Tag: ದೇವರು

  • `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ – ದೇವರನ್ನ ನೋಡಲು ದೇಹ ತ್ಯಾಗಕ್ಕೆ ನಿರ್ಧರಿಸಿದ್ದ 21 ಭಕ್ತರು!

    `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ – ದೇವರನ್ನ ನೋಡಲು ದೇಹ ತ್ಯಾಗಕ್ಕೆ ನಿರ್ಧರಿಸಿದ್ದ 21 ಭಕ್ತರು!

    ಚಿಕ್ಕೋಡಿ: `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ ಅಂತ ಸೆಪ್ಟೆಂಬರ್ 8 ರಂದು ದೇವರನ್ನ ನೋಡಲು 21 ಭಕ್ತರು ದೇಹತ್ಯಾಗ ಮಾಡಲು ಹೊರಟಿದ್ದ ಭಕ್ತಿಯ ಪರಕಾಷ್ಠೆಯ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ.

    ಸೆಪ್ಟೆಂಬರ್ 08 ರಂದು ಪ್ರಾಣತ್ಯಾಗ ಮಾಡೋದಕ್ಕೆ 10ಕ್ಕೂ ಹೆಚ್ಚು ಭಕ್ತರು (Devotees) ಮುಂದಾಗಿದ್ದದ್ದು ಆಧುನಿಕ ಯುಗದಲ್ಲಿ ಮೂಢನಂಬಿಕೆ ಪದ್ಧತಿ ಇನ್ನು ಜೀವಂತವಾಗಿದಿಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಅನಂತಪುರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ 10ಕ್ಕೂ ಹೆಚ್ಚು ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಹರಿಯಾಣದ ವಿವಾದತ್ಮಕ ಸಂತ ರಾಮಪಾಲ ಅನುಯಾಯಿಗಳು ದೇಹತ್ಯಾಗ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಅಮಾಯಕ ಮಾಸ್ಕ್ ಮ್ಯಾನ್‌ನನ್ನು ಬಲಿ ಕೊಡ್ತಿದ್ದಾರೆ: ಪಿ.ರಾಜೀವ್

    2014ರ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತ ರಾಮಪಾಲ ಅವರ ಪುಸ್ತಕ ಓದಿ ಹಾಗೂ ಪ್ರವಚನ ಕೇಳಿ ಅನಂತಪುರ ಗ್ರಾಮದ ಇರಕರ ಕುಟುಂಬದ, ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಪ್ರಾಣತ್ಯಾಗಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಇರಕರ ಕುಟುಂಬ ಹಾಗೂ ಉತ್ತರ ಪ್ರದೇಶದ 17 ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಉಪ ವಿಬಾಗಾಧಿಕಾರಿ ಸುಭಾಷ ಸಂಪಗಾಂವಿ ಹಾಗೂ ಪೊಲೀಸರು ಮತ್ತು ಮಠಾಧೀಶರಿಂದ ಭಕ್ತರ ಮನವೊಲಿಕೆ ಮಾಡಿದ ಬಳಿಕ ಸಧ್ಯ ದೇಹತ್ಯಾಗ ‌ನಿರ್ಧಾರದಿಂದ ಭಕ್ತರು ಹಿಂದೆ ಸರಿದಿದ್ದಾರೆ.

  • ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು – ದೇವರಲ್ಲಿ ಭಕ್ತನ ವಿಚಿತ್ರ ಕೋರಿಕೆ

    ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು – ದೇವರಲ್ಲಿ ಭಕ್ತನ ವಿಚಿತ್ರ ಕೋರಿಕೆ

    ಚಿಕ್ಕಮಗಳೂರು: ಸಾಮಾನ್ಯವಾಗಿ ಒಳ್ಳೆ ವಿದ್ಯೆ, ಬುದ್ಧಿ, ಆರೋಗ್ಯ ಕೊಡು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು (Demand) ಭಕ್ತರು (Devotees) ದೇವರ ಮುಂದೆ ಇಡುತ್ತಾರೆ. ಆದರೆ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು ಎಂಬ ವಿಚಿತ್ರ ಕೋರಿಕೆಯನ್ನು ಭಕ್ತರೊಬ್ಬರು ದೇವರ ಮುಂದೆ ಇಟ್ಟಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಕಳಸ  (Kalasa) ತಾಲೂಕಿನಲ್ಲಿ ನಡೆದಿದೆ.

    ಕೇಳಲು ಆಶ್ಚರ್ಯವಾಗಿದ್ದರೂ ಇದು ನಿಜ. ಭಕ್ತರೊಬ್ಬರು ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಈ ರೀತಿಯಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾನೆ. ಗಿರಿಜಾದೇವಿಗೆ ಭಕ್ತರೊಬ್ಬರು ಪತ್ರ (Letter) ಬರೆದಿದ್ದು, ಭಕ್ತರ ವಿಚಿತ್ರ ಬೇಡಿಕೆಯನ್ನು ಓದಿದ ಹುಂಡಿ ಎಣಿಕೆ ಅಧಿಕಾರಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದನ್ನೂ ಓದಿ: Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ

    ಪತ್ರದಲ್ಲಿ ಏನಿದೆ?
    ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಜಗತ್ತಿನಲ್ಲೇ ಸುಂದರ ಎಂಬ ಖ್ಯಾತಿ ಗಳಿಸಬೇಕು. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು. ಸರ್ವ ಸುಂದರಿಯಾದ ಗಿರಿಜಾ ದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನನ್ನ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನು ಈಡೇರಿಸು ತಾಯಿ ಎಂದು ಪತ್ರದಲ್ಲಿ ಬರೆದು ಕಾಣಿಕೆ ಹುಂಡಿಯಲ್ಲಿ ಭಕ್ತ ಹಾಕಿದ್ದಾನೆ.  ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವರಿಗೆ ಮೇಕೆ ಬಲಿಕೊಟ್ಟ.. ಆದ್ರೆ ಅದರ ಕಣ್ಣುಗಳೇ ವ್ಯಕ್ತಿಯ ಬಲಿ ಪಡೆದವು!

    ದೇವರಿಗೆ ಮೇಕೆ ಬಲಿಕೊಟ್ಟ.. ಆದ್ರೆ ಅದರ ಕಣ್ಣುಗಳೇ ವ್ಯಕ್ತಿಯ ಬಲಿ ಪಡೆದವು!

    ರಾಯ್ಪುರ: ವ್ಯಕ್ತಿಯೊಬ್ಬ ದೇವರಿಗೆ ಬಲಿಕೊಟ್ಟ ಮೇಕೆಯನ್ನು (Goat) ಬಲಿಕೊಟ್ಟ. ಆದರೆ ಮೇಕೆ ಕಣ್ಣುಗಳೇ ಆತನನ್ನು ಬಲಿ ತೆಗೆದುಕೊಂಡ ಘಟನೆ ಛತ್ತೀಸಗಢದಲ್ಲಿ (Chhattisgarh) ನಡೆದಿದೆ.

    ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಬಗರ್ ಸಾಯಿ (50) ಎಂಬ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆಯನ್ನು ಬಲಿ ಕೊಡಲು ಯೋಜಿಸಿದ್ದ. ಮದನ್‌ಪುರ ಗ್ರಾಮದ ಇತರ ನಿವಾಸಿಗಳೊಂದಿಗೆ ಭಾನುವಾರ ಖೋಪಾಧಾಮ್‌ಗೆ ಆಗಮಿಸಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟರು. ಇದನ್ನೂ ಓದಿ: Maharashtra Accident: ಮತ್ತೊಂದು ಭೀಕರ ಅಪಘಾತದಲ್ಲಿ 10 ಮಂದಿ ಸಾವು

    ಬಲಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ಮೇಕೆ ಮಾಂಸವನ್ನು ಬೇಯಿಸಿ ಊಟಕ್ಕೆ ಸಿದ್ಧಪಡಿಸಿದರು. ಪೂಜೆ ಕಾರ್ಯ ಮುಗಿದ ಮೇಲೆ ಎಲ್ಲರೂ ಮಾಂಸದೂಟಕ್ಕೆ ಸಿದ್ಧರಾಗಿ ಕುಳಿತರು.

    ಊಟ ಬಡಿಸುವ ವೇಳೆ ಮೇಕೆಯ ಕಣ್ಣು ಬಗರ್‌ ಸಾಯಿಗೇ ಊಟದಲ್ಲಿ ಸಿಕ್ಕಿದೆ. ಅದನ್ನು ಅವರು ತಿಂದಿದ್ದಾರೆ. ಈ ವೇಳೆ ಮೇಕೆ ಕಣ್ಣು ಆತನ ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ನಿಷೇಧ – ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಣೆ

    ಉಸಿರಾಟದ ಸಮಸ್ಯೆಯಿಂದ ಏದುಸಿರು ಬಿಡುತ್ತಿದ್ದ ಬಗರ್‌ ಸಾಯಿಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ದೇವರಿಗೆ ಬಲಿಕೊಟ್ಟ ಮೇಕೆಯ ಕಣ್ಣು ಆತನನ್ನೇ ಬಲಿ ತೆಗೆದುಕೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಾಂತಾರ’ ಸಿನಿಮಾದ ಪೋಸ್ಟರ್ ಮೇಲೆ ದೇವರಿಗೆ ಅವಹೇಳನ

    ‘ಕಾಂತಾರ’ ಸಿನಿಮಾದ ಪೋಸ್ಟರ್ ಮೇಲೆ ದೇವರಿಗೆ ಅವಹೇಳನ

    ರಿಷಬ್ ಶೆಟ್ಟಿ (Rishabh Shetty)  ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿವೆ. ಮೊದಲನೇ ದಿನದಿಂದಲೂ ಈವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ 25 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಪ್ರೇಕ್ಷಕನೂ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದರೆ, ಶಿವಮೊಗ್ಗದಲ್ಲಿ ವಿಕೃತ ಮನಸ್ಸಿನವರು ಅವಹೇಳನ (Insulting) ಮಾಡಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಕಾಂತಾರ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಶಿವಮೊಗ್ಗದ ಗೋಡೆ ಗೋಡೆಗಳ ಮೇಲೆ ಕಾಂತಾರ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿದೆ. ಆ ಪೋಸ್ಟರ್ ನೋಡಿ ಕಣ್ತುಂಬಿಕೊಳ್ಳಬೇಕಾಗಿದ್ದ ಕೆಲ ವಿಕೃತ ಮನಸ್ಸಿನವರು ಪೋಸ್ಟರ್ ಮೇಲೆ ವಿಕೃತ ಬರಹವನ್ನೇ (Writing) ಬರೆದಿದ್ದಾರೆ. ದೇವರಿಗೆ ಅವಹೇಳನ ಮಾಡುವಂತಹ ಪದ ಬಳಕೆ ಮಾಡಿದ್ದಾರೆ. ಈ ಬರಹವುಳ್ಳ ಪೋಸ್ಟರ್ ನೋಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ  ವ್ಯಕ್ತ ಪಡಿಸಿದ್ದಾರೆ.

    ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಕಾಂತಾರ ಸಿನಿಮಾ ಪೋಸ್ಟರ್ ಮೇಲೆ ‘F * * K YOU G * D’  ಅಂತಾ ಕಿಡಿಗೇಡಿಗಳು ಬರೆದಿದ್ದು, ಪೋಸ್ಟರ್ ಮೇಲೆ ಪೆನ್ನಿನಿಂದ ಈ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು (Police) ಭೇಟಿ ಪರಿಶೀಲನೆ ಮಾಡಿದ್ದು, ತಕ್ಷಣವೇ ಅವಹೇಳನಕಾರಿ ಬರಹ ತೆಗೆಸಿದ್ದಾರೆ ಪೊಲೀಸರು.

    ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ಮಾಡಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ರೀತಿಯಲ್ಲಿ ದೇವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಕಿಡಿಗೇಡಿ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ವೇದಿಕೆಯ ಕಾರ್ಯಕರ್ತರನ್ನು ಸಮಾಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ಚಿಕ್ಕಮಗಳೂರು: ದೇವರಲ್ಲಿ (God) ಒಳ್ಳೆ ಬುದ್ಧಿ, ವಿದ್ಯೆ, ಜ್ಞಾನ, ಸುಖ, ಶಾಂತಿ, ನೆಮ್ಮದಿ, ಅಂತಸ್ತು, ಆರೋಗ್ಯ ಕೊಡಪ್ಪಾ ಅಂತ ಕೇಳಿಕೊಳ್ತಾರೆ. ಆದರೆ, ಭಕ್ತನೋರ್ವ (Devotee) ಸಂಬಳ ತಂದು ನನ್ನ ಕೈಗೆ ಕೊಡು, ಹುಡುಗಿನ ದಪ್ಪ ಮಾಡು, ಮದುವೆನ (Marriage)  ಫಿಕ್ಸ್ ಮಾಡು ಅಂತ ಪತ್ರ (Letter)  ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.

    ಕಳಸ ತಾಲೂಕಿನ ಇತಿಹಾಸ ಪ್ರಸಿದ್ಧ ಕಳಸೇಶ್ವರ ಸ್ವಾಮಿ ದೇಗುಲದ (Kalaseshwara Temple Kalasa) ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು. ಆದರೆ, ಹಣದ ಜೊತೆ  ಭಕ್ತನೋರ್ವ ದೇವರಿಗೆ ಬರೆದ ಪತ್ರ ಕಂಡು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳು ನಸು ನಕ್ಕಿದ್ದಾರೆ. ಪತ್ರದಲ್ಲಿ ಹತ್ತಾರು ವಿಷಯಗಳ ಬಗ್ಗೆ ನೋವು ತೋಡಿಕೊಂಡಿರುವ ಭಕ್ತ ಸಂಬಳ ತಂದು ಇಂತವರಿಗೆ ಕೊಡಲಿ, ಹುಡುಗಿಯನ್ನು ದಪ್ಪ ಮಾಡಿ ಪುಷ್ಠಿಯಾಗಿ ಕಾಣುವಂತೆ ಮಾಡು, ಯಾವುದೇ ವಿಘ್ನವಿಲ್ಲದೆ ಮದುವೆ ಮಾಡಿಸು ಎಂದು ಬರೆದಿರೋದು ನಗೆಪಾಟಲಿಗೀಡಾಗಿದೆ. ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರದ ವಿರುದ್ಧ ಕರ್ನಾಟಕ ಸೇರಿದಂತೆ ದೇಶಾದ್ಯಂತ 56 ಸ್ಥಳಗಳಲ್ಲಿ ಸಿಬಿಐ ದಾಳಿ

    ಪತ್ರದಲ್ಲಿ ಮಂಜುಳ ಅತ್ತೆ-ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು. ಮಂಜುಳ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನು ಒಳ್ಳೆಯವರಾಗಿಸು. ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು. ನಮ್ಮ ಋಣದ ಬಾಧೆ ಹಾಗೂ ಸಾಲದ ಭಾದೆಯನ್ನು ಬೇಗ ತೀರಿಸು, ರಮೇಶ-ಮಂಜುಳ ಒಪ್ಪಿಕೊಂಡಿರುವ ಒಂದು ಲಕ್ಷ ರೂಪಾಯಿ ಹಣವನ್ನು ಬೇಗ ಕೊಡುವಂತೆ ಮಾಡು. ರಾಮಕೃಷ್ಣ-ಅರುಣ ಇಬ್ಬರೂ ಹಣವನ್ನು ಬೇಗ ಕೊಡುವಂತೆ ಮಾಡು ಎಂದೆಲ್ಲಾ ಕೇಳಿಕೊಂಡಿದ್ದಾರೆ. ಈ ಭಕ್ತನ ಸಮಸ್ಯೆಗಳ ಪಟ್ಟಿಗೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಈ ದೇವಾಲಯದಲ್ಲಿ ಈ ರೀತಿಯ ಪತ್ರ ಇದೇ ಮೊದಲಲ್ಲ. ಕಳೆದ ಒಂದೆರಡು ವರ್ಷಗಳ ಹಿಂದೆಯೂ ಇದೇ ರೀತಿ ಪತ್ರ ಪತ್ತೆಯಾಗಿತ್ತು. ಆಗಲೂ ಕೂಡ ಭಕ್ತನೋರ್ವ ಪ್ರೀತಿ-ಪ್ರೇಮ, ಹಣ-ಕೆಲಸದ ಬಗ್ಗೆಯೇ ಪತ್ರ ಬರೆದಿದ್ದನು. ಇದೀಗ ಮತ್ತೊಮ್ಮೆ ಇದೇ ರೀತಿಯ ಪ್ರಸಂಗ ನಡೆದಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಭಕ್ತಿಯ ಪರಾಕಾಷ್ಠೆ ತಲುಪಿ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ ಭಕ್ತ!

    ಭಕ್ತಿಯ ಪರಾಕಾಷ್ಠೆ ತಲುಪಿ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ ಭಕ್ತ!

    ಲಕ್ನೋ: ಭಕ್ತಿಯ ಪರಾಕಾಷ್ಠೆ ತಲುಪಿ ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ಇಲ್ಲಿನ ಮಾ ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ.

    ಕೌಶಂಬಿ ನಿವಾಸಿ ಸಂಪತ್ (38) ದೇವರಿಗೆ ನಾಲಿಗೆ ಅರ್ಪಿಸಿದ ಭಕ್ತ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್

    ಸಂಪತ್ ತನ್ನ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ದೇವಾಲಯ ಪ್ರದಕ್ಷಿಣೆ ಮುಗಿಸಿದ ನಂತರ, ಅವನು ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಎಂದು ಕರ್ಹಾ ಧಾಮ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅಭಿಲಾಷ್ ತಿವಾರಿ ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ಪತಿ ವ್ಯಕ್ತಪಡಿಸಿದ್ದರು ಎಂದು ಆತನ ಪತ್ನಿ ಬನ್ನೋ ದೇವಿ ಹೇಳಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ

    Live Tv
    [brid partner=56869869 player=32851 video=960834 autoplay=true]

  • ಒಂದು ವಾರದಿಂದ ಪೂಜೆ, ಅಭಿಷೇಕವಿಲ್ಲ- ಯಮಲೂರಲ್ಲಿ ಗ್ರಾಮ ದೇವರಿಗೆ ದಿಗ್ಬಂಧನ

    ಒಂದು ವಾರದಿಂದ ಪೂಜೆ, ಅಭಿಷೇಕವಿಲ್ಲ- ಯಮಲೂರಲ್ಲಿ ಗ್ರಾಮ ದೇವರಿಗೆ ದಿಗ್ಬಂಧನ

    ಬೆಂಗಳೂರು: ಮಹಾ ಮಳೆ ಪ್ರವಾಹ (Rain Flood) ದ ಅಬ್ಬರ ಬೆಂಗಳೂರು (Bengaluru) ನೊಂದಕಾಳೂರು ಆಗಿದೆ. ಜನರ ಸಂಕಷ್ಟದ ಕಣ್ಣೀರಿನ ಕಥೆಯೊಂದಿಗೆ ದೇವರಿಗೂ ಜಲ ದಿಗ್ಬಂಧನ ಇನ್ನೂ ಕಾಟ ಕೊಡ್ತಿದೆ. ಮಹದೇವಪುರ (Mahadevapura) ವಲಯದ ಬಹುತೇಕ ದೇವಸ್ಥಾನ ಪೂಜೆಯಿಲ್ಲದೇ ಜನ ಅಯ್ಯೋ ದೇವರೇ ಎನ್ನುವಂತಾಗಿದೆ.

    ಮಳೆ ನಿಂತರೂ ಪೂಜೆ ಇಲ್ಲ. ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಯಮಲೂರಿನ ಗ್ರಾಮ ದೇವರು ಮುನೇಶ್ವರನಿಗೆ ಒಂದು ವಾರದಿಂದ ಪೂಜೆ ಇಲ್ಲ. ದೇಗುಲದ ಆವರಣದಲ್ಲಿ ದೇವರನ್ನು ಮುಳುಗಿಸಿದ ನೀರು ಇಂದು ಖಾಲಿಯಾಗಿದ್ರೂ, ದೇವಸ್ಥಾನದ ಹೊರಭಾಗದಲ್ಲಿ ಕೆಸರು ಹೂಳು ತುಂಬಿಕೊಂಡು ಅರ್ಚಕರು ಭಕ್ತರು ಹೋಗುವಂತೆ ಇಲ್ಲ. ಹೀಗಾಗಿ ಪೂಜೆಯೂ ಇಲ್ಲ. ಗ್ರಾಮ ದೇವರಿಗೇ ಹೀಗಾಗಿದೆ. ಇನ್ನು ನಮ್ಮ ಪರಿಸ್ಥಿತಿ ಇದಕ್ಕಿಂತಲೂ ಕಡೆಯಾಗಿದೆ ಅಂತಾ ಜನ ಬೇಸರ ವ್ಯಕ್ತಪಡಿಸಿದರು.

    ಬೆಳ್ಳಂದೂರಿನ ಭಾಗದ ಹತ್ತೂರಿನ ಗ್ರಾಮದೇವತೆ ದುಗ್ಗಲಮ್ಮನ ಪರಿಸ್ಥಿತಿಯೂ ಹೀಗೆ ಆಗಿದೆ. ದೇಗುಲದಲ್ಲಿ ಇನ್ನೂ ನೀರು ನಿಂತಿದೆ. ಮಣ್ಣು ಕೆಸರು ಇರೋದ್ರಿಂದ ದೇವಸ್ಥಾನ (Temple) ಕ್ಕೆ ಕಾಲಿಡಲು ಸಾಧ್ಯವಾಗ್ತಿಲ್ಲ. ಹೀಗಾಗಿ ಪೂಜೆಯೂ ನಡೆಯುತ್ತಿಲ್ಲ. ಶುಕ್ರವಾರದ ವಿಶೇಷ ಪೂಜೆಯೂ ದೇವಿಗೆ ಈ ಬಾರಿ ಇಲ್ಲ.

    ಒಟ್ಟಿನಲ್ಲಿ ಬೆಳ್ಳಂದೂರು (Bellandur), ಯಮಲೂರು (Yamaluru) ಭಾಗವಂತೂ ಮಳೆ ನಿಂತರೂ ಅದರ ಅವಾಂತರದಿಂದ ಜನ ಹೊರಗೆ ಬಂದಿಲ್ಲ. ಇದನ್ನೂ ಓದಿ: ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಬಸ್ – 7 ಮಂದಿಗೆ ಗಾಯ, ತಪ್ಪಿದ ಭಾರೀ ಅನಾಹುತ

    Live Tv
    [brid partner=56869869 player=32851 video=960834 autoplay=true]

  • ಯಾವ ದೇವರೂ ಬ್ರಾಹ್ಮಣ ಸಮುದಾಯದಿಂದ ಬಂದಿಲ್ಲ: ಜೆಎನ್‍ಯು ವಿಸಿ

    ಯಾವ ದೇವರೂ ಬ್ರಾಹ್ಮಣ ಸಮುದಾಯದಿಂದ ಬಂದಿಲ್ಲ: ಜೆಎನ್‍ಯು ವಿಸಿ

    ನವದೆಹಲಿ: ದೇವರ ಜಾತಿ ಬಗ್ಗೆ ಈಗ ವಿವಾದ ಎದ್ದಿದೆ. ಯಾವ ದೇವರು ಕೂಡ ಬ್ರಾಹ್ಮಣ ಸಮುದಾಯದಿಂದ ಬಂದಿಲ್ಲ. ಎಲ್ಲಾ ದೇವರುಗಳು ಕ್ಷತ್ರೀಯ ಸಮುದಾಯದವರೇ ಆಗಿದ್ದಾರೆ ಎಂದು ಜವಾಹರ್ ಲಾಲ್ ನೆಹರೂ ವಿವಿಯ ಉಪಕುಲಪತಿ ಶಾಂತಿಶ್ರೀ ಪಂಡಿತ್ ಹೇಳಿದ್ದಾರೆ.

    ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವಶಾಸ್ತ್ರ ಮತ್ತು ವೈಜ್ಞಾನಿಕವಾಗಿ ದೇವರುಗಳ ಹುಟ್ಟಿನ ಬಗ್ಗೆ ನೋಡಿದಲ್ಲಿ, ಯಾವ ದೇವರು ಕೂಡ ಬ್ರಾಹ್ಮಣರಲ್ಲ. ಹೆಚ್ಚಿನ ದೇವರುಗಳು ಕ್ಷತ್ರಿಯರು ಎಂದಿದ್ದಾರೆ.

    ಶಿವನು ಎಸ್‍ಸಿಯೋ? ಎಸ್‍ಟಿಯೋ ಇರಬೇಕು. ಯಾಕಂದ್ರೆ ಶಿವ ಕೂತಿರೋದು ಸ್ಮಶಾನದಲ್ಲಿ. ಕೊರಳಲ್ಲಿ ಧರಿಸಿರೋದು ಹಾವನ್ನು. ಅಲ್ಲದೇ ಅತ್ಯಂತ ಕಡಿಮೆ ಪ್ರಮಣದಲ್ಲಿ ಉಡುಗೆ ಧರಿಸಿದ್ದಾನೆ. ಸಾಮಾನ್ಯವಾಗಿ ಯಾವುದೇ ಬ್ರಾಹ್ಮಣ ಸ್ಮಶಾನದಲ್ಲಿ ಕುಳಿತುಕೊಳ್ಳಲ್ಲ. ಮಾನವಶಾಸ್ತ್ರವನ್ನು ಅಭ್ಯಾಸಿಸಿದ್ದೇ ಆದಲ್ಲಿ, ಲಕ್ಷ್ಮಿ ಸೇರಿ ಯಾವ ದೇವರುಗಳು ಮೇಲ್ಜಾತಿಯವರಲ್ಲ ಎಂಬುದು ನಿಮ್ಮ ಅರಿವಿಗೆ ಬರುತ್ತದೆ ಎಂದಿದ್ದಾರೆ.

    ಜಗನ್ನಾಥ ದೇವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಹೀಗಿರುವಾಗ ನಾವಿನ್ನು ಏಕೆ ಮೇಲು ಕೀಳು ಅಂತ ಜಾತಿ ಹೆಸರಲ್ಲಿ ಬಡಿದಾಡಿಕೊಳ್ತಿದ್ದೀವಿ. ಇದು ಅಮಾನವೀಯ ಅಲ್ವಾ ಎಂದು ವಿಸಿ ಶಾಂತಿಶ್ರೀ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕ್ ಮೇಲೆ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ – ವಾಯುಪಡೆಯ ಮೂವರು ಅಧಿಕಾರಿಗಳು ವಜಾ

    ಮನುಸ್ಮೃತಿಯ ಪ್ರಕಾರ ಎಲ್ಲಾ ಮಹಿಳೆಯರು ಶೂದ್ರರು. ಯಾವುದೇ ಮಹಿಳೆ ಕೂಡ ತನ್ನನ್ನು ತಾನು ಬ್ರಾಹ್ಮಿಣ್ ಎಂದು ಹೇಳಿಕೊಳ್ಳುವಂತಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶಾಂತಿಶ್ರೀ ಹೇಳಿಕೆ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿ ನಡೀತಿವೆ. ಟ್ವಿಟ್ಟರ್‍ನಲ್ಲಿ ಇದು ಟ್ರೆಂಡಿಂಗ್‍ನಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಟ್ಟ-ಕೆಟ್ಟ ಪದಗಳಿಂದ ಬೈದ್ರೆ ಈ ಊರಿನಲ್ಲಿ ಜನರಿಗೆ ಒಲಿಯುತ್ತೆ ದೇವರು

    ಕೆಟ್ಟ-ಕೆಟ್ಟ ಪದಗಳಿಂದ ಬೈದ್ರೆ ಈ ಊರಿನಲ್ಲಿ ಜನರಿಗೆ ಒಲಿಯುತ್ತೆ ದೇವರು

    ಮಡಿಕೇರಿ: ನಾವು ದೇವರನ್ನು ಏನಂತಾ ಬೇಡ್ತೀವಿ, ಒಳ್ಳೆ ಬುದ್ಧಿ ಕೊಡಪ್ಪಾ ಅಥವಾ ನಾನು ಮಾಡುವ ಕೆಲಸದಲ್ಲಿ ಯಶಸ್ಸುಗಳಿಸುವಂತೆ ಮಾಡಪ್ಪ ಅಂತಾ ಕೇಳ್ಕೋತೀವಿ. ಅವರು ಬೇಡಿಕೊಂಡಿದ್ದು ನಡೆದ್ರೆ, ಕೋಳಿಯನ್ನು ಮೇಲಕ್ಕೆ ಎಸೆಯುವ ಮೂಲಕ ಹರಕೆ ತೀರಿಸುತ್ತಾರೆ. ಆದ್ರೆ ಇಲ್ಲಿ ವಿವಿಧ ವೇಷ ಹಾಕಿಕೊಂಡು ದೇವರನ್ನು ಬೈದ್ರೆ ದೇವ್ರು ಒಲಿಯುತ್ತೆ ಎಂದು ಜನರು ನಂಬಿದ್ದಾರೆ.

    ಕೊಡಗು ಜಿಲ್ಲೆ ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ದೇವರ ಪುರದಲ್ಲಿ ಪ್ರತಿ ವರ್ಷ ಶ್ರೀ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ‘ಕುಂಡೆ ಹಬ್ಬ’ ಆಚರಿಸಲಾಗುತ್ತೆ. ಈ ಭದ್ರಕಾಳಿ ದೇವರಿಗೆ ವಿವಿಧ ವೇಷ ತೊಟ್ಟು ಕೆಟ್ಟ ಪದಗಳಿಂದ ಬೈದ್ರೆ ದೇವರು ಒಲಿಯುತ್ತದೆ ಅನ್ನೋ ನಂಬಿಕೆ ಇಲ್ಲಿನ ಜನ್ರದ್ದು. ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪಲು, ಸಿದ್ದಾಪುರ ಕುಟ್ಟ ಇಲ್ಲಿನ ಸುತ್ತಮುತ್ತಲಿನ ಆದಿವಾಸಿಗಳು ಈ ಹಬ್ಬವನ್ನ ಆಚರಿಸ್ತಾರೆ. ಇದನ್ನೂ ಓದಿ: ಯೋಗ ಕೇವಲ ವ್ಯಾಯಾಮವಲ್ಲ, ಯೋಗ ವಿಜ್ಞಾನದ ನಾಲ್ಕನೇ ಆಯಾಮ: ಥಾವರ್ ಚಂದ್ ಗೆಹ್ಲೋಟ್ 

    ಹೀಗೆ ಅಂಗಡಿಗಳಿಗೆ ಹೋಗಿ ಮತ್ತು ಆದಿ ಬೀದಿಯಲ್ಲಿ ಹೋಗೋ ಜನ್ರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದು ಈ ಹಬ್ಬದ ವಿಶೇಷತೆ. ಹುಡುಗರು, ಹುಡುಗಿ ತರಹ ವಿವಿಧ ವೇಷಭೂಷಣ ತೊಟ್ಟು ಕುಣಿದು ಕುಪ್ಪಳಿಸುತ್ತಾ ದೇವರನ್ನ ಬೈದು ಹರಕೆ ತೀರಿಸುತ್ತಾರೆ ಕೊನೆಯಲ್ಲಿ ಜೀವಂತ ಕೋಳಿಯನ್ನು ಮೇಲಕ್ಕೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

    ಹುಡುಗರೆಲ್ಲಾ ಹುಡುಗಿಯ ವೇಷತೊಟ್ಟು ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರನ್ನ ಅಡ್ಡಕಟ್ಟಿ ಭಿಕ್ಷೆ ಬೇಡುವುದು ಇಲ್ಲಿನ ಸಂಪ್ರದಾಯ. ಹುಡುಗಿ, ಹೆಂಗಸರು, ಮುದುಕಿ, ಇನ್ನಿತರ ವೇಷಭೂಷಣಗಳನ್ನು ಧರಿಸುತ್ತಾರೆ. ಡಬ್ಬಗಳು, ಡೋಲು, ಪಾತ್ರೆ ಸೋರೆಕಾಯಿ ಬುರುಡೆ ಸೇರಿದಂತೆ ಇನ್ನಿತರ ವಸ್ತುಗಳಿಂದ ವಿವಿಧ ರೀತಿಯ ಸಂಗೀತ ಬರುವಂತೆ ಮ್ಯೂಸಿಕ್ ಬಾರಿಸುತ್ತಾ ಕೆಟ್ಟಕೆಟ್ಟ ಪದಗಳಿಂದ ಸಿಕ್ಕ-ಸಿಕ್ಕವರನ್ನು ನಿಂದಿಸುತ್ತಾರೆ.

    ಆದಿವಾಸಿಗಳು ತಮ್ಮ ಸಾಕುಪ್ರಾಣಿಗಳಿಗೆ ಹಾಗೂ ತಮಗೆ ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ, ಈ ಭದ್ರಕಾಳಿ ದೇವರ ಮೊರೆ ಹೋಗಿ ಹರಕೆ ಹೊತ್ತುಕೊಳ್ಳುತ್ತಾರೆ. ಆ ಹರಕೆ ತೀರಿಸಲು ವರ್ಷಕ್ಕೊಂದು ಬಾರಿ ನಡೆಯುವ ಈ ಕುಂಡೆ ಹಬ್ಬದಲ್ಲಿ ಹುಡುಗರು ಹುಡುಗಿ ವೇಷಧರಿಸಿ ಕೆಟ್ಟ ಪದಗಳಿಂದ ಬೈದರೆ ದೇವರು ಒಲಿಯುತ್ತೆ, ಒಳ್ಳೆಯದಾಗುತ್ತದೆ ಎನ್ನುವುದು ಇಲ್ಲಿನ ಜನ್ರ ನಂಬಿಕೆ. ಇದನ್ನೂ ಓದಿ:  ತಮಿಳು ಭಾಷೆಯನ್ನು ಕೇಂದ್ರದ ಅಧಿಕೃತ ಭಾಷೆಯಾಗಿ ಘೋಷಿಸಿ: ಸ್ಟಾಲಿನ್ ಒಟ್ಟಾರೆ ಈ ಆದಿವಾಸಿಗಳ ಆಚರಣೆಯಂತೂ ವಿಭಿನ್ನವಾಗಿದೆ. ಕಾಡಿನೊಳಗೆ ಹಾಗೂ ಕಾಫಿತೋಟಗಳಲ್ಲಿ ವರ್ಷಪೂರ್ತಿ ಕೂಲಿ ಕಾರ್ಮಿಕರಾಗಿ ದುಡಿಯುವ ಈ ಜನ ವರ್ಷಕ್ಕೊಂದು ಬಾರಿ ಬಿಡುವು ಮಾಡಿಕೊಂಡು ಇಂತಹ ಆಚರಣೆ ಮಾಡ್ತಿದ್ದಾರೆ. ಅಲ್ಲದೇ ತಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ದತಿ ಆಚಾರ ವಿಚಾರ ರೂಢಿ ಸಂಪ್ರದಾಯವನ್ನ ಮರೆಯದೇ ಈಗಲೂ ಆಚರಿಸುತ್ತಿದ್ದಾರೆ.

  • ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ ಎಂದಿದ್ದ ನಟಿ ಕ್ಷಮೆ

    ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ ಎಂದಿದ್ದ ನಟಿ ಕ್ಷಮೆ

    ಭೋಪಾಲ್: ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಇದೀಗ ಕ್ಷಮೆಯಾಚಿಸಿದ್ದಾರೆ.

    ತನ್ನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಫ್‍ಐಆರ್ ದಾಖಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ನಟಿ, ಪತ್ರಿಕಾಗೋಷ್ಠಿ ನಡೆಸಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಕೂಡ ದೇವರನ್ನು ಆರಾಧಿಸುತ್ತೇನೆ. ಹೀಗಾಗಿ ಉದ್ದೇಶಪೂರ್ವಕವಾಗಿ ನಾನು ಆ ಹೇಳಿಕೆಯನ್ನು ನೀಡಿಲ್ಲ. ನನ್ನ ನಿರ್ದಿಷ್ಟ ಹೇಳಿಕೆಯೇ ಬೇರೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಯಾರ ಭಾವನೆಗಳನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ. ಆದರೆ ಇದೀಗ ನನ್ನ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆ ಆಗಿದೆ ಎಂಬುದು ತಿಳಿದಿದೆ. ಹಾಗಾಗಿ ನನ್ನ ಈ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. ನಟ ಸೌರಭ್ ರಾಜ್ ಜೈನ್ ಬಗ್ಗೆ ಮಾತನಾಡುತ್ತಿದ್ದ ವೇಳೆ ಅವರನ್ನು ಭಗವಾನ್ ಎಂದು ಉದಾಹರಣೆಯಾಗಿ ಬಳಸಿದ್ದೇನೆ. ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

    ವೈರಲ್ ಆಗಿದ್ದೇನು..?
    ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣ ಖ್ಯಾತಿಯ ಸೌರಭ್ ರಾಜ್ ಜೈನ್ ಜೊತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯಲ್ಲಿ ಶ್ವೇತಾ ತಿವಾರಿ ನಟಿಸಿದ್ದಾರೆ. ಈ ವೆಬ್ ಸೀರಿಸ್ ಪ್ರಮೋಷನ್ ಇತ್ತೀಚೆಗೆ ಭೋಪಾಲ್ ನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶ್ವೇತಾ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಶ್ವೇತಾ, ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು, ದೇವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಕಿಡಿಕಾರಿದ್ದರು. ಇದನ್ನೂ ಓದಿ: ಅತ್ತಿಗೆಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ತನಿಖೆಗೆ ಸೂಚನೆ:
    ನಟಿಯ ಈ ಹೇಳಿಕೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಭೋಪಾಲ್ ಕಮಿಷನರ್ ಗೆ ತ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಶ್ವೇತಾ ತಿವಾರಿ ಅವರು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅಲ್ಲದೆ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ನನಗೆ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.