Tag: ದೇವರಾಜೇಗೌಡ

  • ದೇವರಾಜೇಗೌಡ, ಪ್ರೀತಂ ಗೌಡ ಆಪ್ತರ ಮನೆ ಸೇರಿದಂತೆ ಹಾಸನದ 6 ಕಡೆ ಎಸ್‌ಐಟಿ ದಾಳಿ

    ದೇವರಾಜೇಗೌಡ, ಪ್ರೀತಂ ಗೌಡ ಆಪ್ತರ ಮನೆ ಸೇರಿದಂತೆ ಹಾಸನದ 6 ಕಡೆ ಎಸ್‌ಐಟಿ ದಾಳಿ

    ಹಾಸನ/ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna) ವಿಡಿಯೋವನ್ನು ಹಂಚಿಕೆ ಮಾಡಿದ ಪ್ರಕರಣ ಸಂಬಂಧ ಹಾಸನದ ವಿವಿಧೆಡೆ ಇಂದು ವಿಶೇಷ ತನಿಖಾ ತಂಡ (SIT) ದಾಳಿ ನಡೆಸಿದೆ.

    ದೇವರಾಜೇಗೌಡ (Devarajegowda) ನಿವಾಸ, ಕಚೇರಿ, ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಆಪ್ತ ಶರತ್ ಒಡೆತನದ ಬಾರ್ ಮತ್ತು ನಿವಾಸ, ಕಿರಣ್ ಒಡೆತನದ ಹೋಟೆಲ್, ನಿವಾಸ ಮತ್ತು ಪುನೀತ್ ನಿವಾಸ ಸೇರಿ ಒಟ್ಟು ಆರು ಕಡೆ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಇದನ್ನೂ ಓದಿ: 3.02 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ – ಮೋದಿ ಬಳಿಯಿದೆ 52,920 ರೂ. ನಗದು

     

    ಪೆನ್‌ಡ್ರೈವ್‌ (Pen Drive) ಹಂಚಿಕೆ ಮಾಡಿದವರ ವಿರುದ್ಧ ದೂರು ದಾಖಲಿಸಲು ಹೊಳೆನರಸೀಪುರ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ಎಸ್‌ಐಟಿ ತನಿಖೆ ನಡೆಸುತ್ತಿದ್ದು ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದಿದೆ. ಇದನ್ನೂ ಓದಿ: ಪಿಒಕೆಯಲ್ಲಿ ಹಿಂಸಾಚಾರ, ಗುಂಡಿನ ದಾಳಿಗೆ ಮೂವರು ಬಲಿ – ಮದರಸಾದ ಒಳಗಡೆ ಟಿಯರ್‌ ಗ್ಯಾಸ್‌ ಸಿಡಿಸಿದ ಸೇನೆ

    ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಅರೆಸ್ಟ್ ಆಗಿರುವ ಲಿಖಿತ್‌ಗೌಡ, ಚೇತನ್ ಜಾಮೀನು ಅರ್ಜಿಯನ್ನು ಹಾಸನ ಕೋರ್ಟ್ ವಜಾ ಮಾಡಿದೆ.

    ಸಂತ್ರಸ್ತೆ ಕಿಡ್ನಾಪ್ ಕೇಸಲ್ಲಿ ಮತ್ತೋರ್ವ ಆರೋಪಿ ಹೊಸೂರು ಕೀರ್ತಿಯನ್ನು ಪೊಲೀಸರು ಬಂಧಿಸಿ 4 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೊಸೂರು ಕೀರ್ತಿ ವಿರುದ್ಧ ಸಂತ್ರಸ್ತೆಯನ್ನು ಅಪಹರಿಸಿ ಕರೆದೊಯ್ದ ಆರೋಪವಿದೆ.

    ಅರೆಸ್ಟ್ ಆಗಿರುವ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಪೊಲೀಸರು ಇಂದು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಇಂದು ನ್ಯಾಯಾಧೀಶರ ಮುಂದೆ ದೇವರಾಜೇಗೌಡ

    ಇಂದು ನ್ಯಾಯಾಧೀಶರ ಮುಂದೆ ದೇವರಾಜೇಗೌಡ

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವಕೀಲ ದೇವರಾಜೇಗೌಡರನ್ನು (G Devarajegowda) ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಪೊಲೀಸರು ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyuru) ತಾಲೂಕಿನ ಗುಯಿಲಾಳ್ ಟೋಲ್ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣದಲ್ಲಿ (Pendrive Case) ದೇವರಾಜೇಗೌಡ ಬ್ಯಾಗ್ ಸಮೇತ ಇನ್ನೋವಾ ಕಾರಿನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದರು. ಈ ವೇಳೆ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋವಾ ಕಾರಿನಲ್ಲೇ ದೇವರಾಜೇಗೌಡ ತಮ್ಮ ಮೊಬೈಲ್ ಅನ್ನು ಬಿಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅಬ್ಬರ; ಮನೆಗಳಿಗೆ ನುಗ್ಗಿದ ನೀರು

    ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದು, ಬಳಿಕ ಎಸ್‌ಐ ಅರುಣ್ ನೇತೃತ್ವದಲ್ಲಿ ಹಾಸನ ಪೊಲೀಸರು ದೇವರಾಜೇಗೌಡರನ್ನು ವಶಕ್ಕೆ ಪಡೆದು ಹೊಳೆನರಸೀಪುರಕ್ಕೆ ಕರೆದೊಯ್ದಿದ್ದಾರೆ. ಅರಕಲಗೂಡು, ಹಳ್ಳಿಮೈಸೂರು ಹಾಗೂ ಬಾಣಾವರ ಪಿಎಸ್‌ಐಗಳು ದೇವರಾಜೇಗೌಡರನ್ನು ಕರೆತಂದು ಹೊಳೆನರಸೀಪುರದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇರಿಸಿದ್ದಾರೆ. ವಿಚಾರಣೆ ಬಳಿಕ ಇಂದು ಸಂಜೆಯೊಳಗೆ ದೇವರಾಜೇಗೌಡರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅಬ್ಬರ; ಮನೆಗಳಿಗೆ ನುಗ್ಗಿದ ನೀರು

  • ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಕೇಸ್‍ಗೆ ಟ್ವಿಸ್ಟ್- ಮತ್ತೊಂದು ಆಡಿಯೋ ವೈರಲ್

    ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಕೇಸ್‍ಗೆ ಟ್ವಿಸ್ಟ್- ಮತ್ತೊಂದು ಆಡಿಯೋ ವೈರಲ್

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‍ಡ್ರೈವ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಬಿಜೆಪಿ ಮುಖಂಡ ದೇವರಾಜೇಗೌಡ ಮತ್ತು ಮಾಜಿ ಸಂಸದ ಎಲ್‍ಆರ್ ಶಿವರಾಮೇಗೌಡ (Shivarame Gowda) ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ.

    ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.

    ಆಡಿಯೋದಲ್ಲಿ ಏನಿದೆ..?:
    ದೇವರಾಜೇಗೌಡ: ನಮಗೆ ನೋಟಿಸ್ ಕೊಡ್ತಾರಾ ಅಣ್ಣ ಎಸ್‍ಐಟಿಯವರು
    ಶಿವರಾಮೇಗೌಡ: ಕೊಡ್ತಾರೆ…ಕೊಡ್ತಾರೆ…ಕೊಡ್ತಾರೆ…
    ದೇವರಾಜೆಗೌಡ: ಅಲ್ಲಿ ಏನು ಮಾತಾಡೋದು ಅಣ್ಣ ಬೇರೆ…?
    ಶಿವರಾಮೇಗೌಡ: ಎಸ್‍ಐಟಿ ಅವರು ನೋಟಿಸ್ ಕೊಟ್ಟಾಗಲು ಡಿಕೆ ಬಗ್ಗೆ ಚಕಾರ ಎತ್ತಬೇಡ….
    ದೇವರಾಜೆಗೌಡ: ಸರಿ ಸರಿ ಅಣ್ಣ….
    ಶಿವರಾಮೇಗೌಡ: ನಾನ್ ಇವತ್ತಿಂದ ಹೋರಾಟ ಮಾಡ್ತಿಲ್ಲ..
    ದೇವರಾಜೆಗೌಡ: ಹೌದಾ ಅಣ್ಣ
    ಶಿವರಾಮೇಗೌಡ: ಈ ಕೃತ್ಯಗಳೆಲ್ಲಾ ಕಡಿಮೆ ಮಾಡಬೇಕು.. ನಮ್ಮ ತಾಲೂಕು ಕ್ಲೀನ್ ಆಗಬೇಕು ಅಂತಾ ನಾನು ಬಹಳ ದಿವಸದಿಂದ ಹೋರಾಟ ಮಾಡ್ತಾ ಇದ್ದೀನಿ… ವೀಡಿಯೋ ಬಿಟ್ಟಿರೋದು ಫೇಸ್‍ಬುಕ್‍ನಲ್ಲಿ.. ನಾನು ಹೋರಾಟ ಮಾಡ್ತಾ ಇದ್ದೀನಿ… ಕೋರ್ಟ್‍ನಲ್ಲೂ ಅವರ ವಿರುದ್ದವಾಗಿ ಹೋರಾಟ ಮಾಡಿದ್ದೀನಿ.. ಇದು ಬಿಟ್ರೆ ಬೇರೆ ಚರ್ಚೆನೆ ಇಲ್ಲ ಅಂತಾ ಹೇಳು….
    ದೇವರಾಜೆಗೌಡ: ಸರಿ ಸರಿ ಅಣ್ಣ..

    ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಶಿವರಾಮೇ ಗೌಡ ಮಾತನಾಡಿದ್ದರು ಎನ್ನಲಾದ ಆಡಿಯವನ್ನು ದೇವರಾಜೇ ಗೌಡರೇ ರಿಲೀಸ್ ಮಾಡಿದ್ದರು. ಇದೀಗ ಮತ್ತೊಂದು ಆಡಿಯೋ ವೈರಲ್ ಆಗುವ ಮೂಲಕ ಪ್ರಕರನವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    ದೇವರಾಜೇ ಗೌಡ ಪೊಲೀಸ್‌ ವಶಕ್ಕೆ: ಇತ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ.

    ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡ, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. ಅಲ್ಲದೇ ಪ್ರಜ್ವಲ್ ಲೈಂಗಿಕ ಕಿರುಕುಳದ ವೀಡಿಯೋಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.

  • ಪೆನ್‌ಡ್ರೈವ್‌ ಕೇಸ್; ಕಾರ್ತಿಕ್, ದೇವರಾಜೇಗೌಡಗೆ ಎಸ್‌ಐಟಿ ನೋಟಿಸ್

    ಪೆನ್‌ಡ್ರೈವ್‌ ಕೇಸ್; ಕಾರ್ತಿಕ್, ದೇವರಾಜೇಗೌಡಗೆ ಎಸ್‌ಐಟಿ ನೋಟಿಸ್

    ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಹಾಗೂ ದೇವರಾಜೇಗೌಡಗೆ (Devaraje Gowda) ಎಸ್‌ಐಟಿ ತಂಡ ನೋಟಿಸ್ ನೀಡಿದೆ.

    ಪ್ರಕರಣ ಸಂಬಂಧ ಏ.23 ರಂದು ಹಾಸನ ಸೈಬರ್ ಪೊಲೀಸ್ ಠಾಣೆಗೆ ಪ್ರಜ್ವಲ್ ರೇವಣ್ಣ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ದೂರು ನೀಡಿದ್ದರು. ಅದನ್ನು ಆಧರಿಸಿ ಕಾರ್ತಿಕ್ ಮತ್ತು ದೇವರಾಜೇಗೌಡಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಇದು ರಾಜಕೀಯ ಪ್ರೇರಿತ ಕೇಸ್‌, ಪ್ರಾದೇಶಿಕ ಪಕ್ಷದ ಮೇಲೆ ದಾಳಿ – ಕೋರ್ಟ್‌ನಲ್ಲಿ ಇಂದು ವಾದ, ಪ್ರತಿವಾದ ಹೇಗಿತ್ತು?

    ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್‌ಗೌಡ ಹಾಗೂ ಚೇತನ್‌ಗೌಡ ವಿರುದ್ಧ ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸ್‌ಐಟಿ ಕೈಗೆತ್ತಿಕೊಂಡಿದೆ.

    ಪ್ರಕರಣ ಸಂಬಂಧ ಕಾರ್ತಿಕ್ ಹಾಗೂ ದೇವರಾಜೇಗೌಡಗೆ ನೋಟಿಸ್ ನೀಡಿದೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ತನಿಖೆ ನಂತರ ಪೆನ್‌ಡ್ರೈವ್‌ನ ಸತ್ಯಾಸತ್ಯತೆ ಬಯಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಡಿಕೆಶಿ V/s ಹೆಚ್‍ಡಿಕೆ ನಡುವೆ ಕಥಾ ನಾಯಕ ಕಾಳಗ

  • ಹೆಚ್‌ಡಿಕೆ, ದೇವರಾಜೇಗೌಡ ವಿರುದ್ಧ ಎಸ್‌ಐಟಿಗೆ ಕಾಂಗ್ರೆಸ್‌ ದೂರು

    ಹೆಚ್‌ಡಿಕೆ, ದೇವರಾಜೇಗೌಡ ವಿರುದ್ಧ ಎಸ್‌ಐಟಿಗೆ ಕಾಂಗ್ರೆಸ್‌ ದೂರು

    ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ವಕೀಲ ದೇವರಾಜೇಗೌಡ (Devarajegowda) ವಿರುದ್ಧ ವಿಶೇಷ ತನಿಖಾ ತಂಡಕ್ಕೆ (SIT) ಕಾಂಗ್ರೆಸ್‌ ದೂರು ನೀಡಿದೆ.

    ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್‌ (Prakash) ಅವರು ಮಾಧ್ಯಮಗಳ ಬಂದ ವರದಿಯನ್ನು ಆಧಾರಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಅವಿವಾಹಿತ ಅತಿಥಿ ಉಪನ್ಯಾಸಕಿ ನೇಣಿಗೆ ಶರಣು

     

    ದೂರಿನಲ್ಲಿ ಏನಿದೆ?
    ದೇವರಾಜೇಗೌಡ ಹಾಗೂ ಕುಮಾರಸ್ವಾಮಿ ಅವರು ಎಸ್‌ಐಟಿ ವಿರುದ್ಧ ಹೇಳಿಕೆ ನೀಡುವ ಮೂಲಕ ತನಿಖೆಯ ದಾರಿಯನ್ನು ತಪ್ಪಿಸಿ ಪರೋಕ್ಷವಾಗಿ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ.

    ಕುಮಾರಸ್ವಾಮಿ ಅವರಿಗೆ ಪ್ರಜ್ವಲ್ ರೇವಣ್ಣ ಅತ್ಯಾಚಾರದ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂತ್ರಸ್ತೆಯರು ಕೆಕೆ. ಗೆಸ್ಟ್ ಹೌಸ್ ನಲ್ಲಿ ಇದ್ದಾರೆಂದು ಹೇಳಿಕೆ ಕೊಡುವ ಮೂಲಕ ಸಂತ್ರಸ್ತೆ ಬಗ್ಗೆ ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ

    ದೇವರಾಜೇಗೌಡ ಮತ್ತು ಕುಮಾರಸ್ವಾಮಿ ಅವರು ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿಕೊಂಡಿರುವ ಆರೋಪಿ ವಿರುದ್ಧ ದೂರು ನೀಡದೇ ವಿಡಿಯೋ ಹಂಚಿರುವ ವ್ಯಕ್ತಿಗಳನ್ನು ಮಾತ್ರ ಗುರುತಿಸಿ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

     

  • ಎಸ್‌ಐಟಿ ಮೊದಲು ದೇವರಾಜೇಗೌಡನನ್ನು ಎಳೆದುಕೊಂಡು ಹೋಗ್ಬೇಕು: ಶಿವರಾಮೇಗೌಡ

    ಎಸ್‌ಐಟಿ ಮೊದಲು ದೇವರಾಜೇಗೌಡನನ್ನು ಎಳೆದುಕೊಂಡು ಹೋಗ್ಬೇಕು: ಶಿವರಾಮೇಗೌಡ

    ಬೆಂಗಳೂರು: ಬಿಜೆಪಿ ಮುಖಂಡ ದೇವರಾಜೇಗೌಡ (Devarajegowda) ಆಡಿಯೋ ಬಾಂಬ್‌ಗೆ (Audio Bomb) ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (L. R. Shivarame Gowda) ಸ್ಪಷ್ಟನೆ ನೀಡಿದ್ದಾರೆ. ಡಿಸಿಎಂ ಡಿಕೆಶಿವಕುಮಾರ್‌ (DK Shivakumar) ಹತ್ತಿರ ಮಾತಾಡಿಸಿದ್ದು ನಿಜ ಅಂತ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಶೇಷ ತನಿಖಾ ತಂಡ(SIT) ಮೊದಲು ದೇವರಾಜೇಗೌಡನ ಎಳೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

    ಖಾಸಗಿ ಹೋಟೆಲ್‌ಗೆ ದೇವರಾಜೇಗೌಡ (Devarajegowda) ಬಂದಿದ್ದ. ವಿಶೇಷ ತನಿಖಾ ತಂಡದ ತನಿಖೆ ತಡೆಯಾಜ್ಞೆ ತರುತ್ತಾರೆ ಎಂದು ಹೇಳಿದ್ದ. ಅದಕ್ಕಾಗಿ ಶಿವಕುಮಾರ್‌ರನ್ನು ಭೇಟಿ ಮಾಡಿಸಿ ಅಂತ ಕೇಳಿಕೊಂಡ. ಆಗ ಡಿಕೆಶಿಗೆ ಫೋನ್ ಮಾಡಿ ಭೇಟಿಗೆ ಕೇಳಿದೆ. ಡಿಕೆಶಿ ನಿರಾಕರಿಸಿದರು. ನಾನೇ ಒತ್ತಾಯ ಮಾಡಿ ನೀವೊಬ್ಬರು ಡಿಸಿಎಂ ಆಗಿ ಭೇಟಿ ಮಾಡಿಲ್ಲ ಅಂದರೆ ಹೇಗೆ ಅಂತ ಕೇಳಿದೆ. ಆಗ ಅಲ್ಲಿಂದಲೇ ದೇವರಾಜೇಗೌಡಗೆ ಕಾಲ್ ಮಾಡಿ ಡಿಕೆಶಿಗೆ ಫೋನ್ ಕೊಟ್ಟೆ. ನಿನ್ನ ಬಳಿ ಏನಿದೆ ಅದನ್ನು ಎಸ್‌ಐಟಿಗೆ ಕೊಡಿ ಅಂತ ಡಿಕೆಶಿ ಹೇಳಿದ್ರು ಅಷ್ಟೇ ಎಂದರು. ಇದನ್ನೂ ಓದಿ: ಕನ್ನಡ ಪ್ರಸಿದ್ಧ ಕಿರುತೆರೆ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್: ಜ್ಯೋತಿ ರೈ ಹೇಳಿದ್ದೇನು?

     

    ದೇವರಾಜೇಗೌಡಗೆ ಕ್ಯಾಬಿನೆಟ್ ದರ್ಜೆಯ ಆಮಿಷ ನೀಡಿಲ್ಲ. ಆತ ಗ್ರಾಮ ಪಂಚಾಯತ್‌ ಸದಸ್ಯ ಆಗಲು ಲಾಯಕ್ ಇಲ್ಲ. ಅವನ ಮೈ ಎಲ್ಲಾ ಕ್ಯಾಮೆರಾ ರೀತಿಯಲ್ಲಿ ಮಾಡಿಕೊಂಡಿದ್ದಾನೆ. ಪೆನ್‌ಡ್ರೈವ್‌ ಹೆಸರು ಹೇಳಿಕೊಂಡು ದೇವರಾಜೇಗೌಡ 80 ಕೋಟಿ ರೂ.ವರೆಗೆ ಆಸ್ತಿ ಮಾಡಿಕೊಂಡಿದ್ದಾನೆ. 2 ತಿಂಗಳ ಕಾಲ್ ಲಿಸ್ಟ್ ತೆಗೆಸಿದ್ರೆ ಎಲ್ಲ ಸತ್ಯ ಹೊರಬರಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ನಾನು ಡಾರ್ಕ್ ಸ್ಕಿನ್ ಭಾರತೀಯ- ಸ್ಯಾಮ್‌ ಪಿತ್ರೋಡಾಗೆ ಅಣ್ಣಾಮಲೈ ತಿರುಗೇಟು

    ಡ್ರೈವರ್‌ ಕಾರ್ತಿಕ್ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಆಸ್ತಿ ವಿಚಾರವಾಗಿ ಭೇಟಿ ಮಾಡಿದ್ದ. ಅದನ್ನು ಬಿಟ್ಟರೆ ಮತ್ತೆ ಭೇಟಿಯಾಗಿಲ್ಲ. ದೇವರಾಜೇಗೌಡ ಬಿಟ್ಟಿರುವ ಆಡಿಯೋ ಕಟ್ ಮಾಡಿ ಬಿಟ್ಟಿದ್ದಾನೆ. ಅದನ್ನು ಪೂರ್ತಿ ಬಿಡುಗಡೆ ಮಾಡಲಿ. ಆರೋಪ ಸಾಬೀತು ಮಾಡಿದ್ರೆ ರಾಜಕೀಯದಿಂದಲೇ ನಿವೃತ್ತಿ ಆಗುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಇದ್ದೇನೆ ಅಂತ ಶಿವರಾಮೇಗೌಡ ಸವಾಲ್ ಹಾಕಿದ್ದಾರೆ.

     

  • ಪೂರ್ತಿ ಆಡಿಯೋ ಬಿಡುಗಡೆ ಮಾಡಿದ್ರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತೆ: ದೇವರಾಜೇಗೌಡ

    ಪೂರ್ತಿ ಆಡಿಯೋ ಬಿಡುಗಡೆ ಮಾಡಿದ್ರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತೆ: ದೇವರಾಜೇಗೌಡ

    – ಶಿವರಾಮೇ ಗೌಡ ಬಗ್ಗೆ ವಕೀಲ ಹೇಳಿದ್ದೇನು..?

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವೀಡಿಯೊಗಳ ವೈರಲ್ ಹಿಂದೆ ಡಿಕೆಶಿಯದ್ದು ಪಾತ್ರ ಇಲ್ಲ ಅನ್ನೋದಾದ್ರೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಹಿರಂಗ ಚರ್ಚೆಗೆ ಬರಲಿ, ಅಲ್ಲೇ ಆಡಿಯೋ ಬಿಡುಗಡೆ ಮಾಡೋಣ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇ ಗೌಡ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪೂರ್ತಿ ಆಡಿಯೋ ಹೊರಗೆ ಬಿಟ್ರೆ ಹಳ್ಳಿ ಜನ ಕಾಲಲ್ಲಿರೋದನ್ನ ಕೈಗೆ ತಗೊತಾರೆ. ಹೀಗಾಗಿ ಸದ್ಯಕ್ಕೆ ಆಡಿಯೋ ಬಿಡುಗಡೆ ಮಾಡುವುದು ಬೇಡ. ಅದನ್ನು ಸಮಗ್ರ ತನಿಖೆಗೆ ಕೊಟ್ಟು ಆಮೇಲೆ ಬೇಕಿದ್ರೆ ಕೋರ್ಟ್ ಅಥವಾ ತನಿಖಾಧಿಕಾರಿಗಳು ಬಿಡುಗಡೆ ಮಾಡಲಿ. ಈಗ ಬಿಡುಗಡೆ ಮಾಡಿದ್ರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೂರ್ತಿ ಆಡಿಯೋ ಬಿಡುಗಡೆ ಮಾಡಿಲ್ಲ ಎಂದರು.

    ಕಾಂಗ್ರೆಸ್ ನಾಯಕರು ಮಾತನಾಡಿ ಅವರ ಕೊಳಕು ಮನಸ್ಥಿತಿಯನ್ನ ತೋರಿಸ್ತಿದ್ದಾರೆ. ಇವತ್ತು ನನ್ನ ಮೇಲೆ ಕಾಂಗ್ರೆಸ್ ನಾಯಕರು ಮುಗಿಬಿದ್ರೆ ಸತ್ಯ ಮರೆ ಮಾಚಲ್ಲ. ಡಿಸಿಎಂ ವಿರುದ್ಧ ಪೋಸ್ಟರ್ ಅಂಟಿಸಿರೋದು ಸರಿ ಇದೆ. ಚುನಾವಣೆ ಮುಗಿದ ಬಳಿಕ ನಮ್ಮದೇ ಹೋರಾಟ ಆರಂಭವಾಗುತ್ತೆ ಶೀಘ್ರದಲ್ಲೇ ಸರ್ಕಾರ ಪತನವಾಗುತ್ತೆ ಅಂತಾ ವಕೀಲ ದೇವರಾಜೇಗೌಡ ಗುಡುಗಿದ್ದಾರೆ.

    ಇದೇ ವೇಳೆ ಎಲ್.ಆರ್ ಶಿವರಾಮೇ ಗೌಡ (L R Shivarame Gowda) ಆರೋಪದ ಕುರಿತು ಪರತಿಕ್ರಿಯಿಸಿ, ವಯಸ್ಸಿನಲ್ಲಿ ದೊಡ್ಡವರಾಗಿರುವ ಅವರ ಮಾತಿನಲ್ಲಿ ಮಿತಿ ಇರಲಿ. ನನ್ನ ಒಟ್ಟು ಆಸ್ತಿಯ ಬಗ್ಗೆ ಶಿವರಾಮೇಗೌಡರು ಅಫಿಡವಿಟ್ ತೆಗೆದು ನೋಡಲಿ. ನಾನು ಭಿಕ್ಷುಕ ಅಲ್ಲ. ನಿಮ್ಮಂತೆ ಎಲ್ಲಿ ಬೇಕೋ ಅಲ್ಲಿ ಬ್ರೋಕರ್ ಕೆಲಸ ಮಾಡುತ್ತಾ ಜೀವನ ಮಾಡುತ್ತಿಲ್ಲ. ಅದರ ಅವಶ್ಯಕತೆನೂ ನನಗಿಲ್ಲ ಎಂದು ಕಿಡಿಕಾರಿದರು.

    ವೃತ್ತಿಯಲ್ಲಿ ವಕೀಲನಾಗಿದ್ದು, ಯುಕ್ತಿಯಲ್ಲಿಯೂ ನಿಮ್ಮನ್ನು ಸಾವಿರ ಪಟ್ಟು ಮೀರಿಸುವಂತಹ ಶಕ್ತಿ ನನಗೆ ಭಗವಂತ ಕೊಟ್ಟಿದ್ದಾನೆ. ಆ ಯುಕ್ತಿಯನ್ನು ನಾನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುತ್ತೇನೆ. ಬಕೆಟ್ ಹಿಡಿಯೋ ಕೆಲಸಕ್ಕೆ ಬಳಸಲ್ಲ. ಹೀಗಾಗಿ ನಿಮ್ಮ ನೈತಿಕತೆ ಹಾಗೂ ಗುಣ ಅಲ್ಲಿಯ ಜನಕ್ಕೆ ಗೊತ್ತಾಗಿದೆ. ನೀವು ಬಿಜೆಪಿ ಪಕ್ಷದ ಸದಸ್ಯನಾಗಿದ್ದುಕೊಂಡು ಕಾಂಗ್ರೆಸ್ ಜೊತೆ ಕೈ ಜೊಡಿಸುತ್ತಿದ್ದೀರಿ. ಬ್ಲ್ಯಾಕ್‍ಮೇಲ್ ಶಿವರಾಮೇಗೌಡ ಎಂಬುದು ನಿಮಗೆ ಅನ್ವಯಿಸುತ್ತದೆ ಎಂದು ವಾಗ್ದಾಳಿ ನಡೆಸಿ ಮಾಜಿ ಸಂಸದರಿಗೆ ಎಚ್ಚರಿಕೆ ಕೊಟ್ಟರು.

  • ಬೆದರಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ- ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು

    ಬೆದರಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ- ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು

    ಬೆಂಗಳೂರು: ಈ ಬ್ಲಾಕ್‌ಮೇಲ್‌ಗೆ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ತಿರುಗೇಟು ಕೊಟ್ಟಿದ್ದಾರೆ.

    ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪರಕರಣಕ್ಕೆ ಸಂಬಂಧಿಸಿದಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇ ಗೌಡ (Devaraje Gowda) ಅವರು ಡಿಕೆಶಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಇದೀಗ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

    ಪಾಪ ಬಿಜೆಪಿ-ಜೆಡಿಎಸ್ ಅವರು ಅವನನ್ನು ಬಳಸಿಕೊಂಡು ಏನ್ ಏನ್ ಬೇಕು ಮಾಡಿಸಿಕೊಳ್ತಾ ಇದ್ದಾರೆ. ಇದು ಹಾಸನ ಜಿಲ್ಲೆಗೆ ರಾಜ್ಯಕ್ಕೆ ಗೊತ್ತಿರೋ ವಿಚಾರವಾಗಿದೆ. ಅವರಿಗೆ ಅವಮಾನ ಆಗಿದೆ ಹಿಟ್ & ರನ್ ಮಾಡಿಕೊಂಡಿದ್ದಾರೆ. ಏನಾದ್ರು ಮಾಡಿ ಡೈವರ್ಟ್ ಮಾಡಬೇಕು ಮಾಡ್ತಾವ್ರೆ. ಅವನು ಮಾಡಲಿ ಅವನಿಗೆ ಹೇಳಿ ಕಳಿಸುತ್ತಿದ್ದವನು ಮಾಡಲಿ ಎಂದರು. ಇದನ್ನೂ ಓದಿ: ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ದೇವರಾಜೇಗೌಡ ನೇರ ಆರೋಪ

    ಅವನು ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಎಲ್ಲ ನನಗೆ ಗೊತ್ತು. ಈ ಬ್ಲಾಕ್ ಮೇಲ್ ಗೆ ಎಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ಅಮಿತ್‌ ಶಾ, ಕುಮಾರಸ್ವಾಮಿ ಒಪ್ಪಿಕೊಂಡ ಮೇಲೆ ಎಲ್ಲಾ ಯಾಕೆ ಹರ್ಕೊತಾರೆ. ಇದರ ಹಿಂದೆ ಯಾರಿದ್ದಾರೆ, ಹಿನ್ನೆಲೆ ಗಾಯಕರು ಯಾರಿದ್ದಾರೆ ಮ್ಯೂಜಿಕ್ ಯಾರು ಮಾಡ್ತಾರೆ ಅನ್ನೋದು ಗೊತ್ತು ಎಂದು ಡಿಕೆಶಿ ಗರಂ ಆದರು.

    ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಅಂದ ಮೇಲೆ ಮತ್ಯಾಕೆ ಇದೆಲ್ಲ. ಯಾರು ಮಾಡಿಸುತ್ತಿದ್ದಾರೋ ಅವರೇ ಧೈರ್ಯ ಇದ್ದರೆ ಹೊರಗಡೆ ಬಂದು ಹೇಳಲಿ. ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡುವುದು ಹಾಗಾಗಿ ಹೇಳ್ತಾರೆ. ನನ್ನ ಹಾಗೂ ಸಿಎಂ ಹೆಸರು ಹೇಳಲಿ ಬಿಡಿ ಎಂದು ಹೇಳಿದರು.

  • ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ – ಸೂರಜ್ ರೇವಣ್ಣರ ನಾಮಪತ್ರ ತಿರಸ್ಕರಿಸಿ

    ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ – ಸೂರಜ್ ರೇವಣ್ಣರ ನಾಮಪತ್ರ ತಿರಸ್ಕರಿಸಿ

    ಹಾಸನ: ಸೂರಜ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಸುಳ್ಳು ದಾಖಲೆಯನ್ನು ನೀಡಿದ್ದು, ಇವರ ಅರ್ಜಿಯನ್ನು ಈ ಕೂಡಲೇ ತಿರಸ್ಕರಿಸುವಂತೆ ವಕೀಲ ದೇವರಾಜೇಗೌಡ ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳ ಬಳಿ ನಾಮಪತ್ರದ ನಕಲನ್ನು ತೆಗೆದುಕೊಂಡು ಅದನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಸುಳ್ಳು ಅರ್ಜಿಯನ್ನು ನೀಡಿರುವುದು ಬಹಿರಂಗವಾಗಿದೆ. ಅವರು ನಾಮಪತ್ರ ಸಲ್ಲಿಸುವಾಗ ಗಂಭೀರ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ. ಮದುವೆಯ ಬಗ್ಗೆ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.

    ಮದುವೆ ವಿಷಯವಾಗಿ ಯಾವುದೇ ಸಂಬಂಧವಿಲ್ಲ ಎಂದು ಸೂರಜ್ ರೇವಣ್ಣ ಅವರು ಅರ್ಜಿಯಲ್ಲಿ ನಮೂದಿಸಿದ್ದಾರೆ. ಪ್ರಜಾಪ್ರಭುತ್ವ ಕಾಯ್ದೆ ಪ್ರಕಾರವಾಗಿ ಅರ್ಜಿಯಲ್ಲಿ ಮದುವೆಯ ವಿಷಯವನ್ನು ಉಲ್ಲೇಖಿಸಬೇಕಿತ್ತು. ಒಂದು ವೇಳೆ ಮದುವೆ ಆಗಿದ್ದರೆ ಆಗಿದೆ ಎಂದು, ಆಗಿಲ್ಲವಾಗಿದ್ದರೆ ಆಗಿಲ್ಲ ಎಂದು ಬರೆಯಬೇಕಿತ್ತು. ಅವರು ಮದುವೆ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪತ್ನಿಯ ಚರ, ಸ್ಥಿರ ಆಸ್ತಿಗಳ ಬಗ್ಗೆ ದಾಖಲಿಸಬೇಕಿತ್ತು ಎಂದರು.

    ಈ ವೇಳೆ ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಸುವಾಗ ತಮ್ಮ ಪತ್ನಿಯ ಕುರಿತು ಉಲ್ಲೇಖಿಸಿದ್ದಾರೆ ಎಂದು ನೆನಪಿಸಿಕೊಂಡರು.

    ಸೂರಜ್ ರೇವಣ್ಣ ಅವರು ಯಾವ ಕಾರಣಕ್ಕಾಗಿ ನಾಮಪತ್ರದಲ್ಲಿ ಮದುವೆಯ ಕುರಿತು ಉಲ್ಲೇಖಿಸಿಲ್ಲ ಎನ್ನುವುದರ ಕುರಿತು ಈಗಾಗಲೇ ಚುನಾವಣಾ ಅಧಿಕಾರಿಗಗಳಿಗೆ ಹಾಗೂ ಇಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದು, ಸೂರಜ್ ರೇವಣ್ಣ ಅವರ ನಾಮಪತ್ರ ತಿರಸ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

    ಒಂದು ವೇಳೆ ಅರ್ಜಿ ತಿರಸ್ಕರಿಸದಿದ್ದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ನಾಳೆ ಬೆಳಗ್ಗೆ ಹೈಕೋರ್ಟ್‍ನಲ್ಲಿ ರಿಟ್ ಫೈಲ್ ದಾಖಲಿಸಲಾಗುವುದು ಎಂದು ತಿಳಿಸಿದರು. ಸೂರಜ್ ರೇವಣ್ಣ ಅವರು ನೀಡಿರುವ ನಾಮಪತ್ರವನ್ನು ತಿರಸ್ಕರಿಸಬೇಕು. ಇಲ್ಲದಿದ್ದರೇ ತನಿಖೆ ಮುಗಿಯುವವರೆಗೆ ಚುನಾವಣೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.