Tag: ದೆಹಲಿ ಸರ್ಕಾರ

  • ಭಾರೀ ಮಳೆಗೆ ಮೃತಪಟ್ಟವರ ಕುಟುಂಬಗಳಿಗೆ ದೆಹಲಿ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ

    ಭಾರೀ ಮಳೆಗೆ ಮೃತಪಟ್ಟವರ ಕುಟುಂಬಗಳಿಗೆ ದೆಹಲಿ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಾಖಲೆಯ ಮಳೆ ಸುರಿದಿದ್ದು, ಶುಕ್ರವಾರ ಸುರಿದ ಭಾರೀ (Rain) ಮಳೆಯಿಂದಾಗಿ ಮೃಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ದೆಹಲಿ ಸರ್ಕಾರವು (Delhi Government) ಭಾನುವಾರ ಘೋಷಿಸಿದೆ.

    ಕಂದಾಯ ಇಲಾಖೆಗೆ ಅಧಿಕೃತ ಸಂವಹನದಲ್ಲಿ ದೆಹಲಿ ಹಣಕಾಸು ಸಚಿವ ಅತಿಶಿ (Atishi), ಜೂನ್ 28 ರಂದು ಸುರಿದ ವಿಪರೀತ ಮಳೆಗೆ ಸಾವು-ನೋವುಗಳು ಸಂಭವಿಸಿದೆ. ಹೀಗಾಗಿ ಭಾರೀ ಮಳೆಗೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಅತಿಶಿ ತಮ್ಮ ಎಕ್ಸ್‌ ಖಾತೆಯಲ್ಲಿ, ಜೂನ್ 28 ರಂದು ಹಲವು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. 24 ಗಂಟೆಗಳಲ್ಲಿ 228 ಮಿ.ಮೀ ತೀವ್ರ ಮಳೆಯ ನಂತರ, ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಾಗುವುದು. ಈ ಪರಿಹಾರವು ಮೃತರ ಕುಟುಂಬಗಳಿಗೆ ತ್ವರಿತವಾಗಿ ತಲುಪುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಿಯಾಸಿ ಭಯೋತ್ಪಾದಕ ದಾಳಿ – ಉಗ್ರರ ಮೇಲೆ ಹದ್ದಿನ ಕಣ್ಣು, ರಜೌರಿಯ ಹಲವೆಡೆ NIA ರೇಡ್‌

    ಎಲ್ಲೆಲ್ಲಿ ಏನೇನಾಗಿದೆ..?: ಎರಡು ದಿನಗಳ ಮುಂಗಾರು ಮಳೆಗೆ ಸುಮಾರು 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಾಯುವ್ಯ ದೆಹಲಿಯ ಬದ್ಲಿಯಲ್ಲಿ ಶನಿವಾರ ಇಬ್ಬರು ಬಾಲಕರು ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ಮುಳುಗಿ ಸಾವನ್ನಪ್ಪಿರುವುದು ಸೇರಿದಂತೆ ಕೆಲವು ಪ್ರಮುಖ ಘಟನೆಗಳು ನಡೆದಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ ಅಂಡರ್‌ಪಾಸ್‌ ಜಲಾವೃತವಾಗಿತ್ತು.

    ಓಖ್ಲಾದಲ್ಲಿ 60 ವರ್ಷದ ವ್ಯಕ್ತಿ ದಿಗ್ವಿಜಯ್ ಕುಮಾರ್ ಚೌಧರಿ ಜಲಾವೃತಗೊಂಡ ಅಂಡರ್‌ಪಾಸ್‌ನಲ್ಲಿ ತನ್ನ ಸ್ಕೂಟರ್‌ನೊಂದಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದಲ್ಲದೆ ಜೂನ್ 28 ರಂದು ಸರಿದ ಭಾರೀ ಮಳೆಗೆ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋಡೆಯ ಅವಶೇಷಗಳಿಂದ ಮೂವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಯರಿಗಾಗಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal Government) ನೇತೃತ್ವದ ಸರ್ಕಾರ ಬಂಪರ್ ಯೋಜನೆ ಪ್ರಕಟಿಸಿದೆ.

    ಸೋಮವಾರ ದೆಹಲಿ ವಿಧಾನಸಭೆಯಲ್ಲಿ ರಾಜ್ಯ ಹಣಕಾಸು ಸಚಿವೆ ಅತಿಶಿ 2024-25ನೇ ಸಾಲಿನ‌ ವರ್ಷದ ಬಜೆಟ್‌ ಮಂಡಿಸಿದ್ದಾರೆ. 76,000 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದು, ತಮ್ಮ ಚೊಚ್ಚಲ ಬಜೆಟ್‌ನಲ್ಲಿ ʻಮುಖ್ಯಮಂತ್ರಿ ಮಹಿಳಾ ಸಮ್ಮಾನ್ʼಯೋಜನೆ (Mukyamnatri Mahila Samman Yojana) ಘೋಷಿಸಿದರು.

    ಈ ಯೋಜನೆ ಅಡಿಯಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರು (Delhi Women) ಪ್ರಸಕ್ತ ಆರ್ಥಿಕ ವರ್ಷದಿಂದ ಪ್ರತಿ ತಿಂಗಳು 1,000 ರೂ. ಆದಾಯ ಪಡೆಯಲಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವೂ ಇದಾಗಿದೆ ಎಂದು ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದರು. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಇಲ್ಲಿಯವರೆಗೆ ದೆಹಲಿಯಲ್ಲಿ ಶ್ರೀಮಂತರ ಕುಟುಂಬದ ಮಕ್ಕಳು ಶ್ರೀಮಂತರಾಗಿ, ಬಡ ಕುಟುಂಬದ ಮಕ್ಕಳು ಬಡವರಾಗಿಯೇ ಉಳಿಯುತ್ತಿದ್ದರು. ಇದು ರಾಮರಾಜ್ಯದ ಪರಿಕಲ್ಪನೆಗೆ ವಿರುದ್ಧವಾಗಿತ್ತು. ಆದ್ರೆ ನಮ್ಮ ಸರ್ಕಾರ ರಾಮರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಬಜೆಟ್‌ ಮಂಡಿಸಿದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ಕೇಜ್ರಿವಾಲ್ ಸರ್ಕಾರವು 2015 ರಿಂದ 22,711 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಿದೆ. ಶಿಕ್ಷಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ವರ್ಷ ಶಿಕ್ಷಣಕ್ಕಾಗಿ 16,396 ಕೋಟಿ ರೂ., ದೆಹಲಿಯ ಆರೋಗ್ಯ ಕ್ಷೇತ್ರಕ್ಕೆ 8,685 ರೂ.ಗಳನ್ನು ಮೀಸಲಿಡಲಾಗಿದೆ. ಈ ಅನುದಾನದ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ 6,215 ರೂ.ಗಳಷ್ಟು ಮೂಲ ಸೌಕರ್ಯಗಳ ಸೌಲಭ್ಯ ಸಿಗಲಿದೆ. ಅಲ್ಲದೇ ಹೊಸ ಆಸ್ಪತ್ರೆಗಳ ನಿರ್ಮಾಣಕ್ಕೆ 400 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

  • ಆರ್‌ಆರ್‌ಟಿಎಸ್ ಯೋಜನೆಗೆ ಅನುದಾನ ಬಿಡುಗಡೆಗೆ ವಿಳಂಬ – ದೆಹಲಿ ಸರ್ಕಾರಕ್ಕೆ ಸುಪ್ರೀಂ ಚಾಟಿ

    ನವದೆಹಲಿ: ದೆಹಲಿ-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್‍ಗೆ (RRTS) ಅನುದಾನ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವ ದೆಹಲಿ ಸರ್ಕಾರವನ್ನು ಸುಪ್ರೀಂಕೋರ್ಟ್ (Supreme Court) ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ಅನುದಾನ ನೀಡದಿದ್ದಲ್ಲಿ ಜಾಹೀರಾತಿಗೆ ಮೀಸಲಿಟ್ಟ ಹಣವನ್ನು ಬಳಸುವ ಆದೇಶವನ್ನು ನ್ಯಾಯಾಲಯ ಪುನರ್ ಉಚ್ಚರಿಸಿದೆ.

    ಕ್ಷಿಪ್ರ ರೈಲು ಯೋಜನೆಗೆ ಹಣವನ್ನು ಒದಗಿಸಲು ದೆಹಲಿ (Delhi) ಸರ್ಕಾರ ವಿಫಲವಾದರೆ, ಈ ಮೊತ್ತವನ್ನು ಅರವಿಂದ್ ಕೇಜ್ರಿವಾಲ್ (Arvind Crazywal) ಸರ್ಕಾರದ ಈ ವರ್ಷದ ಜಾಹೀರಾತು ಬಜೆಟ್‍ನಿಂದ ನೀಡುವ ಬಗ್ಗೆ ಕಳೆದ ನವೆಂಬರ್‌ನಲ್ಲಿ ನ್ಯಾಯಾಲಯ ಆದೇಶಿಸಿತ್ತು. ಇಂದಿನ ವಿಚಾರಣೆಯಲ್ಲಿ, ಸರ್ಕಾರ ಬಜೆಟ್ ಹಂಚಿಕೆಗೆ ಅನುಮತಿ ನೀಡಿದೆ ಮತ್ತು ಕೇಂದ್ರದ ಅನುಮೋದನೆಗೆ ಕಾಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. 7 ದಿನಗಳೊಳಗೆ ಕೇಂದ್ರದ ಒಪ್ಪಿಗೆ ಪಡೆಯುವಂತೆ ದೆಹಲಿ ಸರ್ಕಾರಕ್ಕೆ ಈ ವೇಳೆ ಸುಪ್ರೀಂಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕ

    ಹಿಂದಿನ ವಿಚಾರಣೆಯ ವೇಳೆ, ದೆಹಲಿ ಸರ್ಕಾರ ಜಾಹೀರಾತಿಗಾಗಿ 580 ಕೋಟಿ ರೂ. ಬಜೆಟ್ ಮಾಡಬಹುದು ಆದರೆ ಯೋಜನೆಗೆ ಪಾವತಿಸಬೇಕಾದ 400 ಕೋಟಿ ರೂ. ಹಣ ಒದಗಿಸಲು ಸಾಧ್ಯವಿಲ್ಲವೇ? ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತ್ತು. ಅಲ್ಲದೇ ರಾಷ್ಟ್ರೀಯ ಯೋಜನೆಗಳ ಮೇಲೆ ಇದು ಪರಿಣಾಮ ಬೀರಿದರೆ ಜಾಹೀರಾತಿಗಾಗಿ ಮೀಸಲಿಟ್ಟ ಹಣವನ್ನು ಖರ್ಚು ಮಾಡಲು ನಿರ್ದೇಶಿಸುತ್ತೇವೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠ ಹೇಳಿತ್ತು.

    ಆರ್‌ಆರ್‌ಟಿಎಸ್ ಯೋಜನೆಯು ದೆಹಲಿಯನ್ನು ಉತ್ತರ ಪ್ರದೇಶದ ಮೀರತ್, ರಾಜಸ್ಥಾನದ ಅಲ್ವಾರ್ ಮತ್ತು ಹರಿಯಾಣದ ಪಾಣಿಪತ್‍ಗೆ ಸಂಪರ್ಕಿಸುವ ವೇಗದ ರೈಲು ಕಾರಿಡಾರ್ ಯೋಜನೆಯಾಗಿದೆ. ಅನುದಾನದ ಕೊರತೆಯಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಮಾಲಿನ್ಯ ಮತ್ತು ಟ್ರಾಫಿಕ್ ಸಮಸ್ಯೆಗೆ ಇದು ಪರಿಹಾರ ಎಂದು ಕೋರ್ಟ್ ಪರಿಗಣಿಸಿದೆ. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ – ರಾಗಿ ಮುದ್ದೆಗೆ ಸೈನೈಡ್ ಬೆರೆಸಿದ್ದೆ ಎಂದ ಪತಿರಾಯ!

  • ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Delhi Air Pollution) ತಗ್ಗಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿವೆ. ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು (Delhi Schools) ತೆರೆಯಲಾಗಿದ್ದು, ಇದರಲ್ಲಿ ನರ್ಸರಿಯಿಂದ 12ನೇ ತರಗತಿವರೆಗಿನ ಎಲ್ಲಾ ತರಗತಿಗಳನ್ನು ಭೌತಿಕ ಕ್ರಮದಲ್ಲಿ ನಡೆಸಲಾಗುತ್ತಿದೆ. ಆದರೆ, ಕೆಲವು ಖಾಸಗಿ ಶಾಲೆಗಳು ನರ್ಸರಿಯಿಂದ 5ನೇ ತರಗತಿವರೆಗಿನ ತರಗತಿಗಳನ್ನು ಮುಚ್ಚಲು ನಿರ್ಧರಿಸಿವೆ.

    ಮಾಲಿನ್ಯ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದು ಖಾಸಗಿ ಶಾಲೆಗಳು ಹೇಳಿವೆ. ಈ ಸಂಬಂಧ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದು, ಒಂದು ವಾರದವರೆಗೆ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ದೆಹಲಿ ವಿಶ್ವವಿದ್ಯಾನಿಲಯವು ವಾಯು ಮಾಲಿನ್ಯದ ದೃಷ್ಟಿಯಿಂದ ನವೆಂಬರ್ 13-19ರ ವರೆಗೆ ಚಳಿಗಾಲದ ರಜೆಯನ್ನು ಘೋಷಿಸಿತ್ತು. ಮಾಲಿನ್ಯ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಎಲ್ಲ ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸಿದೆ. ಕಾಲೇಜುಗಳು ಬಹಳ ದಿನಗಳಿಂದ ಮುಚ್ಚಲ್ಪಟ್ಟಿವೆ, ಹೀಗಾಗಿ ಶಿಕ್ಷಣಕ್ಕೆ ನಷ್ಟವಾಗದಂತೆ ಕಾಲೇಜುಗಳನ್ನು ತೆರೆಯುವುದು ಕಡ್ಡಾಯವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಗಾಳಿಯ ದಿಕ್ಕು ಮತ್ತು ಗಾಳಿಯ ವೇಗದಲ್ಲಿನ ಬದಲಾವಣೆಯಿಂದಾಗಿ ಗಾಳಿಯ ಗುಣಮಟ್ಟವು ತೀವ್ರ ವರ್ಗದಿಂದ ಕಡಿಮೆಯಾಗಿದೆ ಆದರೆ ಗಾಳಿಯು ಇನ್ನೂ ಅತ್ಯಂತ ಕಳಪೆ ವಿಭಾಗದಲ್ಲಿದೆ. ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಒಟ್ಟಾರೆ AQI 398 ರೊಂದಿಗೆ ಅತ್ಯಂತ ಕಳಪೆ ವರ್ಗದಲ್ಲಿದೆ. ಬೆಳಗಿನ ಜಾವ ಗಾಳಿ ಬೀಸುತ್ತಿರುವುದರಿಂದ ಮಂಜು ಮತ್ತು ಹೊಗೆಯ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

  • ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ದೆಹಲಿಯಲ್ಲಿ ವಾಯು ಮಾಲಿನ್ಯ – ಪಂಜಾಬ್, ಹರಿಯಾಣ, ಯುಪಿ ಸರ್ಕಾರಕ್ಕೂ ಸುಪ್ರೀಂ ಚಾಟಿ

    ನವದೆಹಲಿ: ಪ್ರತಿ ವರ್ಷವೂ ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ಹೆಚ್ಚುತ್ತಿದೆ, ತೀವ್ರ ವಾಯು ಮಾಲಿನ್ಯ ಎದುರಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವೇನು? ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನೆ ಮಾಡಿದೆ.

    ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಕೆ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠ ದೆಹಲಿ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಕ್ಕೆ (Rajasthan Government)  ಚಾಟೀ ಬೀಸಿದೆ.

    ದೆಹಲಿಯಲ್ಲಿನ ವಾಯುಮಾಲಿನ್ಯ ಸಮಸ್ಯೆಯನ್ನು ರಾಜಕೀಯ ಚರ್ಚೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಮಕ್ಕಳು ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ (Health Problem) ಎದುರಿಸುತ್ತಿದ್ದಾರೆ, ಕೂಡಲೇ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಬೇಕು ಮತ್ತು ಶುಕ್ರವಾರದೊಳಗೆ ಪರಿಸ್ಥಿತಿ ಸುಧಾರಣೆಗೆ ಕ್ರಮವಹಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

    ಕೃಷಿ ತಾಜ್ಯ ಅಥವಾ ಹುಲ್ಲು ಸುಡುವಿಕೆ 20-50 ದಿನಗಳವರೆಗೆ ಮಾತ್ರ ಸಂಭವಿಸುತ್ತದೆ ಎಂದು ಪಂಜಾಬ್ ಎ‌ಜಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದರ ಬಗ್ಗೆ ನಮಗೆ ಬೇಕಾಗಿಲ್ಲ, ಹುಲ್ಲು ಸುಡುವುದು ಕೂಡಲೇ ನಿಲ್ಲಬೇಕು, ಎಲ್ಲ ರಾಜ್ಯಗಳು ಬೆಂಕಿಯನ್ನು ನಿಲ್ಲಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ. ನಿಮ್ಮ ಸ್ಥಳೀಯ ಠಾಣೆಯ ಎಸ್‌ಎಚ್‌ಒ ಸಹ ಇದಕ್ಕೆ ಜವಾಬ್ದಾರಿಯಾಗಿರಬೇಕು. ಇಂದಿನಿಂದ ಅವರು ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ತಾಕೀತು ಮಾಡಿತು.

    ವಿಚಾರಣೆಯ ಸಂದರ್ಭದಲ್ಲಿ, ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ವಾದಿಸಿ, ದೆಹಲಿಯಲ್ಲಿ ಸ್ಥಾಪಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಹಿಂದಿನ ನಿರ್ದೇಶನಗಳ ನಂತರ ಅಳವಡಿಸಲಾದ ಸ್ಮೋಗ್ ಟವರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಾವು ಟವರ್‌ಗಳು ಕಾರ್ಯನಿರ್ವವಂತೆ ಮಾಡಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿತು. ಇದನ್ನೂ ಓದಿ: ಇಸ್ರೇಲ್‌ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್‌ ಅಧ್ಯಕ್ಷ ಮನವಿ

    ಇನ್ನೂ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದ ಪೀಠ, ದೆಹಲಿ ಸರ್ಕಾರದ ಮಾಲಿನ್ಯ ನಿಯಂತ್ರಣ ಕ್ರಮಗಳು, ಅದರಲ್ಲೂ ವಿಶೇಷವಾಗಿ ಬೆಸ-ಸಮ ಯೋಜನೆಗೆ ಎಂದಾದರೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆಯೇ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿತು. ದೀಪಾವಳಿಯ ನಂತರ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ಈ ಯೋಜನೆ ಎಂದಾದರೂ ಯಶಸ್ವಿಯಾಗಿದಿಯೇ? ಎಂದು ಪ್ರಶ್ನಿಸಿತು. ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿದೆ: ಆರೋಪಿ ಟ್ರೋಲ್‌ ಮಿನಿಸ್ಟರ್‌ ಖರ್ಗೆ ಆಪ್ತ ಎಂದ ಬಿಜೆಪಿ

    ದೆಹಲಿ ಸರ್ಕಾರ ಪರ ವಾದ ಮಂಡಿಸಿದ ವಕೀಲರು, ಮೂರು‌ ಹಂತಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಮತ್ತು 4ನೇ ಹಂತದಲ್ಲಿ‌ ಕೈಗೊಳ್ಳಲಿರುವ ಪ್ರಯತ್ನಗಳೇನು? ಎಂದು ಮನವರಿಕೆ ಮಾಡಿದರು‌. ವರ್ಕ್‌ಫ್ರಮ್‌ ಹೋಮ್‌ ವಾಹನಗಳ ನಿರ್ಬಂಧ ಮತ್ತು ಮರಗಳಿಗೆ ನೀರಿನ ಸಿಂಪಡಿಕೆ‌ ಬಗ್ಗೆ ವಿವರಿಸಿದರು. ಶುಕ್ರವಾರ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಸಿಎಂಗೆ ಮನವಿ: ಪರಮೇಶ್ವರ್  

  • ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ಸಿಬಿಐ ದಾಳಿಗೆ ಒಳಗಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.

    ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಲಾದ ವ್ಯಕ್ತಿಗಳ ಪಟ್ಟಿಯಲ್ಲಿರುವ ಮನೀಶ್ ಸಿಸೋಡಿಯಾ ಹಾಗೂ ಇತರೆ 8 ಮಂದಿ ವಿರುದ್ಧ ಇಂದು ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಜೊತೆಗೆ ಸಿಸೋಡಿಯಾ ವಿದೇಶ ಪ್ರಯಾಣ ಮಾಡದಂತೆ ಸಿಬಿಐ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಖ್ಯಾತ ಗಾಯಕಿ ನಯ್ಯಾರ ನೂರ್‌ ನಿಧನ

    8 ಖಾಸಗಿ ಆರೋಪಿಗಳ ವಿರುದ್ಧವಷ್ಟೇ ಲುಕ್‌ಔಟ್ ನೋಟೀಸ್ ಹೊರಡಿಸಲಾಗಿದೆಯೇ ಹೊರತು ನಾಲ್ವರು ಸಮಾಜ ಸೇವಕರ ವಿರುದ್ಧ ಅಲ್ಲ. ಸಮಾಜ ಸೇವಕರು ದೇಶ ಬಿಟ್ಟು ಹೋಗುವುದಿಲ್ಲವಾದ್ದರಿಂದ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸುವ ಅವಶ್ಯಕತೆ ಸದ್ಯಕ್ಕಿಲ್ಲ ಎಂದೂ ಸಿಬಿಐ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ

    ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಒಟ್ಟು 9 ಖಾಸಗಿ ವ್ಯಕ್ತಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಿದೆ. ಇನ್ನೊಂದೆಡೆ, ಉದ್ಯಮಿ ವಿಜಯ್ ನಾಯರ್, ಬ್ರಿಂಡ್ಕೊ ಸ್ಪಿರಿಟ್ಸ್ ಮಾಲೀಕ ಮನದೀಪ್ ಧಾಲ್, ಇಂಡೋಸ್ಪಿರಿಟ್‌ನ ಎಂ.ಡಿ ಸಮೀರ್ ಮಹೇಂದ್ರು ಮತ್ತು ಹೈದರಾಬಾದ್ ಮೂಲದ ಅರುಣ್ ರಾಮಚಂದ್ರ ಪಿಳ್ಳೈ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಲಾಗಿದೆ.

    ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ವ್ಯಕ್ತಿಗಳು ಮತ್ತು ಘಟಕಗಳಲ್ಲಿ ಸಿಸೋಡಿಯಾ ಕೂಡ ಸೇರಿದ್ದಾರೆ. ಅದಕ್ಕಾಗಿ ಶುಕ್ರವಾರ ಸಿಸೋಡಿಯಾ ಅವರ ನಿವಾಸ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ

    ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ

    ನವದೆಹಲಿ: ದೆಹಲಿ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ.

    ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಆನ್‍ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವುದಾಗಿ ತಿಳಿಸಿದರು. ಕೊರೊನಾ ವೈರಸ್ ಹಿನ್ನೆಲೆ ತಮ್ಮ ಸರ್ಕಾರವು 2020ರ ಏಪ್ರಿಲ್‍ನಿಂದ ಸುಮಾರು 73 ಲಕ್ಷ ನಾಗರಿಕರಿಗೆ ಉಚಿತವಾಗಿ ಪಡಿತರವನ್ನು ಪೂರೈಸುತ್ತಿದೆ. ಇದರ ಪ್ರಯೋಜನವನ್ನು 73 ಲಕ್ಷ ಮಂದಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್‌ – ಯಾವುದೇ ಫೀಸ್‌ ಕಟ್ಟುವ ಅಗತ್ಯವಿಲ್ಲ

    Arvind Kejriwal

    ದೆಹಲಿ ಸರ್ಕಾರವು ಕಳೆದೆರಡು ವರ್ಷಗಳಿಂದ ಜನರಿಗೆ ಉಚಿತವಾಗಿ ಪಡಿತರವನ್ನು ನೀಡುತ್ತಿದೆ. ಸರ್ಕಾರ ಪಡಿತರ ಅಂಗಡಿಗಳ ಮೂಲಕ ಅತೀ ಕಡಿಮೆ ಬೆಲೆಗೆ ಪಡಿತರವನ್ನು ನೀಡುತ್ತಿದೆ. ಕಳೆದೆರಡು ವರ್ಷಗಳಿಂದ ನಾವು ಉಚಿತವಾಗಿ ಪಡಿತರವನ್ನು ನೀಡುತ್ತಿದ್ದೇವೆ. ಇದೀಗ ಈ ಯೋಜನೆಯನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಿಸಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಉಚಿತವಾಗಿ ಪಡಿತರ ನೀಡುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ

    ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‍ಎಫ್‍ಎಸ್‍ಎ), 2013 ರ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಎನ್‍ಎಫ್‍ಎಸ್‍ಸಿ ವರ್ಗವು ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗೃಹ ಸಹಾಯಕರು ಮತ್ತು ಪಡಿತರ ಚೀಟಿಗಳನ್ನು ಹೊಂದಿರದವರಿಗೂ ರೇಷನ್ ನೀಡಲಾಗುತ್ತಿದೆ.

    ಈ ಯೋಜನೆಯಡಿಯಲ್ಲಿ ಎನ್‍ಎಫ್‍ಎಸ್ ಕಾಯಿದೆ 2013ರ ಅಡಿಯಲ್ಲಿ ಸೂಚಿಸಲಾದ ಅರ್ಹತೆಯ ಪ್ರಕಾರ ಪ್ರತಿ ತಿಂಗಳು ಐದು ಕೆಜಿ ಆಹಾರ ಧಾನ್ಯಗಳು ಮತ್ತು ನಾಲ್ಕು ಕೆಜಿ ಗೋಧಿ ಮತ್ತು ಒಂದು ಕೆಜಿ ಅಕ್ಕಿಯನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ. ದೆಹಲಿ ಸರ್ಕಾರವು ಈ ಹಿಂದೆ ಉಚಿತ ಪಡಿತರ ಯೋಜನೆಯನ್ನು 2021ರ ಡಿಸೆಂಬರ್‌ನಿಂದ 2022ರ ಮೇವರೆಗೆ ವಿಸ್ತರಿಸಿತ್ತು.

    Live Tv

  • ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

    ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ತರಬೇತಿಯಿಲ್ಲದೆ ತಲೆಕೂದಲು ಕಸಿ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಸಲೂನ್‌ಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿದೆ.

    Salon

    ನಗರದೆಲ್ಲೆಡೆ ಸಲೂನ್‌ಗಳು ನಾಯಿಕೊಡೆಗಳಂತೆ ಎಲೆ ಎತ್ತುತ್ತಿದ್ದು, ಸ್ವಘೋಷಿತ ತಂತ್ರಜ್ಞರು ವೈದ್ಯಕೀಯ ನೈತಿಕತೆಯನ್ನು ಬದಿಗೊತ್ತಿ, ತಲೆಕೂದಲು ಕಸಿ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ

    ಕೂದಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ವ್ರಣವಾಗಿ (ಗಾಯವಾಗಿ) ಮೃತಪಟ್ಟ 35 ವರ್ಷದ ಅಥರ್ ರಶೀದ್ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.

    haircut salon

    ಇಂತಹ ಸಲೂನ್‌ಗಳು ತಲೆ ಎತ್ತುತ್ತಿರುವ ಬಗ್ಗೆ ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ದೆಹಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸೌಂದರ್ಯದ ಶಸ್ತ್ರಚಿಕಿತ್ಸೆ ಹಾಗೂ ಕೂದಲು ಕಸಿ ಮಾಡಲು ವೈದ್ಯಕೀಯ ಮಾರ್ಗಸೂಚಿಗಳು ಇಲ್ಲದಿದ್ದರೆ, ಅದಕ್ಕೆ ಸೂಕ್ತ ಕ್ರಮ ರೂಪಿಸಬೇಕು ಎಂದೂ ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

    ಕೂದಲು ಕಸಿ ವಿಧಾನ ಅಥವಾ ಸೌಂದರ್ಯ ಕಾಪಾಡುವ ಶಸ್ತ್ರಚಿಕಿತ್ಸೆಗಳು ಅನರ್ಹ ವೃತ್ತಿಪರರಿಂದ (ಚಿಕಿತ್ಸೆ ಬಗ್ಗೆ ತಿಳಿಯದೇ ವೃತ್ತಿ ಮಾಡುವವರು) ಮಾರಕವಾಗಬಹುದು ಎನ್ನುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ. ಇದಕ್ಕೆ ಕಟ್ಟುನಿಟ್ಟಿನ ವೈದ್ಯಕೀಯ ಮೇಲ್ವಿಚಾರಣೆಯೂ ಅಗತ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

    COURT (2)

    ಪ್ರಸ್ತುತ ರಶೀದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ವರ್ಮಾ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಹರೀಶ್‌ಶರ್ಮಾ ಹಾಗೂ ಇತರರೊಂದಿಗೆ ಯುನೈಟೆಡ್ ಹೇರ್ ಸ್ಟುಡಿಯೋ ನಡೆಸುತ್ತಿದ್ದ. ಶಸ್ತ್ರಚಿಕಿತ್ಸೆಗಾಗಿ ರಶೀದ್‌ನಿಂದ 30 ಸಾವಿರ ರೂ. ಶುಲ್ಕ ಪಡೆದಿದ್ದ. ಆದರೆ ಕೂದಲು ಕಸಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಹೊಂದಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ 

    ಈ ಹಿನ್ನೆಲೆಯಲ್ಲಿ ಕೇಂದ್ರ, ದೆಹಲಿ ರಾಜ್ಯ ಸರ್ಕಾರ, ದೆಹಲಿ ಪೊಲೀಸ್ ಆಯುಕ್ತರು, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ದೆಹಲಿ ವೈದ್ಯಕೀಯ ಮಂಡಳಿಗೆ ಸಮಸ್ಯೆ ನಿಭಾಯಿಸಲು ಮತ್ತು ಸ್ಥಿತಿಗತಿ ವರದಿ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೀಠ ಸೂಚಿಸಿದೆ.

  • ಕಛೇರಿಯಲ್ಲಿ ಶೇ.50, ಮದುವೆಗೆ 20 ಜನ ಮಾತ್ರ ಅವಕಾಶ – ಹೊಸ ನಿಯಮ ಜಾರಿಗೊಳಿಸಿದ ದೆಹಲಿ ಸರ್ಕಾರ

    ಕಛೇರಿಯಲ್ಲಿ ಶೇ.50, ಮದುವೆಗೆ 20 ಜನ ಮಾತ್ರ ಅವಕಾಶ – ಹೊಸ ನಿಯಮ ಜಾರಿಗೊಳಿಸಿದ ದೆಹಲಿ ಸರ್ಕಾರ

    ನವದೆಹಲಿ: ಓಮಿಕ್ರಾನ್ ಸೋಂಕಿತರ ಸಂಖ್ಯೆ ದೆಹಲಿಯಲ್ಲಿ ಮಿತಿ ಮೀರಿ ಏರಿಕೆ ಕಾಣುತ್ತಿದ್ದಂತೆ ದೆಹಲಿ ಸರ್ಕಾರ ಇನ್ನಷ್ಟು ಬಿಗಿ ಕ್ರಮಕ್ಕೆ ಮುಂದಾಗಿದೆ. ದೆಹಲಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಉದ್ಯೋಗಿಗಳೊಂದಿಗೆ ಕೆಲಸ ನಿರ್ವಹಿಸಲು ಮತ್ತು ಮದುವೆ ಸಮಾರಂಭಗಳಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಿದೆ.

    ಓಮಿಕ್ರಾನ್ ಸಂಖ್ಯೆ ದೆಹಲಿಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 50% ಉದ್ಯೋಗಿಗಳೊಂದಿಗೆ ಮಾತ್ರ ಕೆಲಸ ನಿರ್ವಹಿಸಲು ಅವಕಾಶ. ಅದೇ ರೀತಿ ಮಾಲ್, ಅಂಗಡಿ ಮುಂಗಟ್ಟುಗಳು ಕೂಡ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಸರ್ಕಾರ ಸೂಚಿಸಿದ್ದು ಮದುವೆ ಸಮಾರಂಭಗಳಿಗೆ ಕೇವಲ 20 ಜನ ಮಾತ್ರ ಅವಕಾಶ ನೀಡಿ ಹೊಸ ನಿಯಮ ಜಾರಿಗೊಳಿಸಿದೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ

    ದೆಹಲಿಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಇದರೊಂದಿಗೆ ಮಾಲ್ ಮತ್ತು ಅಂಗಡಿಗಳು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ವರೆಗೆ ಸಮ-ಬೆಸ ದಿನಾಂಕಗಳ ಆಧಾರದಲ್ಲಿ ತೆರೆಯಲು ಅವಕಾಶ ನೀಡಿದ್ದು, ಆ ಬಳಿಕ ಆನ್‍ಲೈನ್ ಶಾಪಿಂಗ್ ಮುಂದುವರಿಸಬಹುದು ಎಂದು ಆದೇಶಿಸಿದೆ. ಇದನ್ನೂ ಓದಿ: ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ಥಿಯೇಟರ್, ಜಿಮ್‍ಗಳನ್ನು ಮತ್ತೆ ಬಂದ್ ಮಾಡಿದ್ದು, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ರಾತ್ರಿ 10 ಗಂಟೆ ವರೆಗೆ 50% ಅವಕಾಶ ಕಲ್ಪಿಸಿದೆ. ಅದಲ್ಲದೆ ಕಟ್ಟಿಂಗ್ ಶಾಪ್, ಬ್ಯೂಟಿ ಪಾರ್ಲರ್‌ಗಳಿಗೆ ಅವಕಾಶ ನೀಡಿದೆ. ರಾಜಕೀಯ, ಧಾರ್ಮಿಕ, ಹಬ್ಬಗಳಿಗೆ ನಿರ್ಬಂಧ ವಿಧಿಸಲಾಗಿದೆ.

  • ಪಟಾಕಿ ಇಲ್ಲದೇ ದೀಪಾವಳಿ ಆಚರಿಸಲು ಶಾಲೆಗಳಲ್ಲೇ ಮಕ್ಕಳಿಗೆ ಪ್ರೇರಣೆ- ದೆಹಲಿ ಸರ್ಕಾರದಿಂದ ಹೊಸ ಪ್ರಯತ್ನ

    ಪಟಾಕಿ ಇಲ್ಲದೇ ದೀಪಾವಳಿ ಆಚರಿಸಲು ಶಾಲೆಗಳಲ್ಲೇ ಮಕ್ಕಳಿಗೆ ಪ್ರೇರಣೆ- ದೆಹಲಿ ಸರ್ಕಾರದಿಂದ ಹೊಸ ಪ್ರಯತ್ನ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ಅರವಿಂದ್ ಕೇಜ್ರಿವಾಲ್‌ ನೇತೃತ್ವದ ಸರ್ಕಾರ, ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಹೊಸ ಹೊಸ ಚಿಂತನೆಗಳನ್ನು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸಲು ಮಕ್ಕಳನ್ನು ಪ್ರೇರೇಪಿಸಲು ಶಾಲೆ ಮತ್ತು ಕಾಲೇಜುಗಳಿಗೆ ದೆಹಲಿ ಸರ್ಕಾರ ಸೂಚನೆ ನೀಡಿದೆ‌.

    FIRECRACKERS

    ನವದೆಹಲಿಯಲ್ಲಿ ನವೆಂಬರ್ 1ರಿಂದ ದೆಹಲಿಯಲ್ಲಿ ಶಾಲೆಗಳು ಶುರುವಾಗಿವೆ. ಶಾಲೆಗಳಲ್ಲಿ ದೀಪಾವಳಿ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳನ್ನೂ ಪಟಾಕಿ ರಹಿತವಾಗಿ ಆಚರಿಸಲು ಮಕ್ಕಳನ್ನು ಪ್ರೇರೇಪಿಸುವಂತೆ ಶಿಕ್ಷಕರನ್ನು ದೆಹಲಿ ಸರ್ಕಾರ ಕೇಳಿಕೊಂಡಿದೆ. ಇದನ್ನೂ ಓದಿ: ದೀಪಾವಳಿ ವಿಶೇಷ ರಾಯನ್ ಕ್ಯೂಟ್ ಫೋಟೋಸ್ ಶೇರ್ ಮಾಡಿದ ಮೇಘನಾ ರಾಜ್

    ತರಗತಿಗಳ ವೇಳೆ ಮತ್ತು ಶಾಲೆಗಳ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ಪಟಾಕಿಗಳಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪಟಾಕಿ ಹೊಡೆಯದಂತೆ ಜಾಗೃತಿ ಮೂಡಿಸಲು ಹೇಳಿದೆ. ಮುಂಬರುವ ಎಲ್ಲ ಹಬ್ಬಗಳನ್ನು ದೀಪ, ಮೇಣ ಬೆಳಗುವ ಮೂಲಕ ಆಚರಿಸಲು ತಿಳಿಸುವಂತೆ ಶಾಲೆ ಮುಖ್ಯಸ್ಥರಿಗೆ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    DEEPAVALI

    ದೆಹಲಿಯಲ್ಲಿ ದೀಪಾವಳಿ ಬಳಿಕ ಭಾರಿ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಕಾರಣ ದೀಪಾವಳಿ ವೇಳೆ ಸಿಡಿಸುವ ಪಟಾಕಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿರುವ ವಾಹನ ದಟ್ಟಣೆ ಮತ್ತು ಕೃಷಿ ಭೂಮಿಗಳಿಗೆ ಹಚ್ಚುವ ಬೆಂಕಿಯಿಂದ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಪಟಾಕಿಯಿಂದ ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಗಾಳಿಯಲ್ಲಿ ಬೆರೆಯಲಿದ್ದು, ಇದರಿಂದ ಮಾರಕ ರೋಗಗಳು ಕೂಡಾ ಬರಲಿದೆ ಎಂದು ದೆಹಲಿ ಸರ್ಕಾರ ಎಚ್ಚರಿಸಿದೆ.