Tag: ದೇವರಾಜ ಅರಸು

  • ದೇವರಾಜ ಅರಸು ಹಾದಿಯಲ್ಲಿ ನಡೆಯುವ ಪ್ರಯತ್ನ ನಮ್ಮದು: ಸಿದ್ದರಾಮಯ್ಯ

    ದೇವರಾಜ ಅರಸು ಹಾದಿಯಲ್ಲಿ ನಡೆಯುವ ಪ್ರಯತ್ನ ನಮ್ಮದು: ಸಿದ್ದರಾಮಯ್ಯ

    ಬೆಂಗಳೂರು: ದೇವರಾಜ ಅರಸು (D Devaraj Urs) ಅವರು ಕಾಂಗ್ರೆಸ್ (Congress) ಪಕ್ಷದ ಪ್ರಮುಖ ನಾಯಕರಾಗಿ ಈ ರಾಜ್ಯದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು. ಅವರ ಹಾದಿಯಲ್ಲಿಯೇ ನಡೆಯುವ ಪ್ರಯತ್ನವನ್ನು ನಮ್ಮ ಸರ್ಕಾರವೂ ಮಾಡುತ್ತದೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ದಿ.ದೇವರಾಜ ಅರಸುರವರ 42ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ; ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಗೆಲುವು

    ದೇವರಾಜ ಅರಸು ಅವರು ಒಬ್ಬ ಜಾತ್ಯತೀತ ವ್ಯಕ್ತಿ. ಸಾಮಾಜಿಕ ನ್ಯಾಯದ ಹರಿಕಾರ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಮಾಜದ ತಳವರ್ಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಿದ್ದರು. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಏಕೀಕರಣದ ನಂತರ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ವರ್ಷ ಅದರ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

    ಅರಸು ಅವರು ಬಡವರ, ಶೋಷಿತರ, ಸಾಮಾಜಿಕ ನ್ಯಾಯದ ಪರವಾಗಿದ್ದ ನಾಯಕರು. ಅದಕ್ಕೇ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವವನೇ ಒಡೆಯ ಎಂದು ಘೋಷಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.

    ಕಾಂಗ್ರೆಸ್‌ನಿಂದ ಮಾತ್ರ ಸಾಮಾಜಿಕ ನ್ಯಾಯ ಪಾಲನೆ
    ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಎಂಟು ವರ್ಷಗಳ ಕಾಲ ಸಾಮಾಜಿಕ ನ್ಯಾಯದ ಅಡಿಪಾಯ ಹಾಕಿದರು. ಅದರ ಬುನಾದಿಯ ಮೇಲೆ ಸಾಮಾಜಿಕ ನ್ಯಾಯ ಕರ್ನಾಟಕದಲ್ಲಿ ಮುಂದುವರೆದಿದೆ ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯ ಪಾಲಿಸುತ್ತಿದೆ. ಇತರೆ ಪಕ್ಷಗಳಿಗೆ ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲ. ಬದಲಿಗೆ ಅದರ ವಿರುದ್ಧವಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಇದನ್ನೂ ಓದಿ: ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ

  • INDIA ಸಂಘಟನೆಯಿಂದ ಬಿಜೆಪಿ ಹೆದರಿದೆ.. ಎರಡು ಮಾತಿಲ್ಲ: ಸ್ವಪಕ್ಷ ವಿರುದ್ಧವೇ ಹೆಚ್.ವಿಶ್ವನಾಥ್ ಹೇಳಿಕೆ

    INDIA ಸಂಘಟನೆಯಿಂದ ಬಿಜೆಪಿ ಹೆದರಿದೆ.. ಎರಡು ಮಾತಿಲ್ಲ: ಸ್ವಪಕ್ಷ ವಿರುದ್ಧವೇ ಹೆಚ್.ವಿಶ್ವನಾಥ್ ಹೇಳಿಕೆ

    ಬಾಗಲಕೋಟೆ: INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ (BJP) ಹೆದರಿದೆ, ಎರಡು ಮಾತಿಲ್ಲ. ನಾನು ಸಹ ಮೊದಮೊದಲು ಮೋದಿಯವರನ್ನು (Narendra Modi) ಅಭಿಮಾನಿಸುತ್ತಿದ್ದೆ. ಇಂದು ಮೋದಿಯವರು ಕೆಳಗಿಳಿಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ.

    INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ (JDS) ಮೈತ್ರಿ ಆಯ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬಾಗಲಕೋಟೆಯಲ್ಲಿ (Bagalkote) ಅವರು ಪ್ರತಿಕ್ರಿಯಿಸಿದರು. ಬಿಜೆಪಿಯವರು ಎಲ್ಲಿಯಾದರೂ ಈ ದೇಶದ ಜನರ ಅಕ್ಷರ, ಆರೋಗ್ಯ, ಅನ್ನ, ನಮ್ಮ ಉದ್ಯೋಗದ ಬಗ್ಗೆ ಏನಾದರೂ ಮಾತನಾಡಿದ್ದಾರಾ? ಏನೂ ಮಾತನಾಡುತ್ತಿಲ್ಲ. ಬಿಜೆಪಿಯವರು ಭೂತ ಕಾಲದಲ್ಲಿದ್ದಾರೆ ಎಂದು ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದರು. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    1,200 ವರ್ಷಗಳ ಹಿಂದೆ ಇಲ್ಲಿ ರಾಮ ಇದ್ದ ಎನ್ನುವುದು ಯಾರಿಗೆ ಬೇಕು? ರಾಮ ಬೇಕು ನಿಜ. ಆದರೆ ಭೂತಕಾಲದ ಚರ್ಚೆ ಬಿಟ್ಟು ವರ್ತಮಾನಕ್ಕೆ ಬನ್ನಿ. ವರ್ತಮಾನಕ್ಕೆ ಬಂದು ಚರ್ಚೆ ಮಾಡಿ ಭವಿಷ್ಯವನ್ನು ಕಟ್ಟುವುದಾಗಬೇಕೆ ಹೊರತು, ಬರೀ ನೀವು ಭೂತಕಾಲದಲ್ಲೇ ಓಡಾಡುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

    ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ದೇವರಾಜ ಅರಸು (D. Devaraj Urs) ಜೊತೆ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂಬ ಬಿಕೆ ಹರಿಪ್ರಸಾದ್ (B.K.Hariprasad) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹರಿಪ್ರಸಾದ್ ಕಾಮೆಂಟನ್ನು ನಾವು ಯಾರು ಒಪ್ಪಿಕೊಳ್ಳುವುದಿಲ್ಲ. ದೇವರಾಜ ಅರಸು ಕಾರಲ್ಲಿ ಕೂತುಕೊಂಡರೆ ಏನು? ದೇವರಾಜ ಅರಸು ಅವರದ್ದು ಸರ್ಕಾರಿ ಕಾರು. ಸರ್ಕಾರ ಕೊಟ್ಟ ಕಾರನ್ನು ದೇವರಾಜ ಅರಸು ಅವರು ಮತ್ತೆ ಸರ್ಕಾರಕ್ಕೆ ವಾಪಸ್ ಕೊಟ್ಟರು. ಅದರಲ್ಲಿ ಸರ್ಕಾರದ ಮುಖ್ಯಮಂತ್ರಿ ಕೂರುವುದರಲ್ಲಿ ತಪ್ಪೇನಿದೆ ಎಂದರು. ಇದನ್ನೂ ಓದಿ: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ

    ನಾನು ಸಂಗೊಳ್ಳಿ ರಾಯಣ್ಣ ಅವರನ್ನು ಆರಾಧನೆ ಮಾಡುತ್ತೇನೆ. ಹಾಗಂತ ನಾನು ಸಂಗೊಳ್ಳಿ ರಾಯಣ್ಣ ಆಗೋದಕ್ಕೆ ಆಗುತ್ತಾ? ಸಿದ್ದರಾಮಯ್ಯ ಸಹ ದೇವರಾಜ ಅರಸು ಅವರನ್ನು ಆರಾಧನೆ ಮಾಡುತ್ತಾರೆ. ಅದನ್ನು ಬಿಟ್ಟರೆ ನಾನೇ ದೇವರಾಜ ಅರಸು ಅಂತ ಎಲ್ಲಿ ಹೇಳಿದ್ದಾರೆ? ಇದೆಲ್ಲಾ ಅನವಶ್ಯಕ. ಹರಿಪ್ರಸಾದ್ ಅವರಿಗೆ ನಾನು ವಿನಂತಿ ಮಾಡುತ್ತೇನೆ. ನಿಜ ನಿಮ್ಮನ್ನು ಮಂತ್ರಿ ಮಾಡಬೇಕಿತ್ತು ಅನ್ನುತ್ತೀರಿ. ಆದರೆ ಅದು ನಮಗೆ ಸಂಬಂಧವಿಲ್ಲ. ಇಂದು ಈಡಿಗ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾತಿನಿಧ್ಯ ಕೊಟ್ಟಿದ್ದಾರೆ. ಬಂಗಾರಪ್ಪ ಅವರ ಮಗನೇ ಶಿಕ್ಷಣ ಮಂತ್ರಿಯಾಗಿದ್ದಾನೆ. ಹಾಗಾಗಿ ಕೊಟ್ಟೇ ಇಲ್ಲ ಅಂತಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್; 500 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧಾರ

    ನಿಮ್ಮ ಧ್ವನಿ ಯಾವ ತರಹ ಹೋಗುತ್ತಿದೆ ಅಂದರೆ ನಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಆಧ್ಯತೆ ಕೊಟ್ಟಿಲ್ಲ ಅಂತ ಹೋಗ್ತಿದೆ. ಕಾಂಗ್ರೆಸ್ ಈಡಿಗ ಸಮುದಾಯಕ್ಕೆ ಕೊಟ್ಟಷ್ಟು ಪ್ರಾತಿನಿಧ್ಯ ಯಾವ ಪಕ್ಷವೂ ಕೊಟ್ಟಿಲ್ಲ. ಬಂಗಾರಪ್ಪ ಸಿಎಂ ಆಗಿದ್ದರು. ಹಿಂದೆ ಯಾವುದೇ ಸಂಪುಟವಿರಲಿ, ಮೂರು-ನಾಲ್ಕು ಜನ ಮಂತ್ರಿ ಇರುತ್ತಿದ್ದರು. ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದರು, ಮಂತ್ರಿಯೂ ಆಗಿದ್ದರು. ಹೌದು ದೇವರಾಜ ಅರಸು ಅವರ ಒಂದು ಕಾಲವಿತ್ತು. ಆ ಕಾಲ ವಾಪಸ್ ಬರಲ್ಲ. ನಾವು ಅದನ್ನೇ ಹೇಳುತ್ತಾ ಕೂತರೆ ಆಗಲ್ಲ. ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು. ಅದಕ್ಕೆ ತಾನೇ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ನಾನು 40 ವರ್ಷ ಕಾಂಗ್ರೆಸ್‌ನಲ್ಲಿದ್ದು, ಜೆಡಿಎಸ್‌ಗೆ ಹೋಗಿ, ಬಿಜೆಪಿ ಹೋಗಿ ಬಂದಿದ್ದೇನೆ. ಇದಕ್ಕೆ ಹಲವಾರು ಕಾರಣಗಳಿವೆ. ಇದು ನನ್ನ ಪೊಲಿಟಿಕಲ್ ಜರ್ನಿ ಎಂದರು. ಇದನ್ನೂ ಓದಿ: ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ, ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು: ಎನ್‌ವೈ ಗೋಪಾಲಕೃಷ್ಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿ. ದೇವರಾಜ ಅರಸು ನೆಚ್ಚಿನ ಬೆಂಝ್ ಕಾರಿನಲ್ಲಿ ಸಿಎಂ ಸಿಟಿ ರೌಂಡ್ಸ್

    ಡಿ. ದೇವರಾಜ ಅರಸು ನೆಚ್ಚಿನ ಬೆಂಝ್ ಕಾರಿನಲ್ಲಿ ಸಿಎಂ ಸಿಟಿ ರೌಂಡ್ಸ್

    ಬೆಂಗಳೂರು: ಮಾಜಿ ಸಿಎಂ ದಿವಂಗತ ದೇವರಾಜ ಅರಸು (Devaraj Urs) ಅವರ 108ನೇ ಜನ್ಮದಿನದ ಹಿನ್ನೆಲೆ ಅರಸು ಅವರ ಭಾವಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಮಾಲಾರ್ಪಣೆ ಮಾಡಿದ್ದಾರೆ. ಬಳಿಕ ಮಾಜಿ ಸಿಎಂ ಅವರ ನೆಚ್ಚಿನ ಬೆಂಝ್ ಕಾರಿನಲ್ಲಿ (Benz Car) ಸವಾರಿ ಮಾಡಿದ್ದಾರೆ.

    ವಿಧಾನಸೌಧದ ಆವರಣದಲ್ಲಿರುವ ಅರಸು ಅವರ ಪ್ರತಿಮೆ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರಸು ಅವರು ಬಳಸುತ್ತಿದ್ದ ಕಪ್ಪು ಬಣ್ಣದ ಬೆಂಝ್ ಕಾರಿನಲ್ಲಿ ಸಿಎಂ ಸಿದ್ದರಾಮಯ್ಯ ರೌಂಡ್ಸ್ ಹೊಡೆದಿದ್ದಾರೆ.

    ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ದೇವರಾಜ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ ಆಗುತ್ತೆ – ಕೋಡಿಮಠ ಶ್ರೀಗಳ ಭವಿಷ್ಯ

    ಈ ಸಾಲಿನ ದೇವರಾಜ ಅರಸು ಪ್ರಶಸ್ತಿಗೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಭಾಜನರಾಗಿದ್ದಾರೆ. ಇದನ್ನೂ ಓದಿ: WorldCup 2023: ಬಿಸಿಸಿಐಗೆ ಹೊಸ ತಲೆನೋವು – ವೇಳಾಪಟ್ಟಿ ಬದಲಾವಣೆಗೆ ಹೈದರಾಬಾದ್‌ ಅಧಿಕಾರಿಗಳಿಂದ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವರಾಜ ಅರಸು ಉತ್ಸವವನ್ನು ಸರ್ಕಾರ ಕೈಬಿಟ್ಟಿದೆ: ಕೋಟಾ ಶ್ರೀನಿವಾಸ ಪೂಜಾರಿ

    ದೇವರಾಜ ಅರಸು ಉತ್ಸವವನ್ನು ಸರ್ಕಾರ ಕೈಬಿಟ್ಟಿದೆ: ಕೋಟಾ ಶ್ರೀನಿವಾಸ ಪೂಜಾರಿ

    ಉಡುಪಿ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (D. Devaraj Urs) ಜನ್ಮದಿನ ಆಗಸ್ಟ್ 20ರಂದು ನಡೆಯಲಿದೆ. ಬಿಜೆಪಿ ಸರ್ಕಾರ ಇದ್ದಾಗ ಮೂರು ದಿನಗಳ ಕಾಲ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ದೇವರಾಜ ಅರಸು ಉತ್ಸವ ಆರಂಭ ಮಾಡಿತ್ತು. ಸಿದ್ದರಾಮಯ್ಯ (Siddaramaiah) ಸರ್ಕಾರ ಈ ಪರಿಪಾಠ ಕೈಬಿಟ್ಟಿದೆ. ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕು ಬರಹ ಸಾಮಾಜಿಕ ನ್ಯಾಯ ವಿಚಾರವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿತ್ತು. ಹಾಸ್ಟೆಲ್ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಮಾಡಿಸಿದ್ದೆವು, ವಿಚಾರ ಸಂಕೀರ್ಣವನ್ನು ಮಾಡಿದ್ದೆವು. ರಾಜ್ಯ ಮಟ್ಟದ ಪ್ರಶಸ್ತಿ ನೀಡಿದ್ದೆವು, ಅರಸು ಆದರ್ಶ ಪಾಲಿಸಿದವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿದ್ದೆವು. ಸಿದ್ದರಾಮಯ್ಯ ಹಿಂದುಳಿದವರ ಕಾಳಜಿ ಬಗ್ಗೆ ಮಾತನಾಡುತ್ತಾರೆ. ಈ ಸರ್ಕಾರ ಕೂಡ ಮೂರು ದಿನಗಳ ಉತ್ಸವ ಮಾಡಬೇಕೆಂದು ಸಿದ್ದರಾಮಯ್ಯಗೆ ಪತ್ರ ಬರೆದಿದ್ದೆ. ದುರಾದೃಷ್ಟವಶಾತ್ ಮುಖ್ಯಮಂತ್ರಿ ಕಚೇರಿಯಿಂದ ಹಿಂಬರಹ ಬಿಟ್ಟರೆ ಬೇರೇನೂ ಪ್ರತಿಕ್ರಿಯೆ ಬಂದಿಲ್ಲ. ಹಿಂದಿನ ಸರ್ಕಾರ ಮಾಡಿದ ಅರಸು ಉತ್ಸವ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಮೂರು ದಿನಗಳ ಆಚರಣೆಗೆ ಯಾವ ದೊಡ್ಡ ಮೊತ್ತದ ಅವಶ್ಯಕತೆ ಇಲ್ಲ. ಆಯಾ ಜಿಲ್ಲೆಗಳಲ್ಲಿರುವ ಅನುದಾನ ಬಳಸಿಕೊಂಡು ಮಾಡಬಹುದು. ಯಾವುದೇ ವಿಶೇಷ ಅನುದಾನದ ಸಮಸ್ಯೆ ಆಗುವುದಿಲ್ಲ. ಆದರೆ ಇಚ್ಛಾಶಕ್ತಿ ಬೇಕು ಅಷ್ಟೇ. ಸಿದ್ದರಾಮಯ್ಯನವರೇ ಇಚ್ಛಾಶಕ್ತಿ ಪ್ರದರ್ಶಿಸಿ ಎಂದು ಕೋಟಾ ಕಿವಿ ಹಿಂಡಿದ್ದಾರೆ.

    ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಆಗಿದ್ದ ದಿವಂಗತ ದೇವರಾಜ ಅರಸು ಅವರ ಸಮಸ್ಮರಣೆಯ ನೆನಪಿನ ಕಾರ್ಯಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಾ? ಒಂದು ಸರ್ಕಾರಿ ಕಾರ್ಯಕ್ರಮದ ರೀತಿ ಆಚರಿಸುತ್ತಾ ಎಂಬ ಪ್ರಶ್ನೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದುಳಿದ ವರ್ಗದ ಜನರ ಕಲ್ಯಾಣ ಅರಸು ಅವರ ಕನಸಾಗಿತ್ತು: ಕೆ.ಗೋಪಾಲಯ್ಯ

    ಹಿಂದುಳಿದ ವರ್ಗದ ಜನರ ಕಲ್ಯಾಣ ಅರಸು ಅವರ ಕನಸಾಗಿತ್ತು: ಕೆ.ಗೋಪಾಲಯ್ಯ

    ಮಂಡ್ಯ: ಹಿಂದುಳಿದ ವರ್ಗದ ಜನರು ಸರ್ವಾಂಗೀಣ ಅಭಿವೃದ್ಧಿಯಾದಾಗ ಮಾತ್ರ ದೇವರಾಜ ಅರಸು ಅವರು ಕಂಡ ಕನಸು ಈಡೇರಿ ದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ‌ ಕೆ.ಗೋಪಾಲಯ್ಯ ಹೇಳಿದರು.

    ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ದೇವರಾಜ ಅರಸು ಅವರ ಕನಸು ಈಡೇರಬೇಕೆಂದರೆ ಹಿಂದುಳಿದ ವರ್ಗವನ್ನು ಮೇಲೆತ್ತುವುದಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ಉತ್ತಮ ವಾದ ಹಾಸ್ಟೆಲ್ ಗಳು ಹಾಗೂ ಶಾಲೆಗಳನ್ನು ನಿರ್ಮಿಸಿದೆ ಎಂದರು.

    ವಿದ್ಯಾರ್ಥಿಗಳಿಗೆ ಸಕಲ ಸವಲತ್ತುಗಳನ್ನು ನೀಡಬೇಕಿರುವುದು ನಮ್ಮ ಸರ್ಕಾರದ ಕರ್ತವ್ಯವಾಗಿದ್ದು.‌ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾರಾಯಣಗೌಡ ಅವರೊಂದಿಗೆ ಶಾಸಕರಾದ ಸುರೇಶ್ ಗೌಡರು ಮತ್ತು ನಾನೂ ಜೊತೆಯಾಗಿ ಮೂವರು ಶ್ರಮಿಸುವುದಾಗಿ ಹೇಳಿದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ಅರಸೀಕೆರೆಯಲ್ಲಿ 16 ಕೋಟಿ ರೂ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಿದ್ದು ಅತ್ಯುತ್ತಮವಾಗಿದೆ. ನಾಗಮಂಗಲದಲ್ಲಿಯೂ ಅದೇ ರೀತಿ ನಿರ್ಮಿಸುವ ಕೆಲಸ ಮಾಡಲಾಗುವುದು. ಉಕ್ರೇನ್‌ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ. ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ. ಪ್ರಧಾನಿಗಳು ಅವರ ರಕ್ಷಣೆಗೆ ಟೊಂಕಕಟ್ಟಿ ಕೆಲಸ‌ಮಾಡುತ್ತಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿಜಿಲ್ಲಾಧಿಕಾರಿ ಎಸ್.ಅಶ್ವತಿ,ಜಿಪಂ ಸಿಇಒ ಶ್ರೀಮತಿ ದಿವ್ಯಪ್ರಭು,ನಾಗಮಂಗಲ ತಹಶೀಲ್ದಾರ್‌ ಕುಂಞ ಅಹಮದ್,ತಾಪಂ ಇಒ ವೈ.ಎನ್.ಚಂದ್ರ ಮೌಳಿ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಚಿವರು ಮಂಡ್ಯದ ಟಿ.ಬಿ.ಬಡಾವಣೆಯಲ್ಲಿ ನಿರ್ಮಾಣ ಮಾಡಿರುವ ಜಿಲ್ಲಾ ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿದರು.

  • ಕರ್ನಾಟಕ ಕಟ್ಟುವಲ್ಲಿ ದಿ.ದೇವರಾಜ ಅರಸು ಪಾತ್ರ ಹಿರಿದು: ಬೊಮ್ಮಾಯಿ

    ಕರ್ನಾಟಕ ಕಟ್ಟುವಲ್ಲಿ ದಿ.ದೇವರಾಜ ಅರಸು ಪಾತ್ರ ಹಿರಿದು: ಬೊಮ್ಮಾಯಿ

    ಬೆಂಗಳೂರು: ಕರ್ನಾಟಕದ ನಾಮಕರಣದಿಂದ ಹಿಡಿದು ಕರ್ನಾಟಕ ಕಟ್ಟುವಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಪಾತ್ರ ಹಿರಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

    ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡ ನಾಡು ಕಂಡಂಥ ಧೀಮಂತ ನಾಯಕರು, ಜನಪರ, ಹಿಂದುಳಿದ ಮತ್ತು ರೈತಪರ ಮುಖ್ಯಮಂತ್ರಿ ದೇವರಾಜ ಅರಸು. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಿದು. ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ. ಹಿಂದುಳಿದ ವರ್ಗಗಳ ಏಳಿಗೆಗಾಗಿ, ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು. ವಿಶೇಷವಾಗಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವ ಸಂಕಲ್ಪವನ್ನು ಮಾಡುವ ದಿನ ಇದು ಎಂದು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: 48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

    ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಕರ್ನಾಟಕದಲ್ಲಿ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತವಾಗಿ, ಸರ್ವ ಸಮ್ಮತವಾಗಿ ಒಪ್ಪುವಂಥ ನಾಯಕರು ಎಂದು ನುಡಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ನಾಯಕರಿಂದ ಕೋವಿಡ್ ನಿಯಮ ಉಲ್ಲಂಘನೆ – ದೂರು ದಾಖಲು

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

  • ಒಳ್ಳೆಯ ಆಡಳಿತ ನೀಡಿದ್ರೆ ಯಾಕೆ 78ಕ್ಕೆ ಇಳಿಯಿತು – ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗರಂ

    ಒಳ್ಳೆಯ ಆಡಳಿತ ನೀಡಿದ್ರೆ ಯಾಕೆ 78ಕ್ಕೆ ಇಳಿಯಿತು – ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗರಂ

    ಮೈಸೂರು: ಕಾಂಗ್ರೆಸ್ ತನ್ನ ಅವಧಿಯಲ್ಲಿ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಇದ್ದ ಸಂಖ್ಯಾಬಲ ಈ ಬಾರಿಯ ಚುನಾವಣೆಯಲ್ಲಿ ಏಕೆ 78ಕ್ಕೆ ಇಳಿಯಿತು ಎಂದು ಪ್ರಶ್ನೆ ಮಾಡುವ ಮೂಲಕ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲ ಕಾಂಗ್ರೆಸ್ ನಾಯಕರು ಚಮಚಾ ಗಿರಿ ಮಾಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ 5 ವರ್ಷ ತನ್ನ ಆಡಳಿತದಲ್ಲಿ ಏನ್ ಮಾಡಿದ್ದಾರೆ? ಒಳ್ಳೆಯ ಆಡಳಿತ ನೀಡಿದ ದೇವರಾಜ ಅರಸು ಅವರನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿಯಲ್ಲಿ ಆಡಳಿತ ನಡೆಸಿದ್ದಾರ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ತನ್ನ ಅವಧಿಯಲ್ಲಿ ಆಡಳಿತ ಚೆನ್ನಾಗಿತ್ತು, ಐದು ವರ್ಷ ಪೂರೈಸಿದ ಸಿಎಂ ನಾನು ಎಂದು ಹೇಳುತ್ತಾರೆ. ಆಗದರೆ 130 ಇದ್ದ ಸಂಖ್ಯಾಬಲ 78ಕ್ಕೆ ಏಕೆ ಇಳಿಯಿತು? ಒಳ್ಳೆಯ ಅಡಳಿತ ನೀಡಿದ ಕಾಂಗ್ರೆಸ್ ಪಕ್ಷ ಏಕೆ ಅಧಿಕಾರ ಕಳೆದುಕೊಂಡಿತು. ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ ಎಂದರು.

    ಇದೇ ವೇಳೆ ಸ್ಥಳೀಯ ಚುನಾವಣೆಯ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ಸ್ಥಳೀಯ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಸ್ಥಳೀಯ ಜೆಡಿಎಸ್ ನಾಯಕರಿಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

    ಸಿಎಂ ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ವಿಧಾನಸೌದದ ಬಾಗಿಲು ಹಾಕಿಕೊಂಡು ಬಂದಿದ್ದಾರಾ?. ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ ಕಾಲ ಕಾಲಕ್ಕೆ ಸಿಎಂ ಸಲಹೆ ಸೂಚನೆ ಸಭೆ ಮಾಡುತ್ತಿದ್ದಾರೆ. ಆಡಳಿತ ಚೆನ್ನಾಗಿ ನಡೆಯುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿ ಎಲ್ಲೂ ಶೂನ್ಯ ವಾತಾವರಣ ಕ್ರಿಯೇಟ್ ಆಗಿಲ್ಲ. ಅವರಿಗೆ ಎಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆಯೋ ಅಲ್ಲಿಗೆ ಹೋಗೋದು ಕಾಮನ್ ಎಂದು ಸಮರ್ಥಿಸಿಕೊಂಡರು.