Tag: ದೇಗುಲ

  • ಚಳಿ ಇದೆ, ಸ್ವಲ್ಪ ಮಲಗ್ತೀನಿ- ಕದ್ದು ದೇಗುಲದಲ್ಲಿಯೇ ನಿದ್ದೆಗೆ ಜಾರಿದ ಕಳ್ಳ!

    ಚಳಿ ಇದೆ, ಸ್ವಲ್ಪ ಮಲಗ್ತೀನಿ- ಕದ್ದು ದೇಗುಲದಲ್ಲಿಯೇ ನಿದ್ದೆಗೆ ಜಾರಿದ ಕಳ್ಳ!

    – ದೇವಿಯ ಪವಾಡ ಅಂದ್ರು ಸ್ಥಳೀಯರು

    ಭೋಪಾಲ್: ಸಾಮಾನ್ಯವಾಗಿ ಖದೀಮರು ಕಳ್ಳತನ ಮಾಡಲು ಹಾಗೂ ಕಳವುಗೈದ ವಸ್ತುವಿನೊಂದಿಗೆ ಹೇಗೆ ಜಾಗ ಖಾಲಿ ಮಾಡುವುದು ಎಂದು ಯೋಜನೆ ಹಾಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ತಾನು ಕದ್ದ ವಸ್ತುವಿನೊಂದಿಗೆ ಅದೇ ಜಾಗದಲ್ಲಿ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಅಚ್ಚರಿಯ ಘಟನೆಯೊಂದು ನಡೆದಿದೆ.

    ಹೌದು. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಶಹಜಾಪುರದ ಲಾಲ್ಬಾಯ್-ಫುಲ್ಬಾಯ್ ಮಾತಾ ದೇವಸ್ಥಾನದಲ್ಲಿ ನಡೆದಿದೆ. ಕಳ್ಳ ಮೊದಲು ತ್ರಿಶೂಲದಿಂದ ದೇಗುಲದ ಬಾಗಿಲಿನ ಬೀಗವನ್ನು ಮುರಿದು ಆವರಣಕ್ಕೆ ಪ್ರವೇಶಿಸಿದನು. ಹೀಗೆ ಹೋದವನು ದೇಗುಲದಿಂದ ಕಳ್ಳತನ ಮಾಡಿದ್ದಾನೆ. ನಂತರ ಹೇಗಾದರೂ ಮಾಡಿ ಹೊರಬಂದು ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಾ ಅಲ್ಲೇ ಇದ್ದ ಹಾಸಿಗೆಯ ಮೇಲೆ ಕುಳಿತಿದ್ದಾನೆ. ಹೀಗೆ ಯೋಚಿಸುತ್ತಾ ಕುಳಿತಿದ್ದ ಕಳ್ಳ ಬೆಚ್ಚಗೆ ಅಲ್ಲೇ ನಿದ್ದೆಗೆ ಜಾರಿದ್ದಾನೆ.

    ಸ್ವಲ್ಪ ಸಮಯದ ನಂತರ ದೇವಾಲಯದ ಉಸ್ತುವಾರಿ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಕಳ್ಳ ಮಲಗಿದ್ದನ್ನು ನೋಡಿದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದಾಗ ಕಳ್ಳ ಇನ್ನೂ ನಿದ್ದೆಯ ಮಂಪರಿನಲ್ಲಿದ್ದನು. ಪೊಲೀಸರು ಕಳ್ಳನನ್ನು ಎಬ್ಬಿಸಲು ಪ್ರಯತ್ನ ಮಾಡಿದರು. ಆಗ ಕಳ್ಳ ‘ತುಂಬಾ ಚಳಿ ಇದೆ. ಸ್ವಲ್ಪ ಹೊತ್ತು ಮಲಗುತ್ತೇನೆ’ ಎಂದು ಹೇಳುತ್ತಾ ಮತ್ತೆ ನಿದ್ದೆಗೆ ಜಾರಿದ್ದಾನೆ. ಕೊನೆಗೆ ಹೇಗೋ ಎಬ್ಬಿಸಿ ಪೊಲೀಸರು ನೇರವಾಗಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಘಟನೆಯಿಂದ ಯುವಕ ದಿಗ್ಭ್ರಮೆಗೊಂಡಿದ್ದರಿಂದ ಆತನ ಹೆಸರು ಹಾಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಮಧ್ಯೆ ಸ್ಥಳೀಯರು ಇದೊಂದು ಪವಾಡ ಎಂದು ಬಣ್ಣಿಸಿದ್ದಾರೆ. ದೇಗುಲದಿಂದ ಕದ್ದ ಸ್ತುಗಳನ್ನು ತೆಗೆದುಕೊಂಡು ಹೋಗಲು ದೇವಿ ಬಿಡಲಿಲ್ಲ. ಹೀಗಾಗಿ ನಿದ್ದೆ ಮಾಡಿಸುವ ಮೂಲಕ ಆತನ ಕರಾಮತ್ತನ್ನು ಬಯಲು ಮಾಡಿದ್ದಾರೆ ಎಂದು ಹೇಳುತ್ತಾ ಹಳೆಯ ಕಥೆಗಳನ್ನು ಹಂಚಿಕೊಂಡರು.

  • ಅಯ್ಯಪ್ಪ ದೇವರೇ ಅಲ್ಲ ಅಂದ್ರು ನಟ ಪ್ರಕಾಶ್ ರೈ..!

    ಅಯ್ಯಪ್ಪ ದೇವರೇ ಅಲ್ಲ ಅಂದ್ರು ನಟ ಪ್ರಕಾಶ್ ರೈ..!

    ಬೆಂಗಳೂರು: ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

    ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳೆದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಅವರು ಶಬರಿಮಲೆ ದೇವಸ್ಥಾನದ ಕುರಿತು ಮಾತನಾಡುತ್ತಾ, ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಅದೇ ಹೆಣ್ಣಿನಿಂದ ಜನ್ಮ ತಾಳುತ್ತೇವೆ. ಆದರೆ ಅದೇ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಹೆಣ್ಣು ಮಕ್ಕಳ ಪ್ರಾರ್ಥನೆಗೆ ಅವಕಾಶ ಕೊಡದೇ ಇದ್ದರೇ ಅದು ನನ್ನ ಪಾಲಿಗೆ ಧರ್ಮವೇ ಅಲ್ಲ ಅಂತಾ ಕಿಡಿಕಾರಿದರು.

    ಯಾವ ಭಕ್ತರು ಸ್ತ್ರಿಯರನ್ನು ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೋ ಅವರು ಭಕ್ತರೇ ಇಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಅದು ದೇವರೇ ಅಲ್ಲ. ಮಹಿಳೆಯರಿಗೆ ಕೇರಳ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲೇಬೇಕು. ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಅಂತಾ ರೈ ಹೇಳಿದ್ದಾರೆ.

    ತಿಂಗಳ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇಗುಲವು ಇಂದು ತೆರೆಯಲಿದೆ. ಮಂಗಳವಾರ ರಾತ್ರಿ ಮತ್ತೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಕಡಿಮೆ ಅವಧಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಆಗಮಿಸಿಲಿದ್ದಾರೆ. ಕಳೆದ ಬಾರಿಯಂತೆ ಈಗಲೂ ಸಮಸ್ಯೆ ಪರಿಸ್ಥಿತಿ ಉದ್ವಿಗ್ನಗೊಳ್ಳಬಾರದು ಅಂತಾ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಭಾರೀ ಭದ್ರತೆಗೆ ಮುಂದಾಗಿದ್ದಾರೆ.

    ಶಬರಿಮಲೆ ಜಾಗರಣೆ ಸ್ಥಳದಲ್ಲಿ ಹಾಗೂ ಸಮೀಪದ ಸ್ಥಳಗಳಲ್ಲಿ 100 ಮಹಿಳಾ ಪೊಲೀಸ್ ಸೇರಿದಂತೆ 1,500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೊತೆಗೆ 20 ಜನರ ಕಮಾಂಡೋ ತಂಡವನ್ನು ಸನ್ನಿಧಾನಂ, ನಿಲಕಲ್ ಮತ್ತು ಪಂಪಾ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಭಕ್ತಾಧಿಗಳನ್ನು ತಪಾಸಣೆ ಮಾಡಲು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದೇಗುಲದ ಬಳಿ ಭದ್ರತೆ ಒದಗಿಸಲಾಗಿದೆ. ಅಯ್ಯಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಲು ಪರವಾಣಿಗೆ ಪತ್ರ ಕಡ್ಡಾಯವಾಗಿದೆ. ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಯ್ಯಪ್ಪನಿಗೆ ‘ಶ್ರೀ ಚಿತಿರ ಅಟ್ಟಾ ತಿರುನಾಳ್’ ವಿಶೇಷ ಪೂಜೆ ಮಂಗಳವಾರ ನಡೆಯಲಿದೆ. ಪೂಜೆಯ ವೇಳೆ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗುತ್ತದೆ. ನಂತರ ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಅಂತ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೋಮವಾರ ಬಾಗಿಲು ತೆರೆಯಲಿದೆ ಶಬರಿಮಲೆ- ಭಾರೀ ಭದ್ರತೆ ಒದಗಿಸಿರುವ ಪೊಲೀಸರು

    ಸೋಮವಾರ ಬಾಗಿಲು ತೆರೆಯಲಿದೆ ಶಬರಿಮಲೆ- ಭಾರೀ ಭದ್ರತೆ ಒದಗಿಸಿರುವ ಪೊಲೀಸರು

    ತಿರುವನಂತಪುರಂ: ತಿಂಗಳ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇಗುಲವು ಸೋಮವಾರ ತೆರೆಯಲಿದೆ. ಕಳೆದ ಬಾರಿಯಂತೆ ಈಗಲೂ ಸಮಸ್ಯೆ ಪರಿಸ್ಥಿತಿ ಉದ್ವಿಗ್ನಗೊಳ್ಳಬಾರದು ಅಂತಾ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಭಾರೀ ಭದ್ರತೆಗೆ ಮುಂದಾಗಿದ್ದಾರೆ.

    ದೇವಸ್ಥಾನವು ಸೋಮವಾರ ತೆರೆಯಲಿದ್ದು, ತಿಂಗಳ ಪೂಜಾ ಕಾರ್ಯ ಆರಂಭಗೊಳ್ಳುತ್ತದೆ. ಬಳಿಕ ಮಂಗಳವಾರ ರಾತ್ರಿ ಮತ್ತೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ಹೀಗಾಗಿ ಕಡಿಮೆ ಅವಧಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಆಗಮಿಸಿಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಭದ್ರತೆ ಒದಗಿಸಿದ್ದಾರೆ.

    ಶಬರಿಮಲೆ ಜಾಗರಣೆ ಸ್ಥಳದಲ್ಲಿ ಹಾಗೂ ಸಮೀಪದ ಸ್ಥಳಗಳಲ್ಲಿ 100 ಮಹಿಳಾ ಪೊಲೀಸ್ ಸೇರಿದಂತೆ 1,500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜೊತೆಗೆ 20 ಜನರ ಕಮಾಂಡೋ ತಂಡವನ್ನು ಸನ್ನಿಧಾನಂ, ನಿಲಕಲ್ ಮತ್ತು ಪಂಪಾ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಯ್ಯಪ್ಪನಿಗೆ ‘ಶ್ರೀ ಚಿತಿರ ಅಟ್ಟಾ ತಿರುನಾಳ್’ ವಿಶೇಷ ಪೂಜೆ ಮಂಗಳವಾರ ನಡೆಯಲಿದೆ. ಪೂಜೆಯ ವೇಳೆ ಭಕ್ತರಿಗೆ ದರ್ಶನದ ಅವಕಾಶ ನೀಡಲಾಗುತ್ತದೆ. ನಂತರ ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಅಂತ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

    ಭಕ್ತಾಧಿಗಳನ್ನು ತಪಾಸಣೆ ಮಾಡಲು ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದೇಗುಲದ ಬಳಿ ಭದ್ರತೆ ಒದಗಿಸಲಾಗಿದೆ. ಅಯ್ಯಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಲು ಪರವಾಣಿಗೆ ಪತ್ರ ಕಡ್ಡಾಯವಾಗಿದೆ.

    ನಿಲಕಲ್ ಮತ್ತು ಪಂಪಾ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ಕೇರಳ ಸರ್ಕಾರ ನೀಡುವ ಟಿಕೆಟ್ ಕಡ್ಡಾಯಗೊಳಿಸಲಾಗಿದೆ. ಮಹಿಳೆಯರ ಪ್ರವೇಶವನ್ನು ವಿರೋಧ ಮತ್ತೆ ಪರಿಸ್ಥಿತಿ ಉದ್ವಿಗ್ನಕ್ಕೆ ಕಾರಣವಾಗವಾರದು ಅಂತಾ ಕೇರಳ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಇತ್ತ ಶಬರಿಮಲೆಗೆ ಮಹಿಳೆಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಅವರಿಗೆ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಇನ್ಮುಂದೆ ಸೆಕ್ಸ್ ಮಾಡುವುದಿಲ್ಲ, ನನ್ನ ದೇಹ ಈಗ ದೇಗುಲವಾಗಿದೆ: ರಾಖಿ ಸಾವಂತ್

    ನಾನು ಇನ್ಮುಂದೆ ಸೆಕ್ಸ್ ಮಾಡುವುದಿಲ್ಲ, ನನ್ನ ದೇಹ ಈಗ ದೇಗುಲವಾಗಿದೆ: ರಾಖಿ ಸಾವಂತ್

    ಮುಂಬೈ: ನಾನು ಇನ್ಮುಂದೆ ಸೆಕ್ಸ್ ಮಾಡುವುದಿಲ್ಲ. ನನ್ನ ದೇಹ ಈಗ ದೇಗುಲವಾಗಿದೆ ಎಂದು ರಾಖಿ ಸಾವಂತ್ ಹೊಸದೊಂದು ಹೇಳಿಕೆ ನೀಡುವ ಮೂಲಕ ಬಾಲಿವುಡ್‍ನಲ್ಲಿ ಸಂಚಲನ ಮೂಡಿಸಿದ್ದಾರೆ.

    ರಾಖಿ ಸಾವಂತ್ ಅವರ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಾಖಿ ನಟಿ ತನುಶ್ರೀ ದತ್ತಾ ಯಾಕೆ ತಲೆ ಕೂದಲು ಬೋಳಿಸಿದ್ದರು ಎಂಬುದನ್ನು ಹೇಳಿದ್ದಾರೆ. ನಾನು ಸಾಕ್ಷಾತ್ ದೇವರ ಸ್ವರೂಪ. ನಾನು ಈಗ ಬದಲಾಗಿದ್ದೇನೆ. ಈಗ ನಾನು ದೇವರ ಧ್ಯಾನದಲ್ಲಿ ಮಗ್ನಳಾಗಿದ್ದೇನೆ. ಖ್ಯಾತ ಗಾಯಕ ಮಿಕಾ ಸಿಂಗ್ ನನಗೆ ಕಿಸ್ ಮಾಡಿದ್ದ ಕಾರಣ ನನ್ನ ಮೇಲಿನ ಪ್ರೀತಿಗೆ ತನುಶ್ರೀ ತಲೆಕೂದಲು ಬೋಳಿಸಿ ಆಶ್ರಮಕ್ಕೆ ಹೋಗಿದ್ದಳು ಎಂದು ರಾಖಿ ವಿಡಿಯೋದಲ್ಲಿ ಹೇಳಿದ್ದಾರೆ.

    ಮಿಕಾ ಸಿಂಗ್ ನನಗೆ ಕಿಸ್ ಮಾಡಿದ್ದು ತನುಶ್ರೀಗೆ ಇಷ್ಟವಿರಲಿಲ್ಲ. ನನ್ನನ್ನು ಬಿಟ್ಟು ನಿನಗೆ ಯಾರೂ ಕಿಸ್ ಮಾಡಬಾರದು ಎಂದು ತನುಶ್ರೀ ಹೇಳಿದ್ದರು. ಆದರೆ ಈಗ ನಾನು ದೇವರಲ್ಲಿ ಮಗ್ನಳಾಗಿದ್ದೇನೆ. ನಾನು ಈಗ ಸೆಕ್ಸ್ ಕೂಡ ಮಾಡುವುದ್ದಿಲ್ಲ, ನೇರವಾಗಿ ಮದುವೆಯಾಗುತ್ತೇನೆ. ನನ್ನ ದೇಹ ಈಗ ದೇವಾಲಯದ ಸಮ. ಹಾಗಾಗಿ ನನಗೆ ಇದು ಸ್ವಚ್ಛತೆಯಿಂದ ಕಾಪಾಡಬೇಕು. ನನ್ನೊಳಗೆ ಈಗ ದೇವರು ನೆಲೆಸಿದ್ದಾನೆ ಎಂದು ತಿಳಿಸಿದ್ದಾರೆ.

    ನೀವೆಲ್ಲರೂ ಯೋಚಿಸುತ್ತಿರಬಹುದು ಒಂದು ಹುಡುಗಿ ಮತ್ತೊಂದು ಹುಡುಗಿಯನ್ನು ಹೇಗೆ ಅತ್ಯಾಚಾರ ಮಾಡಲು ಸಾಧ್ಯ ಎಂದು? ಆದರೆ ತನು ಒಬ್ಬಳು ಸಲಿಂಗಕಾಮಿ. ಆಕೆ ಒಳಗೆ ಒಬ್ಬ ಪುರುಷನಿದ್ದಾನೆ. ತನು ನನಗೆ ರೇವ್ ಪಾರ್ಟಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ಆಕೆ ನಶೆಯ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದಳು. ಹಾಗಾಗಿ ನಾನು ಆಕೆಯಿಂದ ದೂರ ಹೋದೆ ಎಂದು ರಾಖಿ ಸಾವಂತ್ ವಿಡಿಯೋದಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಡವಲಾಗಿದ್ದ ದೇವಾಲಯವನ್ನು ಮತ್ತೆ ನಿರ್ಮಿಸಿದ ಸ್ಥಳೀಯರು

    ಕೆಡವಲಾಗಿದ್ದ ದೇವಾಲಯವನ್ನು ಮತ್ತೆ ನಿರ್ಮಿಸಿದ ಸ್ಥಳೀಯರು

    ಬೆಂಗಳೂರು: ಬಿಜೆಪಿ ಶಾಸಕ ಸೋಮಣ್ಣ ಕಡೆಯವರಿಂದ ಕೆಡವಲಾಗಿದೆ ಅಂತಾ ಆರೋಪಿಸಲಾಗಿದ್ದ ಪಟ್ಟಗಾರ ಪಾಳ್ಯದಲ್ಲಿರುವ ಕರುಮಾರಿಯಮ್ಮ ದೇವಾಲಯವನ್ನು ಸ್ಥಳೀಯರು ಮತ್ತೊಮ್ಮೆ ಮರು ನಿರ್ಮಾಣ ಮಾಡಿದ್ದಾರೆ.

    ಕರುಮಾರಿಯಮ್ಮ ದೇಗುವಲವನ್ನು ಖುದ್ದು ಸಾರ್ವಜನಿಕರೇ ಸೇರಿ ಮರು ನಿರ್ಮಾಣಮಾಡಿ ಪೂರ್ಣಗೊಳಿಸಿದ್ದಾರೆ. ಸದ್ಯ ದೇವಾಲಯದಲ್ಲಿ ದೇವರಿಗೆ ಪೂಜೆ-ಪುನಸ್ಕಾರಗಳು ಎಂದಿನಂತೆ ಸಾಗುತ್ತಿದೆ.

    ಶಾಸಕ ವಿ. ಸೋಮಣ್ಣರು ತಮ್ಮ ಸಂಬಂಧಿಕರಿಗೆ ಸೇರಿದ್ದ ಸೆಂಟ್ ಪೌಲ್ ಶಾಲೆಗೆ ದೇಗುಲದ ಜಾಗವನ್ನು ಬಿಟ್ಟು ಕೊಡುವಂತೆ ಮಹಿಳೆಗೆ ಧಮ್ಕಿ ಹಾಕಿಸಿದ್ದರು. ಅಲ್ಲದೇ ಈ ಬಗ್ಗೆ ಶಾಸಕರ ಬಳಿ ಮಾತನಾಡಲು ತೆರಳಿದ್ದ ಮಹಿಳೆಗೆ, ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದರು. ಮಹಿಳೆಗೆ ನಿಂದಿಸಿದ್ದಾರೆ ಎನ್ನುವ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಇದನ್ನೂ ಓದಿ: ರಾತ್ರೋ ರಾತ್ರಿ ಪಟ್ಟೆಗಾರ ಪಾಳ್ಯದ ದೇವಸ್ಥಾನ ಕೆಡವಿಸಿದ ಶಾಸಕ ವಿ.ಸೋಮಣ್ಣ

    ಆಗಸ್ಟ್ 21ರ ತಡರಾತ್ರಿ ಅವರ ಕೆಲ ಜನರು ದೇಗುಲವನ್ನು ಧ್ವಂಸಗೊಳಿಸಿ ಹೋಗಿದ್ದರು. ಸೋಮಣ್ಣ ಕಡೆಯವರೇ ಈ ದೇವಾಲಯನ್ನು ಧ್ವಂಸ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಕೆ ರದ್ದು ಮಾಡಿದರೆ ಒಳ್ಳೆಯದು- ಯದುವೀರ್ ಒಡೆಯರ್

    ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಕೆ ರದ್ದು ಮಾಡಿದರೆ ಒಳ್ಳೆಯದು- ಯದುವೀರ್ ಒಡೆಯರ್

    ಮೈಸೂರು: ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಕೆ ರದ್ದು ಮಾಡಿದರೆ ಒಳ್ಳೆಯದು ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.

    ಕಲ್ಯಾಣ ಲಕ್ಷೀ ವೆಂಕಟರಮಣಸ್ವಾಮಿ ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯದುವೀರ್ 1 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಕೆ ರದ್ದು ಮಾಡಿದರೆ ಒಳ್ಳೆಯದು. ದೇಗುಲಗಳಲ್ಲಿ ಪ್ಲಾಸ್ಟಿಕ್ ಯಾವುದೇ ಪೂಜೆಗೆ ಬಳಕೆ ಆಗೋಲ್ಲ. ಹೀಗಾಗಿ ದೇಗುಲಗಳು ಪ್ಲಾಸ್ಟಿಕ್ ಮುಕ್ತವಾಗಬೇಕೆಂಬುದು ನನ್ನ ಅಭಿಪ್ರಾಯ ಎಂದರು.

    ನಾನು ರಾಜಕೀಯಕ್ಕೆ ಬರೋಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧಿಸುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ ಎಂದು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾನು ಹೇಳಿಕೆ ಕೊಟ್ಟಿದ್ದೆ. ಈಗಲೂ ನಾನು ಅದನ್ನೆ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಮುಂದೆ ಏನಾಗುತ್ತೋ ನನಗೆ ಗೊತ್ತಿಲ್ಲ. ಆ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ. ಆದ್ರೆ ಸದ್ಯಕ್ಕಂತು ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದರು.

  • ಬೆಂಗ್ಳೂರಿನ ಪುರಾತನ ದೇಗುಲದ ಮೇಲೆ ಕೈ ನಾಯಕನ ಕಣ್ಣು- ದೇವಾಲಯದ ಗೇಟನ್ನೇ ಒಡೆಸಿದ ಮಾಜಿ ಕಾರ್ಪೊರೇಟರ್

    ಬೆಂಗ್ಳೂರಿನ ಪುರಾತನ ದೇಗುಲದ ಮೇಲೆ ಕೈ ನಾಯಕನ ಕಣ್ಣು- ದೇವಾಲಯದ ಗೇಟನ್ನೇ ಒಡೆಸಿದ ಮಾಜಿ ಕಾರ್ಪೊರೇಟರ್

    ಬೆಂಗಳೂರು: ರಾಜ್ಯದಲ್ಲಿ `ಕೈ’ ಗೂಂಡಾಗಿರಿ ಕಾರುಬಾರು ಶುರುವಾಗಿದ್ದು, ದೇಗುಲದ ಗೇಟನ್ನೇ ಒಡೆಸಿ ದೇವಸ್ಥಾನವನ್ನೇ ಕಬಳಿಕೆ ಮಾಡಲು ಮಾಜಿ ಕಾರ್ಪೊರೇಟರ್ ಮುಂದಾಗಿದ್ದಾನೆ.

    ವಾರ್ಡ್ ನಂಬರ್ 90 ಹಲಸೂರಿನ ಮಾಜಿ ಕಾರ್ಪೊರೇಟರ್ ಉದಯ್ ಕುಮಾರ್ ಈ ರೀತಿಯ ಗೂಂಡಾ ವರ್ತನೆ ಮಾಡಿದ್ದು, ದೇಗುಲದ ಭಕ್ತರ ಮುಂದೆಯೇ ಅನ್ಯಧರ್ಮದವರನ್ನು ಬಿಟ್ಟು ದೇಗುಲದ ಗೇಟ್ ಬೀಗವನ್ನು ಒಡೆಸಿದ್ದಾನೆ. ಈತ ಬೆಂಗಳೂರಿನ ಪುರಾತನ ದೇಗುಲದ ಮೇಲೆ ಕಣ್ಣು ಹಾಕಿದ್ದು, ಮುಸ್ಲಿಮರನ್ನು ಕರೆಸಿ ಹಾರೆ, ರಾಡ್ ತೆಗೆದುಕೊಂಡು ಬಂದು ಹಿಂದೂ ದೇಗುಲದ ಕಿಟಕಿ, ಗೇಟ್ ಪುಡಿ ಪುಡಿ ಮಾಡಿಸಿದ್ದಾನೆ.

    ಹಳೇ ಮದ್ರಾಸ್ ರಸ್ತೆಯಲ್ಲಿರುವ ಮೌನನಂದ ಮಠದ ಜಾಗಕ್ಕೆ ಉದಯ್ ಕುಮಾರ್ ಅತಿಕ್ರಮ ಪ್ರವೇಶ ಮಾಡಿದ್ದು, ದೇಗುಲದ ಜಾಗ ತನ್ನ ಪರಿಚಿತರಿಗೆ ಸೇರಿದ್ದು. ನಂಗೆ ಇದನ್ನು ಡೆಮಾಲಿಷನ್ ಮಾಡೋಕೆ ಕಂಟ್ರಾಕ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಕಾರ್ಪೊರೇಟರ್ ವರ್ತನೆಗೆ ರೊಚ್ಚಿಗೆದ್ದ ಭಕ್ತರು, ನಿಮ್ಮ ವಂಶ ನಿರ್ವಂಶ ಆಗುತ್ತೆ. ಈ ದೇವಸ್ಥಾನ ಅಷ್ಟೊಂದು ಪವರ್ ಫುಲ್ ಎಂದು ಆಕ್ರೋಶದಿಂದ ಹೇಳಿದ್ದಾರೆ.

    ಆದರೆ ಅಷ್ಟಕ್ಕೆ ಸುಮ್ಮನಾಗದೇ ಅಯ್ಯೋ ಅದೇನ್ ಆಗುತ್ತೋ ನಾನು ನೋಡುತ್ತೀನಿ. ಅದೆಲ್ಲ ನಾನ್ ನಂಬಲ್ಲ ಎಂದು ಮುಸ್ಲಿಮರನ್ನು ಬಿಟ್ಟು ಗೇಟ್ ಬೀಗ ಒಡೆಸಿದ್ದಾನೆ. ಕೊನೆಗೆ ಭಕ್ತರ ಆಕ್ರೋಶ ಹೆಚ್ಚಾದಾಗ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಕಾರ್ಪೊರೇಟರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಮಠದವರು ಮಾಜಿ ಕಾರ್ಪೊರೇಟರ್ ಗೂಂಡಾ ವರ್ತನೆಯ ವಿರುದ್ಧ ಹಳೇ ಮದ್ರಾಸ್ ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.