Tag: ದೇವಸ್ಥಾನ

  • ಮತಾಂತರ ನಿಷೇಧ ಮಾಡದಿದ್ದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣವಾಗುತ್ತಿತ್ತು: ಕಾಡಸಿದ್ದೇಶ್ವರ ಶ್ರೀ

    ಮತಾಂತರ ನಿಷೇಧ ಮಾಡದಿದ್ದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣವಾಗುತ್ತಿತ್ತು: ಕಾಡಸಿದ್ದೇಶ್ವರ ಶ್ರೀ

    ಬೆಳಗಾವಿ: ಯಾವುದೇ ಜಾತಿ ಮತ ಪಂಥಗಳಿಂದ ಸ್ವಾಮೀಜಿಗಳಾಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿಗಳಾಗಬೇಕು. ಬಸವರಾಜ ಬೊಮ್ಮಾಯಿ (Basavarj Bommai) ಸರ್ಕಾರ (Government) ಪುಣ್ಯಕ್ಕೆ ಮತಾಂತರ (Conversion) ನಿಷೇಧ ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು ಎಂದು ಕೊಲ್ಲಾಪುರದ ಕನ್ನೇರಿಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ (Kadasiddeshwar Sri)  ಅಭಿಪ್ರಾಯ ವ್ಯಕ್ತಪಡಿಸಿದರು.

    ಕೊಲ್ಲಾಪುರದ ಕನ್ಹೇರಿಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶವಾಗಿದೆ. ಐನೂರಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದಾರೆ. ಮತ್ತಷ್ಟು ಮಠಾಧೀಶರು ಬರುತ್ತಿದ್ದಾರೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣ ಆಗಿದ್ದು, ನಾವು ಮಠಗಳ ಮಾಲೀಕರು ಅಲ್ಲ. ವ್ಯವಸ್ಥಾಪಕರು. ಸಂಸ್ಕಾರ ಕೊಡುವ ಕೆಲಸ ಸ್ವಾಮೀಜಿಗಳು ಮಾಡಬೇಕು. ಗುರುಗಳು ಮತ್ತು ಭಕ್ತರ ಅಂತರ ಕಡಿಮೆ ಆಗಬೇಕು. ಗುರುಗಳು ಭಕ್ತರ ಸಮೀಪ ಹೋಗಬೇಕು ಎಂದರು. ಇದನ್ನೂ ಓದಿ: ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ

    ನಾವು ಸ್ವಾಮೀಜಿಗಳಾದ ಮೇಲೆ ಪೂರ್ವಾಶ್ರಮ ತೊರೆದು ಭಕ್ತರ ಹತ್ತಿರ ಹೋಗಬೇಕು. ಯಾವುದೇ ಜಾತಿ ಮತ, ಪಂಥಗಳಿಂದ ಸ್ವಾಮೀಜಿಗಳಾಗಬಾರದು. ಜಾತಿಯಿಂದ ಮಠಾಧೀಶರಾಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿಗಳಾಗಬೇಕು. ನಮ್ಮ ಸ್ವಾಮೀಜಿಗಳು ಮತಾಂತರ ತಡೆಯಬೇಕು. ಇಲ್ಲವಾದ್ರೆ ಧರ್ಮಾಂತರ, ಮತಾಂತರ ಆಗಲ್ಲ ದೇಶಾಂತರ ಶುರುವಾಗುತ್ತದೆ. ನಮ್ಮ ಬೊಮ್ಮಾಯಿ ಸರ್ಕಾರ ಪುಣ್ಯಕ್ಕೆ ಮತಾಂತರ ನಿಷೇಧ ಮಾಡಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್ (Churche), ಮಸೀದಿ (Mosques) ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸಲ್ಲ, ನಾವೇ ಎಡವಿದ್ದೇವೆ. ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬಂದು ಅಣ್ಣ ತಮ್ಮಂದಿರಂತೆ ಇರೋಣ ಎಂದು ನುಡಿದರು. ಇದನ್ನೂ ಓದಿ: ಲಕ್ವಾ ಹೊಡೆದ ವೃದ್ಧೆಗೆ ಸ್ಫೂರ್ತಿಯಾಗಿತ್ತು ಬಾದಲ್ ಚಿತ್ರ

    ದೇಶದಲ್ಲಿ 50 ಲಕ್ಷ ದೇವಸ್ಥಾನ, 10 ಲಕ್ಷ ಮಠಗಳು, ಆಶ್ರಮಗಳು ಇವೆ. ಒಂದೊಂದು ಮಠದಿಂದ ಒಂದೊಂದು ಗ್ರಾಮ ದತ್ತು ತಗೆದುಕೊಂಡರೆ ದೇಶ ಸುಧಾರಣೆ ತುಂಬಾ ಸುಲಭ ಆಗುತ್ತದೆ. ರೈತರು (Farmers) ಮಠಗಳನ್ನು ಕಟ್ಟುತ್ತಾರೆ, ಮಠಗಳು ಭಕ್ತರಿಗಾಗಿ ಕೆಲಸ ಮಾಡಬೇಕು. ಭಕ್ತರ ಹಿತಕ್ಕಾಗಿ ಏನೇನು ಚಟುವಟಿಕೆ ಮಾಡಬೇಕು ಎಂದು ಆಗಾಗ ಕಾರ್ಯಕ್ರಮ ಮಾಡುತ್ತೇವೆ. ಮಠದಲ್ಲಿ ಯಾತ್ರೆಗಳು ಆಗುವಾಗ ಎತ್ತುಗಳ, ಹಸುಗಳ ಪ್ರದರ್ಶನ ಆಗಬೇಕು. ರೈತರಿಗೆ ಒಳ್ಳೆಯ ಸಸಿಗಳು, ದೇಸಿಯ ಬೀಜಗಳು ಮಠದಿಂದ ಕೊಟ್ರೆ ಒಳ್ಳೆಯ ರೀತಿ ಬೆಳೆಯುತ್ತಾರೆ. ಭಕ್ತರಿಗೆ ಒಳ್ಳೆಯ ಆಹಾರ ಸಿಗಬೇಕು. ನಮ್ಮ ಮಠಗಳು ಇಂತಹ ಪೂರೈಕೆ ಕೇಂದ್ರಗಳು ಆಗಬೇಕು ಎಂದರು.

    Live Tv
    [brid partner=56869869 player=32851 video=960834 autoplay=true]

  • ದೇವಾಲಯಕ್ಕೆ ನುಗ್ಗಿ ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

    ದೇವಾಲಯಕ್ಕೆ ನುಗ್ಗಿ ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

    ಢಾಕಾ: ಬಾಂಗ್ಲಾದೇಶದ ( Bangladesh) ಜೆನೈದಾದಲ್ಲಿರುವ ಹಿಂದೂ ದೇವಾಲಯದಲ್ಲಿ (Temple) ದೇವತೆಯ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆ ನಡೆದಿದೆ.

    ದೌತಿಯಾ ಗ್ರಾಮದ ಕಾಳಿ ದೇವಸ್ಥಾನದ ವಿಗ್ರಹವನ್ನು ತುಂಡಾಗಿ ಒಡೆದು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿ ದೇವಸ್ಥಾನದಿಂದ ಅರ್ಧ ಕಿ.ಮೀ ದೂರದ ರಸ್ತೆಯೊಂದರಲ್ಲಿ ವಿಗ್ರಹದ (Idol) ತಲೆಯನ್ನು ಎಸೆದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದೇಗುಲ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಬಾಂಗ್ಲಾದೇಶದಲ್ಲಿ 10 ದಿನಗಳ ವಾರ್ಷಿಕ ದುರ್ಗಾ ಪೂಜೆ ಉತ್ಸವಗಳು ವಿಜಯದಶಮಿ ಮುಗಿದ ನಂತರ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ರೈಲಿಗಿಟ್ಟಿದ್ದ ಟಿಪ್ಪು ಹೆಸರೇಕೆ ತೆಗೆಯಬೇಕಿತ್ತು, ಬೇರೆ ಟ್ರೈನ್‍ಗೆ ಒಡೆಯರ್ ಹೆಸರಿಡಲಿ: ಹೆಚ್.ಡಿ. ರೇವಣ್ಣ

    ಬಾಂಗ್ಲಾ ದೇಶದಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆದಿದ್ದು ಇದೇ ಮೊದಲಲ್ಲ. ಈ ವರ್ಷ ಮಾರ್ಚ್ 17 ರಂದು ಬಾಂಗ್ಲಾ ರಾಜಧಾನಿ ಢಾಕಾದ ಇಸ್ಕಾನ್ ರಾಧಾಕಾಂತ ಜೀವ್ ದೇವಾಲಯವನ್ನು ಧ್ವಂಸಗೊಳಿಸಿ, ವಿಗ್ರಹಗಳನ್ನು ತೆಗೆದುಕೊಂಡು ಹೋಗಿದ್ದರು. ಆ ವೇಳೆ ಹಲವಾರು ಭಕ್ತರನ್ನು ಥಳಿಸಿದ್ದರು. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್‌ ಠಾಣೆ ಕಾರ್ಯಾಚರಣೆ!

    Live Tv
    [brid partner=56869869 player=32851 video=960834 autoplay=true]

  • 500 ವರ್ಷ ಇತಿಹಾಸ ಹೊಂದಿದ ದೇವಸ್ಥಾನಕ್ಕೆ ಭೇಟಿ ನೀಡಿದ ಸೋನಿಯಾ

    500 ವರ್ಷ ಇತಿಹಾಸ ಹೊಂದಿದ ದೇವಸ್ಥಾನಕ್ಕೆ ಭೇಟಿ ನೀಡಿದ ಸೋನಿಯಾ

    ಮೈಸೂರು: ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಅವರು ವಿಜಯದಶಮಿ(Vijayadashami ) ಹಬ್ಬದ ಹಿನ್ನೆಲೆಯಲ್ಲಿ ಹೆಚ್ ಡಿ ಕೋಟಿ ತಾಲ್ಲೂಕಿನಲ್ಲಿರುವ ದೇವಸ್ಥಾನದಲ್ಲಿ(Temple) ಪೂಜೆ ಸಲ್ಲಿಸಿದ್ದಾರೆ.

    ಕಬಿನಿ ಹಿನ್ನಿರಿನಲ್ಲಿರುವ ಭೀಮನಕೊಲ್ಲಿ ದೇವಸ್ಥಾನಕ್ಕೆ(Bheemanakolli Temple) ಭೇಟಿ ನೀಡಿದ ಸೋನಿಯಾ ಗಾಂಧಿ ಮಹದೇಶ್ವರನ ದರ್ಶನ ಪಡೆದರು. ಕಬಿನಿ(Kabini) ಹಿನ್ನಿರಿನಲ್ಲಿರುವ ಮಹದೇಶ್ವರ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇಲ್ಲಿ ದೇವರ ಮೂರ್ತಿಯನ್ನು ತಂದು ಪ್ರತಿಷ್ಠೆ ಮಾಡಿದ್ದಲ್ಲ, ಇದು ಉದ್ಭವ ಮೂರ್ತಿ ಎಂಬ ನಂಬಿಕೆಯಿದೆ.

    ದೇವಸ್ಥಾನಕ್ಕೆ ಭೇಟಿ ನೀಡಿದ ಸೋನಿಯಾಗೆ ಅನುಷಾ ಎಂಬುವವರು ಮಹದೇಶ್ವರ ಸ್ವಾಮಿ ದೇವಸ್ಥಾನ ಹಿನ್ನೆಲೆಯ ಬಗ್ಗೆ ವಿವರಣೆ ನೀಡಿದ್ದಾರೆ. ಸೋನಿಯಾ ಗಾಂಧಿ ಭೇಟಿ ವೇಳೆ ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದರು.

    ಸೋನಿಯಾ ಗಾಂಧಿ ಅವರು ತಮ್ಮ ಪುತ್ರ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯಲ್ಲಿ(Bharat Jodo Yatra) ಪಾಲ್ಗೊಳ್ಳಲು ಸೋಮವಾರ ಆಗಮಿಸಿದ್ದಾರೆ. ಇದನ್ನೂ ಓದಿ: ಕ್ರೀಸ್ ಬಿಟ್ಟರೆ ಉಳಿಗಾಲವಿಲ್ಲ ಸ್ಟಬ್ಸ್‌ಗೆ ಚಹರ್ ವಾರ್ನಿಂಗ್ – ಕಣ್ಸನ್ನೆಯಲ್ಲೇ ಮಾತುಕತೆ

    ಸೋನಿಯಾ ಗಾಂಧಿ ಅವರು ಕೊಡಗಿನ ರೆಸಾರ್ಟ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ವಾಸ್ತವ್ಯ ಹೂಡಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನಲ್ಲಿ ಕೊಡಗಿಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ,ಎಚ್‌.ಡಿ. ಕೋಟೆ ತಾಲೂಕು ಕಬಿನಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೋನಿಯಾ ಗಾಂಧಿ ಅವರು ಶುಕ್ರವಾರ ಬೆಳಗ್ಗೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದೊಳಗೆ ಐಟಮ್ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

    ದೇವಸ್ಥಾನದೊಳಗೆ ಐಟಮ್ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

    ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ (Temple) ಆವರದಲ್ಲಿ ಐಟಮ್ ಸಾಂಗ್‍ವೊಂದಕ್ಕೆ ಡ್ಯಾನ್ಸ್ (Dance) ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ದೇವಸ್ಥಾನದ ಮೆಟ್ಟಿಲಿನಲ್ಲಿ ಡ್ಯಾನ್ಸ್ ಮಾಡಿದ್ದಳು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆದರೆ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಬಜರಂಗದಳದ ಕೆಲವು ಕಾರ್ಯಕರ್ತರು ವಿರೋಧವನ್ನು ವ್ಯಕ್ತಪಡಿಸಿದ್ದರು. ಜೊತೆಗೆ ದೇವಸ್ಥಾನದೊಳಗೆ ಈ ರೀತಿಯ ರೀಲ್ಸ್‌ ಮಾಡಿ ಧಾರ್ಮಿಕ ಭಾವನೆಗೆ ದ್ರೋಹ ಬಗೆದಿದ್ದಾಳೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಈ ಹಿನ್ನೆಲೆಯಲ್ಲಿ ಆ ವೀಡಿಯೋವನ್ನು ಡಿಲೀಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಳು. ಇನ್‍ಸ್ಟಾಗ್ರಾಮ್‍ನಲ್ಲಿ ನೇಹಾಳಿಗೆ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಘಟನೆಗೆ ಸಂಬಂಧಿಸಿ ನೇಹಾ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ. ಇದನ್ನೂ ಓದಿ: ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    Live Tv
    [brid partner=56869869 player=32851 video=960834 autoplay=true]

  • ರಾಂಚಿಯಲ್ಲಿ ಹನುಮಾನ್ ವಿಗ್ರಹ ಧ್ವಂಸ- ಪರಿಸ್ಥಿತಿ ಉದ್ವಿಗ್ನ

    ರಾಂಚಿಯಲ್ಲಿ ಹನುಮಾನ್ ವಿಗ್ರಹ ಧ್ವಂಸ- ಪರಿಸ್ಥಿತಿ ಉದ್ವಿಗ್ನ

    ರಾಂಚಿ: ಜಾರ್ಖಂಡ್‌ನ (Jharkhand) ರಾಂಚಿಯಲ್ಲಿರುವ ದೇವಾಲಯದಲ್ಲಿ ಕೆಲ ಸಮಾಜ ವಿರೋಧಿ ಶಕ್ತಿಗಳು ಹನುಮಾನ್ ವಿಗ್ರಹ (Lord Hanuman Idol) ವನ್ನು ಧ್ವಂಸಗೊಳಿಸಿದ್ದಾರೆ.

    ರಾಂಚಿಯ ಮುಖ್ಯರಸ್ತೆಯಲ್ಲಿರುವ ದೇವಾಲಯದಲ್ಲಿ ಬೃಹತ್ ಹನುಮನ ವಿಗ್ರಹವನ್ನು ಇರಿಸಲಾಗಿತ್ತು. ಇದೀಗ ಕೀಡಿಗೇಡಿಗಳಿಂದ ಕೃತ್ಯ ನಡೆದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದನ್ನೂ ಓದಿ: RSS ಭಯೋತ್ಪಾದಕ ಚಟುವಟಿಕೆ ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ: ಎಂಟಿಬಿ ನಾಗರಾಜ್‌

    ಹನುಮಾನ್ ವಿಗ್ರಹದ ಕೈ ಕಾಲು, ತಲೆ ಹಾಗೂ ಮುಖದ ಭಾಗಕ್ಕೆ ಹಾನಿ ಮಾಡಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು (Jharkhand Police) ಪ್ರಕರಣ ದಾಖಲಿಸಿ ಓರ್ವ ಆರೋಪಿಯನ್ನೂ ಬಂಧಿಸಿದ್ದಾರೆ. ಇದನ್ನೂ ಓದಿ: ರಾಜವರ್ಧನ್ ನಟನೆಯ ‘ಗಜರಾಮ’ನಿಗೆ ಕ್ಲ್ಯಾಪ್ ಮಾಡಿ, ಹಾರೈಸಿದ ಅಭಿಷೇಕ್ ಅಂಬರೀಶ್

    ಪರಿಸ್ಥಿತಿ ನಿಯಂತ್ರಣದಲ್ಲಿಡಲು ದೇಗುಲದ ಸುತ್ತ ಹಾಗೂ ರಾಂಚಿ ನಗರದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನಕ್ಕೆ ತೆರಳುತ್ತಿದ್ದ  ಟ್ರ್ಯಾಕ್ಟರ್‌ ಪಲ್ಟಿ – 10 ಮಂದಿ ದುರ್ಮರಣ

    ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿ – 10 ಮಂದಿ ದುರ್ಮರಣ

    ಲಕ್ನೋ: ದೇವಸ್ಥಾನಕ್ಕೆ (Temple) ತೆರಳುತ್ತಿದ್ದ ಟ್ರ್ಯಾಕ್ಟರ್‌ (Tractor) ಲಕ್ನೋದಲ್ಲಿರುವ ಇಟೌಂಜಾದ ಹೊಂಡಕ್ಕೆ ಪಲ್ಟಿಯಾಗಿ 10 ಮಂದಿ ದುರ್ಮರಣಕ್ಕೀಡಾದ ಭೀಕರ ಘಟನೆ ಉತ್ತರಪ್ರದೇಶದಲ್ಲಿ (UttarPradesh) ನಡೆದಿದೆ.

    ಇಟೌಂಜಾದ ಹೊಂಡಕ್ಕೆ ಟ್ರ್ಯಾಕ್ಟರ್‌ (Tractor) ಪಲ್ಟಿಯಾಗಿ 10 ಜನರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ (SDRF) ತಂಡ 37 ಜನರನ್ನು ರಕ್ಷಿಸಿದೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ 10 ಜನರು ಆಸ್ಪತ್ರೆಯಲ್ಲಿ (Hospital) ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಗೋವಾಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ರಾಜ್ಯದ ಭಾರೀ ವಾಹನಗಳಿಗೆ ತಡೆ

    ಟ್ರ್ಯಾಕ್ಟರ್‌ನಲ್ಲಿ 40ಕ್ಕೂ ಹೆಚ್ಚು ಮಂದಿ ಇದ್ದರು, ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಲಕ್ನೋ ವಿಭಾಗದ ಐಜಿ ಲಕ್ಷ್ಮೀ ಸಿಂಗ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಖಿ ದಾಂಪತ್ಯಕ್ಕೆ ‘ಕೆಟ್ಟದೃಷ್ಟಿ’ ಬೀಳದಿರಲೆಂದು ಮುರುಗನ್ ದೇವರಿಗೆ ಮಹಾಲಕ್ಷ್ಮಿ ರವೀಂದರ್ ಮೊರೆ

    ಸುಖಿ ದಾಂಪತ್ಯಕ್ಕೆ ‘ಕೆಟ್ಟದೃಷ್ಟಿ’ ಬೀಳದಿರಲೆಂದು ಮುರುಗನ್ ದೇವರಿಗೆ ಮಹಾಲಕ್ಷ್ಮಿ ರವೀಂದರ್ ಮೊರೆ

    ಮಿಳು ಕಿರುತೆರೆಯ ನಟಿ ಮಹಾಲಕ್ಷ್ಮೀ ಮತ್ತು ರವೀಂದರ್ ಇತ್ತೀಚೆಗಷ್ಟೇ ತಿರುಚೆಂಡೂರ್ (Tiruchendur) ಮುರುಗನ್ (Murugan) ದೇವಸ್ಥಾನಕ್ಕೆ ಭೇಟಿ ಕೊಟ್ಟು ಮುರುಗನ್ ದೇವರ ಆಶೀರ್ವಾದ ಪಡೆದಿದ್ದಾರೆ. ಮದುವೆಯ ನಂತರ ಅವರು ಟೆಂಪಲ್ ರನ್ ಮಾಡುತ್ತಿದ್ದು, ಮೊನ್ನೆಯಷ್ಟೇ ತಮ್ಮ ಮನೆ ದೇವರಿಗೂ ಹೋಗಿದ್ದರು. ತಮ್ಮ ವೈಹಿವಾಹಿಕ ಜೀವನ ಚೆನ್ನಾಗಿರಲಿ ಎಂದು ಅವರು ದೇವರಿಗೆ ಮೊರೆ ಹೋಗಿದ್ದಾರೆ. ಅಲ್ಲದೇ, ತಾವಷ್ಟೇ ಅಲ್ಲ, ಇತರರಿಗೆ ದೇವರು ಒಳ್ಳೆದು ಮಾಡಲಿ ಎಂದು ಬೇಡಿಕೊಂಡಿದ್ದಾರೆ.

    ಕಿರುತೆರೆಯ ಈ ಜೋಡಿ ಮದುವೆ ಆಗುತ್ತಿದ್ದಂತೆಯೇ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಅದೊಂದು ಮಿಸ್ ಮ್ಯಾಚ್ ಜೋಡಿ ಎಂದು ಕಾಲೆಳೆಯಲಾಯಿತು. ಅಲ್ಲದೇ, ರವೀಂದರ್ ತೂಕದ ವ್ಯಕ್ತಿ ಆಗಿದ್ದರಿಂದ, ಹಣಕ್ಕಾಗಿ ಅಂತವನನ್ನು ಸುಂದರಿ ಮಹಾಲಕ್ಷ್ಮಿ (Mahalakshmi) ಮದುವೆ ಆಗಿದ್ದಾರೆ ಎನ್ನುವ ಆರೋಪ ಕೂಡ ಮಾಡಲಾಯಿತು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದರಿಂದ, ಆ ಕುರಿತು ಟ್ರೋಲ್ ಮಾಡಲಾಯಿತು. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಮದುವೆಯ ನಂತರ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ (Ravinder Chandrasekaran) ಹೆಚ್ಚೆಚ್ಚು ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೂ ಒಟ್ಟೊಟ್ಟಿಗೆ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಜೋಡಿ ಎಲ್ಲಿಯೇ ಹೋದರೂ, ಅಭಿಮಾನಿಗಳು ಮುತ್ತಿಕ್ಕುತ್ತಿದ್ದಾರೆ. ಹಾಗಾಗಿ ಪತಿಯನ್ನು ರಕ್ಷಿಸುವ ಜವಾಬ್ದಾರಿ ಮಹಾಲಕ್ಷ್ಮಿ ಮೇಲೆ ಬಿದ್ದಿದೆ. ಆದಷ್ಟು ಪತಿಯ ಜೊತೆಯೇ ಇದ್ದುಕೊಂಡು ಗಂಡನ ರಕ್ಷಣೆಗೆ ನಿಲ್ಲುತ್ತಾರಂತೆ ಮಹಾಲಕ್ಷ್ಮಿ.

    ನಟಿ ಮಹಾಲಕ್ಷ್ಮಿ ಅವರನ್ನು ಮದುವೆಯಾದ (Marriage) ನಂತರ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ (Temple) ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

    ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ

    ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ

    ಚೆನ್ನೈ: ತಿರುಪತಿ ತಿರುಮಲ ದೇವಸ್ಥಾನಕ್ಕೆ (Temple) ಚೆನ್ನೈ (Chennai) ಮೂಲದ ಮುಸ್ಲಿಂ ದಂಪತಿ (Muslim Couple) 1 ಕೋಟಿ ರೂ. ದೇಣಿಗೆಯನ್ನು (Donate) ನೀಡಿದ್ದಾರೆ.

    ಚೆನ್ನೈ ಮೂಲದ ಮುಸ್ಲಿಂ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ಈ ದೇಣಿಗೆಯನ್ನು ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ (Tirupati) ದೇವಸ್ಥಾನಂ (ಟಿಟಿಡಿ)ಗೆ ನೀಡಿದರು. ಈ ಹಣದಲ್ಲಿ ನೂತನವಾಗಿ ನಿರ್ಮಾಣವಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ 87 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು ಮತ್ತು ಪಾತ್ರೆಗಳು ಮತ್ತು ಎಸ್‍ವಿ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂ. ನೀಡಿರುವುದು ಸೇರಿವೆ. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು

    ಅಬ್ದುಲ್ ಘನಿ ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಕೊರೊನಾ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸಲು ಬಹು ಆಯಾಮದ ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ಅನ್ನು ದೇಣಿಗೆ ನೀಡಿದರು. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತರಕಾರಿ ಸಾಗಿಸಲು ರೂ.35 ಲಕ್ಷದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿಗಳ ಮನೆಗೆ ನುಗ್ಗಿದ ಬುಲ್ಡೋಜರ್

    ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿಗಳ ಮನೆಗೆ ನುಗ್ಗಿದ ಬುಲ್ಡೋಜರ್

    ಭೋಪಾಲ್: ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಆರು ಮಂದಿ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ(Madhya Pradesh) ರೇವಾ ಜಿಲ್ಲೆಯಲ್ಲಿ ನಡೆದಿದೆ.

    ರೇವಾ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ನೈಗರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯು ತನ್ನ ಸ್ನೇಹಿತನೊಂದಿಗೆ(Friend) ದೇವಸ್ಥಾನಕ್ಕೆ(Temple) ಹೋಗಿದ್ದಳು. ಇಬ್ಬರೂ ಹರಟೆ ಹೊಡೆಯುತ್ತಿದ್ದಾಗ ಅಲ್ಲಿಗೆ ಬಂದ ನಾಲ್ವರು ವ್ಯಕ್ತಿಗಳು ಹಾಗೂ ಇಬ್ಬರು ಅಪ್ರಾಪ್ತರು ಸ್ನೇಹಿತನ ಮುಂದೆ ಬಾಲಕಿಯನ್ನು ಎಳೆದೊಯ್ದಿದ್ದಾರೆ. ಆ ಬಳಿಕ ನದಿಯ ಬಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಪ್ರಕಾರ, ಬಾಲಕಿ ಹಾಗೂ ಆಕೆಯ ಸ್ನೇಹಿತ ಎಷ್ಟೇ ಬೇಡಿಕೊಂಡರೂ, ಆರೋಪಿಗಳು ಆಕೆಯನ್ನು ಬಿಡಲಿಲ್ಲ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಬಳಿಕ ಆಕೆಯ ಮೊಬೈಲ್ ಹಾಗೂ ಕಾಲ್ಗೆಜ್ಜೆಯನ್ನು ಕಿತ್ತುಕೊಂಡರು. ಅದಾದ ನಂತರ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    ಘಟನೆ ಬೆನ್ನಲ್ಲೇ ಮೂವರು ಆರೋಪಿಗಳ ಅಕ್ರಮ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮಗೊಳಿಸಲಾಗಿದೆ. ಇನ್ನುಳಿದಂತೆ ಘಟನೆಯಲ್ಲಿ ಭಾಗಿಯಾದ ಉಳಿದ ಮೂವರಿಗೂ ಅದೇ ರೀತಿಯ ಶಿಕ್ಷೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ಆರೋಗ್ಯ ಹದಗೆಟ್ಟಿದ್ದರಿಂದ ಪೊಲೀಸ್ ತಂಡ ಆಸ್ಪತ್ರೆಗೆ ಸಾಗಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    Live Tv
    [brid partner=56869869 player=32851 video=960834 autoplay=true]

  • ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

    ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

    ಹೈದರಾಬಾದ್: ಗಣೇಶ ಹಬ್ಬ (Ganesha Festival) ಮುಗಿದ ಬಳಿಕವೂ ಶ್ರೀಗಣಪತಿ ದೇವಸ್ಥಾನಗಳಲ್ಲಿ (Laksmi Ganapathy) ಪ್ರಸಾದಕ್ಕೆ (Prasad) ಭಾರೀ ಬೇಡಿಕೆ ಶುರುವಾಗಿದೆ. ನೆಚ್ಚಿನ ವಿಘ್ನೇಶ್ವರನಿಗಾಗಿ ಸಿದ್ಧಪಡಿಸಿದ ನೈವೇದ್ಯ ಪ್ರಸಾದ ದಾಖಲೆಯ ಹರಾಜಿಗೆ ಮಾರಾಟವಾಗುತ್ತಿವೆ. ಹಾಗೆಯೇ ಇಲ್ಲಿನ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾಸನ್ ಸಿಟಿಯಲ್ಲಿ 10 ರಿಂದ 12 ಕೆಜಿ ತೂಕದ ಲಡ್ಡು (Ladoo) ಬರೋಬ್ಬರಿ 60.8 ಲಕ್ಷ ರೂ.ಗೆ ಹರಾಜಾಗಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಳಾಪುರದ ಗಣೇಶ ದೇವಸ್ಥಾನದಲ್ಲಿ 24.60 ಲಕ್ಷಕ್ಕೆ ಲಡ್ಡು ಹರಾಜಾಗಿತ್ತು. ನಿನ್ನೆಯೂ ಸಹ ಇದೇ ಶ್ರೀಲಕ್ಷ್ಮೀ ಗಣಪತಿ (Laksmi Ganapathy) ದೇವಸ್ಥಾನದಲ್ಲಿ (Temple) 12 ಕೆಜಿ ಲಡ್ಡು 45 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಇಂದು ಅಷ್ಟೇ ತೂಕದ ಲಡ್ಡು ಬರೋಬ್ಬರಿ 60.8 ಲಕ್ಷಕ್ಕೆ ಹರಾಜಾಗಿ ದಾಖಲೆ ನಿರ್ಮಿಸಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮನೆ ಬಾಗಿಲಿಗೇ RTO ಸೇವೆ – ಕೇಜ್ರಿವಾಲ್

    ಹಿಂದೂ, ಮುಸ್ಲಿಂ, ಕ್ರೈಸ್ತರು ಹಾಗೂ ಸಿಖ್ಖರು ಸೇರಿದಂತೆ ಸುಮಾರು 100 ಮಂದಿ ಒಟ್ಟಾಗಿ ಸೇರಿ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಪ್ರಸಾದವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

    ಗಣೇಶನಿಗೆ ಮಾಡಿದ ಲಡ್ಡೂಗಳನ್ನು ಪ್ರಸಾದವಾಗಿ ಹರಾಜು ಹಾಕುವುದು ಇಲ್ಲಿನ ಸಂಪ್ರದಾಯವಾಗಿದೆ. ಅಲ್ಲದೇ ಲಡ್ಡು ಪಡೆದವರು ದೇವರ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ ಎಂದು ನಂಬಲಾಗಿದೆ. ಲಡ್ಡು ಅವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನೂ ಶ್ರೀಗಣೇಶ ಕರುಣಿಸುತ್ತಾರೆ ಎಂದು ಜನರ ನಂಬಿಕೆಯಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

    ಹರಾಜಿನಿಂದ ಬಂದ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]