Tag: ದೇವಸ್ಥಾನ

  • ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ

    ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಉಮಾಮಧುಕೇಶ್ವರ ದೇವರ ರಥೋತ್ಸವದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ  ನಿರ್ಬಂಧ ವಿಧಿಸಲಾಗಿದೆ.

    ಇತಿಹಾಸ ಪ್ರಸಿದ್ಧ ಬನವಾಸಿಯ ಉಮಾಮಧುಕೇಶ್ವರ ದೇವರ ರಥೋತ್ಸವ ಏ.11, 12 ರಂದು ನಡೆಯಲಿದೆ. ಈ ವೇಳೆ ದೇವಸ್ಥಾನದ ಸಮೀಪದ ಕಟ್ಟಡ ಅಥವಾ ನಿವೇಶನಗಳಲ್ಲಿ ಹಿಂದೂಯೇತರರಿಗೆ ಮಳಿಗೆ ಗುತ್ತಿಗೆ ಅಥವಾ ಬಾಡಿಗೆ ನೀಡದಿರಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದ್ದು, ದೇವಸ್ಥಾನದ ಆವರಣದಲ್ಲಿ ಬ್ಯಾನರ್ ಅಳವಡಿಸಿದೆ. ಇದನ್ನೂ ಓದಿ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ದೇವಸ್ಥಾನದ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳು ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದ್ದು, ರಥೋತ್ಸವದ ಸಂದರ್ಭದಲ್ಲಿ ನೂರಾರು ಮಳಿಗೆಗಳನ್ನು ತೆರೆಯಲಾಗುತ್ತದೆ. ಆದರೆ, ಈ ಬಾರಿ ಹಿಂದೂ ಧರ್ಮೀಯರಿಗೆ ಮಾತ್ರ ಅವಕಾಶ ನೀಡುವುದಾಗಿ ಸಮಿತಿ ತಿಳಿಸಿದ್ದು ಇದೀಗ ಮುಸ್ಲಿಂ ಹೊರತಾಗಿಯೂ ಇತರೆ ಜನಾಂಗದವರಿಗೂ ಇದರ ಬಿಸಿ ತಟ್ಟಲು ಪ್ರಾರಂಭಿಸಿದೆ. ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಮತ್ತೆ ಉಮೇಶ ಕತ್ತಿ ಒತ್ತಾಯ

    ಸೋಮವಾರ ದಿನ ವಿವಿಧ ಹಿಂದೂ ಸಂಘಟನೆಯವರು ದೇವಸ್ಥಾನದ ಆಡಳಿತಮಂಡಳಿಯವರನ್ನು ಸಂಪರ್ಕಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ನಿಯಮದ ಅನ್ವಯ ಹಿಂದೂಯೇತರರಿಗೆ ಅವಕಾಶ ನೀಡಬಾರದು ಎಂದು ಮನವಿ ನೀಡಿತ್ತು. ಈ ಹಿನ್ನಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ.

  • ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಚಿಕ್ಕಮಗಳೂರು: ನವಜೀವನಕ್ಕೆ ಕಾಲಿಟ್ಟ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಮೂಲದ ದಂಪತಿ ಮದುವೆಯಾಗಿ ದೇವಸ್ಥಾನದಿಂದ ಸೀದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದಿದ್ದಾರೆ.

    ಎಸ್ಪಿ ಕಚೇರಿಗೆ ಬಂದ ನವಜೋಡಿ ನಮಗೆ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಬ್ಳಿ ಗ್ರಾಮದ ಯೋಗಾನಂದ್ ಹಾಗೂ ಜಿ.ಕೊಪ್ಪಲು ಗ್ರಾಮದ ಚಂದನ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುವಾಗಲೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಪದವಿ ಮುಗಿದು ಯೋಗನಾಂದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಚಂದನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದಾಳೆ. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿ ವಿಚಾರ ಚಂದನ ಮನೆಯವರಿಗೆ ತಿಳಿದು ಆಕೆಯನ್ನು ಗೌಪ್ಯ ಸ್ಥಳದಲ್ಲಿ ಇಟ್ಟಿದ್ದನು. ಆಕೆಗೆ ಬೇರೆ ಹುಡುಗನನ್ನ ನೋಡಿ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದರು. ಆಗ ಪ್ರೇಮಿ ಯೋಗಾನಂದ್ ಚಂದನಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾನೆ. ಆದರೆ, ಆಕೆ ಎಲ್ಲೂ ಸಿಕ್ಕಿಲ್ಲ. ಕೊನೆಗೂ ಹೇಗೋ ಆಕೆ ಇರುವ ಜಾಗವನ್ನು ಪತ್ತೆ ಹಚ್ಚಿದ ಪ್ರೇಮಿ ಆಕೆಯನ್ನ ಕರೆದುಕೊಂಡು ಬಂದು ಸ್ನೇಹಿತರ ಸಮ್ಮುಖದಲ್ಲಿ ತರಾತುರಿಯಲ್ಲಿ ಮದುವೆಯಾಗಿದ್ದಾನೆ.

    ಇಬ್ಬರು ಈಗ ರಕ್ಷಣೆ ಕೋರುವಂತೆ ಎಸ್ಪಿಗೆ ಮನವಿ ಮಾಡಿದ್ದಾರೆ. ಓಡಿ ಹೋಗಿ ಮದುವೆಯಾದ ಇಬ್ಬರಿಗಾಗಿ ಹುಡುಗಿ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಸಿಕ್ಕಿಲ್ಲ. ಎಸ್ಪಿ ಕಚೇರಿಗೆ ಬಂದು ಮನವಿ ಸಲ್ಲಿಸಿರುವ ನವದಂಪತಿ, ನಮಗೆ ಓಡಿ ಹೋಗಿ ಮದುವೆಯಾಗಬೇಕೆಂಬ ಬಯಕೆ ಇರಲಿಲ್ಲ. ಆದರೆ, ನಮ್ಮ ಮನೆಯರು ಒಪ್ಪಲಿಲ್ಲ. ಕೊಲೆ ಬೆದರಿಕೆ ಹಾಕಿದರು. ಅದಕ್ಕೆ ಓಡಿ ಹೋಗಿ ಮದುವೆಯಾಗಿದ್ದೇವೆ. ಈಗ ನಮಗೆ ನಮ್ಮ ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ನಮಗೆ ಏನಾದರೂ ಆದರೆ ನಮ್ಮ ಮಾವಂದಿರೇ ಕಾರಣ ಎಂದು ಚಂದನಾ ಹೇಳಿದ್ದಾಳೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ನವಜೋಡಿ ಎಸ್ಪಿಗೆ ಮನವಿ ಮಾಡಿದ್ದಾರೆ. ಮಗಳ ಮದುವೆ ಬಗ್ಗೆ ಹೆತ್ತವರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ ನಿಜ. ಆದರೆ, ನಾವು ಇಂತವರ ಜೊತೆ ಇದ್ದರೆ ಚೆನ್ನಾಗಿರುತ್ತೇವೆ ಅನ್ನುವುದಾದರೆ ಇರಲಿ ಅನ್ನೋದು ಯೋಗಾನಂದ್ ಸ್ನೇಹಿತರ ಮಾತು.

     

  • ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

    ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

    ತಿರುವನಂತಪುರಂ: ಕೇರಳದ ಪ್ರಸಿದ್ಧ ಕೂಡಲ್ಮಾಣಿಕ್ಯಂ ದೇಗುಲದಲ್ಲಿ ಮತ್ತೊಬ್ಬ ಹಿಂದೂಯೇತರ ನೃತ್ಯಗಾರ್ತಿಗೆ ಪ್ರದರ್ಶನ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

    ಸೌಮ್ಯಾ ಸುಕುಮಾರನ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದವರು ಎನ್ನುವ ಕಾರಣಕ್ಕೆ ಅವರಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಎಎನ್‍ಐಗೆ ಸಂದರ್ಶನ ನೀಡಿದ ಅವರು, 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ನಾನು ಕೇಳಿದ್ದೆ. ಆದರೆ ನನಗೆ ಅವಕಾಶ ಕೊಡಲು ದೇವಸ್ಥಾನದ ಅಧಿಕಾರಿಗಳು ನಿರಾಕರಿಸಿದರು. ನನ್ನ ತಂದೆ ಹಿಂದೂ ಆಗಿದ್ದರು. ಮದುವೆಯಾದ ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ವಿಷಯವನ್ನು ದೇವಸ್ಥಾನದ ಅಧಿಕಾರಿಗಳಿಗೆ ತಿಳಿಸಿದ್ದೆ ಎಂದರು.

    ಈ ವಿಷಯ ತಿಳಿದ ಅಲ್ಲಿನ ಅಧಿಕಾರಿಗಳು ದೇವಸ್ಥಾನದ ಹೊರಗಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಈ ಕಾರ್ಯಕ್ರಮವನ್ನು ಒಳಗೆ ನಡೆಸುವುದರಿಂದ ಕಷ್ಟವಾಗುತ್ತದೆ ಎಂದು ಹೇಳಿದರು. ಇದರಿಂದಾಗಿ ನಾನು ಹಿಂದೆ ಸರಿದೆ ಎಂದರು.

    ದೇವಸ್ಥಾನದ ಅಧಿಕಾರಿಗಳು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸೌಮ್ಯಾ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ದೇವಾಲಯವು ಹಿಂದೂಯೇತರರಿಗೆ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿನಮ್ರವಾಗಿ ತಿಳಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಭರತನಾಟ್ಯ ಕಲಾವಿದೆಗೆ ನಿರ್ಬಂಧ

    ಇತ್ತೀಚೆಗಷ್ಟೇ ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮುಸ್ಲಿಂ ಧರ್ಮದವರು ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದರು.

    ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡಲು ಮದ್ರಾಸ್ ವಿವಿಯಿಂದ ಎಂ.ಎ. ಭರತನಾಟ್ಯಂ ಕೋರ್ಸ್‍ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಯೂರು ಜಿಲ್ಲೆಯ ಜಲಕೂಡದಲ್ಲಿರುವ ಕೂಡಲ್ ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: 8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ

  • ಮೇಲುಕೋಟೆಯಲ್ಲಿ ದೀವಟಿಗೆ ರದ್ದುಗೊಳಿಸುವಂತೆ ಡಿಸಿಗೆ ಮನವಿ ಸಲ್ಲಿಸಲು ಸಿದ್ಧತೆ

    ಮೇಲುಕೋಟೆಯಲ್ಲಿ ದೀವಟಿಗೆ ರದ್ದುಗೊಳಿಸುವಂತೆ ಡಿಸಿಗೆ ಮನವಿ ಸಲ್ಲಿಸಲು ಸಿದ್ಧತೆ

    ಮಂಡ್ಯ: ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧದ ಕೂಗಿನ ಬಳಿಕ ಇದೀಗ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿ ವಿರುದ್ಧ ಕೂಗು ಕೇಳಿ ಬರುತ್ತಿದೆ.

    ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಇದೀಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದ್ರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಕಿಡಿ

    ಹೇಗೆ ಬಂತು ದೀವಟಿಗೆ ಸಲಾಂ?:
    ಟಿಪ್ಪು ಸುಲ್ತಾನ್ ಆಡಳಿತದ ವೇಳೆ ಆಸ್ಥಾನದಲ್ಲಿ ಆನೆಗಳ ಸರಣಿ ಸಾವು ಆಗುತ್ತಿತ್ತು. ಈ ವೇಳೆ ಟಿಪ್ಪು ಗುರುಗಳು ಚಲುವರಾಯಸ್ವಾಮಿಗೆ ಕೊಡುಗೆ ನೀಡುವುದಾಗಿ ತಿಳಿಸುತ್ತಾರೆ. ನಂತರ ಟಿಪ್ಪು ಚಲುವರಾಯಸ್ವಾಮಿಗೆ ಚಿನ್ನದ ಆಭರಣಗಳು ಹಾಗೂ ಪಾತ್ರೆಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾರೆ. ಈ ವೇಳೆ ಇದರ ನೆನಪಾರ್ಥ ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕೆಂಬ ಸೂಚಣೆಯನ್ನು ಟಿಪ್ಪು ನೀಡಿದ್ದಾರೆ.

    tippu

    ಆ ಕಾರಣದಿಂದ ಸಂಧ್ಯಾರತಿಯನ್ನಾ ದೀವಟಿಗೆ ಸಲಾಂ ಆರತಿ ಎಂದು ಬದಲಾಯಿಸಿದೆ ಎಂದು ಹೇಳಾಗುತ್ತಿದೆ. ಇದಕ್ಕೆ ಯಾವುದೇ ಪುರಾವೆಗಳು ಇಲ್ಲ, ಕೇವಲ ಇತಿಹಾಸ ತಜ್ಞರು ಹಾಗೂ ಕೆಲವರು ಮಾತ್ರ ಹೇಳುತ್ತಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ

  • ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಭರತನಾಟ್ಯ ಕಲಾವಿದೆಗೆ ನಿರ್ಬಂಧ

    ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಭರತನಾಟ್ಯ ಕಲಾವಿದೆಗೆ ನಿರ್ಬಂಧ

    ತಿರುವನಂತಪುರಂ: ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮುಸ್ಲಿಂ ಧರ್ಮದವರು ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

    ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡಲು ಮದ್ರಾಸ್ ವಿವಿಯಿಂದ ಎಂ.ಎ. ಭರತನಾಟ್ಯಂ ಕೋರ್ಸ್‍ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಯೂರು ಜಿಲ್ಲೆಯ ಜಲಕೂಡದಲ್ಲಿರುವ ಕೂಡಲ್ ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಅನ್ಯ ಧರ್ಮಗಳು ಹೊರಗಿನವರನ್ನು ಆಕರ್ಷಿಸಲು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ನಮ್ಮ ಕೆಲವು ಹಿಂದೂಗಳು ದೇವಸ್ಥಾನಗಳನ್ನು ಮುಚ್ಚಲು ಬಯಸುತ್ತಾರೆ. ಎಲ್ಲಿದೆ ವಸುದೈವ ಕುಟುಂಬ ಎಂದು ದೇವಸ್ಥಾನದ ಉತ್ಸವದಲ್ಲಿ ಅನ್ಯ ಕೋಮಿನ ನೃತ್ಯಗಾರ್ತಿಗೆ ಪ್ರದರ್ಶನ ನೀಡಲು ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ.

    ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮಸ್ಲಿಂ ಮಹಿಳೆ ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಇತರ ಧರ್ಮಗಳು ಇತರರನ್ನು ಆಕರ್ಷಿಸಲು ಅನೇಕ ಮಾರ್ಗಗಳನ್ನು ಹುಡುಕುತ್ತದೆ. ಮಸೀದಿಗಳು, ಚರ್ಚ್‍ಗಳು, ಗುರುದ್ವಾರಗಳ ಬಾಗಿಲುಗಳು ಎಲ್ಲರಿಗೂ ತೆರೆದಿರುತ್ತದೆ. ಆದರೆ ನಮ್ಮ ಕೆಲವು ಸಹ ಹಿಂದೂಗಳು ನಮ್ಮ ದೇವಾಲಯಗಳನ್ನು ಹೊರಗಿನವರಿಗೆ ಮುಚ್ಚಲು ಬಯಸುತ್ತಾರೆ. ವಸುದೈವ ಕುಟುಂಬಕಂ ಎಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯ ಲಡ್ಡು ತಿನ್ನಬೇಡಿ: ಮಮತಾ ಬ್ಯಾನರ್ಜಿ

    ಗರ್ಭಗುಡಿಯ ಪ್ರವೇಶದ ಬಗ್ಗೆ ಕೆಲವು ದೇವಾಲಯಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿರುತ್ತಾರೆ. ಆದರೆ ಇದು ದೇವಾಲಯದ ಆವರಣದಲ್ಲಿ ಇತರ ನೃತ್ಯಗಾರರೊಂದಿಗೆ ನಡೆದ ನೃತ್ಯ ಪ್ರದರ್ಶನವಾಗಿದೆ. ದೇಗುಲ ಅನುಮತಿ ನೀಡದಿರುವುದು ಆಘಾತಕಾರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಶ್ನೆ ಎದುರಿಸಲಾಗದವರು ಮಾನನಷ್ಟ ಮೊಕದ್ದಮೆ ಮೊರೆ ಹೋಗ್ತಾರೆ: ಡಿಎಂಕೆ ವಿರುದ್ಧ ಅಣ್ಣಾಮಲೈ ಕಿಡಿ

  • ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಬಿಜೆಪಿಯ ಹಿಡನ್ ಅಜೆಂಡಾ: ಸತೀಶ್ ಜಾರಕಿಹೊಳಿ

    ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಬಿಜೆಪಿಯ ಹಿಡನ್ ಅಜೆಂಡಾ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಹಿಂದೂ ಉತ್ಸವ, ಜಾತ್ರೆಗಳಿಗೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಅವರ ಹಿಡನ್ ಅಜೆಂಡಾದಲ್ಲಿ ಒಂದಾಗಿದೆ. ಬಿಜೆಪಿಯ ಹಿಜೆಂಡ್ ಅಜೆಂಡಾವನ್ನೆಲ್ಲಾ ಈಗ ಒಂದೊಂದೇ ಜಾರಿ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.

    ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾನೂನು ಇರಬಹುದು, ಒಂದೆಡೆ ಸಕ್ಯೂಲರ್ ಇರಬಹುದು. ಸಾವಿರಾರು ವರ್ಷಗಳಿಂದ ಒಂದು ಸಂಪ್ರದಾಯ ಬಂದಿದೆ. ಹಿಂದೂ ಹಾಗೂ ಮುಸ್ಲಿಂರು ಒಟ್ಟಾಗಿ ಕೆಲಸ ಮಾಡುತ್ತಾರೆ, ವ್ಯಾಪಾರ ಮಾಡುತ್ತಾರೆ. ಇನ್ನೂ ಈ ಹಿಂದೆ ಬಿಜೆಪಿಯವರು 7ವರ್ಷಗಳಲ್ಲಿ ಸಾಕಷ್ಟು ಕಾನೂನು ತಂದರು. ಆರು ತಿಂಗಳವರೆಗೆ ಅದನ್ನು ವ್ಯಾಕ್ಯುಮ್ ಇಡ್ತಾರೆ. ಆಮೇಲೆ ಯಥಾಸ್ಥಿತಿ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.‌

    ದೇಶದಲ್ಲಿ ಏನೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ದೇಶದಲ್ಲಿ ಎಲ್ಲರೂ ಒಗ್ಗೂಡಿ ಇದ್ದಾರೆ. ಇಷ್ಟೆಲ್ಲಾ ಜಾತಿ, ಧರ್ಮ ಕೂಡಿ ಇರುವಂತಹ ವ್ಯವಸ್ಥೆ ಇದಾಗಿದೆ. ಬಿಜೆಪಿ ಅವರು ಏನೇ ಹೇಳಿದರೂ ಬದಲಾವಣೆ ಮಾಡಲಾಗಲ್ಲ. ಎಲ್ಲಾ ಯಥಾಸ್ಥಿತಿಯಾಗಿ ನಡೆಯುತ್ತೆ ಅಷ್ಟೇ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

    ಎರಡು ತಿಂಗಳಲ್ಲಿ ಶಿವಮೊಗ್ಗ ಘಟನೆಯಾತ್ತು. ಹಿಜಬ್ ಆಯ್ತು, ಕೇಸರಿ ಶಾಲು ಆಯ್ತು, ಈಗ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಹೊಸದು ಮಾಡ್ತಿದ್ದಾರೆ. ಇದನ್ನೆಲ್ಲಾ ಅಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅವರೇನೇ ಹೇಳಿದರೂ ಜನ ಒಪ್ಪಲ್ಲ. ಎಲ್ಲರೂ ಕೂಡಿಯೇ ಇರುತ್ತಾರೆ. ಅವರ ಸಂಬಂಧಗಳು ಇರ್ತಾವೆ, ವ್ಯಾಪಾರದಲ್ಲಿ ಮುಸ್ಲಿಂ ಹಿಂದೂ ಅನ್ನೊದು ಸಂಬಂಧ ಬರಲ್ಲ ಎಂದು ಹೇಳಿದರು.

    ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಬಿಜೆಪಿಯವರ ಒಂದು ಪಾರ್ಟ್. ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನೂ ಸಾಕಷ್ಟು ಘಟನೆಗಳು ನಡೆಯುತ್ತದೆ. ಅದಕ್ಕೆ ನಾವು ಅದಕ್ಕೆ ಸಿದ್ಧರಾಗಿರಬೇಕು. ಏನಾದರೂ ಇಂದು ಸಮಸ್ಯೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ನಾವು ಸಿದ್ಧರಾಗಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ ಎಂದು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದ ಸಿದ್ದು

  • ಮುಸ್ಲಿಮರಿಗೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರ – 2021ರಲ್ಲಿ ಗಂಗೊಳ್ಳಿಯಲ್ಲಿ ನಡೆದಿದ್ದು ಏನು?

    ಮುಸ್ಲಿಮರಿಗೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರ – 2021ರಲ್ಲಿ ಗಂಗೊಳ್ಳಿಯಲ್ಲಿ ನಡೆದಿದ್ದು ಏನು?

    ಉಡುಪಿ: ಕರಾವಳಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರದ ಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ. ಈ ಕಿಚ್ಚಿಗೆ ಆರಂಭದ ಕಿಡಿ ಹಚ್ಚಿದ್ದು, ಕಳೆದ ವರ್ಷ ಗಂಗೊಳ್ಳಿಯಲ್ಲಿ ನಡೆದ ಒಂದು ಘಟನೆ.

    ಹಿಜಬ್ ಹೋರಾಟದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪಿಗೆ ಕೆಟ್ಟ ಹೆಸರು ಬರುತ್ತಿದ್ದ ಹಿನ್ನೆಲೆಯಲ್ಲಿ ಜನತೆ ಅಸಮಾಧಾನಗೊಂಡಿದ್ದರು. ಜನತೆ ಅಸಮಾಧಾನಗೊಂಡಿದ್ದರೂ ಅಂಗಡಿ ಬಹಿಷ್ಕಾರದ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಅಂಗಡಿಗಳನ್ನು ಮುಚ್ಚಿ ಕರ್ನಾಟಕ ಬಂದ್‍ಗೆ ಕರೆ ಯಾವಾಗ ಕೊಟ್ಟರೋ ಆಗ ಗಂಗೊಳ್ಳಿಯಲ್ಲಿ ಹಿಂದೂ ಸಮಾಜದ ಬಡ ಮೀನುಗಾರ ಮಹಿಳೆಯರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಿದ ವಿಚಾರ ಮುನ್ನೆಲೆಗೆ ಬಂದಿದೆ.

    ಅಂದು ಏನಾಗಿತ್ತು?: 2021ರ ಅಕ್ಟೋಬರ್ 21ರಂದು ಬೈಂದೂರು ತಾಲೂಕಿನ ಗಂಗೊಳ್ಳಿ ವ್ಯಾಪ್ತಿಯಲ್ಲಿ ವಿಪರೀತವಾಗಿ ಗೋಕಳ್ಳತನ ನಡೆಯುತ್ತಿತ್ತು. ಅಕ್ರಮ ಕಸಾಯಿಖಾನೆಗಳನ್ನು ಮಾಡಿ ಗೋಮಾಂಸ ಸಾಗಾಟ ನಡೆಯುತ್ತಿತ್ತು. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಮಾಡಿದ್ದವು. ಇದಾಗಿ ಮಾರನೇ ದಿನದಿಂದ ಮೀನುಗಾರ ಸಮುದಾಯದ ವ್ಯಾಪಾರಿಗಳಿಗೆ ಮುಸ್ಲಿಮರು ವ್ಯಾಪಾರ ಬಹಿಷ್ಕಾರ ಹಾಕಿದ್ದರು.

    ಸಮುದ್ರದಲ್ಲಿ ಮೊಗವೀರ ಸಮುದಾಯ ಹಿಡಿದ ಮೀನನ್ನು, ಮೊಗವೀರ ಮಹಿಳೆಯರು ಮಾರುವ ಮೀನನ್ನು ಖರೀದಿ ಮಾಡಲು ಮಾರುಕಟ್ಟೆಗೆ ಬಾರದೇ ಅವರು ದೂರವುಳಿದಿದ್ದರು. ಮೊಗವೀರ ಮಹಿಳೆಯರಿಂದ ಮೀನು ಖರೀದಿಸಬಾರದು ಎಂದು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್‍ನಲ್ಲಿ ಸಂದೇಶವನ್ನು ಹರಿ ಬಿಡಲಾಗಿತ್ತು. ಈ ವಿಚಾರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

    ಕರ್ನಾಟಕ ಬಂದ್ ಸಮಯದಲ್ಲಿ ಅಂಗಡಿ ಬಂದ್ ಮಾಡುವುದರ ಜೊತೆ ಮುಸ್ಲಿಂ ಕಾಂಪ್ಲೆಕ್ಸ್‌ನಲ್ಲಿದ್ದ ಹಿಂದೂ ಮಾಲೀಕರ ಅಂಗಡಿಗಳನ್ನು ಬಂದ್ ಮಾಡಿದ ವಿಚಾರ ಹಿಂದೂ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದೆ. ಸಂವಿಧಾನ ವಿರುದ್ಧ ಬಂದ್ ಕರೆ ಕೊಟ್ಟಿದ್ದಕ್ಕೆ ಐದು ತಿಂಗಳ ನಂತರ ಸೂಕ್ತ ಸಂದರ್ಭ ನೋಡಿಕೊಂಡು ಗಂಗೊಳ್ಳಿ ಘಟನೆಗೆ ದೊಡ್ಡ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ದೇವರಿಗೆ ಹಿಂದೂ ಮಟನ್ ಸ್ಟಾಲ್ ಮಾಂಸ ಆಗಲ್ಲ, ನಮ್ಮ ದೇವರಿಗ್ಯಾಕೆ : ಸಿ.ಟಿ ರವಿ

    ಇಷ್ಟು ಗಟ್ಟಿ ಧ್ವನಿಯಿಂದ ನಿರ್ಬಂಧ ವಿಚಾರ ಮಾತನಾಡಲು ಕಾರಣವಾಗಿದ್ದು ಸರ್ಕಾರದ ನಿಯಮ. ಸರ್ಕಾರದ ನಿಯಮವೇ ಇರುವ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದನ್ನೂ ಓದಿ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನಾರಂಭಿಸಿ: ಸೋನಿಯಾ ಗಾಂಧಿ

    ನಿಯಮ ಏನಿದೆ?: 
    ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ.

    ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳು ಹೇಳುತ್ತಿದೆ. ಹಿಂದೂ ಸಂಘಟನೆಗಳು ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ. ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ.

    ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿಕ ಕರಾವಳಿಯ ಹಿಂದೂ-ಮುಸಲ್ಮಾನ ಸಾಮರಸ್ಯದಲ್ಲಿ ಮತ್ತಷ್ಟು ಬಿರುಕಾಗಿದೆ. ಎರಡು ಸಮುದಾಯದ ಮುಖಂಡರು ಧಾರ್ಮಿಕ ದಿಗ್ಗಜರು ಒಂದೆಡೆ ಕುಳಿತು ಇದಕ್ಕೊಂದು ಪರಿಹಾರ ಮಾಡಬೇಕಿದೆ.

  • ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಭೀಕರ ಅಪಘಾತ – ಐವರ ದುರ್ಮರಣ

    ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ ಭೀಕರ ಅಪಘಾತ – ಐವರ ದುರ್ಮರಣ

    ಕಲಬುರಗಿ: ಅಫಜಲಪುರ ತಾಲೂಕಿನ ಸುಪ್ರಸಿದ್ಧ ದೇಗುಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆ ಆಗಮಿಸಿದ ಭಕ್ತರ ಕಾರೊಂದು ಅಪಘಾತಕ್ಕೀಡಾಗಿ ಐವರು ಮೃತಪಟ್ಟ ದುರ್ಘಟನೆ ಬಳೂರ್ಗಿ ಗ್ರಾಮದ ಸಮೀಪ ನಡೆದಿದೆ.

    ಕಲಬುರಗಿಯ ಬಳೂರ್ಗಿ ಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಮರಳಿ ಮಹಾರಾಷ್ಟ್ರ ಕಡೆ ಹೊರಟಿದ್ದ ಕಾರು ಏಕಾಏಕಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 4 ಹೆಣ್ಣು ಮಕ್ಕಳು ಹಾಗೂ ಓರ್ವ ಚಾಲಕ ಸೇರಿ 5 ಜನ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಕ್ಕಳು ಸೇರಿ ಒಟ್ಟು ಮೂರು ಜನರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬಾಯ್‍ಫ್ರೆಂಡ್ ಮುಂದೆಯೇ ಯುವತಿ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ

    ಮೂವರು ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆದರೆ ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಅಫಜಲಪುರ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‍ಐ ವಿಶ್ವನಾಥ ಮುದರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನ ದಾನ ಮಾಡಿದ ಭಕ್ತ

    ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನ ದಾನ ಮಾಡಿದ ಭಕ್ತ

    ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 60 ಕೆಜಿ ಚಿನ್ನ ದಾನ ಮಾಡಿದ್ದಾರೆ. ಗರ್ಭಗುಡಿ ಅಲಂಕಾರಕ್ಕೆ ಈಗಾಗಲೇ 37 ಕೆಜಿ ಚಿನ್ನವನ್ನು ಬಳಕೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    ಈ ಕುರಿತು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ಮಾತನಾಡಿ, ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ  ದಾನವಾಗಿ ಬಂದಿದೆ. ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಹೊದಿಕೆಗೆ ಬಳಸಲಾಗಿದೆ. ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ವಿನ್ಯಾಸದ ಚಿನ್ನದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

    2021ರ ಡಿಸೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮವನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಿದ್ದರು. ಅದಕ್ಕೂ ಮೊದಲೇ ದಾನಿಯು ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಾವು 60 ಕೆಜಿ ಚಿನ್ನವನ್ನು ದೇವಸ್ಥಾನಕ್ಕೆ ದಾನವಾಗಿ ನೀಡುವುದಾಗಿ ಹೇಳಿದ್ದರು. ದೇವಾಲಯದ ಅಧಿಕಾರಿಗಳು ಅವರು ದೇಣಿಗೆ ನೀಡಿದ ಚಿನ್ನವನ್ನು ಗರ್ಭಗುಡಿಯ ಒಳಗೋಡೆಯ ಚಿನ್ನದ ಲೇಪನಕ್ಕಾಗಿ ಮತ್ತು ಮುಖ್ಯ ದೇವಾಲಯದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸುವ ಯೋಜನೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ

    ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳು ಬಾಗಿಲಿನ ಹೊರಗಿನಿಂದ ದೇವರನ್ನು ನೋಡುವ ಮೂಲಕ ಪ್ರಾರ್ಥನೆ ಸಲ್ಲಿಸುವಾಗ ಗೋಡೆಗಳ ಮೇಲೆ ಚಿನ್ನದ ಲೇಪನದ ದೃಶ್ಯವನ್ನು ನೋಡಬಹುದು.

  • ದೇವರ ದರ್ಶನಕ್ಕೆಂದು ಹೋದವರು ದರ್ಶನ ಪಡೆಯುವ ಮೊದಲೇ ಪ್ರಾಣ ಬಿಟ್ರು

    ದೇವರ ದರ್ಶನಕ್ಕೆಂದು ಹೋದವರು ದರ್ಶನ ಪಡೆಯುವ ಮೊದಲೇ ಪ್ರಾಣ ಬಿಟ್ರು

    ಗದಗ: ಮಹಾಶಿವರಾತ್ರಿ ಅಂಗವಾಗಿ ದೇವರ ದರ್ಶನಕ್ಕೆಂದು ಬಂದ ವಿದ್ಯಾರ್ಥಿಗಳು, ನದಿ ಸ್ನಾನದ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಬಳಿ ತುಂಗಭದ್ರಾ ನದಿನಲ್ಲಿ ನಡೆದಿದೆ.

    ಅಖಿಲೇಶ್ ಹಾಗೂ ಶರಣಗೌಡ ಮೃತರಾಗಿದ್ದಾರೆ. ಸುಕ್ಷೇತ್ರ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಇಬ್ಬರು ವಿದ್ಯಾರ್ಥಿಗಳು ಬೆಳಿಗ್ಗೆ ಬಂದಿದ್ದರು. ದೇವರ ದರ್ಶನಕ್ಕೂ ಮೊದಲು ನದಿ ಸ್ನಾನಕ್ಕೆ ತೆರಳಿದ್ದರು. ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!

    POLICE JEEP

    ಮೃತರು 9ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಇವರು ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾನಿಲಯದ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಸಾಯಂಕಾಲ ಹಬ್ಬಕ್ಕೆ ಊರಿಗೆ ಹೋಗುವುದಾಗಿ ಹಾಸ್ಟೆಲ್ ವಾರ್ಡನ್‍ಗೆ ಹೇಳಿ ಬಂದಿದ್ದಾರೆ. ಇಂದು ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಈಜು ತಜ್ಞರಿಂದ ಮೃತದೇಹ ಹೊರ ತೆಗೆಯಲಾಯಿತು. ಈ ಕುರಿತು ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: CBI ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ಹಣ, ಕೆಜಿಗಟ್ಟಲೆ ಚಿನ್ನದೋಚಿದರು!