Tag: ದೇವರ ಹುಂಡಿ

  • ಸಿಸಿಟಿವಿ ಕ್ಯಾಮೆರಾ ಒಡೆದು ದೇವರ ಹುಂಡಿಗೆ ಕನ್ನಾ

    ಸಿಸಿಟಿವಿ ಕ್ಯಾಮೆರಾ ಒಡೆದು ದೇವರ ಹುಂಡಿಗೆ ಕನ್ನಾ

    ಮಂಡ್ಯ: ದೇವಸ್ಥಾನದ ಬೀಗ ಒಡೆದು ಹುಂಡಿಯಲ್ಲಿರುವ ಹಣವನ್ನು ಕಳ್ಳತನ ಮಾಡಲಾಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ದಂಡಿಮಾರಮ್ಮನ ದೇವಸ್ಥಾನದ ಹುಂಡಿಗೆ ಕಳ್ಳರು ಕನ್ನಾ ಹಾಕಿದ್ದಾರೆ. ಮಂಗಳವಾರ ರಾತ್ರಿ ದೇವಸ್ಥಾನದ ಬಳಿ ಯಾರು ಇಲ್ಲದೇ ವೇಳೆ ಕಳ್ಳರು ಮೊದಲು ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ.

    ಕ್ಯಾಮೆರಾ ಒಡೆದ ಬಳಿಕ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ. ಬಳಿಕ ದೇವರ ಮುಂದೆ ಇದ್ದ ಹುಂಡಿಯ ಬೀಗವನ್ನು ಒಡೆದು, ಭಕ್ತರು ಹಾಕಿದ್ದ ಹಣ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ದೋಚಿ ಪರಾರಿಯಾದ ಕಳ್ಳರು

    ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ದೋಚಿ ಪರಾರಿಯಾದ ಕಳ್ಳರು

    ಹಾವೇರಿ: ನಸುಕಿನಲ್ಲಿ ದೇವಸ್ಥಾನದ ಹುಂಡಿಯನ್ನು ಒಡೆದು ಹಣ ಕಳ್ಳತನ ಮಾಡಿರುವ ಘಟನೆ ಜಿಲ್ಲೆ ಹಿರೇಕೆರೂರು ತಾಲೂಕು ವಡೆಯರಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

    ಗ್ರಾಮದ ಆರಾಧ್ಯ ದೈವ ಆಂಜನೇಯ ಸ್ವಾಮಿ ಕಾಣಿಕೆ ಹುಂಡಿಯ ಕೆಳಭಾಗದಲ್ಲಿದ್ದ ಬೀಗ ಮುರಿದು ಕಳ್ಳರು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಕಾಣಿಕೆಯ ಹಣವನ್ನ ಆಡಳಿತ ಮಂಡಳಿ ತೆಗೆದಿರಲಿಲ್ಲ.

    ಹುಂಡಿಯಲ್ಲಿ ಸುಮಾರು 15 ಸಾವಿರಕ್ಕೂ ನಗದು ಇತ್ತು ಎನ್ನಲಾಗಿದೆ. ಅಲ್ಲದೇ ಈ ಹಿಂದೆ ಎರಡು ಬಾರಿಯೂ ದೇವಸ್ಥಾನದ ಹುಂಡಿಯ ಹಣ ಕಳ್ಳತನವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕಳ್ಳರನ್ನ ಪತ್ತೆಹಚ್ಚಿ ಶಿಕ್ಷೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.