Tag: ದೇವಸ್ಥಾನ

  • ಕೊಲ್ಲೂರಮ್ಮನ ದರ್ಶನದಿಂದ ಮನಸ್ಸಿಗೆ ಖುಷಿಯಾಗಿದೆ: ನಿರ್ಮಲಾ ಸೀತಾರಾಮನ್

    ಕೊಲ್ಲೂರಮ್ಮನ ದರ್ಶನದಿಂದ ಮನಸ್ಸಿಗೆ ಖುಷಿಯಾಗಿದೆ: ನಿರ್ಮಲಾ ಸೀತಾರಾಮನ್

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇವರ ವಿಶೇಷ ದರ್ಶನ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ವಿತ್ತ ಸಚಿವೆ ಉಡುಪಿಯಲ್ಲಿ ಎಡೆಬಿಡದ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.

    ಶುಕ್ರವಾರ ರಾತ್ರಿ ಮಣಿಪಾಲಕ್ಕೆ ಬಂದಿದ್ದ ಅವರು, ಕೊಲ್ಲೂರಿಗೆ ಭೇಟಿಯಾಗಿದ್ದಾರೆ. ಕೊಲ್ಲೂರು ದೇವಸ್ಥಾನದ ಪರವಾಗಿ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತ ಮಾಡಿದರು. ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ವಿಶೇಷ ದರ್ಶನ ಮಾಡಿದ್ದಾರೆ. ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದ್ದಾರೆ. ನಂತರ ಕೊಲ್ಲೂರಿನ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳನ್ನು ಸಂದರ್ಶಿಸಿ ಮಹಾ ಪೂಜೆಯಲ್ಲಿ ಭಾಗಿಯಾದರು.

    ಸಚಿವೆ ನಿರ್ಮಲಾ ಸೀತಾರಾಮನ್ ಮಾವ ಜೊತೆಗಿದ್ದು, ದೇವರ ದರ್ಶನ ಮಾಡಿದರು. ದೇವಸ್ಥಾನದ ಯಜ್ಞಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾದರು. ಕೇಂದ್ರ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬಿಜೆಪಿಯ ಕಾರ್ಯಕರ್ತರು ಸ್ಥಳೀಯ ನಾಯಕರು ಭೇಟಿಯಾದರು. ಸುಮಾರು 20 ನಿಮಿಷಗಳ ಕಾಲ ಸಚಿವೆ ಚರ್ಚಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಇದನ್ನೂ ಓದಿ: ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್

    ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರ ಜೊತೆ ಸಮಾಲೋಚನೆ ಮಾತುಕತೆ ಮಾಡಿದ ನಿರ್ಮಲಾ ಸೀತಾರಾಮನ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಆಗಿದ್ದೇನೆ ದೇವರ ದರ್ಶನ, ಚಂಡಿಕಾಹೋಮದ ಸೇವೆಯಿಂದ ಮನಸ್ಸಿಗೆ ಖುಷಿಯಾಗಿದೆ ಎಂದು ಹೇಳಿದರು. ಮುಂದೆ ಮತ್ತೆ ಕ್ಷೇತ್ರಕ್ಕೆ ಭೇಟಿಕೊಡುವುದಾಗಿ ಹೇಳಿದರು. ಇದನ್ನೂ ಓದಿ: 2 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ

  • ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ ಡಿಕೆಶಿ

    ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ ಡಿಕೆಶಿ

    ಬೆಂಗಳೂರು: ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ.

    ಮೇ 13,14, 15 ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್‌ ಚಿಂತಕರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಭಾಗಿಯಾಗಲಿರುವ ಡಿಕೆಶಿ ಕಾರ್ಯಕ್ರಮ ಮುಗಿದ ಬಳಿಕ ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ನನ್ನನ್ನು ತಿಹಾರ್ ಜೈಲಿಗಾದ್ರೂ ಹಾಕಲಿ, ಪರಪ್ಪನ ಅಗ್ರಹಾರ ಜೈಲಿಗಾದ್ರೂ ಹಾಕಲಿ ಹೆದರಲ್ಲ: ಡಿಕೆಶಿ

    ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಾದ ಕೇದರಾನಾಥ, ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್‌ ತೆರಳಲಿದ್ದಾರೆ. ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಡಿಕೆಶಿ ಕರ್ನಾಟಕಕ್ಕೆ ಮರಳಲಿದ್ದಾರೆ.

  • ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಬೆಂಗಳೂರು: ದೇವಸ್ಥಾನಗಳಲ್ಲಿ ಧ್ವನಿವರ್ಧಕ ಬಳಸಲು ಕರೆ ಕೊಟ್ಟವರು ಭಯೋತ್ಪಾದಕರು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌ ಹೇಳಿದ್ದಾರೆ.

    ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಯಾರು ಈ ಸುಪ್ರಭಾತ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು. ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (ಯುಎಪಿಎ) ಕಾಯ್ದೆಯ ಅಡಿಯಲ್ಲಿ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

     
    ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ಸಂಘ ಪರಿವಾರದ ವಿವಿಧ ಆಕ್ಟೋಪಸ್ ಇದ್ದಂತೆ. ಎಲ್ಲೆಲ್ಲಿ ಶಾಂತಿ ಕದಡಲು ಪ್ರಯತ್ನ ಮಾಡುತ್ತಿದ್ದಾರೋ ಅವರನ್ನು ಭಯೋತ್ಪಾದಕರು ಅಂತಾ ಯುಎಪಿಎ ಅಡಿಯಲ್ಲಿ ಬಂಧಿಸಬೇಕು ಎಂದು ತಿಳಿಸಿದರು.

  • ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ

    ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ

    ಹಾಸನ: ಆಜಾನ್ ವಿರುದ್ಧ ಶ್ರೀರಾಮಸೇನೆ ಸಂಘಟನೆ ವತಿಯಿಂದ ಹಾಸನದ ದೇವಸ್ಥಾನಗಳಲ್ಲಿ ರಾಮಜಪ, ಶಿವನಜಪ ಹಮ್ಮಿಕೊಳ್ಳಲಾಗಿದೆ.

    ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ, ಸಂಗಮೇಶ್ವರ ದೇವಾಲಯದಲ್ಲಿ ಇಂದಿನಿಂದ ಮೈಕ್ ಮೂಲಕ ದೇವರ ಜಪ ಮಾಡುವುದಕ್ಕೆ ಚಾಲನೆ ನೀಡಲಾಯಿತು. ಶ್ರೀರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಮತ್ತು ಪ್ರಧಾನ ಕಾರ್ಯದರ್ಶಿ ಹೇಮಂತ್ ಬೇಲೂರು ಬೆಳಗ್ಗೆ ಐದು ಗಂಟೆಗೆ ಮೈಕ್ ಮೂಲಕ ರಾಮಜಪ, ಶಿವನಜಪ ಆರಂಭಿಸಿದರು. ಇದನ್ನೂ ಓದಿ:  500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಇನ್ನು ಮುಂದೆ ಪ್ರತಿದಿನ ದೇವಾಲಯದಲ್ಲಿ ಸುಪ್ರಭಾತ, ಭಜನೆ, ರಾಮಜಪವನ್ನು ಮೈಕ್‍ನಲ್ಲಿ ಹಾಕಲಾಗುವುದು ಎಂದು ತಿಳಿಸಿದರು. ನಾವು ಮೈಕ್ ಮೂಲಕ ಸುಪ್ರಭಾತ, ಭಜನೆ, ಜಪ ಮಾಡಬಾರದು ಎಂದರೆ ಬೇರೆ ಧರ್ಮದವರಿಗೂ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

  • ಈ ಸರ್ಕಾರಕ್ಕೆ ಗಟ್ಸ್, ತಾಕತ್ತು ಇಲ್ಲ- ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ

    ಈ ಸರ್ಕಾರಕ್ಕೆ ಗಟ್ಸ್, ತಾಕತ್ತು ಇಲ್ಲ- ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ

    ಮಂಡ್ಯ: ಗಲಭೆ ಅಶಾಂತಿ ಎಲ್ಲವೂ ಮಸೀದಿಯ ಮೈಕ್ ಮೂಲಕ ಆಗುತ್ತಿದೆ. ಆದ್ದರಿಂದಲೇ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಅವರು ಏಕೆ ಗಟ್ಸ್‌ ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

    DVG PRAMODH MUTHALIK
    ಸಾಂದರ್ಭಿಕ ಚಿತ್ರ

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈಕ್‌ಗಳನ್ನು ನಿಷೇಧಿಸುವ ಕೆಲಸ ನಮ್ಮ ರಾಜ್ಯದಲ್ಲಿ ಏಕೆ ಆ ಕೆಲಸ ಆಗುತ್ತಿಲ್ಲ? ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರಗ ಜ್ಞಾನೇಂದ್ರ ಅವರು ಏಕೆ ಯೋಗಿ ರೀತಿ ಗಡ್ಸ್ ತೋರಿಸುತ್ತಿಲ್ಲ? ಎಂದು ಪ್ರಶ್ನಿಸಿರುವ ಮುತಾಲಿಕ್, ಸುಪ್ರೀಂ ಆದೇಶ ಎಲ್ಲರಿಗೂ ಒಂದೇ. ನೀವು ಹೊಸ ನಿಯಮ ಮಾಡಬೇಕಿಲ್ಲ. ಸರ್ಕಾರ ಆದೇಶ ಪಾಲಿಸದೇ ಇರೋದ್ರಿಂದ ನಮ್ಮ ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ MLAಗಳು ಜೈಲಿಗೆ ಏಕೆ ಹೋಗಿದ್ರು: ಕಟೀಲ್‍ಗೆ ಡಿಕೆಶಿ ಪ್ರಶ್ನೆ

    Pramod Muthalik, CM Basavaraj Bommai

    ನಾಳೆಯಿಂದಲೇ ಹಿಂದೂ ಸಂಘಟನೆಗಳಿಂದ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ ಹಾಗೂ ಭಕ್ತಿಗೀತೆಗಳ ಪ್ರಸಾರ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮಂಡ್ಯದ ಕಲ್ಲಹಳ್ಳಿಯ ಹನುಮ ಮಂದಿರ ಸೇರಿದಂತೆ 3 ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಚಾಲನೆ ನೀಡಲಾಗುತ್ತಿದೆ. ನಾಳೆಯ ಅಭಿಯಾನ ತಡೆಯಲು ಬಂದ್ರೆ ಸಂಘರ್ಷ ಗ್ಯಾರೆಂಟಿ. ಪೊಲೀಸರು ನಮ್ಮ ಅಭಿಯಾನ ತಡೆಯುವುದಲ್ಲ, ಮಸೀದಿಗಳಲ್ಲಿ ಮೈಕ್ ಅಳವಡಿಸುವುದನ್ನು ತಡೆಯಲಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವ ತಾಯಂದಿರ ದಿನಾಚರಣೆ – 600ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ

    ನಮ್ಮ ಸಂಘಟನೆ ಕಾರ್ಯಕರ್ತರು ರಾಜ್ಯದಾದ್ಯಂತ ದೇವಾಲಯಗಳಲ್ಲಿ ಅಭಿಯಾನ ನಡೆಸಲು ಮನವಿ ಮಾಡಿದ್ದಾರೆ. ನಾಳೆಯಿಂದ ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಕ್ತಿಗೀತೆಗಳನ್ನು ಹಾಕ್ತಾರೆ. ಬೆಳಿಗ್ಗೆ 5 ಗಂಟೆಗೆ ಹಾಕಲು ಅಭಿಯಾನ ಆರಂಭಿಸಿದ್ದು, ದಿನಕ್ಕೆ 4 ಬಾರಿ ಮಸೀದಿ ಅಜಾನ್ ಮೊಳಗುವ ವೇಳೆ ಭಕ್ತಿಗೀತೆ ಹಾಕುವ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.

    Pramod Muthalik, CM Basavaraj Bommai

    ಬೆಳಗ್ಗೆ 5 ಗಂಟೆಗೆ ಮೈಕ್ ಹಾಕಲು ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಆದೇಶವೇ ಹೇಳಿದೆ. ಆದರೆ ಮಸೀದಿಗಳಲ್ಲಿ ಬೆಳಗ್ಗಿನ ಜಾವ ಆಜಾನ್ ಕೂಗುತ್ತಾರೆ. ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಆದೇಶ ಉಲ್ಲಂಘಿಸುತ್ತಿದ್ದೇವೆ. ನಾಳೆ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಸರ್ಕಾರದಿಂದಲೇ ಬೆದರಿಕೆ: ರಾಜ್ಯದ್ಯಾಂತ ಸುಮಾರು ಸಾವಿರ ದೇವಾಲಯಗಳನ್ನು ಸಂಪರ್ಕಿಸಿದ್ದೇವೆ. ದೇವಾಲಯದ ಅರ್ಚಕರು, ಟ್ರಸ್ಟ್ನವರು ಸಂತೋಷದಿAದಲೇ ಒಪ್ಪಿದ್ದಾರೆ. ಬೆಳಗ್ಗಿನ ಜಾವ ಭಕ್ತಿ ಗೀತೆ, ಹನುಮಾನ್ ಚಾಲೀಸಾ ಹಾಕಲು ಮುಂದಾಗಿದ್ದಾರೆ. ಎಲ್ಲರಲ್ಲೂ ಸಂತೋಷ ಇದೆ, ಆಕ್ರೋಶವೂ ಇದೆ. ಏಕೆಂದರೆ ಮುಸ್ಲಿಂರ ಉದ್ಧಟತನ ಹೆಚ್ಚಾಗಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ. ನಮ್ಮ ಅಭಿಯಾನವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಾವು ಸಂಪರ್ಕಿಸಿದ ದೇವಾಲಯಗಳಿಗೆ ಹೋಗಿ ಹೆದರಿಸುತ್ತಿದ್ದಾರೆ. ಈ ದಾದ ಗಿರಿ ನಡೆಯಲ್ಲ, ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ ಎಂದು ಸವಾಲು ಹಾಕಿದ್ದಾರೆ.

  • ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

    ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

    ಬೆಂಗಳೂರು: ಹಿಜಬ್, ಹಲಾಲ್, ವ್ಯಾಪಾರ ಬ್ಯಾನ್ ಬಳಿಕ ರಾಜ್ಯದಲ್ಲಿ ಆಜಾನ್ ಗಲಾಟೆ ತಾರಕಕ್ಕೇರಿದೆ. ಆಜಾನ್ ಕೂಗಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ನಾಳೆಯಿಂದ ಬೆಳಗ್ಗೆ 5 ಹಿಂದೂ ದೇವಾಲಯಗಳಲ್ಲಿ, ಮಠಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಹಾಗೂ ಸುಪ್ರಭಾತವನ್ನು, ಮೈಕ್ ಮೂಲಕ ಪಠಿಸುವ ಆಂದೋಲನಕ್ಕೆ ಶ್ರೀರಾಮ ಸೇನೆ ಮುಂದಾಗಿದೆ. ಈ ಅಭಿಯಾನಕ್ಕೆ ಕೈಜೋಡಿಸುವಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದಾರೆ.

    ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ ಶ್ರೀರಾಮಸೇನೆ ಸದಸ್ಯರು ಬೆಳಗ್ಗಿನ ಜಾವ ದೇವಸ್ಥಾನ ಮತ್ತು ಮಠದ ಮೈಕ್‍ನಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕುವಂತೆ ಮನವಿ ಪತ್ರ ನೀಡುತ್ತಿದ್ದಾರೆ. ಹಾಸನದಲ್ಲೂ ಅಭಿಯಾನಕ್ಕೆ ಕೈ ಜೋಡಿಸಲಿದ್ದು, ಪ್ರತಿನಿತ್ಯ ಮೈಕ್ ಮೂಲಕ ಭಜನೆ ಮಾಡುವುದಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ

    ಇತ್ತ ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆ ಮೊಳಗಿಸುವ ಅಭಿಯಾನಕ್ಕೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ. ಧಾರವಾಡ ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನ, ನಗರದ ತುಳಜಾ ಭವಾನಿ ದೇವಸ್ಥಾನ, ಶಿವಾಲಯ, ದತ್ತಾತ್ರೇಯ ದೇವಸ್ಥಾನ ಸೇರಿ ಹಲವು ದೇವಸ್ಥಾನ ಕಮಿಟಿಯವರು ನಿರ್ಧರಿಸಿದ್ದಾರೆ.

    ಉಡುಪಿಯಲ್ಲೂ ಆಜಾನ್ ವರ್ಸಸ್ ಹನುಮಾನ್ ಚಾಲೀಸಾಗೆ ಬೆಂಬಲ ಸೂಚಿಸಲಾಗಿದೆ. ಒಟ್ಟಿನಲ್ಲಿ ನಾಳೆಯಿಂದ ಮೈಕ್ ವರ್ಸಸ್ ಹನುಮಾನ್ ಚಾಲೀಸಾ ದಂಗಲ್ ಜೋರಾಗಲಿದ್ದು, ಮತ್ತೊಂದು ಆಯಾಮದಲ್ಲಿ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಲಿದೆ.

  • ಮೇ 9 ರಿಂದ ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಲಿ: ಮುತಾಲಿಕ್

    ಮೇ 9 ರಿಂದ ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಲಿ: ಮುತಾಲಿಕ್

    ಧಾರವಾಡ: ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮೇ.9 ರಿಂದ ಬೆಳಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ಸುಪ್ರಭಾತ ಹಾಗೂ ಓಂಕಾರ ಮೊಳಗಿಸುವಂತೆ ದೇವಸ್ಥಾನದ ಕಮಿಟಿಯವರಿಗೆ ಹಾಗೂ ಅರ್ಚಕರಿಗೆ ಮನವಿ ಸಲ್ಲಿಸಿದ್ದಾರೆ.

    ಮಸೀದಿಗಳ ಮೇಲೆ ಇರುವ ಧ್ವನಿ ವರ್ಧಕಗಳಿಂದ ಬರುವ ಶಬ್ದವನ್ನು ನಿಯಂತ್ರಿಸುವಂತೆ ಮುತಾಲಿಕ್ ಅವರು ಈ ಹಿಂದೆಯೇ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇಂತಿಷ್ಟೇ ಶಬ್ದ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಮಸೀದಿಗಳು ಅದನ್ನು ಉಲ್ಲಂಘಿಸುತ್ತಿವೆ. ಹೀಗಾಗಿ ಹಿಂದೂ ದೇವಾಲಯಗಳಲ್ಲೂ ಸುಪ್ರಭಾತ ಹಾಗೂ ಓಂಕಾರ ನಾದ ಮೊಳಗಿಸುವಂತೆ ಅಭಿಯಾನವನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ

    ಧಾರವಾಡದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮುತಾಲಿಕ್, ಮೇ.9 ರಿಂದ ಬೆಳಗ್ಗೆ 5 ಗಂಟೆಯಿಂದಲೇ ಸುಪ್ರಭಾತ ಹಾಕುವಂತೆ ಮನವಿ ಮಾಡಿದ್ದು, ಮಸೀದಿಯಲ್ಲಿರುವ ಧ್ವನಿ ವರ್ಧಕ ತೆರವಿಗೆ ಸರ್ಕಾರಕ್ಕೆ ಹಿಂದೂ ಪರ ಸಂಘಟನೆಗಳು ಗಡುವು ನೀಡಿದೆ.

  • ಸುಪ್ರಭಾತ ಸೇವೆಗೆ ಅನುಮತಿ ನೀಡಿ- ಹಿಂದೂ ಮುಖಂಡರಿಂದ ಮತ್ತೊಂದು ಬೇಡಿಕೆ

    ಸುಪ್ರಭಾತ ಸೇವೆಗೆ ಅನುಮತಿ ನೀಡಿ- ಹಿಂದೂ ಮುಖಂಡರಿಂದ ಮತ್ತೊಂದು ಬೇಡಿಕೆ

    ಬೆಂಗಳೂರು: ಅಜಾನ್‌ ವಿವಾದದ ಬಿಸಿ ಇರುವಾಗಲೇ ಹಿಂದೂ ಮುಖಂಡರು ಮತ್ತೊಂದು ಬೇಡಿಕೆ ಇಟ್ಟಿದ್ದು, ಹಿಂದೂ ದೇವಾಲಯಗಳಲ್ಲಿ ಸುಪ್ರಭಾತ ಸೇವೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.

    ರಾಜ್ಯದಲ್ಲಿ ಕಳೆದ ಐದು ತಿಂಗಳಿಂದ ಧರ್ಮ ದಂಗಲ್ ನಡೆಯುತ್ತಿದೆ. ಹಿಜಬ್, ಹಲಾಲ್, ಆಜಾನ್ ಹೀಗೆ ಅನೇಕ ವಿಷಯಗಳಲ್ಲಿ ವಿವಾದ ನಡೆಯುತ್ತಿದೆ. ಇದೆಲ್ಲದರ ಬಿಸಿ ಇನ್ನೂ ಇರುವಾಗಲೇ ಹಿಂದೂ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಹರ್ಷ ಮುತಾಲಿಕ್ ಧಾರ್ಮಿಕ ದತ್ತಿಗೆ ಮನವಿ ಸಲ್ಲಿಸಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆಗೆ ಅನುಮತಿ ನೀಡಿ ಎಂದಿದ್ದಾರೆ.

    ಮನವಿಯಲ್ಲಿ ಏನಿದೆ?
    ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಪ್ರತಿದಿನ ಬೆಳಗ್ಗೆ ಸುಪ್ರಭಾತ ಹಾಕಲು ಹಾಗೂ ವಿಶೇಷ ದಿನಗಳಲ್ಲಿ ಪೂಜೆ ಮತ್ತು ಕೈಕರ್ಯಗಳನ್ನು ಮೈಕ್‍ನ ಮೂಲಕ ಪಠಿಸಲು ಸರಿಯಾದ ಉಪಕರಣಗಳನ್ನು ಬಳಸಲು ನೀಡಬೇಕು. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನ ದೇಗುಲದಲ್ಲಿ ಹುಂಡಿ ಹಣ ಕಳವು ಮಾಡುತ್ತಿದ್ದವನಿಗೆ ಸ್ಥಳೀಯರಿಂದ ಧರ್ಮದೇಟು

    ದೇವಸ್ಥಾನಗಳಲ್ಲಿ ಸುಪ್ರಭಾತ, ಪೂಜಾ ಮಂತ್ರ ಪಠಿಸುವುದನ್ನು ಭಕ್ತಾದಿಗಳಿಗೆ ಮಟ್ಟಿಸಲು ಮೈಕ್ ಅಗತ್ಯವಾಗಿದೆ. ಹೀಗಾಗಿ ಲೌಡ್ ಸ್ಪೀಕರ್, ಸೌಂಡ್ ಸಿಸ್ಟಂ, ಮೈಕ್ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪುರದಮ್ಮ ಕಾಯ್ತಿದ್ದಾಳೆ, ಕಾಡಿಗೆ ಬೆಂಕಿ ಹಾಕಿದರೆ ಜೀವನ ಸರ್ವನಾಶ – ಅರಣ್ಯದಲ್ಲಿ ಬ್ಯಾನರ್

  • ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಪ್ರಾಚೀನ ಕಾಲದ ದೇವಸ್ಥಾನ ಪತ್ತೆ

    ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಪ್ರಾಚೀನ ಕಾಲದ ದೇವಸ್ಥಾನ ಪತ್ತೆ

    ಮಂಗಳೂರು: ನವೀಕರಣ ಮಾಡಲೆಂದು ಮಸೀದಿ ಕೆಡವಿದಾಗ ಅದರಲ್ಲಿ ಪ್ರಾಚೀನ ಕಾಲದ ದೇವಸ್ಥಾನ ಪತ್ತೆಯಾಗಿದೆ. ಈ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ನಡೆದಿದೆ.

    ಮಳಲಿಯ ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣದ ಸಲುವಾಗಿ ಅದರ ಮುಂಭಾಗವನ್ನು ಕೆಡವಲಾಗಿತ್ತು. ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿವೆ. ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರೋ ಸಾಧ್ಯತೆ ಇದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಪುರಂದರ ಭೇಟಿ ನೀಡಿದ್ದಾರೆ. ಇದೇ ವೇಳೆ ವಿಶ್ವಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಭೇಟಿ ಕೊಟ್ಟಿದ್ದಾರೆ. ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಮುಂದಾಗಿದ್ದಾರೆ.

    ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಅದರಂತೆ ದರ್ಗಾ ಆಡಳಿತ ಮಂಡಳಿ ಕೂಡ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ಸಮ್ಮತಿ ಸೂಚಿಸಿದೆ. ಇದನ್ನೂ ಓದಿ: ಪೂಜೆ ವೇಳೆ ಶಬ್ದ ಮಾಲಿನ್ಯ ಆರೋಪ- ವೇಣುಗೋಪಾಲ ದೇಗುಲಕ್ಕೆ ನೊಟೀಸ್

  • ಪೂಜೆ ವೇಳೆ ಶಬ್ದ ಮಾಲಿನ್ಯ ಆರೋಪ- ವೇಣುಗೋಪಾಲ ದೇಗುಲಕ್ಕೆ ನೊಟೀಸ್

    ಪೂಜೆ ವೇಳೆ ಶಬ್ದ ಮಾಲಿನ್ಯ ಆರೋಪ- ವೇಣುಗೋಪಾಲ ದೇಗುಲಕ್ಕೆ ನೊಟೀಸ್

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಸಿದ್ಧ ವೇಣುಗೋಪಾಲ ಸ್ವಾಮೀ ದೇವಸ್ಥಾನಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ.

    ಮಲ್ಲೇಶ್ವರಂನಾ 11 ನೇ ಕ್ರಾಸ್ ನಲ್ಲಿ ಇರೋ ವೇಣುಗೋಪಾಲ್ ಸ್ವಾಮಿ ದೇವಸ್ಥಾನದ ಪೂಜಾ ಸಮಯದಲ್ಲಿ ಜೋರಾಗಿ ಶಬ್ದ ಮಾಡ್ತಾರೆ ಅಂತಾ ಸಾರ್ವಜನಿಕರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರೆ. ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ನೋಟಿಸ್ ನೀಡಿದ್ದಾರೆ.

    ಜೋರು ಶಬ್ದದಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿತೆ ತೊಂದರೆ ಆಗ್ತಿದೆ. ಶಬ್ದ ವಾಹಕದ ಮೂಲಕ ಶಬ್ಧ ಜೋರು ಮಾಡ್ತಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶದಲ್ಲಿ ರೂಲ್ಸ್ ಫಾಲೋ ಮಾಡುವಂತೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.

    ಪಲ್ಯೂಷನ್ 2000 ನಿಯಮದ ಶೆಡ್ಯೂಲ್ ರೂಲ್ 3(1) ಮತ್ತು 4 (1) ಪ್ರಕಾರ ಬೆಳ್ಳಗ್ಗೆ 6 ರಿಂದ ರಾತ್ರಿ 10ರವರೆಗೂ 55 ಡೆಸಿಬಲ್ ಮತ್ತು ರಾತ್ರಿ 10ರಿಂದ ಬೆಳ್ಳಗ್ಗೆ 6 ಗಂಟೆವರೆಗೂ 45 ಡೆಸಿಬಲ್ ಶಬ್ದ ಮಾಡದಂತೆ ಪೂಜಾ ಸಮಯದಲ್ಲಿ ಶಬ್ದವಾಹಕ ಬಳಸಲು ನೋಟೀಸ್ ನೀಡಲಾಗಿದೆ. Noise pollution 2000 ರೂಲ್ಸ್ ಪ್ರಕಾರನೇ ಶಬ್ದ ಬಳಕೆ ಮಾಡಬೇಕು. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

    ಈ ಸಂಬಂಧ ವೇಣುಗೋಪಾಲ ಸ್ವಾಮಿ ದೇಗುಲದ ಕಾರ್ಯನಿರ್ವಹಣಾಧಿಕಾರಿ, ಮುಜರಾಯಿ ಇಲಾಖೆ ತಹಶೀಲ್ದಾರ್ ಅರವಿಂದ್ ಬಾಬು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಡೆಸಿಬಲ್ ಮೀರುತ್ತಾ ಇದ್ದೀರಿ ಅಂತಾ ಪೊಲೀಸರು ನೊಟೀಸ್ ಕೊಟ್ಟಿದ್ದಾರೆ. ಸಾರ್ವಜನಿಕರಿಂದ ಪೊಲೀಸರಿಗೆ ಮೌಖಿಕ ದೂರು ಹೋಗಿದೆಯಂತೆ. ನಾವು ರೂಲ್ಸ್ ಫಾಲೋ ಮಾಡ್ತಾ ಇದ್ದೇವೆ. ರೂಲ್ಸ್ ಬ್ರೇಕ್ ಮಾಡ್ತಾ ಇಲ್ಲ. ಆದರೂ ಯಾಕೆ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.

    ನಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡಿ ಈ ನೋಟೀಸ್ ಗೆ ರಿಪ್ಲೇ ಕೊಡುತ್ತೇನೆ. ಬೆಳಗ್ಗೆ ಪೂಜೆ ಮಾಡ್ತಾರೆ. ಆ ಸಮಯದಲ್ಲಿ ಗಂಟೆ ಮತ್ತು ತಮಟೆ ಶಬ್ದ ಮಾಡ್ತಾರೆ ಅಷ್ಟೇ. ಆ ಶಬ್ದ ಏನು ನಾವು ಡಿಸಿಬಲ್ ಮೀರಲ್ಲ. ನಾವು ಲೌಡ್ ಸ್ಪೀಕರ್ ಬಳಸಲ್ಲ. ಆದರೂ ಯಾಕೆ ನೋಟಿಸ್ ಕೊಟ್ರು ಅಂತಾ ನಾವು ರಿಪ್ಲೇ ಮಾಡುತ್ತೇವೆ ಎಂದು ತಿಳಿಸಿದರು.