Tag: ದೇವಸ್ಥಾನ

  • ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಹುಂಡಿ ಮುಂದಿದ್ದ ಹಾಲಿನ ಬಾಟ್ಲಿ ಎಗರಿಸಿದ ಭೂಪ

    ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಹುಂಡಿ ಮುಂದಿದ್ದ ಹಾಲಿನ ಬಾಟ್ಲಿ ಎಗರಿಸಿದ ಭೂಪ

    ಮಡಿಕೇರಿ: ದಾರಿ ಹೋಕನೊಬ್ಬ ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಕಾಣಿಕೆ ಹುಂಡಿ ಮುಂದಿದ್ದ ಹಾಲಿನ ಬಾಟಲ್ ಒಂದನ್ನು ಎಗರಿಸಿರುವ ಘಟನೆ ಕೊಡಗಿನ ಸುಂಟಿಕೋಪ್ಪದಲ್ಲಿ ನಡೆದಿದೆ.

    ಮಡಿಕೇರಿ ಹಾಗೂ ಮೈಸೂರಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸುಂಟಿಕೋಪ್ಪ ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕರು ಪ್ರತಿನಿತ್ಯ ಬೆಳಗ್ಗೆ ಸ್ಥಳೀಯ ನಿವಾಸಿಯೊಬ್ಬರಿಗೆ ತಮ್ಮ ಮನೆಯ ಹಸುವಿನ ಹಾಲನ್ನು ತಂದುಕೊಡುತ್ತಾರೆ. ಹಾಲು ತುಂಬಿದ ಬಾಟಲ್‍ನ್ನು ರಸ್ತೆ ಬದಿಯ ಕಾಣಿಕೆ ಹುಂಡಿಯ ಕಟ್ಟೆ ಮೇಲಿಡುತ್ತಾರೆ. ನಂತರ ಹಾಲು ಕೊಂಡುಕೊಳ್ಳುವ ವ್ಯಕ್ತಿ ಬಂದು ತೆಗೆದುಕೊಂಡು ಹೋಗುತ್ತಾರೆ. ಎಂದಿನಂತೆ ಇಂದು ಬೆಳಗ್ಗೆ ಅರ್ಚಕರು ಹಾಲನ್ನು ಹುಂಡಿಯ ಕಟ್ಟೆ ಮೇಲೆ ಇಟ್ಟು ಪೂಜಾ ಕಾರ್ಯ ನೆರವೇರಿಸಿ ಹಿಂತಿರುಗಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

    ಸ್ವಲ್ಪ ಹೊತ್ತಿನಲ್ಲಿ ಹಾಲನ್ನು ತೆಗೆದುಕೊಂಡು ಹೋಗಲೆಂದು ಬಂದ ವ್ಯಕ್ತಿಗೆ ಹಾಲಿನ ಬಾಟಲ್‍ ಕಾಣಲಿಲ್ಲ. ಅರ್ಚಕರಿಗೆ ಕರೆ ಮಾಡಿ ಕೇಳಿದಾಗ ಹಾಲಿನ ಬಾಟಲ್‍ ಇಟ್ಟಿದ್ದನ್ನು ಖಾತರಿಪಡಿಸಿದ್ದಾರೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿದಾಗ ಅಚ್ಚರಿಯ ದೃಶ್ಯಾವಳಿ ಸೆರೆಯಾಗಿದೆ. ದಾರಿ ಹೋಕನೊಬ್ಬ ನೇರವಾಗಿ ಹುಂಡಿಯ ಬಳಿ ಬರುತ್ತಾನೆ. ದೇವರಿಗೆ ಕೈ ಮುಗಿಯುತ್ತಾನೆ. ಕಾಣಿಕೆ ಹಾಕುತ್ತಾನೆ ನಂತರ ಮುಲಾಜಿಲ್ಲದೇ ಹಾಲಿನ ಬಾಟಲ್‍ ಕದ್ದೊಯ್ಯುತ್ತಾನೆ. ವಿಷಯವರಿತ ಸ್ಥಳೀಯರು ಹೀಗೂ ಉಂಟೆ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಸೆ.28 ರವರೆಗೆ ರಾಜ್ಯದಲ್ಲಿ ಮಳೆ – ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

  • ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್‌ಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆ

    ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್‌ಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆ

    -ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಗಡುವು

    ತಿರುವನಂತಪುರ: ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್ 25 ವರ್ಷಗಳ ಆಡಿಟ್ ರಿಪೋರ್ಟ್ ಕೋರ್ಟ್‍ಗೆ ಸಲ್ಲಿಕೆಯಿಂದ ವಿನಾಯಿತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂಕೋರ್ಟ್​​ನಲ್ಲಿ ಟ್ರಸ್ಟ್‌ಗೆ ಹಿನ್ನಡೆ ಉಂಟಾಗಿದೆ. ಕೋರ್ಟ್ ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಗಡುವು ನೀಡಿದೆ.

    ಕೆಲದಿನಗಳ ಹಿಂದೆ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್ 25 ವರ್ಷಗಳ ಆಡಿಟ್ ರಿಪೋರ್ಟ್‍ನ್ನು ಕೋರ್ಟ್‍ಗೆ ಸಲ್ಲಿಸುವಂತೆ ಆದೇಶವಿತ್ತು, ಇದನ್ನು ಇದೀಗ ಕೊಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಈ ಆಡಿಟ್ ರಿಪೋರ್ಟ್‍ನಿಂದ ನಮಗೆ ವಿನಾಯಿತಿ ಕೊಡಿ ಎಂದು ದೇವಸ್ಥಾನದ ಟ್ರಸ್ಟ್ ಸುಪ್ರೀಂಕೋಟ್‍ಗೆ ಅರ್ಜಿ ಸಲ್ಲಿಸಿತು. ಈ ಅರ್ಜಿಯನ್ನು ವಿಚಾರಿಸಿದ ಸುಪ್ರೀಂಕೋರ್ಟ್ ಅರ್ಜಿ ವಜಾ ಮಾಡಿ, ವಿನಾಯಿತಿ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಟ್ರಸ್ಟ್‌ಗೆ ಹಿನ್ನಡೆ ಉಂಟುಮಾಡಿದೆ. ಇದನ್ನೂ ಓದಿ: ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!

    ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ದೇವಸ್ಥಾನ ಸೇರಿದಂತೆ ಟ್ರಸ್ಟ್‌ನ ವ್ಯವಹಾರಗಳ ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಸೂಚನೆ ನೀಡಿದ್ದು, ಮೂರು ತಿಂಗಳ ಅವಧಿಯಲ್ಲಿ 25 ವರ್ಷಗಳ ಆಡಿಟ್ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿದೆ. ಕೇರಳದಲ್ಲಿ ಕೊರೊನಾದಿಂದಾಗಿ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಬಾಗಿಲು ಮುಚ್ಚಿತ್ತು. ಬಳಿಕ ಆಗಸ್ಟ್‌ನಲ್ಲಿ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನೂ ಓದಿ: ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಶಿಫಾರಸು

  • ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್

    ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್

    ಲಕ್ನೋ: ಮಸೀದಿಗಳನ್ನು ನಿರ್ಮಿಸಲು ಕೆಡವಲಾದ ದೇವಸ್ಥಾನಗಳನ್ನು ಬಿಜೆಪಿ ಮರುನಿರ್ಮಾಣ ಮಾಡಲಿದೆ ಎಂದು ಉತ್ತರ ಪ್ರದೇಶದ ಸರ್ಧಾನಾ ಕ್ಷೇತ್ರದ ಶಾಸಕ ಸಂಗೀತ್ ಸೋಮ್ ಹೇಳಿದ್ದಾರೆ.

    ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಸಾಧನೆಗಳನ್ನು ವಿವರಿಸಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಲೇವಡಿ ಮಾಡಿದರು. ಮುಂಬರುವ ಯುಪಿ ವಿಧಾನಸಭಾ ಚುನಾವಣೆಗೆ ಮುನ್ನ, ಅನೇಕ ಜನರು ಕಾಲೋಚಿತ ಹಿಂದೂಗಳಾಗುತ್ತಾರೆ. ಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿದ ಜನರು ಈಗ ದೇವಾಲಯಗಳನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಬೆದರಿಸಿದವರು ಈಗ ಅವರಿಗೆ ಕೈಮುಗಿದು ಕ್ಷಮೆಯಾಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾ ಬ್ರ್ಯಾಂಡ್‍ನ ಜೆರ್ಸಿ ನೀರಿನ ಬಾಟಲಿ ಮಾರುಕಟ್ಟೆಗೆ

    ಮಸೀದಿಗಳನ್ನು ನಿರ್ಮಿಸಲು ಎಲ್ಲೆಲ್ಲಿ ದೇವಸ್ಥಾನವನ್ನು ಕೆಡವಲಾಗಿದೆಯೋ ಅಲ್ಲಿ ದೇಗುಲಗಳನ್ನು ಪುನರ್ ನಿರ್ಮಿಸಲಾಗುವುದು. ಹಿಂದುಸ್ಥಾನವು ಹಿಂದೂಗಳಿಗೆ ಸೇರಿದ್ದು. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹಿಂದು. ಮುಸ್ಲಿಮರು ಕೂಡ ಹಿಂದುಗಳಾಗಿದ್ದಾರೆ ಎಂಬ ಅವರ ಹೇಳಿಕೆಯು ವಿವಾದದ ರೂಪ ಪಡೆದಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಮರಾಠಿ ನಟಿ ಈಶ್ವರಿ ದೇಶಪಾಂಡೆ ಸಾವು

    2013ರ ಮುಜಾಫರ್ ನಗರ ಕೋಮು ಗಲಭೆ ಪ್ರಕರಣದ ಆರೋಪಿಯಾಗಿರುವ ಸೋಮ್, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 350 ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದರು.

  • ಬಾಲಕ ದೇಗುಲ ಪ್ರವೇಶಿಸಿದ್ದಕ್ಕೆ ದಂಡದ ಜೊತೆಗೆ ಶುದ್ಧೀಕರಣ- ಐವರ ವಿರುದ್ಧ ಕೇಸ್

    ಬಾಲಕ ದೇಗುಲ ಪ್ರವೇಶಿಸಿದ್ದಕ್ಕೆ ದಂಡದ ಜೊತೆಗೆ ಶುದ್ಧೀಕರಣ- ಐವರ ವಿರುದ್ಧ ಕೇಸ್

    ಕೊಪ್ಪಳ: ದಲಿತ ಬಾಲಕನೊಬ್ಬ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಂಡ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಐವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೊಪ್ಪಳದ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ಸೆ.4ರಂದು ನಾಲ್ಕು ವರ್ಷದ ಪುಟ್ಟ ಬಾಲಕನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ಪೋಷಕರೊಂದಿಗೆ ಈತ ದೇವಸ್ಥಾನ ಪ್ರವೇಶ ಮಾಡಿದ್ದನು. ಇದನ್ನು ವಿರೋಧಿಸಿದ ಮಿಯಾಪುರ ಗ್ರಾಮದ ಸವರ್ಣಿಯರು ದಲಿತ ಬಾಲಕನ ಕುಟುಂಬಕ್ಕೆ 11 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಮಾನವೀಯತೆಯನ್ನು ಮರೆತಿತ್ತು.

    ಇದರ ವಿರುದ್ಧ ಅನ್ಯಾಯಕ್ಕೆ ಒಳಗಾದ ಸಮುದಾಯ ಪ್ರತಿಭಟನೆಯನ್ನು ಮಾಡಿತ್ತು. ಇದರ ಭಾಗವಾಗಿ ಇತ್ತಿಚೆಗೆ ಅಧಿಕಾರಿಗಳು, ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ಮಾಡಿದ್ರು. ಇಷ್ಟೆಲ್ಲ ವಿಷಯ ಗಂಭೀರವಾಗಿದ್ರೂ ಬಾಲಕನ ತಂದೆ ದೂರು ಕೊಡಲು ನಿರಾಕರಣೆ ಮಾಡಿದ್ದರು. ಈ ಹಿನ್ನಲೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಎಂಬವರು ದೂರು ದಾಖಲು ಮಾಡಿದ್ದರು. ಇದನ್ನೂ ಓದಿ: ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!

    ಕನಕಪ್ಪ ಪೂಜಾರಿ, ಹನಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ ಶರಣಗೌಡ, ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

  • ಹಿಂದುತ್ವದ ಹೆಸರು ಹೇಳಿಕೊಂಡು ಬಂದಿದೆ ಅಂತಲ್ಲ, ದೇಶದ ಸಂಸ್ಕೃತಿ ಉಳಿಸುವ ಸರ್ಕಾರ: ಸಚಿವ ನಾಗೇಶ್

    ಹಿಂದುತ್ವದ ಹೆಸರು ಹೇಳಿಕೊಂಡು ಬಂದಿದೆ ಅಂತಲ್ಲ, ದೇಶದ ಸಂಸ್ಕೃತಿ ಉಳಿಸುವ ಸರ್ಕಾರ: ಸಚಿವ ನಾಗೇಶ್

    ಯಾದಗಿರಿ: ಹಿಂದುತ್ವದ ಹೆಸರು ಹೇಳಿಕೊಂಡು ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂತಲ್ಲ, ಈ ದೇಶದ ಸಂಸ್ಕೃತಿ ಉಳಿಸುವ ಸರ್ಕಾರ ನಮ್ಮದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ನಗರದ ಸ್ವಪ್ನ ಕಾಲೇಜು ಮೈದಾನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಹಿಂದೂ ದೇವಸ್ಥಾನಗಳ ತೆರವು ವಿಚಾರವಾಗಿ ಮಾತನಾಡಿದರು. ಇದು ಸುಪ್ರೀಂ ಕೋರ್ಟ್ ನ ಆದೇಶವಾಗಿದೆ. ಮೈಸೂರುನಲ್ಲಿ ದೇವಾಲಯ ತೆರವು ಮಾಡಿದ ಘಟನೆ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ, ತೆರವುಗೊಳಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಆಧಾರದ ಮೇಲೆ ಜಿಲ್ಲಾಧಿಕಾರಿ ದೇವಸ್ಥಾನ ತೆರವುಗೊಳಿಸಿದ್ದಾರೆ. ಮೈಸೂರು ಹೊರತು ಮತ್ತೆ ಎಲ್ಲಿಯೂ ದೇವಸ್ಥಾನ ತೆರವು ನಡೆದಿಲ್ಲ ಎಂದರು. ಇದನ್ನೂ ಓದಿ: ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ

    ಯಾದಗಿರಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೂನ್ಯ ಸ್ಥಾನದಲ್ಲಿದೆ, ವೈರಲ್ ಫೀವರ್ ಮಕ್ಕಳಿಗೆ ಜಾಸ್ತಿ ಆಗಿರಬಹುದು. ಮಳೆಗಾಲದ ವಾತಾವರಣದ ಬದಲಾವಣೆಯಿಂದ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಡೆಂಘೀ ಜ್ವರ ಹಾಗೂ ಚಿಕನ್ ಗುನ್ಯಾ ಹೊಸದೇನಲ್ಲ, ಅದಕ್ಕೆ ಚಿಕಿತ್ಸೆ ಇದೆ, ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಆಗಿದೆ ಎಂದರು.

  • ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ

    ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ

    ಬೆಂಗಳೂರು: ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಕೆಡವುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿ, ಈ ರೀತಿಯ ಘಟನೆ ಮರುಕಳಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

    ಪತ್ರದಲ್ಲಿ ಏನಿದೆ?
    ಗೌರವಾನ್ವಿತ ಸುಪ್ರೀಂಕೋರ್ಟ್ 2009ರ ಸೆಪ್ಟೆಂಬರ್ 29ರಂದು ಹೊರಡಿಸಿರುವ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ, ಸ್ಥಳಾಂತರಿಸುವ, ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವಹಿಂದು ಪರಿಷತ್ ಗೌರವಿಸುತ್ತದೆ. ಆದರೆ ಗೌರವಾನ್ವಿತ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸುವಾಗ ರಾಜ್ಯ ಸರ್ಕಾರವು ಪ್ರತಿಯೊಂದು ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕ ಪ್ರತ್ಯೇಕವಾಗಿ ವಿಮರ್ಶೆ ಮಾಡಿ(Case by Case Review) ಸಕ್ರಮ, ಸ್ಥಳಾಂತರ, ಅನಿವಾರ್ಯವಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರುಗಿಸಬೇಕೆಂದಿದ್ದರೂ ಸಹ ಮೈಸೂರಿನ ಜಿಲ್ಲಾಡಳಿತವು ಮೇಲ್ಕಡ ಯಾವುದೇ ಕ್ರಮ ತೆಗೆದುಕೊಳ್ಳದೆ ಹಿಂದು ದೇವಸ್ಥಾನವನ್ನು ಮಾತ್ರ ಕೆಡವಿರುವುದು ಖಂಡನೀಯ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಕೇವಲ ಹಿಂದೂ ಸಮಾಜಕ್ಕೆ ಸೇರಿರುವ ಪುರಾತನವಾದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತೊಘಲಕ್ ನೀತಿಯಂತೆ ಅಕ್ರಮವಾಗಿ ತೆರವು ಗೊಳಿಸಿರುವುದನ್ನು ವಿಶ್ವಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಇದರಿಂದ ಇಡೀ ಹಿಂದು ಸಮಾಜದ ಭಾವನೆಗೆ ಅತೀವ ನೋವುಂಟಾಗಿರುತ್ತದೆ. ಕಳೆದ ಎರಡು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಇದೇ ರೀತಿಯಾಗಿ ಹಲವಾರು ಹಿಂದೂ ದೇವಾಲಯಗಳನ್ನು ಮಾತ್ರ ಕೆಡವಿದ್ದು, ಮೈಸೂರಿನ ಹೃದಯ ಭಾಗದಲ್ಲಿರುವ ದೇವರಾಜ ಅರಸು ರಸ್ತೆಯಲ್ಲಿರುವ ಘೋರಿಯು ನಿಜವಾಗಿಯೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಿದ್ದರೂ ಸಹ ಜಿಲ್ಲಾಡಳಿತವು ಅದನ್ನು ಭಾಗಶಃ ತೆರವು ಗೊಳಿಸಿ, ಮತ್ತೆ ಈಗ ಎರಡು ವರ್ಷಗಳ ನಂತರ ಅರ್ಧಕ್ಕೆ ನಿಲ್ಲಿಸಿದ್ದ ಆ ಕೆಲಸವನ್ನು ಪೂರ್ಣಗೊಳಿಸದೆ ಕೈಬಿಟ್ಟು ಕೇವಲ ಹಿಂದೂ ದೇವಾಲಯಗಳನ್ನು ತೆರವು ಗೊಳಿಸುವ ಮೂಲಕ ತಾರತಮ್ಯ ತೋರಿದ ಜಿಲ್ಲಾಡಳಿತದ ಕ್ರಮವು ಕೋಮು ಸೌಹಾರ್ದತೆಯನ್ನು ಕದಡುವ, ಕೋಮು ವಾದವನ್ನು ಸೃಷ್ಟಿಮಾಡಿರುತ್ತದೆ. ಇದನ್ನೂ ಓದಿ: ಮೈಸೂರಿನಲ್ಲಿ ದೇವಸ್ಥಾನ ತೆರವು ಕಾರ್ಯಚರಣೆಗೆ ಜಿಲ್ಲಾಡಳಿತ ಬ್ರೇಕ್

    ಜಿಲ್ಲಾಡಳಿತದ ಈ ದ್ವಂದ್ವ ನೀತಿಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ, ಜಿಲ್ಲಾಡಳಿತ ಸುಪ್ರೀಂಕೋರ್ಟ್‍ನ ಆದೇಶವನ್ನು ಸರಿಯಾಗಿ ಗ್ರಹಿಸದೆ ರಾತ್ರೋರಾತ್ರಿ ಹಲವಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಗಳನ್ನು ಕೆಡವಿ ಹಿಂದು ಸಮಾಜಕ್ಕೆ ನೋವುಂಟುಮಾಡಿದೆ. ಮಾನ್ಯ ಸುಪ್ರೀಂ ಕೋರ್ಟ್ ಪ್ರತಿಯೊಂದು ಪ್ರಕರಣದಲ್ಲಿಯೂ ಪ್ರತ್ಯೇಕವಾಗಿ ಜಿಲ್ಲಾ ಸಮಿತಿ ದೇವಸ್ಥಾನದ ಮಂಡಳಿ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಆ ದೇವಸ್ಥಾನದ ಇತಿಹಾಸ, ದೇವಸ್ಥಾನ ಇರುವ ಸ್ಥಳದಲ್ಲಿ ಇತ್ತೀಚೆಗೆ ರಸ್ತೆ ನಿರ್ಮಾಣವಾಗಿರುವ ವಿಚಾರ ಪರಿಶೀಲಿಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದರೂ ಸಹ ಜಿಲ್ಲಾಡಳಿತ ಅವೈಜ್ಞಾನಿಕವಾಗಿ ದೇವಸ್ಥಾನಗಳನ್ನು ಕೆಡವಿರುವುದು ಖಂಡನೀಯ. ಇದನ್ನೂ ಓದಿ: ಮುನ್ಸೂಚನೆ ನೀಡದೆ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಖಂಡನೀಯ: ಎಸ್‍ಡಿಪಿಐ

    ವಿಶ್ವ ಹಿಂದೂ ಪರಿಷತ್ ಈ ಮೂಲಕ ಎಚ್ಚರಿಕೆ ಹಾಗೂ ಆಗ್ರಹ ಪಡಿಸುವುದೇನೆಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ದೇವಸ್ಥಾನಗಳಿಗೂ ಪ್ರತ್ಯೇಕ ನೋಟಿಸ್ ಜಾರಿ ಮಾಡಿ, ಉರ್ಜಿತಗೊಳಿಸಲು ಮತ್ತು ಸ್ಥಾಳಾಂತರಿಸಲು ಬೇಕಾಂದತಹ ಕ್ರಮ ಜರುಗಿಸಿ ದೇವಸ್ಥಾನಗಳನ್ನು ಉಳಿಸಿ ರಕ್ಷಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.

  • ರಾಜ್ಯದಲ್ಲಿ 6,500ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರ ತೆರವಿಗೆ ಪ್ಲಾನ್ – ಈಗಾಗ್ಲೇ 2,500ಕ್ಕೂ ಹೆಚ್ಚು ದೇಗುಲಗಳು ನೆಲಸಮ

    ರಾಜ್ಯದಲ್ಲಿ 6,500ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರ ತೆರವಿಗೆ ಪ್ಲಾನ್ – ಈಗಾಗ್ಲೇ 2,500ಕ್ಕೂ ಹೆಚ್ಚು ದೇಗುಲಗಳು ನೆಲಸಮ

    – ಕಸದ ರಾಶಿ ಸೇರಿದ್ದ ನೆಲಮಂಗಲದ ಹನುಮಂತ

    ಬೆಂಗಳೂರು: ಕೇವಲ ಮೈಸೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅನಧಿಕೃತ ಎಂಬ ನೆಪ ಹೇಳಿ ದೇವಾಲಯಗಳು ಸೇರಿ 6 500 ಸಾವಿರಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಈಗಾಗಲೇ 2,500ಕ್ಕೂ ಹೆಚ್ಚು ಧಾರ್ಮಿಕ ಮಂದಿರ ತೆರವು ಮಾಡಿದೆ.

    ನೆಲಮಂಗಲದ ತಪಸ್ವಿ ವೀರಾಂಜನೇಯ ದೇಗುಲವನ್ನು ಆಗಸ್ಟ್ ನಲ್ಲಿ ತೆರವು ಮಾಡಿದ್ದ ತಾಲೂಕಾಡಳಿತ, ಹನುಮನ ಮೂರ್ತಿಯನ್ನು ನಗರಸಭೆಯ ಕಸದ ರಾಶಿಗೆ ಎಸೆದಿತ್ತು. ಈ ಬಗ್ಗೆ ಈಗಲೂ ಆಕ್ರೋಶ ವ್ಯಕ್ತವಾಗ್ತಿದೆ. ಆದರೆ ಪಬ್ಲಿಕ್ ಅಭಿಯಾನದ ನಂತ್ರ ಸರ್ಕಾರ, ದೇಗುಲ ತೆರವು ಕಾರ್ಯಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.

    ಬೆಂಗಳೂರಿನ ಪೀಣ್ಯದ ಸಿದ್ಧಾರೂಢ ಮಠದ ಶಿವಲಿಂಗ, ಶ್ರೀರಾಂಪುರದ ಅಯ್ಯಪ್ಪ ದೇಗುಲ, ವರಸಿದ್ಧಿ ವಿನಾಯಕ ದೇಗುಲ, ಬೆನ್ಸನ್ ಟೌನ್‍ನ ವೆಲಂಕಣಿ ಚರ್ಚ್, ಶಿವಾಜಿನಗರದ ಅಖ್ಸಾ ಮಸೀದಿ ಸೇರಿ ಬೆಂಗಳೂರಿನ 6406 ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಗುರುತಿಸಲಾಗಿತ್ತು. ಈ ಪೈಕಿ 436ನ್ನು ತೆರವು ಮಾಡಲಾಗಿದೆ. 5389 ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಲಾಗಿದೆ. ಇನ್ನುಳಿದ 132 ಮಂದಿರಗಳನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳ ತೆರವಿಗೆ ಸರ್ಕಾರದಿಂದ್ಲೇ ಆದೇಶ – ಸಿಎಸ್ ಸೂಚನೆಯಂತೆ ಆಪರೇಷನ್ ಟೆಂಪಲ್!

    ಬಳ್ಳಾರಿಯಲ್ಲಿ 410ಕ್ಕೆ 410, ಗದಗದಲ್ಲಿ 242ಕ್ಕೆ 242, ಚಿಕ್ಕಬಳ್ಳಾಪುರದಲ್ಲಿ 198ಕ್ಕೆ 198 ಮಂದಿರಗಳನ್ನು ಸದ್ದಿಲ್ಲದೇ ತೆರವು ಮಾಡಲಾಗಿದೆ. ಧಾರವಾಡದಲ್ಲಿ 324 ಪ್ರಾರ್ಥನಾ ಮಂದಿರ ಪೈಕಿ 43ನ್ನು ತೆರವುಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1579 ಧಾರ್ಮಿಕ ಕಟ್ಟಡಗಳನ್ನು ಮಾರ್ಕ್ ಮಾಡಲಾಗಿದ್ದು, ಈಗಾಗಲೇ 356 ಮಂದಿರ ತೆರವಾಗಿವೆ. ಕಲಬುರಗಿಯಲ್ಲಿ 148 ಧಾರ್ಮಿಕ ಕಟ್ಟಡ ಗುರುತಿಸಲಾಗಿದೆ. ಆದ್ರೆ ಸ್ಥಳೀಯರ ವಿರೋಧದಿಂದ ಈವರೆಗೂ ಯಾವುದೇ ಮಂದಿರ ತೆರವಾಗಿಲ್ಲ.

    ತೆರವಿಗೆ ಗುರುತಿಸಿದ ದೇಗುಲಗಳು:
    700 ವರ್ಷಗಳ ಮಂಗಳೂರಿನ ವೈದ್ಯನಾಥ ದೇಗುಲ, 300 ವರ್ಷಗಳ ಹಾಸನದ ಆದಿಆಂಜನೇಯ ದೇಗುಲ, (ದೇಗುಲ ಉಳಿವಿಗಾಗಿ ಶಾಂತಿಗ್ರಾಮ,ಹೊಂಗೆರೆ ಗ್ರಾಮಸ್ಥರಿಂದ ಹೋರಾಟ, ಹೈಕೋರ್ಟ್‍ನಿಂದ ತಡೆಯಾಜ್ಞೆ), ತುಮಕೂರಿನ ಟೌನ್‍ಹಾಲ್ ಬಳಿಯ ದರ್ಗಾ, ದೇಗುಲ ತೆರವಿಗೆ ಮಾರ್ಕ್ (ದೇಗುಲ ತೆರವಿಗೆ ಹಿಂದೂಗಳ ಷರತ್ತುಬದ್ಧ ಒಪ್ಪಿಗೆ.. ದರ್ಗಾ ತೆರವು ಮಾಡಿದಲ್ಲಿ ದೇಗುಲ ತೆರವಿಗೆ ತಕರಾರು ಇಲ್ಲ ಎಂದ ಹಿಂದೂಗಳು.. ಆದ್ರೆ ಕೋರ್ಟ್‍ಗೆ ಹೋಗಲು ಮುಸ್ಲಿಮರ ತೀರ್ಮಾನ) ಮಾಡಲಾಗಿದೆ.

  • ಪ್ರಾರ್ಥನಾ ಮಂದಿರಗಳ ತೆರವಿಗೆ ಸರ್ಕಾರದಿಂದ್ಲೇ ಆದೇಶ – ಸಿಎಸ್ ಸೂಚನೆಯಂತೆ ಆಪರೇಷನ್ ಟೆಂಪಲ್!

    ಪ್ರಾರ್ಥನಾ ಮಂದಿರಗಳ ತೆರವಿಗೆ ಸರ್ಕಾರದಿಂದ್ಲೇ ಆದೇಶ – ಸಿಎಸ್ ಸೂಚನೆಯಂತೆ ಆಪರೇಷನ್ ಟೆಂಪಲ್!

    ಬೆಂಗಳೂರು: ಅನಧಿಕೃತ ದೇಗುಲ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ಬೃಹನ್ನಾಟಕ ಬಟಾಬಯಲಾಗಿದೆ. ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರವೇ ಆದೇಶ ನೀಡಿರುವ ವಿಚಾರ ಬಹಿರಂಗಗೊಂಡಿದೆ.

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜುಲೈ 1ರಂದೇ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ ತುರ್ತು ಆದೇಶ ಹೊರಡಿಸಿದ್ದಾರೆ. 2009ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪಾಲಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಮುಂದಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರವೇ ಡಿಸಿಗಳು ತರಾತುರಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅದರ ಒಂದು ಭಾಗವೇ ಕಳೆದ ವಾರ ನಂಜನಗೂಡಿನ ಮಹಾದೇವಮ್ಮ ದೇವಾಲಯ ಧ್ವಂಸ ಪ್ರಕರಣ. ಆದರೆ ದೇಗುಲ ತೆರವಿಗೆ ಹಿಂದೂ ಸಂಘಟನೆಗಳು, ಸ್ವಪಕ್ಷೀಯ ನಾಯಕರು, ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ತಮಗೆ ಏನು ಗೊತ್ತಿಲ್ಲ ಎಂಬಂತೆ ರಾಜ್ಯ ಸರ್ಕಾರ ವರ್ತಿಸಿದೆ. ಇದನ್ನೂ ಓದಿ: ಸೆ.17ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

    ಡಿಸಿಗಳಿಗೆ ಸಿಎಸ್ ಪತ್ರದಲ್ಲಿ ಏನಿದೆ..?
    ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ 2021ರ ಜುಲೈ 1ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. 2009ರ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ 2020ರ ಡಿಸೆಂಬರ್ 14ರಂದು ಹೈಕೋರ್ಟ್ ನಿರ್ದೇಶನ ನೀಡಿದೆ. ನಿಮ್ಮ ವ್ಯಾಪ್ತಿಯಲ್ಲಿ 2009ರ ಸೆ.29 ರ ನಂತರ ನಿರ್ಮಾಣವಾಗಿರುವ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಪಟ್ಟಿ ಮಾಡಿ ಎಂದಿದ್ದಾರೆ. ದೇಗುಲ/ಮಸೀದಿ/ಚರ್ಚ್.. ಇತರೆ ಮಂದಿರಗಳ ಧ್ವಂಸ/ತೆರವು/ಸ್ಥಳಾಂತರ/ಅಕ್ರಮ ಸಕ್ರಮಕ್ಕೆ ಕ್ರಮ ತೆಗೆದುಕೊಳ್ಳಿ. ಜುಲೈ 15ರಿಂದ ಪ್ರತಿ ತಾಲೂಕಿನಲ್ಲಿ ಪ್ರತಿವಾರ ಕನಿಷ್ಠ 1 ಅನಧಿಕೃತ ಮಂದಿರ ನೆಲಸಮ ಮಾಡಲು ಯೋಜನೆ ರೂಪಿಸಿ. ಜುಲೈ 15ರಿಂದ ನಗರದಲ್ಲಿ ವಲಯವಾರು ಕನಿಷ್ಠ ವಾರಕ್ಕೆ 1ರಂತೆ ಅನಧಿಕೃತ ಪ್ರಾರ್ಥನಾ ಮಂದಿರ ತೆರವು ಮಾಡಿ. ಪ್ರತಿ ತಿಂಗಳು ರಾಜ್ಯ ಸರ್ಕಾರಕ್ಕೆ ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವಿನ ಕುರಿತು ವರದಿ ನೀಡಿ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

    2009ರ ತೀರ್ಪಿನಲ್ಲಿ ಸುಪ್ರೀಂ ಏನು ಹೇಳಿತ್ತು..?
    ರಸ್ತೆ, ಫುಟ್‍ಪಾತ್, ಪಾರ್ಕ್‍ಗಳಲ್ಲಿನ ಅನಧಿಕೃತ ಪ್ರಾರ್ಥನಾ ಮಂದಿರ ಗುರುತಿಸಿ. ಮೊದಲ ಆದ್ಯತೆಯಾಗಿ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಸಕ್ರಮ ಮಾಡಿ. ಸಕ್ರಮ ಮಾಡಲು ಸಾಧ್ಯವಾಗದಿದ್ದರೇ ಪ್ರಾರ್ಥನಾ ಮಂದಿರಗಳನ್ನು ಸ್ಥಳಾಂತರಿಸಿ. ಸಕ್ರಮ-ಸ್ಥಳಾಂತರ ಆಗದೇ ಇದ್ದಲ್ಲಿ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಿ ಎಂದು ಕೊರ್ಟ್ ಹೇಳಿತ್ತು.

  • ಕೃಷ್ಣಾ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷ- ನಡುಗಡ್ಡೆ ದೇವಾಲಯಗಳಿಗೆ ತೆರಳಲು ಭಕ್ತರಲ್ಲಿ ಆತಂಕ

    ಕೃಷ್ಣಾ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷ- ನಡುಗಡ್ಡೆ ದೇವಾಲಯಗಳಿಗೆ ತೆರಳಲು ಭಕ್ತರಲ್ಲಿ ಆತಂಕ

    ರಾಯಚೂರು: ಜಿಲ್ಲೆಯ ಕೃಷ್ಣಾ ನದಿಯ ನಡುಗಡ್ಡೆಗಳಲ್ಲಿನ ನಾರದಗಡ್ಡೆ, ದತ್ತಾತ್ರೇಯ ದೇವಾಲಯಗಳಿಗೆ ತೆರಳಲು ಭಕ್ತರಿಗೆ ಮೊಸಳೆಗಳ ಭಯ ಎದುರಾಗಿದೆ. ದೇಗುಲಕ್ಕೆ ತೆರಳುವ ಪ್ರತಿಯೊಬ್ಬ ಭಕ್ತರಿಗೂ ಮೊಸಳೆ ದರ್ಶನವಾಗುತ್ತಿದೆ.

    ಕೃಷ್ಣಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ನದಿಯಲ್ಲಿ ತೆರಳಲು ಭಕ್ತರು ಹೆದರಿದ್ದಾರೆ. ದಶಕ ಕಳೆದರೂ ಕೃಷ್ಣಾ ನದಿಯಲ್ಲಿ ನಡೆದಿರುವ ಸೇತುವೆ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ತೆಪ್ಪ, ಅರಗೋಲುಗಳ ಮುಖಾಂತರ ದತ್ತಾತ್ರೇಯ, ನಾರದಗಡ್ಡೆ ಚನ್ನಬಸವೇಶ್ವರ ದೇವಸ್ಥಾನಗಳಿಗೆ ಭಕ್ತರು ತೆರಳುತ್ತಾರೆ. ಈ ವೇಳೆ ಮೊಸಳೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಭಕ್ತರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: 1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

    ನದಿಯಲ್ಲಿ ಅಲ್ಲಲ್ಲಿ ಬಂಡೆಗಳ ಮೇಲೆ ಮಲಗಿರುವ ಮೊಸಳೆಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಜುರಾಲಾ ಯೋಜನೆ ಹಿನ್ನೀರು ಸದಾ ಇರುವುದರಿಂದ ಮೊಸಳೆಗಳು ಹೆಚ್ಚು ಪ್ರಮಾಣದಲ್ಲಿವೆ. ಅಪಾಯದ ನಡುವೆಯೇ ನಡುಗಡ್ಡೆಗಳ ದೇಗುಲಗಳಿಗೆ ನದಿಯಲ್ಲಿ ತೆಪ್ಪಗಳ ಮೂಲಕ ಭಕ್ತರ ಸಂಚಾರ ನಡೆದಿದ್ದು, ಆದಷ್ಟು ಬೇಗ ಸೇತುವೆ ಕಾಮಗಾರಿಗಳನ್ನುಪೂರ್ಣಗೊಳಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

  • ದೇವಸ್ಥಾನ ತೆರವು ಹೇಯ ಕೃತ್ಯ: ಮುತಾಲಿಕ್

    ದೇವಸ್ಥಾನ ತೆರವು ಹೇಯ ಕೃತ್ಯ: ಮುತಾಲಿಕ್

    ಧಾರವಾಡ: ಸರ್ಕಾರ ಮೈಸೂರಿನಲ್ಲಿ ದೇವಸ್ಥಾನ ತೆರವು ಮಾಡುತ್ತಿರುವದು ಅತ್ಯಂತ ಹೇಯ ಕೃತ್ಯ, ಇದನ್ನು ನಾನು ಖಂಡಿಸುತ್ತೇನೆ, ವಿರೋಧಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಕಲ್ಲಿನ ಹಾಗೂ ಸಿಮೆಂಟಿನ ಕಟ್ಟಡ ಮಾತ್ರ ಅಲ್ಲ, ಭಾವ, ಭಕ್ತಿಯ ಮಂದಿರ. ಯಾವುದೇ ರೀತಿಯ ಸೂಚನೆ ಇಲ್ಲದೇ, ಸಮಾಲೋಚನೆ ಇಲ್ಲದೇ ರಾತ್ರೋ ರಾತ್ರಿ ದೇವಸ್ಥಾನ ಕೆಡವುವುದು ಅತ್ಯಂತ ಖಂಡನೀಯ. ಸರ್ಕಾರ ಕೂಡಲೇ ಈ ಕುರಿತು ಗಮನಹರಿಸಿ, ತಡೆಯಬೇಕು. ದೇವಸ್ಥಾನ ಮಾತ್ರ ಟಾರ್ಗೇಟ್ ಮಾಡುತ್ತಿರುವದು ಸರಿಯಲ್ಲ. ರಸ್ತೆ ಹಾಗೂ ಫುಟ್‍ಪಾತ್ ಮೇಲೆ ಸಾಕಷ್ಟು ಮಸೀದಿ, ದರ್ಗಾಗಳು, ಘೋರಿಗಳು ಹಾಗೂ ಚರ್ಚ್ ಇವೆ. ಅವುಗಳನ್ನು ಮಾತ್ರ ಮುಟ್ಟದೆ ದೇವಸ್ಥಾನ ಟಾರ್ಗೆಟ್ ಮಾಡುವದು ಸರಿಯಲ್ಲ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ದೇವಸ್ಥಾನ ತೆರವು ಕಾರ್ಯಚರಣೆಗೆ ಜಿಲ್ಲಾಡಳಿತ ಬ್ರೇಕ್

    ಕಾನೂನು ಎಲ್ಲರಿಗೂ ಸಮಾನವಾಗಿದೆ, ಸುಪ್ರೀಂ ಕೋರ್ಟ್ ಬರಿ ದೇವಸ್ಥಾನಕ್ಕೆ ಅಷ್ಟೇ ಹೇಳಿಲ್ಲ. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಒಂದು ಘೋರಿ ಹಾಗೆಯೇ ಜೀವಂತವಾಗಿದೆ. ಅದನ್ನು ತೆಗೆಯುವ ತಾಕತ್ತು ಸರ್ಕಾರಕ್ಕೆ ಇಲ್ಲ. ಸರ್ಕಾರ ಇದನ್ನು ನಿಲ್ಲಿಸದಿದ್ದರೆ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಬಿಜೆಪಿ ಸರ್ಕಾರ ಹಿಂದುತ್ವ ಎಂದು ಹೇಳುತ್ತೆ, ಈಗ ಅದೇ ಸರ್ಕಾರ ವರ್ತಿಸುವುದನ್ನು ನೋಡಿದರೆ ವಿಚಿತ್ರ ಆಗುತ್ತಿದೆ. ಬಿಜೆಪಿಗೆ ಸೆಕ್ಯುಲರ್ ಆಗಬೇಕು ಎಂಬ ಸ್ಥಿತಿ ನಿರ್ಮಾಣ ಆಗಿದೆಯಾ ಎಂದ ಅವರು, ಹಿಂದುತ್ವದ ಹಿನ್ನೆಲೆಯಲ್ಲಿ ಬಂದಿರುವ ಬಿಜೆಪಿ, ಜಿಲ್ಲಾಧಿಕಾರಿ ಮೂಲಕ ದೇವಸ್ಥಾನ ಕೆಡವುವದು ಸರಿಯಲ್ಲ. ಸುಪ್ರೀಂ ಕೋರ್ಟ್ ಆದೇಶ ಬಹಳ ಇವೆ, ಮಸೀದಿ ಮೈಕ್ ಹಚ್ಚಬಾರದು ಎಂದು ಆದೇಶ ಇದೆ. ಇದರ ಬಗ್ಗೆ ಸರ್ಕಾರ ಲಕ್ಷ್ಯ ಕೊಟ್ಟಿಲ್ಲ, ಬಿಜೆಪಿಯವರು ಅದನ್ನು ಪಾಲನೆ ಮಾಡಲಿ. ನಾನು ಗೃಹ ಮಂತ್ರಿ ಹಾಗೂ ಸಿಎಂಗೆ ಮನವಿ ಮಾಡುತ್ತೇನೆ, ಕೂಡಲೇ ಇದನ್ನು ನಿಲ್ಲಿಸಿ, ಇದು ನಿಮಗೆ ಶೋಭೆ ತರಲ್ಲ ಎಂದು ಮುತಾಲಿಕ್ ಹೇಳಿದರು.