Tag: ದೇವರಾಜೇ ಗೌಡ

  • ವಕೀಲ ದೇವರಾಜೇ ಗೌಡಗೆ ಜಾಮೀನು ಮಂಜೂರು

    ವಕೀಲ ದೇವರಾಜೇ ಗೌಡಗೆ ಜಾಮೀನು ಮಂಜೂರು

    ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇ ಗೌಡಗೆ (Advocate Devaraje Gowda) ಜಾಮೀನು ಮಂಜೂರು ಆಗಿದೆ.

    ದೇವರಾಜೇ ಗೌಡ ಅವರು ಜಾಮೀನು ಕೋರಿ ಹೈಕೋರ್ಟ್‍ಗೆ (Highcourt) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಇಂದು ಆದೇಶ ನೀಡಿದೆ.

    ಈ ಹಿಂದೆ ಹಾಸನದ 5ನೇ ಹೆಚ್ಚುವರಿ ಸಿವಿಲ್ ಕೋರ್ಟ್ ದೇವರಾಜೇ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದನ್ನು ಪ್ರಶ್ನಿಸಿ ದೇವರಾಜೇಗೌಡ ಅವರು ಹೈಕೋರ್ಟ್‍ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇದನ್ನೂಓದಿ: ಅರ್ಧ ಕೆಜಿ ಚಿನ್ನ, 50 ಲಕ್ಷ ನೀಡಿದ್ರೂ ವರದಕ್ಷಿಣೆಗಾಗಿ ಮಗಳ ಹತ್ಯೆ – ಪೋಷಕರ ಆರೋಪ

    ಏನಿದು ಪ್ರಕರಣ?: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಮಹಿಳೆಯೊಬ್ಬರ ಮೇಲೆ ದೇವರಾಜೇ ಗೌಡ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಅಮಿತ್‌ ಶಾನೇ ದೇವರಾಜೇಗೌಡರ ಬಳಿ ಹೇಳಿಸಿರಬಹುದು: ಪ್ರಿಯಾಂಕ್‌ ಖರ್ಗೆ ತಿರುಗೇಟು

    ಅಮಿತ್‌ ಶಾನೇ ದೇವರಾಜೇಗೌಡರ ಬಳಿ ಹೇಳಿಸಿರಬಹುದು: ಪ್ರಿಯಾಂಕ್‌ ಖರ್ಗೆ ತಿರುಗೇಟು

    ಬೆಂಗಳೂರು: ಪೆನ್‌ಡ್ರೈವ್‌ ಪ್ರಕರಣದ ಹಿಂದೆ ನಾಲ್ವರು ಸಚಿವರ ಕಮಿಟಿಯನ್ನು ಡಿ.ಕೆ ಶಿವಕುಮಾರ್‌ (DK Shivakumar) ಅವರು ಮಾಡಿದ್ದಾರೆ ಎಂಬ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅಲ್ಲಗೆಳೆದಿದ್ದಾರೆ.

    ಈ ಕುರಿತು ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಸಚಿವರು, ದೇವರಾಜೇಗೌಡ (Devaraje Gowda) ಅವರ ಆರೋಪಗಳೆಲ್ಲ ಸುಳ್ಳು. ಯಾರಾದರೂ ಜಾಸ್ತಿ ಮಾತಾಡಿದ್ರೆ ಅವರ ಮೇಲೆ ಗೂಬೆ ಕೂರಿಸೋದು ಬಿಜೆಪಿಯ ಹಳೆ ಚಾಳಿ. ಈ ಹಿಂದೆ ಬಿಟ್‌ ಕಾಯಿನ್‌ನಲ್ಲಿ, ಪಿಎಸ್‌ಐ ಹಗರಣ, ಗಂಗಾ ಕಲ್ಯಾಣ ಹಗರಣದಲ್ಲಿ ಪ್ರಿಕಾಂಕ್‌ ಖರ್ಗೆ ಪಾಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಇದನ್ನೂ ಹಂಗೇ ಹೇಳಿರೋದು. ಯಾರಿಗೆ ಗೊತ್ತು ಮೇಲಿಂದಲೇ ಹೇಳಿಸಿರಬಹುದು ಎಂದು ವಾಗ್ದಾಳಿ ನಡೆಸಿದರು.

    ದೇವರಾಜೇಗೌಡ ಅವರೇ ಅಮಿತ್‌ ಶಾ (Amitshah) ಅವರ ನಿರ್ದೇಶನದ ಮೇರೆಗೆ ನಾನು ಇದನ್ನೆಲ್ಲಾ ಮಾಡಿರುವುದು ಅಂತಾ ಈಗಾಗಲೇ ಹೇಳಿದ್ದಾರೆ. ಇದನ್ನೂ ಅವರೇ ಹೇಳಿಸಿರಬಹುದು. ಆದರೆ ಇದನ್ನು ಕೋರ್ಟ್‌ ಆವರಣದಲ್ಲಿ ಹೇಳುವ ಅವಶ್ಯಕತೆ ಏನಿದೆ?. ಲಾಯರ್ ಆಗಿರುವ ನೀವು ಬಂದು ಎಲ್ಲಾ ದಾಖಲೆಗಳನ್ನು ನೀಡಿ. ನಿಮಗೆ ಸಂಪೂರ್ಣವಾಗಿ ಕಾನೂನಿನ ಅರಿವಿದೆ. ಸಚಿವರಾಗಿರುವ ನಮಗೆ ಬೇರೆ ಕೆಲಸ ಇಲ್ವಾ?. ರಾಜ್ಯದಲ್ಲಿ ಭೀಕರ ಬರಗಾಲವಿದೆ ಎಂದರು.

    ನೂರು ಕೋಟಿ ಆಫರ್‌ ಕೊಟ್ಟು 5 ಕೋಟಿ ಕ್ಯಾಶ್‌ ಕೊಡಲು ಡಿಕೆಶಿ ಬಂದಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಇದನ್ನು ಅಮಿತ್‌ ಶಾ ಅವರಿಗೆ ಹೇಳಬೇಕಿತ್ತು. ನೋಡಿ ಸರ್‌ 100 ಕೋಟಿ ಕೊಡುತ್ತಾರೆ. ಐಟಿ-ಇಡಿ ದಾಳಿ ಮಾಡಿಸಿ ಅಂತಾ ಹೇಳಬೇಕಿತ್ತು ಎಂದರು. ಇದನ್ನೂ ಓದಿ: ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್: ಹೊಸ ಬಾಂಬ್‌ ಸಿಡಿಸಿದ ವಕೀಲ ದೇವರಾಜೇಗೌಡ

    ವಿಚಾರಣೆಗೆ ಸಿದ್ಧರಿದ್ದೀರಾ ಎಂಬ ಪ್ರಶ್ನೆ ಉತ್ತರಿಸಿದ ಖರ್ಗೆ, ಪಿಎಸ್‌ಐ ಹಗರಣದ ಸಂದರ್ಭದಲ್ಲಿ ಸಿಸಿಬಿಯವರೇ ನೋಟಿಸ್‌ ಕೊಟ್ಟಾಗ ಹೆದರಲಿಲ್ಲ. ಈವಾಗ ಹೆದರುವ ಅವಶ್ಯತೆ ಏನಿದೆ?. ದಾಖಲೆಗಳು ಕೊಟ್ಟು ನನ್ನದು ತಪ್ಪಿದೆ ಅಂದ್ರೆ ನಾನು ವಿಚಾರಣೆಗೆ ಹೋಗಲೇಬೇಕು, ಹೋಗ್ತೀನಿ ಎಂದು ಹೇಳಿದರು.

  • ವಕೀಲ ದೇವರಾಜೇಗೌಡಗೆ ಮೇ 24 ರವರೆಗೆ ನ್ಯಾಯಾಂಗ ಬಂಧನ

    ವಕೀಲ ದೇವರಾಜೇಗೌಡಗೆ ಮೇ 24 ರವರೆಗೆ ನ್ಯಾಯಾಂಗ ಬಂಧನ

    ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇ ಗೌಡರಿಗೆ ಪ್ರಿನ್ಸಿಪಲ್‌ ಸಿ.ಜೆ‌. ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಸಿದ್ದರಾಮ್.ಎಸ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣದಲ್ಲಿ (Pendrive Case) ದೇವರಾಜೇಗೌಡ ಬ್ಯಾಗ್ ಸಮೇತ ಇನ್ನೋವಾ ಕಾರಿನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದರು. ಆದರೆ ಶುಕ್ರವಾರ ರಾತ್ರಿ ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಪೊಲೀಸರು ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyuru) ತಾಲೂಕಿನ ಗುಯಿಲಾಳ್ ಟೋಲ್ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದರು.

    ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದು, ಬಳಿಕ ಎಸ್‌ಐ ಅರುಣ್ ನೇತೃತ್ವದಲ್ಲಿ ಹಾಸನ ಪೊಲೀಸರು ದೇವರಾಜೇಗೌಡರನ್ನು ಹೊಳೆನರಸೀಪುರಕ್ಕೆ ಕರೆದೊಯ್ದಿದ್ದರು. ಅರಕಲಗೂಡು, ಹಳ್ಳಿಮೈಸೂರು ಹಾಗೂ ಬಾಣಾವರ ಪಿಎಸ್‌ಐಗಳು ದೇವರಾಜೇಗೌಡರನ್ನು ಕರೆತಂದು ಹೊಳೆನರಸೀಪುರದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇರಿಸಿದ್ದರು. ಸತತ ವಿಚಾರಣೆಯ ಬಳಿಕ ಪೊಲೀಸ್ ಅಧಿಕಾರಿಗಳು ಮೆಡಿಕಲ್‌ ಟೆಸ್ಟ್‌ಗೆ ಕರೆದೊಯ್ದಿದ್ದಾರೆ. ತದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ:  ಹೋಟೆಲ್‌ ರೂಮಿನಲ್ಲಿ ಪರಪುರುಷರೊಂದಿಗೆ ಸರಸ – ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಡಾಕ್ಟರ್‌ ಪತ್ನಿ; ಮುಂದೇನಾಯ್ತು?

    ಇತ್ತ ದೇವರಾಜೇಗೌಡ ಕಾರು ಚಾಲಕನನ್ನು ಕರೆದೊಯ್ದು ಪೊಲೀಸರು ಕಾರು ತಪಾಸಣೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ್ ಅವರು ಕಾರಿನಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದ ಮೊಬೈಲ್‌ ಕೂಡ ವಶಕ್ಕೆ ಪಡೆದಿದ್ದಾರೆ. ಸದ್ಯ ದೇವರಾಜೇಗೌಡ ಕಾರು ಪೊಲೀಸರ ವಶದಲ್ಲಿದೆ.

  • ವಕೀಲ ದೇವರಾಜೇಗೌಡ ಬಂಧನಕ್ಕೆ ಆರ್‌ ಅಶೋಕ್‌ ಖಂಡನೆ

    ವಕೀಲ ದೇವರಾಜೇಗೌಡ ಬಂಧನಕ್ಕೆ ಆರ್‌ ಅಶೋಕ್‌ ಖಂಡನೆ

    ಬೆಂಗಳೂರು: ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನವನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಖಂಡಿಸಿದ್ದಾರೆ.

    ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅಶೋಕ್, ದೇವರಾಜೇಗೌಡ (Devaraje Gowda) ಬಂಧನ ಸರಿಯಲ್ಲ. ಪೆನ್‌ಡ್ರೈವ್ ಬಿಡುಗಡೆ ಮಾಡಿದ ಬಗ್ಗೆ ಸಾಕ್ಷಿಯನ್ನು ಸಿಬಿಐಗೆ ನೀಡುವುದಾಗಿ ದೇವರಾಜೇಗೌಡ ಹೇಳಿದ್ರು. ಆದರೆ ಅವರನ್ನ ಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರು ಹೇಳದಂತೆ ಧಮ್ಕಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ SIT ಅನ್ನು ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರದ ನಡೆ ಹೀಗೆ ಮುಂದುವರಿದರೆ ನಾವು ಸುಮ್ಮನೆ ಇರಲ್ಲ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಬರ ಇದೆ, ಮಳೆ ಬಂದ ನಂತರ ರೈತರ ಸಹಾಯಕ್ಕೆ ಸರ್ಕಾರ ಹೋಗಿಲ್ಲ. ರಸಗೊಬ್ಬರ ಸೇರಿ ಇತರ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಆದರೆ ಸರ್ಕಾರಕ್ಕೆ ಪ್ರಜ್ವಲ್ ಪ್ರಕರಣವೇ ಬೇಕಾಗಿದೆ, ಬೇರೆ ಏನೂ ಬೇಕಾಗಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ರು‌.

    ಪೆನ್ ಡ್ರೈವ್ ಪ್ರಕರಣ ಎರಡನೇ ಹಂತದ ಚುನಾವಣೆಗೆ ಡ್ಯಾಮೇಜ್ ಮಾಡಿಲ್ಲ. ಎಲ್ಲೂ ಸಹ ಅದು ಪ್ರಭಾವ ಬೀರಿಲ್ಲ. ಉತ್ತರ ಕರ್ನಾಟಕ ಭಾಗ ಆಗಿರುವುದಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಇದೇವೇಳೆ ಅಶೋಕ್ ತಿಳಿಸಿದರು.

  • ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ಬಂಧನ

    ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ಬಂಧನ

    ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ವೀಡಿಯೋ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡನನ್ನು ಇಂದು ಬಂಧಿಸಲಾಗಿದೆ.

    ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ನಗರಠಾಣೆ ಪೊಲೀಸರು ಇಂದು ಅರೆಸ್ಟ್‌ ಮಾಡಿದ್ದಾರೆ. ಸತತ ನಾಲ್ಕೂವರೆ ಗಂಟೆ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇನ್ನೂ ಹೇಳಿಕೆ ಪಡೆಯುವುದು ಬಾಕಿ ಇದೆ. ಹೇಳಿಕೆ ಪಡೆದ ಬಳಿಕ ದೇವರಾಜೇಗೌಡರನ್ನು ಮೆಡಿಕಲ್ ಟೆಸ್ಟ್‌ಗೆ ಪೊಲೀಸರು ಕರೆದೊಯ್ಯಲಿದ್ದಾರೆ. ತದನಂತರ ಜಡ್ಜ್‌ ಮುಂದೆ ಹಾಜರುಪಡಿಸಲಿದ್ದಾರೆ.

    ಇತ್ತ ದೇವರಾಜೇಗೌಡ ಕಾರು ಚಾಲಕನನ್ನು ಕರೆದೊಯ್ದು ಪೊಲೀಸರು ಕಾರು ತಪಾಸಣೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ್ ಅವರು ಕಾರಿನಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದ ಮೊಬೈಲ್‌ ಕೂಡ ವಶಕ್ಕೆ ಪಡೆದಿದ್ದಾರೆ. ಸದ್ಯ ದೇವರಾಜೇಗೌಡ ಕಾರು ಪೊಲೀಸರ ವಶದಲ್ಲಿದೆ. ಇದನ್ನೂ ಓದಿ: ಇಂದು ನ್ಯಾಯಾಧೀಶರ ಮುಂದೆ ದೇವರಾಜೇಗೌಡ

    ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವಕೀಲ ದೇವರಾಜೇಗೌಡರನ್ನು (G Devarajegowda) ಶುಕ್ರವಾರ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಪೊಲೀಸರು ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyuru) ತಾಲೂಕಿನ ಗುಯಿಲಾಳ್ ಟೋಲ್ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದಾರೆ.

  • ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ-  ಡಿಕೆಶಿಗೆ ದೇವರಾಜೇಗೌಡ ಓಪನ್‌ ಚಾಲೆಂಜ್

    ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ಡಿಕೆಶಿಗೆ ದೇವರಾಜೇಗೌಡ ಓಪನ್‌ ಚಾಲೆಂಜ್

    ಬೆಂಗಳೂರು: ಡಿಕೆ ಶಿವಕುಮಾರ್ (D.K Shivakumar) ಅವರು ನನ್ನ ಸುಳ್ಳುಗಾರ ಅಂತ ಆರೋಪ ಮಾಡಿದ್ರು. ಹೀಗಾಗಿ ಅವರಿಗೆ ನಾನು ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ವಿಧಾನಸೌಧದ ಮುಂದೆ ಆಡಿಯೋ ರಿಲೀಸ್ ಮಾಡ್ತೀನಿ. ಯಾರ್ಯಾರು ಬಂದಿದ್ರು ಅಂತ ಮಾಹಿತಿ ಬಹಿರಂಗ ಮಾಡ್ತೀನಿ. ಅಲ್ಲೇ ಬಹಿರಂಗ ಚರ್ಚೆ ಮಾಡೋಣ ಎಂದು ಸವಾಲೆಸೆದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಅಶ್ಲೀಲ ವೀಡಿಯೋ ಸಂಬಂಧಿಸಿದ ಚರ್ಚೆ ಆಗುತ್ತಿದೆ. ಸರ್ಕಾರದ ಪ್ರತಿನಿಧಿಗಳು ಎಲ್ಲಾ ಕಡೆ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಸರ್ಕಾರದ ನಾಯಕರ ಹೆಸರು ಬಂದ ಕೂಡಲೇ ಈ ರೀತಿಯಲ್ಲಿ ಮಾಡುತ್ತಿದ್ದಾರೆ. ನನ್ನ ಮೇಲೆ ದೂರು ಕೊಡುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

    ಹನಿಟ್ರ್ಯಾಪ್ ಯತ್ನ: ಕಾರ್ತಿಕ್ ಹೆಂಡತಿಯ ಮೇಲೆ ಹಲ್ಲೆ ಆದಾಗ ನಾನು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದೆ. ಅದಕ್ಕೆ ನ್ಯಾಯ ಸಿಗಲಿಲ್ಲ. ಎಸ್ ಐಟಿ (SIT) ರಚನೆ ಆದ ಮೇಲೆ ಪೆನ್ ಡ್ರೈವ್‍ಗಳ ಸುರಿಮಳೆ ಆಯ್ತು. ಇದೆಲ್ಲಾ ಆದ ಮೇಲೆ ನನ್ನ ಮೇಲೆ ಹನಿಟ್ರ್ಯಾಪ್ ಮಾಡೋ ಯತ್ನ ಮಾಡಿದರು. ಕಾರ್ತಿಕ್ ಹೆಂಡತಿ ಮೇಲೆ ಹಲ್ಲೆ ಆದಾಗ ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದೆ. ಆದರೆ ನ್ಯಾಯ ಸಿಗಲಿಲ್ಲ ಎಂದು ತಿಳಿಸಿದರು.

    ನನ್ನ ಎರಡು ಬಾರಿ ವಿಚಾರಣೆ: ಯಾವುದೇ ವ್ಯಕ್ತಿ ವಿರುದ್ಧ ನಾನು ಹೋರಾಟ ಮಾಡುತ್ತಿಲ್ಲ. ಪಕ್ಷದ ಪ್ರತಿನಿಧಿ ಆಗಿ ಕೆಲಸ ಮಾಡುತ್ತಿಲ್ಲ. ಸಂದರ್ಭ ಬಂದಾಗ ಪಕ್ಷದ ಹೆಸರು ಕೂಡ ಹೇಳಬೇಕಾಗುತ್ತದೆ ಹೇಳುತ್ತೇನೆ. ಚುನಾವಣೆ ದಿನ ಎಫ್‍ಐಆರ್ ಆಗಿದೆ. ಎಫ್‍ಐಆರ್ ಆದ ನಂತರ ಎಸ್‍ಐಟಿ ಮಾಡಿದರು. ಎಸ್ ಐಟಿ ಆದ ಬಳಿಕ ಲೈಂಗಿಕ ದೌರ್ಜನ್ಯ ಪ್ರಕರಣ ಆಯ್ತು. ಪೆನ್‍ಡ್ರೈವ್ ಹಂಚಿದವರ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ಎಸ್‍ಐಟಿ ಗೆ ಬಂದಿಲ್ಲ. ಹೀಗಿರುವಾಗ ನನ್ನ ಕರೆಯುವ ಪ್ರಮೇಯವೇ ಇರಲಿಲ್ಲ. ನನ್ನ ಎರಡು ಬಾರಿ ವಿಚಾರಣೆ ಮಾಡಿದರು ಎಂದು ದೇವರಾಜೇಗೌಡ (Devaraje Gowda) ಹೇಳಿದರು. ಇದನ್ನೂ ಓದಿ: ಎಸ್‌ಐಟಿ ಮೊದಲು ದೇವರಾಜೇಗೌಡನನ್ನು ಎಳೆದುಕೊಂಡು ಹೋಗ್ಬೇಕು: ಶಿವರಾಮೇಗೌಡ

    ಈ ಹಿಂದೆ ಹೇಳಿಕೆ ಕೊಟ್ಟಿದ್ದ ಕಾರ್ತಿಕ್ ಈಗ ಉಲ್ಟಾ ಹೊಡೆಯುತ್ತಿದ್ದಾನೆ. ನನಗೆ ಪೆನ್ ಡ್ರೈವ್ ಕೊಟ್ಟೆ ಇಲ್ಲ ಅಂದಿದ್ದಾನೆ. ಕಾರ್ತಿಕ್ ಎಸ್ ಐಟಿ ಮುಂದೆ ಬಂದರೂ ವಿಚಾರಣೆ ಮಾಡುವುದಿಲ್ಲ. ಕಾರ್ತಿಕ್ ಹೇಳಿಕೆ ಪಡೆದು ಕಳುಹಿಸಿದ್ದಾರೆ. ಆರೋಪಿಯನ್ನು ಹೇಗೆ ಬಿಟ್ಟು ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದರು.

    ರೇವಣ್ಣ ನಿರೀಕ್ಷಣಾ ಜಾಮೀನು ವಜಾ ಆದ ಕೆಲವೇ ಕ್ಷಣದಲ್ಲಿ ಬಂಧನ ಮಾಡ್ತೀರಿ. ಯಾಕೆ ಕಾರ್ತಿಕ್ ನ ಬಂಧನ ಮಾಡದೇ ಕಳುಹಿಸಿದ್ರಿ. ಇವತ್ತು ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆಗಿದೆ. ಅವನಿಗೆ ಖರ್ಚಿಗೆ ಕಾಸು ಇಲ್ಲ ಬಂದಿದ್ದ ಎಂದು ನನ್ನ ಮೇಲೆ ಶಿವರಾಮೇಗೌಡ ಆರೋಪ ಮಾಡಿದ್ರು. ನಾನು ಎರಡು ಮೊಬೈಲ್ ಕೊಡ್ತೀನಿ. ಅವರೇ ಫೋನ್ ಮಾಡಿದ್ದಾ…? ನಾನಾ ಮಾಡಿದ್ದಾ ಚೆಕ್ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರವನ್ನು ಹೇಗೆ ಕಟ್ಟಿ ಹಾಕಬೇಕು ಅಂತ ಪ್ಲಾನ್ ಮಾಡಿದ್ರು ಎಂದು ಆರೋಪಿಸಿದರು.

    ನಾಳೆ ಎಸ್ ಐಟಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕ್ತಾ ಇದ್ದೀನಿ. ಹೈಕೋರ್ಟ್ ಅಲ್ಲಿ ಅರ್ಜಿ ಹಾಕ್ತಾ ಇದ್ದೀನಿ. ನಾನು ಕೊಟ್ಟ ಹೇಳಿಕೆ ಡಿಲೀಟ್ ಮಾಡಿ ಅಂತ ಒತ್ತಾಯ ಮಾಡಿದ್ದಾರೆ. ಹೀಗಾಗಿ ಕೋರ್ಟ್ ಮೊರೆ ಹೋಗುವುದಾಗಿ ದೇವರಾಜೇಗೌಡ ತಿಳಿಸಿದರು.

    ನಾಲ್ಕು ಜನ ಸಚಿವರು ರೂವಾರಿಗಳು: ಈಗಾಗಲೇ ಎರಡು ಪ್ರಕರಣ ದಾಖಲಾಗಿದೆ. ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಲ್ಕು ಜನ ಸಚಿವರು ಈ ಪಾತ್ರ ರೂವಾರಿಗಳು. ಕಾರ್ತಿಕ್‍ನ ಎಲ್ಲಿ ಮುಚ್ಚಿಟ್ಟಿದ್ದಾರೆ ಗೊತ್ತು. ಕಾರ್ತಿಕ್ ಗೂ ನನಗೂ ಸಂಬಂಧ ಇಲ್ಲ ಎಂದು ಶ್ರೇಯಸ್ ಪಟೇಲ್ ಹೇಳಿದ್ದಾರೆ ಎಂದು ಹೇಳಿ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಿದರು. ಈ ತಂಡದಲ್ಲಿ ಪುಟ್ಟಿ, ಕಾರ್ತಿಕ್, ಶ್ರೇಯಸ್ ಇವರೇ ಮೂರು ಜನ ಪ್ರಮುಖರು ಎಂದು ಆರೋಪ ಮಾಡಿದರು.

  • ದೇವರಾಜೇಗೌಡಗೆ ತಾಕತ್ತಿದ್ದರೆ ಆಡಿಯೋ ಬಿಡುಗಡೆ ಮಾಡಲಿ: ಶಿವರಾಮೇಗೌಡ

    ದೇವರಾಜೇಗೌಡಗೆ ತಾಕತ್ತಿದ್ದರೆ ಆಡಿಯೋ ಬಿಡುಗಡೆ ಮಾಡಲಿ: ಶಿವರಾಮೇಗೌಡ

    ಬೆಂಗಳೂರು: ಯಾವುದೆ ಆಮೀಷ ಒಡ್ಡಿಲ್ಲ‌. ಅವನಿಗೆ ತಾಕತ್ತಿದ್ದರೆ ಗಂಡಸು ಆಗಿದ್ದರೆ ಅವನು ಆಡಿಯೋ ಬಿಡುಗಡೆ ಮಾಡಲಿ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡಗೆ ಮಾಜಿ ಸಂಸದ ಎಲ್.‌ ಆರ್‌ ಶಿವರಾಮೇ ಗೌಡ (L.R Shivarame Gowda) ಸವಾಲೆಸೆದಿದ್ದಾರೆ.

    ದೇವರಾಜೇ ಗೌಡ (Devaraje Gowda) ತುರ್ತು ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆಗೈದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಎಸ್ ಐಟಿ ರಚನೆ ಆದ ದಿನ ದೇವರಾಜೇ ಗೌಡ ಬಂದು ನನ್ನ ಭೇಟಿ ಮಾಡಿದ. ಡಿ.ಕೆ ಅವರನ್ನ ಭೇಟಿ‌ ಮಾಡಿಸಿ ಅಂದ. ನಾನು ಡಿಕೆಯವರಿಗೆ ಹೇಳಿದಾಗ ಅವನು ಭೇಟಿ‌ ಮಾಡೋದು ಬೇಡ ಅಂದ್ರು‌. ಆಗ ಫೋನಲ್ಲಾದರು ಮಾತಾಡಿ ಅಂತ ನಾನೇ ಫೋನ್ ಮಾಡಿ ಕೊಟ್ಟೆ ಎರಡು ನಿಮಿಷ ಮಾತಾಡಿದರು‌ ಎಂದರು.

    ಅವನೇ ನನ್ನ ಹತ್ತಿರ ಹೇಳಿದ ಬಿಜೆಪಿ ನಾಯಕರ ಹತ್ತಿರ ಮಾತನಾಡಿದ್ದೇನೆ. ಅವರು ವೀಡಿಯೋ ಬಿಡಿ ಎಂದಿದ್ದಾರೆ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೆ ಅವರು ಬಿಡಿ ಅಂದ್ರು ಅದಕ್ಕೆ ಬಿಟ್ಟೆ ಅಂತ ಹೇಳಿದ್ದಾನೆ. ಸಿಬಿಐ ಬಿಟ್ಟು ಯಾವ ತನಿಖೆ ಬೇಕಾದರು ಮಾಡಲಿ. ಯಾವುದೇ ಭಯವಿಲ್ಲ. ಇದರ ಹಿಂದೆ ನನ್ನ ಪಾತ್ರವಾಗಲಿ ಡಿಕೆಶಿ ಪಾತ್ರವಾಗಲಿ ಇಲ್ಲಾ ಎಂದು ಮಾಜಿ ಸಂಸದರು ಸ್ಪಷ್ಟಪಡಿಸಿದರು.

    ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾನೆ ಅಂತ ನನ್ನ ಅಭಿಪ್ರಾಯ. ನನ್ನ ಹತ್ತಿರ ನಿನ್ನೆ ಬಂದು ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದ ಊಟ ಮಾಡಿಕೊಂಡು ಹೋಗು ಅಂತ ಊಟ ಮಾಡಿಸಿ ಕಳುಹಿಸಿದೆ ಎಂದರು. ಇದನ್ನೂ ಓದಿ: ಬೆದರಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ- ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು

  • ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ದೇವರಾಜೇಗೌಡ ನೇರ ಆರೋಪ

    ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ದೇವರಾಜೇಗೌಡ ನೇರ ಆರೋಪ

    – ನನಗೆ ಕ್ಯಾಬಿನೆಟ್‌ ಸ್ಥಾನ ಕೊಡುವ ಆಫರ್‌
    – ಪೆನ್‌ಡ್ರೈವ್‌ ಪ್ರಕರಣ ಸಂಬಂಧ ಆಡಿಯೋ ಬಿಡುಗಡೆ‌
    – ಮೋದಿ ಜೊತೆ ಕೈ ಜೋಡಿಸಿದ್ದಕ್ಕೆ ಟಾರ್ಗೆಟ್

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಪೆನ್‍ಡ್ರೈವ್ ಪ್ರಕರಣದಲ್ಲಿ (Prajwal Revanna) ಷಡ್ಯಂತ್ರ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಕೀಲ ದೇವರಾಜೇಗೌಡ (Lawyer Devaraje Gowda) ನೇರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆಯನ್ನ ಗೌಪ್ಯವಾಗಿ ಕರೆದಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸಲ್ಲಿ ಯಾರನ್ನ ಆರೋಪಿಗಳಾಗಿ ಮಾಡಬೇಕು, ಬಿಡಬೇಕು ಅಂತ ಚರ್ಚೆಯಾಗಿದೆ. ನನ್ನ ಜೀವನದ ಹೋರಾಟ ಇದ್ದದ್ದು ಎಚ್.ಡಿ ರೇವಣ್ಣ ವಿರುದ್ಧ ಆಗಿತ್ತು. ನನ್ನ ಹೋರಾಟದ ಪ್ರತಿಫಲ ನಿಜವಾದ ನ್ಯಾಯ ಸಿಕ್ಕಿದೆ ಅನ್ಕೊಂಡಿದ್ದೆ. ಇದನ್ನೇ ಅಸ್ತ್ರವಾಗಿ ಇಟ್ಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ಅಸ್ತ್ರವಾಗಿ ಇಟ್ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಎಸ್ ಐಟಿ (SIT) ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನ 2 ಬಾರಿ ಭೇಟಿಯಾಗಿದ್ದೀನಿ. ಸಾಕ್ಷಿಯನ್ನಾಗಿ ನನ್ನ ಹೇಳಿಕೆ ಪಡೆದಿದ್ದಾರೆ. ಕೆಲವು ಕಹಿ ಸತ್ಯ ಹೇಳಬೇಕಿದೆ. ತಡೆಯಾಜ್ಞೆ ಇದ್ರೂ ಸಹ ಅಶ್ಲೀಲ ವೀಡಿಯೋ ಪೆನ್ ಡ್ರೈವ್ ಹಂಚಿರುವ ಬಗ್ಗೆ ಹಾಸನದಲ್ಲಿ ಎಫ್ ಐಆರ್ ಆಗಿದೆ. ಅಶ್ಲೀಲ ವೀಡಿಯೋ ಆಗಿದ್ರೂ ಹೆಣ್ಣು ಮಕ್ಕಳ ಮುಖವನ್ನು ಮರೆ ಮಾಚಿಲ್ಲ ಎಂದು ಹೇಳಿದರು.

    ಕಾರ್ತಿಕ್ ನನ್ನ ಕಚೇರಿಗೆ ಬಂದು ನನ್ನ ಕೈಗೆ ಈ ಕಾಪಿ ಕೊಡುತ್ತಾನೆ. ಇದರ ಜೊತೆಗೆ ಒಂದು ಪೆನ್ ಡ್ರೈವ್ ಕೊಡ್ತಾನೆ. 88ನೇ ಪ್ರತಿವಾದಿಯಾಗಿ ಇದರಲ್ಲಿ ಕಾರ್ತಿಕ್ ಇದ್ದಾನೆ. ನಾನು ವಿಚಾರಣೆಗೆ ಹೋದಾಗ ನನ್ನ ಹೇಳಿಕೆ ಪಡೆದಿದ್ದಾರೆ, ದಾಖಲೆ ಕೊಟ್ಟಿದ್ದೇನೆ. ನಾನು ಹೇಳಿಕೆಯಲ್ಲಿ ಬಹಳ ಪ್ರಮುಖ ಅಂಶವನ್ನ ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಬಂದಿರುವ ವೀಡಿಯೋ ಇದು ಎಂದು ಹೇಳುತ್ತಾ ದೇವರಾಜೇಗೌಡ ಅವರು ತಮ್ಮ ಲ್ಯಾಪ್ ಟಾಪ್ ನಲ್ಲಿ ಕಾರ್ತಿಕ್ ಮನೆಗೆ ಬಂದಿರುವ ವೀಡಿಯೊ ಪ್ರದರ್ಶಿಸಿದರು.

    ಕ್ಯಾಬಿನೆಟ್ ಪೋಸ್ಟ್ ಆಫರ್: ಇದಕ್ಕೆಲ್ಲಾ ಕಾರಣ ಸರ್ಕಾರದ ಮಹಾನ್ ನಾಯಕ ಎಂದು ಕಾರ್ತಿಕ್ ವೀಡಿಯೋದಲ್ಲಿ ಹೇಳಿದ್ದಾನೆ. ಪುಟ್ಟರಾಜು @ ಪುಟ್ಟಿ ಅನ್ನೋರ ಮೂಲಕ ಪೆನ್ ಡ್ರೈವ್ ಬೆಂಗಳೂರಿಗೆ ಬಂತು. ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಸೀನಿಯರ್ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದರ ಕಥಾನಾಯಕರೇ ಕಾಂಗ್ರೆಸ್ ಪಕ್ಷ, ಡಿಸಿಎಂ ಡಿಕೆಶಿ (DK Shivakumar), ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಮತ್ತೋರ್ವ ಮಧ್ಯವರ್ತಿ. ದೇವರಾಜೇಗೌಡನನ್ನ ಆರೋಪಿ ಮಾಡ್ಬೇಕು ಕೇಸ್ ಮುಗಿಸಬೇಕು ಅನ್ನೋದು ಅವರ ಅಜೆಂಡಾ. ನನಗೆ ಕ್ಯಾಬಿನೆಟ್ ಪೋಸ್ಟ್ ಕೊಡುವ ಆಫರ್ ಮಾಡಿದ್ರು. ಪೆನ್ ಡ್ರೈವ್ ವಿಚಾರವಾಗಿ ಹಾಸನ ಕಾಂಗ್ರೆಸ್ ಅಭ್ಯರ್ಥಿಗೆ ಪೆನ್‍ಡ್ರೈವ್ ಹೇಗೆಲ್ಲಾ ತಲುಪಿತ್ತು ಎಂದು ಪ್ರಶ್ನಿಸಿದರು.

    ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ, ಎಲ್ ಆರ್ ಶಿವರಾಮೇಗೌಡ (LR Shivarame Gowda) ಮೊದಲು ದೇವರಾಜೇಗೌಡ ಜೊತೆ ಮಾತನಾಡಿ ಆ ಬಳಿಕ ಡಿಕೆಶಿಗೆ ಫೋನ್ ಕೊಟ್ಟರು. ಡಿಕೆ ಸಾಹೇಬ್ರಿಗೆ ಕೊಡ್ತೀನಿ ಏನ್ ನಡೀತು ಅಂತಾ ಹೇಳು. ಡಿಕೆಶಿ ಫೋನ್ ನಲ್ಲಿ ನಮಸ್ಕಾರ ದೇವರಾಜ್ ಎಂದು ಹೇಳುವುದು ಕೇಳಿಸುತ್ತದೆ. ಪಾತ್ರಧಾರಿ ಯಾರು ಅಂತಾ ಗೊತ್ತಾಯ್ತ, ಎಸ್‍ಐಟಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದರು.

    ಶಿವರಾಮೇ ಗೌಡ ಮಧ್ಯವರ್ತಿ: ಎಸ್ ಐಟಿ ಎಸ್‍ಪಿ ಒಬ್ಬರು ಡಿಕೆಶಿ ಹೆಸರು ವಾಪಸ್ ತೆಗೆಯಿರಿ ಅಂದ್ರು. ಎಲ್ ಆರ್ ಶಿವರಾಮೇಗೌಡ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಬೇಡ. ಡಿಕೆಶಿ ಸಿದ್ದರಾಮಯ್ಯ ಸಿಲುಕಿಸಬೇಡ ಅಂದ್ರು. ನನ್ನ ರಿಕ್ವೆಸ್ಟ್ ಕೇಳು ಡಿಕೆಗೆ ಸಿಎಂಗೆ ಏನು ತೊಂದ್ರೆ ಕೊಡೋಕೆ ಹೋಗಬೇಕು. ಡ್ರೈವರ್ ನ ನಾವೇ ಕಳುಹಿಸಿದ್ದೀವಿ ಅಂತಾ ಎಲ್ ಆರ್ ಶಿವರಾಮೇಗೌಡ ಮಾತಾಡಿರುವ ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ, ಎಲ್ ಆರ್ ಶಿವರಾಮೇಗೌಡ ಮಧ್ಯವರ್ತಿಯಾಗಿ 10ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದ್ದಾರೆ. ಪೆನ್ ಡ್ರೈವ್ ಹಂಚಿರುವ ವ್ಯಕ್ತಿಗಳನ್ನ ಪತ್ತೆ ಮಾಡಲೇ ಇಲ್ಲ ಇವರು. ಅವರ ಲೊಕೇಷನ್, ಫೋನ್ ನಂಬರ್ ಕೊಟ್ಟರೂ ಪತ್ತೆ ಮಾಡಲೇ ಇಲ್ಲ. ಹಾಸನದಲ್ಲಿ ದಾಖಲಾಗಿರುವ ಎಫ್ ಐ ಆರ್ ಕೈ ಬಿಟ್ರು. ಇದೆಲ್ಲದರ ಸೂತ್ರಧಾರ ರಾಜ್ಯ ಸರ್ಕಾರ ಎಂದು ದೇವರಾಜೇಗೌಡ ನೇರವಾಗಿ ಆರೋಪ ಮಾಡಿದರು.

    ನರೇಂದ್ರ ಮೋದಿಯೇ ಟಾರ್ಗೆಟ್:‌ ನಿನ್ನೆ ಸಂಜೆವರೆಗೂ ನನ್ನ ಜೊತೆ ಸಂಧಾನ ಮಾಡಿದ್ರು. ನಾನು ಒಪ್ಪದೇ ಹೋದಾಗ ನಿನ್ನೆ ಹಿರಿಯ ಅಧಿಕಾರಿಗಳ ಮೀಟಿಂಗ್ ಕರೆದಿದ್ದಾರೆ. ಮೂರು ದಿನದ ಹಿಂದೆ ರಾತ್ರಿ 12 .48 ಗಂಟೆಗೆ ಡಿಕೆಶಿ ಫೋನ್ ಮಾಡಿದ್ರು. ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿರೋದ್ರಿಂದ ಮೋದಿಯವರನ್ನ ಟಾರ್ಗೆಟ್ ಮಾಡಿ ಇಷ್ಟೆಲ್ಲ ಮಾಡಿ ನನ್ನನ್ನ ಜೊತೆ ಕರೆದ್ರು. ಅಲಯನ್ಸ್ ಮಾಡಿಕೊಂಡಿರೋದಕ್ಕೆ ಬಿಜೆಪಿ ಹಣಿಯಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

    ಎಸ್‍ಐಟಿ ಸರ್ಕಾರದ ಪರವಾಗಿ ಕೆಲಸ ಮಾಡ್ತಿದೆ. ಅಧಿಕಾರಿಗಳ ಮೊಬೈಲ್‍ಗೆ ನಿತ್ಯ ಹತ್ತಾರು ಕರೆಗಳು ಬರ್ತಿವೆ. ಸಿಎಂ ಡಿಸಿಎಂ ಮಿನಿಸ್ಟರ್ ಗಳು ಫೋನ್ ಮಾಡ್ತಿದ್ದಾರೆ. ಇವರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ಮುಖ್ಯಮಂತ್ರಿಗಳೇ ಕೇಸನ್ನ ಸಿಬಿಐಗೆ ಕೊಡಿ. ಇಲ್ಲವಾದಲ್ಲಿ ನಾವೇ ವಕೀಲರು ಹೋರಾಟ ಮಾಡಿ ಸಿಬಿಐ ಗೆ ಕೊಡಿಸ್ತೀವಿ. ಮೋದಿ-ಕುಮಾರಸ್ವಾಮಿ ಕೈ ಜೋಡಿಸಿರುವುದೇ ಇವರ ಟಾರ್ಗೆಟ್ ಎಂದು ಕಿಡಿಕಾರಿದರು.

  • ಪ್ರಜ್ವಲ್‍ಗೆ ಟಿಕೆಟ್ ಕೊಡಬೇಡಿ ಅಂತಾ ಮೊದಲೇ ಹೇಳಿದ್ದೆ- ದೇವರಾಜೇ ಗೌಡ ಸ್ಫೋಟಕ ಹೇಳಿಕೆ

    ಪ್ರಜ್ವಲ್‍ಗೆ ಟಿಕೆಟ್ ಕೊಡಬೇಡಿ ಅಂತಾ ಮೊದಲೇ ಹೇಳಿದ್ದೆ- ದೇವರಾಜೇ ಗೌಡ ಸ್ಫೋಟಕ ಹೇಳಿಕೆ

    ಬೆಂಗಳೂರು: ಪ್ರಜ್ವಲ್ ರೇವಣ್ಣಗೆ (Prajwal Revanna) ಟಿಕೆಟ್ ಕೊಡಬೇಡಿ ಅಂತ ಮೊದಲೇ ಹೇಳಿದ್ದೆ. ಅವರಿಂದ ಹೆಣ್ಣು ಮಕ್ಕಳ ಶೋಷಣೆ ಆಗಿದೆ. ಅದನ್ನ ನೋಡಿದ್ದೀನಿ. ಮುಂದೊಂದು ದಿನ ಸಮಸ್ಯೆಯಲ್ಲಿ ಸಿಲುಕಿ ಮುಜುಗರಕ್ಕೆ ಸಿಲುಕುತ್ತೇವೆ ಎಂದಿದ್ದೆ ಅಂತಾ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇ ಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಡಿ ಅಂತ ಪತ್ರ ಬರೆದಿದ್ದೆ. ನಮ್ಮ ನಾಯಕರು ಅದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಅವರ ಗಮನಕ್ಕೆ ತರಲು ಸಾಕಷ್ಟು ಪ್ರಯತ್ನಗಳನ್ನು ನಾನು ಮಾಡಿದ್ದೇನೆ. ಇ-ಮೇಲ್ ಮೂಲಕ ಅವರಿಗೆ ಮಾಹಿತಿ ನೀಡಲು ಪ್ರಯತ್ನವನ್ನು ಮಾಡಿದ್ದೀನಿ ಎಂದರು.

    ವಿಜಯೇಂದ್ರ ಅವರಿಗೂ ವಾಟ್ಸಾಪ್ ಮೂಲಕ ಮಾಹಿತಿ ನೀಡಿದ್ದೆ. ಅವರು ಬ್ಯುಸಿಯಲ್ಲಿ ಇದನ್ನ ಗಮನಿಸಿದ್ರಾ..? ಇಲ್ಲವಾ..? ಗೊತ್ತಿಲ್ಲ. ಅಷ್ಟರೊಳಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಬಂದು ಟಿಕೆಟ್ ನೀಡಿದ್ರು. ಎಸ್‍ಐಟಿ ತನಿಖೆ ಮಾಡೋವಾಗ ಪೆನ್ ಡ್ರೈವ್ ಎಲ್ಲಿಂದ ಬಂತು. ಇದನ್ನು ಯಾರು ಬಿಸಾಡಿದ್ರು..? ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ- 32 GB, 8 GB ಪೆನ್‌ಡ್ರೈವ್‍ಗಳನ್ನು ವಶಕ್ಕೆ ಪಡೆದ SIT

    ನನ್ನ ಬಳಿಯೂ ವೀಡಿಯೋಗಳು ಇದ್ದಾವೆ. ಅದನ್ನು ವೈರಲ್ ಮಾಡಬೇಕು ಅಂದಿದ್ರೆ ಯಾವಾಗಲೋ ಮಾಡಬಹುದಿತ್ತು. ಅಥವಾ ಎಲೆಕ್ಷನ್ ಪಿಟಿಷನ್ ಟೈಂ ಅಲ್ಲಿ ಕೋರ್ಟ್ ಗಮನಕ್ಕೆ ತರಬಹುದಿತ್ತು. ಈ ವೀಡಿಯೋ ಇರೋದ್ರಿಂದ ಪ್ರಜ್ವಲ್ ಗೆ ಟಿಕೆಟ್ ಕೊಡಬೇಡಿ ಅಂತ ವಿರೋಧಿಸಿದ್ದೆ. ರಾಜ್ಯ, ರಾಷ್ಟ್ರದ ಬಿಜೆಪಿ ನಾಯಕರಿಗೂ ಮಾಹಿತಿಯನ್ನು ನೀಡಿದ್ದೆ. ನಾನೇ ವೀಡಿಯೋ ರಿಲೀಸ್ ಮಾಡಬೇಕು ಅಂದಿದ್ರೆ ಟಿಕೆಟ್ ನೀಡುವ ಮೊದಲೇ ಲೀಕ್ ಮಾಡಬಹುದಿತ್ತು. ಟಿಕೆಟ್ ಅನ್ನು ಅವಾಗಲೇ ತಪ್ಪಿಸೋದು ಸುಲಭ ಇತ್ತು. ಚುನಾವಣೆ ಒಂದು ವಾರ ಇದೆ ಅಂದಾಗ ಹೀಗೆ ಮಾಡಿದ್ದು ತಪ್ಪು. ಎಸ್‍ಐಟಿ ಅಲ್ಲ ಸಿಬಿಐಯಿಂದ ಈ ಪ್ರಕರಣದ ತನಿಖೆ ಆಗಬೇಕು ಎಂದು ದೇವರಾಜೇ ಗೌಡ ಆಗ್ರಹಿಸಿದರು.