Tag: ದೇವಸ್ಥಾನ ಕಾಯ್ದೆ

  • ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರ: ಸಿದ್ದಗಂಗಾ ಶ್ರೀ

    ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರ: ಸಿದ್ದಗಂಗಾ ಶ್ರೀ

    ತುಮಕೂರು: ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಶ್ಲಾಘಿಸಿದರು.

    ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಶೀಘ್ರವೇ ಕಾನೂನು ಮುಕ್ತ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರವಾಗಿದೆ. ಜೊತೆಗೆ ಹೆಚ್ಚಾಗಿ ಬರುವ ಆದಾಯವನ್ನು ಸರ್ಕಾರ ಜನಪರ ಯೋಜನೆಗಳಿಗೆ ಬಳಸಿಕೊಳ್ಳಲಿ. ದೇವಸ್ಥಾನ ಒಬ್ಬರಿಗೆ ಸೇರಿದಂತದಲ್ಲ. ಬೇರೆ ಬೇರೆ ಊರುಗಳಿಂದ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ದೇವಸ್ಥಾನದ ಆದಾಯದಿಂದ ದೇವಸ್ಥಾನದ ಮೂಲಸೌಕರ್ಯ ಹೆಚ್ಚಲಿದೆ. ಅಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ಜೀವನ ಭದ್ರತೆಗೆ ಅನುಕೂಲವಾಗಲಿ ಎಂದು ನುಡಿದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಆಡಳಿತದಲ್ಲಿದ್ದಾಗ ಗೂಂಡಾಗಿರಿ ನಡೆಯುತ್ತಿತ್ತು: ಅಮಿತ್ ಶಾ

    ದೇವಾಲಯದ ಅಗತ್ಯಕ್ಕೆ ಮೀರಿ ಆದಾಯ ಇದ್ದರೆ ಅದನ್ನು ಸರ್ಕಾರ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಲಿ. ಈ ರೀತಿಯ ಕಾನೂನು ತರುವುದು ಒಳ್ಳೆಯದು. ನೀರಾವರಿ ಯೋಜನೆ, ಬಡತನ ನಿರ್ಮೂಲನೆ, ಹಳ್ಳಿಗಳ ರಸ್ತೆ ಅಭಿವೃದ್ಧಿಯಂಥಹ ಒಳ್ಳೆ ಕೆಲಸಕ್ಕೆ ದೇವಸ್ಥಾನದ ದುಡ್ಡು ವಿನಿಯೋಗವಾಗಲಿ. ಈ ಹಣದಿಂದ ಮಾಡಿದ ಸಾಮಾಜಿಕ ಕೆಲಸ ಜನಜನಿತವಾಗುವಂತೆ ಉಳಿಯಲಿ. ಚರ್ಚ್, ಮಸೀದಿ ಅಂತ ಬೇರೆ ಇಲ್ಲ. ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದರು. ಇದನ್ನೂ ಓದಿ: ಭಾರೀ ಮಳೆ ಮುನ್ಸೂಚನೆ ನೀಡಲು ಹವಾಮಾನ ಇಲಾಖೆಯಿಂದ ಸಾಧ್ಯವಾಗಿಲ್ಲ: ಎಂ.ಕೆ.ಸ್ಟಾಲಿನ್

    ಕಾನೂನು ಎಂದ ಮೇಲೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುವಂತಿರಬೇಕು. ಮಠಗಳು ತಮ್ಮದೇ ಆದ ಅಸ್ತಿತ್ವ ಹೊಂದಿವೆ. ತಮ್ಮದೇ ಸೇವೆ ಮಾಡಿಕೊಂಡು ಬಂದಿವೆ. ಸರ್ಕಾರ ಇದರಲ್ಲಿ ಮಧ್ಯಸ್ಥಿಕೆ ವಹಿಸುವಂತಹ ಅವಶ್ಯಕತೆ ಇರೋದಿಲ್ಲ ಎಂದು ತಿಳಿಸಿದರು.

  • ದೇವಸ್ಥಾನಗಳಿಗೆ ಕೈ ಹಾಕಿದ್ರೆ ಸುಟ್ಟು ಹೋಗ್ತಾರೆ: ಡಿಕೆ ಶಿವಕುಮಾರ್

    ದೇವಸ್ಥಾನಗಳಿಗೆ ಕೈ ಹಾಕಿದ್ರೆ ಸುಟ್ಟು ಹೋಗ್ತಾರೆ: ಡಿಕೆ ಶಿವಕುಮಾರ್

    ಬೆಂಗಳೂರು: ಬಿಜೆಪಿಯವರು ದೇವಸ್ಥಾನಗಳಿಗೆ ಕೈ ಹಾಕಿದರೆ ಸುಟ್ಟು ಹೋಗುತ್ತಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಶೀಘ್ರವೇ ಕಾನೂನು ಮುಕ್ತ ಮಾಡುವದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಸಂತೋಷದಲ್ಲಿ ತೇಲುತ್ತಿದ್ದಾರೆ ತೇಲಲಿ. ಬೆಕ್ಕಿನ ಕಣ್ಣಿಗಾದರು ನನ್ನ ಹಾಕಲಿ, ಹುಲಿ ಕಣ್ಣಿಗಾದರು ಹಾಕಲಿ, ಇಲಿ ಕಣ್ಣಿಗಾದರು ಹಾಕಲಿ, ಪೀಳ್ಳಾರತಿಗಾದರು ಹಾಕಲಿ ಬಿಡಿ. ಇಲಿ ಗಣೇಶನ ವಾಹನ, ಬೊಮ್ಮಾಯಿ ಏನಾದರು ಹೇಳಿಕೊಳ್ಳಲಿ ಅವರಿಗೆ ಒಳ್ಳೆಯದಾಗಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಸ್ ಮೇಲೆ ದಾಳಿಗೈದ ಮೂವರು ಉಗ್ರರ ಹತ್ಯೆ

    ಮುಜರಾಯಿ ಇಲಾಖೆಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಇದ್ದಾರೆ. ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಇದೆ. ಅದನ್ನ ತಮ್ಮ ಕಾರ್ಯಕರ್ತರಿಗೆ ನೀಡಲು ಹೋಗಿದ್ದಾರೆ. ನಾವು ಕೂಡ ಹಿಂದೂಗಳು, ನಮಗೂ ಸಂಸ್ಕೃತಿ ಇದೆ. ಬಿಜೆಪಿಯವರು ಜನರ ಕಲ್ಯಾಣಕ್ಕೆ ಬೇಕಾದ ಕಾನೂನು ಮಾಡಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ದೇವಸ್ಥಾನ ಕಾಯ್ದೆ ತರುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುತ್ತಿರುವ ಹಿನ್ನೆಲೆಯಲ್ಲಿ ಭಾವನಾತ್ಮಕವಾದ ವಿಚಾರ ತರುತ್ತಿದ್ದಾರೆ ಎಂದು ದೂರಿದರು.

    ದೇವಸ್ಥಾನಗಳು ಈಗ ಹೇಗಿದೆಯೋ ಹಾಗೇ ಇರಬೇಕು. ದೇವಸ್ಥಾನಕ್ಕೆ ಕೈ ಹಾಕಿದರೆ ಸುಟ್ಟು ಹೋಗುತ್ತಾರೆ. ಎಷ್ಟು ಕಠೋರ ಹೃದಯ ಬಿಜೆಪಿಯವರದ್ದು, ದೇವಾಲಯಕ್ಕೆ ಕೈ ಹಾಕುತ್ತಿದ್ದಾರೆ. ನಾವು ಹಿಂದೂ ವಿರೋಧಿಗಳಲ್ಲ. ಅವರು ಹಿಂದೂ ವಿರೋಧಿಗಳು. ನಾವು ಹಿಂದೂಗಳ ಪರವಾಗಿಯೇ ಇದ್ದೀವೆ. ಜನವರಿ 4ರಂದು ಹಿರಿಯ ನಾಯಕರ ಸಭೆ ಇದ್ದು, ಅವತ್ತು ಈ ವಿಷಯದ ಕುರಿತು ಚರ್ಚೆ ಮಾಡುತ್ತೇವೆ. ಇದನ್ನ ಖಡಾಖಂಡಿತವಾಗಿಯೂ ವಿರೋಧಿಸುತ್ತೇವೆ ಎಂದು ಸಿಡಿದರು. ಇದನ್ನೂ ಓದಿ:  ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ

    ಈಗ ಬನಶಂಕರಿ ದೇವಾಲಯ, ಕಬ್ಬಾಳಮ್ಮ ದೇವಾಲಯ ಎಲ್ಲಾ ಇದೆ. ಪುರೋಹಿತರು ಅವರ ಪಾಡಿಗೆ ಅವರು ಪೂಜೆ ಮಾಡುತ್ತಾ ಹೋಗುತ್ತಿಲ್ಲವೇ ಏನಾಗಿದೆ ಈಗ? ಎಂದು ಪ್ರಶ್ನೀಸಿದರು.