Tag: ದೇವದಾಸ್ ಕಾಪಿಕಾಡ್

  • ಧ್ವನಿ ನೀಡಿ ಟ್ರೈಲರ್ ರಿಲೀಸ್ ಮಾಡಿದ ಶರಣ್

    ಧ್ವನಿ ನೀಡಿ ಟ್ರೈಲರ್ ರಿಲೀಸ್ ಮಾಡಿದ ಶರಣ್

    ವಿ.ರವಿಕುಮಾರ್ ನಿರ್ಮಾಣದಲ್ಲಿ ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಮೂಡಿಬಂದಿರುವ  ‘ಪುರುಷೋತ್ತಮನ‌ ಪ್ರಸಂಗ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  ಖ್ಯಾತ ನಟ ಶರಣ್ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

    ಪರುಷೋತ್ತಮನ ಪ್ರಸಂಗ ಶೀರ್ಷಿಕೆಯೇ ಮನ ಮುಟ್ಟುವಂತಿದೆ ಎಂದು ಮಾತನಾಡಿದ ನಟ ಶರಣ್, ಪುರುಷೋತ್ತಮ ಎಂದರೆ ರಾಮ. ಆ ರಾಮನ ಹೆಸರಿನಲ್ಲಿ ಬರುತ್ತಿರುವ ಈ ಚಿತ್ರ  ಖಂಡಿತವಾಗಿಯೂ ಗೆಲ್ಲುತ್ತದೆ. ಇನ್ನು ಟ್ರೈಲರ್ ನೋಡಿದಾಗ ಅಜಯ್ ಅವರು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಅನಿಸುವುದಿಲ್ಲ.‌ ಅಷ್ಟು ಚೆನ್ನಾಗಿ ಅಜಯ್(ನಿರ್ಮಾಪಕ ರವಿಕುಮಾರ್ ಅವರ ಪುತ್ರ) ಅಭಿನಯಿಸಿದ್ದಾರೆ. ನಾನು ಟ್ರೈಲರ್ ಗೆ ಧ್ವನಿ ನೀಡಿದ್ದೇನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದರು.

    ಇದೊಂದು ಉತ್ತಮ ಹಾಸ್ಯ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ತಂದೆ ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರವಿದು. ನಾನು ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ಅರ್ಜುನ್ ಕಾಪಿಕಾಡ್.

    ನಾನು ಈ ಚಿತ್ರದಲ್ಲಿ ಪುರುಷೋತ್ತಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ನನಗೆ ಮೊದಲಿನಿಂದಲೂ ರಂಗಭೂಮಿಯ ನಂಟು. ಟೊರಾಂಟೊ ಯೂನಿವರ್ಸಿಟಿಯಲ್ಲಿ ನಟನೆ ಕುರಿತು ಅಭ್ಯಾಸ ಮಾಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ ಎಂದು ನಾಯಕ ಅಜಯ್ ತಿಳಿಸಿದರು.  ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಧನ್ಯವಾದ. ಪರಿಶುದ್ಧ ಮನೋರಂಜನೆಯ ಈ ಚಿತ್ರ ಮಾರ್ಚ್ ಒಂದರಂದು ತೆರೆಗೆ ಬರುತ್ತಿದೆ‌. ದುಬೈ, ಕತಾರ್ ನಲ್ಲೂ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ಸಹ ನಿರ್ಮಾಪಕ ಶಂಶುದ್ದೀನ್. ನಿರ್ಮಾಪಕ ರವಿಕುಮಾರ್ ಹಾಗೂ ನಾಯಕಿ ರಿಷಿಕಾ ನಾಯ್ಕ್ ಚಿತ್ರದ ಕುರಿತು ಮಾತನಾಡಿದರು.

  • ದೇವದಾಸ್ ಕಾಪಿಕಾಡ್ ನಿರ್ದೇಶನದ ಹಾಡು ಮೆಚ್ಚಿಕೊಂಡ ಫ್ಯಾನ್ಸ್

    ದೇವದಾಸ್ ಕಾಪಿಕಾಡ್ ನಿರ್ದೇಶನದ ಹಾಡು ಮೆಚ್ಚಿಕೊಂಡ ಫ್ಯಾನ್ಸ್

    ವಿ. ರವಿಕುಮಾರ್ ನಿರ್ಮಿಸಿರುವ, ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ (Devadas Kapikad) ನಿರ್ದೇಶನದ ಮೊದಲ ಕನ್ನಡ ಚಿತ್ರ ‘ಪುರುಷೋತ್ತಮನ‌ ಪ್ರಸಂಗ’ (Purushottama Parsanga) . ಇತ್ತೀಚಿಗೆ ಈ ಚಿತ್ರದ ‘ಅಚ್ಚುಮೆಚ್ಚು ನಿನ್ನ ಕಂಡರೆ’ ಎಂಬ ಸುಂದರ ಯುಗಳಗೀತೆ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ಜನಪ್ರಿಯ ಸಾಹಿತಿ ಜಯಂತ ಕಾಯ್ಕಿಣಿ ಈ ಹಾಡನ್ನು ರಚಿಸಿದ್ದಾರೆ.

    ನಕುಲ್ ಅಭಯಂಕರ್ ಸಂಗೀತ ನೀಡಿ, ತಾವೇ ಹಾಡಿದ್ದಾರೆ. ಈ ಸುಂದರ ಗೀತೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ.

    ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರದ ನಾಯಕನಾಗಿ ಅಜಯ್ ಅಭಿನಯಿಸಿದ್ದಾರೆ. ರಿಷಿಕಾ ನಾಯ್ಕ್ ಮತ್ತು ದೀಪಿಕಾ ‘ಪುರುಷೋತ್ತಮನ ಪ್ರಸಂಗ’ ಚಿತ್ರದ ನಾಯಕಿಯರು.  ದೇವದಾಸ್ ಕಾಪಿಕಾಡ್,  ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ,ಜ್ಯೋತಿಷ್ ಶೆಟ್ಟಿ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.

    ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರೆ ಚಿತ್ರಕ್ಕೆ ಕಥೆ,  ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಕಾಪಿಕಾಡ್ ಈ ಚಿತ್ರದ ಸಹ ನಿರ್ದೇಶಕರು. ವಿಷ್ಣು ಅವರ ಛಾಯಾಗ್ರಹಣವಿರುವ ಪುರುಷೋತ್ತಮನ ಪ್ರಸಂಗ ಚಿತ್ರಕ್ಕೆ ನಕುಲ್ ಅಭಯ್ ಸಂಗೀತ ನೀಡಿದ್ದಾರೆ. ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್ ಅವರು ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂದೀಪ್ ಶೆಟ್ಟಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಸಹ ನಿರ್ಮಾಪಕರು ಅಬೂಬಕರ್ ಪುತ್ತಾಕ.

  • ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ ದೇವದಾಸ್ ಕಾಪಿಕಾಡ್

    ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ ದೇವದಾಸ್ ಕಾಪಿಕಾಡ್

    ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ  ‘ಪುರುಷೋತ್ತಮನ‌ ಪ್ರಸಂಗ’ ಚಿತ್ರ ಸಿದ್ದವಾಗಿದೆ. ಈ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

    ತುಳುವಿನಲ್ಲಿ ಒಂಭತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ ಎಂದು ಮಾತನಾಡಿದ ನಿರ್ದೇಶಕ ದೇವದಾಸ್ ಕಾಪಿಕಾಡ್, ಕನ್ನಡದಲ್ಲಿ ನನಗೆ ಮೊದಲ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಪುರುಷೋತ್ತಮನ ಪ್ರಸಂಗ ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ. ಪುರುಷೋತ್ತಮನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಹೇಳಿಮಾಡಿಸಿದ ನಟ ಅಜಯ್. ಹೊರದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ. ರಿಷಿಕಾ ನಾಯ್ಕ್ ಈ ಚಿತ್ರದ ನಾಯಕಿ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ನಾನು ಕೂಡ ನಟಿಸಿದ್ದೇನೆ. ನನ್ನ ಮಗ ಅರ್ಜುನ್ ಸಹ ನಿರ್ದೇಶನ ಮಾಡಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನದಲ್ಲಿ ನಾಲ್ಕು ಹಾಡುಗಳು ಮೂಡಿಬಂದಿದೆ. ಜಯಂತ ಕಾಯ್ಕಿಣಿ, ದೊಡ್ಡರಂಗೇ ಗೌಡ, ವಿ.ನಾಗೇಂದ್ರ ಪ್ರಸಾದ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ವಿಷ್ಣು ಈ ಚಿತ್ರದ ಛಾಯಾಗ್ರಾಹಕರು. ಮಂಗಳೂರು ಹಾಗೂ ದುಬೈನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ತಿಳಿಸಿದರು.

    ನಾನು ಈ ಹಿಂದೆ ಕಿಸ್, ಮೆಹಬೂಬ, ನಾಟ್ ಔಟ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ನಟಿಸಿರುವ ಮೊದಲ. ಚಿತ್ರವಿದು. ತುಳು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರವೂ ಚೆನ್ನಾಗಿದೆ ಎಂದರು ನಾಯಕ ಅಜಯ್.

    ನಾಯಕಿ ರಿಷಿಕಾ ನಾಯ್ಕ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕರಾದ ವಿ.ರವಿಕುಮಾರ್, ಶಂಶುದ್ದೀನ್ ಚಿತ್ರದ ಕುರಿತು ಮಾತನಾಡಿದರು. ಶರ್ಮಿಳಾ ಕಾಪಿಕಾಡ್ ಚಿತ್ರಕ್ಕೆ ಶುಭ ಹಾರೈಸಿದರು.

  • ಏಪ್ರಿಲ್ 14 ರಂದು ‘ಗೌಜಿ ಗಮ್ಮತ್’ ತುಳು ಸಿನಿಮಾ ರಿಲೀಸ್

    ಏಪ್ರಿಲ್ 14 ರಂದು ‘ಗೌಜಿ ಗಮ್ಮತ್’ ತುಳು ಸಿನಿಮಾ ರಿಲೀಸ್

    ಮೋವಿನ್ ಫಿಲಂಸ್ ಲಾಂಛನದಲ್ಲಿ ಮೋಹನ್ ಭಟ್ಕಳ್, ವಿನಾಯಕ್ ತೀರ್ಥಹಳ್ಳಿ ನಿರ್ಮಾಣದಲ್ಲಿ, ಮಣಿ ಎಜೆ ಕಾರ್ತಿಕೇಯನ್  ನಿರ್ದೇಶನದಲ್ಲಿ ತಯಾರಾದ ‘ಗೌಜಿ ಗಮ್ಮತ್’ (Gauji Gammath) ತುಳು ಸಿನಿಮಾ ಏಪ್ರಿಲ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.  ಮಂಗಳೂರು, ಉಡುಪಿ, ಮಣಿಪಾಲ, ಪಡುಬಿದ್ರೆ, ಪುತ್ತೂರು, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ತುಳುರಂಗಭೂಮಿಯ ಹಿರಿಯ ನಟ ದೇವದಾಸ್ ಕಾಪಿಕಾಡ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಗೌಜಿ ಗಮ್ಮತ್ ಸಿನಿಮಾ ಹಾಸ್ಯ ಮನರಂಜನೆಯ ಚಿತ್ರವಾಗಿದ್ದು,  ಈಗಿನ ಪೀಳಿಗೆ ಇಷ್ಟ ಪಡುವ ಕತೆಯನ್ನು ಇಲ್ಲಿ ಹಾಸ್ಯಭರಿತವಾಗಿ ನಿರ್ದೇಶಕರು ಹೆಣೆದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವೂ ಈ ಸಿನಿಮಾದಲ್ಲಿದೆ ಎನ್ನುತ್ತಾರೆ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಮೋಹನ್ ಭಟ್ಕಳ್. ಗೌಜಿ ಗಮ್ಮತ್ ಹೆಸರು ಸೂಚಿಸುವಂತೆ ಇದು ಹಾಸ್ಯ ಪ್ರಧಾನ ಸಿನಿಮಾ. ಪ್ರೇಕ್ಷಕರ ನಾಡಿಮಿಡಿತವನ್ನು ಅರಿತು ನಿರ್ದೇಶಕ ಮಣಿ ಎಜೆ ಕಾರ್ತಿಕೇಯನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ ಸಂಭಾಷಣೆಯನ್ನು ಸಂದೀಪ್ ಬೆದ್ರ ಬರೆದಿದ್ದಾರೆ.

    ತಾರಾಬಳಗದಲ್ಲಿ ಖ್ಯಾತ ನಾಮ ಕಲಾವಿದರಿದ್ದಾರೆ. ಮುಖ್ಯವಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ (Devdas Kapikad). ಕುಸಲ್ದರಸೆ  ನವೀನ್ ಡಿ ಪಡೀಲ್ (Naveen D Padil),   ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ (Arvind Bolar) ಪ್ರಮುಖ ಪಾತ್ರದಲ್ಲಿದ್ದಾರೆ.  ನಾಯಕ  ನಟನಾಗಿ  ಕರ್ಣ ಉದ್ಯಾವರ್  ನಾಯಕಿಯಾಗಿ  ಸ್ವಾತಿ ಪ್ರಕಾಶ್  ಶೆಟ್ಟಿ ಅಭಿನಯಿಸಿದ್ದಾರೆ.

    ಇನ್ನುಳಿದಂತೆ ಪ್ರಸನ್ನ ಶೆಟ್ಟಿ ಬೈಲೂರ್,  ಉಮೇಶ್ ಮಿಜಾರ್,   ಜಯಶೀಲಾ ಮರೋಳಿ, ಪ್ರಭಾಕರ್ ಬ್ರಹ್ಮಾವರ,  ಚಂದ್ರಹಾಸ ಶೆಟ್ಟಿ ಮಾಣಿ , ಸುಜಾತ ಶಕ್ತಿನಗರ,  ಕಿಶೋರ್ ಶೆಟ್ಟಿ ಪಿಲಾರ್,  ಹರೀಶ್ ಪೂಜಾರಿ ಕಡ್ತಲ,  ಹರೀಶ್ಚಂದ್ರ ಪೆರಾಡಿ ಪ್ರಭಾಕರ್ ಆಚಾರ್‍ಯ ಮೂಡುಬೆಳ್ಳೆ,  ಅಶ್ವತ್ ಶೆಟ್ಟಿ ವಿಕ್ಕಿ ರಾವ್ ಮಿರ್ಚಿ ಸಂದೇಶ್ ದೇವಾಡಿಗ ಅಶ್ವತ್ಥಪುರ ಶಿವರಾಮ್ ವಿಟ್ಲ ರಾಧಿಕಾ ಭಟ್  ವನಿತಾ ಸುವರ್ಣ ನರಸಿಂಹ ನಾಯಕ್, ರಶ್ಮಿತಾ ಸಾಲಿಯಾನ್ ಪಿಲಾರ್ ಸುರಕ್ಷಾ ಕೋಟ್ಯಾನ್ ಪಿಲಾರ್ , ಲೊಕೇಶ್ ಮಾಣಿಲ  ಅನುಷಾ ಶೆಟ್ಟಿ ,  ಬೇಬಿ ಚಿತ್ರಿತಾ ದೇವಾಡಿಗ ಹಳೆಯಂಗಡಿ  , ಲೊಕೇಶ್ ಶೆಟ್ಟಿ  , ಜ್ಞಾನೇಶ್ ಆಚಾರ್ಯ, ಶಶಿರಾಜ್ ಆಚಾರ್ಯ  ಮಧು ಪೂಜಾರಿ ವಿಷ್ಣುನಗರ ನಿಲೇಶ್ ಶೆಟ್ಟಿ ಮೊದಲಾದವರಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಮಣಿಕಾಂತ್ ಕೆ.ಎನ್., ಜಯಶೀಲ ಮರೋಳಿ, ನಿರ್ಮಾಪಕರಾದ ವಿನಾಯಕ ತೀರ್ಥಹಳ್ಳಿ, ಮೋಹನ್ ಭಟ್ಕಳ್, ನಾಯಕಿ ಸ್ವಾತಿ ಪ್ರಕಾಶ್ ಶೆಟ್ಟಿ, ಖ್ಯಾತ ರಂಗಭೂಮಿ ಕಲಾವಿದರಾದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್ ಮತ್ತಿತರರು ಉಪಸ್ಥಿತರಿದ್ದರು.