Tag: ದೆಹಲಿ ವಿಧಾನಸಭಾ ಚುನಾವಣೆ

  • ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ದ್ರೋಹಿಗೆ ಸೋಲಾಗಿದೆ: ಕಾರಜೋಳ

    ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ದ್ರೋಹಿಗೆ ಸೋಲಾಗಿದೆ: ಕಾರಜೋಳ

    ವಿಜಯಪುರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ (Govind Karjol) ಹೇಳಿದರು.

    ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ದೆಹಲಿಯ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಬಹುಮತ ಸಾಧಿಸಿದೆ. ನಾನು ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ಅವರ ನಾಯಕತ್ವದಲ್ಲಿ 11 ವರ್ಷಗಳ ಆಡಳಿತ ಅತ್ಯುತ್ತಮವಾಗಿದೆ. ಇದಕ್ಕೆ ಶನಿವಾರ ಹೊರಬಂದಿರುವ ದೆಹಲಿ ಫಲಿತಾಂಶ ಸಾಕ್ಷಿಯಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಕಾಮುಕನಿಗೆ 20 ವರ್ಷ ಕಠಿಣ ಜೈಲು

    ಕೇಜ್ರಿವಾಲ್ ಆಮ್ ಆದ್ಮಿ ಮೂಲಕ ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದರು. ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ಮಹಾನ್ ದ್ರೋಹಿ ಅವನು. ಸ್ವಾತಂತ್ರö್ಯ ನಂತರ ಇಡೀ ದೇಶದಲ್ಲೇ ಯಾರೂ ಮಾಡದಷ್ಟು ಭ್ರಷ್ಟಾಚಾರವನ್ನು ಅರವಿಂದ್ ಕೇಜ್ರಿವಾಲ್ ಮಾಡಿದ್ದಾನೆ. ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಬಂದ ವ್ಯವಸ್ಥೆಯನ್ನು ಹಾಳು ಮಾಡಿ, ದುರಾಡಳಿತ ಮಾಡಿದವನು ಎಂದು ಕಿಡಿಕಾರಿದರು.

    ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರೂ ರಾಜೀನಾಮೆ ಕೊಡಲಿಲ್ಲ. ಅವನು ಸಂವಿಧಾನ ದ್ರೋಹಿ, ಜನರು ಅವನಿಗೆ ತಕ್ಕ ಪಾಠ ಕಲಿಸಿದ್ದಾರೆ. ದೆಹಲಿ ಕೇಂದ್ರಾಡಳಿತ ಪ್ರದೇಶ ಇದೆ. ಅದು ಹೆಚ್ಚಿನ ಮಧ್ಯಮ ವರ್ಗದವರು ಇರುವ ಊರು, ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಟ್ಯಾಕ್ಸ್ ಬರುವ ಪ್ರದೇಶದಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕಿತ್ತು. ಆದರೆ ಅಲ್ಲಿ ಓಡಾಡಲು ಆಗದ ಸ್ಥಿತಿ ಇದೆ. ದೇಶಕ್ಕೆ ಕೆಟ್ಟ ಪರಿಸ್ಥಿತಿ ತಂದಿದ್ದಾರೆ. ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಅವರಿಗೆ ಪುಕ್ಕಟೆ ಕೊಟ್ಟು ಗೆಲ್ಲುವುದು ಒಂದು ಕೆಟ್ಟ ಸಂಪ್ರದಾಯವಾಗಿದೆ, ಇದಕ್ಕೆ ಇತಿಶ್ರೀ ಹಾಕಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ನೀಡಿದ್ದಾರೆ – ಇದು ವಿಕಾಸದ ಗೆಲುವು ಎಂದ ಮೋದಿ

  • ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Dehli Assembly Election) ಬಿಜೆಪಿ 27 ವರ್ಷಗಳ ಬಳಿಕ ಗೆಲವು ಸಾಧಿಸಿದೆ. ಈ ಮೂಲಕ ದೆಹಲಿ ಜನ ಕೇಜ್ರಿವಾಲ್ ನಶೆ ಇಳಿಸುವುದರ ಜೊತೆಗೆ ಎಣ್ಣೆ ಏಟಿಗೆ ಎಎಪಿ (AAP) ಪಕ್ಷಕ್ಕೆ ಸೋಲಿನ ಕಿಕ್ ನೀಡಿದ್ದಾರೆ.

    2014ರ ಲೋಕಸಭೆ ಚುನಾವಣೆ ವೇಳೆ ದೆಹಲಿಯಲ್ಲಿ ಎಎಪಿ ಒಂದು ಸೀಟನ್ನು ಗೆದ್ದರಲಿಲ್ಲ. ಆದರೆ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸೀಟುಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಒಂದು ಸೀಟು ಗೆಲ್ಲದ ಎಎಪಿ 2020ರ ವಿಧಾನಸಭೆ ಚುನಾವಣೆಯಲ್ಲಿ 63 ಸೀಟುಗಳನ್ನು ಗೆದ್ದು ಬೀಗಿತ್ತು.ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

    ಈ ಸಂದರ್ಭದಲ್ಲಿ ದೆಹಲಿ ಜನತೆ ಕೇಂದ್ರಕ್ಕೆ ಬಿಜೆಪಿ ಮತ್ತು ಸ್ಥಳೀಯವಾಗಿ ಎಎಪಿ ಎಂಬ ತೀರ್ಮಾನಿಸಿದೆ ಎನ್ನಲಾಗಿತ್ತು. ಆದರೆ ಇದೀಗ 2025ರ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಎಲ್ಲವೂ ತಿರುಗಿ ಬಿದ್ದಿದೆ.

    ಕಳೆದೆರಡು ವರ್ಷಗಳಲ್ಲಿ ಎಎಪಿ ಪಕ್ಷಕ್ಕೆ ಹಗರಣದ ಅಲೆಗಳು ಅಪ್ಪಳಿಸಿದ್ದವು. ಮದ್ಯ ಹಗರಣದಲ್ಲಿ ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್, ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದರು. ಈ ಮೂಲಕ ಸಚಿವರು ಸಾಲು ಸಾಲಾಗಿ ಹಗರಣದಲ್ಲಿ ಸಿಲುಕಿ ಜೈಲು ಸೇರಿ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆಗೆ ಹಾನಿ ಎಸಗಿದರು.

    ಈ ನಡುವೆ `ಜೈಲ್ ಕಾ ಜವಾಬ್ ವೋಟ್ ಸೇ’ ಎಂದು ದೆಹಲಿಯಲ್ಲಿ ಪ್ರಚಾರ ನಡೆಸಿದ್ದರು. ಆದರೂ ಕೇಜ್ರಿವಾಲ್ ಅನುಕಂಪದ ಕ್ಯಾಂಪೇನ್‌ಗೆ ದೆಹಲಿ ಜನರು ಕರಗಲಿಲ್ಲ. ಕಡೆಗೂ ಎಣ್ಣೆ ಏಟಿಗೆ ಕೇಜ್ರಿವಾಲ್ ತಂಡ ನರಳಿ, ಕಿಕ್ ಇಳಿಸುವ ಮೂಲಕ ಮೋದಿ ತಂಡ ಗೆದ್ದು ಬೀಗಿದೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್- ನಾಳೆಯಿಂದಲೇ ದರ ಏರಿಕೆ ಜಾರಿ – ಎಷ್ಟು ಕಿ.ಮೀಗೆ ಎಷ್ಟು ದರ?

     

  • ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ಮೆಟ್ರೋ ಟಿಕೆಟ್‌ ದರದಲ್ಲಿ 50% ರಿಯಾಯಿತಿ, ಉಚಿತ ವಿದ್ಯುತ್‌, ನೀರು – ದೆಹಲಿ ಚುನಾವಣೆಗೆ 15 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

    ನವದೆಹಲಿ: ಮುಂದಿನ ಫೆ.5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ (Arvind Kejriwal) ಅವರು 15 ಗ್ಯಾರಂಟಿಗಳನ್ನೊಳಗೊಂಡ ಎಎಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ, 24 ಗಂಟೆ ಉಚಿತ ನೀರು, ಉಚಿತ ವಿದ್ಯುತ್‌, ದಲಿತ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸ್ಕಾಲರ್‌ ಶಿಪ್, ಯಮುನಾ ನದಿ ಶುದ್ಧೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ʻಕೇಜ್ರವಾಲ್ ಕಿ ಗ್ಯಾರಂಟಿʼ (Kejriwal Ki Guarantee) ಹೆಸರಿನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

    ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ (Metro Ticket Price) ಶೇ.50ರಷ್ಟು ರಿಯಾಯಿತಿ ನೀಡುವುದಾಗಿಯೂ ಭರವಸೆ ನೀಡಿದ ಕೇಜ್ರಿವಾಲ್‌ ಇದು ಮೋದಿ ಅವರ ʻನಕಲಿ ಗ್ಯಾರಂಟಿʼ ಅಲ್ಲ ʻಕೇಜ್ರಿವಾಲ್‌ ಕೀ ಗ್ಯಾರಟಿʼ ಅಂತ ಹೇಳಿದ್ದಾರೆ.

    ಎಎಪಿಯ 15 ಗ್ಯಾರಂಟಿಗಳು ಯಾವುವು?
    * ಉದ್ಯೋಗದ ಖಾತ್ರಿ
    * ಮಹಿಳಾ ಗೌರವ ಯೋಜನೆ – ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ.
    * ಸಂಜೀವನಿ ಯೋಜನೆ – 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ
    * ತಪ್ಪಾಗಿ ಬಂದ ನೀರಿನ ಬಿಲ್‌ ಮನ್ನಾ
    * 24 ಗಂಟೆ ನೀರು ಪೂರೈಕೆ
    * ಯುರೋಪ್‌ ಮಾದರಿಯಲ್ಲೇ ರಸ್ತೆ ಅಭಿವೃದ್ಧಿ
    * ಯಮುನಾ ನದಿ ಶುದ್ಧೀಕರಣ
    * ಡಾ.ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ
    * ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ದೆಹಲಿ ಮೆಟ್ರೋದಲ್ಲಿ 50% ರಿಯಾಯಿತಿ
    * ಅರ್ಚಕರಿಗೆ 18,000 ಸಾವಿರ ರೂ.
    * ಬಾಡಿಗೆದಾರರಿಗೆ ಉಚಿತ ವಿದ್ಯುತ್ ಮತ್ತು ನೀರು
    * ಒಳಚರಂಡಿ ಶುದ್ಧೀಕರಣ
    * ಪಡಿತರ ಚೀಟಿ
    * ಆಟೋ, ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರ ಮಗಳ ಮದುವೆಗೆ 1 ಲಕ್ಷ ರೂ., ಮಕ್ಕಳಿಗೆ ಉಚಿತ ತರಬೇತಿ, ಜೀವ ವಿಮೆ
    * RWA ಗಳಿಗೆ (ವಸತಿ ಕಲ್ಯಾಣ ಸಂಘಗಳು) ಖಾಸಗಿ ಭದ್ರತಾ ಸಿಬ್ಬಂದಿ ಒದಗಿಸಲಾಗುವುದು.

  • Delhi Assembly Election | 29 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

    Delhi Assembly Election | 29 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

    ನವದೆಹಲಿ: ವಿಧಾನಸಭೆ ಚುನಾವಣೆ (Delhi Assembly Elections) ಹಿನ್ನೆಲೆ ಕಾಂಗ್ರೆಸ್‌, ಆಪ್ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ (BJP Candidate First List) ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 29 ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಕಾಲ್ಕಾಜಿಯಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಹಿರಿಯ ನಾಯಕ ರಮೇಶ್ ಬಿಧುರಿ, ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಮಾಜಿ ಸಂಸದ ಪರ್ವೇಶ ವರ್ಮಾ ಅವರನ್ನು ಕಣಕ್ಕಿಳಿಸಿದೆ.

    ಬಿಜೆಪಿ ತನ್ನ ಗಾಂಧಿನಗರ ಶಾಸಕ ಅನಿಲ್ ಬಾಜ್‌ಪೇಯ್ ಅವರನ್ನು ಕೈಬಿಟ್ಟು ದೆಹಲಿಯ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿಗೆ ಟಿಕೆಟ್ ನೀಡಿದೆ. ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ (Congress Government) 2003 ರಿಂದ 2013ರ ವರೆಗೆ ಸಚಿವರಾಗಿದ್ದ ಲವ್ಲಿ ಕಳೆದ ವರ್ಷ ಬಿಜೆಪಿ ಸೇರಿದ್ದರು. ಮತ್ತೋರ್ವ ದೆಹಲಿಯ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕರಾಗಿದ್ದ ರಾಜ್‌ಕುಮಾರ್ ಚೌಹಾಣ್ ಅವರಿಗೆ ಬಿಜೆಪಿ ಮಂಗೋಲ್‌ಪುರಿಯಿಂದ ಟಿಕೆಟ್ ನೀಡಲಾಗಿದೆ.

    ಎಎಪಿ ಮಾಜಿ ಸಚಿವ, ಕೇಜ್ರಿವಾಲ್ ಆಪ್ತರಾಗಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಯಿಂದ ನಜಾಫ್‌ಗಢ್ ಬದಲಿಗೆ ಬಿಜ್ವಾಸನ್‌ನಿಂದ ಕಣಕ್ಕಿಳಿದಿದ್ದರೆ, ರಾಜ್ ಕುಮಾರ್ ಆನಂದ್ ಪಟೇಲ್ ನಗರದಿಂದ ಟಿಕೆಟ್ ಪಡೆದಿದ್ದಾರೆ. ಎಎಪಿಯಿಂದ ಬಿಜೆಪಿಗೆ ತೆರಳಿದ್ದ ಶಾಸಕ ಕರ್ತಾರ್ ಸಿಂಗ್ ತನ್ವಾರ್ ಅವರ ಛತ್ತರ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

    ವಿಪಕ್ಷದ ನಾಯಕ ವಿಜೇಂದರ್ ಗುಪ್ತಾ, ಓಂ ಪ್ರಕಾಶ್ ಶರ್ಮಾ, ಅಜಯ್ ಮಹಾವರ್ ಮತ್ತು ಜಿತೇಂದರ್ ಮಹಾಜನ್ ಸೇರಿದಂತೆ ಬಿಜೆಪಿಯ ಹಾಲಿ ಶಾಸಕರು ಕ್ರಮವಾಗಿ ರೋಹಿಣಿ, ವಿಶ್ವಾಸ್ ನಗರ, ಘೋಂಡಾ ಮತ್ತು ರೋಹ್ತಾಸ್ ನಗರದಿಂದ ಸ್ಪರ್ಧಿಸಲಿದ್ದಾರೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಮಾಳವೀಯಾ ನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಮನೋಜ್ ಶೋಕೀನ್ ನಂಗ್ಲೋಯ್ ಜಾಟ್‌ನಿಂದ ಕಣಕ್ಕಿಳಿದಿದ್ದಾರೆ.

    ಎಎಪಿ ಈಗಾಗಲೇ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಇದುವರೆಗೆ 47 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ‌.

  • ಬಿಜೆಪಿಯ ಮತ ಖರೀದಿ ಯತ್ನವನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ – ಭಾಗವತ್‌ಗೆ ಕೇಜ್ರಿವಾಲ್ ಪ್ರಶ್ನೆ

    ಬಿಜೆಪಿಯ ಮತ ಖರೀದಿ ಯತ್ನವನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ – ಭಾಗವತ್‌ಗೆ ಕೇಜ್ರಿವಾಲ್ ಪ್ರಶ್ನೆ

    ನವದೆಹಲಿ: ವಿಧಾನಸಭೆ ಚುನಾವಣೆ (Delhi Assembly Election) ಹಿನ್ನೆಲೆ ಬಿಜೆಪಿ ನಾಯಕರು ಬಹಿರಂಗವಾಗಿ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಮತ್ತೊಂದೆಡೆ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನ ತೆಗೆದು ಹಾಕುತ್ತಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಆರ್‌ಎಸ್‌ಎಸ್ ಸಮರ್ಥಿಸಿಕೊಳ್ಳುತ್ತದೆಯೇ ಎಂದು ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಪ್ರಶ್ನಿಸಿದ್ದಾರೆ.

    ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ (Mohan Bhagwat) ಪತ್ರ ಬರೆದಿರುವ ಕೇಜ್ರಿವಾಲ್, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಬಿಜೆಪಿಯ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ ಮತ್ತು ಅಂತಹ ಕ್ರಮಗಳನ್ನು ಮೋಹನ್ ಭಾಗವತ್ ಬೆಂಬಲಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: 2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    ಬಿಜೆಪಿ ನಾಯಕರು ಬಹಿರಂಗವಾಗಿ ಹಣ ಹಂಚಿ ಮತ ಖರೀದಿಸುತ್ತಿದ್ದಾರೆ. ಆರ್‌ಎಸ್‌ಎಸ್ ಮತ ಖರೀದಿಯನ್ನು ಬೆಂಬಲಿಸುತ್ತದೆಯೇ? ಹಲವು ವರ್ಷಗಳಿಂದ ಬಡವರು, ದಲಿತರು, ಪೂರ್ವಾಂಚಲದ ಜನರು, ಸ್ಲಂ ನಿವಾಸಿಗಳ ಮತಗಳನ್ನು ಬಿಜೆಪಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಮಾಡುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಸರಿ ಎಂದು ಆರ್‌ಎಸ್‌ಎಸ್‌ ಭಾವಿಸುತ್ತದೆಯೇ? ಎಂದು ಪತ್ರದಲ್ಲಿ ಕೇಳಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ಅರವಿಂದ್ ಕೇಜ್ರಿವಾಲ್ ಪತ್ರಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಹೊಸ ವರ್ಷದಲ್ಲಿ ಕೇಜ್ರಿವಾಲ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ದೆಹಲಿ ಜನತೆ ಹಾರೈಸಿದ್ದಾರೆ. ಕೇಜ್ರಿವಾಲ್ ತಮ್ಮ ಮಕ್ಕಳ ಮೇಲೆ ಸುಳ್ಳು ಪ್ರಮಾಣ ಮಾಡಬಾರದು. ಕೇಜ್ರಿವಾಲ್ ಅವರು ದೇಶ ವಿರೋಧಿ ಶಕ್ತಿಗಳಿಂದ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಕೇಜ್ರಿವಾಲ್ ದೆಹಲಿ ಜನತೆಗೆ ಸುಳ್ಳು ಭರವಸೆ ನೀಡುವುದಿಲ್ಲ ಎಂದು ಹೊಸ ವರ್ಷದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಕುಟುಕಿದ್ದಾರೆ. ಇದನ್ನೂ ಓದಿ: 8 ಗಂಟೆ ಕೆಲಸ ಮಾಡ್ತಾ ಕುಳಿತರೆ ಹೆಂಡ್ತಿ ಓಡಿಹೋಗ್ತಾಳೆ – ಗೌತಮ್‌ ಅದಾನಿ ಹಾಸ್ಯ!

  • Delhi Assembly Election | ಚುನಾವಣಾ ಆಯೋಗದಿಂದ ಪೂರ್ವಸಿದ್ಧತಾ ಸಭೆ – ಮುಂದಿನ ವಾರವೇ ದಿನಾಂಕ ಪ್ರಕಟ ಸಾಧ್ಯತೆ

    Delhi Assembly Election | ಚುನಾವಣಾ ಆಯೋಗದಿಂದ ಪೂರ್ವಸಿದ್ಧತಾ ಸಭೆ – ಮುಂದಿನ ವಾರವೇ ದಿನಾಂಕ ಪ್ರಕಟ ಸಾಧ್ಯತೆ

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ (Delhi Assembly Election) ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ (Election Commission Of India) ಈ ವಾರ ಪೂರ್ವಸಿದ್ಧತಾ ಸಭೆಗೆ ಕರೆ ನೀಡಿದೆ. ಈ ಸಭೆಯ ಬಳಿಕ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಈಗಾಗಲೇ ದೆಹಲಿ ವಿಧಾನಸಭಾ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ (AAP) ಎಲ್ಲಾ 70 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಜೊತೆಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ನವದೆಹಲಿ ಕ್ಷೇತ್ರದಿಂದ ಹಾಗೂ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ.ಇದನ್ನೂ ಓದಿ: ಪ್ಯಾಲೆಸ್ತೀನ್ ಬಳಿಕ ಬಾಂಗ್ಲಾ ಅಲ್ಪಸಂಖ್ಯಾತರ ಪರ ಪ್ರಿಯಾಂಕಾ ಧ್ವನಿ

    ಇನ್ನೂ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿಯು ಈ ತಿಂಗಳ ಕೊನೆಯ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಹೊಂದಿರುವ ಸಾಧ್ಯತೆಯಿದೆ ಹಾಗೂ ಬಿಜೆಪಿ ದಿವಂಗತ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ಅವರನ್ನು ಕಣಕ್ಕಿಳಿಸಬಹುದು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

    ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮಾತನಾಡಿ, ಈಗಾಗಲೇ ಪಕ್ಷವು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಾಗಿ ಎಲ್ಲಾ 70 ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರಿಂದ 2,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮುಂದುವರಿದ ಹಂತದಲ್ಲಿದ್ದು, ಪ್ರತಿ ಕ್ಷೇತ್ರದಲ್ಲಿ ಮೂರು ಸಂಭಾವ್ಯರನ್ನು ಈಗಾಗಲೇ ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ಹೇಳಿದರು.

    ಫೆಬ್ರವರಿಯಲ್ಲಿ ನಡೆಯಲಿರುವ 70 ಸದಸ್ಯರ ದೆಹಲಿ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ಬೃಹತ್ ಪ್ರಚಾರವನ್ನು ಆರಂಭಿಸಿದ್ದು, ಆಡಳಿತಾರೂಢ ಎಎಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ನಗರಗಳಲ್ಲಿ ನೆಲೆಯೂರಲು ಸಿದ್ಧತೆಯನ್ನು ನಡೆಸಿದೆ.

    ಬಿಜೆಪಿಯು 1998 ರಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿದ್ದು, 2015 ರಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಹೊಂದಿರುವ ಆಡಳಿತಾರೂಢ ಎಎಪಿಯನ್ನು ತಳ್ಳಿಹಾಕಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಎಎಪಿ 2015 ಮತ್ತು 2020ರಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಕ್ರಮವಾಗಿ 67 ಮತ್ತು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.ಇದನ್ನೂ ಓದಿ: ಫಾಲೋ ಆನ್‌ನಿಂದ ಭಾರತ ಬಚಾವ್‌ – ಕೊನೆಯ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಉಳಿಸಿತು ಮಾನ!

  • Delhi assembly polls: ಎಎಪಿ ಅಂತಿಮ ಪಟ್ಟಿ ರಿಲೀಸ್‌ – ನವದೆಹಲಿಯಿಂದ ಕೇಜ್ರಿವಾಲ್‌ ಕಣಕ್ಕೆ

    Delhi assembly polls: ಎಎಪಿ ಅಂತಿಮ ಪಟ್ಟಿ ರಿಲೀಸ್‌ – ನವದೆಹಲಿಯಿಂದ ಕೇಜ್ರಿವಾಲ್‌ ಕಣಕ್ಕೆ

    ನವದೆಹಲಿ: 2025 ರ ದೆಹಲಿ ವಿಧಾನಸಭಾ ಚುನಾವಣೆಗೆ (Delhi Assembly Election) ತನ್ನ ನಾಲ್ಕನೇ ಮತ್ತು ಅಂತಿಮ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (AAP) ಬಿಡುಗಡೆ ಮಾಡಿದೆ. ನವದೆಹಲಿಯಿಂದ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಕಲ್ಕಾಜಿಯಿಂದ ಮುಖ್ಯಮಂತ್ರಿ ಅತಿಶಿ ಅವರು ಸ್ಪರ್ಧಿಸಲಿದ್ದಾರೆ.

    38 ಅಭ್ಯರ್ಥಿಗಳ ಪಟ್ಟಿಯಲ್ಲಿ ಸೌರಭ್ ಭಾರದ್ವಾಜ್, ಗೋಪಾಲ್ ರೈ, ಸತ್ಯೇಂದ್ರ ಕುಮಾರ್ ಜೈನ್ ಮತ್ತು ದುರ್ಗೇಶ್ ಪಾಠಕ್ ಸೇರಿದಂತೆ ಪಕ್ಷದ ಇತರ ಪ್ರಮುಖ ನಾಯಕರು ಇದ್ದಾರೆ. ಇದನ್ನೂ ಓದಿ: 46 ವರ್ಷ ಹಳೆ ಕಾಲದ ಹಿಂದೂ ದೇವಾಲಯ ಪತ್ತೆ; ಸಂಭಲ್ ಮಸೀದಿ ಸುತ್ತ ಮುಂದುವರಿದ ತೆರವು ಕಾರ್ಯ

    ರಾಷ್ಟ್ರ ರಾಜಧಾನಿಯ 70 ಸದಸ್ಯರ ವಿಧಾನಸಭೆಗೆ ಫೆಬ್ರವರಿ 2025 ರಲ್ಲಿ ಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆಗೆ ಮುನ್ನ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಸ್ವಂತ ಬಲದ ಮೇಲೆ ಪಕ್ಷ ಚುನಾವಣೆ ಎದುರಿಸಲಿದೆ ಎಂದಿದ್ದಾರೆ.

    ಸಚಿವ ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್‌ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಗೋಪಾಲ್ ರೈ ಅವರು ಬಾಬರ್‌ಪುರದಿಂದ ಕಣಕ್ಕಿಳಿದಿದ್ದಾರೆ. ಎಎಪಿಯ ಅಂತಿಮ ಪಟ್ಟಿಯು ಶಕುರ್ ಬಸ್ತಿಯಿಂದ ಸತ್ಯೇಂದ್ರ ಕುಮಾರ್ ಜೈನ್ ಮತ್ತು ರಾಜಿಂದರ್ ನಗರದಿಂದ ದುರ್ಗೇಶ್ ಪಾಠಕ್ ಸ್ಪರ್ಧೆಯಲ್ಲಿದ್ದಾರೆ. ಇದನ್ನೂ ಓದಿ: ಸಂಭಲ್‌ ಮಸೀದಿ ಸುತ್ತ ಒತ್ತುವರಿ ತೆರವು ವೇಳೆ ಹಳೇ ಹಿಂದೂ ದೇಗುಲ ಪತ್ತೆ

  • ದೆಹಲಿ ಚುನಾವಣೆಗೆ ಕಾಂಗ್ರೆಸ್ ಜೊತೆ ಆಪ್ ಮೈತ್ರಿ ಇಲ್ಲ – ಅರವಿಂದ್ ಕೇಜ್ರಿವಾಲ್

    ದೆಹಲಿ ಚುನಾವಣೆಗೆ ಕಾಂಗ್ರೆಸ್ ಜೊತೆ ಆಪ್ ಮೈತ್ರಿ ಇಲ್ಲ – ಅರವಿಂದ್ ಕೇಜ್ರಿವಾಲ್

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Assembly Election) ತಮ್ಮ ಪಕ್ಷವು ಸ್ವಂತ ಬಲದಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ (Congress) ಜೊತೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಎಎಪಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಸ್ಪಷ್ಟಪಡಿಸಿದ್ದಾರೆ.

    ಕಾಂಗ್ರೆಸ್ ಜೊತೆಗೆ ಆಪ್ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ವರದಿ ಬೆನ್ನಲ್ಲೇ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದ ಅವರು, ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ತನ್ನ ಸ್ವಂತ ಬಲದ ಮೇಲೆ ಈ ಚುನಾವಣೆಯಲ್ಲಿ ಹೋರಾಡಲಿದೆ. ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    ಇಂಡಿಯಾ ವಿರೋಧ ಪಕ್ಷದ ಭಾಗವಾಗಿದ್ದರೂ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಅರವಿಂದ್ ಕೇಜ್ರಿವಾಲ್ ತಳ್ಳಿಹಾಕಿದ್ದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ, ಕೇಜ್ರಿವಾಲ್ ಪಕ್ಷವು ಸತತ ಮೂರನೇ ಅವಧಿಗೆ ಗಮಹರಿಸುತ್ತಿರುವುದರಿಂದ ದೆಹಲಿ ವಿಧಾನಸಭಾ ಚುನಾವಣೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳಿದರು.

    2015 ರಿಂದ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿದೆ. ಈ ಚುನಾವಣೆ ಮೂಲಕ ದೆಹಲಿಯಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸುವ ವಿಫಲ ಪ್ರಯತ್ನ ಮಾಡುತ್ತಿದೆ. ಆದರೆ ಇಂಡಿಯಾ ಒಕ್ಕೂಟ ಒಟ್ಟಾಗಿ ಚುನಾವಣೆಗೆ ಹೋಗುವ ಲೆಕ್ಕಾಚಾರದಲ್ಲಿದೆ.

    ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಿದ್ದವು ಆದರೆ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದಿತ್ತು. ಬಳಿಕ ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೆಂದರ್ ಯಾದವ್ ಅವರು ಎಎಪಿ ಜೊತೆಗಿನ ಮೈತ್ರಿಯನ್ನು “ತಪ್ಪು” ಎಂದು ಕರೆದರು ಮತ್ತು ನಗರದ ಎಲ್ಲಾ 70 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪ್ರತಿಪಾದಿಸಿದರು.

    ಈ ನಿರ್ಧಾರವು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಗೆ ವೇದಿಕೆಯನ್ನು ಸಿದ್ಧಪಡಿಸಿದ್ದು, ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿವೆ. 2015 ಮತ್ತು 2020ರಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ, ಎಎಪಿ ಕ್ರಮವಾಗಿ 67 ಮತ್ತು 62 ಸ್ಥಾನಗಳನ್ನು ಗೆದ್ದಿದ್ದರೆ, 70 ಸದಸ್ಯರ ಶಾಸಕಾಂಗದಲ್ಲಿ ಬಿಜೆಪಿ ಮೂರು ಮತ್ತು ಎಂಟು ಸ್ಥಾನಗಳನ್ನು ಪಡೆದುಕೊಂಡಿತ್ತು. ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು.ಇದನ್ನೂ ಓದಿ: ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

  • ಕೇಜ್ರಿವಾಲ್ ಪದಗ್ರಹಣಕ್ಕೆ ವಿಶೇಷ ಅತಿಥಿಯಾದ ಬೇಬಿ ಮಫ್ಲರ್ ಮ್ಯಾನ್

    ಕೇಜ್ರಿವಾಲ್ ಪದಗ್ರಹಣಕ್ಕೆ ವಿಶೇಷ ಅತಿಥಿಯಾದ ಬೇಬಿ ಮಫ್ಲರ್ ಮ್ಯಾನ್

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮೂರನೇ ಭಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಸಮಾರಂಭಕ್ಕೆ ವಿಶೇಷ ಅತಿಥಿಯೊಬ್ಬರಿಗೆ ಆಪ್ ಪಕ್ಷ ಆಹ್ವಾನ ನೀಡಿದೆ.

    ವಿಧಾನಸಭಾ ಫಲಿತಾಂಶದ ವೇಳೆ ದೇಶದ ಗಮನ ಸೆಳೆದಿದ್ದ ಬೇಬಿ ಮಫ್ಲರ್ ಮ್ಯಾನ್‍ಗೆ ಕೇಜ್ರಿವಾಲ್ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಲಿದ್ದು, ಭಾರೀ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಬೇಬಿ ಮಫ್ಲರ್ ಮ್ಯಾನ್ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆಂದು ಆಮ್ ಆದ್ಮಿ ಪಕ್ಷ ಘೊಷಿಸಿದೆ.

    62 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಭಾನುವಾರ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ರಾಮಲೀಲಾ ಮೈದಾನದಲ್ಲಿ ಅದ್ಧೂರಿ ತಯಾರಿ ಮಾಡಿಕೊಳ್ಳುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲು ಚಿಂತನೆ ನಡೆದಿದೆ.

    ಮೂರನೇ ಬಾರಿಗೆ ಸರ್ಕಾರ ರಚನೆ ಕಸರತ್ತು ಆರಂಭಿಸಿರುವ ಕೇಜ್ರಿವಾಲ್ ಬುಧವಾರ ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿ ಚರ್ಚೆ ನಡೆಸಿ ಫೆಬ್ರವರಿ 16 ರಂದು ಕಾರ್ಯಕ್ರಮ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದರು. ಬಳಿಕ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ಕೇಜ್ರಿವಾಲ್ ತಮ್ಮ ನಿವಾಸಕ್ಕೆ ಆಹ್ವಾನ ನೀಡಿ ಹೊಸ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಹಿಂದೆ ಎರಡು ಬಾರಿ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರಮಾಣ ವಚನ ಸ್ವೀಕರಿಸಿದ್ದರು.

  • ದೆಹಲಿ ವಿಧಾನಸಭೆಯಲ್ಲಿ ಶೂನ್ಯ ಸಾಧನೆ – ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಪಿ.ಸಿ ಚಾಕೋ ರಾಜೀನಾಮೆ

    ದೆಹಲಿ ವಿಧಾನಸಭೆಯಲ್ಲಿ ಶೂನ್ಯ ಸಾಧನೆ – ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಪಿ.ಸಿ ಚಾಕೋ ರಾಜೀನಾಮೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿ 67 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದ್ದ ಕಾಂಗ್ರೆಸ್ ಕೆಲ ನಾಯಕರ ತಲೆ ದಂಡಕ್ಕೆ ಮುಂದಾಗಿದೆ. ದೆಹಲಿ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಪಿ.ಸಿ ಚಾಕೋ ರಾಜೀನಾಮೆ ನೀಡುವ ಮೂಲಕ ಇದಕ್ಕೆ ಮುನ್ನುಡಿ ಬರೆದಿದ್ದಾರೆ.

    2ನೇ ಬಾರಿಗೆ ಅತ್ಯಂತ ಹಳೆ ಪಕ್ಷವಾದ ಕಾಂಗ್ರೆಸ್ ಶೂನ್ಯ ಫಲಿತಾಂಶ ಪಡೆದಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಸೋಲಿಗೆ ಕಾರಣ ಹುಡುಕುವುದರ ಜೊತೆಗೆ ದೆಹಲಿ ಕಾಂಗ್ರೆಸ್ ಘಟಕದಲ್ಲಿ ಭಾರಿ ಬದಲಾವಣೆ ತರಲಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಶೀಲಾ ದೀಕ್ಷಿತ್ ನಂತರ ದೆಹಲಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರು ವಿಫಲವಾಗಿರುವುದು ಕೂಡ ಚರ್ಚೆಗೆ ಒಳಪಟ್ಟಿದ್ದು, ಸೋಲಿಗೆ ಕಾರಣ ಹುಡುಕಲು ಕಾಂಗ್ರೆಸ್ ಮುಂದಾಗಿದೆ.

    ದೆಹಲಿ ಉಸ್ತುವಾರಿ ವಹಿಸಿಕೊಂಡಿದ್ದ ಪಿ.ಸಿ ಚಾಕೋ ಅವರಿಂದ ಪಕ್ಷಕ್ಕೆ ಸೋಲಾಯಿತು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಸೋಲಿಗೆ ಕಾರಣ ಏನು ಎಂದು ಹುಡುಕಿ ತಳಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ. ಸೋಲಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ. ಸಿದ್ಧಾಂತ ಬಿಟ್ಟುಕೊಡದೆ ಪಕ್ಷವನ್ನು ಕಟ್ಟುತ್ತೇವೆ. ಕೆಲವೊಂದು ತ್ಯಾಗ ಮಾಡಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.