Tag: ದೇವಸ್ಥಾನ

  • ಅಲ್ಲಾಹು ಅಕ್ಬರ್‌ ಎನ್ನುತ್ತಾ ಗರ್ಭಗುಡಿಗೆ ನುಗ್ಗಿ ವಿಗ್ರಹಕ್ಕೆ ಚಪ್ಪಲಿಯಿಂದ ಒದ್ದು ವಿಕೃತಿ!

    ಅಲ್ಲಾಹು ಅಕ್ಬರ್‌ ಎನ್ನುತ್ತಾ ಗರ್ಭಗುಡಿಗೆ ನುಗ್ಗಿ ವಿಗ್ರಹಕ್ಕೆ ಚಪ್ಪಲಿಯಿಂದ ಒದ್ದು ವಿಕೃತಿ!

    – ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಘಟನೆ
    – ಹಿಡಿದು ಎಳೆತಂದು ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು

    ಬೆಂಗಳೂರು: ಅನ್ಯ ಕೋಮಿನ ಯುವಕನೊಬ್ಬ ಚಪ್ಪಲಿ ಸಮೇತ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಗಳನ್ನು ಎಳೆದಾಡಿ, ಚಪ್ಪಲಿಯಿಂದ ಒದ್ದು ವಿಕೃತಿ ಮೆರೆದ ಘಟನೆ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

    ಅಕ್ಟೋಬರ್ 28ರಂದು ಬೆಳಗ್ಗೆ 8:30ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ಹೊರಗೆ ಹಾಕಿದ್ದಾರೆ. ದೇವರ ಬೀಸನಹಳ್ಳಿಯಲ್ಲಿ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ಕಬೀರ್ ಈ ಕೃತ್ಯ ಎಸಗಿದ್ದಾನೆ.

    ಈತ ವಿಶೇಷ ಚೇತನ ಎನ್ನಲಾಗುತ್ತಿದ್ದು ಘಟನೆಗೂ ಮುನ್ನ ಕಬೀರ್ ತನ್ನ ಧರ್ಮದ ಪರ ಘೋಷಣೆಗಳನ್ನು ಕೂಗುತ್ತಾ ಬಂದಿದ್ದ. ಮೆಡಿಕಲ್ ಅಂಗಡಿ ಮುಂದೆ ಇಟ್ಟಿದ್ದ ಗಣಪತಿ ದೇವರ ಫೋಟೋಗೆ ಸ್ಟಿಕ್‌ನಿಂದ ಹೊಡೆದಿದ್ದ. ಈ ವರ್ತನೆಯನ್ನು ಸ್ಥಳೀಯರು ವಿರೋಧಿಸಿದಾಗ ಕಬೀರ್ ನೇರವಾಗಿ ಹತ್ತಿರದಲ್ಲೇ ಇದ್ದ ವೇಣುಗೋಪಾಲಸ್ವಾಮಿ ದೇವಸ್ಥಾನದತ್ತ ಓಡಿದ್ದಾನೆ.

    ದೇವಸ್ಥಾನದ ಬಳಿ ಕೂಗಾಡಿ, ಕೈಯಲ್ಲಿದ್ದ ಕಲ್ಲಿನಿಂದ ಗರುಡಗಂಬಕ್ಕೆ ಹೊಡೆದಿದ್ದಾನೆ. ಬಳಿಕ ಕೈಯಲ್ಲಿ ಆಯಿಲ್ ಮಾದರಿಯ ವಸ್ತುವನ್ನು ಹಿಡಿದುಕೊಂಡು ಚಪ್ಪಲಿ ಕಾಲಲ್ಲಿಯೇ ಗರ್ಭಗುಡಿಗೆ ನುಗ್ಗಿ ದೇವರ ಮೂರ್ತಿಯನ್ನು ಎಳೆದಾಡಿ ಚಪ್ಪಲಿಯಿಂದ ಒದ್ದಿದ್ದಾನೆ.  ಇದನ್ನೂ ಓದಿ:  ಮರಕ್ಕೆ ಕಟ್ಟಿ, ವಿವಸ್ತ್ರಗೊಳಿಸಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ಸ್ಥಳೀಯರು ಬರುತ್ತಿದ್ದಂತೆ ಬಾಯಿಗೆ ಮಣ್ಣಾಕಿ ಕಾಮುಕರು ಪರಾರಿ

    ಕಬೀರ್‌ನ ಈ ವಿಕೃತಿಯನ್ನು ಕಂಡು ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಆತನನ್ನು ಹಿಡಿದು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ನಂತರ ಮರತ್ತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಆರೋಪಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಮರತ್ತಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಂದಿದ್ದ ಬಾಟಲಿ, ಚಪ್ಪಲಿ ಮತ್ತು ಕಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗಿನ ಮಾಹಿತಿಗಳ ಪ್ರಕಾರ ಈತ ಬಾಂಗ್ಲಾ ಮೂಲದವನಾಗಿದ್ದು ಅಕ್ರಮವಾಗಿ ನುಸುಳಿಕೊಂಡು ಬೆಂಗಳೂರಿಗೆ ಬಂದಿದ್ದಾನೆ ಎನ್ನಲಾಗುತ್ತಿದೆ.

  • ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಸುಜಾತ ಭಟ್‌!

    ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್‌ಐಟಿ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಸುಜಾತ ಭಟ್‌!

    ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಪ್ರಕರಣದ (Ananya Bhat Missing Case) ಸೃಷ್ಟಿಕರ್ತೆ ಸುಜಾತ ಭಟ್‌ (Sujatha Bhat) ಬೆಳ್ಳಂಬೆಳಗ್ಗೆ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಶಾಕ್‌ ನೀಡಿದ್ದಾರೆ.

    ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ಆ.29 ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ ನೋಟಿಸ್‌ ನೀಡಿದ್ದರು.

    ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರೂ ಇಂದು ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಆಗಮಿಸಿದ್ದಾರೆ. ಸುಜಾತ ಭಟ್‌ ಬರುವಾಗ ಅಧಿಕಾರಿಗಳು ನಿದ್ದೆಯಲ್ಲಿದ್ದರು. ಕಚೇರಿಗೆ ಬಂದ ನಂತರ ಪೊಲೀಸರು ಸುಜಾತ ಭಟ್‌ ಅವರನ್ನು ಒಳಗಡೆ ಬರುವಂತೆ ಹೇಳಿದ್ದಾರೆ. ಸದ್ಯ ಈಗ ಸುಜಾತ ಭಟ್‌ ಎಸ್‌ಐಟಿ ಕಚೇರಿಯ ಒಳಗಡೆಯೇ ಇದ್ದಾರೆ. ಇದನ್ನೂ ಓದಿ: ಮಟ್ಟಣ್ಣನವರ್‌ನಿಂದ ಹೋರಾಟ ಹಳ್ಳ ಹಿಡಿಯಿತು ಸೌಜನ್ಯ ಪರ ಹೋರಾಟಗಾರರಲ್ಲೇ ಒಡಕು!

     

    ಮಣಿಪಾಲದಲ್ಲಿ ಎಂಬಿಬಿಎಸ್‌ ಓದುತ್ತಿದ್ದ ಪುತ್ರಿ ಅನನ್ಯಾ ಭಟ್‌ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಠಾಣೆಗೆ ಹೋದಾಗ ಯಾರೂ ನನ್ನ ದೂರನ್ನು ತೆಗೆದುಕೊಂಡಿಲ್ಲ. ಪ್ರಶ್ನೆ ಮಾಡಿದರೆ ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು. ಉತ್ಕನನದ ವೇಳೆ ನನ್ನ ಮಗಳ ಮೂಳೆ ಸಿಕ್ಕಿದರೆ ನಾನು ಸನಾತನ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಸುಜಾತ ಭಟ್‌ ಕಲರ್‌ ಕಲರ್‌ ಕಥೆ ಕಟ್ಟಿದ್ದರು. ಇದನ್ನೂ ಓದಿAI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

    ನಂತರದ ದಿನಗಳಲ್ಲಿ ಒಂದೊಂದು ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದ ಕಾರಣ ಅನನ್ಯಾ ಭಟ್‌ ಪ್ರಕರಣ ನಕಲಿ ಎನ್ನುವುದು ಸಾಬೀತಾಗಿತ್ತು. ಕೊನೆಗೆ ಸುಜಾತ ಭಟ್‌ ನಾನು ಹೇಳುತ್ತಿರುವುದು ಸುಳ್ಳು ಎಂದು ಅಧಿಕೃತವಾಗಿ ತಿಳಿಸಿ ಈ ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ್ದರು.

    ಸುಜಾತ ಭಟ್‌ ಅಂತ್ಯ ಹಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ಅನನ್ಯಾ ಭಟ್‌ಗೆ ಸಂಬಂಧಿಸಿದಂತೆ ಎಐ ವಿಡಿಯೋ ರಚಿಸಿ ಬುರುಡೆ ಬಿಟ್ಟಿದ್ದ. ಈ ವಿಡಿಯೋ ಲಕ್ಷಗಟ್ಟಲ್ಲೇ ವ್ಯೂ ಪಡೆದುಕೊಂಡಿತ್ತು ಮತ್ತು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಆದರೆ ಸುಳ್ಳು ಕಥೆ ಕಟ್ಟಿ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿದ್ದಕ್ಕೆ ಸುಜಾತ ಭಟ್‌ ವಿರುದ್ಧ ಕೇಸ್‌ ದಾಖಲಿಸುವಂತೆ ಭಾರೀ ಒತ್ತಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್‌ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.

  • 400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

    400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

    – ಪಂಚಾಂಗ, ತಿಥಿ, ಗ್ರಹಗತಿ ಏನು ಹೇಳುತ್ತೆ?

    ಮೈಸೂರು: ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ದಸರಾ ಇತಿಹಾಸದಲ್ಲೇ (Dasara History) ಬಹುತೇಕ ಇದೇ ಮೊದಲ ಬಾರಿಗೆ 11 ದಿನದ ದಸರಾ ಬಂದಿದೆ.

    ಹೌದು. ಪಂಚಾಂಗದ (Panchanga) ತಿಥಿಗಳ ಪ್ರಕಾರ ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ. ಇದನ್ನೂ ಓದಿ: ವಯನಾಡಲ್ಲಿ ಮಳೆಯಬ್ಬರ – ಕಬಿನಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ಒಳಹರಿವು

    ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ದಸರಾ ನಡೆಯುತ್ತದೆ. ದಸರಾ ಪರಂಪರೆ ಶುರುವಾಗಿ 410 ವರ್ಷ ಕಳೆದಿದೆ. 410 ವರ್ಷಗಳಿಂದಲೂ 10 ದಿನ ದಸರಾ ನಡೆದಿದೆ. ಆದರೆ ಈ ಬಾರಿ 11 ದಿನ ದಸರಾ ನಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳ ಬಗ್ಗೆ ಧಾರ್ಮಿಕವಾಗಿ ಚರ್ಚೆಗಳು ಶುರುವಾಗಿವೆ. 1410 ರಿಂದ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ದಸರಾ ಆಚರಣೆ ನಡೆದಿದ್ದು 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ. ಮಹಾಲಯ ಅಮಾವಾಸ್ಯೆಯ ಮರು ದಿನದಿಂದ ನವರಾತ್ರಿ ಶುರುವಾಗಿ 9 ದಿನಗಳ ಮರುದಿನ ವಿಜಯದಶಮಿ‌ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

    ಈ ಕುರಿತು ಧಾರ್ಮಿಕ ಚಿಂತಕ ಡಾ. ಶೆಲ್ವಪಿಳೈ ಅಯ್ಯಂಗಾರ್ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದು. ಆದ್ರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ. ಪಂಚಾಂಗದಲ್ಲಿ ಸೆ.21ರಂದು ಮಹಾಲೆಯ ಅಮಾವಾಸ್ಯೆ ಬರುತ್ತೆ. ಅದರ ಮಾರನೇ ದಿನದಿಂದ ಅಂದ್ರೆ ಸೆ.22ರಿಂದ ಅ.2ರ ವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನಿಮ್ಮಪ್ಪನಿಗೆ ಸಿಎಂ ಕುರ್ಚಿ ಬಿಟ್ಟುಕೊಡಲು ಹೇಳಿ: ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

    ಏಕೆಂದ್ರೆ ಪಂಚಾಂಗದಲ್ಲಿ ಪ್ರಥಮೆ, ದ್ವಿತೀಯ, ತೃತೀಯ, ಚತುರ್ಥಿ ಸರಿಯಿದೆ. ಆದ್ರೆ ಪಂಚಮಿ ಸೆ.26, 27ರಂದು ಎರಡೂ ದಿನ ಬಂದಿದೆ. ಆ 2 ದಿನ ಗಣನೆಗೆ ತೆಗೆದುಕೊಂಡ್ರೆ 10ನೇ ದಿನ ಮಹಾನವಮಿ (ನವಮಿ) ಬರುತ್ತದೆ. 11ನೇ ದಿನ ದಶಮಿ ಬರುತ್ತದೆ. ಇದು ಸಾಮಾನ್ಯ ದಿನಗಳಲ್ಲಿ ಬಂದಿರುವುದು ಉಂಟು, ಆದ್ರೆ ನೂರಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈ ತಿಥಿ ಬಂದಿರುವುದು ವಿಶೇಷ ಎನ್ನುತ್ತಾರೆ ಶೆಲ್ವಪಿಳೈ ಅಯ್ಯಂಗಾರ್. ಇದನ್ನೂ ಓದಿ: ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು

    ದಿನಗಳ ಲೆಕ್ಕದಲ್ಲಿ ನವರಾತ್ರಿ 9 ದಿನ ದಶಮಿ 10ನೇ ದಿನಕ್ಕೆ ಬರುತ್ತದೆ. ಆದ್ರೆ ಪಂಚಾಂಗದಲ್ಲಿ 11 ದಿನ ಬರುತ್ತದೆ. ಈ ಸಂದರ್ಭದಲ್ಲಿ 5-6ನೇ ದಿನ ಪೂಜೆಯಲ್ಲಿ ಯಾವುದೇ ವ್ಯತ್ಯಾಸ ಇರಲ್ಲ. ಅದೇ ಅಲಂಕಾರವನ್ನು ಎರಡೂ ದಿನ ಮಾಡಿಕೊಳ್ಳಬೇಕಾಗುತ್ತೆ. ಆದ್ರೆ ಶೈವ, ವೈಷ್ಣವ ದೈವಗಳ ಪೂಜೆಯಲ್ಲಿ ಬದಲಾವಣೆ ಇರುತ್ತೆ. ಶೈವ ದೇವಸ್ಥಾನಗಳಲ್ಲಿ ರಾತ್ರಿಯಲ್ಲೂ ಶಮಿ ಪೂಜೆಗಳನ್ನ ಮಾಡಿ ಆರಂಭಿಸಬಹುದು. ಮೈಸೂರು ಪರಂಪರೆಗೆ ನೋಡುವುದಾದ್ರೆ 11 ದಿನದ ಆಚರಣೆ ಮಾಡಬೇಕಾಗುತ್ತದೆ. ಈ ವೇಳೆ ಮಹಾರಾಜರ ಪೂಜೆಗಳಲ್ಲೂ ಬದಲಾವಣೆ ಆಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಸಮುದಾಯದ ದಯಾನಂದ್‌ ಮೇಲೆ ಏಕೆ ಸಿಎಂಗೆ ಕೋಪ – ಪ್ರತಾಪ್‌ ಸಿಂಹ ಪ್ರಶ್ನೆ

    ಗ್ರಹಗತಿ ಹೇಳುವುದೇನು? 
    ಸಾಮಾನ್ಯವಾಗಿ ಗ್ರಹಗಳು ಗ್ರಹಗಳು 6,3,8,12ರಲ್ಲಿ ಇದ್ದಾಗ ದುಸ್ಥಾನ ಎನ್ನುತ್ತೇವೆ. ಆದ್ರೆ 11ರಲ್ಲಿ ಇದ್ದಾಗ ಶುಭಸ್ಥಾನ ಅಂದ್ರೆ ಏಕಾದಶ ಸ್ಥಾನ ಫಲ ಎನ್ನುತ್ತೇವೆ. ಹೀಗಾಗಿ ಈ ಬಾರಿ ಮೈಸೂರು ದಸರಾ 11 ದಿನ ಆಚರಣೆ ಮಾಡಬೇಕಾಗುತ್ತೆ ಎಂದು ಶೆಲ್ವಪಿಳೈ ಅಯ್ಯಂಗಾರ್ ವಿವರಿಸಿದ್ದಾರೆ.

  • ನೀರಿನ ಬಾಟಲ್‌ ಸೇರಿದಂತೆ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ಬ್ಯಾನ್‌

    ನೀರಿನ ಬಾಟಲ್‌ ಸೇರಿದಂತೆ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ಬ್ಯಾನ್‌

    – ಆ.15 ರಿಂದ ನಿಷೇಧ ಜಾರಿ
    – 2 ತಿಂಗಳ ಒಳಗಡೆ ಪ್ಲಾಸ್ಟಿಕ್‌ ಪದಾರ್ಥಗಳನ್ನು ಖಾಲಿ ಮಾಡಬೇಕು

    ಬೆಂಗಳೂರು: ಆಗಸ್ಟ್ 15ರಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ (Muzrai Department) ನೀರಿನ ಬಾಟಲ್‌ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್‌ (Plastic) ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.

    ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಪ್ಲಾಸ್ಟಿಕ್‌ ಮುಕ್ತ ದೇವಾಲಯ (Plastic Free Temple) ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಕೆ ಮಾಡಬಾರದು ಎಂದು ಸೂಚಿಸಿದರು.

    ಈ ಆದೇಶ ಜಾರಿಗೆ 2 ತಿಂಗಳು ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್‌ ಪದಾರ್ಥಗಳು ತೆಗೆದುಕೊಂಡಿದ್ದರೆ ಅದನ್ನು ಬಳಕೆ ಮಾಡಬಹುದು. ಆಗಸ್ಟ್ 15 ರಿಂದ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    ಸಭೆಯ ಹೈಲೈಟ್ಸ್‌ ಏನು?
    ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಮಾಹಿತಿಯನ್ನು 3 ತಿಂಗಳ ಒಳಗೆ ಕೊಡಬೇಕು. 3 ತಿಂಗಳ ಒಳಗೆ ಬಾಕಿ ಇರುವ 20 ಸಾವಿರ ಎಕರೆ ದೇವಾಲಯ ಜಮೀನು ಇಂಡೀಕರಣ ಆಗಬೇಕು.

    ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಗಳನ್ನ ಪ್ರತ್ಯೇಕ ಸರ್ವೆ ಮಾಡಬೇಕು. ದೇವಸ್ಥಾನ ಹೆಸರಿನಲ್ಲಿ ಖಾತೆ, ಆಸ್ತಿ ಪತ್ರ ದಾಖಲೆಗಳು ಸರಿಯಾಗಿ ಇರದಿದ್ದರೆ ಎಲ್ಲಾ ದೇವಾಲಯದ ಜಾಗ 3 ತಿಂಗಳ ಒಳಗಡೆ ಸರ್ವೆ ಮಾಡಿ ನೋಟಿಫಿಕೇಶನ್ ಮಾಡಲು ಸೂಚನೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    ಅರ್ಚಕರಿಗೆ ತಸ್ತೀಕ್ ನೇರ ವರ್ಗಾವಣೆ(DBT) ಮೂಲಕ ನೀಡಲು ಕ್ರಮ. ಈಗ 25 ಸಾವಿರ ಅರ್ಚಕರ ಪೈಕಿ 14 ಸಾವಿರ ಅರ್ಚಕರು ಮಾಹಿತಿ ಕೊಟ್ಟಿದ್ದಾರೆ. ಉಳಿದವರು ಬೇಗ ಮಾಹಿತಿ ಕೊಟ್ಟರೆ ಅವರಿಗೂ DBT ಮೂಲಕ ತಸ್ತೀಕ್ ನೀಡಲು ಕ್ರಮ.

    31 ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ ರಚನೆಗೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. 8 ಜಿಲ್ಲೆಯಲ್ಲಿ ಮಾತ್ರ ಧಾರ್ಮಿಕ ಪರಿಷತ್ ರಚನೆಯಾಗಿದ್ದು ಉಳಿದ ಕಡೆ ಶೀಘ್ರವೇ ಮಾಡಬೇಕು.

    ಬೇರೆ ಬೇರೆ ರಾಜ್ಯದಲ್ಲಿ ಇರೋ ಮುಜರಾಯಿ ಇಲಾಖೆ ವಸತಿ ಭವನಗಳಲ್ಲಿ 3 ಸ್ಟಾರ್ ಸೌಲಭ್ಯ ಗಳನ್ನು ನೀಡಲು ನಿರ್ಧಾರ. ತಿರುಪತಿ, ತುಳಿಜಾಪುರ, ಪಂಡರಾಪುರ, ಸೇರಿ ಹಲವು ಕಡೆ ಭವನಗಳನ್ನು ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು.

    ಬೇರೆ ರಾಜ್ಯದಲ್ಲಿ ಇರುವ ಭವನಗಳ ರೂಮ್‌ ಬುಕ್ಕಿಂಗ್‌ ಅನ್ನು ಆನ್‌ಲೈನ್‌ ಮೂಲಕ ಜಾರಿ ಮಾಡಲು ವ್ಯವಸ್ಥೆ ರೂಪಿಸಲು ಸೂಚನೆ.

    ಹೊಸ ಪ್ರಾಧಿಕಾರಗಳ ಸಮಗ್ರ ಯೋಜನೆಗೆ ಕ್ರಮವಹಿಸಲಾಗಿದೆ. ಹುಲಿಗೆಮ್ಮ, ಮಲೆ ಮಹದೇಶ್ವರ, ಘಾಟಿ ಸುಬ್ರಮಣ್ಯ, ರೇಣುಕಾ ಎಲ್ಲಮ್ಮ, ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಮಾಸ್ಟರ್ ಪ್ಲ್ಯಾನ್ ಮಾಡಲು ನಿರ್ಧಾರ.

    ಚಾಮುಂಡೇಶ್ವರಿ ಬೆಟ್ಟದಲ್ಲಿ ಒತ್ತುವರಿ ಆಗಿದ್ದ 11 ಎಕರೆ ಜಾಗವನ್ನು ತೆರವು ಮಾಡಲಾಗಿದೆ. ಉಳಿದ ಜಾಗ ತೆರವುಗೊಳಿಸಲು ಸೂಚನೆ.

  • ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

    ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

    ಲಕ್ನೋ (ಗೋರಖ್‌ಪುರ): ತನ್ನನ್ನು ಡುಮ್ಮ, ಬೊಬ್ಬು ಎಂದು ಕರೆದಿದ್ದಕ್ಕೆ ಕೋಪಗೊಂಡ ಯುವಕ, ಇಬ್ಬರು ಅತಿಥಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ (Gorakhpur) ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ನಡೆದ ಮರುದಿನ ಖಜ್ನಿ ಪೊಲೀಸ್ ಠಾಣೆಯಲ್ಲಿ (Khajni police Station) ದೂರು ದಾಖಲಾಗಿದ್ದು, ನಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬೆಲ್‌ಘಾಟ್ ಪ್ರದೇಶದ ನಿವಾಸಿ ಅರ್ಜುನ್ ಚೌಹಾಣ್ ಬಂಧಿತ ಆರೋಪಿ. ಇದನ್ನೂ ಓದಿ: ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

    ಅಷ್ಟಕ್ಕೂ ಆಗಿದ್ದೇನು?
    ಅರ್ಜುನ್‌ ಇತ್ತೀಚೆಗೆ ತನ್ನ ಚಿಕ್ಕಪ್ಪನೊಂದಿಗೆ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಔತಣಕೂಟಕ್ಕೆ ಹೋಗಿದ್ದ. ಈ ವೇಳೆ ಮಂಜರಿಯಾದ ಅನಿಲ್ ಚೌಹಾಣ್ ಮತ್ತು ಶುಭಮ್ ಚೌಹಾಣ್ ಎಂಬ ಇಬ್ಬರು ಅತಿಥಿಗಳು ತಾನು ಡುಮ್ಮ, ಬೊಜ್ಜು ಅಂತ ಸಿಕ್ಕಾಪಟ್ಟೆ ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅರ್ಜುನ್‌ ತನ್ನ ಸ್ನೇಹಿತ ಆಸಿಫ್‌ ಖಾನ್‌ ಜೊತೆಗೆ ಆ ಇಬ್ಬರು ಅತಿಥಿಗಳನ್ನ ಹಿಂಬಾಲಿಸಿದ್ದ. ಗೋರಖ್‌ಪುರದ ತೆನುವಾ ಟೋಲ್ ಪ್ಲಾಜಾ ಬಳಿ ಕಾರು ನಿಲ್ಲಿಸಿ, ಇಬ್ಬರನ್ನೂ ಹೊರಗೆಳೆದು ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ದಕ್ಷಿಣ ಎಸ್ಪಿ ಜಿತೇಂದ್ರ ಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

    ಗುಂಡೇಟು ಬಿದ್ದಿದ್ದ ಇಬ್ಬರನ್ನೂ ಅಲ್ಲಿನ ದಾರಿಹೋಕರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು, ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನ ಗೋರಖ್‌ ಪುರ ಜಿಲ್ಲಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಭಂ ಚೌಹಾಣ್ ಅವರ ತಂದೆಯ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಲಾಗಿದ್ದು, ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಸಾವು – ಕಾವೇರಿ ನದಿಯಲ್ಲಿ ಶವ ಪತ್ತೆ

  • ಗಡಿಯಲ್ಲಿ ಬುಲ್ಡೋಜರ್ ಘರ್ಜನೆ – 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ

    ಗಡಿಯಲ್ಲಿ ಬುಲ್ಡೋಜರ್ ಘರ್ಜನೆ – 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ

    ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಸೂಚನೆ ಮೇರೆಗೆ ಉತ್ತರ ಪ್ರದೇಶದ ನೇಪಾಳ ಗಡಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ (Bulldozers Actions) ನಡೆಸಲಾಗಿದೆ.

    ಸ್ಥಳೀಯ ಜಿಲ್ಲಾ ಮತ್ತು ಪೊಲೀಸ್ ಆಡಳಿತವು ಶ್ರಾವಸ್ತಿ, ಬಲರಾಮ್‌ಪುರ, ಬಹ್ರೈಚ್, ಮಹಾರಾಜ್‌ಗಂಜ್ ಮತ್ತು ಲಖಿಂಪುರ ಜಿಲ್ಲೆಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧೆಡೆ 28 ಮದರಸಾಗಳು (Madrasas), 9 ಮಸೀದಿಗಳು (Mosques), 6 ದೇವಾಲಯಗಳು, 1 ಈದ್ಗಾವನ್ನ ನೆಲಸಮಗೊಳಿಸಲಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

    ಅಕ್ರಮ ಮದರಸಾಗಳು ಧ್ವಂಸ
    ರಾಜ್ಯದಲ್ಲಿ ನಡೆದ ಅತಿದೊಡ್ಡ ಬುಲ್ದೋಜರ್‌ ಕಾರ್ಯಾಚರಣೆ ಇದಾಗಿದ್ದು, ಶ್ರಾವಸ್ತಿ ಜಿಲ್ಲೆಯ ಭಗವಾನ್‌ಪುರ ಭೈಸಾಹಿ, ಮಹಾರಾಜ್‌ಗಂಜ್‌, ಪೋಖರ್ಭಿಂಡಾ, ತಹಸಿಲ್, ಸೀತಾಲಪುರ ಗ್ರಾಮಗಳು ಸೇರಿದಂತೆ ವಿವಿಧೆಡೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ 28 ಮದರಸಾಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಕೆಲ ಮದರಸಾಗಳಿಗೆ ಬೀಗ ಜಡಿಯಲಾಗಿದೆ. ಜೊತೆಗೆ ಬಲರಾಮ್‌ಪುರ, ಬಹ್ರೈಚ್, ಮಹಾರಾಜ್‌ಗಂಜ್ ಮತ್ತು ಲಖಿಂಪುರ ಖೇರಿಗಳಲ್ಲಿನ 9 ಮಸೀದಿಗಳು, 6 ದೇವಾಲಯಗಳು ಮತ್ತು 1 ಈದ್ಗಾ ವನ್ನ ತೆರವುಗೊಳಿಸಲಾಗಿದೆ ಎಂದು ಶ್ರಾವಸ್ತಿ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ:  ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಕಾರ್ಯಾಚರಣೆ – 74 ಬುಲ್ಡೋಜರ್, 200 ಟ್ರಕ್, 1800 ಕಾರ್ಮಿಕರು, 3000 ಪೊಲೀಸರ ಬಳಕೆ

    ಕಳೆದ ಏ.22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಗುಜರಾತ್‌ನಲ್ಲಿ (Gujarat) ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿತ್ತು. ದೇಶದಲ್ಲೇ ನಡೆದ ಅತಿ ದೊಡ್ಡ ಬುಲ್ಡೋಜರ್‌ ಕಾರ್ಯಾಚರಣೆ ಇದಾಗಿತ್ತು. 74 ಬುಲ್ಡೋಜರ್‌ಗಳು, 200 ಟ್ರಕ್‌ಗಳು, 1,800 ಕಾರ್ಮಿಕರು, 3000 ಪೊಲೀಸ್‌ ಅಧಿಕಾರಿಗಳು ಆಪರೇಷನ್‌ನ ಭಾಗವಾಗಿದ್ದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ | NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ, ಕರಾವಳಿಗೆ ಪಾಕ್ ಸಂಪರ್ಕವಿದೆ: ಅಶೋಕ್

  • ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!

    ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!

    ಚಾಮರಾಜನಗರ: ಇಲ್ಲಿನ ತಮ್ಮಡಹಳ್ಳಿಯಲ್ಲಿ ಮಹಿಳೆಯೊಬ್ಬರು ಭಾವೋದ್ವೇಗಕ್ಕೆ ಒಳಗಾಗಿರುವ ಪ್ರಸಂಗ ಚಾಮರಾಜನಗರದಲ್ಲಿ (Chamarajanagara) ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ.

    ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಯಲ್ಲಿ ಸ್ಥಗಿತಗೊಂಡ ಗುಜ್ಜಮ್ಮತಾಯಿ ಕೊಂಡೋತ್ಸವ ಸ್ಥಗಿತಗೊಂಡ ಬೆನ್ನಲ್ಲೇ ತನ್ನ ಮೇಲೆ ಗುಜ್ಜಮ್ಮತಾಯಿ ದೇವರು ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಮಹಿಳೆ ಊರಿನ ಜನಕ್ಕೆ ಶಾಪ ಹಾಕಿದ್ದಾರೆ. ಈ ಮಹಿಳೆ ಕೊಂಡ ಹಾಯಲು ಮೂರು ದಿನ ಉಪವಾಸ ಇದ್ದರು ಎಂದೂ ಸಹ ಹೇಳಲಾಗಿದೆ. ಇದನ್ನೂ ಓದಿ: ಡಿಕೆಶಿ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿಲ್ಲ, ತಿದ್ದುಪಡಿ ಬಗ್ಗೆ ಮಾತಾಡಿರೋದು: ಪ್ರಿಯಾಂಕ್ ಖರ್ಗೆ

    ನನ್ನ ಕೊಂಡ, ನನ್ನ ಜಾತ್ರೆ, ನನ್ನ ಕನ್ನಡಿ ಎಲ್ಲವನ್ನು ನಿಲ್ಲಿಸಿ ಮೋಸ ಮಾಡಿದ್ದಾರೆ. ನನ್ನ ಜಾತ್ರೆ ನಿಲ್ಸಿದ್ದೀರಿ… ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ.. ಎಂದು ಪೊಲೀಸರ ಮುಂದೆಯೇ ಮಹಿಳೆ ಶಾಪಾ ಹಾಕಿದ್ದಾರೆ. ಈ ಕುರಿತ ವಿಡಿಯೋ ತುಣುಕು ಹರಿದಾಡುತ್ತಿದೆ. ಇದನ್ನೂ ಓದಿ: ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿ – ಒಂದೇ ಕುಟುಂಬದ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

  • ಒಂದು ವರ್ಷದ ಒಳಗೆ ಮುಜರಾಯಿ ದೇವಾಲಯಗಳ ಆಸ್ತಿ ಇಂಡೀಕರಣ: ರಾಮಲಿಂಗಾರೆಡ್ಡಿ

    ಒಂದು ವರ್ಷದ ಒಳಗೆ ಮುಜರಾಯಿ ದೇವಾಲಯಗಳ ಆಸ್ತಿ ಇಂಡೀಕರಣ: ರಾಮಲಿಂಗಾರೆಡ್ಡಿ

    ಬೆಂಗಳೂರು : ಮುಜರಾಯಿ ದೇವಾಲಯಗಳಲ್ಲಿ (Muzrai Temple) ಬಾಕಿ ಇರುವ ಆಸ್ತಿ ಇಂಡೀಕರಣವನ್ನು ಇನ್ನೊಂದು ವರ್ಷದಲ್ಲಿ ಪೂರ್ಣ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಭರವಸೆ ನೀಡಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬರ್ ಈ ಬಗ್ಗೆ ಪ್ರಶ್ನೆ ಕೇಳಿದರು. ಇದನ್ನೂ ಓದಿ: ಚಲನಚಿತ್ರೋತ್ಸವಕ್ಕೆ ಎಲ್ಲರಿಗೂ ಆಹ್ವಾನ ಹೋಗಿದೆ: ಸಾಧು ಕೋಕಿಲ

     

    ಇದಕ್ಕೆ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ,ಮುಜರಾಯಿ ದೇವಾಲಯಗಳ ಆಸ್ತಿ ರಕ್ಷಣೆ ಮತ್ತು ಇಂಡೀಕರಣ ಮಾಡುವ ಪ್ರಕ್ರಿಯೆ ಶುರುವಾಗಿದೆ. 2023 ಮತ್ತು 2024 ರಲ್ಲಿ 11,498 ಎಕರೆ ಆಸ್ತಿಯನ್ನ ದೇವಾಲಯಗಳ (Temple) ಹೆಸರಿಗೆ ಪಹಣಿ ಇಂಡೀಕರಿಸಲಾಗಿದೆ. ಸುಮಾರು 15,413 ಎಕರೆ ಆಸ್ತಿಯನ್ನು ದೇವಾಲಯಗಳನ್ನು ದೇವಾಲಯಗಳ ಹೆಸರಿಗೆ ಇಂಡೀಕರಣ ಮಾಡಲಾಗಿದೆ ಎಂದು ತಿಳಿಸಿದರು.

    ಇನ್ನೂ 20 ಸಾವಿರ ಎಕರೆ ದೇವಾಲಯಗಳ ಜಾಗ ಇಂಡೀಕರಣ ಮಾಡಬೇಕು.ಈಗಾಗಲೇ ಪ್ರಕ್ರಿಯೆ ಶುರುವಾಗಿದೆ‌. ಇನ್ನೊಂದು ವರ್ಷದಲ್ಲಿ ಬಾಕಿ ಇರೋ ಎಲ್ಲಾ ದೇವಾಲಯಗಳ ಆಸ್ತಿ ಇಂಡೀಕರಣ ಮಾಡುತ್ತೇವೆ ಅಂತ ಭರವಸೆ ನೀಡಿದರು.

     

  • ಗ್ಯಾರಂಟಿ ಹೊಡೆತಕ್ಕೆ ತತ್ತರ – ದೇವಸ್ಥಾನದ ಹಣಕ್ಕೆ ಕೈ ಹಾಕಿತಾ ಹಿಮಾಚಲ ಸರ್ಕಾರ?

    ಗ್ಯಾರಂಟಿ ಹೊಡೆತಕ್ಕೆ ತತ್ತರ – ದೇವಸ್ಥಾನದ ಹಣಕ್ಕೆ ಕೈ ಹಾಕಿತಾ ಹಿಮಾಚಲ ಸರ್ಕಾರ?

    – ಜನ ಕಲ್ಯಾಣ ಯೋಜನೆಗಾಗಿ ದೇವಸ್ಥಾನ ಹಣ ಕೇಳಿದ ಸರ್ಕಾರ
    – ಸರ್ಕಾರದ ಯೋಜನೆಗಳಿಗೆ ದೇವಸ್ಥಾನದ ಹಣ ಬಳಕೆ ತಪ್ಪು: ಬಿಜೆಪಿ

    ಶಿಮ್ಲಾ: ಗ್ಯಾರಂಟಿ ಯೋಜನೆ (Congress Guarantee) ಜಾರಿ ಮಾಡಿ ಈಗಾಗಲೇ ಆರ್ಥಿಕ ಮುಗ್ಗಟ್ಟು (Economic Crisis) ಎದುರಿಸುತ್ತಿರುವ ಹಿಮಾಚಲ ಸರ್ಕಾರ ಈಗ ತನ್ನ ಯೋಜನೆಗಳಿಗೆ ಹಣ ಹೊಂದಿಸಲು ದೇವಸ್ಥಾನದ (Temple) ಹಣಕ್ಕೆ ಕೈ ಹಾಕಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಜನವರಿ 29 ರಂದು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಧಿಸೂಚನೆ ಹೊರಡಿಸಿ, ರಾಜ್ಯವು ನಡೆಸುವ ದತ್ತಿ ಚಟುವಟಿಕೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಕೊಡುಗೆಗಳನ್ನು ಕೊಡಬಹುದು ಎಂದು ಹೇಳಿದೆ.

    ಹಿಮಾಚಲ ಪ್ರದೇಶ (Himachal Pradesh Govt) ಹಿಂದೂ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ದತ್ತಿ ದತ್ತಿ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದೇವಾಲಯ ಟ್ರಸ್ಟ್‌ಗಳು ದೇಣಿಗೆಗಳನ್ನು ನೀಡುತ್ತಲೇ ಇರುತ್ತವೆ. ಮೇಲೆ ತಿಳಿಸಿದ ಕಲ್ಯಾಣ ಯೋಜನೆಗಳಿಗೆ ಹಣವನ್ನು ಒದಗಿಸುವ ಉದ್ದೇಶದಿಂದ ಮುಖ್ಯ ಮಂತ್ರಿ ಸುಖ ಆಶ್ರಯ ಮತ್ತು ಮುಖ್ಯ ಮಂತ್ರಿ ಸುಖ ಶಿಕ್ಷಾ ಯೋಜನೆಗೆ ದೇಣಿಗೆಗಳನ್ನು ನೀಡಬಹುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

    ಮುಖ್ಯಮಂತ್ರಿ ಸುಖ ಆಶ್ರಯ ಯೋಜನೆ ಫೆಬ್ರವರಿ 2023 ರಲ್ಲಿ ಆರಂಭಗೊಂಡರೆ, ಮುಖ್ಯಮಂತ್ರಿ ಸುಖ ಶಿಕ್ಷಾ ಯೋಜನೆ ಸೆಪ್ಟೆಂಬರ್‌ 2024 ರಲ್ಲಿ ಆರಂಭಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ: ಶ್ರೀರಾಮುಲು ಬೇಸರ

    ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪ್ರತಿಕ್ರಿಯಿಸಿ, ಹಿಂದಿನ ಯಾವುದೇ ಸರ್ಕಾರವು ಬಜೆಟ್ ಯೋಜನೆಗಳಿಗೆ ದೇವಾಲಯದ ಟ್ರಸ್ಟ್ ನಿಧಿಯನ್ನು ಬಳಸಿಲ್ಲ. ಸರ್ಕಾರಿ ವೆಚ್ಚಗಳಿಗೆ ದೇವಾಲಯದ ನಿಧಿಯನ್ನು ಬಳಸುವುದು ಆಘತಕಾರಿ ಎಂದು ಹೇಳಿ ಆಕ್ರೋಶ ಹೊರ ಹಾಕಿದ್ದಾರೆ.

    ಒಂದು ಕಡೆ ಕಾಂಗ್ರೆಸ್ ನಾಯಕರು ಸನಾತನ ಧರ್ಮ ಮತ್ತು ಸನಾತನ ಧರ್ಮವನ್ನು ಪಾಲನೆ ಮಾಡುವವರನ್ನು ಅವಮಾನಿಸುತ್ತಾರೆ. ಇನ್ನೊಂದು ಕಡೆ ತಮ್ಮ ಯೋಜನೆಗಾಗಿ ಹಣ ಪಡೆಯಲು ದೇವಸ್ಥಾನದ ಹಣವನ್ನು ಬಳಸಲು ಮುಂದಾಗುತ್ತಿದ್ದಾರೆ. ಇದೊಂದು ವಿಚಿತ್ರ ನಿರ್ಧಾರವಾಗಿದ್ದು ಎಲ್ಲಾ ದೇವಸ್ಥಾನದ ಸಮಿತಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲರೂ ಇದನ್ನು ವಿರೋಧಿಸಬೇಕು ಎಂದು ಮನವಿ ಮಾಡಿದ್ದಾರೆ.

    ಬಿಜೆಪಿಯಿಂದ ಟೀಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಪ್ರತಿಕ್ರಿಯಿಸಿ, ಈ ಕೊಡುಗೆ ಸ್ವಯಂಪ್ರೇರಿತವಾಗಿದೆ. ಇದು ಸುಖ ಆಶ್ರಯ ಯೋಜನೆಯಡಿ ಅನಾಥರಿಗೆ ಕಟ್ಟಡ ಸೌಲಭ್ಯಗಳಿಗಾಗಿ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.

    ಹಿಮಾಚಲಪ್ರದೇಶದಲ್ಲಿ ಚುನಾವಣಾ ಸಮಯದಲ್ಲಿ ಪ್ರಕಟಿಸಿದ ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ತೀವ್ರ ಹೊರೆಯಾಗುತ್ತಿದೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರ ಈಗ ವಿದ್ಯುತ್ ಸಬ್ಸಿಡಿ ನಿಲ್ಲಿಸಲು ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ವಿದ್ಯುತ್‌ ಶುಲ್ಕ ಪಾವತಿಸಲು ಸಾಮರ್ಥ್ಯ ಇರುವ ವಿದ್ಯುತ್ ಗ್ರಾಹಕರು ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಸುಖ್ವಿಂದರ್ ಸುಖು ಈ ಹಿಂದೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ ತಾವೂ ಸಹ ಸಬ್ಸಿಡಿ ಬಿಟ್ಟುಕೊಡುತ್ತಿರುವುದಾಗಿ ತಿಳಿಸಿದ್ದರು.

     

  • ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ಹಾಸನ: ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ತವರು ಜಿಲ್ಲೆಗೆ ಆಗಮಿಸಿದ್ದು, ಕೇಂದ್ರ ಸಚಿವರಾದ ಬಳಿಕ ಮೊದಲಬಾರಿಗೆ ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಯಲಿಗೂರು ಗ್ರಾಮದಲ್ಲಿರುವ ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆಯ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಾಲಯದಲ್ಲಿ ನೆಲೆದ ಮೇಲೆ ಕುಳಿತು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಚೆನ್ನಮ್ಮ, ಪುತ್ರ, ಸೊಸೆ, ಮೊಮ್ಮಗನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಇದೇ ವೇಳೆ ಹೆಚ್‌ಡಿಕೆ ಸಹೋದರನೂ ಆಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna), ಶಾಸಕ ಸಿ.ಎನ್ ಬಾಲಕೃಷ್ಣ ಜೊತೆಯಾಗಿದ್ದಾರೆ. ಇದನ್ನೂ ಓದಿ: Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    ಹೆಚ್‌ಡಿಕೆ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸೂರಜ್, ಪ್ರಜ್ವಲ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಸಂಕಷ್ಟಗಳು ದೂರಾಗಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್‌ ಆಪ್ತ ಸೇರಿ 10 ಜನರ ವಿರುದ್ಧ FIR