Tag: ದೇವನಹಳ್ಳಿ

  • ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 58 ಕೆಜಿ ಚಿನ್ನಾಭರಣ ವಶ!

    ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 58 ಕೆಜಿ ಚಿನ್ನಾಭರಣ ವಶ!

    ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ 58 ಕೆಜಿ ತೂಕದ ಚಿನ್ನಾಭರಣ ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬಾಲೇಪುರ ಗ್ರಾಮದ ಚೆಕ್‍ಪೋಸ್ಟ್ ಬಳಿ ನಡೆದಿದೆ.

    ದೇವನಹಳ್ಳಿ ಮಾರ್ಗದಿಂದ ಹೊಸಕೋಟೆ ಕಡೆಗೆ ತೆರಳುತ್ತಿದ್ದ ಬೊಲೇರೋ ವಾಹನ ತಪಾಸಣೆ ವೇಳೆ ಚಿನ್ನ ಪತ್ತೆಯಾಗಿದೆ. ಬಾಲೇಪುರ ಚೆಕ್‍ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ.

    ಹೆಚ್ಚಿನ ಪ್ರಮಾಣದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಬೇರೆಡೆಗೆ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಇವುಗಳಿಗೆ ಸೂಕ್ತ ದಾಖಲೆಗಳನ್ನು ನೀಡದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವಶಕ್ಕೆ ಪಡೆಯಲಾಗಿರುವ ಚಿನ್ನ ಮೌಲ್ಯ ಸುಮಾರು 15 ಕೋಟಿ ರೂ. ಆಗಿದೆ.

    ಘಟನೆಗೆ ಸಂಬಂಧಿಸಿದಂತೆ ಆಕ್ರಮ ಚಿನ್ನ ಸಾಗಾಟ ನಡೆಸುತ್ತಿದ್ದ ಓರ್ವ ವ್ಯಕ್ತಿಯನ್ನ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಕಸ್ಟಮ್ಸ್ ಹಾಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚೆನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹೆಣ್ಣು ಮಕ್ಕಳ ಚಪ್ಪಲಿಯಲ್ಲಿ ಅರ್ಧ ಕೆಜಿ ಚಿನ್ನ ಕಳ್ಳ ಸಾಗಾಣೆ – ಆರೋಪಿ ಅರೆಸ್ಟ್

    ಹೆಣ್ಣು ಮಕ್ಕಳ ಚಪ್ಪಲಿಯಲ್ಲಿ ಅರ್ಧ ಕೆಜಿ ಚಿನ್ನ ಕಳ್ಳ ಸಾಗಾಣೆ – ಆರೋಪಿ ಅರೆಸ್ಟ್

    ಬೆಂಗಳೂರು: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಚಿನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ದುಬೈನಿಂದ ಬೆಂಗಳೂರಿಗೆ ಶನಿವಾರ ರಾತ್ರಿ ಆಗಮಿಸಿದ್ದ ಇಂಡಿಗೋ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಣೆ ಮಾಡುತ್ತಿದ್ದ ಮುಂಬೈ ಮೂಲದ ವ್ಯಕ್ತಿಯನ್ನ ಕೆಐಎಎಲ್ ಅಧಿಕಾರಿಗಳು ಬಂಧಿಸಿದ್ದಾರೆ.

    ಆರೋಪಿ ಹೆಣ್ಣು ಮಕ್ಕಳ ಚಪ್ಪಲಿ ಹಾಗೂ ಸೌಂದರ್ಯ ಆಭರಣಗಳಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಣೆ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಕಸ್ಟಮ್ಸ್ ಆಯುಕ್ತರಾದ ಶಿವಪ್ರಕಾಶ್ ಸೇರಿದಂತೆ ವಸಂತ್ ಮಗೋಡ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ದಾಳಿಯಲ್ಲಿ ವಿವಿಧ ವಸ್ತುಗಲ್ಲಿ ಅಡಗಿಸಿಟ್ಟಿದ್ದ ಸುಮಾರು ಅರ್ಧ ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

  • ಹೆಜ್ಜೇನು ದಾಳಿಗೆ ಮೃತದೇಹವನ್ನು ಸ್ಮಶಾನದಲ್ಲಿ ಬಿಟ್ಟು ದಿಕ್ಕಾಪಾಲಾಗಿ ಓಡಿದ ಜನ

    ಹೆಜ್ಜೇನು ದಾಳಿಗೆ ಮೃತದೇಹವನ್ನು ಸ್ಮಶಾನದಲ್ಲಿ ಬಿಟ್ಟು ದಿಕ್ಕಾಪಾಲಾಗಿ ಓಡಿದ ಜನ

    ಚಿಕ್ಕಬಳ್ಳಾಪುರ: ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುವ ವೇಳೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

    ಮೃತದೇಹವನ್ನ ಕುಟುಂಬಸ್ಥರು ಮೆರವಣಿಗೆ ಮೂಲಕ ಸ್ಮಶಾನದಲ್ಲಿ ತೆಗೆದುಕೊಂಡು ಹೋಗಿ ಶವ ಸಂಸ್ಕಾರದ ಸಿದ್ಧತೆಯನ್ನ ಮಾಡಿಕೊಳ್ತಿದ್ರು. ಈ ವೇಳೆ ಸ್ಮಶಾನದ ಮರದಲ್ಲಿದ್ದ ಹೆಜ್ಜೆನು ದಿಢೀರ್ ದಾಳಿ ನಡೆಸಿದೆ. ಪರಿಣಾಮ ಮೃತದೇಹವನ್ನ ಸ್ಮಶಾನದಲ್ಲೇ ಬಿಟ್ಟು ದಿಕ್ಕಾಪಾಲಾಗಿ ಜನ ಓಡಿ ಹೋಗಿದ್ದಾರೆ. ಜೇನು ನೋಣಗಳಿಂದ ಕಚ್ಚಿಸಿಕೊಂಡಿದ್ದ ಸುಮಾರು 15 ಜನ ತಕ್ಷಣ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನ ಪಡೆದಿದ್ದಾರೆ.

    ಇದೇ ವೇಳೆ ಸ್ಮಶಾನದಲ್ಲಿರುವ ಮರಗಳಲ್ಲಿ ಹೆಜ್ಜೆನುಗಳನ್ನ ತೆರವು ಮಾಡಿಲ್ಲ ಅಂತಾ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಸ್ಮಶಾನದಲ್ಲಿರುವ ಹೆಜ್ಜೇನು ತೆರವು ಮಾಡಲು ಮುಂದಾಗಿದ್ದು, ಮೃತನ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಬಿಟ್ಟು ಹೋಗಿದ್ದ ಮೃತದೇಹವನ್ನ ನಾಲ್ಕು ಜನ ಆಗಮಿಸಿ ಕೊನೆಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗ್ತಿದ್ದಾಗ ಬೈಕ್, ಟಿಪ್ಪರ್ ಡಿಕ್ಕಿ- ಸವಾರ ಸ್ಥಳದಲ್ಲೇ ದುರ್ಮರಣ

    ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗ್ತಿದ್ದಾಗ ಬೈಕ್, ಟಿಪ್ಪರ್ ಡಿಕ್ಕಿ- ಸವಾರ ಸ್ಥಳದಲ್ಲೇ ದುರ್ಮರಣ

    ಚಿಕ್ಕಬಳ್ಳಾಪುರ: ಪಲ್ಸರ್ ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿ ನಡೆದಿದೆ.

    ಆಂಧ್ರಪ್ರದೇಶದ ಅನಂತಪುರ ಮೂಲದ ರಾಕೇಶ್(23) ಮೃತ ಯುವಕ. ಇಂದು ಬೆಳಗ್ಗೆ ಒಂದೇ ಬೈಕ್‍ನಲ್ಲಿ ಮೂವರು ನಂದಿಬೆಟ್ಟಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೆಳ್ಳಂಬೆಳಗ್ಗೆ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಸರಿಯಾಗಿ ರಸ್ತೆ ಕಾಣದೆ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

    ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಶಕಗಳ ಕನಸು ಕೈಗೂಡೋ ಕಾಲ ಬಂದೇಬಿಡ್ತು- ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗೋರಿಗಿದು ಗುಡ್‍ನ್ಯೂಸ್

    ದಶಕಗಳ ಕನಸು ಕೈಗೂಡೋ ಕಾಲ ಬಂದೇಬಿಡ್ತು- ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗೋರಿಗಿದು ಗುಡ್‍ನ್ಯೂಸ್

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋರಿಗೆ ಒಂದು ಗುಡ್‍ನ್ಯೂಸ್. ಇನ್ಮುಂದೆ ಟೋಲ್ ಕಟ್ಟದೇ ನೀವು ನಿಲ್ದಾಣಕ್ಕೆ ಹೋಗಬಹುದು. ಇದು ದಶಕಗಳ ಕನಸಾಗಿದ್ದು, ಕೊನೆಗೂ ಕೈಗೂಡುವ ಕಾಲ ಬಂದಿದೆ.

    ದೇವನಹಳ್ಳಿ ಮಾರ್ಗವಾಗಿಯೇ ವಿಮಾನ ನಿಲ್ದಾಣಕ್ಕೆ ಹೋಗಬೇಕಿತ್ತು. ಅಲ್ಲಿ ಡಿಸೇಲ್, ಪೆಟ್ರೊಲ್ ಖರ್ಚಿಗಿಂತ ಟೋಲ್ ದುಡ್ಡೇ ಹೆಚ್ಚಾಗಿದೆ ಅಂತಾ ಎಲ್ಲರೂ ಪರಿತಪಿಸುತ್ತಿದ್ದರು. ಒಂದೆಡೆ ಟೋಲ್ ಬಿಸಿ, ಇನ್ನೊಂದೆಡೆ ಟ್ರಾಫಿಕ್ ಬಿಸಿಯಿಂದ ಜನರು ಒದ್ದಾಡುತ್ತಿದ್ದರು. ಆದರೆ ಸರ್ಕಾರ ವಿಮಾನ ನಿಲ್ದಾಣಕ್ಕೆ ಹೋಗಲು ಬೇರೊಂದು ಮಾರ್ಗದ ಸಿದ್ಧತೆ ಮಾಡಿಕೊಂಡಿದೆ. ಇನ್ನು ಒಂದು ವರ್ಷದೊಳಗೆ ಟೋಲ್ ಕಟ್ಟದೆ ಹೊಸ ರಸ್ತೆಯಲ್ಲಿ ಪ್ರಯಣ ಮಾಡಬಹುದು.

    ಪೂರ್ವ ಭಾಗ: ಹೆಣ್ಣೂರು ಮೂಲಕ – ಬಾಗಲೂರು ವೃತ್ತ – ಬಂಡಿಕೊಡಿಕೇಹಳ್ಳಿ – ಮೈಲಾನಹಳ್ಳಿ – ಬೇಗೂರು ಮಾರ್ಗವಾಗಿ ನೇರವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬಹುದು. ಬಳ್ಳಾರಿ ರಸ್ತೆ ಬಳಸಿ ಬರಬೇಕಾಗಿಲ್ಲ. ಜೊತೆಗೆ 9. 64 ಕಿಮೀ ದೂರ ಕಡಿಮೆಯಾಗಲಿದೆ.

    ಪಶ್ಚಿಮ ಭಾಗ: ಮಾಗಡಿ ರೋಡ್ – ಪೀಣ್ಯ – ಯಲಹಂಕ ಮೂಲಕ ವಿಮಾನ ನಿಲ್ದಾಣಕ್ಕೆ ಬರಬಹುದು. ಇನ್ನು ಕಂಠೀರವ ವೃತ್ತದ ಬಳಿ ರಸ್ತೆ ಅಭಿವೃದ್ದಿಯಾಗುತ್ತಿದ್ದು, ಜೊತೆಗೆ ಬಿಐಎಲ್ ಗಂಗಮ್ಮ ಸರ್ಕಲ್ ರಸ್ತೆ ಕೂಡ ಅಭಿವೃದ್ಧಿಯಾಗಲಿದೆ.

    ಸದ್ಯಕ್ಕೆ ರಸ್ತೆ ಅಭಿವೃದ್ಧಿ ಕೆಲಸ ಅಂತಿಮ ಹಂತಕ್ಕೆ ಬಂದಿದ್ದು, ಪರ್ಯಾಯ ಮಾರ್ಗದಿಂದ ಟೋಲ್ ಕಂಪನಿಗೆ ದಿನಕ್ಕೆ ಸುಮಾರು 50 ಲಕ್ಷ ರೂ. ನಷ್ಟವಾಗಲಿದೆ. ಏಕೆಂದರೆ ಪ್ರತಿದಿನ ಬರೋಬ್ಬರಿ 50 ಸಾವಿರ ವಾಹನ ಟೋಲ್ ಬಳಿ ಓಡಾಡುತ್ತಿದ್ದು, ವಾರ್ಷಿಕವಾಗಿ 19 ಲಕ್ಷ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.

    ದೇವನಹಳ್ಳಿ ಟೋಲ್ ಕಂಪನಿ ಈಗ ಈ ಯೋಜನೆ ಜಾರಿಗೆ ಬರಬಾರದು ಎಂದು, ಸಾತನೂರು ಪಕ್ಕದ ಹೊಸ ರಸ್ತೆಯ ಪಕ್ಕ ಬೆಸ್ಕಾಂ ಗ್ರಿಡ್ ಇದೆ. ಅಲ್ಲದೆ ಈ ರಸ್ತೆಯೊಳಗೆ ಪವರ್ ಲೈನ್ ಹಾದು ಹೋಗುವುದರಿಂದ ಏರ್ ಪೋರ್ಟ್‍ಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ವಿಮಾನ ಅಥಾರಿಟಿಯವರಿಗೆ ಹೇಳಿದ್ದಾರೆ. ಇದರಿಂದ ಅಥಾರಿಟಿ ಈ ಯೋಜನೆ ನಿಲ್ಲಿಸಿ, ಪರ್ಯಾಯ ರಸ್ತೆ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಯೋಜನೆ ದ್ವಂದ್ವದಲ್ಲಿದೆ ಎಂದು ಸಂಚಾರಿ ತಜ್ಞ ಶ್ರೀಹರಿ ತಿಳಿಸಿದ್ದಾರೆ.

  • ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    ಬೆಂಗಳೂರು: ಏರ್ಪೋಟ್ ರಸ್ತೆ ಮಧ್ಯೆದಲ್ಲಿಯೇ ಮಾರುತಿ 800 ಕಾರು ಇದ್ದಕ್ಕಿದ್ದಾಗೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಬಳಿಯ ಏರ್ಪೋಟ್ ಟೋಲ್ ಬಳಿ ನಡೆದಿದೆ.


    ಮಾರತ್ತಹಳ್ಳಿಯ ಜಗದೀಶ್ ಎಂಬವರು ತಮ್ಮ ಕಾರಿನಲ್ಲಿ ಬಳ್ಳಾರಿ ಕಡೆ ಹೋಗುತ್ತಿದ್ದರು. ದಾರಿ ಮಧ್ಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನವಯುಗ ಟೋಲ್ ಬಳಿ ಟಿಕೆಟ್ ತೆಗೆದು ಮುಂದೆ ಪ್ರಯಾಣ ಬೆಳೆಸಿದರು. ಆದರೆ ಟೋಲ್ ಮಧ್ಯೆಯೇ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಕಾರಿನಿಂದ ಕೆಳಗಿಳಿದ್ದಾರೆ.

    ನಂತರ ಕಾರು ಧಗಧಗನೆ ಉರಿಸಲು ಪ್ರಾರಂಭಿಸಿದೆ. ಇದನ್ನು ನೋಡಿ ಕೆಲ ಕಾಲ ಸ್ಥಳಿಯರಲ್ಲಿ ಆತಂಕ ಉಂಟಾಗಿತ್ತು. ಬೆಂಕಿಯ ತೀವ್ರತೆಗೆ ಕಾರು ಭಾಗಶಃ ಸುಟ್ಟು ಕರಕಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ದೇವನಹಳ್ಳಿ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಂಕಿ ಅವಘಡದಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.