Tag: ದೇವರಾಜು ಅರಸು

  • ರಮೇಶ್‌ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ: ಸುಧಾಕರ್

    ರಮೇಶ್‌ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ: ಸುಧಾಕರ್

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೀತಿ ಹೇಳಲಷ್ಟೇ ಲಾಯಕ್. ಅವರು ಅದನ್ನು ಎಂದಿಗೂ ಕಾರ್ಯಾಚರಣೆಗೆ ತಂದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಟೀಕಿಸಿದರು.

    ಚಿಕ್ಕಬಳ್ಳಾಪುರ ತಾಲ್ಲೂಕಿನ ಗೋಪಿನಾಥ ಬೆಟ್ಟದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ. ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದರಲ್ಲೆ ಇಡೀ ಜೀವನವನ್ನು ಕಳೆದುಬಿಡುತ್ತಾರೆ. ಇಂಥವರು ಇವತ್ತು ನೀತಿ ಪಾಠ ಹೇಳಿಕೊಡುತ್ತಿದ್ದಾರೆ. ಅವರು ಹೇಳಿದ್ದಂತೆ ನಿಜ ಜೀವನದಲ್ಲಿ ಎಂದಿಗೂ ನಡೆದುಕೊಂಡಿಲ್ಲ. ರಮೇಶ್ ಕುಮಾರ್ ಏನು ಎಂದು ಇಡೀ ಜಗತ್ತಿಗೆ ಅರ್ಥ ಆಗಿದೆ. ಅವರು ಕೇವಲ ನೀತಿ ಪಾಠ ಹೇಳೋದು ಆ ರೀತಿ ನಡೆದುಕೊಳ್ಳಲ್ಲ ಎಂದರು.

    ದೇವರಾಜು ಅರಸು ಬಿಟ್ಟು ಹೋದಾಗ ರಮೇಶ್ ಕುಮಾರ್ ಅವರ ಹಿಂದೆ ಹೋಗಿದ್ದರಾ? ದೇವೇಗೌಡರು ಅವರನ್ನು ಸ್ಪೀಕರ್ ಮಾಡಿದ್ದರು. ದೇವೇಗೌಡರು ಪದವಿ ಇಳಿದಾಗ ಎತ್ತ ಸಾಗಿದ್ದರು. ಇದರಿಂದ ರಮೇಶ್ ಕುಮಾರ್ ಫಕೀರ ಅಲ್ಲ. ಫಕೀರ ಆಗಲು ಯೋಗ್ಯತೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಮೊಟ್ಟೆ ವಿತರಣೆಗೆ ಕೆಲವರ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ವಿಚಾರಕ್ಕೆ ಧಕ್ಕೆ ತರುವಂತೆ ಸರ್ಕಾರ ಯಾರಿಗೂ ಒತ್ತಾಯ ಮಾಡುವುದಿಲ್ಲ. ಕೆಲವರು ಮೊಟ್ಟೆ ತಿನ್ನಲ್ಲ, ಕೆಲವರು ಹಾಲು ಕುಡಿಯೋದಿಲ್ಲ. ಅದು ಅವರವರ ಆಹಾರ ಪದ್ಧತಿಯಾಗಿದೆ. ಮೊಟ್ಟೆ ಪೌಷ್ಟಿಕಾಂಶವುಳ್ಳ ಆಹಾರ. ಆದರೆ ನಾವು ಯಾರಿಗೂ, ಯಾವುದನ್ನೂ ಬಲವಂತ ಮಾಡೋದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

  • ಪಾರ್ಟಿಗೆ ಮತ್ತೆ ಸೆರ್ಕೊಂಡ್ಯ? ಯಾವಾಗ ಸೇರ್ಕೊಂಡೆ? ಇಂಡಿಪೆಂಡೆಂಟ್ ಆಗಿ ಗೆದ್ದ ಬಾ ನಿನ್ನ ತಾಕತ್ ನೋಡ್ತಿನಿ: ಸಿದ್ದರಾಮಯ್ಯ ಕ್ಲಾಸ್

    ಪಾರ್ಟಿಗೆ ಮತ್ತೆ ಸೆರ್ಕೊಂಡ್ಯ? ಯಾವಾಗ ಸೇರ್ಕೊಂಡೆ? ಇಂಡಿಪೆಂಡೆಂಟ್ ಆಗಿ ಗೆದ್ದ ಬಾ ನಿನ್ನ ತಾಕತ್ ನೋಡ್ತಿನಿ: ಸಿದ್ದರಾಮಯ್ಯ ಕ್ಲಾಸ್

    ಬೆಂಗಳೂರು: ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಮತ್ತೆ ಪಕ್ಷ ಸೇರಿರುವ ಹಾಸನದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವಿನಯ್ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ಮಾಜಿ ಸಿಎಂ ದೇವರಾಜ ಅರಸು 103 ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮ ಆಗಮಿಸಿದ್ದ ಸಿದ್ದರಾಮಯ್ಯನವರು ವಿನಯ್ ಗಾಂಧಿ ಅವರನ್ನು ನೋಡುತ್ತಲೇ, ಪಾರ್ಟಿಗೆ ಮತ್ತೆ ಸೇರಿದಿಯಾ? ಯಾವಾಗ ಸೇರ್ಕೊಂಡೆ? ನಾನ್ಯಾವಾಗ ನಿನ್ನನ್ನು ಸೇರಿಸಿಕೊಂಡಿದ್ದೇನೆ. ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬಾ ಆವಾಗ ನಿನ್ನ ತಾಕತ್ ನೋಡುತ್ತೀನಿ. ಮುಂದೆ ಮತ್ತೆ ಗಲಾಟೆ ಮಾಡಿದ್ರೆ ಪಕ್ಷ ಬಿಟ್ಟು ಓಡಿಸ್ತೀನಿ ಎಂದು ಎಲ್ಲರೆದುರೇ ಖಡಕ್ ಎಚ್ಚರಿಕೆಯನ್ನು ನೀಡಿದರು.

    ದೇವರಾಜ ಅರಸು ಅವರು ಸರ್ವರಿಗೂ ಸಮಪಾಲು, ಸಮಬಾಳು ಕಲ್ಪನೆಯನ್ನು ಜಾರಿಗೆ ತಂದಂತಹ ನಾಯಕ. ಶಿಕ್ಷಣ ಮತ್ತು ರಾಜಕೀಯದಲ್ಲಿ ಮೀಸಲಾತಿ ತಂದವರು ಅರಸು. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಸಂವಿಧಾನಕ್ಕೆ 73/74 ನೇ ತಿದ್ದುಪಡಿ, ಹೆಣ್ಣುಮಕ್ಕಳಿಗೆ ಮೀಸಲಾತಿ ಜಾರಿಗೆ ತಂದ ಓರ್ವ ಧೀಮಂತ ನಾಯಕರು. ಸಾಮಾಜಿಕ ನ್ಯಾಯದ ಬಗ್ಗೆ ಎಲ್ಲರೂ ದೊಡ್ಡ ಭಾಷಣ ಮಾಡುತ್ತಾರೆ. ಆದ್ರೆ ಪ್ರಾಯೋಗಿಕವಾಗಿ ಅದನ್ನ ತಮ್ಮ ನೈಜ ಜೀವನದಲ್ಲಿ ಅಳವಡಿಸಿಕೊಳ್ಳಲ್ಲ. ಕೇವಲ ತೋರಿಕೆಗಾಗಿ ಬಿಜೆಪಿಯವರು ದಲಿತರ ಮನೆಗೆ ತೆರಳಿ ತಿಂಡಿ ತಿಂದು ಬರುತ್ತಾರೆ. ಬರೀ ಗಿಮಿಕ್ ಮಾಡೋದು ಅವರ ಕೆಲಸವಾಗಿದ್ದು, ಕಾಂಗ್ರೆಸ್ ಪಕ್ಷವೊಂದೇ ಸಾಮಾಜಿಕ ನ್ಯಾಯಾಕ್ಕೆ ಬದ್ಧವಾಗಿದೆ ಎಂದು ಹೇಳಿದರು.

    ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ನಮ್ಮ ಸರ್ಕಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಹತ್ಯೆಯಾದ ದಾಬೋಲ್ಕರ್ ಮತ್ತು ಪನ್ಸಾರೆ ಆರೋಪಿಗಳ ಬಗ್ಗೆ ಬಿಜೆಪಿಯವರು ಒಂದು ಮಾತನ್ನು ಮಾತಾಡಲ್ಲ. ಇವರು ಸಹ ಒಂದು ರೀತಿಯ ಭಯೋತ್ಪಾದಕರಂತೆ ಎಂದು ಟೀಕಿಸಿದರು. ಅದೇ ಒಬ್ಬ ಮುಸ್ಲಿಂ ವ್ಯಕ್ತಿಯ ಹೆಸರು ಗೌರಿ ಪ್ರಕರಣದಲ್ಲಿ ಕೇಳಿ ಬಂದಿದ್ದರೆ, ಪ್ರತಿ ದಿನ ಟಿವಿಗಳಲ್ಲಿ ಚರ್ಚೆ ಆಗುತ್ತಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸ್ವಾಮಿ ಅಗ್ನಿವೇಶ್ ಹಲ್ಲೆ ನಡೆಯಿತು. ಬಿಜೆಪಿ ವಿರುದ್ಧ ಯಾರು ಮಾತನಾಡುತ್ತಾರೆ ಅವರನ್ನ ಟಾರ್ಗೆಟ್ ಮಾಡಿ ಹಲ್ಲೆ ಮಾಡ್ತಾರೆ ಎಂದು ಆರೋಪಿಸಿದರು.

    ರಾಜೀವ್ ಗಾಂಧಿ ಮತ್ತು ದೇವರಾಜು ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ವಿ ಆರ್ ಸುದರ್ಶನ್, ಮಾಜಿ ಸಚಿವ ಹೆಚ್ ಆಂಜನೇಯ, ಶಾಸಕ ಬೈರತಿ ಸುರೇಶ್, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv