Tag: ದೇವಕಿ

  • ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

    ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

    ಶರೀರವಾಣಿಯ ಭಯ, 6 ಮಕ್ಕಳ ಹತ್ಯೆ, ತಂಗಿಗೆ ಸೆರೆವಾಸ, ಕೊನೆಗೆ ಕೃಷ್ಣನಿಂದ (Krishna) ಹತ್ಯೆ. ಪುರಾಣದಲ್ಲಿ ಕೃಷ್ಣ ಮತ್ತು ಕಂಸನ (Kamsa) ಕಥೆ ಬಹಳ ರೋಚಕ. ಹುಟ್ಟುವ ಮೊದಲೇ ಸಾಯಿಸಲು ಮುಂದಾಗಿದ್ದ ಕಂಸ ಕೃಷ್ಣ ಹುಟ್ಟಿದ ನಂತರವೂ ಸಾಕಷ್ಟು ಕಾಟ ಕೊಡುತ್ತಾನೆ. ಕೊನೆಗೆ ವಿಧಿ ಲಿಖಿತದಂತೆ ಕೃಷ್ಣನಿಂದಲೇ ಸಾವನ್ನಪ್ಪುತ್ತಾನೆ.

    ಮಥುರೆಯ ರಾಜನಾದ ಕಂಸ, ತನ್ನ ತಂಗಿ ದೇವಕಿಯಯನ್ನು (Devaki) ವಸುದೇವನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ವಿವಾಹದ ಅನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ,”ದೇವಕಿಯ 8ನೇ ಮಗನಿಂದ ನಿನಗೆ ಮರಣ ಬರಲಿದೆ” ಎಂಬ ಅಶರೀರವಾಣಿಯೊಂದು ಕೇಳಿಸುತ್ತದೆ. ಅಶರೀರವಾಣಿ ಕೇಳಿ ಭಯಗೊಂಡ ಕಂಸ ತಂಗಿ, ಬಾವರನ್ನೇ ಕೊಲ್ಲಲು ಮುಂದಾಗುತ್ತಾನೆ. ಈ ವೇಳೆ ಪ್ರಾಣ ಭಿಕ್ಷೆ ಕೇಳಿದ ದಂಪತಿ, ಇದು ನ್ಯಾಯಸಮ್ಮತವಲ್ಲ, 8ನೇ ಮಗು ಹುಟ್ಟಿದ ಮೇಲೆ ಅದನ್ನು ನಿನಗೆ ತಂದುಕೊಡುತ್ತೇವೆ ಎಂದು ಹೇಳುತ್ತಾರೆ.

    ದೇವಕಿಯ ಮಕ್ಕಳಿಂದಲೇ ಮೃತ್ಯು ಎಂದು ತಿಳಿದು ದೇವಕಿ ಮತ್ತು ವಸುದೇವನನ್ನ (Vasdeva) ಅರಮನೆಯ ಸೆರೆಮನೆಯಲ್ಲಿ (Jail) ಇರಿಸುತ್ತಾನೆ. ದೇವಕಿ 6 ಮಕ್ಕಳನ್ನು ಹೆತ್ತರೂ ಕಂಸ ಆ ಮಕ್ಕಳನ್ನು ಬೆಳೆಸುತ್ತಿರುತ್ತಾನೆ. ಈ ವೇಳೆ ನಾರದರು ಬಂದು ಮುಂದೆ ಈ ಮಕ್ಕಳು ಹುಟ್ಟುವ 8ನೇ ಮಗುವಿನೊಂದಿಗೆ ಸೇರಿ ನಿನ್ನನ್ನು ಕೊಲ್ಲಲು ಮುಂದಾದರೆ ಏನು ಮಾಡುತ್ತೀಯಾ ಎಂದು ಕೇಳುತ್ತಾರೆ. ಇದರಿಂದ ಭಯಗೊಂಡು ಕಂಸ ಆ 6 ಮಂದಿ ಮಕ್ಕಳನ್ನು ಹತ್ಯೆ ಮಾಡುತ್ತಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ಕಂಸನ ಕೃತ್ಯದಿಂದ ದು:ಖಿತಳಾದ ದೇವಕಿ 7ನೇ ಬಾರಿ ಗರ್ಭ ಧರಿಸುತ್ತಾಳೆ. ಈ ಬಾರಿ ದೇವಕಿ ಮತ್ತು ವಸುದೇವ ವಿಷ್ಣುವಿನ ಮೊರೆ ಹೋಗುತ್ತಾರೆ. ಈ ವೇಳೆ ವಿಷ್ಣು ಯೋಗಮಾಯೆ ಶಕ್ತಿ ಬಳಸಿ ದೇವಕಿ ಗರ್ಭದಲ್ಲಿನ ಪಿಂಡವನ್ನು ತೆಗೆದು ರೋಹಿಣಿಯ ಸ್ತ್ರೀ ಗರ್ಭದಲ್ಲಿ ಇರಿಸುತ್ತಾನೆ. ರೋಹಿಣಿ ಹೊಟ್ಟೆಯಲ್ಲಿ ಹುಟ್ಟುವ ಮಗುವೇ ಬಲರಾಮ. 7ನೇ ಮಗು ಹುಟ್ಟದ್ದನ್ನು ಕಂಡು ದೇವಕಿಗೆ ಗರ್ಭಪಾತವಾಯಿತು ಎಂದು ಕಂಸ ಅಂದುಕೊಳ್ಳುತ್ತಾನೆ.

    ದೇವಕಿ 8ನೇ ಮಗುವಿಗೆ ಗರ್ಭವತಿಯಾಗುತ್ತಿದ್ದಂತೆಯೇ ಕಾರಾಗೃಹದ ಸುತ್ತಾ ಸೈನಿಕರನ್ನು ನಿಯೋಜಿಸಿದ. ಬಹಳ ಎಚ್ಚರವಾಗಿರಬೇಕೆಂದು ತನ್ನ ಸೈನಿಕರಿಗೆ ಸೂಚಿಸಿದ್ದ. ಹೇಗೂ 8ನೇ ಮಗುವನ್ನು ಕಂಸ ಸಾಯಿಸುತ್ತಾನೆ. ಅದರ ಬದಲು ನಾನೇ ಮಗುವನ್ನು ಸಾಯಿಸುತ್ತೇನೆ ಎಂದು ದೇವಕಿ ಹೊಟ್ಟೆಗೆ ಬಡಿಯಲು ಆರಂಭಿಸುತ್ತಾಳೆ. ಈ ವೇಳೆ ವಿಷ್ಣು ದೇವರು ಪ್ರತ್ಯಕ್ಷವಾಗಿ, ನಾನು ನಿನ್ನ ಹೊಟ್ಟೆಯಲ್ಲಿ 8ನೇ ಮಗುವಾಗಿ ಜನಿಸಬೇಕೆಂದುಕೊಂಡಿದ್ದೇನೆ ಎಂದು ಹೇಳುತ್ತಾನೆ.

    ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದ ರಾತ್ರಿ ದೇವಕಿಗೆ ಜೋರಾಗಿ ಹೆರಿಗೆ ನೋವು ಪ್ರಾರಂಭವಾಗುತ್ತದೆ. ಮಧ್ಯರಾತ್ರಿ ಮಗು ಜನಿಸುತ್ತದೆ. ಮಗು ಜನಿಸುತ್ತಿದ್ದಂತೆ ಜೈಲಿನಲ್ಲಿ ಕಾವಲು ಕಾಯುತ್ತಿದ್ದ ಸೈನಿಕರು ನಿದ್ದೆಗೆ ಜಾರುತ್ತಾರೆ. ಸೆರೆಮನೆಯ ಬಾಗಿಲುಗಳು ತಾನಾಗಿಯೇ ತೆರೆಯುತ್ತದೆ. ಈ ಸಂದರ್ಭದಲ್ಲಿ ವಸುದೇವನ ಕನಸಿನಲ್ಲಿ ವಿಷ್ಣು ಬರುತ್ತಾನೆ. ನಿನಗೆ ಹುಟ್ಟಿದ 8ನೇ ಮಗುವನ್ನು ಗೋಕುಲದಲ್ಲಿರುವ ನಂದ ಮತ್ತು ಯಶೋಧೆಗೆ ನೀಡಬೇಕು. ಅವರಿಗೆ ಹುಟ್ಟಿದ ಹೆಣ್ಣು ಮಗುವನ್ನು ನೀನು ಪಡೆಯಬೇಕು ಎಂದು ಹೇಳುತ್ತಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು

    ವಿಷ್ಣುವಿನ ಆದೇಶದಂತೆ ವಸುದೇವನು ತಲೆಮೇಲೆ ಬುಟ್ಟಿಯಲ್ಲಿ ಮಗುವನ್ನು ಹೊತ್ತು ರಾತ್ರಿ ಹೊರಡುತ್ತಾನೆ. ಅಂದು ರಾತ್ರಿ ಭಾರೀ ಮಳೆ ಸುರಿದಿದ್ದರಿಂದ ಯುಮುನಾ ನದಿ ಉಕ್ಕಿ ಹರಿಯುತ್ತಿರುತ್ತಾಳೆ. ನದಿಯಲ್ಲಿ ತಲೆಯವರೆಗೂ ನೀರು ಬಂದರೂ ವಸುದೇವ ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದನು. ಈ ವೇಳೆ ಒಂದು ಪವಾಡವೇ ನಡೆಯಿತು. ಯಮುನಾ ಎರಡು ಭಾಗವಾಗಿ ಮಧ್ಯಬಾಗದಲ್ಲಿ ಅವರಿಗೆ ದಾರಿ ಮಾಡಿಕೊಟ್ಟಿತು. ಗೋಕುಲವನ್ನು ತಲುಪಿದ ವಸುದೇವನು ಯಶೋಧೆಯ ಮಡಿಲಲ್ಲಿ ತನ್ನ ಮಗುವನ್ನು ಮಲಗಿಸಿ ಅಲ್ಲಿ ಯಶೋಧೆಗೆ ಆಗ ತಾನೇ ಜನಿಸಿದ ಹೆಣ್ಣು ಮಗುವಿನೊಂದಿಗೆ ಮಥುರೆಗೆ ಮರಳುತ್ತಾನೆ.

    ದೇವಕಿ 8ನೇ ಮಗುವಿಗೆ ಜನ್ಮ ನೀಡಿದ್ದನ್ನು ಕೇಳಿ ಆಮಗುವನ್ನು ಕೊಲ್ಲಲು ಮುಂದಾಗುತ್ತಾನೆ. ಈ ವೇಳೆ ಆ ಹಣ್ಣು ಮಗು ಆಕಾಶಕ್ಕೆ ಹಾರಿ ನಿನ್ನನ್ನು ಹತ್ಯೆ ಮಾಡಲಿರುವ ಮಗು ಬೇರೆ ಕಡೆ ಬೆಳೆಯುತ್ತಿದೆ ಎಂದು ಹೇಳಿ ಮಾಯವಾಗುತ್ತದೆ. ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆ ಎಂದು ತಿಳಿದು ಕಂಸ ನಾನಾ ರಾಕ್ಷಸರನ್ನು ಕಳುಹಿಸುತ್ತಾನೆ. ಕೃಷ್ಣ ಆ ರಾಕ್ಷಸರನ್ನು ಕೊಂದು ಕೊನೆಗೆ ಕಂಸನನ್ನು ಬಾಲ್ಯದಲ್ಲೇ ಕೊಲ್ಲುತ್ತಾನೆ.

     

  • ಬ್ಲಿಂಕ್ ಸಿನಿಮಾದಲ್ಲಿ ಗಾಯಕಿ ಚೈತ್ರಾ ಆಚಾರ್: ದೇವಕಿ ಝಲಕ್ ರಿಲೀಸ್

    ಬ್ಲಿಂಕ್ ಸಿನಿಮಾದಲ್ಲಿ ಗಾಯಕಿ ಚೈತ್ರಾ ಆಚಾರ್: ದೇವಕಿ ಝಲಕ್ ರಿಲೀಸ್

    ಶ್ರೀನಿಧಿ (Srinidhi) ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಬ್ಲಿಂಕ್’. ಈಗಾಗಲೇ ಟೀಸರ್ ಮೂಲಕ ಬ್ಲಿಂಕ್ (Blink) ಸಿನಿಮಾ ಗಮನ ಸೆಳೆದಿದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು,  ಚೈತ್ರಾ ಜೆ ಆಚಾರ್ (Chaitra Achar)ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರಾಗಿ ನಟಿಸಿದ್ದಾರೆ. ಇಂದು ನಾಯಕಿ ಚೈತ್ರಾ ಜೆ ಆಚಾರ್ ಹುಟ್ಟುಹಬ್ಬ ಆ ಪ್ರಯುಕ್ತ ‘ಬ್ಲಿಂಕ್’ ಚಿತ್ರತಂಡ ಚಿತ್ರದಲ್ಲಿನ ಚೈತ್ರಾ ಜೆ ಆಚಾರ್ ಪಾತ್ರದ ಸಣ್ಣ ಝಲಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭ ಹಾರೈಸಿದೆ.

    ‘ಮಹಿರಾ’, ‘ಆ ದೃಶ್ಯ’, ತಲೆದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ‘ಬ್ಲಿಂಕ್’ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 90ರ ದಶಕದ ಸೆಮಿ ಮಾಡ್ರೆನ್ ಹಳ್ಳಿ ಹುಡುಗಿಯಾಗಿ ದೇವಕಿ ಅರಸ್ ಪಾತ್ರ ನಿಭಾಯಿಸಿದ್ದಾರೆ.  ದೇವಕಿ ಅರಸ್ ಚಿತ್ರದಲ್ಲಿ ತುಂಬಾ ಮಾತನಾಡುವ, ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ ಎಂದು ಚಿತ್ರದ ನಿರ್ದೇಶಕ ಶ್ರೀನಿಧಿ ತಿಳಿಸಿದ್ದಾರೆ. ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ಜನನಿ ಪಿಚ್ಚರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ಗಾಯಕಿ ಹಾಗೂ ನಟಿಯಾಗಿರುವ ಚೈತ್ರಾ ಜೆ ಆಚಾರ್ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಸ್ಟ್ರಾಬೆರಿ’ ಸೇರಿದಂತೆ ಹಲವು ಸಿನಿಮಾ ಅವಕಾಶಗಳು ಇವರ ಕೈಯಲ್ಲಿವೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಸೋಜುಗಾದ ಸೂಜಿಮಲ್ಲಿಗೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.

    ‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ಹೊಸ ಪ್ರತಿಭೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಚಿತ್ರತಂಡ ಹಂಚಿಕೊಳ್ಳಲಿದೆ.

  • ಜಡಿಮಳೆಯಲ್ಲೇ ಬರ್ತಾಳಂತೆ ಹಾರರ್ ದೇವಕಿ!

    ಜಡಿಮಳೆಯಲ್ಲೇ ಬರ್ತಾಳಂತೆ ಹಾರರ್ ದೇವಕಿ!

    ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿ, ಯುವ ಪ್ರತಿಭೆ ಲೋಹಿತ್ ನಿರ್ದೇಶನ ಮಾಡಿರುವ ಚಿತ್ರ ದೇವಕಿ. ಈ ಹಿಂದೆ ಇದೇ ಲೋಹಿತ್ ಮಮ್ಮಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿಯೂ ಪ್ರಿಯಾಂಕಾ ಅವರೇ ನಟಿಸಿದ್ದರು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರಿಂದ ದೇವಕಿಯ ಬಗ್ಗೆ ಎಲ್ಲೆಡೆ ಕ್ಯೂರಿಯಾಸಿಟಿ ಶುರುವಾಗಿದೆ. ಇದೀಗ ಈ ಚಿತ್ರ ಬಿಡುಗಡೆ ಕೊಂಚ ಮುಂದಕ್ಕೆ ಹೋಗಿದ್ದರೂ ಜುಲೈ ತಿಂಗಳಲ್ಲಿ ದೇವಕಿಯ ದರ್ಶನವಾಗೋದು ಗ್ಯಾರೆಂಟಿ.

    ಚಿತ್ರತಂಡವೇ ಈ ವಿಚಾರವನ್ನು ಜಾಹೀರು ಮಾಡಿದೆ. ಇದೇ ತಿಂಗಳ 28ರಂದು ದೇವಕಿಯನ್ನು ಥೇಟರಿಗೆ ಕರೆತರಲು ನಿರ್ದೇಶಕ ಲೋಹಿತ್ ಯೋಜನೆ ಹಾಕಿಕೊಂಡಿದ್ದರು. ಆದರೆ ರುಸ್ತುಂ ಚಿತ್ರ ಜೂನ್ ಹದಿನಾಲಕ್ಕನೇ ತಾರೀಕಿನಿಂದ ಪೋಸ್ಟ್‍ಪೋನ್ ಆಗಿ 28ಕ್ಕೆ ಬಿಡುಗಡೆಯಾಗಲು ತಯಾರಾಗಿದೆ. ರುಸ್ತುಂ ರಿಲೀಸಿಂಗ್ ಡೇಟು ಫಿಕ್ಸಾಗುತ್ತಲೇ ಲೋಹಿತ್ ದೇವಕಿಯನ್ನು ಜುಲೈ ಮೊದಲ ವಾರದಲ್ಲಿ ತೆರೆಗೆ ತರಲು ನಿರ್ಧಾರ ಮಾಡಿದ್ದಾರೆ.

    ಈಗಾಗಲೇ ದೇವಕಿ ಚಿತ್ರದ ಬಗ್ಗೆ ಎಲ್ಲ ವರ್ಗಗಳ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ. ಪೋಸ್ಟರ್, ಟೀಸರ್ ಮತ್ತು ಟ್ರೈಲರ್ ಮೂಲಕ ದೇವಕಿಯ ಹವಾ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಮೊದಲ ಚಿತ್ರ ಮಮ್ಮಿಯ ಮೂಲಕವೇ ಪುಷ್ಕಳ ಗೆಲುವನ್ನು ತನ್ನದಾಗಿಸಿಕೊಂಡಿದ್ದ ಲೋಹಿತ್ ದೇವಕಿಯ ಮೂಲಕ ಅದನ್ನು ಮುಂದುವರೆಸೋ ಉತ್ಸಾಹದಿಂದಿದ್ದಾರೆ. ಆರಂಭದಲ್ಲಿ ಹೌರಾ ಬ್ರಿಡ್ಜ್ ಅಂತಿದ್ದ ಈ ಚಿತ್ರವೀಗ ದೇವಕಿಯಾಗಿ ರೂಪಾಂತರ ಹೊಂದಿದೆ.

    ಇದು ವಿಶೇಷ ಕಥೆ ಹೊಂದಿರೋ ಹಾರರ್ ಚಿತ್ರ. ಹಾರರ್ ಅಂದಾಕ್ಷಣ ಸಿದ್ಧ ಸೂತ್ರಗಳ ಪ್ರೇತ ಬಾಧೆ ಈ ಚಿತ್ರದ್ದು ಅಂದುಕೊಳ್ಳುವಂತಿಲ್ಲ. ಇದು ಹಾರರ್ ಜಾನರಿನಲ್ಲಿಯೇ ಮೈಲಿಗಲ್ಲಾಗುವಂಥಾ ನವೀನ ಶೈಲಿಯ ನಿರೂಪಣೆಯನ್ನು ಹೊಂದಿದೆಯಂತೆ. ಇದರ ಬಹುಭಾಗದ ಚಿತ್ರೀಕರಣ ಕೊಲ್ಕತ್ತಾದ ವಿಶೇಷ ಸ್ಥಳಗಳಲ್ಲಿ ನಡೆದಿದೆ. ತಾಂತ್ರಿಕವಾಗಿಯೂ ಹೊಸತನ ಹೊಂದಿರೋ ದೇವಕಿ ಇದೇ ಜುಲೈ ತಿಂಗಳ ಜಡಿಮಳೆಯ ಒಡ್ಡೋಲಗದಲ್ಲಿ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾಳೆ.

  • ಮುಂಗಾರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾಳೆ `ದೇವಕಿ’!

    ಮುಂಗಾರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾಳೆ `ದೇವಕಿ’!

    ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಹೌರಾಬ್ರಿಡ್ಜ್ ಎಂಬ ಚಿತ್ರ ದೇವಕಿಯಾಗಿ ಶೀರ್ಷಿಕೆ ಬದಲಾಯಿಸಿಕೊಂಡಿರೋದು ಗೊತ್ತೇ ಇದೆ. ಲೋಹಿತ್ ನಿರ್ದೇಶನದ ಈ ಚಿತ್ರ ಆರಂಭ ಕಾಲದಿಂದಲೂ ಸಕಾರಾತ್ಮಕವಾಗಿ ಸುದ್ದಿಯಾಗುತ್ತಾ ಬಂದಿದೆ. ಈ ಹಿಂದೆ ಮಮ್ಮಿ ಎಂಬ ಹಿಟ್ ಚಿತ್ರ ನೀಡಿದ್ದ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ದೇವಕಿಯ ಮೂಲಕ ಮತ್ತೊಂದು ಗೆಲುವು ದಾಖಲಿಸುವ ಉತ್ಸಾಹದಿಂದಿದ್ದಾರೆ.

    ಯುವ ನಿರ್ದೇಶಕ ಲೋಹಿತ್ ಮಮ್ಮಿ ಎಂಬ ಹಾರರ್ ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದರು. ಈ ಮೂಲಕವೇ ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಅವರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದರು.

    ಪ್ರಿಯಾಂಕಾ ಎರಡನೇ ಸಲವೂ ಲೋಹಿತ್ ನಿರ್ದೇಶನದ ದೇವಕಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಲು ಮನಸು ಮಾಡಿರೋದೇ ಕಥೆಯ ಕಾರಣಕ್ಕಾಗಿಯಂತೆ. ಅವರು ಯಾವ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡಿದ್ದರೋ, ಅದನ್ನು ನಿವಾಳಿಸಿ ಎಸೆಯುವಂಥಾ ವಿಶೇಷತೆಗಳೊಂದಿಗೇ ದೇವಕಿ ಚಿತ್ರ ರೂಪುಗೊಂಡಿದೆ.

    ಕಥೆಯ ವಿಚಾರ ಹಾಗಿರಲಿ. ಚಿತ್ರೀಕರಣಗೊಂಡ ದೃಷ್ಟಿಯಿಂದಲೂ ದೇವಕಿ ಹಲವಾರು ವಿಶೇಷತೆಗಳು, ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ಉಳಿಕೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರೋ ದೇವಕಿ ಚಿತ್ರ ಉಳಿದೆಲ್ಲ ಅಂಶಗಳೊಂದಿಗೆ ಮನಮಿಡಿಯುವ ಕಥಾನಕವೊಂದನ್ನು ಹೊಂದಿದೆ.

    ವಿಶೇಷ ಅಂದರೆ, ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಪುತ್ರಿ ಐಶ್ವರ್ಯಾ ಈ ಚಿತ್ರದ ಮೂಲಕ ಮೊದಲ ಸಲ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿಯೂ ಪ್ರಿಯಾಂಕಾ ಮಗಳಾಗಿಯೇ ನಟಿಸಿದ್ದಾರಂತೆ. ಮಗಳನ್ನು ಕಳೆದುಕೊಂಡ ತಾಯಿಯೊಬ್ಬಳು ಆಕೆಗಾಗಿ ಹೇಗೆಲ್ಲ ಹಂಬಲಿಸುತ್ತಾಳೆಂಬ ಕಥಾನಕ ಇಲ್ಲಿದೆ. ಆದರೆ ಥ್ರಿಲ್ಲರ್ ಜಾಡಿನಲ್ಲಿ ಸಾಗೋ ಈ ಕಥೆ ಕ್ಷಣ ಕ್ಷಣವೂ ಪ್ರೇಕ್ಷಕರನ್ನು ಕಾಡುತ್ತಾ, ಎಲ್ಲ ಅಂದಾಜುಗಳನ್ನೂ ತಲೆ ಕೆಳಗಾಗಿಸುತ್ತಾ ರೋಚಕ ವಾಗಿ ಸಾಗುತ್ತದೆಯಂತೆ.

    ಇನ್ನುಳಿದಂತೆ ದೇವಕಿಯ ಇನ್ನಷ್ಟು ವಿಶೇಷತೆಗಳು ಚಿತ್ರೀಕರಣ ನಡೆದ ರೀತಿಯಲ್ಲಿಯೇ ಇದೆಯಂತೆ. ದೇವಕಿಯ ಹೆಚ್ಚಿನ ಭಾಗದ ಚಿತ್ರೀಕರಣ ಕೊಲ್ಕತ್ತಾದಲ್ಲಿಯೇ ನಡೆದಿದೆ. ಇಲ್ಲಿರೋ ನೂರು ವರ್ಷಗಳಷ್ಟು ಹಳೆಯದಾದ ಸೌತ್ ಪಾರ್ಕ್ ಸಿಮೆಸ್ಟ್ರಿಯಲ್ಲಿ ದೇವಕಿಯ ಚಿತ್ರೀಕರಣ ನಡೆದಿದೆ. ಎಪ್ಪತ್ತರ ದಶಕದಲ್ಲಿಯೇ ಮುಚ್ಚಲ್ಪಟ್ಟಿದ್ದ ಈ ಸ್ಥಳದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಸತ್ತಾಗ ಸಮಾಧಿ ಮಾಡಲಾಗುತ್ತಿತ್ತಂತೆ.

    ಈ ಸ್ಥಳದಲ್ಲಿ ಈವರೆಗೂ ಕೆಲವೇ ಕೆಲ ಚಿತ್ರಗಳ ಚಿತ್ರೀಕರಣ ನಡೆದಿದೆಯಷ್ಟೆ. ಸತ್ಯಜಿತ್ ರೇ ಮತ್ತು ಅಮಿತಾಭ್ ಬಚ್ಚನ್ ಅವರ ಒಂದೊಂದು ಚಿತ್ರಗಳಿಗಷ್ಟೇ ಇಲ್ಲಿ ಚಿತ್ರೀಕರಣ ನಡೆಸಲು ಅವಕಾಶ ಸಿಕ್ಕಿತ್ತಂತೆ. ಆದರೆ ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸ್ಥಳದಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಮೊದಲ ಚಿತ್ರವಾಗಿಯೂ ದೇವಕಿ ದಾಖಲೆ ಬರೆದಿದೆ.

  • ದೇವಕಿಯ ಮಗಳಾಗಿ ಬಂದಳು ಉಪ್ಪಿ ಪುತ್ರಿ ಐಶ್ವರ್ಯಾ!

    ದೇವಕಿಯ ಮಗಳಾಗಿ ಬಂದಳು ಉಪ್ಪಿ ಪುತ್ರಿ ಐಶ್ವರ್ಯಾ!

    ಹಿಂದೆ ಮಮ್ಮಿ ಚಿತ್ರದ ಮೂಲಕ ಸೆಳೆದಿದ್ದ ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಎರಡನೇ ಚಿತ್ರ ದೇವಕಿ. ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರಕ್ಕೆ ಈ ಹಿಂದೆ ಹೌರಾ ಬ್ರಿಡ್ಜ್ ಅನ್ನೋ ಹೆಸರಿತ್ತು. ಈಗ ಅದನ್ನು ಬದಲಿಸಿ ದೇವಕಿ ಎಂದು ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದು, ಐಶ್ವರ್ಯಾಳ ಫಸ್ಟ್ ಲುಕ್ ಮತ್ತು ಪೋಸ್ಟರನ್ನು ನಟಿ ಪಾರೂಲ್ ಯಾದವ್ ಮತ್ತು ರಿಯಲ್ ಸ್ಟಾರ್ ರಿಲೀಸ್ ಮಾಡಿದ್ದಾರೆ.

    ಈ ಮೂಲಕ ನಿರ್ದೇಶಕ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ಕಾಂಬಿನೇಷನ್ ಎರಡನೇ ಬಾರಿ ಮೋಡಿ ಮಾಡಲು ಸಜ್ಜಾಗಿದೆ. ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ಚಿತ್ರ ಪ್ರೇಮಿಗಳ ಗಮನ ಸೆಳೆಯುವಂತಿದೆ. ಮಮ್ಮಿ ಚಿತ್ರದಂತೆಯೇ ಇಲ್ಲಿಯೂ ಮೈನವಿರೇಳಿಸೋ ಥ್ರಿಲ್ಲರ್ ಕಥಾ ಎಳೆ ಇರೋದರ ಸೂಚನೆಯನ್ನೂ ನೀಡಿದೆ. ಮಮ್ಮಿ ಚಿತ್ರದ ಮೂಲಕ ಆರಂಭಿಕವಾಗಿಯೇ ತಮ್ಮ ಪ್ರತಿಭೆಯನ್ನ ಸಾಬೀತು ಮಾಡಿದ್ದವರು ಲೋಹಿತ್.

    ಮಮ್ಮಿ ಚಿತ್ರ ಒಂದು ಮಟ್ಟಿಗೆ ಗೆಲುವು ದಾಖಲಿಸಿತ್ತು. ಈಗ ಬಿಡುಗಡೆಯಾಗಿರುವ ದೇವಕಿಯ ಟೀಸರ್ ಆ ಗೆಲುವು ಪುನರಾವರ್ತನೆಯಾಗೋ ಲಕ್ಷಣಗಳನ್ನು ಹೊಮ್ಮಿಸುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv