Tag: ದೇವರ ಸಿನಿಮಾ

  • ‘ದೇವರ’ ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್- ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ

    ‘ದೇವರ’ ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್- ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ

    ತೆಲುಗು ನಟ ಜ್ಯೂ.ಎನ್‌ಟಿಆರ್ (Jr.Ntr) ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಬರುತ್ತಿರುವ ‘ದೇವರ’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ದೇವರ’ (Devara Film) ರಿಲೀಸ್‌ಗೂ ಮುನ್ನವೇ ಮುಂಗಡ ಬುಕ್ಕಿಂಗ್ ಸೋಲ್ಡ್ ಆಗಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ

    ದೇಶಾದ್ಯಂತ ‘ದೇವರ’ ಚಿತ್ರ ಸೆ.27ರಂದು ರಿಲೀಸ್ ಆಗಲಿದೆ. ಮಿಡ್ ನೈಟ್ ಶೋ ನೋಡೋದ್ದಕ್ಕೂ ಫ್ಯಾನ್ಸ್‌ಗೆ ಅವಕಾಶವಿದೆ. ಹೈದರಾಬಾದ್, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವೆಡೆ 1,300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ದೇವರ’ ಚಿತ್ರ ತೆರೆಕಾಣುತ್ತಿದೆ. ರಿಲೀಸ್‌ಗೆ 4 ದಿನ ಬಾಕಿಯಿರುವಾಗಲೇ ಲಕ್ಷ ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ.  ಟಿಕೆಟ್ ದರ ಹೆಚ್ಚಾಗಿದ್ರೂ ಚಿತ್ರಕ್ಕೆ ಭಾರೀ ಬೇಡಿಕೆಯಿದೆ.

    ಅಂದಹಾಗೆ, ‘ದೇವರ’ ಟ್ರೈಲರ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜಾತಿ, ಧರ್ಮ, ಭಯ ಎಲ್ಲಿಲ್ಲ ಎಂದು ಶುರವಾಗುವ ಡೈಲಾಗ್‌ಗೆ ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಲ್ಲಿ ಭಯದ ಪೊರೆ ಆವರಿಸಿಕೊಂಡು ಎಂದು ಹೇಳುವಾಗ ತಾರಕ್‌ಗೆ ನೀಡಿದ ಲುಕ್ ಮಸ್ತ್ ಆಗಿದೆ. ಮನುಷ್ಯನಿಗೆ ಬದುಕುವಷ್ಟು ಧೈರ್ಯವಿದೆ ಕೊಲ್ಲಲು ಆ ಧೈರ್ಯ ಸಾಕಾಗುವುದಿಲ್ಲ ಎಂಬಂತಹ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ದ್ವಿಪಾತ್ರಗಳಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಂಡಿರೋದು ಟ್ರೈಲರ್‌ನಿಂದ ಸ್ಪಷ್ಟವಾಗಿದೆ. ಹೇಡಿ ಮಗ ಇನ್ನೊಂದು ಕಡೆ ಹಿಂಸಾತ್ಮಕ ತಂದೆಯಾಗಿ ಬದಲಾಗಿದ್ದರ ಬಗ್ಗೆ ಟ್ರೈಲರ್‌ನಿಂದ ಚಿತ್ರದ ಕಥೆಯ ಸುಳಿವು ನೀಡಿದ್ದಾರೆ. ಜ್ಯೂ.ಎನ್‌ಟಿಆರ್ ಎದುರು ಸೈಫ್ ಅಲಿ ಖಾನ್ ನಟನೆ ನೋಡುಗರಿಗೆ ಕಿಕ್ ಕೊಟ್ಟಿದೆ. ತಾರಕ್ ಮತ್ತು ಜಾನ್ವಿ ಕಾಂಬಿನೇಷನ್ ಝಲಕ್ ಸೊಗಸಾಗಿದೆ. ಒಟ್ನಲ್ಲಿ ರಿಲೀಸ್ ಆಗಿರುವ ‘ದೇವರ’ ಚಿತ್ರದ ಟ್ರೈಲರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಪಡೆಯುತ್ತಿದೆ.

    ಡಬಲ್ ರೋಲ್‌ನಲ್ಲಿ ನಟಿಸಿರುವ ಜ್ಯೂ.ಎನ್‌ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನೂ ಚಿತ್ರದಲ್ಲಿ ತಾರಕ್ ಮತ್ತು ಜಾನ್ವಿ ಕಪೂರ್ ಜೊತೆ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಅನೇಕರು ನಟಿಸಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಸೆ.10ರಂದು ರಿಲೀಸ್‌ ಆಗಲಿದೆ ಜ್ಯೂ.ಎನ್‌ಟಿಆರ್‌ ನಟನೆಯ ‘ದೇವರ’ ಚಿತ್ರದ ಟ್ರೈಲರ್‌

    ಸೆ.10ರಂದು ರಿಲೀಸ್‌ ಆಗಲಿದೆ ಜ್ಯೂ.ಎನ್‌ಟಿಆರ್‌ ನಟನೆಯ ‘ದೇವರ’ ಚಿತ್ರದ ಟ್ರೈಲರ್‌

    ಜ್ಯೂ.ಎನ್‌ಟಿಆರ್ (Jr.Ntr) ಅಭಿನಯದ ಬಹುನಿರೀಕ್ಷಿತ ‘ದೇವರ’ (Devara) ಸಿನಿಮಾ. ಇದೇ ಸೆ.27ಕ್ಕೆ ದೇಶದಾದ್ಯಂತ ಅದ್ದೂರಿಯಾಗಿ ರಿಲೀಸ್ ಮಾಡೋಕೆ ತಯಾರಿ ಮಾಡಿಕೊಂಡಿದೆ ಚಿತ್ರತಂಡ. ಸಿನಿಮಾ ರಿಲೀಸ್‌ಗೂ ಮುಂಚೆ ಟ್ರೈಲರ್ ರಿಲೀಸ್ ಮಾಡೋಕೆ ಡಿಫರೆಂಟ್ ಆಗಿ ಪ್ಲ್ಯಾನ್ ಕೂಡ ಮಾಡಿಕೊಂಡಿದೆಯಂತೆ ಸಿನಿಮಾತಂಡ. ಟ್ರೈಲರ್ ಲಾಂಚ್ ಇವೆಂಟ್‌ಗೆ ಸ್ಟಾರ್ ನಟ, ನಟಿಯರು ಹಾಗೂ ಡೈರೆಕ್ಟರ್‌ಗಳನ್ನ ಅತಿಥಿಯಾಗಿ ಕರೆಯುವುದಕ್ಕೂ ಮಾತುಕತೆ ನಡೆದಿದೆ. ಅದೆಲ್ಲದರ ವಿವರ ಇಲ್ಲಿದೆ.

    ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ ತಾರಕ್‌ ಅವರು ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾರನ್ನ ಮೀಟ್ ಮಾಡಿದ್ದಾರೆ. ಇವರಿಗೂ ಸೆಪ್ಟಂಬರ್ 10ಕ್ಕೆ ನಡೆಯಲಿರುವ ‘ದೇವರ’ ಸಿನಿಮಾದ ಟ್ರೈಲರ್ ಲಾಂಚ್‌ಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಬೋನಿ ಕಪೂರ್‌, ಶಾರುಖ್‌, ಸಲ್ಮಾನ್‌, ಅರ್ಜುನ್‌ ಕಪೂರ್ ಸೇರಿದಂತೆ ಹಲವರಿಗೆ ಚಿತ್ರತಂಡ ಆಹ್ವಾನ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ‌ಇನ್ನೂ ದೇವರ ಟ್ರೈಲರ್‌ ರಿಲೀಸ್‌ ಕೌಂಟ್‌ಡೌನ್‌ ಶುರುವಾಗಿದ್ದು, ಇದರ ಝಲಕ್‌ ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. ಇದನ್ನೂ ಓದಿ:15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    ಕೊರಟಾಲ ಶಿವ ನಿರ್ದೇಶನವಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವಿದೆ. ತಾರಕ್‌ಗೆ ಜೋಡಿಯಾಗಿ ಜಾಹ್ನವಿ ಕಪೂರ್ (Janhvi Kapoor) ಕಾಣಿಸಿಕೊಂಡಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಹಾಗೂ ಪ್ರಕಾಶ್ ರಾಜ್ ಕೂಡಾ ವಿಭಿನ್ನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸದ್ಯ ಟ್ರೈಲರ್ ಲಾಂಚ್ ಕಾರ್ಯಕ್ರಮದ ಕಡೆ ಗಮನಹರಿಸಿರುವ ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಚಿತ್ರವನ್ನ ರಿಲೀಸ್ ಮಾಡಲಿದೆ.

  • Devara: ಜ್ಯೂ.ಎನ್‌ಟಿಆರ್‌ ಜೊತೆ ಸೊಂಟ ಬಳುಕಿಸಿದ ಜಾನ್ವಿ ಕಪೂರ್

    Devara: ಜ್ಯೂ.ಎನ್‌ಟಿಆರ್‌ ಜೊತೆ ಸೊಂಟ ಬಳುಕಿಸಿದ ಜಾನ್ವಿ ಕಪೂರ್

    ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ‘ದೇವರ’ (Devara) ಸಿನಿಮಾದ ಸಾಂಗ್ ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತಾರಕ್ ರಾಮ್ ಜೊತೆಯಾಗಿ ಜಾನ್ವಿ ಕಪೂರ್ ಸೊಂಟ ಬಳುಕಿಸಿರುವ ರೀತಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ‘ದೇವರ’ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ. ‘ದಾವೂದಿ’ ಎಂಬ ಸಾಂಗ್‌ಗೆ ಮಸ್ತ್ ಆಗಿರೋ ಹಾಡಿಗೆ ಜಬರ್‌ದಸ್ತ್ ಆಗಿ ತಾರಕ್ ಮತ್ತು ಜಾನ್ವಿ ಡ್ಯಾನ್ಸ್ ಮಾಡಿದ್ದಾರೆ. ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಸಾಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇಬ್ಬರ ಡ್ಯಾನ್ಸ್ ಧಮಾಕಾ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ಎಷ್ಟು ಜನರ ಜೊತೆ ಮಲಗಿದ್ದೀ?- ಬಾಲಕನ ಅಸಭ್ಯ ಪ್ರಶ್ನೆಗೆ ಉರ್ಫಿ ಜಾವೇದ್ ಶಾಕ್

     

    View this post on Instagram

     

    A post shared by Janhvi Kapoor (@janhvikapoor)

    ಇನ್ನೂ ಇತ್ತೀಚೆಗೆ ‘ದೇವರ’ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಲಾಗಿದೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಹುಡುಗನ ಹುರುಪು ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸೆ.27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ‘ದೇವರ’ ಚಿತ್ರದ ಪೋಸ್ಟರ್ ಔಟ್- ಎರಡು ವಿಭಿನ್ನ ಲುಕ್‌ನಲ್ಲಿ ಜ್ಯೂ.ಎನ್‌ಟಿಆರ್

    ‘ದೇವರ’ ಚಿತ್ರದ ಪೋಸ್ಟರ್ ಔಟ್- ಎರಡು ವಿಭಿನ್ನ ಲುಕ್‌ನಲ್ಲಿ ಜ್ಯೂ.ಎನ್‌ಟಿಆರ್

    ತೆಲುಗು ನಟ ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ‘ದೇವರ’ (Devara Film) ಸಿನಿಮಾದ ಹೊಸ ಪೋಸ್ಟರ್ ರಿವೀಲ್ ಆಗಿದೆ. ರಗಡ್ ಲುಕ್‌ನಲ್ಲಿ ಎರಡು ಡಿಫರೆಂಟ್ ಗೆಟಪ್‌ನಲ್ಲಿ ತಾರಕ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ‘ದಿ ಫೇಸಸ್ ಆಫ್ ಫಿಯರ್’ ಎಂದು ‘ದೇವರ’ ಸಿನಿಮಾದ ಪೋಸ್ಟರ್‌ನಲ್ಲಿ ಬರೆಯಲಾಗಿದ್ದು, ಜ್ಯೂ.ಎನ್‌ಟಿಆರ್ ಅವರ ಎರಡು ರೀತಿಯ ವಿಭಿನ್ನ ಲುಕ್ ನೋಡುಗರನ್ನು ಸೆಳೆಯುತ್ತಿದೆ. ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಅವರು ಕಾಣಿಸಿಕೊಳ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲೂ ಸುಳಿವು ಬಿಟ್ಟು ಕೊಟ್ಟಿಲ್ಲ.

     

    View this post on Instagram

     

    A post shared by NTR Arts (@ntrartsoffl)

    ಇನ್ನೂ ಇತ್ತೀಚೆಗೆ ‌’ದೇವರ’ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಲಾಗಿದೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಚಿತ್ರದ ಪೋಸ್ಟರ್ ಬಿಟ್ಟಿರೋದು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಜೊತೆ ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸೆ.27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

  • ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್

    ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್

    ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ (Devara Film) ಸಿನಿಮಾದ ರೊಮ್ಯಾಂಟಿಕ್ ಸಾಂಗ್ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಕಾತರಕ್ಕೆ ತೆರೆಬಿದ್ದಿದೆ. ‘ದೇವರ’ ಚಿತ್ರದ ಸಾಂಗ್ ರಿಲೀಸ್ ಆಗಿದೆ. ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಜಾನ್ವಿ (Janhvi Kapoor) ಕಪೂರ್ ಸಖತ್ ಆಗಿ ಸ್ಟೇಪ್ ಹಾಕಿದ್ದಾರೆ.

    ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಿದ್ದಾರೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದನ್ನೂ ಓದಿ:ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

     

    View this post on Instagram

     

    A post shared by Janhvi Kapoor (@janhvikapoor)

    ಹಾಡಿನಲ್ಲಿ ಜಾನ್ವಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಎಂದೂ ಕಾಣಿಸಿಕೊಂಡಿದ ಲುಕ್‌ನಲ್ಲಿ ಮೋಡಿ ಮಾಡಿದ್ದಾರೆ. ತಾರಕ್ ಮತ್ತು ಕೆಮಿಸ್ಟ್ರಿ ಪಡ್ಡೆಹುಡುಗರ ಮನಸ್ಸು ಗೆದ್ದಿದೆ. ಸಾಂಗ್ ರಿಲೀಸ್ ಕೆಲವೇ ಹೊತ್ತಿನಲ್ಲಿ ಮಿಲಿಯನ್ ಗಟ್ಟಲೇ ವಿವ್ಸ್ ಪಡೆದಿದೆ. ಇದೇ ಸೆ.27ರಂದು ಬಹುಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇವರ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಆ.5ರಂದು ಹೊರಬೀಳಲಿದೆ ‘ದೇವರ’ ಚಿತ್ರದ ಅಪ್‌ಡೇಟ್

    ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಆ.5ರಂದು ಹೊರಬೀಳಲಿದೆ ‘ದೇವರ’ ಚಿತ್ರದ ಅಪ್‌ಡೇಟ್

    ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್ (Jr.Ntr) ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ‘ದೇವರ’ (Devara) ಸಿನಿಮಾಗಾಗಿ ಎದುರು ನೋಡ್ತಿದವರಿಗೆ ಕ್ರೇಜಿ ಅಪ್‌ಡೇಟ್ ಸಿಕ್ಕಿದೆ. ಕಾಡಿನಲ್ಲಿ ಜಾನ್ವಿ ಕಪೂರ್ (Janhvi Kapoor) ಜೊತೆ ಜ್ಯೂ.ಎನ್‌ಟಿಆರ್ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಕಲರ್‌ಫುಲ್ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ.

    ‘ದೇವರ’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಮಾಡೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಆ.5ರಂದು ಜ್ಯೂ.ಎನ್‌ಟಿಆರ್ ಜೊತೆಗಿನ ಜಾನ್ವಿ ಕಪೂರ್ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಇದನ್ನೂ ಓದಿ:ಸ್ತನ ಕ್ಯಾನ್ಸರ್ ಚಿಕಿತ್ಸೆ ನಡುವೆ ತಲೆಬೋಳಿಕೊಂಡ ಹಿನಾ ಖಾನ್- ಫ್ಯಾನ್ಸ್ ಶಾಕ್

     

    View this post on Instagram

     

    A post shared by Janhvi Kapoor (@janhvikapoor)

    ಈ ಹಾಡನ್ನು ಥೈಲ್ಯಾಂಡ್ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಹಾಡು ಸೊಗಸಾಗಿ ಮೂಡಿ ಬಂದಿದೆಯಂತೆ. ಸದ್ಯ ರಿಲೀಸ್ ಆಗಿರುವ ಇಬ್ಬರ ಪೋಸ್ಟರ್ ನೋಡಿ, ಚಿತ್ರದ ಸಾಂಗ್ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇನ್ನೂ ಈ ಚಿತ್ರ ಬಹುಭಾಷೆಗಳಲ್ಲಿ ಸೆ.27ರಂದು ರಿಲೀಸ್ ಆಗಲಿದೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: ಆರ್ಥಿಕ ನೆರವು ನೀಡಿದ ರಶ್ಮಿಕಾ, ಸೂರ್ಯ, ಮಮ್ಮುಟ್ಟಿ

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇವರ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್‌’ ಸಿನಿಮಾದ ಸಕ್ಸಸ್‌ ಬಳಿಕ ಬರುತ್ತಿರುವ ‘ದೇವರ’ (Devara Film) ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್‌ ಜೊತೆಗಿನ ಜ್ಯೂ.ಎನ್‌ಟಿಆರ್‌ ಹೊಸ ಸಿನಿಮಾ

    ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್‌ ಜೊತೆಗಿನ ಜ್ಯೂ.ಎನ್‌ಟಿಆರ್‌ ಹೊಸ ಸಿನಿಮಾ

    ಟ ಜ್ಯೂ.ಎನ್‌ಟಿಆರ್ (Jr.Ntr) ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್ (Bollywood) ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಆರ್‌ಆರ್‌ಆರ್’ (RRR) ಸಕ್ಸಸ್ ನಂತರ ತಾರಕ್ ಬೇಡಿಕೆ ಹೆಚ್ಚಾಗಿದೆ. ಇದೀಗ ಅವರ ಮುಂದಿನ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ಸಿಕ್ಕಿದೆ. ‘ದೇವರ’ ಚಿತ್ರದಂತೆಯೇ 2 ಭಾಗಗಳಲ್ಲಿ ಬರಲಿರುವ ಹೊಸ ಚಿತ್ರಕ್ಕೆ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಕಳೆದ ವರ್ಷ ‘ಹಾಯ್ ನಾನ್ನಾ’ (Hai Nanna) ಚಿತ್ರದ ಮೂಲಕ ಸಕ್ಸಸ್ ಕಂಡ ಶೌರ್ಯ ಈಗ ಜ್ಯೂ.ಎನ್‌ಟಿಆರ್‌ಗೆ ಆ್ಯಕ್ಷನ್ ಥ್ರಿಲರ್ ಕತೆಯೊಂದನ್ನು ಹೇಳಿದ್ದಾರೆ. ಇದು ಜ್ಯೂ.ಎನ್‌ಟಿಆರ್‌ಗೂ ಇಷ್ಟವಾಗಿ ಸಿನಿಮಾಗೆ ಓಕೆ ಎಂದಿದ್ದಾರೆ. ಸದ್ಯ ಎರಡು ಭಾಗಗಳಲ್ಲಿ ಸಿನಿಮಾ ಬರಲಿದೆ. ಮೊದಲ ಭಾಗದ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿದೆ. ಇದನ್ನೂ ಓದಿ:ಮಕ್ಕಳ ಜೊತೆ ರಾಧಿಕಾ ಪಂಡಿತ್ ವೆಕೇಷನ್- ಯಶ್ ಎಲ್ಲಿ ಎಂದ ಫ್ಯಾನ್ಸ್

    ಈಗಾಗಲೇ ಜ್ಯೂ.ಎನ್‌ಟಿಆರ್ ಒಪ್ಪಿಕೊಂಡಿರುವ ಸಿನಿಮಾ ಪೂರ್ಣಗೊಳಿಸಬೇಕಿದೆ. ಹಾಗಾಗಿ ಈ ಚಿತ್ರ 2026ರಲ್ಲಿ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಕಿರುತೆರೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

    ಅಂದಹಾಗೆ, ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಜೊತೆ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ನಟಿಸಿದ್ದಾರೆ. ಬಾಲಿವುಡ್ ಚಿತ್ರ ‘ವಾರ್ 2’ನಲ್ಲಿ ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡಿದ್ದಾರೆ. ಇದರ ನಂತರ ಪ್ರಶಾಂತ್ ನೀಲ್ (Prashanth Neel) ಜೊತೆ ‘ಡ್ರ್ಯಾಗನ್’ ಸಿನಿಮಾ ಮಾಡಲಿದ್ದಾರೆ. ಇದಿಷ್ಟು ಸಿನಿಮಾಗಳ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ಜಾನ್ವಿ ಕಪೂರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲಾದ ನಟಿ

    ಜಾನ್ವಿ ಕಪೂರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲಾದ ನಟಿ

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಫ್ಯಾನ್ಸ್‌ಗೆ ಇದು ಬ್ಯಾಡ್ ನ್ಯೂಸ್. ಜಾನ್ವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೀಗ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:20 ಕೋಟಿ ಮೌಲ್ಯದ ಪ್ಲ್ಯಾಟ್ ಖರೀದಿಸಿದ ಅಥಿಯಾ ಶೆಟ್ಟಿ ದಂಪತಿ

    ಅನಂತ್ ಅಂಬಾನಿ, ರಾಧಿಕಾ ಮದುವೆಯ ಬಳಿಕ ಜಾನ್ವಿ ಕಪೂರ್ ಚೆನ್ನೈಗೆ ತೆರಳಿದರು. ಅಲ್ಲಿನ ಕುಟುಂಬಸ್ಥರ ಮನೆಗೆ ಭೇಟಿ ನೀಡಿದ್ದ ವೇಳೆ ಫುಡ್ ಪಾಯ್ಸನ್ ಆಗಿದ್ದು, ನಟಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನಟಿ ಡಿಸ್ಚಾರ್ಜ್ ಆಗಲಿದ್ದಾರೆ.

    ಚೆನ್ನೈನಲ್ಲಿ ಸೇವಿಸಿದ ಆಹಾರದಿಂದಲೇ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಲ್ಲಿರುವಾಗಲೇ ನಟಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಕ್ಕೆ ನಟಿ ಚೇತರಿಕೊಂಡಿದ್ದಾರೆ.  ಜಾನ್ವಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    ಅಂದಹಾಗೆ, ಸ್ಟಾರ್ ಕಿಡ್ ಎಂಬ ಆರೋಪದ ನಡುವೆಯೂ ಜಾನ್ವಿ ಕಪೂರ್‌ಗೆ ಬೇಡಿಕೆ ಕಮ್ಮಿಯಾಗಿಲ್ಲ. ತೆಲುಗು ಮತ್ತು ಬಾಲಿವುಡ್‌ನಲ್ಲಿ ಕೈತುಂಬಾ ಅವಕಾಶಗಳಿವೆ. ಜ್ಯೂ.ಎನ್‌ಟಿಆರ್‌ ಜೊತೆಗಿನ ‘ದೇವರ’ (Devara), ರಾಮ್ ಚರಣ್ ಜೊತೆಗಿನ ಸಿನಿಮಾ, ಇದರ ನಡುವೆ ನ್ಯಾಚುರಲ್ ಸ್ಟಾರ್ ನಾನಿಗೆ ಶ್ರೀದೇವಿ ಪುತ್ರಿ ಹೀರೋಯಿನ್ ಆಗಿದ್ದಾರೆ.

  • ‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

    ‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

    ಮಿಳು ನಟ ಸೂರ್ಯ (Suriya) ನಟನೆಯ ‘ಕಂಗುವ’ (Kanguva) ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ದಸರಾ ಪ್ರಯುಕ್ತ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಧ್ರುವ ಸರ್ಜಾ ನಟನೆಯ `ಮಾರ್ಟಿನ್’ಗೆ (Martin), ದೇವರ ಸಿನಿಮಾಗೆ ಠಕ್ಕರ್ ಕೊಡಲು ರೆಡಿಯಾಗಿದೆ.

    ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ‘ಕಂಗುವ’ ಸಿನಿಮಾ ರಿಲೀಸ್ ಆಗ್ತಿದೆ. ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಫ್ಯಾಂಟಸಿ ಸಿನಿಮಾವು ದಸರಾ ಹಬ್ಬದ ಸಂದರ್ಭದಲ್ಲಿ ಮನರಂಜನೆ ಕೊಡಲು ರೆಡಿಯಾಗಿದೆ. ಇದನ್ನೂ ಓದಿ:ಪ್ಯಾನ್ ಇಂಡಿಯಾ ಚಿತ್ರ ಘೋಷಿಸಿದ ಸಾಯಿ ಧರಮ್ ತೇಜ್ ಹೀರೋ

    ಜ್ಯೂ.ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ನಟನೆಯ ‘ದೇವರ’ (Devara)ಕೂಡ ಅಕ್ಟೋಬರ್ 10ರಂದು ರಿಲೀಸ್‌ಗೆ ಸಿದ್ಧವಾಗಿದೆ. ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬರಲಿದೆ. ಈ ಮೂರು ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗಲಿದೆ.

    ಇದೀಗ ಪರಭಾಷಾ ಸಿನಿಮಾದ ಮುಂದೆ ಬಹುನಿರೀಕ್ಷಿತ ‘ಮಾರ್ಟಿನ್’ ಪೈಪೋಟಿ ಕೊಡಲಿದೆಯಾ ಕಾದುನೋಡಬೇಕಿದೆ. ಈ ಸಿನಿಮಾಗಳ ಸ್ಪರ್ಧೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು ಎಂದು ಕಾಯಬೇಕಿದೆ.

  • ಮತ್ಸ್ಯ ಕನ್ಯೆಯಾದ ಜಾನ್ವಿ ಕಪೂರ್

    ಮತ್ಸ್ಯ ಕನ್ಯೆಯಾದ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ಜೊತೆಗಿನ ‘ದೇವರ’ (Devara) ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ನಟಿ ಮತ್ಸ್ಯ ಕನ್ಯೆಯಂತೆ ಫೋಟೋಶೂಟ್ ಮಾಡಿಸಿದ್ದಾರೆ.

    ಸದ್ಯ ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾನ್ವಿ ಮತ್ಸ್ಯ ಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಜಾನ್ವಿಗೆ ಫೋಟೋಶೂಟ್ ಎನು ಹೊಸದಲ್ಲ. ಒಂದಲ್ಲ ಒಂದು ಬೋಲ್ಡ್ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡುತ್ತಲೇ ಇರುತ್ತಾರೆ. ಫೋಟೋಶೂಟ್‌ನಲ್ಲೂ ಹೊಸ ಲುಕ್ ಅನ್ನು ನಟಿ ಟ್ರೈ ಮಾಡುತ್ತಲೇ ಇರುತ್ತಾರೆ. ಈಗ ಮತ್ಸ್ಯ ಕನ್ಯೆಯ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ಅಂದಹಾಗೆ, ಜ್ಯೂ.ಎನ್‌ಟಿಆರ್ ಜೊತೆ ‘ದೇವರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಜಾನ್ವಿ ಜೀವ ತುಂಬಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ಜೊತೆ ಶ್ರೀಲೀಲಾ ಡ್ಯುಯೆಟ್‌

    ರಾಮ್ ಚರಣ್ (Ram Charan) ಮತ್ತು ಬುಚ್ಚಿಬಾಬು ಕಾಂಬಿನೇಷನ್ ಸಿನಿಮಾದಲ್ಲಿ ನಟಿಗೆ ಚಾನ್ಸ್ ಸಿಕ್ಕಿದೆ. ಇಲ್ಲಿಯೂ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.