Tag: ದೇವಸ್ಥಾನಗಳು

  • ಮುಜರಾಯಿ ಇಲಾಖೆ ದೇವಸ್ಥಾನಗಳ ಬಳಿ ತಂಬಾಕು ಉತ್ಪನ್ನ ಮಾರಾಟ ನಿಷೇಧ

    ಮುಜರಾಯಿ ಇಲಾಖೆ ದೇವಸ್ಥಾನಗಳ ಬಳಿ ತಂಬಾಕು ಉತ್ಪನ್ನ ಮಾರಾಟ ನಿಷೇಧ

    ಬೆಂಗಳೂರು: ಮುಜರಾಯಿ ಇಲಾಖೆಯ (Muzrai Department) ದೇವಸ್ಥಾನಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು (Tobacco Products) ಮಾರಾಟವನ್ನು ನಿಷೇಧಿಸಿದೆ ಮುಜರಾಯಿ ಇಲಾಖೆ ಆದೇಶ ಪ್ರಕಟಿಸಿದೆ.

    ದೇವಸ್ಥಾನದ ಆಸುಪಾಸು ದೈವಿಕ ಕಳೆ ಇರುವುದರಿಂದ ಭಕ್ತರ ಧಾರ್ಮಿಕತೆಗೆ ಪೂರಕ ವಾತಾವರಣ ಕಲ್ಪಿಸಲು ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿ ಕಾಂಗ್ರೆಸ್ (Congress) ಟ್ವೀಟ್ (Tweet) ಮಾಡಿದೆ. ಇದನ್ನೂ ಓದಿ: ಸೆ.21ರಂದು ಸುಪ್ರೀಂಗೆ ಕೆಆರ್‌ಎಸ್ ಚಿತ್ರಣ ಮನವರಿಕೆ ಮಾಡಿ – ಪ್ರತಿಭಟನಾಕಾರರ ಆಕ್ರೋಶ

    ಟ್ವೀಟ್‌ನಲ್ಲಿ ಏನಿದೆ?
    ‘ಧರ್ಮ’ ಎಂದರೆ ಮನುಷ್ಯನಿಗೆ ಆಧ್ಯಾತ್ಮಿಕ ಅನುಭೂತಿ ನೀಡುವ ಮಾರ್ಗ ಮಾತ್ರ. ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ದೇವಾಲಯಗಳಲ್ಲಿ ಸ್ವಚ್ಛತೆ, ಪ್ರಶಾಂತತೆ ಇರಬೇಕಾಗುತ್ತದೆ.

    ಮುಜುರಾಯಿ ಇಲಾಖೆಯ ದೇವಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: CWRC ಆದೇಶ ಪಾಲನೆ ಅಸಾಧ್ಯ, ತಮಿಳುನಾಡಿಗೆ ನೀರು ಬಿಡಲ್ಲ: ಕೇಂದ್ರಕ್ಕೆ ಸಿಎಂ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಸ್ಥಾನಗಳಿಗೆ `ಶಕ್ತಿ’ ತುಂಬಿದ ನಾರಿಯರು – ಒಂದೇ ತಿಂಗಳಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!

    ದೇವಸ್ಥಾನಗಳಿಗೆ `ಶಕ್ತಿ’ ತುಂಬಿದ ನಾರಿಯರು – ಒಂದೇ ತಿಂಗಳಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!

    – 58 ದೇಗುಲಗಳಿಗೆ ಇ-ಹುಂಡಿ ಮೂಲಕವೇ 19 ಕೋಟಿ ಆದಾಯ

    ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ ನಂತರ ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರಾಜ್ಯಾದ್ಯಂತ ದೇಗುಲಗಳಿಗೆ (Temples) ನಾರಿಮಣಿಯರು ದಾಂಗುಡಿ ಇಡುತ್ತಿದ್ದಾರೆ. ವಾರಾಂತ್ಯಗಳಲ್ಲಂತು ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಜೊತೆಗೆ ಕಾಣಿಕೆಗಳನ್ನೂ ಅರ್ಪಿಸುತ್ತಿದ್ದಾರೆ. ಇದರಿಂದ ಒಂದೇ ತಿಂಗಳಲ್ಲಿ ರಾಜ್ಯದ ದೇವಾಲಯಗಳು ಇನ್ನಷ್ಟು ಶ್ರೀಮಂತವಾಗಿವೆ.

    ಕಳೆದ ಒಂದು ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11ರ ವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ-ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ. ಮ್ಯಾನ್ಯುಯಲ್ ಹುಂಡಿಗಳನ್ನ ತೆರೆದರೆ ದೇವಾಲಯಗಳು ಇನ್ನಷ್ಟು ಶ್ರೀಮಂತವಾಗಲಿದೆ ಎನ್ನಲಾಗಿದೆ.

    ಯಾವ ದೇವಾಲಯಗಳಿಗೆ ಎಷ್ಟು ಆದಾಯ?
    2022ರ ಜೂನ್ 11 ರಿಂದ ಜುಲೈ 15ರ ವರೆಗೆ ಹೋಲಿಕೆ ಮಾಡಿದ್ರೆ 2023 ಜೂನ್ 11 ರಿಂದ ಜುಲೈ 15ರ ವರೆಗೆ ದೇವಸ್ಥಾನಗಳ ಆದಾಯದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.

    ಕುಕ್ಕೆ ಸುಬ್ರಮಣ್ಯ ದೇವಾಲಯ
    ಕಳೆದ ವರ್ಷ – 11.13 ಕೋಟಿ ರೂ.
    ಈ ವರ್ಷ – 11.16 ಕೋಟಿ ರೂ.

    ಮೈಸೂರಿನ ಚಾಮುಂಡೇಶ್ವರಿ
    ಕಳೆದ ವರ್ಷ – 48.01 ಲಕ್ಷ ರೂ.
    ಈ ವರ್ಷ – 3.63 ಕೋಟಿ ರೂ.

    ಯಡಿಯೂರು ಸಿದ್ದಲಿಂಗೇಶ್ವರ
    ಕಳೆದ ವರ್ಷ – 1.20 ಕೋಟಿ ರೂ.
    ಈ ವರ್ಷ – 1.48 ಕೋಟಿ ರೂ.

    ನಂಜನಗೂಡು ಶ್ರೀಕಂಠೇಶ್ವರ
    ಕಳೆದ ವರ್ಷ – 1.05 ಕೋಟಿ ರೂ.
    ಈ ವರ್ಷ – 1.27 ಕೋಟಿ ರೂ.

    ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ
    ಕಳೆದ ವರ್ಷ – 1.02 ಕೋಟಿ ರೂ.
    ಈ ವರ್ಷ – 1.41 ಕೋಟಿ ರೂ.

    ಬೆಂಗಳೂರು ಬನಶಂಕರಿ
    ಕಳೆದ ವರ್ಷ – 65.82 ಲಕ್ಷ ರೂ.
    ಈ ವರ್ಷ – 83.64 ಲಕ್ಷ ರೂ.

    ದ.ಕನ್ನಡ ಮಹಾಲಿಂಗೇಶ್ವರ
    ಕಳೆದ ವರ್ಷ – 43.33 ಲಕ್ಷ ರೂ.
    ಈ ವರ್ಷ – 48.09 ಲಕ್ಷ ರೂ.

    ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ
    ಕಳೆದ ವರ್ಷ – 20.76 ಲಕ್ಷ ರೂ.
    ಈ ವರ್ಷ – 27.98 ಲಕ್ಷ ರೂ.

    ಕನಕಪುರದ ಕಬ್ಬಾಳಮ್ಮ
    ಕಳೆದ ವರ್ಷ – 13.96 ಲಕ್ಷ ರೂ.
    ಈ ವರ್ಷ – 19.64 ಲಕ್ಷ ರೂ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಯೋಧ್ಯೆ ರೀತಿ ಮಳಲಿ ಮಸೀದಿಯನ್ನೂ ವಾಪಾಸ್ ಪಡೆಯುತ್ತೇವೆ: ಮುತಾಲಿಕ್ ಸವಾಲು

    ಅಯೋಧ್ಯೆ ರೀತಿ ಮಳಲಿ ಮಸೀದಿಯನ್ನೂ ವಾಪಾಸ್ ಪಡೆಯುತ್ತೇವೆ: ಮುತಾಲಿಕ್ ಸವಾಲು

    ಮೈಸೂರು: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ತೆಗೆದು ರಾಮ ಮಂದಿರ ಮರಳಿ ಕಟ್ಟಿದ ರೀತಿಯಲ್ಲಿ ಮಳಲಿ ಮಸೀದಿಯ ಜಾಗದಲ್ಲೂ ಮೂಲ ದೇವಸ್ಥಾನ ನಿರ್ಮಿಸುತ್ತೇವೆ. ತಾಕತ್ ಇದ್ದರೆ ತಡೆಯಿರಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

    ಮಳಲಿ ಮಸೀದಿ ಬಿಟ್ಟು ಕೊಡುವುದು ಕನಸಿನ ಮಾತು ಎಂಬ ಎಸ್‍ಡಿಪಿಐ ರಾಜ್ಯಾಧ್ಯಕ್ಷನ ಮಾತಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದ 30 ಸಾವಿರ ಮಸೀದಿಗಳ ಮೂಲದಲ್ಲಿ ದೇವಸ್ಥಾನಗಳಿವೆ. ಅವುಗಳನ್ನು ವಾಪಸ್ ಪಡೆದೇ ತೀರುತ್ತೇವೆ. ಎಸ್‍ಡಿಪಿಐಗೆ ತಾಕತ್ ಇದ್ದರೆ ಅದನ್ನು ತಡೆಯಲಿ. ಇದು ನನ್ನ ಸವಾಲು ಎಂದರು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಮಳಲಿಯ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಅದನ್ನು ವಾಪಸ್ ಪಡೆದೇ ಪಡೆಯುತ್ತೇವೆ. ಎಲ್ಲಾ ಮಸೀದಿಗಳನ್ನು ದೇವಾಲಯ ಒಡೆದು ಕಟ್ಟಲಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ಕಟ್ಟಿದ ರೀತಿ ಮಳಲಿ ಮಸೀದಿಯನ್ನು ಪಡೆಯುತ್ತೇವೆ ಎಂದರು.

    ಅನುಭವ ಮಂಟಪದ ಪವಿತ್ರ ಸ್ಥಾನ ಈಗ ಅಪವಿತ್ರವಾಗಿದೆ. ಪೀರ್ ಪಾಷಾ ಬಂಗ್ಲೆಯನ್ನು ಅನುಭವ ಮಂಟಪವಾಗಿ ಮತ್ತೆ ಬದಲಾಯಿಸಬೇಕು. ಈ ನಿಟ್ಟಿನಲ್ಲಿನ ಜೂನ್ 12 ರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲವಿದೆ ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

    HIJAB 2

    ರಾಜ್ಯದಲ್ಲಿ ಮತ್ತೆ ಆರಂಭವಾದ ಹಿಜಾಬ್ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿ, ಕುರಾನ್ ಶರಿಯಾ ಪ್ರಕಾರ ನಡೆಯಲು ಇದು ಪಾಕಿಸ್ತಾನ ಅಲ್ಲ. ಇದು ಭಾರತ. ಕಾನೂನು ವಿರುದ್ಧ ಹೋದವರನ್ನು ಒದ್ದು ಒಳಗೆ ಹಾಕಿ. ಈ ಮಕ್ಕಳ ಹಿಂದೆ ಮುಲ್ಲಾ ಮೌಲಿಗಳ ಷಡ್ಯಂತ್ರ ಅಡಗಿದೆ ಎಂದು ಕಿಡಿಕಾರಿದರು.

  • ರಾಕಿಗಾಗಿ ದೇಶದ ಪ್ರಮುಖ ದೇಗುಲಗಳಲ್ಲಿ ಅಭಿಮಾನಿಯಿಂದ ಪೂಜೆ

    ರಾಕಿಗಾಗಿ ದೇಶದ ಪ್ರಮುಖ ದೇಗುಲಗಳಲ್ಲಿ ಅಭಿಮಾನಿಯಿಂದ ಪೂಜೆ

    ರಾಯಚೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಶತದಿನೋತ್ಸವ ಆಚರಿಸಲಿ ಅಂತ ರಾಯಚೂರಿನ ಯಶ್ ಅಭಿಮಾನಿಯೊಬ್ಬರು ದೇಶದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ಜಿಲ್ಲೆಯ ಚಿಕ್ಕಸುಗೂರು ಗ್ರಾಮದ ವೈಟಿಪಿಎಸ್ ಗುತ್ತಿಗೆ ಕಾರ್ಮಿಕ ರಾಘವೇಂದ್ರ ಯಶ್ ಅಭಿಮಾನಿ. ಇವರು ಮಂತ್ರಾಲಯ, ಮುಂಬೈ, ಪುಣೆ ಮತ್ತು ಶಿರಿಡಿಯಲ್ಲಿ ಕೆಜಿಎಫ್ ಚಿತ್ರ ಯಶಸ್ವಿಯಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಪುಣೆಯ ಐತಿಹಾಸಿಕ ದಗಡುಶೆಟ್ ಗಣಪನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಅಲ್ಲದೇ ದೇವಾಲಯದಲ್ಲಿ ಗಣೇಶನ ಪಾದಗಳಲ್ಲಿ ಯಶ್ ಭಾವಚಿತ್ರ ಇರುವ ಕೆಜಿಎಫ್ ಚಿತ್ರದ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ.

    ಬಾಲಿವುಡ್‍ನಲ್ಲಿ ತೆರೆಕಾಣುವ ಪ್ರತಿ ಸಿನಿಮಾಕ್ಕೂ ಇದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಚಿತ್ರವನ್ನು ಪ್ರಾರಂಭಿಸಲಾಗುತ್ತದೆ. ಆದರಿಂದ ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಹಲವು ನಟರು ಈ ಗಣೇಶನ ಭಕ್ತರು. ಯಶ್ ಅವರ ಕೆಜಿಎಫ್ ಸಿನಿಮಾ 5 ಭಾಷೆಗಳಲ್ಲಿ ಶತದಿನ ಬಾರಿಸಲಿ ಅಂತ ರಾಘವೇಂದ್ರ ಪೂಜೆ ಸಲ್ಲಿಸಿದ್ದಾರೆ. ಶಿರಡಿ ಸಾಯಿಬಾಬ ಸನ್ನಿಧಾನದಲ್ಲೂ ವಿಶೇಷ ಪೂಜೆ ಮಾಡಿದ್ದಾರೆ. ಬಳಿಕ ತಿರುಪತಿ ತಿರುಮಲ ಹಾಗೂ ತೆಲಂಗಾಣದ ಗೋಲ್ಡನ್ ಟೆಂಪಲ್‍ಗೂ ಹೋಗಿ ನೆಚ್ಚಿನ ನಟನ ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಪೂಜೆ ಸಲ್ಲಿಸುತ್ತೇನೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

    ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನಾ ಮಂತ್ರಾಲಯ ರಾಘವೇಂದ್ರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರವೇ ರಾಘವೇಂದ್ರ ಚಿತ್ರ ಮಂದಿರಕ್ಕೆ ಬಂದಿದ್ದರು. ಸಿನಿಮಾದಲ್ಲಿ ಯಶ್ ಮುಂಬೈನ ಡಾನ್ ಆಗಿರುವುದರಿಂದ ಮುಂಬೈನಲ್ಲೂ ಪೂಜೆ ಸಲ್ಲಿಸಿರುವುದಾಗಿ ರಾಘವೇಂದ್ರ ಹೇಳಿದ್ದಾರೆ.

    ಸದ್ಯ ಎಲ್ಲಾ ಕಡೆಯಲ್ಲಿ ಕ್ರೇಜ್ ಹುಟ್ಟು ಹಾಕಿರುವ ಕೆಜಿಎಫ್ ಚಿತ್ರ ಯಶಸ್ವಿಯಾಗಿ ಎಲ್ಲೆಡೆ ಪ್ರದರ್ಶನ ಕಾಣುತ್ತಿದ್ದು, ಚಿತ್ರ ನೋಡಿದವರು ಸಲಾಂ ರಾಕಿ ಬಾಯ್ ಅಂತ ಯಶ್ ನಟನೆಯನ್ನು ಹಾಡಿ ಹೊಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಪೂರ್ಣ ಗ್ರಹಣದಿಂದಾಗಿ ದೇಗುಲಗಳಿಗೆ ಬೀಗ – ಇಂದು ಬೆಳಗ್ಗಿಂದ್ಲೇ ಶುದ್ಧಿ, ವಿಶೇಷ ಪೂಜೆ

    ಸಂಪೂರ್ಣ ಗ್ರಹಣದಿಂದಾಗಿ ದೇಗುಲಗಳಿಗೆ ಬೀಗ – ಇಂದು ಬೆಳಗ್ಗಿಂದ್ಲೇ ಶುದ್ಧಿ, ವಿಶೇಷ ಪೂಜೆ

    ಬೆಂಗಳೂರು: ಚಂದ್ರಗ್ರಹಣ ಹಿನ್ನೆಲೆಯಲ್ಲಿ ತಿರುಪತಿ ವೆಂಕಟೇಶ್ವರ ಸನ್ನಿದ್ಧಿ ಸೇರಿದಂತೆ ಕರ್ನಾಟಕ ಸೇರಿ ದೇಶದ ಬಹುತೇಕ ದೇವಸ್ಥಾನಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಪೂಜೆ ಮುಗಿಸಿ ಬಾಗಿಲು ಹಾಕಲಾಗಿತ್ತು. ಇಂದು ಬೆಳಗ್ಗಿನಿಂದಲೇ ಮತ್ತೆ ಪೂಜಾ ಕೈಂಕರ್ಯ ಆರಂಭವಾಗಿದೆ.

    ಗ್ರಹಣ ಹಿನ್ನೆಲೆಯಲ್ಲಿ ದೇಗುಲ ಶುದ್ಧೀಕರಣ ಬಳಿಕ ನಿತ್ಯ ಮತ್ತು ವಿಶೇಷ ಪೂಜೆಗಳು ನೆರವೇರಲಿವೆ. ಇತ್ತ ಗ್ರಹಣ ಆರಂಭವಾದ ಕೂಡಲೇ ಹೊರನಾಡಿನ ಅನ್ನಪೂರ್ಣೆಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ರಾತ್ರಿ ಜಲಾಭಿಷೇಕ ಮೂಲಕ ಪ್ರಾರ್ಥಿಸಲಾಯ್ತು.

    ಗ್ರಹಣ ಹೊತ್ತಲ್ಲೇ ಉಡುಪಿಯ ಕೃಷ್ಣಮಠದಲ್ಲಿ ಶಾಂತಿ ಹೋಮ ನಡೀತು. ರಾಶಿದೋಷ ಪರಿಹಾರಕ್ಕೆ ಮಧ್ವ ಮಂಟಪದಲ್ಲಿ ನಡೆದ ಹೋಮದಲ್ಲಿ ಭಕ್ತರು ಪಾಲ್ಗೊಂಡಿದ್ರು. ಬೆಂಗಳೂರಿನ ಕೆಆರ್ ರಸ್ತೆಯ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಚಂದ್ರಗ್ರಹಣದ ಸ್ಪರ್ಶ ವೇಳೆಯಿಂದ ಗ್ರಹಣ ಮುಗಿಯುವವರೆಗೂ ಗ್ರಹಣ ಶಾಂತಿ ಹೋಮ ಮಾಡಲಾಯ್ತು. ಗ್ರಹಣ ಶಾಂತಿ ಹೋಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ರು. ಇದನ್ನೂ ಓದಿ: ಶತಮಾನದ ಸೋಜಿಗಕ್ಕೆ ಸಾಕ್ಷಿಯಾಯ್ತು ಜಗ- ಮಳೆ, ಮೋಡದ ಮಧ್ಯೆ ಕೆಂಬಣ್ಣದಲ್ಲಿ ಶಶಿ ಸ್ನಾನ

    ದಾವಣಗೆರೆಯಲ್ಲಿ ಎಲ್ಲಾ ದೇವಸ್ಥಾನಗಳನ್ನು ಶುದ್ಧಿ ಮಾಡಿ ಪೂಜಾ ಕೈಕರ್ಯಗಳನ್ನು ನೆರವೇರಿಸಲಾಯಿತು. ಅದರಲ್ಲೂ ಪ್ರಮುಖವಾಗಿ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಚಂದ್ರ ಗ್ರಹಣ ಮುಗಿದ ನಂತರ ದೇವಸ್ಥಾನವನ್ನು ನೀರಿನಿಂದ ಸ್ಚಚ್ಚಗೊಳಿಸಲಾಯಿತು. ಅಲ್ಲದೇ ವೆಂಕಟೇಶ್ವರ ವಿಗ್ರಹಕ್ಕೆ ಮೊದಲು ಜಲಾಭಿಷೇಕ ನಡೆಸಿ ಶುದ್ಧಿಗೊಳಿಸಿದ್ರು. ನಂತರ ಪಂಚಾಮೃತ ಅಭಿಷೇಕ ನಡೆಸಿ ವಿಶೇಷ ಪೂಜೆ ಸಲ್ಲಿಸಿದ್ರು.

    ಕೇತುಗ್ರಸ್ಥ ಚಂದ್ರಗ್ರಹಣ ಮುಕ್ತಾಯ ಹಿನ್ನಲೆಯಲ್ಲಿ ನಗರದ ದೇವಸ್ಥಾನ ಗಳು ಓಪನ್ ಆಗಿದ್ದು, ನೀರು ಹಾಕಿ ದೇವಸ್ಥಾನವನ್ನು ಶುಚಿತ್ವ ಮಾಡಲಾಗುತ್ತಿದೆ. ನಂತ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗತ್ತದೆ. ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ ನೀರು ಹಾಕಿ ಶುಚಿತ್ವ ಮಾಡಲಾಗುತ್ತಿದೆ. ಬಳಿಕ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೊದಲ ಪಂಚಕಾವ್ಯದಿಂದ ಪುಣ್ಯಾರ್ಚನೆ ಮಾಡಲಾಗತ್ತೆ. ನಂತ್ರ ದೇವರಿಗೆ ಕ್ಷೀರಾಭೀಷೇಕ, ಶಿವನಿಗೆ ರುದ್ರಾಭೀಷೇಕ. ದೀಪ ನೈವೇದ್ಯ, ಮಹಾಮಂಗಳಾರತಿ. ನಂತರ ನವಗ್ರಹ ದೇವತೆಗಳಿಗೆ ಮೊಸರು, ಸಕ್ಕರೆ, ಪನೀರು ಎಳೆನೀರು, ಎಣ್ಣೆ ತುಪ್ಪ, ಗಂಧದಿಂದ ಕ್ಷೀರಾಭೀಷೇಕ ಮಾಡಲಾಗತ್ತದೆ. ನಂತ್ರ ವಿಶೇಷವಾಗಿ ಹೋಮ ನಡೆಯತ್ತದೆ.