಕ ಬೋರ್ಡ್ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

    ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ, ಮತ್ತೊಮ್ಮೆ ದೇಗುಲ ಧ್ವಂಸವನ್ನು ಖಂಡಿಸಿದ್ದಾರೆ. ಏಕಾಏಕಿ ತೆರವು ಸರಿಯಲ್ಲ ಎಂದಿದ್ದಾರೆ. ಜೊತೆಗೆ ಈಗ ಪ್ರತಾಪ್ ಸಿಂಹ ಹೋರಾಟ ಮಾಡ್ತಿರೋದು ಯಾರ ವಿರುದ್ಧ..? ಅವ್ರದ್ದೇ ಸರ್ಕಾರ ಇದೆ ಅಲ್ವಾ..? ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ಮಾಡ್ಲಿ ಅಂತಾ ಹೇಳಿದ್ದಾರೆ. ಒಟ್ಟಿನಲ್ಲಿ ಈ ವಷಾರ್ಂತ್ಯದ ಹೊತ್ತಿಗೆ ಕೇವಲ ಮೈಸೂರಿನಲ್ಲಿಯೇ 92 ದೇಗುಲ ತೆರವು ಮಾಡಲು ಜಿಲ್ಲಾಡಳಿತ ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ದೇಗುಲ ಸಮರ ಮತ್ತಷ್ಟು ಕಾವು ಪಡೆದುಕೊಳ್ಳೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

  • ದೇವಾಲಯ ಏಕಾಏಕಿ ತೆರವಿಗೆ ಇಂದೇ ಅಧಿಕೃತ ಬ್ರೇಕ್ ಹಾಕ್ತಾರಾ ಸಿಎಂ?

    ದೇವಾಲಯ ಏಕಾಏಕಿ ತೆರವಿಗೆ ಇಂದೇ ಅಧಿಕೃತ ಬ್ರೇಕ್ ಹಾಕ್ತಾರಾ ಸಿಎಂ?

    -ಪ್ರತಾಪ್ ಸಿಂಹಗೆ ಸಿಎಂ ಕರೆ ಮಾಡಿ ಹೇಳಿದ್ದೇನು?

    ಮೈಸೂರು: ಮೈಸೂರು ಜಿಲ್ಲೆಯ 92 ದೇವಾಲಯ ತೆರವು ಮಾಡುವ ಕಾರ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಅಧಿಕೃತವಾಗಿ ತಡೆ ನೀಡುವ ಆದೇಶ ಜಾರಿ ಮಾಡುವ ಸಾಧ್ಯತೆಯಿದೆ.

    ಖುದ್ದು ಸಿಎಂ ಅವರೇ ಮೈಸೂರು ಸಂಸದ ಪ್ರತಾಪ್ ಸಿಂಹಗೆ ದೂರವಾಣಿ ಕರೆ ಮಾಡಿ ದೇವಸ್ಥಾನಗಳ ರಕ್ಷಣೆಗೆ ನಾವು ಬದ್ಧ. ಸುಪ್ರೀಂಕೋರ್ಟ್ ಆದೇಶದಲ್ಲಿ ಎಲ್ಲೂ ಏಕಾಏಕಿ ದೇವಸ್ಥಾನ ತೆರವು ಮಾಡಿ ಎಂದು ಸೂಚಿಸಿಲ್ಲ. ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತಿದೆ. ಹೀಗಾಗಿ, ತೆರವು ದಿನಾಂಕದ ಆದೇಶಕ್ಕೆ ಸದ್ಯಕ್ಕೆ ತಡೆ ನೀಡುವ ಆದೇಶ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಪ್ರತಾಪ್ ಸಿಂಹ ಅವರೇ ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸಿ ಅವರ ನಿರ್ದೇಶನದಂತೆ ದೇವಸ್ಥಾನವನ್ನು ಉಳಿಸಿಕೊಳ್ಳುವ ಒಂದು ವಿಧಾನವನ್ನು ಬಳಸಿಕೊಳ್ಳಲಾಗುವುದು. ಸಿಎಂ ಕಾನೂನು ತಜ್ಞರ ಸಲಹೆ ಪಡೆದು ಆದೇಶ ಮಾಡಲಿದ್ದಾರೆ. ಹೀಗಾಗಿ, ದೇವಸ್ಥಾನ ತೆರವಾಗುತ್ತದೆ ಎಂಬ ನಮ್ಮ ಆತಂಕ ಸದ್ಯಕ್ಕೆ ನಿವಾರಣೆ ಆಗಿದೆ. ಮುಸ್ಲಿಂ ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ವಕ್ಫ್ ಬೋರ್ಡ್ ಇದೆ. ಇದೇ ಮಾದರಿಯಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೂ ಬೋರ್ಡ್ ಅವಶ್ಯಕತೆ ಇದೆ. ಇದನ್ನು ಸಿಎಂ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಅಂತಾನಾ? – ತನ್ವೀರ್ ಸೇಠ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

  • ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

    ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

    ವಿಜಯಪುರ: ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ತೆರವು ವಿಚಾರವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ. ಇದನ್ನೂ ಓದಿ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್

    Bagadi Gautham

    ಸುಪ್ರೀಂಕೋರ್ಟ್ ಆದೇಶ ನೆಪ ಮಾಡಿಕೊಂಡು ಹಿಂದೂ ದೇವಾಲಯ ಧ್ವಂಸ ಸರಿಯಲ್ಲ. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವ ಹುನ್ನಾರವನ್ನು ನಾವು ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್

    ಸುಪ್ರೀಂ ಕೋರ್ಟ್ ಆದೇಶವನ್ನು ತಮಗೆ ಬೇಕಾದ ಹಾಗೇ ತಿರುಚಿ ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಮಾತ್ರ ಕೈಹಾಕುವ ಯತ್ನಕ್ಕೆ ಅಧಿಕಾರಿಗಳು ಕೈ ಹಾಕಬಾರದು. ಪ್ರಾರ್ಥನಾ ಮಂದಿರಗಳಿಗೂ ದೇವಸ್ಥಾನಗಳಿಗೂ ಬಹಳ ವ್ಯತ್ಯಾಸವಿದೆ. ಸುಪ್ರೀಂ ಕೋರ್ಟ್ ಆದೇಶ ಹಿಂದುಗಳಿಗೆ ಮಾತ್ರವೇ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಉತ್ತರಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

  • ಮಂಡ್ಯದಲ್ಲಿ ಭಾರತಾಂಬೆಯ ದೇಗುಲ- ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕೆಲಸ

    ಮಂಡ್ಯದಲ್ಲಿ ಭಾರತಾಂಬೆಯ ದೇಗುಲ- ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕೆಲಸ

    ಮಂಡ್ಯ: ಗ್ರಾಮಗಳಲ್ಲಿ ದೇವಾಲಯಗಳನ್ನು ಕಟ್ಟಿಸುವುದು, ಪೂಜೆ ಮಾಡೋದು ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ದೇಶದ ಮಹನೀಯರ ಮೂರ್ತಿ ಪ್ರತಿಷ್ಠಾಪಿಸಿ, ಭಾರತಾಂಬೆ ದೇವಾಲಯ ನಿರ್ಮಾಣ ಮಾಡಿ, ಗ್ರಾಮದ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ವಿನೂತನ ಕೆಲಸ ಮಾಡಲಾಗುತ್ತಿದೆ.

    ಹಿಂದೂ ಧರ್ಮಕ್ಕೆ ಮುಕ್ಕೋಟಿ ದೇವರು ಎಂಬ ನಂಬಿಕೆ ಇದೆ. ಒಂದೊಂದು ಊರಿನಲ್ಲೂ ಹತ್ತಾರು ಹೆಸರಿನ ದೇವರ ಮೂರ್ತಿಗಳು ಪೂಜಿಸಲ್ಪಡುತ್ತವೆ. ಆದರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಿನಕೆರೆ ಗ್ರಾಮದಲ್ಲಿನ ಜನರು ದೇವರ ಜೊತೆ ಭಾರತಾಂಬೆ ಹಾಗೂ ಮಹನೀಯ ವ್ಯಕ್ತಿಗಳ ಪೂಜೆಯನ್ನು ಮಾಡುತ್ತಿದ್ದಾರೆ. ನಾಡು, ನುಡಿಗಾಗಿ ತಮ್ಮ ಬದುಕು ಸವೆಸಿದ ಮಹಾನ್ ವ್ಯಕ್ತಿಗಳಿಗೆ ಮಂದಿರ ಕಟ್ಟಿ ಅವರ ಜೀವನ ಚರಿತ್ರೆಯನ್ನ ಮುಂದಿನ ಪೀಳಿಗೆಗೆ ತಿಳಿಸಲು ಮುಂದಾಗಿದ್ದಾರೆ.

    ಇಲ್ಲಿನ ಗ್ರಾಮಸ್ಥರು ವಿವಿಧ ಹೆಸರಿನ ಹಲವು ದೇವಾಲಯಗಳಿದ್ದರೂ ಅದರೊಂದಿಗೆ ಮಹಾನ್ ಚೇತನಗಳ ಪೂಜೆಗಾಗಿಯೇ ಮಂದಿರ ನಿರ್ಮಿಸಿ, ಜೈ ಭಾರತ್ ಮಾತಾ ಮಂದಿರ ಎಂದು ಹೆಸರಿಟ್ಟಿದ್ದಾರೆ. ಜೈ ಜವಾನ್, ಜೈ ಕಿಸಾನ್ ಘೋಷಣೆಯೊಂದಿಗೆ ಯೋಧನ ಹಾಗೂ ರೈತನ ಮೂರ್ತಿಯು ಮಂದಿರದಲ್ಲಿ ಆಕರ್ಷಣೀಯವಾಗಿದೆ. ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು

    ಈ ಮಂದಿರದಲ್ಲಿ ನಾಡಪ್ರಭು ಕೆಂಪೇಗೌಡರು, ಸ್ವಾಮಿ ವಿವೇಕಾನಂದರು, ರಾಷ್ಟ್ರಪಿತ ಮಹಾತ್ಮ ಗಾಂಧಿ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಕವಿ ಕುವೆಂಪು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿರುವ ಗ್ರಾಮಸ್ಥರು, ಭಾರತಾಂಬೆಯ ಮಡಿಲಲ್ಲಿ ಹುಟ್ಟಿ, ನೆಲದ ಏಳಿಗೆಗಾಗಿ ಶ್ರಮಿಸಿದ ಈ ಸಾಧಕರನ್ನು ಪೂಜಿಸುತ್ತಿದ್ದಾರೆ. ಸುಮಾರು 10 ಲಕ್ಷ ರೂ. ಖರ್ಚು ಮಾಡಿ, ಮಂದಿರ ನಿರ್ಮಾಣ ಮಾಡಲಾಗಿದ್ದು, ಉಪ್ಪಿನಕೆರೆ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನೀಡಿರುವ ದೇಣಿಗೆ ಹಣದಿಂದ ಈ ಸುಂದರವಾದ ಮಂದಿರ ನಿರ್ಮಾಣವಾಗಿದೆ.

    ಉಪ್ಪಿನಕೆರೆ ಗ್ರಾಮಸ್ಥರು ಮಹಾನ್ ವ್ಯಕ್ತಿಗಳ ಮಂದಿರ ಸ್ಥಾಪಿಸಲು ಕಾರಣವಿದೆ. ಮುಂದಿನ ಪೀಳಿಗೆ ಮಕ್ಕಳಿಗೆ ಸಮಾಜದ ಒಳಿತಿಗಾಗಿ ಶ್ರಮಿಸಿದ ಈ ಮಹಾನ್ ಸಾಧಕರ ಪರಿಚಯವಾಗಬೇಕು ಹಾಗೂ ಅವರು ಬದುಕಿದ ರೀತಿ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಶಾಲೆಯ ಮುಂಭಾಗದಲ್ಲೆ ಮಂದಿರ ಕಟ್ಟಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    -ದೇವಸ್ಥಾನಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ
    -ದೇವಸ್ಥಾನದಲ್ಲಿ ವಿಗ್ರಹವಿದೆ ಚರ್ಚ್ ಮಸೀದಿಗಳಲ್ಲಿ ಇಲ್ಲ

    ಮೈಸೂರು: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ. ಕಳ್ಳರು ಬರುವ ರೀತಿ ಬೆಳಗಿನ ಜಾವ ಬಂದು ದೇವಸ್ಥಾನ ಹೊಡೆದು ಹಾಕುತ್ತಿದ್ದಾರೆ. ಬರೀ ದೇವಸ್ಥಾನ ತೆರವು ಯಾಕೆ? ಮಸೀದಿ, ಚರ್ಚ್‍ಗಳು ಕಣ್ಣಿಗೆ ಕಾಣವುದಿಲ್ಲವೇ ಎಂದು ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ದೇವಸ್ಥಾನವನ್ನು ಜಿಲ್ಲಾಡಳಿತ ಏಕಾಏಕಿ ಧ್ವಂಸ ಮಾಡುತ್ತದೆ. ಆದರೆ ಫುಟ್‍ಪಾತ್‍ನಲ್ಲಿ ಇರುವ ಗೋರಿ, ಚರ್ಚ್‍ಗಳು ನಿಮ್ಮ ಕಣ್ಣಿಗೆ ಕಾಣಲ್ವಾ. ಜಿಲ್ಲಾಡಳಿತ ಕಳ್ಳರು ಬಂದ ಹಾಗೆ ಬಂದು, ಬರುವ ವೇಳೆ ಕಾರ್ಯಚಾರಣೆಗೆ ಜೆಸಿಬಿ ತೆಗೆದು ಕೊಂಡು ಬರುತ್ತಾರೆ. ಕ್ಯಾತಮಾರನಹಳ್ಳಿ, ನರಸಿಂಹರಾಜ ರಸ್ತೆಗಳಲ್ಲಿ ಅನಧಿಕೃತವಾಗಿ ಮಸೀದಿ ಬಂತು. ಯಾಕೆ ಜಿಲ್ಲಾಡಳಿತ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಅಲ್ಲವೇ? ಜನವಸತಿ ಪ್ರದೇಶದಲ್ಲಿ ಎನ್.ಆರ್. ಕ್ಷೇತ್ರದಲ್ಲಿ ಅನಧಿಕೃತ ಮಸೀದಿ, ಚರ್ಚ್ ಕಟ್ಟಲು ನೀವೆ ಬಿಟ್ಟಿದ್ದಿರಿ? ಇದು ಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇವಾಲಯ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶದಂತೆ ಜನರ ಅಭಿಪ್ರಾಯ ಕೇಳಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

    ದೇವಾಲಯಗಳಿಗೆ ಎದುರಾಗಿರೋ ಕಂಟಕ ನಿವಾರಣೆ ಮಾಡು ಎಂದು ಗಣಪತಿಯಲ್ಲಿ ಬೇಡಿದ್ದೇನೆ. ಈ ದೇವಸ್ಥಾನದ ಮೇಲೆ ಅಪರಿಮಿತಿ ನಂಬಿಕೆ ಈ ದೇವಸ್ಥಾನದ ಮೇಲಿದೆ. ವಿಶ್ವಾಸದ ಈಡುಗಂಟು ಈ ದೇವಸ್ಥಾನದಲ್ಲಿ ಜನ ಇಟ್ಟಿದ್ದಾರೆ. ದೇವಸ್ಥಾನದ ನೆಲ ಸಮ ಮಾಡಲು ಜಿಲ್ಲಾಡಳಿತ ನೋಟಿಸ್ ನೋಡಿದೆ. 1955 ರಲ್ಲಿ ದೇವಸ್ಥಾನ ಆರಂಭವಾಗಿದೆ. 90ಕ್ಕಿಂತ ಹೆಚ್ಚು ದೇವಸ್ಥಾನ ನೆಲ ಸಮ ಮಾಡಲು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಇದಕ್ಕೆ ಜನಸಾಮಾನ್ಯರಿಂದ ಪ್ರತಿರೋಧ ವ್ಯಕ್ತವಾಗಿದೆ. ಜನರ ಜೊತೆ ಚರ್ಚೆ ಮಾಡದೆ ನೆಲಸಮಮಾಡುವ ಕ್ರಮ ಸರಿಯಲ್ಲ. ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ ಎಂದು 2009ರ ಸುಪ್ರೀಂಕೋರ್ಟ್ ಆದೇಶವನ್ನು ಸಂಸದರು ಓದಿ ತಿಳಿಸದರು. 2009 ಕ್ಕಿಂತಾ ಮುಂಚೆ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಸ್ಥಳಗಳು ನಿರ್ಮಾಣವಾಗಿದ್ದರೆ ಏನೂ ಮಾಡಬೇಕು ಎಂಬುದು ಆದೇಶದಲ್ಲಿ ವಿವರಿಸಲಾಗಿದೆ. 2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶ ಕೊಟ್ಟಿಲ್ವಾ? ಎಂದು ಜಿಲ್ಲಾಡಳಿತ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

    ದೇವಸ್ಥಾನದಲ್ಲಿ ವಿಗ್ರಹಗಳಿವೆ ಆದರೆ ಮಸೀದಿ, ಚರ್ಚ್‍ನಲ್ಲಿ ವಿಗ್ರಗಳಿಲ್ಲ. ದೇವಸ್ಥಾನದ ಮೇಲೆ ವಿಶೇಷವಾದ ನಂಬಿಕೆ ಇದೆ ಮಸೀದಿ, ಚರ್ಚ್‍ಗಳಲ್ಲಿ ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಹಾಗಲ್ಲ ಭಕ್ತರು ನಂಬಿಕೆ ಇಟ್ಟಿರುತ್ತಾರೆ. ದೇವಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಇಲ್ವಾ? ಅದನ್ನು ಮಾಡಿ ಎಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಜನ ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

  • ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್

    ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್

    ಮೈಸೂರು: ದೇವಸ್ಥಾನ ತೆರವು ವಿಚಾರದಲ್ಲಿ ಆ ಧರ್ಮ ಈ ಧರ್ಮ ಎಂಬುದೇನೂ ಇಲ್ಲ ಎನ್ನುವ ಮೂಲಕ ಶಾಸಕ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಸ್ಥಾನ ತೆರವು ವಿಚಾರ ಕ್ರಮ ಸರಿಯಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ದೇವಸ್ಥಾನಗಳನ್ನು ಉಳಿಸಿಕೊಳ್ಳಲು ಯೋಚನೆ ಮಾಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

    ಮೊದಲ ಹಂತದಲ್ಲಿ ದೇವಸ್ಥಾನವನ್ನು ಉಳಿಸಿಕೊಳ್ಳಲು ಆಗದಿದ್ದರೆ ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಮಾಡುತ್ತಿದ್ದೇವೆ. ಇದೆರೆಡು ಸಾಧ್ಯವಾಗದಿದ್ದಾಗ ಮಾತ್ರ ತೆರವು ಕಾರ್ಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಆ ಧರ್ಮದ್ದು ಈ ಧರ್ಮದ್ದು ಎಂಬುದೇನು ಇಲ್ಲ. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

    ನಾವು ಆದಷ್ಟು ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳಲು ಹಾಗೂ ಸ್ಥಳಾಂತರಿಸಲು ಪ್ರಯತ್ನ ನಡೆಸಿದ್ದೇವೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇವೆ. ಇದರಲ್ಲಿ ಒಂದು ಕ್ಷೇತ್ರ ಒಂದು ಧರ್ಮ ಎಂಬುವ ವಿಚಾರ ಇರುವುದಿಲ್ಲ ಎಂದು ರಾಮದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

    ಪ್ರತಾಪ್ ಸಿಂಹ ಹೇಳಿದ್ದೇನು..?

    ಕೇವಲ ಹಿಂದೂ ಧರ್ಮದ ದೇವಸ್ಥಾನಗಳನ್ನು ಮಾತ್ರ ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ. ರಸ್ತೆ ಆಗಲೀಕರಣಕ್ಕೆ ತೊಂದರೆಯಾಗಿರುವ ಇರ್ವಿನ್ ರಸ್ತೆಯ ಮಸೀದಿಯನ್ನು ತೆರವುಗೊಳಿಸಿಲ್ಲ. ದೇವರಾಜ ರಸ್ತೆಯಲ್ಲಿರುವ ದರ್ಗಾವನ್ನು ಯಾಕೆ ತೆರವು ಮಾಡಿಲ್ಲ ಎಂದು ಮೈಸೂರು ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರತಾಪ್ ಸಿಂಹ ಕೆಡಿಪಿ ಮೀಟಿಂಗ್‍ನಲ್ಲಿ ಕಿಡಿಕಾರಿದ್ದರು.

     

  • ಗುಹೆಯೊಳಗೆ ನೆಲೆಸಿರೋ ಕಲ್ಲು ಗಣಪತಿಗಿದೆ ನಾಲ್ಕು ಕೈ!

    ಗುಹೆಯೊಳಗೆ ನೆಲೆಸಿರೋ ಕಲ್ಲು ಗಣಪತಿಗಿದೆ ನಾಲ್ಕು ಕೈ!

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೇವಸ್ಥಾನ ಇದೆ. ಹೆಚ್ಚು ಪ್ರಸಿದ್ಧಿಗೆ ಬಾರದ ಗುಹೆಯೊಳಗಿನ ಕಲ್ಲು ಗಣಪತಿ ದೇವಸ್ಥಾನವು ಒಂದು. ಶಿರಿಯಾರ ಗ್ರಾಮದ ಪಡುಮುನಾಡುಗೆ ಹೋದರೆ ಈ ಸುಂದರ ದೇವಾಲಯವು ಬಂಡೆಕಲ್ಲಿನ ಮೇಲೆ ಸ್ಥಾಪಿತವಾಗಿದೆ.

    ಬಲಗಡೆಯ ಕೆರೆಯನ್ನು ಸೂರ್ಯ ಪುಷ್ಕರಣಿ ಎನ್ನಲಾಗುತ್ತದೆ ಎಡಗಡೆಯ ಕೆರೆಯನ್ನು ಚಂದ್ರ ಪುಷ್ಕರಣಿ ಎನ್ನಲಾಗುತ್ತದೆ. ಇಲ್ಲಿನ ಗಣೇಶನು 4 ಕೈಯನ್ನು ಹೊಂದಿದ್ದಾನೆ ಎರಡು ಕೈ ವರದಾ ಹಸ್ತ ಇಚ್ಛೆಯನ್ನು ಸೂಚಿಸಿದರೆ, ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತದೆ. ಇಲ್ಲಿ ತುಲಾಭಾರದ ಮೂಲಕ ಗಣೇಶನನ್ನು ಪ್ರಾರ್ಥಿಸಲಾಗುತ್ತದೆ. ಇದನ್ನೂ ಓದಿ: 5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ

    ಗಣೇಶ ಚತುರ್ಥೀ ಸಂದರ್ಭದಲ್ಲಿ ದೂರದೂರದ ಊರುಗಳಿಂದ ಭಕ್ತರು ಗಣೇಶನ ದರ್ಶನಕ್ಕೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಕಲ್ಲು ಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ವೈಭವ. ಮಳೆನೀರ ಅಭಿಷೇಕದ ಜೊತೆ ಇಲ್ಲಿ ದೇವರ ದರ್ಶನ ನಿಜಕ್ಕೂ ರೋಮಾಂಚಕವಾಗಿದೆ.

  • ಕರಿಯಮ್ಮದೇವಿಯ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಹೊತ್ತೊಯ್ದ ಖದೀಮರು

    ಕರಿಯಮ್ಮದೇವಿಯ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಹೊತ್ತೊಯ್ದ ಖದೀಮರು

    ಹಾವೇರಿ: ರಾತ್ರೋರಾತ್ರಿ ದೇವಸ್ಥಾನದಲ್ಲಿನ ಕಾಣಿಕೆ ಡಬ್ಬಿಯನ್ನು ಖದೀಮರು ಹೊತ್ತೊಯ್ದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕರಿಯಮ್ಮದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಆವರಣದಲ್ಲಿದ್ದ ಕಾಣಿಕೆ ಡಬ್ಬಿ ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ. ಆ ಕಾಣಿಕೆ ಡಬ್ಬಿಯಲ್ಲಿ ಒಟ್ಟು 25 ಸಾವಿರ ರೂ. ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಾಹ್ಮಣ ವಿರೋಧಿ ಅಂತ ಛತ್ತಿಸ್‍ಗಢದ ಸಿಎಂ ತಂದೆ ಅರೆಸ್ಟ್

    ಬೆಳಗ್ಗೆ ಎಂದಿನಂತೆ ಭಕ್ತರು ದೇವಸ್ಥಾನಕ್ಕೆ ಪೂಜೆಗೆ ಆಗಮಿಸಿದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋಳಿ ಪಂದ್ಯ ಪ್ರಕರಣ – ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಹಿಂದೇಟು 

  • ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ

    ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ

    – ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಅಬ್ಬರ ತಗ್ಗುತ್ತಿರುವ ಹೊತ್ತಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ತಿರುಪತಿ ದೇಗುಲದ ಆಡಳಿತ ಮಂಡಳಿ (ಟಿಟಿಡಿ) ಸಿಹಿಸುದ್ದಿ ನೀಡಿದೆ.

    ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ವಿತರಣೆ ನಡೆಯಲಿದೆ. ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ ನೀಡಲಾಗಿದ್ದು ಪ್ರತಿದಿನ 2 ಸಾವಿರ ಟೋಕನ್ ವಿತರಿಸಲಾಗುತ್ತದೆ. ಶ್ರೀನಿವಾಸ ಕಾಂಪ್ಲೆಕ್ಸ್ ನ ಕೌಂಟರ್ ಗಳಲ್ಲಿ ಟೋಕನ್ ಸಿಗಲಿದೆ. ಈ ಮೊದಲು ಸರ್ವದರ್ಶನಕ್ಕೆ 8 ಸಾವಿರ ಟೋಕನ್ ವಿತರಿಸಲಾಗುತ್ತಿತ್ತು.

    ಈ ಹಿಂದೆ ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದ ವಿಲೇವಾರಿಗಾಗಿ ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ತಯಾರಿಸಿತ್ತು. ಹೊಸ ಬ್ಯಾಗ್‍ಗಳಲ್ಲಿ ಲಡ್ಡು ವಿತರಿಸುವ ಕೌಂಟರ್ ಅನ್ನು ಡಿಆರ್‍ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್ ಜವಾಹರ್ ರೆಡ್ಡಿ ಉದ್ಘಾಟಿಸಿದ್ದರು. ಇದನ್ನೂ ಓದಿ: ನೇಪಾಳದಲ್ಲಿ ಪ್ರವಾಹ – 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋದ್ರು!

    ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ಲಾಸ್ಟಿಕ್ ಬ್ಯಾಗ್‍ಗಳು, ಪೆಟ್ರೋಕೆಮಿಕಲ್ಸ್‍ನಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ. ಅಂಥ ಬ್ಯಾಗ್‍ಗಳು ಮಣ್ಣಿನಲ್ಲಿ ಕೊಳೆಯಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಡಿಆರ್‍ಡಿಒ ತಯಾರಿಸಿರುವ ಬ್ಯಾಗ್‍ಗಳು, ಆರೋಗ್ಯಕ್ಕೆ ಹಾನಿಕಾರವಲ್ಲ. ಮಣ್ಣಿನಲ್ಲಿ ಬೇಗನೇ ಕೊಳೆಯುತ್ತವೆ. ಅಲ್ಲದೆ ಇವುಗಳ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದರು.

  • ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

    ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

    ಗದಗ: ದೇವಸ್ಥಾನಗಳಿಗೆ ಕನ್ನ ಹಾಕಿ ದೇವರುಗಳ ಮೂರ್ತಿ ಹಾಗೂ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಆಗಸ್ಟ್ 5 ಮತ್ತು 6 ರಂದು ಜಿಲ್ಲೆ ರೋಣ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ ಹಾಗೂ ಬೆಳವಣಿಕಿ ಗ್ರಾಮದೇವತೆ ಕನ್ನಿಕಾ ಪರಮೇಶ್ವರಿ ದೇವಸ್ಥಾನಗಳಲ್ಲಿ ಸರಣಿ ಕಳ್ಳತನವಾಗಿತ್ತು. ಈ ಎರಡೂ ಕಳ್ಳತನವನ್ನು ಆರೋಪಿ ಸುಭಾಷ್ ಹರಣಶಿಕಾರಿ ಮಾಡಿದ್ದ ಎನ್ನಲಾಗುತ್ತಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂದೆಯೇ ಯುವಕನ ಮೇಲೆ ಹಲ್ಲೆ – 6 ಜನರ ಬಂಧನ

    ಖದೀಮ ಸುಭಾಷ್ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಿವಾಸಿ ಎನ್ನಲಾಗುತ್ತಿದೆ. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅದೂ ದೊಡ್ಡ ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದ ಎನ್ನಲಾಗುತ್ತಿದೆ. ಹೀಗಾಗಿಯೇ ರೋಣ ವೀರಭದ್ರೇಶ್ವರನ ಬೆಳ್ಳಿ ಕೀರಿಟ, ಮೂರ್ತಿ, 4 ಅಡಿ 2 ಬೆತ್ತ ಹಾಗೂ ಕನ್ನಿಕಾ ಪರಮೇಶ್ವರಿಯ ಚಿನ್ನದ ಆಭರಣಗಳು, ಪೂಜೆಯ ಹಿತ್ತಾಳೆ, ತಾಮ್ರದ ಸಾಮಗ್ರಿಗಳು ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದ.

    ಈ ಬಗ್ಗೆ ರೋಣ ಸಿ.ಪಿ.ಐ ನೇತೃತ್ವದ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿಯನ್ನು ರೋಣ ಪೊಲೀಸರು ಬಂಧಿಸಿದ್ದಾರೆ. ಆದರೆ ಇವನ ಹಿಂದೆ ಇನ್ನಷ್ಟು ಜನ ಇರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೀಶ್.ಎನ್ ತಿಳಿಸಿದ್ದಾರೆ.