Tag: ದೇಗುಲ

  • ಸರ್ಕಾರಿ ಶಾಲೆಗೆ ಮಂಜೂರಾದ ಜಾಗದಲ್ಲಿ ದೇಗುಲ – ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು

    ಸರ್ಕಾರಿ ಶಾಲೆಗೆ ಮಂಜೂರಾದ ಜಾಗದಲ್ಲಿ ದೇಗುಲ – ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು

    ರಾಯಚೂರು: ನಗರದಲ್ಲಿ ಮಧ್ಯರಾತ್ರಿ ಜೆಸಿಬಿಗಳು ಘರ್ಜಿಸಿದ್ದು, ಇಲ್ಲಿನ ಸಂತೋಷ ನಗರದಲ್ಲಿ ಅಕ್ರಮವಾಗಿ ಸಿಎ ಸೈಟ್‌ನಲ್ಲಿ (CA Site) ನಿರ್ಮಿಸಿದ್ದ ಶಿವ ಮತ್ತು ಗಣೇಶನ ದೇಗುಲ ತೆರವು ಮಾಡಲಾಗಿದೆ. ರಾಯಚೂರು (Raichuru) ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಮಧ್ಯರಾತ್ರಿ ಪೊಲೀಸ್ (Police) ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ಮಾಡಲಾಯಿತು.

    ಎಲ್‌ಬಿಎಸ್ ನಗರ ಪ್ರೌಢ ಶಾಲೆಗೆ ಮಂಜೂರಾಗಿದ್ದ ಜಾಗದಲ್ಲಿ ದೇಗುಲ ನಿರ್ಮಿಸಲಾಗಿತ್ತು. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳು ಇಡಲು ಕಟ್ಟಿದ್ದ ಶೆಡ್‌ನ್ನೇ ದೇಗುಲವಾಗಿ ಪರಿವರ್ತಿಸಲಾಗಿತ್ತು. ಶಾಲಾ (School) ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಡಾವಣೆ ಜನ ದೇಗುಲ ನಿರ್ಮಿಸಿದ್ದರು. ಇದನ್ನೂ ಓದಿ: Kolar| ಚೆಂಡು ಹೂವು ಬೆಲೆ ಕುಸಿತ – ರಸ್ತೆಬದಿ ಸುರಿದು ರೈತ ಆಕ್ರೋಶ

    2022 ಜೂನ್ 1 ರಲ್ಲಿ ಪ್ರೌಢಶಾಲೆ ಕಟ್ಟಡಕ್ಕೆ ಸಿ.ಎ. ಸೈಟ್ ಮಂಜೂರಾಗಿತ್ತು. ಜಾಗ ಮಂಜೂರು ಆದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಸಹ ಬಿಡುಗಡೆಯಾಗಿತ್ತು. ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿದ್ದರೂ ಸ್ಥಳೀಯರು ದೇಗುಲ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರು.

    ಸ್ಥಳೀಯರ ವಿರೋಧದ ನಡುವೆಯೂ ‌ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇರಲು ಸದ್ಯ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ.

  • ವೀಡಿಯೋ: ದೇಗುಲದೊಳಗೆಯೇ ಮಾವುತನ ತುಳಿದು ಕೊಂದ ಆನೆ!

    ವೀಡಿಯೋ: ದೇಗುಲದೊಳಗೆಯೇ ಮಾವುತನ ತುಳಿದು ಕೊಂದ ಆನೆ!

    ತಿರುವನಂತಪುರಂ: ದೇಗುಲದೊಳಗೆಯೇ ಆನೆಯೊಂದು ಮಾವುತನನ್ನು ತುಳಿದು ಕೊಂದ ಆಘಾತಕಾರಿ ಘಟನೆ ಕೇರಳದ ವೈಕೋಮ್‌ನಲ್ಲಿ ನಡೆದಿದೆ.

    ಮೃತ ಮಾವುತನನ್ನು ಅರವಿಂದ್ (26) ಎಂದು ಗುರುತಿಸಲಾಗಿದ್ದು, ಈತ ಪುತ್ತುಪ್ಪಲ್ಲಿ ಮೂಲದ ನಿವಾಸಿ. ಅರವಿಂದ್ ಅವರು ಕುಂಜುಲಕ್ಷ್ಮಿಯ ಎರಡನೇ ಮಾವುತರಾಗಿ ಕಳೆದ ತಿಂಗಳಿನಿಂದ ಸೇವೆ ಆರಂಭಿಸಿದ್ದರು.

    ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ದೇವಸ್ಥಾನದ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಪತಿಯೂ ಬೇಕು, ಪ್ರೇಮಿಯೂ ಬೇಕೆಂದು ವಿದ್ಯುತ್‌ ಕಂಬವೇರಿ ಮಹಿಳೆ ಪ್ರತಿಭಟನೆ

    https://twitter.com/ProfAshokSwain/status/1775815773488861246

    ವೀಡಿಯೋದಲ್ಲಿ ಏನಿದೆ..?: ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಆನೆಯು ಸಾಂಪ್ರದಾಯಿಕ ನೆಟ್ಟಿಪಟ್ಟಿಯಲ್ಲಿ ಕಂಗೊಳಿಸುತ್ತಿತ್ತು. ಇದೇ ಸಂದರ್ಭದಲ್ಲಿ ಏಕಾಏಕಿ ಕೋಪಗೊಂಡ ಆನೆಯು ತನ್ನ ಜೊತೆ ಇದ್ದ ಮಾವುತ ಅರವಿಂದ್‌ನನ್ನು ತುಳಿದಿದೆ. ಕೂಡಲೇ ದೇವಸ್ಥಾನದಲ್ಲಿದ್ದ ಸ್ಥಳೀಯರು ಸೇರಿ ಅರವಿಂದ್‌ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ತಕ್ಷಣವೇ ವೈಕಂ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಪರಿಣಾಮ ಅರವಿಂದ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

  • ಗ್ರಹಣ ಮೋಕ್ಷದ ನಂತರ ಶುದ್ಧೀಕರಣ- ಬಹುತೇಕ ದೇಗುಲಗಳು ಓಪನ್

    ಗ್ರಹಣ ಮೋಕ್ಷದ ನಂತರ ಶುದ್ಧೀಕರಣ- ಬಹುತೇಕ ದೇಗುಲಗಳು ಓಪನ್

    ಬೆಂಗಳೂರು: ಈ ವರ್ಷದ ಕೊನೆಯ ಚಂದ್ರಗ್ರಹಣ (Chandragrahana 2023) ಮುಕ್ತಾಯವಾಗಿದೆ. ಹೀಗಾಗಿ ಬೆಂಗಳೂರಿನ ಬನಶಂಕರಿ ದೇಗುಲ, ಕಾಡುಮಲ್ಲೇಶ್ವರ ದೇವಾಲಯ ಹಾಗೂ ಜಿಲ್ಲೆಗಳಲ್ಲೂ ದೇಗುಲದ ಬಾಗಿಲು ಓಪನ್ ಮಾಡಲಾಗಿದ್ದು, ಶುದ್ಧೀಕರಣ ಮಾಡಲಾಗಿದೆ.

    ಬನಶಂಕರಿ ದೇವಾಲಯ ಶುದ್ಧೀಕರಣಕ್ಕೂ ಮುನ್ನ ಪೂಜೆ ಸಲ್ಲಿಸಲಾಗಿದೆ. ಗರ್ಭಗುಡಿಗೆ ಪೂಜೆ ಸಲ್ಲಿಸಿ ದೇಗುಲ ಓಪನ್ ಮಾಡಲಾಗಿದೆ. ಗ್ರಹಣದ ಹಿನ್ನೆಲೆಯಲ್ಲಿ ತಾಯಿ ಬನಶಂಕರಿಗೆ ದರ್ಭೆ ದಿಗ್ಬಂಧನ ಹಾಕಲಾಗಿತ್ತು. ಇದೀಗ ದೇವಾಲಯ ಶುದ್ಧೀಕರಣದ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

    ಕಾಡುಮಲ್ಲೇಶ್ವರ ದೇವಾಲಯದ ಬಾಗಿಲು ಕೂಡ ಓಪನ್ ಮಾಡಲಾಗಿದೆ. ಸಂಪೂರ್ಣ ದೇವಾಲಯದ ಶುದ್ಧೀಕರಣ ಕಾರ್ಯ ನಡೆದಿದ್ದು, ಗ್ರಹಣದ ನಂತರ ದರ್ಬೆ ಬಂಧನದಿಂದ ದೇವರಿಗೆ ಮುಕ್ತಿ ಸಿಕ್ಕಿದೆ. ಶುದ್ಧೀಕರಣ ಕಾರ್ಯದ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಚಂದ್ರಗ್ರಹಣದ ವೇಳೆಯೇ ಬಾಗಿಲು ತೆರೆದ ಉಡುಪಿ ಶ್ರೀಕೃಷ್ಣ ಮಠ

    ಇತ್ತ ಜಿಲ್ಲೆಗಳಲ್ಲೂ ಗ್ರಹಣ ಮೋಕ್ಷದ ನಂತರ ದೇಗುಲ ಶುದ್ಧೀಕರಣ ಮಾಡಲಾಗಿದೆ. ದೇವರ ಮೂರ್ತಿಗಳನ್ನು ಶುದ್ಧೀಕರಿಸಿದ ಬಳಿಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಕಾರವಾರ, ಮಂಡ್ಯ, ಉಡುಪಿ, ಮೈಸೂರಲ್ಲಿ ದೇವಸ್ಥಾನ ಶುದ್ಧೀಕರಣದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬನಶಂಕರಿ ದೇಗುಲದಲ್ಲಿ ಜಟಾಪಟಿ

    ಬನಶಂಕರಿ ದೇಗುಲದಲ್ಲಿ ಜಟಾಪಟಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್

    ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್

    ಬೆಂಗಳೂರು: ರಾಜ್ಯಾದ್ಯಂತ ದೀಪಾವಳಿ (Deepavali) ಸಂಭ್ರಮ ಮನೆ ಮಾಡ್ತಿದೆ. ಕೊರೋನಾ (Corona Virus) ಬಳಿಕ ಅದ್ಧೂರಿಯಾಗಿ ಹಬ್ಬ ಆಚರಿಸಲು ಜನ ಸಜ್ಜಾಗಿದೆ. ಆದರೆ ದೀಪಾವಳಿ ಅಮಾವಾಸ್ಯೆಯ ಅಕ್ಟೋಬರ್ 25ರಂದೇ ಸೂರ್ಯ ಗ್ರಹಣ ಸಂಭವಿಸ್ತಿದೆ.

    ಮಂಗಳವಾರ ಸಂಜೆ ಭಾಗಶಃ ಸೂರ್ಯಗ್ರಹಣ (Solar Eclipse) ಗೋಚರವಾಗಲಿದೆ. 3 ವರ್ಷಗಳ ಬಳಿಕ ಗೋಚರವಾಗುವ ಈ ಪಾರ್ಶ್ವ ಸೂರ್ಯಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ. ಕಾರ್ತಿಕ ಅಮಾವಾಸೆಯಂದೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದರಿಂದ ದೀಪಾವಳಿ ಹಬ್ಬದ ವಿಶೇಷ ದಿನಗಳಲ್ಲಿ ದೇವಸ್ಥಾನಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ.

    ಬೆಂಗಳೂರಿನ ಪ್ರಮುಖ ದೇವಾಲಯಗಳು ಗ್ರಹಣ ಸಂದರ್ಭದಲ್ಲಿ ಬಂದ್ ಆಗಲಿದ್ದು, ದರ್ಶನದ ಅವಧಿಯಲ್ಲೂ ಬದಲಾವಣೆಯಾಗಲಿದೆ. ಶನೇಶ್ವರ ದೇಗುಲ ಮಾತ್ರ ಗ್ರಹಣದ ಸಂದರ್ಭದಲ್ಲಿ ತೆರೆದಿರಲಿದ್ದು, ನಿರಂತರ ಪೂಜೆ ಪುನಸ್ಕಾರ ನಡೆಯಲಿದೆ. ಬರೋಬ್ಬರಿ 27 ವರ್ಷದ ಬಳಿಕ ಅಂದ್ರೆ 1995ರ ಬಳಿಕ ಮತ್ತೆ ದೀಪಾವಳಿ ಹಬ್ಬದಂದೂ ಸೂರ್ಯನಿಗೆ ಗ್ರಹಣ ಹಿಡಿಯುತ್ತಿದೆ. ಹಬ್ಬದ ಸಂಭ್ರಮದಲ್ಲೇ ಗ್ರಹಣದ ಕಾರ್ಮೋಡ ಆವರಿಸಿರೋದ್ರಿಂದ ಜನರಿಗೂ ಕೊಂಚ ಭಯ. ಶುಭ-ಅಶುಭದ ಲೆಕ್ಕಾಚಾರ ಶುರುವಾಗಿದ್ದು, ಜನ ದೇಗುಲಗಳಲ್ಲಿ ಶಾಂತಿ ಹೋಮಕ್ಕಾಗಿ ಮುಗಿಬಿದ್ದಿದ್ದಾರೆ. ಗ್ರಹಣ ಮೋಕ್ಷವಾದ ಬಳಿಕ ಮಂಗಳವಾರವೇ ಹಲವಾರು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ಇದ್ರೆ, ಕೆಲವು ದೇಗುಲದಲ್ಲಿ ಬುಧವಾರ ಇರಲಿದೆ. ದೇಗುಲಗಳಲ್ಲಿ ಶಾಂತಿಹೋಮದ ಪೂಜೆಗಳಿಗೆ ಬುಕ್ಕಿಂಗ್ ಜೋರಾಗಿದೆ.

    ವೈಜ್ಞಾನಿಕವಾಗಿ ಗ್ರಹಣ ವೀಕ್ಷಣೆಗೂ ಜನ ಕಾಯ್ತಿದ್ದಾರೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. 3 ವರ್ಷಗಳ ಬಳಿಕ ಅಕ್ಟೋಬರ್ 25ರ ಸಂಜೆ ಪಾಶ್ರ್ವ ಸೂರ್ಯಗ್ರಹಣ ಗೋಚರವಾಗ್ತಿದೆ. ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸೂರ್ಯಗ್ರಹಣ ಉತ್ತಮ ರೀತಿಯಲ್ಲಿ ಗೋಚರಿಸಲಿದ್ರೆ, ಪೂರ್ವ ಭಾಗಗಳಲ್ಲಿ ಸೂರ್ಯಾಸ್ತದ ವೇಳೆ, ಈಶಾನ್ಯ ಭಾಗಗಳಲ್ಲಿ ಸೂರ್ಯಾಸ್ತದ ಬಳಿಕ ಗ್ರಹಣ ಸಂಭವಿಸುತ್ತದೆ. ಇದನ್ನೂ ಓದಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ನಾಣ್ಯದಿಂದ ತುಲಾಭಾರ

    ಗ್ರಹಣದ ವೇಳೆ ಸೂರ್ಯಕಿರಣಗಳು ಕಣ್ಣುಗಳಿಗೆ ಅಪಾಯಕಾರಿ ಆಗಿರೋದ್ರಿಂದ ಗ್ರಹಣ ನೋಡಲು ಇಚ್ಛಿಸುವವರು ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಖಗೋಳ ಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. ನೆಹರು ತಾರಾಲಯ ನಗರದ ಮಧ್ಯ ಭಾಗದಲ್ಲಿರುವುದರಿಂದ ಗ್ರಹಣ ವೀಕ್ಷಣೆ ಸ್ವಲ್ಪ ಕಷ್ಟಸಾಧ್ಯ. ಹೀಗಾಗಿ ಯೂಟ್ಯೂಬ್ ಮೂಲಕ ವೀಕ್ಷಣೆ ಮಾಡಬಹುದು. ಬೆಂಗಳೂರು ಹೊರತು ಪಡಿಸಿ ಜಮ್ಮು ಕಾಶ್ಮೀರದಲ್ಲಿ 55%, ಲೇಹ್ ಲಡಾಖ್‍ನಲ್ಲಿ 54%ರಷ್ಟು ಸೂರ್ಯ ಗ್ರಹಣ ಗೋಚರವಾಗಲಿದೆ. ಭಾರತ ಮಾತ್ರ ಅಲ್ಲದೆ, ಯುರೋಪ್, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಹ ಗ್ರಹಣ ಗೋಚರಿಸಲಿದೆ. ರಷ್ಯಾದ ಉಗಾರದಲ್ಲಿ ಶೇಕಡಾ 85% ರಷ್ಟು ಅಂದ್ರೆ ಅತಿ ಹೆಚ್ಚು ಪ್ರಮಾಣದಲ್ಲಿ ಸೂರ್ಯ ಗ್ರಹಣ ಗೋಚರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲ ನೆಲಸಮ!

    ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲ ನೆಲಸಮ!

    ಬೆಂಗಳೂರು: ಸಿಲಿಕಾನ್ ಸಿಟಿಯ ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲವನ್ನು ನೆಲಸಮ ಮಾಡಲಾಗಿದೆ.

    ಅನಧಿಕೃತ ಎಂದು ತಹಶೀಲ್ದಾರರ ನೇತೃತ್ವದಲ್ಲಿ ದೇಗುಲವನ್ನು ನಾಶ ಮಾಡಲಾಗಿದೆ. ಇದೀಗ ದೇಗುಲವನ್ನು ಕೆಡವಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರಗಡೆ ಪ್ರತಿಷ್ಠಾಪನೆ ಮಾಡಿದ ಆಂಜನೇಯ ದೇಗುಲದ ಹೊರಭಾಗವನ್ನು ಕೂಡ ಸಿಬ್ಬಂದಿ ಜೆಸಿಬಿಯಲ್ಲಿ ತೆಗೆಯುತ್ತಿದ್ದಾರೆ.

    ಮಂತ್ರಿ ಮಹಲ್ ಹಾಗೂ ಬಸವೇಶ್ವರ ವೃತ್ತ (ವಿಧಾನ ಸೌಧದ ಬಳಿ) ಇರುವ ದರ್ಗಾ ಅಧಿಕೃತವೇ ಇದಕ್ಕೆ ಸರ್ಕಾರ ಅನುಮತಿ ನೀಡಿದೆಯಾ? ಹಿಂದೂ ದೇವಾಲಯಗಳೇ ಏಕೆ ಗುರಿ, ರಾಜಕೀಯ ವ್ಯಕ್ತಿಗಳಿಗೆ ಕಾನೋನು ಇಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು: ಡಿಕೆಶಿ

    ಮೂರ್ತಿಯನ್ನು ನೀವೇ ತೆಗೆದುಕೊಂಡು ಹೋಗಿ ಇಲ್ಲವೇ ನಾವೇ ಎತ್ತಿಕೊಂಡು ಹೋಗುತ್ತೇವೆ ಎಂದು ಸಿಬ್ಬಂದಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇವಾಲಯ ಆವರಣದೊಳಗೆ ಸಾರ್ವಜನಿಕರು ಜಮಾಯಿಸಿದ್ದಾರೆ. ಅಲ್ಲದೆ ಆಂಜನೇಯ ವಿಗ್ರಹ ತೆರವು ಹಿನ್ನೆಲೆಯಲ್ಲಿ ಕೊನೆಯ ಬಾರಿ ಪೂಜೆ ಸಲ್ಲಿಸಿ ಗ್ರಾಮಸ್ಥರು ಭಾವುಕರಾದರು.

  • ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಢಾಕಾ: ಇಸ್ಕಾನ್ ದೇಗುಲದ ಮೇಲೆ 200 ಜನರು ಗುಂಪೊಂದು ಏಕಾಏಕಿ ದಾಳಿ ಮಾಡಿದ್ದಾರೆ. ದೇವಾಲಯದ ವಸ್ತುಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

    ಹಿಂದೂ ದೇವಾಲಯದ ಮೇಲೆ ಬರೋಬ್ಬರಿ 200 ಜನರು ಗುಂಪೊಂದು ದಾಳಿ ಮಾಡಿದೆ. ದೇವಾಲದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಲ್ಲದೆ ಅರ್ಚಕರ ಮೇಲೆ ಮನಬಂದಂತೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

    ಮೂಲಗಳ ಪ್ರಕಾರ, ಬಾಂಗ್ಲಾ ಮೂಲದ ಹಾಜೀ ಶಫೀವುಲ್ಲಾ ನೇತೃತ್ವದಲ್ಲಿ ಇನಸ್ಕಾನ್ ದೇಗುಲ ಮೇಲೆ ಅಟ್ಯಾಕ್ ಮಾಡಲಾಗಿದೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಇಸ್ಕಾನ್‍ನಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಏಕಾಏಕಿ ನುದ್ದಿದ 200 ಜನರ ಗುಂಪು ದಾಳಿ ಮಾಡಿದೆ. ದೇವಾಲಯದಲ್ಲಿರುವ ಬೆಳ್ಳಿ ದೀಪ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇಸ್ಕಾನ್ ದೇಗುಲದ ಅರ್ಚಕರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾರತದ ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ್ ದಾಸ್ ದಾಳಿಯನ್ನು ತೀತ್ರ ಖಂಡಿಸಿದ್ದಾರೆ. ಪಕ್ಕದ ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯ ಈ ದಾಳಿಯಲ್ಲಿ ಯಾರ ಕೈವಾಡ ಇದೆ ಅನ್ನೋ ಬಗ್ಗೆ ಬಾಂಗ್ಲಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮುಚ್ಚಿದ ದೇಗುಲದ ಮುಂದಿನ ರಸ್ತೆಯಲ್ಲೇ 91 ಜೋಡಿ ವಿವಾಹ!

    ಮುಚ್ಚಿದ ದೇಗುಲದ ಮುಂದಿನ ರಸ್ತೆಯಲ್ಲೇ 91 ಜೋಡಿ ವಿವಾಹ!

    ಚೆನ್ನೈ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್‍ಡೌನ್ ನಡುವೆಯೂ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗೆ 91 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.

    ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ ವಾರಾಂತ್ಯ ಲಾಕ್‍ಡೌನ್ ಜಾರಿಗೊಳಿಸಿದೆ. ಹೀಗಾಗಿ ಭಾನುವಾರ ದೇಗುಲವನ್ನು ಬಂದ್ ಮಾಡಲಾಗಿತ್ತು. ಆದರೆ ಶುಭ ಮುಹೂರ್ತವಿದ್ದ ಕಾರಣ ಅರ್ಚಕರು ದೇಗುಲದ ಹೊರಗಿನ ರಸ್ತೆಯಲ್ಲಿಯೇ ವಿವಾಹ ನಡೆಸಿಕೊಟ್ಟರು ಎಂದು ದೇಗುಲದ ಆಡಳಿತ ಮಂಡಳಿ ಅಧಿಕಾರಿ ಎ.ವೀರಬತೀರನ್ ಮತ್ತು ಕಾರ್ಯದರ್ಶಿ ರತೀನಾ ಸಭಾಪತಿ ಅವರು ತಿಳಿಸಿದರು. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

    ಶುಭ ಮುಹೂರ್ತವಿದ್ದ ಕಾರಣ 110 ಜೋಡಿ ಮದುವೆಗೆ ನೋಂದಣಿ ಮಾಡಿಸಿದ್ದರು. ಬೆಳಗ್ಗೆ 4.30ರಿಂದ 11ರ ನಡುವಿನ ಅವಧಿಯಲ್ಲಿ ವಿವಾಹ ನೆರವೇರಿತು. ವಿಷ್ಣುವಿನ ಈ ದೇವಸ್ಥಾನದಲ್ಲಿ ಮದುವೆಯಾದರೆ ಒಳ್ಳೆಯದು ಎಂಬ ನಂಬಿಕೆಯಿದೆ. ವಿವಿಧ ಭಾಗಗಳ ಜನರು ಬಂದು ಇಲ್ಲಿ ಮದುವೆಯಾಗುತ್ತಾರೆ. ದೇಗುಲದ ಸಭಾಂಗಣದಲ್ಲಿ ಒಟ್ಟಿಗೆ 40 ಜೋಡಿ ವಿವಾಹವಾಗಲು ಅವಕಾಶವಿದೆ. ದೇಗುಲ ತೆರೆದಿರುವ ಸಾಮಾನ್ಯ ದಿನಗಳಲ್ಲಿ ಮದುವೆಯಾಗುವ ಜೋಡಿಗಳಿಗೆ ಯಾವುದೇ ಮಿತಿ ಇಲ್ಲ. ತಮಿಳುನಾಡಿನಲ್ಲಿ ಹೊಸದಾಗಿ 30,850 ಕೊರೊನಾ ಪ್ರಕರಣ ದೃಢಪಟ್ಟಿವೆ. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

  • ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ಮೌಲ್ಯದ ಶಿವಲಿಂಗ ಪತ್ತೆ!

    ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ಮೌಲ್ಯದ ಶಿವಲಿಂಗ ಪತ್ತೆ!

    ಚೆನ್ನೈ: ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್‌ನಲ್ಲಿದ್ದ 500 ಕೋಟಿ ರೂ. ಮೌಲ್ಯದ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಎಸ್. ಅರುಣ ಭಾಸ್ಕರ್‌ರನ್ನು ವಿಚಾರಣೆ ನಡೆಸಲಾಗುತ್ತಿದೆ. ಅರುಣ ಭಾಸ್ಕರ್ ತಂದೆ ಎನ್.ಎ.ಸಾಮಿಯ್ಯಪ್ಪನ್ ಹೆಸರಲ್ಲಿರುವ ಬ್ಯಾಂಕ್ ಲಾಕರ್‌ನಲ್ಲಿ ಪಚ್ಚೆ ಹಾಗೂ ಹರಳುಯುಕ್ತ ಶಿವಲಿಂಗ ದೊರೆತಿದೆ.

    POLICE JEEP

    ದೇಗುಲಗಳ ಹಳೆಯ ವಿಗ್ರಹಗಳನ್ನು ಕದ್ದು, ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಅದರ ಆಧಾರದ ಮೇಲೆ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜಾರಾಮ್ ಮತ್ತು ಅಧಿಕಾರಿಗಳು ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ:  8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

    ಈ ಸಂದರ್ಭದಲ್ಲಿ ಅರುಣ ಭಾಸ್ಕರ್ ತಂದೆ ಎನ್.ಎ.ಸಾಮಿಯ್ಯಪ್ಪನ್ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ರೂ. ಮೌಲ್ಯದ ಶಿವಲಿಂಗ ಇರುವ ಮಾಹಿತಿ ದೊರೆತಿದೆ. ಶಿವಲಿಂಗಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲದ ಕಾರಣ ಲಿಂಗವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ಶಿವಲಿಂಗವು 8 ಸೆ.ಮೀ. ಉದ್ದ, 500 ಗ್ರಾಂ ಭಾರವಿದೆ. ತಿರುವರೂರ್ ಜಿಲ್ಲೆಯ ತಿರುಕ್ಕುವಲೈ ಎಂಬಲ್ಲಿರುವ ಶಿವಲಿಂಗವೊಂದು ಕಳವಾಗಿತ್ತು. ಪತ್ತೆಯಾಗಿರುವ ಶಿವಲಿಂಗ ಆ ದೇಗುಲದ್ದೇ ಎಂದು ಪೊಲೀಸರು ಶಂಕಿಸಿದ್ದಾರೆ.

  • ಆಂಜನೇಯ ದೇಗುಲಕ್ಕೆ ಬೆಂಕಿ ಹಚ್ಚಿ ವಿಗ್ರಹ ಜಖಂ ಮಾಡಿದ ಕಿಡಿಗೇಡಿಗಳು!

    ಆಂಜನೇಯ ದೇಗುಲಕ್ಕೆ ಬೆಂಕಿ ಹಚ್ಚಿ ವಿಗ್ರಹ ಜಖಂ ಮಾಡಿದ ಕಿಡಿಗೇಡಿಗಳು!

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಬಳಿ ಆಂಜನೇಯ ದೇಗುಲಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡ ರಾತ್ರಿ ನಡೆದಿದೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಾಸ್ ಟೋಲ್ ಬಳಿ ಇರುವ ಸರ್ಕಲ್ ಆಂಜನೇಯ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಕಿಡಿಗೇಡಿಗಳು ವಿಗ್ರಹವನ್ನು ಜಖಂ ಮಾಡಿ ಹೀನ ಕೃತ್ಯ ವೆಸಗಿದ್ದಾರೆ. ದೇವರ ವಿಗ್ರಹ ಹಾಗೂ ಸಂಪೂರ್ಣ ದೇವಾಲಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

    ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವನ್ನು ಖಂಡಿಸಿದ ಹಲವಾರು ಮುಖಂಡರು ಮತ್ತು ಸಂಘಟನೆಗಳು, ಈ ಘಟನೆಯನ್ನು ಪೊಲಿಸರು ಮತ್ತು ತಾಲೂಕು ಆಡಳಿತ ಗಂಭೀರವಾಗಿ ತೆಗೆದುಕೊಂಡು ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು. ಕೋಮು ಸೌರ್ಹಾದತೆಯನ್ನು ಯಾರು ಕದಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.