Tag: ದೇವನಹಳ್ಳಿ

  • ಜಿಲ್ಲಾ ಉಸ್ತುವಾರಿ ಜಿಲ್ಲೆ ಸ್ಥಾನ ಬದಲಾಗುವ ನೀರಿಕ್ಷೆ ಇರಲಿಲ್ಲ: ಸುಧಾಕರ್

    ಜಿಲ್ಲಾ ಉಸ್ತುವಾರಿ ಜಿಲ್ಲೆ ಸ್ಥಾನ ಬದಲಾಗುವ ನೀರಿಕ್ಷೆ ಇರಲಿಲ್ಲ: ಸುಧಾಕರ್

    ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಜಿಲ್ಲೆ ಸ್ಥಾನ ಬದಲಾಗುವ ನೀರಿಕ್ಷೆ ಇರಲಿಲ್ಲ ಎಂದು ಆರೋಗ್ಯ ಸಚಿವ ಹಾಗೂ ನೂತನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಗ್ಗೆ ನನಗೆ ಬಹಳ ಅಭಿಮಾನವಿದೆ. ಜನರ ಹಿತವನ್ನು ಕಾಪಾಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

    ಉಸ್ತುವಾರಿಗಳ ಬದಲಾವಣೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಹಿನ್ನೆಡೆ ಆಗುವುದಿಲ್ಲ. ಈಗಾಗಲೇ ನಾವು ಮುಖ್ಯಮಂತ್ರಿಗಳ ತೀರ್ಮಾನದಂತೆ ನಾವು ಕರ್ತವ್ಯ ನಿರತರಾಗಿದ್ದೇವೆ. ಯಾರಿಗಾದರೂ ಅಸಮಾಧಾನ ಇದ್ದರೆ ಪಕ್ಷದ ಆಂತರಿಕ ವಿಚಾರ ಇರುವುದರಿಂದ ಕೆಲವರು ಅಲ್ಲಿ ಚರ್ಚೆ ಮಾಡಬಹುದು ಎಂದು ತಿಳಿಸಿದರು.

    ಕೋವಿಡ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ 4 ದಿನದಿಂದ ಬೆಂಗಳೂರಿನಲ್ಲಿ ಕಡಿಮೆ ಆಗುತ್ತಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ನಿಧಾನವಾಗಿ ಹೆಚ್ಚಿನ ಪ್ರಕರಣ ಕಂಡುಬರುತ್ತಿದೆ. ಆಸ್ಪತ್ರೆಗಳ ದಾಖಲಾತಿ 1-2 ರಷ್ಟು ಇದ್ದು, ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಇಲ್ಲ ಎಂದು ಮಾಹಿತಿ ನೀಡಿದರು.

    ಓಮಿಕ್ರಾನ್ ಪ್ರಭೇದದ ರೋಗ ಲಕ್ಷಣ ಕಡಿಮೆ ಇದೆ. ಎರಡು ಅಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಗುಣಮುಖರ ಸಂಖ್ಯೆ ಸಹ ಹೊಸ ಸೋಂಕಿತರಗಿಂತ ಹೆಚ್ಚಿದೆ. ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಟಫ್ ರೂಲ್ಸ್ ಅಗತ್ಯ ಇಲ್ಲ ಎಂದರು. ಇದನ್ನೂ ಓದಿ: ಅಧಿಕಾರದ ಆಸೆಗೆ ಬಿಜೆಪಿ ಬಗ್ಗೆ ಮಾತನಾಡುವುದು ಸಿದ್ದರಾಮಯ್ಯ, ಡಿಕೆಶಿಗೆ ಶೋಭೆಯಲ್ಲ: ಮುನೇನಕೊಪ್ಪ

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಬೇಕು ಎಂದ ಅವರು, ವಲಸಿಗ ಕಾಂಗ್ರೆಸ್ ಶಾಸಕರು ಮತ್ತೆ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಅವರನ್ನೇ ಕೇಳಿ ಯಾರು ಅವರ ಸಂಪರ್ಕದಲ್ಲಿದ್ದಾರೆ ಅಂತ ಹೇಳಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಆತ್ಮ ಗೌರವ ಇದ್ದವರು ಯಾರೂ ಕಾಂಗ್ರೆಸ್‍ಗೆ ವಾಪಸ್ ಹೋಗಲ್ಲ: ಬಿ.ಸಿ.ಪಾಟೀಲ್

  • ಪ್ರಿಯಕರನ ಜೊತೆ ಪ್ರಿಯತಮೆ ನೇಣಿಗೆ ಶರಣು

    ಪ್ರಿಯಕರನ ಜೊತೆ ಪ್ರಿಯತಮೆ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಗಂಡನನ್ನು ತೊರೆದು ಬಂದ ಮಹಿಳೆಯೋರ್ವಳು ತನ್ನ ಪ್ರಿಯಕರನ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

    ರಾಯಚೂರು ಮೂಲದ ಬಸವರಾಜು (28) ಹಾಗೂ ಜ್ಯೋತಿ (26) ಮೃತರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶಾಂತಿ ನಗರದಲ್ಲಿ ಈ ಘಟನೆ ನಡೆದಿದೆ. ಕಳೆದ 20 ದಿನಗಳ ಹಿಂದೆ ದೇವನಹಳ್ಳಿಯ ಶಾಂತಿ ನಗರದಲ್ಲಿ ಬಾಡಿಗೆ ಮನೆ ಪಡೆದು ಗಂಡ-ಹೆಂಡತಿ ಎಂದು ಇಬ್ಬರು ವಾಸವಾಗಿದ್ದರು. ಆದರೆ ಕಳೆದ ಭಾನುವಾರದಿಂದ ಮನೆಯಿಂದ ಇಬ್ಬರು ಹೊರಬಂದಿಲ್ಲ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಮನೆಯಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಅಕ್ಕ ಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಾಗಿಲು ತೆರೆದು ನೋಡಿದಾಗ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

  • ಮಳೆಗೆ ರಸ್ತೆ ಕಾಣದೇ ಬೆಂಗ್ಳೂರಲ್ಲಿ ಭೀಕರ ಅಪಘಾತ – ಏರ್ ಪೋರ್ಟ್ ರೋಡಲ್ಲಿ ಮೂವರು ದುರ್ಮರಣ

    ಮಳೆಗೆ ರಸ್ತೆ ಕಾಣದೇ ಬೆಂಗ್ಳೂರಲ್ಲಿ ಭೀಕರ ಅಪಘಾತ – ಏರ್ ಪೋರ್ಟ್ ರೋಡಲ್ಲಿ ಮೂವರು ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆಯ ಅವಾಂತರಗಳು ಮುಂದುವರಿದಿದೆ. ಭಾರೀ ವರ್ಷಧಾರೆಗೆ ಬೆಂಗಳೂರು ಏರ್ ಪೋರ್ಟ್ ರೋಡ್‍ನ ಬೆಟ್ಟಹಲಸೂರು ಕ್ರಾಸ್ ಬಳಿ ರಸ್ತೆ ಕಾಣದೆ ಡಿವೈರ್ ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಕಾರು ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಬೆಟ್ಟಹಲಸೂರು ಬಳಿಯ ಫ್ಲೈ ಓವರ್ ಮೇಲೆ ಅಪಘಾತ ಸಂಭವಿಸಿದೆ. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಳೆಯಿಂದಾಗಿ ರಸ್ತೆ ಕಾಣದೆ ಡಿವೈಡರ್‍ಗೆ ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿನ ಮೇಲೆ ಕಾರು ಬಿದ್ದಿದೆ. ಇದನ್ನೂ ಓದಿ: ತಿರುಪತಿಯಲ್ಲಿ ಪ್ರವಾಹ- ಜಲಪಾತದಂತೆ ಧುಮ್ಮಿಕ್ಕುತ್ತಿದೆ ಮಳೆ ನೀರು, ಕೊಚ್ಚಿ ಹೋಗ್ತಿವೆ ವಾಹನಗಳು!

    ಮಳೆ ಹಿನ್ನೆಲೆ ಕಾರಿನಲ್ಲಿದ್ದ ಮೃತದೇಹ ತೆಗೆಯಲು ಹರಸಾಹಸಪಟ್ರು. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ

  • 116.16 ಎಕರೆಯನ್ನು ಕೇವಲ 50 ಕೋಟಿಗೆ ಕೊಟ್ಟರೆ ಹೇಗೆ – ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    116.16 ಎಕರೆಯನ್ನು ಕೇವಲ 50 ಕೋಟಿಗೆ ಕೊಟ್ಟರೆ ಹೇಗೆ – ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಬೆಂಗಳೂರು: ನಾನು ಶಿಕ್ಷಣ ಸಂಸ್ಥೆ ನಡೆಸುತ್ತೇನೆ. ರಾಮಯ್ಯ, ಪಿಇಎಸ್ ಕಾಲೇಜ್ ಸೇರಿ ಇನ್ನೂ ಅನೇಕರು ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಇಂತಹ ಸಂಸ್ಥೆಗಳು ಖಾಸಗಿ ವಿವಿ ಮಾಡಲು ಅರ್ಹ. ಅದನ್ನು ಬಿಟ್ಟು ಅರ್ಹತೆಯಿಲ್ಲದವರಿಗೆ ಕಡಿಮೆ ಬೆಲೆಯಲ್ಲಿ ವಿವಿಗೆ ಜಾಗ ಕೊಡುವುದು ಸೂಕ್ತವಲ್ಲ ಎಂದು ಸರ್ಕಾರದ ವಿರುದ್ಧ ಡಿಕಿಶಿ ಗುಡುಗಿದ್ದಾರೆ.

    ಚಾಣಕ್ಯ ವಿವಿಗೆ ಭೂಮಿ ನೀಡುವ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರೋ 10 ಜನ ಸೇರಿ ಟ್ರಸ್ಟ್ ಮಾಡಿದ ಮಾತ್ರಕ್ಕೆ ವಿವಿ ಮಾಡಲು ಆಗಲ್ಲ. ಭೂಮಿ ಕೊಡುತ್ತಾರೆ, ಹಣ ಕೊಡುತ್ತಾರೆ ಅಂತ ಅವಕಾಶ ಕೊಡಲಾಗುವುದಿಲ್ಲ. ದೇವನಹಳ್ಳಿ ಬಳಿ ಎಕರೆಗೆ 10 ಕೋಟಿ ಬೆಲೆ ಬಾಳುತ್ತೆ? ಅಂತಹ ಜಾಗದಲ್ಲಿ 116.16 ಎಕರೆಯನ್ನು ಕೇವಲ 50 ಕೋಟಿಗೆ ಕೊಟ್ಟರೆ ಹೇಗೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    ಭೂಮಿಯನ್ನು ಕೊಡಲೇ ಬೇಕಾದರೆ ಮಾಗಡಿ ಬಳಿ ಕೊಡಲಿ. ಎಷ್ಟು ಆರ್‍ಎಸ್‍ಎಸ್ ಶಿಕ್ಷಣ ಸಂಸ್ಥೆಗಳಿವೆ ಎಂದು ನಮಗೂ ಗೊತ್ತು. ಈ ವಿವಿಗೂ ಆರ್‍ಎಸ್‍ಎಸ್ ಹೆಸರನ್ನೇ ನೇರವಾಗಿ ಇಡಿ. ಅದನ್ನು ಬಿಟ್ಟು ಹಿಂಬಾಗಿಲಿನಿಂದ ಯಾಕೆ ಈ ರೀತಿ ಮಾಡುತ್ತಿರಾ ಎಂದು ಸರ್ಕಾರಕ್ಕೆ ಟಾಂಗ್ ನೀಡಿದರು. ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ

    ಸುದ್ದಿಗೋಷ್ಠಿಯಲ್ಲಿ ಮಾತಿನ ನಡುವೆ ಭೂಮಿಯ ಬೆಲೆ ಸಿದ್ದರಾಮಯ್ಯ ಅವರಿಗೆ ಅಷ್ಟೊಂದು ಗೊತ್ತಿಲ್ಲ ಅನಿಸುತ್ತೆ. ಅಲ್ಲಿ ಎಕರೆಗೆ ಹತ್ತು ಕೋಟಿ ಬಾಳುತ್ತೆ ಎಂದು ಡಿಕೆಶಿ ಹೇಳಿದರು. ಆಗ ಪಕ್ಕದಲ್ಲೆ ಕುಳಿತಿದ್ದ ಸಿದ್ದರಾಮಯ್ಯ ಅದೆಲ್ಲಾ ನನಗೆ ಗೊತ್ತಾಗಲ್ಲ, ನನಗೆ ಭೂಮಿ ಮಾರಾಟದ ಬಗ್ಗೆ ಗೊತ್ತಿಲ್ಲ ಎಂದು ಗೊಣಗಿದ್ದಾರೆ. ಸಿದ್ದರಾಮಯ್ಯ ಗೊಣಗಾಟಕ್ಕೆ ಅಕ್ಕಪಕ್ಕದಲ್ಲಿದ್ದ ಶಾಸಕರು ನಗೆಗಡಲಲ್ಲಿ ತೇಲಾಡಿದ್ದಾರೆ.

  • ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

    ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

    – ಪ್ರತಿ ಕೆಲಸಕ್ಕೂ ಒಂದೊಂದು ಅಮೌಂಟ್ ಫಿಕ್ಸ್!

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಬೆಸ್ಕಾಂ ಸಹಾಯಕ ಕಾರ್ಯನಿರ್ವಾರ್ಹಕ ಅಧಿಕಾರಿ ಶ್ರೀನಿವಾಸ್ ಮಂತ್ರೋಡಿ ಲಂಚಾವತಾರ ಇದೀಗ ಬಟ ಬಯಲಾಗಿದೆ.

    ಎಇಇ ಶ್ರೀನಿವಾಸ್ ಮಂತ್ರೋಡಿಗೆ ಪ್ರತಿ ಫೈಲ್ ಗೆ ಸಹಿ ಹಾಕಬೇಕಂದ್ರೆ ಲಂಚ ನೀಡಬೇಕು. ಲಂಚ ನೀಡದಿದ್ದರೆ ಕೆಲಸವೇ ಆಗಲ್ಲವಂತೆ. ಇನ್ನೂ ಬಹುಮಟ್ಟಡಿ ಕಟ್ಟಡಕ್ಕೆ ವಿದ್ಯುತ್ ಪಡೆಯಬೇಕಾದರೇ ಕೆಲಸವೇ ಇಲ್ಲಿ ಆಗೋದಿಲ್ಲ. ಎಇಇ ಖಾಸಗಿಯಾಗಿ ನೇಮಕಗೊಂಡಿರೋ ಗುತ್ತಿಗೆದಾರರು ಹೋದರೆ ಮಾತ್ರ ಕೆಲಸ ಆಗುತ್ತಂತೆ. ಮುಖ್ಯವಾಗಿ ಪ್ರತಿಯೊಂದು ಫೈಲ್ ಗೂ ಸಹಿಗೆ ಈತ ಇಂತಿಷ್ಟು ಅಂತ ಲಂಚವನ್ನ ನಿಗದಿಪಡಿಸಿರುವ ಆರೋಪ ಕೇಳಿ ಬಂದಿದೆ.

    ಅಧಿಕಾರಿಯ ಲಂಚದ ಮೆನು
    * 1 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 300 ರೂ.
    * 2 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 600 ರೂ.
    * 3-4 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 1200 ರೂ.
    * ರೈತರ ತೋಟದಲ್ಲಿ ಒಂದು ಕಂಬ ಹಾಕಲು 1,000 ರೂ.
    * ಮೂರು ಕಂಬ ಹಾಕಿದ್ರೆ 3 ಸಾವಿರ ರೂ
    * 25 ವ್ಯಾಟ್ ಟ್ರಾನ್ಸಫಾರ್ಮಾಗೆ 5 ಸಾವಿರ ರೂ.
    * 100 ವ್ಯಾಟ್ ಟ್ರಾನ್ಸಫಾರ್ಮಾಗೆ 15 ಸಾವಿರ ರೂ.

    ಹೀಗೆ ಒಂದೊಂದು ಕೆಲಸಕ್ಕೂ ಲಂಚವನ್ನ ನಿಗದಿ ಮಾಡಿದ್ದು, ಹಣ ಕೊಟ್ಟರೆ ಮಾತ್ರ ಆ ಫೈಲ್ ಗಳಿಗೆ ಸೈನ್ ಮಾಡ್ತಾರೆ. 11 ತಿಂಗಳ ಹಿಂದೆ ದೇವನಹಳ್ಳಿ ಎಇಇ ಆಗಿ ನೇಮಕಗೊಂಡ ಶ್ರೀನಿವಾಸ್, ಯಾರೇ ಮನೆಗೆ ಮೀಟರ್ ಸೇರಿದಂತೆ ಟ್ರಾನ್ಸ್ ಪಾರ್ಮ್ ಪಡೆಯಬೇಕಂದ್ರು ಪರಿಶೀಲನೆಗೆ ಅವರ ಹಿಂಬಾಲಕರನ್ನ ಕಳಿಸೋದು. ಮನೆಗಳ ಬಳಿ ಹೋಗುವ ಖಾಸಗಿ ಗುತ್ತಿಗೆದಾರರು ಅದು ಸರಿ ಇಲ್ಲ, ಇದು ಸರಿಯಲ್ಲ ಅಂತಾ ಹೇಳಿ ವಾಪಸ್ ಬರುತ್ತಾರೆ. ಆಗ ಎಇಇ ಬಳಿ ಬಂದು ಹಣವನ್ನ ಕೊಟ್ಟು ಫೈಲ್‍ಗೆ ಸಹಿ ಮಾಡಸಬೇಕು ಎಂಬ ಆರೋಪಗಳಿವೆ.

    ವೀಡಿಯೋದಲ್ಲಿ ಏನಿದೆ?:
    ಅಧಿಕಾರಿ ಸರ್ಕಾರಿ ಕೆಲಸ ಮಾಡೋದು ಬಿಟ್ಟು, ಗುತ್ತಿಗೆ ಕೆಲಸ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರೋದನ್ನು ರೈತರು ಹಾಗೂ ಕೆಲವರು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಫೈಲ್ ಅಧಿಕಾರಿ ಮುಂದೆ ಇಟ್ಟು, ಲಂಚದ ಹಣ ಪಕ್ಕದ ಡ್ರಾಯರ್ ನಲ್ಲಿ ಹಾಕಬೇಕು. ನಂತರ ಡ್ರಾಯರ್ ನಲ್ಲಿ ಹಣ ಎತ್ತಿಕೊಂಡು ಎಣಿಸಿ, ಜೇಬಿನಲ್ಲಿ ಇಟ್ಟುಕೊಂಡು ಎಇಇ ಸಹಿ ಮಾಡುತ್ತಿರೋ ದೃಶ್ಯಗಳು ಸೆರೆಯಾಗಿದೆ. ಇದನ್ನೂ ಓದಿ: ದುಬಾರಿಯಾದ ಪೆಟ್ರೋಲ್ – ಕಳ್ಳತನಕ್ಕಿಳಿದ ಯುವಕರು

    ಹೀಗಾಗಿ ಇಂತಹ ಅಧಿಕಾರಿಯನ್ನ ಕೂಡಲೇ ಅಮಾನತು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ದೇವನಹಳ್ಳಿ ಬೆಸ್ಕಾಂನಲ್ಲಿರೋ ಎಇಇ ಶ್ರೀನಿವಾಸ್ ಮಂತ್ರೋಡಿಯ ಲಂಚವತಾರ ಎಲ್ಲೆಡೆ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಯ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ವಿಜಯಪುರದ ಯೋಧ ಹುತಾತ್ಮ

  • ಇಂದು ತಮಿಳುನಾಡಿಗೆ ಚಿನ್ನಮ್ಮ – ಗ್ರ್ಯಾಂಡ್ ವೆಲ್‍ಕಮ್‍ಗೆ ಬೆಂಬಲಿಗರು ಸಜ್ಜು

    ಇಂದು ತಮಿಳುನಾಡಿಗೆ ಚಿನ್ನಮ್ಮ – ಗ್ರ್ಯಾಂಡ್ ವೆಲ್‍ಕಮ್‍ಗೆ ಬೆಂಬಲಿಗರು ಸಜ್ಜು

    ಬೆಂಗಳೂರು: 4 ವರ್ಷಗಳ ಬಳಿಕ ತಮಿಳುನಾಡಿಗೆ ಮನ್ನಾರ್ ಗುಡಿ ಚಿನ್ನಮ್ಮ ಇಂದು ವಾಪಸ್ ಆಗಲಿದ್ದಾರೆ.

    ರಾಹುಕಾಲ ನೋಡಿಕೊಂಡು ದೇವನಹಳ್ಳಿ ರೆಸಾರ್ಟ್‍ನಿಂದ ನಿರ್ಗಮಿಸಲಿದ್ದಾರೆ. ಚಿನ್ನಮ್ಮನ ಸ್ವಾಗತಕ್ಕೆ ರೆಸಾರ್ಟ್ ಬಳಿ ಬೆಂಬಲಿಗರು ಈಗಾಗಲೇ ಜಮಾಯಿಸಿದ್ದಾರೆ. ಅತ್ತಿಬೆಲೆಯಲ್ಲಿ ಶಶಿಕಲಾ ಅದ್ದೂರಿ ಸ್ವಾಗತಕ್ಕೆ ಅನುಮತಿ ನಿರಾಕರಿಸಲಾಗಿದೆ. ರೆಸಾರ್ಟ್‍ನಿಂದ ನೇರವಾಗಿ ತಮಿಳುನಾಡು ಗಡಿ ತಲುಪಲಷ್ಟೇ ಅವಕಾಶ ನೀಡಲಾಗಿದ್ದು, ರೆಸಾರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಶಶಿಕಲಾ ತಮಿಳುನಾಡು ಎಂಟ್ರಿ ಆಗ್ತಿದ್ದಂತೆ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದೆ. ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲಿಗರು ಚೆನ್ನೈಗೆ ಕರೆದೊಯ್ಯಲಿದ್ದಾರೆ. ಕರ್ನಾಟಕ ಗಡಿಯಿಂದ ಹೊಸೂರು, ಚೆನ್ನೈ ಮಾರ್ಗದಲ್ಲಿ ಮೆರವಣಿಗೆಯ ಭವ್ಯ ಸ್ವಾಗತ ಕೋರಲಾಗುತ್ತದೆ.

    ಸುಮಾರು 60 ಕಡೆ ಬೆಂಬಲಿಗರು ಶಶಿಕಲಾಗೆ ಸ್ವಾಗತ ಕೋರಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಶಶಿಕಲಾ ಬರಮಾಡಿಕೊಳ್ಳಲು ಸುಮಾರು 5 ಸಾವಿರ ಜನ ಸೇರುವ ಸಾಧ್ಯತೆ ಇದೆ.

  • ತಿಂಡಿ ಆಸೆ ತೋರಿಸಿ ಅಪ್ರಾಪ್ತೆಯನ್ನು ಮಗಳ ಮನೆಯಲ್ಲೇ ಅತ್ಯಾಚಾರವೆಸಗಿದ ವ್ಯಕ್ತಿ!

    ತಿಂಡಿ ಆಸೆ ತೋರಿಸಿ ಅಪ್ರಾಪ್ತೆಯನ್ನು ಮಗಳ ಮನೆಯಲ್ಲೇ ಅತ್ಯಾಚಾರವೆಸಗಿದ ವ್ಯಕ್ತಿ!

    – 62 ವರ್ಷದ ವ್ಯಕ್ತಿಯ ಬಂಧನ
    – ಬೆಂಗ್ಳೂರಿನ ದೇವನಹಳ್ಳಿಯಲ್ಲಿ ನಡೆದಿದ್ದ ಘಟನೆ

    ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ನವೆಂಬರ್ 24ರಂದು ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿ ತನ್ನ ಮಗಳ ಮನೆಯಲ್ಲಿ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ. ದೇವಾಲಯವೊಂದರ ಅರ್ಚಕನಾಗಿರುವ ಈತ ದೇವನಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಪಕ್ಕ ಗಂಡನ ಜೊತೆ ವಾಸವಾಗಿರುವ ತನ್ನ ಮಗಳ ಮನೆಗೆ ತೆರಳಿದ್ದನು.

    ಮಗಳ ಪತಿಯೂ ಚೌಡೇಶ್ವರಿ ದೇಗುಲದ ಅರ್ಚಕನಾಗಿದ್ದಾನೆ. ಹೀಗಾಗಿ ಎಂದಿನಿಂತೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದನು. ನವೆಂಬರ್ 24ರಂದು ಸಂಜೆ 4.30ರ ಸುಮಾರಿಗೆ ವೆಂಕಟರಮಣಪ್ಪ ಮಗಳ ಮನೆಯ ಹೊರಗಡೆ ಬಾಲಕಿಯೊಬ್ಬಳು ಆಟವಾಡುತ್ತಿದ್ದುದನ್ನು ನೋಡಿದ್ದಾನೆ. ವರದಿಗಳ ಪ್ರಕಾರ, ಬಾಲಕಿಯ ಕುಟುಂಬವು ಹತ್ತಿರದಲ್ಲಿಯೇ ವಾಸವಾಗಿದೆ. ಆಕೆಯ ತಂದೆ ಅಂಗಡಿಯೊಂದನ್ನು ನಡೆಸುತ್ತಿದ್ದು, ಈ ಮೂಲಕ ಕುಟುಂಬದ ಬಂಡಿ ಸಾಗುತ್ತಿತ್ತು ಎಂದು ಪೊಲೀಸ್ ಉಪ ಆಯುಕ್ತ ಸಿ.ಕೆ ಬಾಬಾ ತಿಳಿಸಿದ್ದಾರೆ.

    ಬಾಲಕಿ ಆಟವಾಡುತ್ತಿದ್ದುದನ್ನು ಕಂಡ ವೆಂಕಟರಮಣಪ್ಪ, ತಿಂಡಿಯ ಆಸೆ ತೋರಿಸಿ ಮನೆಗೆ ಕರೆದಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇತ್ತ ಆಟವಾಡಲು ಹೋದ ಬಾಲಕಿ ಬಹಳ ಹೊತ್ತಾದರೂ ಮನೆಗೆ ವಾಪಸ್ಸಾಗದಿದ್ದರಿಂದ ಆತಂಕಗೊಂಡು ಆಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ದೇವಸ್ಥಾನದ ಹೊರಗಡೆ ಹೂವು ಮಾರುತ್ತಿದ್ದ ಮಹಿಳೆ, ಬಾಲಕಿ ಅರ್ಚಕರ ಮನೆಗೆ ಹೋಗುತ್ತಿರುವುದನ್ನು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಕುಟುಂಬ ಅರ್ಚಕನ ಮನೆಗೆ ತೆರಳಿದೆ. ಈ ವೇಳೆ ಬಾಲಕಿ ಅಳುತ್ತಾ ಮನೆಯಿಂದ ಹೊರಗಡೆ ಬಂದಿದ್ದಾಳೆ.

    ಮನೆಯವರನ್ನು ಕಂಡ ಕೂಡಲೇ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಇತ್ತ ಬಾಲಕಿಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

    ಸಿಸಿಟಿವಿ ದೃಶ್ಯಾವಳಿ ಹಾಗೂ ಹೂವು ಮಾರುತ್ತಿದ್ದ ಮಹಿಳೆಯ ಹೇಳಿಕೆ ಆಧಾರದ ಮೇಲೆ ಪೊಲೀಸರು ವೆಂಕಟರಮಣಪ್ಪನನ್ನು ಬಂಧಿಸಿದ್ದಾರೆ. ಅಲ್ಲದೆ ಐಪಿಸಿ ಸೆಕ್ಷನ್ ಪೊಕ್ಸೋ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದಿಢೀರ್ ಸ್ಥಳ ಬದಲಾವಣೆ – ದೇವನಹಳ್ಳಿಗೆ ಜೆಡಿಎಸ್ ಶಾಸಕರು ಶಿಫ್ಟ್

    ದಿಢೀರ್ ಸ್ಥಳ ಬದಲಾವಣೆ – ದೇವನಹಳ್ಳಿಗೆ ಜೆಡಿಎಸ್ ಶಾಸಕರು ಶಿಫ್ಟ್

    ಬೆಂಗಳೂರು: ಶಾಸಕರ ಸರಣಿ ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕರು ಕೊಡಗಿನ ರೆಸಾರ್ಟ್‍ಗೆ ಹೋಗಲು ಸಕಲ ಸಿದ್ಧತೆ ನಡೆದಿತ್ತು. ಆದರೆ ಈಗ ದಿಢೀರ್ ನಿರ್ಧಾರ ಬದಲಾವಣೆ ಮಾಡಿ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ತಂಗಿದ್ದಾರೆ.

    ಆಪರೇಷನ್ ಕಮಲದ ಭೀತಿಯಿಂದ ತಮ್ಮ ಶಾಸಕರನ್ನು ರಕ್ಷಿಸಲು ಸೋಮವಾರಪೇಟೆ ತಾಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟ್‍ನಲ್ಲಿ ತಂಗಲು ರೂಂ ಬುಕ್ ಮಾಡಿದ್ದರು. ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಂ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಮಡಿಕೇರಿಗೆ ಪ್ರಯಾಣ ಮಾಡಲು ತುಂಬ ಸಮಯ ಬೇಕು ಮತ್ತು ಏನಾದರೂ ದಿಢೀರ್ ಬದಲಾವಣೆಯಾದರೆ ತಕ್ಷಣ ಬೆಂಗಳೂರಿಗೆ ಬರುವುದು ಕಷ್ಟ ಎಂಬ ಕಾರಣಕ್ಕೆ ಹತ್ತಿರದ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟಿಗೆ ಜೆಡಿಎಸ್ ಹೋಗಿದ್ದಾರೆ ಎನ್ನಲಾಗಿದೆ. ಶಾಸಕರು ತಂಗಿರುವ ರೆಸಾರ್ಟಿಗೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

    ಡಾ.ಶ್ರೀನಿವಾಸ್ ಮೂರ್ತಿ, ಸುರೇಶ್ ಗೌಡ, ಬಂಡೆಪ್ಪ ಕಾಶಂಪೂರ್, ನಾಗನಗೌಡ ಕಂದಕೂರು, ಗೌರಿ ಶಂಕರ್, ವೆಂಕಟರಾವ್ ನಾಡಗೌಡ, ನಿಸರ್ಗ ನಾರಾಯಣಸ್ವಾಮಿ, ರಾಜಾ ವೆಂಕಟಪ್ಪ ನಾಯಕ, ಸಾರಾ ಮಹೇಶ್, ಸುರೇಶ್ ಗೌಡ, ಸತ್ಯ ನಾರಾಯಣ, ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ, ಪುಟ್ಟರಾಜು, ಡಿಸಿ ತಮ್ಮಣ್ಣ, ಲಿಂಗೇಶ್, ಮಹದೇವ್, ಬಾಲಕೃಷ್ಣ. ಮನಗೂಳಿ, ಎಚ್.ಕೆ.ಕುಮಾರಸ್ವಾಮಿ, ಕೃಷ್ಣಾ ರೆಡ್ಡಿ ರೆಸಾರ್ಟಿನಲ್ಲಿ ತಂಗಿದ್ದಾರೆ.

    ರವೀಂದ್ರ ಶ್ರೀಕಂಠಯ್ಯ, ಮಂಜುನಾಥ, ಅನಿತಾ ಕುಮಾರಸ್ವಾಮಿ, ಮಾಗಡಿ ಮಂಜುನಾಥ್, ಎಚ್.ಡಿ.ರೇವಣ್ಣ, ಎಟಿ ರಾಮಸ್ವಾಮಿ, ಜಿಟಿ ದೇವೇಗೌಡ, ಶ್ರೀನಿವಾಸ ಗೌಡ, ಶಿವಲಿಂಗೇಗೌಡ, ಅಶ್ವಿನ್ ಕುಮಾರ್, ಎಂ ಶ್ರೀನಿವಾಸ್ ಗೈರಾಗಿದ್ದಾರೆ.

  • 120 ಡಿಗ್ರಿ ಜ್ವರ ಬಂದಿದ್ರೂ ವ್ಹೀಲ್‍ಚೇರ್ ನಲ್ಲಿ ಸಿಎಂ,ಡಿಸಿಎಂ ಟಿಪ್ಪು ಜಯಂತಿಗೆ ಹೋಗ್ಬೇಕಿತ್ತು- ವಾಟಾಳ್

    120 ಡಿಗ್ರಿ ಜ್ವರ ಬಂದಿದ್ರೂ ವ್ಹೀಲ್‍ಚೇರ್ ನಲ್ಲಿ ಸಿಎಂ,ಡಿಸಿಎಂ ಟಿಪ್ಪು ಜಯಂತಿಗೆ ಹೋಗ್ಬೇಕಿತ್ತು- ವಾಟಾಳ್

    ಬೆಂಗಳೂರು/ ಚಿಕ್ಕಬಳ್ಳಾಪುರ: ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಗೈರು ಆಗಿರುವುದು ನನಗೆ ಬಹಳ ಬೇಸರ ತಂದಿದೆ. ಅವರು ಇಬ್ಬರೂ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. 120 ಡಿಗ್ರಿ ಜ್ವರ ಬಂದಿದ್ದರೂ ವ್ಹೀಲ್ ಚೇರ್ ನಲ್ಲಾದ್ರೂ ಕಾರ್ಯಕ್ರಮಕ್ಕೆ ಹೋಗಲೇಬೇಕಿತ್ತು ಅಂತ ಕನ್ನಡ ಚಳುವಳಿ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಹೇಳಿದ್ದಾರೆ.


    ಟಿಪ್ಪು ಜನ್ಮಸ್ಥಳ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಟಿಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಬಾಗಿಯಾಗುತ್ತಿದ್ದರೆ ಅವರ ಘನತೆ ಗಾಂಭೀರ್ಯ ಇನ್ನಷ್ಟೂ ಹೆಚ್ಚಾಗುತ್ತಿತ್ತು. ಅವರು ಹೋಗದೇ ಇರುವುದು ಸರಿಯಲ್ಲ. ಅವರ ಬಗ್ಗೆ ನನಗೆ ಗೌರವ ಇದೆ ಆದ್ರೆ ಯಾರೂ ಸಲಹೆ ಕೊಟ್ಟರೋ ಗೊತ್ತಿಲ್ಲ. ಅವರು ಸಾಮಾನ್ಯರಲ್ಲ ಈ ರಾಜ್ಯದ ಮುಖ್ಯಮಂತ್ರಿಗಳು. ಸಿಎಂ ದೇಶಭಕ್ತನ ಸಮಾರಂಭಕ್ಕೆ ಹೋಗದಿದ್ರೆ ನೋವಾಗುತ್ತೆ ಅಂತ ವಾಟಾಳ್ ಅಸಮಾಧಾನ ಹೊರಹಾಕಿದರು.

    ಸಿಎಂ ಕುಮಾರಸ್ವಾಮಿ ಬಹಳ ತಪ್ಪು ಮಾಡಿದಂತಾಗುತ್ತೆ. ಸಿಎಂ ತಪ್ಪು ದಾರಿಯನ್ನ ಹಿಡಿದಂತಾಗುತ್ತೆ. ಹೀಗಾಗಿ ಕಾರ್ಯಕ್ರಮಕ್ಕೆ ಹೋಗದೇ ಇರುವುದು ಸರಿಯಾದ ಕ್ರಮ ಅಲ್ಲ. ಡಿಸಿಎಂ ಸಹ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಿಎಂ-ಡಿಸಿಎಂ ಈ ರೀತಿ ನಡೆದರೆ ಇದು ರಾಜ್ಯ ಆಗೋದಿಲ್ಲ. ರಾಜ್ಯದ ಅಧಿಕಾರ ಹಿಡಿದವರು ಜನತೆಯನ್ನ ಗೊಂದಲಕ್ಕೀಡು ಮಾಡಬಾರದು ಅಂತ ಹೇಳಿದ ಅವರು ತಮ್ಮ ಅಧಿಕಾರವನ್ನ ಪ್ರಾಮಾಣಿಕವಾಗಿ ಮಾಡುವಂತೆ ಒತ್ತಾಯಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಈ ನಕಲಿ ಪೊಲೀಸ್ ಗ್ಯಾಂಗ್‍ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್

    ಈ ನಕಲಿ ಪೊಲೀಸ್ ಗ್ಯಾಂಗ್‍ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್

    -ಗೋಲ್ಡ್ ಬಿಸ್ಕಟ್ ಕೊಡ್ತೀನಿ ಅಂತಾ ಹೇಳಿ ಕಿಡ್ನ್ಯಾಪ್ ಮಾಡ್ತಾರೆ

    ಚಿಕ್ಕಬಳ್ಳಾಪುರ: ಚಿನ್ನದ ವ್ಯಾಪಾರಿಯನ್ನ ಅಪಹರಣ ಮಾಡಿ ಅವರ ಬಳಿ ಇದ್ದ ಹಣ ಸುಲಿಗೆ ಮಾಡಿದ್ದ ನಕಲಿ ಪೊಲೀಸರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಆರ್.ಟಿ ಮಣಿ (45), ಸಂಪಂಗಿರಾಮ್(38), ಶ್ರೀನಿವಾಸ್(48), ರಾಮಾಂಜಿನೇಯ ರೆಡ್ಡಿ(28), ಸುರೇಶ್(42), ಆರ್ ಸೋಮು (52), ಜಿ ವೇಣುಗೋಪಾಲ್(40) ಬಂಧಿತರು. ಬಂಧಿತರಿಂದ 9 ಎಂಎಂ ನ ಪಿಸ್ತೂಲು, 10 ಜೀವಂತ ಗುಂಡುಗಳು ಹಾಗೂ 25 ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ: ಮೂಲತಃ ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಧರಣಿಧರನ್ ಎಂಬವರಿಗೆ ಕರೆ ಮಾಡಿದ್ದ ಆರೋಪಿಗಳು ತಮ್ಮ ಬಳಿ ಚಿನ್ನದ ಬಿಸ್ಕೆಟ್ ಇವೆ. ಮಾರಾಟ ಮಾಡುತ್ತೇವೆ ಎಂದು ದೇವನಹಳ್ಳಿಗೆ ಕರೆಸಿಕೊಂಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ದೇವನಹಳ್ಳಿ ಬಂದ ಧರಣಿಧರನ್ ಅವರನ್ನು ಸೆ. 19 ರಂದು ದೇವನಹಳ್ಳಿಯ ರೈಲ್ವೇ ಟ್ರ್ಯಾಕ್ ಬಳಿ ಅಪಹರಣ ಮಾಡಿ, ಅವರ ಬಳಿ ಇದ್ದ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು. ಅಚ್ಚರಿ ಅಂದರೆ ಆರೋಪಿಗಳು ಪೊಲೀಸ್ ವಾಹನ ಮಾದರಿಯ ಬೊಲೇರೊ ಜೀಪ್ ಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಚಿನ್ನದ ವ್ಯಾಪಾರಿ ಧರಣಿಧರನ್ ರನ್ನು ಅಪಹರಣ ಮಾಡಿದ್ದರು.

    ಈ ಕುರಿತು ಧರಣಿಧರನ್ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಸಹ ಇದೇ ಮಾದರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಕೃತ್ಯದ ಬಗ್ಗೆ ಅನುಮಾನಗೊಂಡು ಹಳೆಯ ಗ್ಯಾಂಗ್ ಬಗ್ಗೆ ತನಿಖೆ ನಡೆಸಿದ ವೇಳೆ ಏಳು ಮಂದಿ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್: ಹಣಕ್ಕಾಗಿ ಚಿನ್ನದ ವ್ಯಾಪಾರಿಗಳನ್ನು ಕಿಡ್ನಾಪ್ ಮಾಡಿ ಹಣ ದರೋಡೆ ಮಾಡುವುದೇ ಇವರ ಕೆಲಸವಾಗಿತ್ತು. ಅದೇ ರೀತಿ ಧರಣಿಧರನ್ ಅವರಿಗೂ ಫೋನ್ ಮಾಡಿದ ಆರೋಪಿಗಳು ಮೊದಲು ಅಸಲಿ ಚಿನ್ನದ ನಾಣ್ಯವನ್ನು ತೋರಿಸಿ ಧರಣಿಧರ್ ಅವರನ್ನು ನಂಬಿಸಿದರು. ಬಳಿಕ ಹೆಚ್ಚಿನ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ಪೊಲೀಸ್ ವೇಷದಲ್ಲಿ ಅಪಹರಣ ಮಾಡಿದ್ದರು.

    ಅಪಹರಣ ಮಾಡಿದ ಬಳಿಕ ಧರಣಿಧರ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಬಳಿಕ ಪೊಲೀಸ್ ಬೋರ್ಡ್ ಇರುವ ಬುಲೆರೋ ವಾಹನದಲ್ಲಿ ವಿಜಯಪುರ ರಸ್ತೆಯಲ್ಲಿ ಧರಣಿದರನ್ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದು, ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv