Tag: ದೇವರಾಜೇಗೌಡ

  • ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

    ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

    ನವದೆಹಲಿ: ಕಳೆದ ಲೋಕಸಭಾ ಚುನಾವಣೆ (Lok Sabha Election) ಸಂದರ್ಭದಲ್ಲಿ ಹಾಸನದಲ್ಲಿ ಮತದಾರರಿಗೆ ಹಣ ಹಂಚಿಕೆ (Money Distribution) ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (G Devarajegowda) ಅವರು ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ವಿರುದ್ಧ ಆಡಿಯೋ ಕ್ಲಿಪ್, ದಾಖಲೆಗಳ ಸಮೇತ ದೂರು ನೀಡಲಾಗಿದೆ. ಅಲ್ಲದೇ ಹಾಸನ ಸಂಸದ ಶ್ರೇಯಸ್ ಪಟೇಲ್ ವಿರುದ್ಧವೂ ಆಯೋಗಕ್ಕೆ ದೂರು ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿದ್ದರೆ ಕ್ರಮ: ಈಶ್ವರ ಖಂಡ್ರೆ

    ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವರಾಜೇಗೌಡ, ಆಡಿಯೋ ಬೆನ್ನಲ್ಲೇ ನಾನು ಸಿಬಿಐಗೆ ದೂರು ನೀಡಿದ್ದೆ. ಚುನಾವಣಾ ಆಯೋಗಕ್ಕೆ ಸಿಬಿಐ ದೂರು ವರ್ಗಾಯಿಸಿದೆ. ಆಯೋಗ ಮಾಹಿತಿ ನೀಡುವಂತೆ ನನಗೆ ಇಮೇಲ್ ಬಂದಿತ್ತು. ಇಮೇಲ್ ಹಿನ್ನೆಲೆಯಲ್ಲಿ ನಾನು ಇಂದು ಖುದ್ದು ದೆಹಲಿಗೆ ಆಗಮಿಸಿ ದಾಖಲೆಗಳನ್ನು ನೀಡಿದ್ದೇನೆ. ಇದರಲ್ಲಿ ಸಿಎಂ, ಡಿಸಿಎಂ ಹೆಸರು ಉಲ್ಲೇಖವಾಗಿವೆ ಎಂದರು. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

    2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಸಂಸದ ಶ್ರೇಯಸ್ ಎಮ್ ಪಟೇಲ್ ಪರವಾಗಿ ಜಿಲ್ಲೆಯಲ್ಲಿ ಹಣ ಹಂಚಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯಸಭಾ ಸದಸ್ಯ ಎನ್ ಚಂದ್ರಶೇಖರ್ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ ಎಂದು ಶಾಸಕ ಶಿವಲಿಂಗೇಗೌಡ ಅವರು ಫೋನಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

  • ನೂರಾರು ಕೋಟಿ ಆಸ್ತಿಗೆ ಕಡಿಮೆ ಮೌಲ್ಯ ತೋರಿಸಿದ್ದಾರೆ, ಶ್ರೇಯಸ್ ಪಟೇಲ್ ಅನರ್ಹಗೊಳ್ಳಬೇಕು: ದೇವರಾಜೇಗೌಡ

    ನೂರಾರು ಕೋಟಿ ಆಸ್ತಿಗೆ ಕಡಿಮೆ ಮೌಲ್ಯ ತೋರಿಸಿದ್ದಾರೆ, ಶ್ರೇಯಸ್ ಪಟೇಲ್ ಅನರ್ಹಗೊಳ್ಳಬೇಕು: ದೇವರಾಜೇಗೌಡ

    ಹಾಸನ: ನೂರಾರು ಕೋಟಿ ಮೌಲ್ಯದ ಆಸ್ತಿಗೆ ಕಡಿಮೆ ಮೌಲ್ಯವನ್ನು ಅಫಿಡವಿಟ್‌ನಲ್ಲಿ ಉಲ್ಲೇಖ ಮಾಡಿರುವ ಸಂಸದ ಶ್ರೇಯಸ್ ಪಟೇಲ್ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ದೇವರಾಜೇಗೌಡ (Devaraje Gowda)  ಆಗ್ರಹಿಸಿದ್ದಾರೆ.

    ನೂತನ ಸಂಸದ ಶ್ರೇಯಸ್ ಪಟೇಲ್ (Shreyas Patel) ವಿರುದ್ಧ ಕೇಸ್ ಬಗ್ಗೆ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮಾತನಾಡಿದ ಅವರು, ಮಾಜಿ ಸಂಸದ ಪ್ರಜ್ವಲ್ ರೇವಣ್ಣರ (Prajwal Revanna) ಅಶ್ಲೀಲ ಬಿಡುಗಡೆ ಮಾಡಿ ಅದರ ಲಾಭವನ್ನು ಶ್ರೇಯಸ್ ಪಟೇಲ್ ಪಡೆದುಕೊಂಡಿದ್ದಾರೆ. ಅವರ ತಪ್ಪು ಮಾಹಿತಿ ಬಗ್ಗೆ ಕೋರ್ಟ್ ಜೊತೆಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ನನ್ನ ಮಗನಿಂದಲೇ ದೂರು ಕೊಡಿಸಿದ್ದೇನೆ. ಯಾವುದೇ ಆಮಿಷಕ್ಕೆ ಬಲಿಯಾಗಬಾರದು ಎಂದು ಹೀಗೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಶ್ರೇಯಸ್ ಸದಸ್ಯತ್ವ ಅನರ್ಹತೆ ಆಗಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಗಿರೀಶ್‌ನಿಂದ ದೂರವಾಗಿದ್ದಕ್ಕೆ ಹುಬ್ಬಳ್ಳಿ ಅಂಜಲಿ ಕೊಲೆ – ಚಾರ್ಜ್‌ಶೀಟ್‌ ಸಲ್ಲಿಸಿದ ಸಿಐಡಿ

    ಪ್ರಜ್ಚಲ್ ರೇವಣ್ಣ ಕೇಸ್‌ನಲ್ಲಿ ನಮಗೆ ಅನುಭವ ಇರಲಿಲ್ಲ. ಈಗ ನಾವು ಸೂಕ್ತ ರೀತಿಯಲ್ಲಿ ದಾಖಲೆ ನೀಡಿದ್ದೇವೆ. ಶ್ರೇಯಸ್ ಶೀಘ್ರವಾಗಿ ಅನರ್ಹತೆ ಆಗಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಖುದ್ದು ಹಾಜರಿಗೆ ಕೋರ್ಟ್ ಸೂಚನೆ ನೀಡಿದೆ. ಶ್ರೇಯಸ್ ಜನರ ಸಿಂಪತಿ ಗಳಿಸಲು ಬೆಲೆ ಬಾಳುವ ಆಸ್ತಿಗೆ ಕಡಿಮೆ ಮೌಲ್ಯ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೆಚ್ಚುವರಿಯಾಗಿ 21 ಲಕ್ಷ ರೂ. ಖರ್ಚು ಮಾಡಿರುವ ಬಗ್ಗೆ ದೂರು ನೀಡಲಾಗಿದೆ. ಅಂದಿನ ಚುನಾವಣಾ ಅಧಿಕಾರಿ ಜೊತೆ ಶಾಮೀಲಾಗಿ ಖರ್ಚು ವೆಚ್ಚವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಕುಸ್ತಿಪಟು ವಿನೇಶ್ ಫೋಗಟ್?

    ಆದಾಯ ತೆರಿಗೆ ಇಲಾಖೆಗೂ ಕೂಡ ತಪ್ಪು ಮಾಹಿತಿ ನೀಡಲಾಗಿದೆ. ತಪ್ಪು ಮಾಹಿತಿ ನೀಡುವುದು ಕೂಡ ಚುನಾವಣಾ ಅಕ್ರಮ ಆಗಲಿದೆ ಎಂದರು. ಇದನ್ನೂ ಓದಿ:KSRTC ಬಸ್ ದರ ಏರಿಕೆ – ಮತ್ತೆ ಸುಳಿವು ನೀಡಿದ ರಾಮಲಿಂಗಾ ರೆಡ್ಡಿ

    ಹಾಸನದ ಮಾಜಿ ಸಂಸದ ಪ್ರಜ್ಚಲ್ ರೇವಣ್ಣ ಸದಸ್ಯತ್ವ ಅನರ್ಹತೆಗೂ ಹೋರಾಟ ನಡೆಸಿ, ಹೈಕೋರ್ಟ್ನಲ್ಲಿ ರೇವಣ್ಣ ಸದಸ್ಯತ್ವ ಅನರ್ಹತೆಗೊಳಿಸುವಲ್ಲಿ ದೇವರಾಜೇಗೌಡ ಯಶಸ್ವಿಯಾಗಿದ್ದರು. ಇದನ್ನೂ ಓದಿ: ನಾವು ತಟಸ್ಥವಾಗಿಲ್ಲ, ಶಾಂತಿ ಕಡೆ ಇದ್ದೇವೆ: ಉಕ್ರೇನ್‌ ಭೇಟಿ ಬಗ್ಗೆ ಮೋದಿ ಮಾತು

  • ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್‌ ಕೇಸ್ ಬಗ್ಗೆ ಮಾತುಕತೆ

    ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್‌ ಕೇಸ್ ಬಗ್ಗೆ ಮಾತುಕತೆ

    – ನಾನು ಯಾವತ್ತೂ ದೇವೇಗೌಡರ ವಿರುದ್ಧ ಮಾತನಾಡಿಲ್ಲ
    – ಪೆನ್‌ಡ್ರೈವ್‌ ಹಂಚಿಕೆಯಲ್ಲಿ ನನ್ನ ಪಾತ್ರವಿಲ್ಲ ಎಂದ ವಕೀಲ

    ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರನ್ನು ವಕೀಲ ದೇವರಾಜೇಗೌಡ ಭೇಟಿಯಾಗಿ ಪೆನ್‌ಡ್ರೈವ್‌ ಪ್ರಕರಣ (Pen Drive ) ಸಂಬಂಧ ಮಾತುಕತೆ ನಡೆಸಿದ್ದಾರೆ.

    ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ದೇವರಾಜೇಗೌಡ ಮೊದಲ ಬಾರಿಗೆ ಹೆಚ್‌ಡಿಕೆ (H.D.Kumaraswamy) ಭೇಟಿಯಾಗಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಮಂಗಳೂರು ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ – ಜೈಲಲ್ಲೇ ಸಿಕ್ತು ಡ್ರಗ್ಸ್‌, ಗಾಂಜಾ, ಮೊಬೈಲ್‌

    ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ದೇವರಾಜೇಗೌಡ, ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇನೆ. ಹಂಚಿಕೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ನಾನು ಯಾವತ್ತೂ ದೇವೇಗೌಡರ ವಿರುದ್ಧ ಮಾತನಾಡಿಲ್ಲ. ರೇವಣ್ಣ ವಿರುದ್ಧ ಅಲ್ಲ, ಬದಲಿಗೆ ಅವರ ಕೆಟ್ಟ ಗುಣಗಳ ವಿರುದ್ಧ ಹೋರಾಟ ಮಾಡಿದ್ದೆ. ಈಗ ರೇವಣ್ಣ ಅವರಿಗೂ ಪಶ್ಚತಾಪ ಆಗಿದೆ. ಸಾರ್ವಜನಿಕವಾಗಿ ಮರ್ಯಾದೆ ಹೋಗಿದೆ ಎಂದಿದ್ದಾರೆ. ಇದನ್ನೂ ಓದಿ: ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ

    ಎಸ್‌ಐಟಿ ರಚನೆಯಾಗಿ ತನಿಖೆ ನಡೆಯುತ್ತಿದೆ. ಯಾರು ಪನ್‌ಡ್ರೈವ್ ಹಂಚಿಕೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಇದರಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ಖಾಸಗಿ ತನಿಖೆಯೂ ಆಗಿದೆ, ಅದರಲ್ಲಿ ಪೆನ್‌ಡ್ರೈವ್ ಹಂಚಿಕೆಯಲ್ಲಿ ಯಾರ ಪಾತ್ರ ಇದೆ ಎಂದು ತಿಳಿದಿದೆ ಎಂದು ವಿವರಿಸಿದ್ದಾರೆ.

  • ಜೈಲಲ್ಲಿ ದೇವರಾಜೇಗೌಡ ಜೀವಕ್ಕೆ ಕುತ್ತು: ಸುರೇಶ್ ಗೌಡ ಸ್ಫೋಟಕ ಹೇಳಿಕೆ

    ಜೈಲಲ್ಲಿ ದೇವರಾಜೇಗೌಡ ಜೀವಕ್ಕೆ ಕುತ್ತು: ಸುರೇಶ್ ಗೌಡ ಸ್ಫೋಟಕ ಹೇಳಿಕೆ

    – ಪ್ರಕರಣದ ಖಳನಾಯಕರು, ಸಚಿವರು ಉಗ್ರರಂತೆ ವರ್ತಿಸುತ್ತಿದ್ದಾರೆ

    ಮಂಡ್ಯ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡ (Devarajegowda) ಜೀವಕ್ಕೆ ಕಸ್ಟಡಿಯಲ್ಲಿರುವಾಗಲೇ ಅಪಾಯವಿದೆ ಎಂದು ಮಾಜಿ ಶಾಸಕ ಸುರೇಶಗೌಡ (Sureshgowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಹಲವು ತಿಂಗಳುಗಳ ಕಾಲ ದೇವರಾಜೇಗೌಡರನ್ನು ಕಸ್ಟಡಿಯಲ್ಲೇ ಇಡಲು ಸಂಚು ನಡೆದಿದೆ. ಈ ವೇಳೆ ಅವರ ಜೀವಕ್ಕೆ ದೊಡ್ಡ ಅಪಾಯವಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರಕರಣದ ಖಳನಾಯಕರು, ಸಚಿವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಆರೋಪ ಬಂದ್ಮೇಲೆ ಸಂಸದ ತನಿಖೆ ಎದುರಿಸೋದು ಸೂಕ್ತ: ನಿಖಿಲ್ ಕುಮಾರಸ್ವಾಮಿ

    ಪೆನ್ ಡ್ರೈವ್ ಪ್ರಕರಣದ (Prajwal Revanna Pendrive case )ಮೂಲ ರೂವಾರಿಗಳಿಗೆ ಸರ್ಕಾರದಿಂದ ರಾಜಾತಿಥ್ಯ ನೀಡಲಾಗುತ್ತಿದೆ. ಇದುವರೆಗೆ ಅವರಿಗೆ ನೋಟಿಸ್ ನೀಡದೆ, ಬಂಧಿಸದೆ ಆಟ ಆಡುತ್ತಿದ್ದಾರೆ. ಇತ್ತ ದೇವರಾಜೇಗೌಡ ಅವರನ್ನು ಷಡ್ಯಂತ್ರ ಮಾಡಿ ಬಂಧನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಸತ್ಯತೆ ಬೇಕಿಲ್ಲ. ಸಚಿವರ ಹೆಸರು ಹೇಳಿದ್ರೆ ಪರಿಗಣನೆ ಮಾಡಲ್ಲ. ಮೂಲ ಹುಡುಕಿ ತನಿಖೆಯನ್ನೂ ಮಾಡಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ಅಖಾಡಕ್ಕಿಳಿದಿರುವ ವಾರಣಾಸಿಯ ಇತಿಹಾಸ ಮಾತ್ರವಲ್ಲದೆ ರಾಜಕೀಯವೂ ಕುತೂಹಲಕಾರಿ!

  • ಪೆನ್‍ಡ್ರೈವ್ ಕೇಸ್‍ನಲ್ಲಿ ಹೊಸ ಆಡಿಯೋ ಔಟ್- ಕೇಸ್‍ಗೆ ಸಿಗುತ್ತಾ ಟ್ವಿಸ್ಟ್?

    ಪೆನ್‍ಡ್ರೈವ್ ಕೇಸ್‍ನಲ್ಲಿ ಹೊಸ ಆಡಿಯೋ ಔಟ್- ಕೇಸ್‍ಗೆ ಸಿಗುತ್ತಾ ಟ್ವಿಸ್ಟ್?

    – ದೇವರಾಜೇಗೌಡ ಮೇಲೆ ಶಿವರಾಮೇಗೌಡ ಒತ್ತಡ ಹಾಕಿದ್ರಾ..?

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ (Prajwal Revanna Pendrive Case) ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ವಕೀಲ ದೇವರಾಜೇಗೌಡ ಮತ್ತು ಶಿವರಾಮೇಗೌಡ ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ.

    ಕುಮಾರಸ್ವಾಮಿ ಹೆಸರೇಳುವಂತೆ ಶಿವರಾಮೇಗೌಡ (Shivarame Gowda) ಹೇಳಿದ್ದಾರೆನ್ನಲಾದ ಆಡಿಯೋ ಸ್ಫೋಟಗೊಂಡಿದ್ದು, ಇದೀಗ ಈ ಆಡಿಯೋ ಮತ್ತೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಶಿವರಾಮೇಗೌಡ-ದೇವರಾಜೇಗೌಡ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ದೇವೇಗೌಡರ ಬಗ್ಗೆಯೂ ಶಿವರಾಮೇಗೌಡ ಲಘು ಮಾತುಗಳನ್ನಾಡಿದ್ದಾರೆ.

    ದೇವರಾಜೇಗೌಡ ಆರೋಪ ಸಂಬಂಧ ಇಂದು ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿದ್ದರು. ಈ ಬೆನ್ನಲ್ಲೇ ಆಡಿಯೋ ವೈರಲ್ ಆಗಿದೆ. ಆಡಿಯೊದಲ್ಲಿ ಅಶ್ಲೀಲ ಪೆನ್ ಡ್ರೈವ್ ಹಂಚಿಕೆಗೆ ಎಲ್‍ಆರ್ ಶಿವರಾಮೇಗೌಡ ಅವರೇ ಒತ್ತಡ ಹಾಕಿರುವುದು ಬಯಲಾಗಿದೆ. ಇದಲ್ಲದೇ ಆಡಿಯೊದಲ್ಲಿ ಹೆಚ್‍ಡಿಕೆ, ದೇವೇಗೌಡ ಹಾಗೂ ಅಮಿತ್ ಶಾ ಹೆಸರು ಉಲ್ಲೇಖ ಮಾಡಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ

    ಆಡಿಯೋದಲ್ಲೇನಿದೆ..?: ದೇವರಾಜೇಗೌಡರ ಜೊತೆ ಮಾತನಾಡಿರುವ ಶಿವರಾಮೇಗೌಡ, ಕುಮಾರಸ್ವಾಮಿನೇ ಬಿಟ್ಟಿದ್ದಾನೆ ಅಂತಾನೇ ಹೇಳಿ. ಕುಮಾರಸ್ವಾಮಿಗೆ ಅವರ ಮಗ ಮುಂದಕ್ಕೆ ಬರಬೇಕೆಂಬ ಆಸೆ ಇದೆ, ಇವನು ಮುಂದಕ್ಕೆ ಬಂದುಬಟ್ಟನ್ನಲ್ಲ ಅಂತಾ, ಅದಕ್ಕೆ ಮಾಡಿದ್ದಾನೆ ಅಂತಾ ಹೇಳಿ. ದೇವೇಗೌಡ ಹಾಗೂ ದೇವೇಗೌಡ ಮಕ್ಕಳು ಏನು ಕಡಿಮೆ ಅಂದುಕೊಳ್ಳಬೇಡಿ. ಇನ್ನು ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲ್ಲಿಲ್ವಲಾ..?.ಇನ್ನೇನು ವಿಡಿಯೋ ಇದೆ. ಡಿಕೆ ಮಾತನಾಡಿದ್ರು ಬೆಳಗ್ಗೆ, ನಿಮ್ಮ ಹತ್ತಿರ ಏನೇನಿದೆ ನಮಗೆ ಕೊಡಿ ನಿವು ತಲೆನೆ ಕೆಡಿಸಿಕೊಳ್ಳಬೇಡಿ. ಅವರನ್ನ ಬಲಿ ಹಾಕೋಕೆ ಸರ್ಕಾರದಿಂದಲೇ ತೀರ್ಮಾನವಾಗಿದೆ ಎಂದಿದ್ದಾರೆ.

    ನೀನೇನು ಪೆನ್ಡ್ರೈವ್‍ನ ನಾಗಮಂಗದಲ್ಲೋ, ಹಾಸನದಲ್ಲಿ ಹಂಚಿಲ್ಲ.. ಹಂಚಿದ್ರೂ ತಪ್ಪೇನಿದೆ ಹೇಳಿ. ನೀವ್ ಲಾಯರ್ ಅಲ್ವೇನಲ್ವೆನ್ರಿ..ಅದು ಏನು..? ಏನು ಆಗಲ್ಲ ಎಂದು ಶಿವರಾಮೇಗೌಡ ಹೇಳಿದಾಗ, ಅಣ್ಣ ಕಾನೂನು ಪ್ರಕಾರ ಶಿಕ್ಷೆ ಅಲ್ವೇನಣ್ಣ. ಹೆಣ್ಮಕ್ಕಳ ಮಾಣ ಮರ್ಯಾದೆ ಅಣ್ಣ. ಶೀಲದ ಬಗ್ಗೆ ನಾವೂ ಯೋಚನೆ ಮಾಡಬೇಕಲ್ವ ಎಂದು ದೇವರಾಜೇಗೌಡ ಹೇಳುತ್ತಾರೆ. ಈ ವೇಳೆ ಶಿವರಾಮೇಗೌಡ, ಅದರ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ತೀರಿ. ಅಮಿತ್ ಶಾ ಚನ್ನೈನಲ್ಲಿ ಹೇಳಿದ್ದಾರಲ್ಲ, ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ ಅಂತಾ ಎಂದಿದ್ದಾರೆ.

    ಈ ಹಿಂದೆಯೋ ಆಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡಿತ್ತು.

  • ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ

    ಪೆನ್‌ಡ್ರೈವ್‌ ಮಾರಾಟಕ್ಕಿಟ್ಟಿದ್ದೇ ದೇವರಾಜೇಗೌಡ – ಡಿಕೆಶಿ ಜೊತೆಗೆ ಮಾತನಾಡಿಸಿ ತಪ್ಪು ಮಾಡಿದೆ: ಶಿವರಾಮೇಗೌಡ

    ಬೆಂಗಳೂರು: ಪೆನ್‌ಡ್ರೈವ್‌ಗಳನ್ನ ದೇವರಾಜೇಗೌಡ (Devarajegowda), ಕಾರ್ತಿಕ್‌ ಅವರೇ ಮಾರಾಟಕ್ಕಿಟ್ಟಿದ್ದರು. ನಾನು ಅವನನ್ನ ಡಿಕೆ ಶಿವಕುಮಾರ್‌ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂಬ ನೋವು ಕಾಡುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (LR Shivaramegowda) ವಿಷಾದ ವ್ಯಕ್ತಪಡಿಸಿದ್ದಾರೆ.

    ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸಲ್ಲಿ (Pen Drive Case) ಡಿಸಿಎಂ ಡಿಕೆಶಿ 100 ಕೋಟಿ ಆಫರ್ ನೀಡಿದ್ದರು. ಆಫರ್ ತಂದವರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಎಂಬ ವಕೀಲ ದೇವರಾಜೇಗೌಡ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

    ಡಿ.ಕೆ ಶಿವಕುಮಾರ್ (DK Shivakumar) ಅವರ ಜೊತೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ನನಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ. ಗೆಸ್ಟ್ ಅಪಿಯರೆನ್ಸ್ ತರ 2 ದಿನ ನಾನು ಸಿಲುಕಿದ್ದೆ, ಆದರೆ ಮೊನ್ನೆ ದಿನ ಏನೋ ಬುಲ್ಲೆಟ್ ಹೊಡೆದಿದ್ದಾನೆ. ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಡಿ.ಕೆ ಶಿವಕುಮಾರ್ ಅವರು ಮಾತನಾಡಬೇಕು ಅಂದಿರಲಿಲ್ಲ ಇವನೇ ಮಾತನಾಡಬೇಕು ಅಂದ ಅವರು ಹಲೋ ದೇವರಾಜೇಗೌಡ ಅಂದಿದ್ದರು ಅಷ್ಟೇ . ಈಗ ಡಿ.ಕೆ ಶಿವಕುಮಾರ್ ಅವರ ಜೊತೆಗೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್. ಮುಂದಾದರೂ ಅವನ ಜೊತೆ ವ್ಯವಹಾರ ಮಾಡೋರು ಜಾಗರೂಕರಾಗಿರಿ. ದೇವರಾಜೇಗೌಡ ಬರೀ ಫೋನ್‌ನಲ್ಲಿ ರೆಕಾರ್ಡ್ ಮಾಡಲ್ಲ, ಅವನ ಬಾಡಿನೇ ರೆಕಾರ್ಡ್ ಮಾಡುತ್ತೆ. ಆ ರೀತಿ ವ್ಯವಸ್ಥೆ ಇರುವ ಮನುಷ್ಯ. ಅವನು ಒಳಗೆ ಹೋದಾಗ, ನಂತರ ಸದ್ಯ ಹುಚ್ಚು ನಾಯಿ ಒಳಗೆ ಹೋಯ್ತಲ್ಲ ಅಂತ ತಿರುಪತಿ ತಿಮ್ಮಪ್ಪನಿಗೆ ಕೈಮುಗಿದೆ ಎಂದು ಏಕವಚದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಪೆನ್‌ಡ್ರೈವ್‌ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನ ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ಪೊಲೀಸ್ ಭಾಷೆಯಲ್ಲಿ ಕೇಳಿದರೆ ಎಲ್ಲಾ ಹೊರಗೆ ಬರುತ್ತೆ. ನನಗೂ, ಡಿ.ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೆ ಯಾವುದೇ ಸಂಬಧ ಇಲ್ಲ. ನಾನು ಬೌರಿಂಗ್‌ ಕ್ಲಬ್‌ಗೆ ಹೋಗಿಯೇ 4 ವರ್ಷಗಳಾಗಿವೆ. ಅವನು ಬೌರಿಂಗ್‌ ಕ್ಲಬ್‌ನಲ್ಲಿ ಕೂತಿದ್ದ ಜಾಗದಲ್ಲಿ ಮೊದಲು ಔಷಧಿ ಸಿಂಪಡಿಸಬೇಕು ಎಂದು ಲೇವಡಿ ಮಾಡಿದ್ದಾರೆ.

    ಒಕ್ಕಲಿಗ ನಾಯಕತ್ವ ವಿಚಾರ ಎಳೆಯೋದು ಬೇಡ:
    ಇದೇ ವೇಳೆ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪೆನ್‌ಡ್ರೈವ್‌ ಪ್ರಕರಣದ ಮಧ್ಯೆ ಒಕ್ಕಲಿಗ ನಾಯಕತ್ವದ ವಿಚಾರವನ್ನ ಎಳೆದು ತರೋದು ಬೇಡ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೆ ಏನೇನು ಮಾಹಿತಿ ಇದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಒಕ್ಕಲಿಗ ನಾಯಕತ್ವ ಇದರ ಮಧ್ಯೆ ತರುವುದು ಸರಿಯಲ್ಲ. ಜೆಡಿಎಸ್‌ನಲ್ಲಿ ಅಧಿಕಾರನೂ ಕೊಡ್ತಾರೆ ಹಾಗೆಯೆ ರುಬ್ಬಿ ಕಳುಹಿಸ್ತಾರೆ ಎಂದು ತಿರುಗೇಟು ನೀಡಿದ್ದಾರೆ.

  • ದೇವರಾಜೇಗೌಡ ಪರಿಚಯವೇ ನನಗೆ ಇಲ್ಲ, ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ: ಸಚಿವ ಚಲುವರಾಯಸ್ವಾಮಿ

    ದೇವರಾಜೇಗೌಡ ಪರಿಚಯವೇ ನನಗೆ ಇಲ್ಲ, ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ: ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ದೇವರಾಜೇಗೌಡ (Devarajegowda) ಪರಿಚಯವೇ ನನಗೆ ಇಲ್ಲ. ಬೌರಿಂಗ್‌ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಡಿಕೆಶಿ ನಮ್ಮ ಜೊತೆ ಮಾತಾಡಿಯೂ ಇಲ್ಲ. ದೇವರಾಜೇಗೌಡಗೂ ನನಗೂ ಸಂಬಂಧ ಇಲ್ಲ. ನಮ್ಮ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ. ದೇವರಾಜೇಗೌಡ ಗೌರವಸ್ಥ ಅಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ದೇವರಾಜೇಗೌಡ ಸಕ್ರಿಯ ಬಿಜೆಪಿ ಕಾರ್ಯಕರ್ತ, ಅವರ ಆರೋಪ ರಾಜಕೀಯ ಪ್ರೇರಿತ: ರಾಮಲಿಂಗಾರೆಡ್ಡಿ

    ದೇವರಾಜೇಗೌಡ ಮುಖವನ್ನು ನಾನು ಟಿವಿಯಲ್ಲೇ ನೋಡಿದ್ದು. ಈ ಮೊದಲು ದೇವರಾಜೇಗೌಡ, ಗೌಡರ ಕುಟುಂಬದ ವಿರುದ್ಧ ಹೋರಾಡಿದ್ದ. ಈಗ ಪರ ಮಾತಾಡ್ತಿದ್ದಾನೆ ಅಂದ್ರೆ ಏನು? ನಾನು ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಒಂದು ಸಲ ಹೋಗಿದ್ದೆ. ಅದು ಎಲೆಕ್ಷನ್‌ಗೂ ಮುಂಚೆ ಫೆಬ್ರವರಿಯಲ್ಲಿ ಹೋಗಿದ್ದೆ. ಗೋಪಾಲಸ್ವಾಮಿ ನಮ್ಮ ಪಕ್ಷದ ಮಾಜಿ ಎಂಎಲ್‌ಸಿ, ದೇವರಾಜೇಗೌಡ ಆರೋಪದ ತನಿಖೆ ಬಗ್ಗೆ ಮಾತಾಡೋದಕ್ಕೆ ನಾನು ಗೃಹ ಸಚಿವ ಅಲ್ಲ, ಸಿಎಂ ಕೂಡ ಅಲ್ಲ. ಹಾಗಾಗಿ ಎಸ್‌ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಇದೇ ವೇಳೆ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದರು.

    ಶಿವರಾಮೇಗೌಡ, ದೇವರಾಜೇಗೌಡಗೆ ಕರೆ ಮಾಡಿದ್ದು ನನಗೆ ಸಂಬಂಧ ಇಲ್ಲ. ಅದನ್ನೂ ಕೂಡ ನಾನು ಒಪ್ಪುವುದಿಲ್ಲ. ಶಿವರಾಮೇಗೌಡ ಫೋನ್ ಕೊಟ್ಟಾಗ ಡಿಕೆಶಿ ಮಾತಾಡಿದ್ದು ಸೂಕ್ತ ಅಲ್ಲ. ಒಬ್ಬ ಜವಾಬ್ದಾರಿಯುತ ಡಿಸಿಎಂ ಆ ಪರಿಸ್ಥಿತಿಯಲ್ಲಿ ಫೋನ್ ತೆಗೆದುಕೊಂಡಿರಬಹುದು. ಶಿವರಾಮೇಗೌಡ ಹಾಗೂ ದೇವರಾಜೇಗೌಡ ಇಬ್ಬರೂ ನನಗೆ ಸಂಬಂಧ ಇಲ್ಲದೋರು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

    ಕುಮಾರಸ್ವಾಮಿ ಅವರು ದಿನಾ ಮಾತಾಡೋದನ್ನ ಬಿಡಲಿ. ಮೊದಲು ಪ್ರಜ್ವಲ್ ರೇವಣ್ಣ ಕರೆಸಲಿ. ದೇವೇಗೌಡರಿಗೆ ನೋವಾದರೆ, ಮಗ ಆಗಿ ಅವರಿಗೆ ಮಾತ್ರ ನೋವಾಗಲ್ಲ. ನಮಗೂ ನೋವಾಗಿದೆ. ಕುಮಾರಸ್ವಾಮಿ, ರೇವಣ್ಣ ಅವರು ಮೊದಲು ಪ್ರಜ್ವಲ್ ಕರೆಸಲಿ. ರೇವಣ್ಣ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೀತಾ ಇದೆ. ಆರೋಪ ಮುಕ್ತವಾದ್ರೆ ನಮ್ಮದೇನೂ ತಕರಾರು ಇಲ್ಲ ಎಂದರು.

  • ದೇವರಾಜೇಗೌಡ ಸಕ್ರಿಯ ಬಿಜೆಪಿ ಕಾರ್ಯಕರ್ತ, ಅವರ ಆರೋಪ ರಾಜಕೀಯ ಪ್ರೇರಿತ: ರಾಮಲಿಂಗಾರೆಡ್ಡಿ

    ದೇವರಾಜೇಗೌಡ ಸಕ್ರಿಯ ಬಿಜೆಪಿ ಕಾರ್ಯಕರ್ತ, ಅವರ ಆರೋಪ ರಾಜಕೀಯ ಪ್ರೇರಿತ: ರಾಮಲಿಂಗಾರೆಡ್ಡಿ

    ರಾಮನಗರ: ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ (Pendrive Case) ನಾಲ್ವರು ಸಚಿವರು ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ (Devarajegowda) ಆರೋಪ ವಿಚಾರಕ್ಕೆ ರಾಮನಗರದಲ್ಲಿ (Ramanagara) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪ್ರತಿಕ್ರಿಯೆ ನೀಡಿದ್ದಾರೆ.

    ದೇವರಾಜೇಗೌಡ ಸಕ್ರಿಯ ಬಿಜೆಪಿ (BJP) ಕಾರ್ಯಕರ್ತ. ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿರುವ ವ್ಯಕ್ತಿ. ಅವರು ರಾಜಕೀಯದಲ್ಲಿ ಇಲ್ಲದೇ ಇದ್ದಿದ್ದರೆ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ಈಗ ಅವರ ಹೇಳಿಕೆ ರಾಜಕೀಯ ಪ್ರೇರಿತ. ದೇವರಾಜೇಗೌಡ ಹಿಂದೆ ರೇವಣ್ಣ ಕುಟುಂಬದ ಬಗ್ಗೆ ಮಾತನಾಡಿದ್ದು, ವೀಡಿಯೋ ಬಿಟ್ಟಿದ್ದನ್ನು ನಾನು ಗಮನಿಸಿದ್ದೇನೆ. ಇದು ಅವರಿಬ್ಬರ ಪರ್ಸನಲ್ ವಿಚಾರ. ಆದರೆ ಅದನ್ನು ರಾಜ್ಯ ಮಟ್ಟಕ್ಕೆ ತಂದಿದ್ದಾರೆ ಎಂದರು. ಇದನ್ನೂ ಓದಿ: ಕಿರ್ಗಿಸ್ತಾನ್‌ನಲ್ಲಿ ಭಾರತ, ಪಾಕಿಸ್ತಾನ ವಿದ್ಯಾರ್ಥಿಗಳ ಟಾರ್ಗೆಟ್‌ ಮಾಡಿ ದಾಳಿ

    ಇನ್ನೂ ಡಿಕೆಶಿಯಿಂದ 100 ಕೋಟಿ ಆಫರ್ ಆರೋಪ ವಿಚಾರದ ಕುರಿತು ಮಾತನಾಡಿ, ಇದರ ಬಗ್ಗೆ ದೇವರಾಜೇಗೌಡ ಅಥವಾ ಶಿವಕುಮಾರ್ ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಈ ಇಡೀ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಕೇವಲ ಹೊಳೆನರಸೀಪುರದಲ್ಲಿ ಸುತ್ತುತ್ತಿರುವ ವಿಚಾರ. ರೇವಣ್ಣ, ಪ್ರಜ್ವಲ್ ಹಾಗೂ ದೇವೇಗೌಡರ ಜಗಳ ಇದು. ಅವರ ಜಗಳವನ್ನ ಬೀದಿಗೆ ತಂದಿದ್ದಾರೆ ಎಂದು ಹೇಳಿದರು. ದೇವರಾಜೇಗೌಡ ಜೈಲಿನಿಂದ ಬಂದ ಬಳಿಕ ಸರ್ಕಾರ ಬೀಳುತ್ತೆ ಎಂಬ ವಿಚಾರವಾಗಿ ಮಾತನಾಡಿ, ಅವರು ಮೊದಲು ಜೈಲಿನಿಂದ ಬರಲಿ. ಆಮೇಲೆ ಸರ್ಕಾರ ಬೀಳುತ್ತಾ? ಇಲ್ವಾ ಅನ್ನೋದನ್ನು ನೋಡೊಣ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ದೇವರಾಜೇಗೌಡನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಉಪಯೋಗಿಸಿ ಮಾರ್ಕೆಟ್‌ ಮಾಡ್ಕೊತ್ತಾರೆ: ಡಿಕೆಶಿ

  • ದೇವರಾಜೇಗೌಡನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಉಪಯೋಗಿಸಿ ಮಾರ್ಕೆಟ್‌ ಮಾಡ್ಕೊತ್ತಾರೆ: ಡಿಕೆಶಿ

    ದೇವರಾಜೇಗೌಡನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಉಪಯೋಗಿಸಿ ಮಾರ್ಕೆಟ್‌ ಮಾಡ್ಕೊತ್ತಾರೆ: ಡಿಕೆಶಿ

    ಬೆಂಗಳೂರು: ದೇವರಾಜೇಗೌಡ (Devarajegowda) ಆರೋಪ ಆಧಾರಹಿತ, ಆತನಿಗೆ ತಲೆ ಕೆಟ್ಟಿದೆ. ಆತನ ಆರೋಪಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ 100 ಕೋಟಿ ಆಫರ್‌ ಮಾಡಿದ್ದರು ಎಂದು ದೇವರಾಜೇಗೌಡ ಅವರ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.

    ನಾನು 100 ಕೋಟಿ ರೂ. ಆಫರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ಕೊಡಲಿ. ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಆರೋಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕಳಂಕ ತೊಳೆದುಕೊಳ್ಳುವವರೆಗೂ ಹೆಚ್‌ಡಿಡಿ ಕುಟುಂಬದವರು ರಾಜೀನಾಮೆ ಕೊಡಲಿ: ಪ್ರಿಯಾಂಕ್‌ ಖರ್ಗೆ

     

    ಅವ್ನು ಏನ್‌ ಬೇಕಾದರೂ ಮಾತನಾಡಿಕೊಳ್ಳಲಿ. ದೇವರಾಜೇಗೌಡಗೆ ತಲೆ ಕೆಟ್ಟಿದೆ. ನಾನು ಯಾರ ಜೊತೆಯಲ್ಲೂ ಮಾತನಾಡಿಲ್ಲ. ನನ್ನ ಹತ್ತಿರ ಏನೇನಕ್ಕೋ ನೂರಾರು ಜನ ಬರುತ್ತಿರುತ್ತಾರೆ. ಬರುವ ಎಲ್ಲರನ್ನೂ  ಸ್ಕ್ಯಾನ್‌ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.

    ಕೆಲವರಿಗೆ ನನ್ನ ಹೆಸರನ್ನ ಉಪಯೋಗಿಸಿಕೊಂಡು ಮಾರ್ಕೆಟ್ ಮಾಡಿಕೊಕೊಳ್ಳುತ್ತಾರೆ. ಏನಾದ್ರೂ ಒಳ್ಳೆಯದು ಇದ್ದರೆ ಹೇಳಿ. ಯಾರ್ಯಾರೋ ಹೇಳಿದ್ರೆ ನಾನು ತಲೆ ಕೆಡಿಸಿಕೊಳ್ಳಲು ಹೋಗಲ್ಲ ಎಂದರು.

    ಎಲ್ಲರೂ ಪೆನ್ ಡ್ರೈವ್ (Pen Drive) ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಸಂತ್ರಸ್ತೆಯರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಯಾಕೆ? ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.

    ಶಕ್ತಿ ಯೋಜನೆಯಿಂದ ಎಲ್ಲರಿಗೂ ಅನುಕೂಲ ಆಗುತ್ತಿದೆ. ಸಾರ್ವಜನಿಕರಿಗಾಗಿ ಸಾವಿರಕ್ಕೂ ಹೆಚ್ಚು ಬಸ್ಸು ಖರೀದಿಸಿದ್ದೇವೆ. ಬೆಂಗಳೂರು ಮೆಟ್ರೋ ಆದಾಯ ಹೆಚ್ಚಳವಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 1.81 ಕೋಟಿ ಪ್ರಯಾಣಿಕರ ಪ್ರಯಾಣಿಸಿ 141 ಕೋಟಿ ಆದಾಯ ಬಂದಿದೆ. ಈ ವರ್ಷ ಏಪ್ರಿಲ್‌ನಿಂದ 2.09 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, 151 ಕೋಟಿ ರೂ. ಆದಾಯ ಬಂದಿದೆ. ಪ್ರಧಾನಿ ಮೋದಿ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

     

  • ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್: ಹೊಸ ಬಾಂಬ್‌ ಸಿಡಿಸಿದ ವಕೀಲ ದೇವರಾಜೇಗೌಡ

    ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್: ಹೊಸ ಬಾಂಬ್‌ ಸಿಡಿಸಿದ ವಕೀಲ ದೇವರಾಜೇಗೌಡ

    – ನನಗೆ 100 ಕೋಟಿ ಆಫರ್‌ ಕೊಟ್ಟು, 5 ಕೋಟಿ ಅಡ್ವಾನ್ಸ್‌ ನೀಡಿದ್ದರು
    – ಕುಮಾರಸ್ವಾಮಿ ಪೆನ್‌ಡ್ರೈವ್‌ ಹಂಚಿದ್ರು ಅಂತಾ ಹೇಳುವಂತೆ ಡಿಕೆಶಿ ಹೇಳಿದ್ದರು

    ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ವಕೀಲ ದೇವರಾಜೇಗೌಡ (Devarajegowda) ಹೊಸ ಬಾಂಬ್‌ ಸಿಡಿಸಿದ್ದಾರೆ. ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ (D.K.Shivakumar) ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ನೀನು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಹೇಳು. ಪೆನ್‌ಡ್ರೈವ್‌ನ ಕುಮಾರಸ್ವಾಮಿ ಹಂಚಿದ್ರು ಅಂತಾ ಹೇಳು. ನಿನಗೆ ಸಮಸ್ಯೆ ಆಗಲ್ಲ. ಸೆಕ್ಯೂರ್ ಮಾಡ್ತಿನಿ ಅಂತಾ ಭರವಸೆ ನೀಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಇದನ್ನೂ ಓದಿ: ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ದೊಡ್ಡಮಟ್ಟದ ಹಣದ ಆಫರ್ ಕೊಟ್ಟರು. ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ರು ಎಂದು ದೂರಿದ್ದಾರೆ.

    ನಾನು ಒಪ್ಪದೇ ಇದ್ದಾಗ, ಈಗಾಗಲೇ ದೊಡ್ಡ ಹಗರಣ ಆಗಿರುವುದರಿಂದ ಮೋದಿಗೆ, ಬಿಜೆಪಿಗೆ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಮಾಡಿದ್ರು. ನನಗೆ ಸುಮಾರು ನೂರು ಕೋಟಿ ಆಫರ್ ಕೊಟ್ರು. ಐದು ಕೋಟಿ ರೂಪಾಯಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್‌ನ 110 ರೂಂಗೆ ಕಳಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರದವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಮುಂದುವರಿಕೆ

    ಚನ್ನರಾಯಪಟ್ಟಣ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು. ಐದು ಕೋಟಿ ಕ್ಯಾಶ್ ಕೊಟ್ಟು ಡಿಕೆಶಿ ಕಳಿಸಿದ್ದರು. ದೇಶದಲ್ಲಿ ಮೋದಿಯವರಿಗೆ ಕಳಂಕ ತರಬೇಕು. ಈ ರಾಸಲೀಲೆ ಹಗರಣದಲ್ಲಿ ಮೋದಿಯವರನ್ನು ಬಿಂಬಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಅಂತಾ ಮಾಡಿದರು. ಡಿ.ಕೆ.ಶಿವಕುಮಾರ್ ಮುಖ್ಯ ಉದ್ದೇಶ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವವನ್ನು ರಾಜ್ಯದಲ್ಲಿ ಹಾಳು ಮಾಡಬೇಕು ಎನ್ನುವುದು. ಇದು ಸತ್ಯ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.