Tag: ದೇವಸ್ಥಾನ

  • ದಲಿತರು ದೇವಸ್ಥಾನದ ಕಾಂಪೌಂಡ್ ಪ್ರವೇಶ – ದೇಗುಲಕ್ಕೆ ಬೀಗ, ಎರಡೂವರೆ ಲಕ್ಷ ದಂಡ

    ದಲಿತರು ದೇವಸ್ಥಾನದ ಕಾಂಪೌಂಡ್ ಪ್ರವೇಶ – ದೇಗುಲಕ್ಕೆ ಬೀಗ, ಎರಡೂವರೆ ಲಕ್ಷ ದಂಡ

    ಚಿಕ್ಕಮಗಳೂರು: ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಹೋದರು ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿ ದಲಿತರಿಗೆ ದಂಡ ಹಾಕಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಎರಡು ದಿನದ ಹಿಂದೆ ಬಿ.ಕೋಡಿಹಳ್ಳಿ ಗ್ರಾಮದ ಮಂಜಪ್ಪ ಹಾಗೂ ಮದನ್ ಎಂಬವರು ಗ್ರಾಮದ ಆಂಜನೇಯ ದೇವಸ್ಥಾನದ ಕಾಂಪೌಂಡ್ ಒಳಗೆ ಹೋಗಿದ್ದರು. ಅದಕ್ಕೆ ಗ್ರಾಮದ ಸವರ್ಣೀಯರು ಆ ಇಬ್ಬರಿಗೂ ದಂಡ ಹಾಕಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?

    ಎರಡು ದಿನದಿಂದ ಆಂಜನೇಯನಿಗೆ ಪೂಜೆ ಕೂಡ ನಿಂತಿದೆ. ಮಂಜಪ್ಪ ಹಾಗೂ ಮದನ್ ಎಂಬ ಇಬ್ಬರಿಗೂ ಗ್ರಾಮಸ್ಥರು ದಂಡ ಹಾಕಿದ್ದಾರೆ. ದೇವಸ್ಥಾನದ ಪೂಜೆ ನಡೆಯಬೇಕು ಅಂದರೆ ಎರಡೂವರೆ ಲಕ್ಷ ಹಣ ನೀಡಬೇಕು ಎಂದು ಹೇಳಿದ್ದಾರೆ. ದೇವಸ್ಥಾನದ ಗರ್ಭಗುಡಿ ಹಾಗೂ ಕಾಂಪೌಂಡ್ ಶುದ್ಧೀಕರಣಕ್ಕಾಗಿ ಎರಡೂವರೆ ಲಕ್ಷ ಹಣ ನೀಡಿದ್ರೆ ದೇವಸ್ಥಾನದಲ್ಲಿ ಮತ್ತೆ ಪೂಜೆ ನಡೆಯಲಿದೆ ಎಂದು ಆಗ್ರಹಿಸಿದ್ದಾರೆ.

    ದೇವಸ್ಥಾನಕ್ಕೆ ಎರಡೂವರೆ ಲಕ್ಷ ಹಣ ನೀಡಿ ನೀವು ಕಾಂಪೌಂಡ್‌ನಿಂದ ಹೊರಗೆ ನಿಂತು ಪೂಜೆ ಮಾಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಈ ಬಗ್ಗೆ ದೇವಸ್ಥಾನದ ಕಾಂಪೌಂಡ್ ಒಳ ಹೋಗಿದ್ದಕ್ಕೆ ಗ್ರಾಮಸ್ಥರು ದೇವಸ್ಥಾನಕ್ಕೆ ಬೀಗ ಹಾಕಿ, ದಂಡ ಹಾಕಿದ್ದಾರೆ ಎಂದು ಆರೋಪಿಸಿ ಮಂಜಪ್ಪ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ನೆಲೆಸಿದ್ದ 24 ಮಂದಿ ಪಾಕ್‌, 159 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ – ಸರ್ಕಾರ ಅಂಕಿ-ಅಂಶ ಬಿಡುಗಡೆ

  • ಯೋಗೇಶ್ವರ್‌ಗೆ ಗೆಲುವು – ಮದ್ದೂರಿನ ಹೊಳೆ ಆಂಜನೇಯನಿಗೆ ಹರಕೆ ತೀರಿಸಿದ ಸಿಪಿವೈ ಪತ್ನಿ

    ಯೋಗೇಶ್ವರ್‌ಗೆ ಗೆಲುವು – ಮದ್ದೂರಿನ ಹೊಳೆ ಆಂಜನೇಯನಿಗೆ ಹರಕೆ ತೀರಿಸಿದ ಸಿಪಿವೈ ಪತ್ನಿ

    – ಚನ್ನಪಟ್ಟಣದ ಮನೆ ಮಗನನ್ನ ಗೆಲ್ಲಿಸಿದ್ದಾರೆ ಎಂದ ಶೀಲಾ ಯೋಗೇಶ್ವರ್‌

    ಮಂಡ್ಯ: ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ‌ ಕಾಂಗ್ರೆಸ್‌ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿ.ಪಿ ಯೋಗೇಶ್ವರ್‌ (CP Yogeshwar) ಪತ್ನಿ ಅವರಿಂದು ಮದ್ದೂರಿನ ಹೊಳೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.

    ಚುನಾವಣೆ ಪೂರ್ವದಲ್ಲೇ ದೇಗುಲಕ್ಕೆ ಭೇಟಿ ನೀಡಿದ್ದ ಕುಟುಂಬ ಸಿಪಿವೈ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿತ್ತು. ಅದರಂತೆ ದೇವಸ್ಥಾನಕ್ಕೆ ಬಂದು ಹೊಳೆ ಆಂಜನೇಯನಿಗೆ ಒಂದೂಕಾಲು ರೂಪಾಯಿ ಕಟ್ಟಿ ಹರಕೆ ತೀರಿಸಿದ್ದಾರೆ. ಬಳಿಕ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಿಪಿವೈ ಪತ್ನಿ ಶೀಲಾಗೆ (Sheela Yogeshwar) ಶಾಸಕ ಉದಯ್ ಪತ್ನಿ ವಿನೂತ್ ಸಾಥ್ ನೀಡಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಕಷ್ಟದ ಸಂದರ್ಭದಲ್ಲಿ ಮಾತೃ ಪಕ್ಷ ಕೈಹಿಡಿಯಿತು. ಚನ್ನಪಟ್ಟಣ ಜನರ ಆಶಿರ್ವಾದದಿಂದ ಯೋಗೇಶ್ವರ್‌ ಗೆದ್ದಿದ್ದಾರೆ. ನನ್ನ ಪತಿಯ ಜನ್ಮ ಭೂಮಿ ಹಾಗೂ ಕರ್ಮ ಭೂಮಿ ಚನ್ನಪಟ್ಟಣ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್‌ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?

    ನಾವು ಸಾಮಾನ್ಯ ಕುಟುಂಬದಿಂದ ಬಂದವ್ರು. ಪತಿಯ ಜನಸೇವೆ ಗುರುತಿಸಿ ಜನ ಕೈ ಹಿಡಿದಿದ್ದಾರೆ. ಎರಡು ಸರಿ ಸೋಲು ಅನುಭವಿಸಿದ್ವಿ ಈ ಬಾರಿ ಭರವಸೆ ಇತ್ತು. ಚನ್ನಪಟ್ಟಣದ ಜನ ತಮ್ಮ ಮನೆ ಮಗನನ್ನ ಗೆಲ್ಲಿಸಿದ್ದಾರೆ. ನಮ್ಮದೇ ಸರ್ಕಾರ ಇರೋದ್ರಿಂದ ಜನ ಸೇವೆ ಮಾಡಬಹುದು. ಸಾಕಷ್ಟು ಅಭಿವೃದ್ಧಿ ಬಗ್ಗೆ ಜನರ ನಿರೀಕ್ಷೆ ಇದೆ. ಇದನ್ನೂ ಓದಿ: ಯುಪಿಯ ಕುಂದರ್ಕಿಯಲ್ಲಿ 11 ಮುಸ್ಲಿಮರನ್ನು ಸೋಲಿಸಿದ ಏಕೈಕ ಹಿಂದೂ ಅಭ್ಯರ್ಥಿ

    ಇಂದು ಆರ್.ಅಶೋಕ್ ಮಂಡ್ಯ ಪ್ರವಾಸ:
    ವಿಪಕ್ಷ ನಾಯಕ ಆರ್‌. ಅಶೋಕ್‌ ಇಂದು (ನ.24) ಮಂಡ್ಯ ಕೈಗೊಂಡಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕೇತ್ರದ ತಗ್ಗಹಳ್ಳಿಯಲ್ಲಿ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹ ಪಾಲ್ಗೊಳ್ಳಲಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ನೂರಕ್ಕು ಹೆಚ್ಚು ಬೇರೆ ಬೇರೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ವಿಜಯೋತ್ಸವದ ವೇಳೆ ಅಗ್ನಿ ಅವಘಡ – ನೂತನ ಶಾಸಕನಿಗೆ ಗಾಯ 

  • ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಿಗೆ ಫೆನ್ಸಿಂಗ್ – ಒತ್ತುವರಿ ಆಗಿದ್ರೆ ಕೋರ್ಟ್ ಮೂಲಕ ತೆರವು

    ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಿಗೆ ಫೆನ್ಸಿಂಗ್ – ಒತ್ತುವರಿ ಆಗಿದ್ರೆ ಕೋರ್ಟ್ ಮೂಲಕ ತೆರವು

    ಬೆಂಗಳೂರು: ವಕ್ಫ್ ಆಸ್ತಿ ವಿವಾದದ ಬಳಿಕ ಮುಜರಾಯಿ ಇಲಾಖೆ (Muzrai Department) ತಮ್ಮ ದೇವಸ್ಥಾನಗಳ (Temple) ಆಸ್ತಿ ರಕ್ಷಣೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ (Bengaluru) ಇರುವ ಮುಜರಾಯಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೆ ಮಾಡಿ ಫೆನ್ಸಿಂಗ್ ಹಾಕಲು ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಸರ್ವೆ ಆರಂಭಿಸಿ ಒತ್ತುವರಿ ಆಗಿದ್ದರೆ ತೆರವು ಮಾಡಲು ಮುಂದಾಗಿದೆ.

    ವಕ್ಫ್ ವಿವಾದ ಜೋರಾಗಿರುವ ಹೊತ್ತಲ್ಲೇ ಮುಜರಾಯಿ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳ ಜಾಗ ರಕ್ಷಣೆಗೆ ಮುಂದಾಗಿದೆ. ದೇವಸ್ಥಾನದ ಜಾಗಗಳನ್ನು ಸರ್ವೆ ಮಾಡಲು ಜಾಗಕ್ಕೆ ಬೇಲಿತಂತಿ (Fencing) ಹಾಕಲು ನಿರ್ಧಾರ ಮಾಡಿದೆ. ಶೀಘ್ರದಲ್ಲೇ ಸರ್ವೆ ಆರಂಭ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಇದನ್ನೂ ಓದಿ: ರಸ್ತೆ ಅಪಘಾತ: ದರ್ಶನ್‌ ʻಕಾಟೇರʼ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ರೋಹಿತ್‌ಗೆ ಗಾಯ

    ಬೆಂಗಳೂರಿನಲ್ಲೂ ಸಾವಿರಾರು ಎಕರೆ ಮುಜರಾಯಿ ಜಾಗ ಇದೆ. ಆ ಜಾಗ ಒತ್ತುವರಿ ಆಗಿದೆಯಾ ಎಂದು ಪರಿಶೀಲನೆ ಮಾಡಲಿದ್ದು, ಸರ್ವೆ ಮಾಡಿದಾಗ ಒತ್ತುವರಿ ಆಗಿದ್ದರೆ ಕೂಡಲೇ ಕೋರ್ಟ್ ಮೂಲಕ ತೆರವಿಗೆ ಪರ್ಮಿಷನ್ ತಂದು ತೆರವು ಮಾಡುತ್ತೇವೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಲ್ಮಾರ್ಗ್‌ನಲ್ಲಿ ಈ ಸೀಸನ್ನಿನ ಮೊದಲ ಹಿಮಪಾತ, ಶ್ರೀನಗರದಲ್ಲಿ ಮಳೆ

  • ಶಿವಮೊಗ್ಗ | ದೇವರ ಹುಂಡಿ ಹಣಕ್ಕೂ ಖನ್ನಾ ಹಾಕಿದ್ರಾ ಅಧಿಕಾರಿಗಳು?

    ಶಿವಮೊಗ್ಗ | ದೇವರ ಹುಂಡಿ ಹಣಕ್ಕೂ ಖನ್ನಾ ಹಾಕಿದ್ರಾ ಅಧಿಕಾರಿಗಳು?

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕಿನ ಭಾವೈಕ್ಯತೆ ಕೇಂದ್ರವಾಗಿರುವ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆಯ ಹಣಕ್ಕೂ ಅಧಿಕಾರಿಗಳು ಖನ್ನಾ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಗುರುವಾರ (ನ.7) ರಂದು ನಡೆದ ಹುಂಡಿ ಎಣಿಕೆಯಲ್ಲಿ ದೋಖಾ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ಮರು ಎಣಿಕೆ ಮಾಡಲಾಯಿತು. ಮರು ಎಣಿಕೆ ವೇಳೆ 77,000 ರೂ. ಹಣ ವ್ಯತ್ಯಾಸ ಕಂಡುಬಂದಿದೆ.ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ

    ಹುಂಡಿಯ ಹಣ ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಹಣಗೆರೆಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಗುರುವಾರವೇ ಮೇಲ್ನೋಟಕ್ಕೆ ಹಣದ ಕಂತುಗಳನ್ನು ಎಣಿಸಿದಾಗ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ನಂತರ ಆ ಹಣವನ್ನು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಡಲಾಗಿತ್ತು.

    ಶುಕ್ರವಾರ ಬೆಳಗ್ಗೆ ತಹಶೀಲ್ದಾರ್, ಡಿವೈಎಸ್‌ಪಿ ಸಮ್ಮುಖದಲ್ಲಿ ಬಿಗಿ ಬಂದೋಬಸ್ತ್ ಮೂಲಕ ಹಣವನ್ನು ಹಣಗೆರೆಕಟ್ಟೆಯ ದೇವಸ್ಥಾನಕ್ಕೆ ಸಾಗಿಸಿ ಮರುಎಣಿಕೆ ನಡೆಸಲಾಯಿತು. ಒಟ್ಟು 66 ಲಕ್ಷದ 4 ಸಾವಿರದ 950 ರೂ. ಹಣ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಸರಿಯಾಗಿ ಎಣಿಕೆ ಮಾಡದ ಹಿನ್ನೆಲೆಯಲ್ಲಿ ಮೊದಲು ಎಣಿಸಿದ ಹಣಕ್ಕಿಂತ 77,930 ರೂಪಾಯಿ ಹಣ ಜಾಸ್ತಿ ಬಂದಿದೆ. ಈ ಸಂಬಂಧ ತಹಶೀಲ್ದಾರ್ ಅವರ ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

    ಇಂತಹ ಕೃತ್ಯ ನಡೆಸಿದ ಹಾಗೂ ಅದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆಡಳಿತ ಮಂಡಳಿಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತಕರಿಗೆ ದೂರು ನೀಡಲು ತೀರ್ಮಾನಿಸಿದ್ದು, ಒಟ್ಟಿನಲ್ಲಿ ಹುಂಡಿ ಹಣದ ಮರು ಎಣಿಕೆ ಪ್ರಕರಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಇನ್ನು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.ಇದನ್ನೂ ಓದಿ: ಬಲ್ಲಾಳದೇವ ರಾಣಾ ಜೊತೆ ಕಾಂತಾರದ ಶಿವ

  • ಅಭಿಮಾನಿ ಮನೆಯ ಮುಂದೆ ನಿರ್ಮಿಸಿದ ಪುನೀತ್ ದೇವಸ್ಥಾನದಲ್ಲಿ 3ನೇ ವರ್ಷದ ಪುಣ್ಯಸ್ಮರಣೆ

    ಅಭಿಮಾನಿ ಮನೆಯ ಮುಂದೆ ನಿರ್ಮಿಸಿದ ಪುನೀತ್ ದೇವಸ್ಥಾನದಲ್ಲಿ 3ನೇ ವರ್ಷದ ಪುಣ್ಯಸ್ಮರಣೆ

    – ಉತ್ತರಕರ್ನಾಟಕದ ಸಂಪ್ರದಾಯದಂತೆ ಪುನೀತ್ ಮೂರ್ತಿಗೆ ಪೂಜೆ

    ಹಾವೇರಿ: ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಹೆಸರಿನಲ್ಲಿ ನಿರ್ಮಾಣ ಆಗಿರುವ ಹಾವೇರಿ (Haveri) ತಾಲೂಕಿನ ಯಲಗಚ್ಚ ಗ್ರಾಮದ ದೇವಸ್ಥಾನದಲ್ಲಿ ಪುನೀತ್ ನಿತ್ಯವೂ ಪೂಜಿತರಾಗಿದ್ದಾರೆ. ಇಂದು ಪುನೀತ್ ನಿಧನರಾಗಿ ಮೂರು ವರ್ಷಗಳು ಕಳೆದಿದ್ದು, ಹೀಗಾಗಿ ಎಲ್ಲೆಡೆ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಪುನೀತ್ ಹೆಸರಿನಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಅವರ ಪುಣ್ಯಸ್ಮರಣೆಯ ಸಂಭ್ರಮ ಮನೆ ಮಾಡಿದೆ.

    ಗದಗ (Gadaga), ಧಾರಾವಾಡ (Dharawada), ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ದೇವಸ್ಥಾನಕ್ಕೆ ಆಗಮಿಸಿ ಪುನೀತ್ ಮೂರ್ತಿಗೆ ಪೂಜೆ ಸಲ್ಲಿಸಿ, ಪುನೀತ್ ಸ್ಮರಣೆ ಮಾಡುತ್ತಿದ್ದಾರೆ. ಪುನೀತ್ ಅಂದರೆ ಅವರು ಅಭಿಮಾನಿಗಳ ಪಾಲಿನ ದೇವರು. 2021ರ ಅ.29 ರಂದು ಅಗಲಿದರು. ಯಲಗಚ್ಚ ಗ್ರಾಮದಲ್ಲಿ ಪುನೀತ್ ಅವರ ಅಪ್ಪಟ ಅಭಿಮಾನಿ ಪ್ರಕಾಶ್ ಯಲಗಚ್ಚ ತಮ್ಮ ಮನೆಯ ಸ್ವಂತ ಜಾಗದಲ್ಲಿ ನೆಚ್ಚಿನ ನಟನ ದೇವಸ್ಥಾನ ನಿರ್ಮಿಸಿದ್ದಾರೆ. ಕಳೆದ ತಿಂಗಳು ಸೆ.26ರಂದು ಪುನೀತ್ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ದೇವಸ್ಥಾನ ಲೋಕಾರ್ಪಣೆ ಮಾಡಿ ಮೂರ್ತಿ ಅನಾವರಣ ಮಾಡಿದ್ದರು. ನಂತರ ದೇವಸ್ಥಾನದಲ್ಲಿ ಪ್ರತಿದಿನವೂ ಆ ಮೂರ್ತಿಗೆ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಗುತ್ತಿದೆ. ಇವತ್ತು ಆ ದೇವಸ್ಥಾನವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ದೂರದ ಊರುಗಳಿಂದ ಆಗಮಿಸಿದ್ದ ಪುನೀತ್ ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿನ ಮೂರ್ತಿ ಮುಂದೆ ನಿಂತು ಭಾವುಕರಾಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ: ಶಿವರಾಜ್‌ಕುಮಾರ್

    ತಮ್ಮ ಮನೆಯ ಆವರಣದಲ್ಲೇ ದೇವಸ್ಥಾನ ನಿರ್ಮಿಸಿರುವ ಅವರ ಅಪ್ಪಟ ಅಭಿಮಾನಿ ಪ್ರಕಾಶ್, ಪುನೀತ್ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ತಮ್ಮ ಮನೆಯ ಹಿರಿಯರು ಮೃತಪಟ್ಟ ನಂತರ ಪ್ರತಿವರ್ಷ ಮಾಡುವ ಹಿರಿಯರ ಹಬ್ಬದಂತೆಯೇ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಇಷ್ಟವಾದ ವಾದ್ಯಗಳಾದ ಗಿಟಾರ್, ಹಾರ್ಮೋನಿಯಂ, ಹೊಸ ಬಟ್ಟೆಗಳು ಸೇರಿದಂತೆ ಮೂರ್ತಿಯ ಮುಂದೆ ಹಲವು ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಅವರಿಗೆ ಇಷ್ಟವಾದ ಕೋಳಿ ಕಬಾಬ್, ಬಿರಿಯಾನಿ, ಮಟನ್ ಬಿರಿಯಾನಿ, ಮೊಟ್ಟೆ ಸೇರಿದಂತೆ ಹಲವು ಬಗೆಗಳನ್ನು ತಯಾರಿ ಮಾಡಿದ್ದು, ಅದರ ಜೊತೆಗೆ ಸಿಹಿ ತಿನಿಸುಗಳನ್ನು ಸಹ ಭಾವಚಿತ್ರ ಹಾಗೂ ಮೂರ್ತಿಯ ಮುಂದಿಟ್ಟು ಪೂಜೆ ಸಲ್ಲಿಸಲಾಯಿತು. ಅಭಿಮಾನಿ ಪ್ರಕಾಶ್ ಅವರ ಕುಟುಂಬ ಸದಸ್ಯರು ತಮ್ಮ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿ, ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್

  • ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಪ್ರಹ್ಲಾದ್ ಜೋಶಿ ಆಗ್ರಹ

    ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಪ್ರಹ್ಲಾದ್ ಜೋಶಿ ಆಗ್ರಹ

    – ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದೇ ಇಂಥ ಘಟನೆಗಳಿಗೆ ಕಾರಣ

    ಹುಬ್ಬಳ್ಳಿ: ದತ್ತಾತ್ರೇಯ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಜಿಲ್ಲೆಯ ದೇಶಪಾಂಡೆ ನಗರದಲ್ಲಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸೂಚಿಸಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಪಾಂಡೆ ನಗರದ (Deshapande Nagar) ದತ್ತಾತ್ರೇಯ ದೇವಸ್ಥಾನದಲ್ಲಿನ ವಿಗ್ರಹವನ್ನು ಭಗ್ನಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಘಟನೆ ಖಂಡಿಸಿದರು. ಇತ್ತೀಚೆಗೆ ಹಲವೆಡೆ ಹಿಂದೂಗಳ ನಂಬಿಕೆಗೆ ಧಕ್ಕೆ ತರುವಂತಹ ದುಷ್ಕೃತ್ಯಗಳು ಘಟಿಸುತ್ತಲಿವೆ. ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದು ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರ್ತಾರೋ ಗೊತ್ತಿಲ್ಲ – ಸಂಚಲನ ಮೂಡಿಸಿದ ಸತೀಶ್ ಜಾರಕಿಹೊಳಿ

    ಸಮಾಜಘಾತಕರನ್ನು ತಕ್ಷಣ ಬಂಧಿಸಿ:
    ದತ್ತಾತ್ರೇಯ ಮೂರ್ತಿಯ ಕೈಗಳನ್ನು ಕತ್ತರಿಸಿ ದುಷ್ಕೃತ್ಯ ಎಸಗಿರುವ ಸಮಾಜಘಾತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

    ನಾಡಿನೆಲ್ಲೆಡೆ ದಸರಾ ಮಹೋತ್ಸವ ಆಚರಿಸುತ್ತಿದ್ದು, ಜನತೆ ವಿಶೇಷ ಪೂಜೆ-ಪುನಸ್ಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಆದರೆ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ ಹಬ್ಬಗಳಲ್ಲಿ ಧಾರ್ಮಿಕ ಆಚರಣೆಗೆ ಭಂಗ ತಂದು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.ಇದನ್ನೂ ಓದಿ: 70th National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮಿಥುನ್ ಚಿಕ್ರವರ್ತಿ

  • ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ

    ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ

    – ಭಾರತೀಯ ಸಾಂಸ್ಕೃತಿಕ ಕೇಂದ್ರ ಧ್ವಂಸ

    ಢಾಕಾ: ಪ್ರಧಾನಿ ಶೇಖ್‌ ಹಸೀನಾ (Sheikh Hasina)ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಪುಂಡರು ಬಾಂಗ್ಲಾದೇಶದಲ್ಲಿರುವ (Bangladesh) ಹಿಂದೂ ದೇವಸ್ಥಾನಗಳ (Hindu Temple) ಮೇಲೆ ದಾಳಿ ನಡೆಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು (Indian Cultural Centre) ಧ್ವಂಸಗೊಳಿಸಿದ್ದಾರೆ.

    ಸೋಮವಾರ ನಡೆದ ಹಿಂಸಾಚಾರದಲ್ಲಿ 4 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸಮುದಾಯದ ಮುಖಂಡರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ನಾಯಕಿ ಕಾಜೋಲ್ ದೇಬನಾಥ್ ಮಾತನಾಡಿ, ದೇಶಾದ್ಯಂತ ಕನಿಷ್ಠ 4 ಹಿಂದೂ ದೇವಾಲಯಗಳಿಗೆ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ. ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆಲವು ಹಿಂದೂ ಸಮಾಜದ ಮುಖಂಡರು ಭಯಭೀತರಾಗಿದ್ದಾರೆ ಎಂದು ಹೇಳಿದರು.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಢಾಕಾದ ಧನ್ಮಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರವನ್ನು ಪುಂಡರು ಧ್ವಂಸ ಮಾಡಿದ್ದಾರೆ.

    ಪ್ರತಿಭಟನಾಕಾರರು ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಬೆಂಕಿ ಹಚ್ಚಿದ್ದಾರೆ. 1975 ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ ಹತ್ಯೆಗೀಡಾದ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಈ ವಸ್ತುಸಂಗ್ರಹಾಲಯವನ್ನು ಸಮರ್ಪಿಸಲಾಗಿದೆ.

     

  • ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯನ್ನ ಎತ್ತಿ ಎಸೆದ  ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ

    ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯನ್ನ ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆ

    ಮಂಗಳೂರು: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯನ್ನು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple) ಕ್ಷೇತ್ರದ ಆನೆ ಯಶಸ್ವಿನಿ (Elephant Yashaswini) ಎತ್ತಿ ಬಿಸಾಡಿದ ಘಟನೆ ನಡೆದಿದೆ.

    ಪೋಲೀಸರು ಆನೆಯೊಂದಿಗೆ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಆನೆಯ ಎದುರು ಸಾಗಿದ್ದ. ವ್ಯಕ್ತಿಯನ್ನು‌ ನೋಡಿದ ಕೂಡಲೇ ಆನೆ ತನ್ನ ಸೊಂಡಿಲಿನಿಂದ ಎತ್ತಿ ಎಸೆದಿದೆ. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

     

    ಎಸೆದ ರಭಸಕ್ಕೆ ವ್ಯಕ್ತಿ ನೆಲಕ್ಕೆ ಅಪ್ಪಳಿಸಿದ್ದು ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ. ವ್ಯಕ್ತಿ ಕುಡಿತದ ಮತ್ತಿನಲ್ಲೇ ತೂರಾಡಿಕೊಂಡು ಬಂದಿರೋದ್ರಿಂದಲೇ ಆನೆ ಕೋಪಗೊಂಡು ಎತ್ತಿ ಬಿಸಾಡಿದೆ ಎನ್ನಲಾಗಿತ್ತಿದೆ.

  • ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ದೇಗುಲ ಯಾತ್ರೆ!

    ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ದೇಗುಲ ಯಾತ್ರೆ!

    ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಜಾಮೀನು (Bail) ಸಿಕ್ಕಿದ ಬೆನ್ನಲ್ಲೇ ದೇಗುಲ (Temple) ಯಾತ್ರೆ ಆರಂಭಿಸಿದ್ದಾರೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲಿನಿಂದ ನೇರವಾಗಿ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ (Devegowda) ನಿವಾಸಕ್ಕೆ ಆಗಮಿಸಿ ದೇವರ ಕೋಣೆಯಲ್ಲಿ ಪೂಜೆ ಮಾಡಿದರು. ಇದನ್ನೂ ಓದಿ: ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರು!

     

    ನಂತರ ರೇವಣ್ಣ ಬೆಂಗಳೂರಿನ ಜೆಪಿ ನಗರದಲ್ಲಿರುವ ತಿರುಮಲ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದರು. ದೇವಾಲಯದಲ್ಲಿ ಕುಂಬಳಕಾಯಿ, ಈಡುಗಾಯಿ ದೃಷ್ಟಿ ತೆಗೆಸಿ ರೇವಣ್ಣ ಒಬ್ಬರೇ ಪೂಜೆ ಮಾಡಿದರು. ಇಲ್ಲಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಳೆ ಶೃಂಗೇರಿಗೆ ರೇವಣ್ಣ ಭೇಟಿ ನೀಡುವ ಸಾಧ್ಯತೆಯಿದೆ.

  • ಸಿಎಂ ಸ್ಥಾನಕ್ಕಾಗಿ ಮಹಾಬಲೇಶ್ವರ, ಕಾಲಭೈರವನ ಮೊರೆಹೋದ ಡಿಕೆಶಿ

    ಸಿಎಂ ಸ್ಥಾನಕ್ಕಾಗಿ ಮಹಾಬಲೇಶ್ವರ, ಕಾಲಭೈರವನ ಮೊರೆಹೋದ ಡಿಕೆಶಿ

    ಕಾರವಾರ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಕಳೆದ ಎರಡು ದಿನದಿಂದ ಧಾರ್ಮಿಕ ಕ್ಷೇತ್ರ ಪರ್ಯಟನೆ ಮಾಡುತಿದ್ದು, ಇಂದು ಗೋಕರ್ಣದ (Gokarna) ಮಹಾಬಲೇಶ್ವರ ದೇವಸ್ಥಾನ ಹಾಗೂ ಕಾಲಭೈರವೇಶ್ವರ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಕೊಂಡರು.

    ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಮುಂಜಾನೆ ಆಗಮಿಸಿದ್ದ ಅವರು ಮೊದಲು ಪೂಜಾ ಸಂಕಲ್ಪ ನೆರವೇರಿಸಿ ನಂತರ ಮಹಾಬಲೇಶ್ವರನ ಆತ್ಮಲಿಂಗ ಸನ್ನಿಧಿಯಲ್ಲಿ ಪೂಜಾಕಾರ್ಯ ನೆರವೇರಿಸಿದರು. ಇದೇ ವೇಳೆ ಅರ್ಚಕರು ಮುಂದೆ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಸಿದರು. ಇದನ್ನೂ ಓದಿ: ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

    ಇದಾದ ನಂತರ ಅಧಿಕಾರ ಹಾಗೂ ನಾಯಕತ್ವ ಕೇಂದ್ರೀಕರಣಕ್ಕಾಗಿ ಕಾಲಭೈರವನ ಮೊರೆಹೋದ ಡಿಕೆಶಿ ಮುಂದೆ ಮುಖ್ಯಮಂತ್ರಿ ಹುದ್ದೆಗಾಗಿ ವಿಶೇಷ ಪೂಜೆ ನೆರವೇರಿಸಿದರು. ಇದನ್ನೂ ಓದಿ: ಗೋವಿಂದ ಕಾರಜೋಳಗೆ ಚಿತ್ರದುರ್ಗ ಬಿಜೆಪಿ ಟಿಕೆಟ್‌