Tag: ದೆಹಲಿ ರಾಜ್ಯ ಸರ್ಕಾರ

  • ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

    ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್

    ನವದೆಹಲಿ: 75ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಜನರಿಗೆ ರಾಜ್ಯಸರ್ಕಾರ 25 ಲಕ್ಷ ರಾಷ್ಟ್ರೀಯ ಧ್ವಜಗಳನ್ನು ನೀಡಲು ನಿರ್ಧರಿಸಿದೆ. ಶಾಲೆ – ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ರಾಷ್ಟ್ರೀಯ ಧ್ವಜ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

    Add New

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೆ ರಸ್ತೆ ಸಂಪರ್ಕ ಮತ್ತು ಪ್ರತಿ ಮನೆಗೆ ವಿದ್ಯುತ್ ಮತ್ತು ನೀರು ಸರಬರಾಜು ಮಾಡುವುದು ಸಹ ಮುಖ್ಯವಾಗಿದೆ. ಇದಲ್ಲದೆ ಪ್ರತಿಯೊಬ್ಬ ನಿರುದ್ಯೋಗಿ ಯುವಕರಿಗೆ ನಾವು ಗೌರವಯುತ ಉದ್ಯೋಗಾವಕಾಶ ಒದಗಿಸಬೇಕು. ಮಹಿಳೆಯರು ಅಭಿವೃದ್ಧಿ ಹೊಂದಲು ನಾವು ಈ ಸಮಾಜವನ್ನು ಸುರಕ್ಷಿತಗೊಳಿಸಬೇಕಾಗಿದೆ. ನಾವು ಇದನ್ನು ಸಾಧಿಸದ ಹೊರತು, ನಾವು ಬಲಿಷ್ಠ ರಾಷ್ಟ್ರಕ್ಕಾಗಿ ಭರವಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಮುನಿಸು ಮರೆತು ಒಂದಾದ ಸಿದ್ದು, ಡಿಕೆ – ಜಂಟಿ ರೋಡ್ ಶೋ

    ಆಗಸ್ಟ್ 14 ರಂದು ನಗರದ ನೂರಕ್ಕೂ ಅಧಿಕ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅಂದು ಸಂಜೆ 5 ಗಂಟೆಗೆ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಮತ್ತು ಭಾರತವನ್ನು `ವಿಶ್ವದ ಅತ್ಯುತ್ತಮ ದೇಶ’ ಮಾಡುವುದಾಗಿ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.

    75ನೇ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ನಗರದ ಎಲ್ಲ ಬಡಾವಣೆಗಳು, ಮೊಹಲ್ಲಾಗಳು ಸೇರಿದಂತೆ ಸ್ಲಂಗಳಲ್ಲೂ ರಾಷ್ಟ್ರಧ್ವಜವನ್ನು ವಿತರಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೂ ತ್ರಿರಂಗ ನೀಡಲಾಗುವುದು ಇದರಿಂದ ಪ್ರತಿಯೊಬ್ಬರ ಕೈಗೂ ರಾಷ್ಟ್ರಧ್ವಜ ಸಿಗಲಿದ್ದು, ಅದರೊಂದಿಗೆ ರಾಷ್ಟ್ರಗೀತೆಯನ್ನು ಹೇಳುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಸ್ವಾಮೀಜಿ ಆತ್ಮಹತ್ಯೆ – ಬಿಜೆಪಿ ಶಾಸಕ ವಿರುದ್ಧ ಆರೋಪ

    ಅಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆ ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ದೆಹಲಿ ಸರ್ಕಾರ ಪ್ರತಿಯೊಬ್ಬರ ಕೈಗೂ ರಾಷ್ಟ್ರಧ್ವಜ ನೀಡುವ ಸಂಕಲ್ಪ ಮಾಡಿದೆ. 25 ಲಕ್ಷ ಬಾವುಟಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯೂ ಹಲವು ಸ್ವ-ಸಹಾಯ ಗುಂಪುಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಆಗಸ್ಟ್ 14ರ ಮುನ್ನ ಜನರ ಕೈ ತಲುಪಿಸಲು ಯೋಜನೆ ರೂಪಿಸಿದೆ ಎಂದು ಅವರು ಹೇಳಿದರು.

    ಆದಾಗ್ಯೂ ಪ್ರತಿ ಮಗುವಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಪ್ರತಿ ನಾಗರಿಕರಿಗೆ ವಿಶ್ವ ದರ್ಜೆಯ ಆರೋಗ್ಯ ಸೇವೆ ಸಿಗದ ಹೊರತು ಭಾರತವು ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ. ಪ್ರತಿ ಮಗುವಿಗೆ ಅತ್ಯುತ್ತಮ ಶಿಕ್ಷಣವಿಲ್ಲದೆ, ನಮ್ಮ ದೇಶವು ವಿಶ್ವ ನಾಯಕನಾಗಲು ಸಾಧ್ಯವಿಲ್ಲ. ಪ್ರತಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯಿಲ್ಲದೆ, ಭಾರತವು ವಿಶ್ವದ ನಂಬರ್ ಒನ್ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯಪ್ರಿಯರಿಗೆ ಶಾಕ್‌ – ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

    ಮದ್ಯಪ್ರಿಯರಿಗೆ ಶಾಕ್‌ – ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

    ನವದೆಹಲಿ: ದೆಹಲಿಯ ಬಹುತೇಕ ಖಾಸಗಿ ಮದ್ಯದಂಗಡಿಗಳ ಪರವಾನಗಿ ಅವಧಿಯು ಮುಕ್ತಾಯಗೊಳ್ಳಲಿದ್ದು, ಅವುಗಳನ್ನು ಬಂದ್‌ ಮಾಡಲು ನಿರ್ಧರಿಸಿರುವುದರಿಂದ ರಾಷ್ಟ್ರರಾಜಧಾನಿಯಲ್ಲಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ದೆಹಲಿ ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ, ಮದ್ಯದ ಅಂಗಡಿಗಳು ಆಗಸ್ಟ್‌ ಅಂತ್ಯದ ವರೆಗೆ ತೆರೆದಿರಲು ಅವಕಾಶ ನೀಡುತ್ತವೆ ಎಂದು ಹೇಳಲಾಗಿದೆ. ಹಳೆಯ ಅಬಕಾರಿ ನೀತಿಯ ಆಡಳಿತಕ್ಕೆ ಮರಳಲು ನಿರ್ಧರಿಸಿರುವ ಸರ್ಕಾರ ತನ್ನದೇ ಏಜೆನ್ಸಿಗಳ ಮೂಲಕ ಮಳಿಗೆಗಳನ್ನು ನಡೆಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯಿಂದಾಗಿ ಹೊಸ ಅಂಗಡಿಗಳನ್ನು ತೆರೆಯಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಹಾಗಾಗಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು

    ದೆಹಲಿ ಸರ್ಕಾರ ಹಳೆಯ ಅಬಕಾರಿ ನೀತಿಗೆ ಮರಳುವ ಮೂಲಕ 6 ತಿಂಗಳ ಕಾಲ ಸ್ವತಃ ಮಳಿಗೆಗಳನ್ನು ನಡೆಸುವುದಾಗಿ ಶನಿವಾರ ಹೇಳಿತ್ತು. 2021-22ರ ಅಬಕಾರಿ ನೀತಿ ಅಡಿಯಲ್ಲಿ ದೆಹಲಿಯಲ್ಲಿ 468 ಚಿಲ್ಲರೆ ಮದ್ಯದಂಗಡಿಗಳು ನಡೆಯುತ್ತಿದ್ದು, ಜುಲೈ 31ರ ನಂತರ ಪರವಾನಗಿ ಅವಧಿ ಮುಕ್ತಾಯವಾಗಲಿದೆ. ಇನ್ನೂ ಕೆಲ ಅಂಗಡಿಗಳಲ್ಲಿ ಬಿಯರ್‌ಗಳು ಮಾತ್ರವೇ ಲಭ್ಯವಾಗುತ್ತಿದ್ದು, ಜನರು ಅಗತ್ಯವಿದ್ದಷ್ಟು ಪಡೆದುಕೊಳ್ಳುತ್ತಿದ್ದಾರೆ. ಆದರೆ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕೇಳಿಕೊಂಡು ಬರುವವರು ಮಾತ್ರ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ ಎಂದು ಮದ್ಯದಂಗಡಿ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ: Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ

    ದೆಹಲಿಯ ಹಳೆಯ ಮದ್ಯ ನೀತಿ ಏನು?
    ದೆಹಲಿಯ ಮೂಲ ಮದ್ಯ ನೀತಿ ಪ್ರಕಾರ, ಮದ್ಯ ಮಾರಾಟದಲ್ಲಿ ಯಾರೂ ಕೂಡ ರಿಯಾಯಿತಿ ಕೊಡುವಂತಿಲ್ಲ ಎಂದಿತ್ತು. ಮದ್ಯ ಮಾರಾಟದಲ್ಲಿ ಖಾಸಗಿಗಿಂತ ಸರ್ಕಾರಿ ಮಳಿಗೆಗಳೇ ಹೆಚ್ಚಿದ್ದವು. ಕರ್ನಾಟಕದಲ್ಲಿ ಎಂಎಸ್‌ಐಎಲ್ ಇದ್ದಂತೆ ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರಿ ಸ್ವಾಮ್ಯದ 4 ನಿಗಮಗಳಿವೆ. 2021ಕ್ಕೆ ಮುನ್ನ ದೆಹಲಿಯಲ್ಲಿ 864 ಮದ್ಯದಂಗಡಿಗಳಿದ್ದವು. ಅದರಲ್ಲಿ ಸರ್ಕಾರಿ ಸಂಸ್ಥೆಗಳ ಮಳಿಗೆಗಳೇ 475 ಇದ್ದವು. ದೆಹಲಿಯಲ್ಲಿ ಸಮರ್ಪಕವಾದ ಮದ್ಯ ನೀತಿ ಇರಲಿಲ್ಲ. ಆದ ಕಾರಣ ಸರ್ಕಾರಿ ಸ್ವಾಮ್ಯದ ಲಿಕ್ಕರ್ ಶಾಪ್‌ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]