Tag: ದೇವರ ಸಿನಿಮಾ

  • ದೇವಸ್ಥಾನಕ್ಕೆ 12.5 ಲಕ್ಷ ದೇಣಿಗೆ ನೀಡಿದ ಜ್ಯೂ.ಎನ್‌ಟಿಆರ್

    ದೇವಸ್ಥಾನಕ್ಕೆ 12.5 ಲಕ್ಷ ದೇಣಿಗೆ ನೀಡಿದ ಜ್ಯೂ.ಎನ್‌ಟಿಆರ್

    ಟಾಲಿವುಡ್ (Tollywood) ನಟ ಜ್ಯೂ.ಎನ್‌ಟಿಆರ್ (Jr.Ntr) ಮೇ 20ರಂದು 41ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ಹಿನ್ನೆಲೆ ಆಂಧ್ರಪ್ರದೇಶದ ದೇವಸ್ಥಾನವೊಂದಕ್ಕೆ ಜ್ಯೂ.ಎನ್‌ಟಿಆರ್ 12.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಶ್ರೀಭದ್ರಕಾಳಿ ಹಾಗೂ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ‘ದೇವರ’ ಚಿತ್ರದ ನಟ ಜ್ಯೂ.ಎನ್‌ಟಿಆರ್ 12.5 ಲಕ್ಷ ರೂ. ಹಣವನ್ನು ದೇಣಿಗೆ ಆಗಿ ನೀಡಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ನಟನ ಕುಟುಂಬ ದೇಣಿಗೆ ನೀಡಿದ್ದು. ಇಂತಹ ವಿಚಾರ ಅವರಿಗೆ ಹಂಚಿಕೊಳ್ಳಲು ಇಷ್ಟವಿಲ್ಲ. ಎಲ್ಲೂ ಹೇಳಿಕೊಳ್ಳದೇ ಇದ್ದರೂ ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ನಂತರ ಈ ವಿಚಾರ ನಿಜ ಎಂದು ಜ್ಯೂ.ಎನ್‌ಟಿಆರ್ ತಂಡ ಖಚಿತಪಡಿಸಿದೆ. ಈ ಸುದ್ದಿ ಕೇಳಿ ನಟನ ನಡೆಗೆ ಅಭಿಮಾನಿಗಳು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:ಐಶ್ವರ್ಯಾ ರೈ ಕೈಗೆ ಪೆಟ್ಟು- ಕಾನ್ಸ್ ಚಿತ್ರೋತ್ಸವದತ್ತ ನಟಿ

    ಅಂದಹಾಗೆ ‘ಆರ್‌ಆರ್‌ಆರ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ಇದರ ನಡುವೆ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇದೇ ಮೇ 20ರಂದು ತಾರಕ್ ಬರ್ತ್‌ಡೇ ಆದರೆ ಒಂದು ದಿನ (ಮೇ 19) ಮುಂಚಿತವಾಗಿ ಸಾಂಗ್ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

    ಕೆಲವು ತಿಂಗಳುಗಳ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ (Janhvi Kapoor) ಪಾತ್ರದ ಲುಕ್ ಅನ್ನು ಚಿತ್ರತಂಡ ಹಂಚಿಕೊಂಡಿತ್ತು. ಹಾಗಾಗಿ ಚಿತ್ರದ ಮೊದಲ ಸಾಂಗ್ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

    ‘ದೇವರ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಇದೇ ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ‘ದೇವರ’ (Devara Film) ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ತಾರಕ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

  • ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ಮಗಧೀರ ಬೆಡಗಿ ಕಾಜಲ್

    ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ಮಗಧೀರ ಬೆಡಗಿ ಕಾಜಲ್

    ‘ಮಗಧೀರ’ ಬ್ಯೂಟಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆಯಾಗಿ ಮಗು ಆದ್ಮೇಲೆ ಕೂಡ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಚಾರ್ಮ್ ಅನ್ನು ನಟಿ ಉಳಿಸಿಕೊಂಡಿದ್ದಾರೆ. ಸದ್ಯ ನಟಿಯ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ಸ್ಟಾರ್ ನಟ ಜ್ಯೂ.ಎನ್‌ಟಿಆರ್ ನಟನೆಯ ದೇವರ ಚಿತ್ರಕ್ಕೆ ಕಾಜಲ್ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಇಂದು ಡಾ.ರಾಜ್‌ಕುಮಾರ್ 95ನೇ ವರ್ಷದ ಹುಟ್ಟುಹಬ್ಬ

    ಇತ್ತೀಚೆಗೆ ಪೂಜಾ ಹೆಗ್ಡೆ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯುತ್ತಾರೆ ಎನ್ನಲಾಗಿತ್ತು. ಪೂಜಾ ಒಬ್ಬರೇ ಅಲ್ಲ ಅವರ ಜೊತೆ ಕಾಜಲ್ ಕೂಡ ಸೊಂಟ ಬಳುಕಿಸಲಿದ್ದಾರೆ ಎಂಬ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಬ್ಬರೂ ಕೂಡ ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಲಿದ್ದಾರೆ.

    ‘ದೇವರ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಕಾಜಲ್ ಡ್ಯಾನ್ಸ್‌ಗೆ ಮಾತ್ರ ಸೀಮಿತನಾ? ಅಥವಾ ನಟನೆಗೂ ಅವಕಾಶವಿದ್ಯಾ ಎಂಬುದು ಖಾತ್ರಿಯಾಗಿಲ್ಲ. ಜ್ಯೂ.ಎನ್‌ಟಿಆರ್‌ ಜೊತೆಗೆ ಈ ಹಿಂದೆ ಕೂಡ ನಾಯಕಿಯಾಗಿ ಕಾಜಲ್‌ ನಟಿಸಿದ್ದಾರೆ. ಆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿತ್ತು.

    ಇನ್ನೂ ಈ ಹಿಂದೆ ಕೂಡ ಚಿರಂಜೀವಿ, ರಾಮ್ ಚರಣ್ ನಟನೆಯ ‘ಆಚಾರ್ಯ’ (Acharya) ಚಿತ್ರದಲ್ಲಿ ಪೂಜಾ ಹೆಗ್ಡೆ (Pooja Hegde) ಮತ್ತು ಕಾಜಲ್ ಜೊತೆಯಾಗಿ ನಟಿಸಿದ್ದರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಹಾಗಾಗಿ ಮತ್ತೆ ಈ ಕಾಂಬಿನೇಷನ್ ರಿಪೀಟ್ ಆದರೆ ಚೆನ್ನಾಗಿರುತ್ತೆ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಮುಂದಿನ ದಿನಗಳಲ್ಲಿ ಚಿತ್ರತಂಡದಿಂದ ಈ ಕುರಿತು ಸಿಹಿಸುದ್ದಿ ಸಿಗುತ್ತಾ? ಕಾಯಬೇಕಿದೆ.

  • ಜ್ಯೂ.ಎನ್‌ಟಿಆರ್‌ ಸಿನಿಮಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಪೂಜಾ ಹೆಗ್ಡೆ

    ಜ್ಯೂ.ಎನ್‌ಟಿಆರ್‌ ಸಿನಿಮಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಪೂಜಾ ಹೆಗ್ಡೆ

    ಕುಡ್ಲದ ಸುಂದರಿ ಪೂಜಾ ಹೆಗ್ಡೆ ಇತ್ತೀಚೆಗೆ ಬಾಲಿವುಡ್ ನಟ ರೋಹನ್ ಮೆಹ್ರಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಈ ಬೆನ್ನಲ್ಲೇ, ಮತ್ತೆ ಸಿನಿಮಾದ ವಿಚಾರವಾಗಿ ಪೂಜಾ ಹೆಗ್ಡೆ (Pooja Hegde) ಚಾಲ್ತಿಗೆ ಬಂದಿದ್ದಾರೆ. ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ಹೊಸ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ.

    ಜ್ಯೂ.ಎನ್‌ಟಿಆರ್- ಜಾನ್ವಿ ಕಪೂರ್ (Janhvi Kapoor) ನಟನೆಯ ‘ದೇವರ’ (Devara Film) ಸಿನಿಮಾಗೆ ಪೂಜಾ ಹೆಗ್ಡೆ ಎಂಟ್ರಿ ಕೊಡಲಿದ್ದಾರೆ. ನಟಿಸಲು ಅಲ್ಲ, ಬದಲಿಗೆ ತಾರಕ್ ಜೊತೆ ಸ್ಪೆಷಲ್ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲು ಬರುತ್ತಿದ್ದಾರೆ. ಸೂಪರ್ ಆಗಿರೋ ಐಟಂ ಹಾಡಿಗೆ ನಟಿ ಸೊಂಟ ಬಳುಕಿಸಲಿದ್ದಾರೆ. ಇದನ್ನೂ ಓದಿ:ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

    ಈಗಾಗಲೇ ‘ದೇವರ’ ಚಿತ್ರತಂಡ ಪೂಜಾಗೆ ಸಂಪರ್ಕಿಸಿದೆ. ಐಟಂ ಸಾಂಗ್ ಬಗ್ಗೆ ಮಾತನಾಡಿ ಆಗಿದೆ. ನಟಿ ಕೂಡ ಓಕೆ ಎಂದಿದ್ದಾರೆ. ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಬರುವವರೆಗೂ ಕಾಯಬೇಕಿದೆ.

    ಅಂದಹಾಗೆ, 2018ರಲ್ಲಿ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಪೂಜಾ ನಟಿಸಿದ್ದರು. ಇದೀಗ 2ನೇ ಬಾರಿ ಈ ಹಿಟ್ ಕಾಂಬಿನೇಷನ್ ದೇವರ ಚಿತ್ರದ ಮೂಲಕ ಒಂದಾಗುತ್ತಿದೆ.

  • ‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

    ‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

    ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ಬಹುನಿರೀಕ್ಷಿತ ‘ದೇವರ’ (Devara Film) ಚಿತ್ರಕ್ಕೆ ನಿರ್ಮಾಪಕ ಕರಣ್ ಜೋಹರ್ ಕೈಜೋಡಿಸಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಸೌತ್‌ನಲ್ಲಿಯೂ ಉತ್ತಮ ಒಡನಾಟ ಹೊಂದಿರುವ ಕರಣ್ (Karan Johar) ಇದೀಗ ದೇವರ ಚಿತ್ರವನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ.

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ‘ದೇವರ’ ಚಿತ್ರದ ಮೇಲೆ ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ನಡುವೆ ದೇವರ ಚಿತ್ರದ ಉತ್ತರ ಭಾರತದ ಹಕ್ಕನ್ನು ಕರಣ್ ಜೋಹರ್ ಖರೀದಿಸಿದ್ದಾರೆ. ಇದನ್ನೂ ಓದಿ:‘ಸಿದ್ಲಿಂಗು 2’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರ

     

    View this post on Instagram

     

    A post shared by Karan Johar (@karanjohar)

    ‘ಯುವಸುಧಾ ಆರ್ಟ್ಸ್’ ಮತ್ತು ‘ಎನ್‌ಟಿಆರ್ ಆರ್ಟ್ಸ್’ ಸಂಸ್ಥೆಗಳ ಮೂಲಕ ‘ದೇವರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಂಸ್ಥೆಗಳ ಜೊತೆ ಕರಣ್ ಜೋಹರ್ ಅವರು ಮಾತುಕತೆ ನಡೆಸಿದ್ದಾರೆ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಜ್ಯೂ.ಎನ್‌ಟಿಆರ್ ಅಭಿನಯದ ‘ದೇವರ’ ಸಿನಿಮಾದ ಭಾಗವಾಗಲು ಸಂತೋಷವಾಗುತ್ತಿದೆ ಎಂದು ಕರಣ್ ಪೋಸ್ಟ್ ಮಾಡಿದ್ದಾರೆ. ತಾರಕ್ ಜೊತೆಗಿನ ಫೋಟೋ ಕೂಡ ಕರಣ್ ಜೋಹರ್ ಶೇರ್ ಮಾಡಿದ್ದಾರೆ.

    ಇದೇ ಅಕ್ಟೋಬರ್ 10ಕ್ಕೆ ಬಹುಭಾಷೆಗಳಲ್ಲಿ ‘ದೇವರ’ ಸಿನಿಮಾ ರಿಲೀಸ್ ಆಗುತ್ತಿದೆ. ತಾರಕ್‌ಗೆ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ನಟಿಸಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ.

  • ಶಿಖರ್‌ ತನ್ನ ಬಾಯ್‌ಫ್ರೆಂಡ್‌ ಎಂದು ನೆಕ್ಲೇಸ್‌ ಮೂಲಕ ಅಧಿಕೃತಪಡಿಸಿದ ಜಾನ್ವಿ ಕಪೂರ್

    ಶಿಖರ್‌ ತನ್ನ ಬಾಯ್‌ಫ್ರೆಂಡ್‌ ಎಂದು ನೆಕ್ಲೇಸ್‌ ಮೂಲಕ ಅಧಿಕೃತಪಡಿಸಿದ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದ್ಯ ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇದರ ನಡುವೆ ಕೊನೆಗೂ ಶಿಖರ್ (Shikhar Pahariya) ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಶಿಖು ಹೆಸರಿನ ಪೆಂಡೆಂಟ್ ಇರುವ ನೆಕ್ಲೇಸ್ ಧರಿಸುವ ಮೂಲಕ ತಮ್ಮ ಸಂಬಂಧವನ್ನು ನಟಿ ಅಧಿಕೃತಪಡಿಸಿದ್ದಾರೆ.

    ಜಾನ್ವಿ ಕಪೂರ್ ಮತ್ತು ಶಿಖರ್ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ಆದರೆ ಬಾಲ್ಯದ ಗೆಳೆತನ ಪ್ರೀತಿಗೆ ತಿರುಗಿದೆ. ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಕ್ಕೆ ಸದ್ಯ ಜಾನ್ವಿ ಕಪೂರ್ ಧರಿಸಿರುವ ನೆಕ್ಲೇಸ್ ಸಾಕ್ಷಿಯಾಗಿದೆ. ಇದನ್ನೂ ಓದಿ:ಏಪ್ರಿಲ್ 15ರಿಂದ ‘ಉತ್ತರಕಾಂಡ’ ಸಿನಿಮಾದ ಶೂಟಿಂಗ್ ಶುರು

     

    View this post on Instagram

     

    A post shared by Viral Bhayani (@viralbhayani)

    ಇತ್ತೀಚೆಗೆ ಕರಣ್ ಜೋಹರ್ ಶೋನಲ್ಲಿ ಜಾನ್ವಿಗೆ ಒಂದು ಪ್ರಶ್ನೆ ಎದುರಾಗಿತ್ತು. ಸ್ಪೀಡ್ ಡಯಲ್‌ನಲ್ಲಿ ಯಾರಿಗೆ ಕಾಲ್ ಮಾಡುತ್ತೀರಿ ಎಂದು ಕೇಳಲಾಗಿತ್ತು. ಅಪ್ಪ, ತಂಗಿ ಖುಷಿ ಮತ್ತು ಶಿಖು ಎಂದು ಥಟ್ ಎಂದು ಉತ್ತರ ಕೊಟ್ಟಿದ್ದರು. ಅಲ್ಲಿ ರೆಡ್ ಹ್ಯಾಂಡ್ ಆಗಿ ಜಾನ್ವಿ ಕಪೂರ್ ಸಿಕ್ಕಿಬಿದ್ದಿದ್ದರು.

    ಬಳಿಕ ಅಂಬಾನಿ ಮನೆ ಕಾರ್ಯಕ್ರಮದಲ್ಲಿಯೂ ಕೂಡ ಜಾನ್ವಿ ಮತ್ತು ಶಿಖರ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದು ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಈಗ ಬಾಯಿ ಬಿಟ್ಟು ನಟಿ ಹೇಳದೇ ಇದ್ದರೂ ಜಾನ್ವಿ ಧರಿಸಿರುವ ನೆಕ್ಲೇಸ್‌ನಿಂದ ಸತ್ಯ ಹೊರಬಿದ್ದಿದೆ.

  • ಎದೆಯ ಗೀಟು ಕಾಣುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಎದೆಯ ಗೀಟು ಕಾಣುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಎದೆಯ ಗೀಟು ಕಾಣಿಸುವಂತೆ ಕ್ಯಾಮೆರಾ ಕಣ್ಣಿಗೆ ಜಾನ್ವಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಕಪ್ಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಜಾನ್ವಿ ಕಪೂರ್ ಬೋಲ್ಡ್ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬ್ಲ್ಯಾಕ್ ಕಲರ್ ಬಟ್ಟೆ ಧರಿಸಿ ಮಾದಕ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:‘ಮೂರನೇ ಕೃಷ್ಣಪ್ಪ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್

    ಬಾಲಿವುಡ್‌ನಲ್ಲಿ ಮಿಂಚ್ತಿದ್ದ ಶ್ರೀದೇವಿ ಕಪೂರ್ ಪುತ್ರಿ ಜಾನ್ವಿ ತೆಲುಗಿಗೆ ಕಾಲಿಟ್ಟಿರೋದು ಗೊತ್ತೇ ಇದೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಣ್ಣ ಹಚ್ತಿದ್ದಾರೆ. ‘ದೇವರ’ (Devara Film) ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಜ್ಯೂ.ಎನ್‌ಟಿಆರ್‌ಗೆ (Jr.Ntr) ಜೋಡಿಯಾಗುವ ಮೂಲಕ ತೆಲುಗಿಗೆ ಜಾನ್ವಿ ಡೆಬ್ಯೂ ಮಾಡ್ತಿದ್ದಾರೆ. ಸೌತ್ ಸಿನಿ ಪ್ರಿಯರ ಮನಗೆಲ್ಲುತ್ತಾರಾ ಕಪೂರ್ ಕುಟುಂಬದ ಕುಡಿ? ಬಾಲಿವುಡ್ ಚಿತ್ರರಂಗ ಅಂತೂ ಕೈಹಿಡಿಯಲಿಲ್ಲ. ಟಾಲಿವುಡ್‌ನಲ್ಲಿಯಾದ್ರೂ (Tollywood) ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

  • ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್‌ ಯಾವಾಗ? ಇಲ್ಲಿದೆ ಅಪ್‌ಡೇಟ್

    ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್‌ ಯಾವಾಗ? ಇಲ್ಲಿದೆ ಅಪ್‌ಡೇಟ್

    ಜ್ಯೂ.ಎನ್‌ಟಿಆರ್ (Jr.Ntr) ನಟನೆಯ 31ನೇ ಚಿತ್ರಕ್ಕೆ ‘ಕೆಜಿಎಫ್’ (KGF) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ (Prashanth Neel) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬೋದಲ್ಲಿ ಸಿನಿಮಾ ಬರುವ ಬಗ್ಗೆ ಕಳೆದ ವರ್ಷ ಅನೌನ್ಸ್ ಮಾಡಿದ್ದರು. ಇದೀಗ ಶೂಟಿಂಗ್‌ ಶುರುವಾಗುವ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ:Leo ಪೋಸ್ಟರ್‌ ಔಟ್- ರಗಡ್‌ ಲುಕ್‌ನಲ್ಲಿ ಅರ್ಜುನ್ ಸರ್ಜಾ

    ಕೆಜಿಎಫ್, ಕೆಜಿಎಫ್ 2 ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಕೈಜೋಡಿಸಿದ್ದು, ಜ್ಯೂ.ಎನ್‌ಟಿಆರ್ 31ನೇ ಸಿನಿಮಾ ಮುಂದಿನ ವರ್ಷ 2024ರ ಏಪ್ರಿಲ್‌ನಿಂದ ಶೂಟಿಂಗ್‌ ಶುರು ಮಾಡುವುದಾಗಿ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತಿಳಿಸಿದೆ.

    ಸದ್ಯ ಜ್ಯೂ.ಎನ್‌ಟಿಆರ್ ‘ದೇವರ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಪ್ರಶಾಂತ್ ನೀಲ್ ಅವರು ಪ್ರಭಾಸ್ ಜೊತೆಗಿನ ‘ಸಲಾರ್’ (Salaar) ಚಿತ್ರೀಕರಣದತ್ತ ಗಮನ ನೀಡುತ್ತಿದ್ದಾರೆ. ಈ 2 ಚಿತ್ರಗಳ ಬಳಿಕ ಜ್ಯೂ.ಎನ್‌ಟಿಆರ್-ನೀಲ್ ಕಾಂಬಿನೇಷನ್ ಚಿತ್ರ ಶುರುವಾಗಲಿದೆ. ಸಲಾರ್‌ ಬಳಿಕ ಜ್ಯೂ.ಎನ್‌ಟಿಆರ್‌ ಜೊತೆಗಿನ ಚಿತ್ರವನ್ನ ಕೈಗೆತ್ತಿಕೊಳ್ಳುತ್ತಾರೆ ‌’ಕೆಜಿಎಫ್’ ಡೈರೆಕ್ಟರ್‌. ಇಬ್ಬರು ಪ್ರತಿಭಾವಂತರು ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತಿರೋದ್ರಿಂದ ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

    ಕಳೆದ ವರ್ಷ ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಸ ಪ್ರಾಜೆಕ್ಟ್ ಬಗ್ಗೆ ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿತ್ತು. ಜ್ಯೂ.ಎನ್‌ಟಿಆರ್ ಕಪ್ಪು ಬಣ್ಣದ ಶೇಡ್‌ನಲ್ಲಿ ರಾ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘Devara’ ಚಿತ್ರದ ಅಪ್‌ಡೇಟ್- ಜ್ಯೂ.ಎನ್‌ಟಿಆರ್‌ಗೆ ತಾಯಿಯಾಗಿ ನಟಿಸುತ್ತಾರಾ ಪ್ರಿಯಾಮಣಿ?

    ‘Devara’ ಚಿತ್ರದ ಅಪ್‌ಡೇಟ್- ಜ್ಯೂ.ಎನ್‌ಟಿಆರ್‌ಗೆ ತಾಯಿಯಾಗಿ ನಟಿಸುತ್ತಾರಾ ಪ್ರಿಯಾಮಣಿ?

    ಟಾಲಿವುಡ್ ಬಹುನಿರೀಕ್ಷಿತ ‘ದೇವರ’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆರ್‌ಆರ್‌ಆರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ (Jr.ntr) ದೇವರ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. ಈ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅಂದು ತಾರಕ್‌ಗೆ ನಾಯಕಿಯಾಗಿದ್ದ ಪ್ರಿಯಾಮಣಿ (Priyamani) ಈಗ ತಾಯಿ ಪಾತ್ರದಲ್ಲಿ ನಟಿಸಲು ಓಕೆ ಎಂದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

    ಬಹುಭಾಷಾ ನಟಿಯಾಗಿ ಪ್ರಿಯಾಮಣಿಗೆ (Priyamani) ಇಂದಿಗೂ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ‘ದೇವರ’ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್-ಪ್ರಿಯಾಮಣಿ ತಾಯಿ ಮತ್ತು ಮಗನಾಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಮಂತಾ ಔಟ್‌, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್‌ ಚಾನ್ಸ್

    ಕೊರಟಾಲ ಶಿವ-ಜ್ಯೂ.ಎನ್‌ಟಿಆರ್ ಕಾಂಬೋದಲ್ಲಿ ‘ದೇವರ’ (Devara) ಸಿನಿಮಾ ಮೂಡಿ ಬರುತ್ತಿದೆ. ಜ್ಯೂ.ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಂಗ್ ಹೀರೋಗೆ ಜಾನ್ವಿ ಕಪೂರ್ (Janhavi Kapoor) ನಾಯಕಿಯಾಗಿದ್ದಾರೆ. ಪ್ರಿಯಾಮಣಿ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಜ್ಯೂ.ಎನ್‌ಟಿಆರ್ ತಾಯಿಯ ಪಾತ್ರ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬುದನ್ನ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.

    ‘ದೇವರ’ ಚಿತ್ರದ ಬಳಿಕ ಪ್ರಶಾಂತ್ ನೀಲ್ (Prashanth Neel) ಜೊತೆ ಜ್ಯೂ.ಎನ್‌ಟಿಆರ್ ಕೈಜೋಡಿಸಿದ್ದಾರೆ. ದೇವರ ಸಿನಿಮಾ ರಿಲೀಸ್ ಬಳಿಕ ಕೆಜಿಎಫ್ ನಿರ್ದೇಶಕನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಪುತ್ರಿ?

    ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಪುತ್ರಿ?

    ಆರ್‌ಆರ್‌ಆರ್’ (RRR) ಸಿನಿಮಾದ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ ಅವರು ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಂದೂ ಮಾಡಿರದ ಡಿಫರೆಂಟ್ ರೋಲ್‌ನಲ್ಲಿ ತಾರಕ್ ಕಾಣಿಸಿಕೊಳ್ತಿದ್ದಾರೆ. ಹೀಗಿರುವಾಗ ‘ದೇವರ’ (Devara) ಸಿನಿಮಾಗೆ ಸ್ಟಾರ್ ನಟ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ (Allu arha) ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಕೊನೆಗೂ ಮಗುವಿನ ತಂದೆ ಯಾರೆಂದು ಗುಟ್ಟು ಬಿಟ್ಟು ಕೊಟ್ಟ ಇಲಿಯಾನಾ

    ರಾಜಮೌಳಿ ನಿರ್ದೇಶನದ ಸಿನಿಮಾ ‘ಆರ್‌ಆರ್‌ಆರ್’ ಚಿತ್ರದ ಯಶಸ್ಸಿನ ನಂತರ ತಾರಕ್ ‘ದೇವರ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ನಾಯಕಿಯಾಗಿ ಜಾನ್ವಿ ಕಪೂರ್ ಸಾಥ್ ನೀಡಿದ್ರೆ, ವಿಲನ್ ಆಗಿ ಸೈಫ್ ಅಲಿ ಖಾನ್ (Saif Ali Khan) ಅಬ್ಬರಿಸುತ್ತಿದ್ದಾರೆ. ಸೈಫ್‌ಗೆ ಪತ್ನಿಯಾಗಿ ಕನ್ನಡದ ನಟಿ ಚೈತ್ರಾ ರೈ (Chaithra Rai) ನಟಿಸುತ್ತಿದ್ದಾರೆ.

    ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಅವರು ಡಬಲ್ ಶೇಡ್‌ನಲ್ಲಿ ನಟಿಸುತ್ತಿದ್ದಾರೆ. ತಾರಕ್ ಮಗಳ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅರ್ಹಾಗೆ ನಟನೆಗೆ ಅವಕಾಶ ಕಮ್ಮಿ ಇದ್ರೂ ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಹಾಗಾಗಿ ಸಿನಿಮಾಗೆ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರಂತೆ. 2-3 ದಿನಗಳ ಕಾಲ ಶೂಟಿಂಗ್‌ಗೆ 20 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಮಂತಾ (Samantha) ನಟನೆಯ ‘ಶಾಕುಂತಲಂ’ ಸಿನಿಮಾಗೂ ಅರ್ಹಾ ಪಾತ್ರಕ್ಕೆ ದುಬಾರಿ ಸಂಭಾವನೆ ಪಡೆದಿದ್ದರು. ಸಮಂತಾ ಮಗನಾಗಿ ಅರ್ಹಾ ನಟಿಸಿದ್ದರು.

    ಕ್ಯಾಮೆರಾ ಅಂದರೆ ಹೆಚ್ಚು ಅಲ್ಲು ಅರ್ಹಾ ಆಕ್ಟಿಂಗ್ ಒಲವಿದೆ. ಸದ್ಯ ‘ದೇವರ’ ಸಿನಿಮಾ ವಿಚಾರವಾಗಿ ಅಲ್ಲು ಅರ್ಜುನ್ (Allu Arjun) ಪುತ್ರಿ, ಅರ್ಹಾ ಸದ್ದು ಮಾಡುತ್ತಿದ್ದಾರೆ. ಈ ಸಿನಿಮಾದ ಭಾಗವಾಗಿರೋದು ನಿಜಾನಾ ಅಂತಾ ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]